Government of Karnataka

Department of Information

Saturday 21/01/2017

ಜಿಲ್ಲಾ ವಾರ್ತೆ

ಜಿಲ್ಲಾ ವಾರ್ತೆ 27-12-2016

ಮಂಗಳವಾರ, ದಶಂಬರ 27th, 2016 ಜಿಲ್ಲಾ ವಾರ್ತೆ 27-12-2016

ಜಿಲ್ಲಾ ಸುದ್ದಿಗಳು: ವಿಶ್ವಮಾನವ ದಿನಾಚರಣೆ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಶಿವಮೊಗ್ಗ, ಡಿಸೆಂಬರ್ 27 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಡಿ. 29 ರಂದು ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ವಿಶ್ವಮಾನವ ಕುವೆಂಪುರವರ ದಿನಾಚರಣೆ ಅಂಗವಾಗಿ ವಿಶ್ವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಶಿವಮೊಗ್ಗದ ಶ್ರೀ ವಿಜಯಕಲಾನಿಕೇತನದ ಡಾ|| ಕೆ.ಎಸ್.ಪವಿತ್ರ ಮತ್ತು ತಂಡದವರಿಂದ ರಸಋಷಿ ನಮನ ರೂಪಕ ಪ್ರದರ್ಶನ ಮತ್ತು ಶಿವಮೊಗ್ಗ ಸಹ್ಯಾದ್ರಿ ರಂಗತರಂಗ ತಂಡದವರಿಂದ […]

Read More

ಜಿಲ್ಲಾ ವಾರ್ತೆ 26-12-2016

ಸೋಮವಾರ, ದಶಂಬರ 26th, 2016 ಜಿಲ್ಲಾ ವಾರ್ತೆ 26-12-2016

ಜಿಲ್ಲಾ ಸುದ್ದಿಗಳು: ಡಿ. 29 ರಂದು ಕೊಪ್ಪಳದಲ್ಲಿ ಅರ್ಥಪೂರ್ಣ ವಿಶ್ವ ಮಾನವ ದಿನ ಆಚರಣೆ- ಡಾ. ರುದ್ರೇಶ್ ಘಾಳಿ ಕೊಪ್ಪಳ, ಡಿ.26 (ಕರ್ನಾಟಕ ವಾರ್ತೆ): ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಡಿ. 29 ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ವಿಶ್ವ ಮಾನವ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಡಾ. ರುದ್ರೇಶ್ ಘಾಳಿ ಅವರು ಹೇಳಿದರು. ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಕೊಪ್ಪಳದಲ್ಲಿ ವಿಶ್ವ ಮಾನವ ದಿನ ಆಚರಣೆ ಸಂಬಂಧ […]

Read More

ಜಿಲ್ಲಾ ವಾರ್ತೆ 24-12-2016

ಶನಿವಾರ, ದಶಂಬರ 24th, 2016 ಜಿಲ್ಲಾ ವಾರ್ತೆ 24-12-2016

ಜಿಲ್ಲಾ ಸುದ್ದಿಗಳು: ಜನವರಿ 20, 21 ಮತ್ತು 22ರಂದು ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ ಶಿವಮೊಗ್ಗ, ಡಿಸೆಂಬರ್ 24 (ಕರ್ನಾಟಕ ವಾರ್ತೆ): ಜನವರಿ 20, 21 ಮತ್ತು 22ರಂದು ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಆಯೋಜಿಸಿದ್ದು, ಕ್ರೀಡಾಕೂಟ ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಹೇಳಿದರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಪೂರ್ವಸಿದ್ಧತಾ […]

Read More

ಜಿಲ್ಲಾ ವಾರ್ತೆ 23-12-2016

ಶುಕ್ರವಾರ, ದಶಂಬರ 23rd, 2016 ಜಿಲ್ಲಾ ವಾರ್ತೆ 23-12-2016

ಜಿಲ್ಲಾ ಸುದ್ದಿಗಳು: ಎಪಿಎಂಸಿ ಚುನಾವಣೆ : ವ್ಯವಸ್ಥಿತ ನಿರ್ವಹಣೆಗೆ ಜಿಲ್ಲಾಡಳಿತದಿಂದ ಅಗತ್ಯ ಕ್ರಮ ಶಿವಮೊಗ್ಗ, ಡಿಸೆಂಬರ್ 23 (ಕರ್ನಾಟಕ ವಾರ್ತೆ): ಶಿವಮೊಗ್ಗ ಜಿಲ್ಲೆಯಲ್ಲಿ ಅವಧಿ ಮುಗಿದ ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ, ಸೊರಬ, ಹೊಸನಗರ ಮತ್ತು ಶಿಕಾರಿಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಎಲ್ಲಾ ಕ್ಷೇತ್ರಗಳ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಡಿಸೆಂಬರ್ 16ರಂದು ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಈ ಚುನಾವಣೆಯಲ್ಲಿ ಆಯ್ಕೆ ಬಯಸಿ, ನಾಮಪತ್ರಗಳನ್ನು ಸಲ್ಲಿಸಲಿಚ್ಚಿಸುವ ಉಮೇದುವಾರರು ಡಿಸೆಂಬರ್ 22ರಿಂದ 29ರವರೆಗೆ ಆಯಾ […]

Read More

ಜಿಲ್ಲಾ ವಾರ್ತೆ 22-12-2016

ಗುರುವಾರ, ದಶಂಬರ 22nd, 2016 ಜಿಲ್ಲಾ ವಾರ್ತೆ 22-12-2016

ಜಿಲ್ಲಾ ಸುದ್ದಿಗಳು: ವಿವಿಧ ಶಾಲೆಗಳಿಗೆ ಡಿಡಿಪಿಐ ಭೇಟಿ: ತಪಾಸಣೆ ಧಾರವಾಡ ( ಕರ್ನಾಟಕ ವಾರ್ತೆ) ಡಿ.22 ಜಿಲ್ಲೆಯ ಮೊರಬ,ಶಿವಳ್ಳಿ,ಮಾರಡಗಿ ಗ್ರಾಮಗಳ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರಾಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಹೆಚ್.ನಾಗೂರ ಬುಧವಾರ ಭೇಟಿ ನೀಡಿ ಶೈಕ್ಷಣಿಕ ಚಟುವಟಿಕೆಗಳು ಹಾಗೂ ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗಾಗಿ ಕೈಗೊಂಡಿರುವ ಕಾರ್ಯಗಳನ್ನು ಪರಿಶೀಲಿಸಿದರು. 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ವಿಶೇಷó ತರಗತಿಗಳು ನಡೆಯುತ್ತಿರುವದು,ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೆಮಿನಾರ್,ರಸಪ್ರಶ್ನೆ ಆಯೋಜಿಸುತ್ತಿರುವದು.ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿ,ಅವಲೋಕನ,ಮಾರ್ಗದರ್ಶನ […]

Read More

ಜಿಲ್ಲಾ ವಾರ್ತೆ 20-12-2016

ಮಂಗಳವಾರ, ದಶಂಬರ 20th, 2016 ಜಿಲ್ಲಾ ವಾರ್ತೆ 20-12-2016

ಜಿಲ್ಲಾ ಸುದ್ದಿಗಳು: ಸಾಗರ ತಾಲೂಕು ಮಟ್ಟದ ಯುವಜನ ಮೇಳ ಶಿವಮೊಗ್ಗ, ಡಿಸೆಂಬರ್ 20 (ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ತಾಲೂಕು ಪಂಚಾಯಿತಿ ಸಾಗರ, ಗ್ರಾಮ ಪಂಚಾಯಿತಿ ತುಮರಿ, ನವೋದಯ ಗ್ರಾಮಾಭಿವೃದ್ದಿ ಯುವಕ ಸಂಘ, ಬೇದರಕೊಪ್ಪ, ಬ್ರಾಹ್ಮಣಿಕೆಪ್ಪಿಗೆ ಹಾಗೂ ಸ್ಥಳೀಯ ಯುವಕ/ಯುವತಿ ಮಂಡಳಿ, ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2017ನೇ ಜನವರಿ 08 ರಂದು ರಂದು ಬೆಳಿಗ್ಗೆ 9.00 ಗಂಟೆಗೆ ತುಮರಿ ಶ್ರೀ ಗೋಪಾಲಗೌಡ ರಂಗಮಂದಿರದಲ್ಲಿ 2016-17ನೇ ಸಾಗರ ತಾಲೂಕು ಮಟ್ಟದ ಯುವಜನ ಮೇಳವನ್ನು ಸಂಘಟಿಸಲಾಗಿದೆ. […]

Read More

ಜಿಲ್ಲಾ ವಾರ್ತೆ 19-12-2016

ಸೋಮವಾರ, ದಶಂಬರ 19th, 2016 ಜಿಲ್ಲಾ ವಾರ್ತೆ 19-12-2016

ಜಿಲ್ಲಾ ಸುದ್ದಿಗಳು: ಕೇಂದ್ರೀಯ ವಿದ್ಯಾಲಯದ 6ನೇ ವಾರ್ಷಿಕ ದಿನಾಚರಣೆ ಶಿವಮೊಗ್ಗ, ಡಿಸೆಂಬರ್ 19 (ಕರ್ನಾಟಕ ವಾರ್ತೆ):- ಶಿವಮೊಗ್ಗದ ಕೇಂದ್ರೀಯ ವಿದ್ಯಾಲಯವು ಡಿ. 21 ರಂದು ಸಂಜೆ 4.30 ಕ್ಕೆ ಅಶೋಕರನಗರದಲ್ಲಿರುವ ಸುವರ್ಣ ಸಂಸ್ಕøತಿ ಭವನದಲ್ಲಿ 6ನೇ ವಾರ್ಷಿಕ ದಿನಾಚರಣೆ ಸಮಾರಂಭವನ್ನು ಏರ್ಪಡಿಸಿದೆ. ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಲೋಕೇಶ್ ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಮತ್ತು ಗಾಜನೂರು ಜೆ.ಎನ್.ವಿ. ಪ್ರಾಂಶುಪಾಲ ಆರ್. ಪ್ರೇಮಕುಮಾರ್ ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಪುಣೆಯ ಸಮೃದ್ಧ ಜೀವನ ಮಲ್ಟಿ ಸ್ಟೇಟ್ ಮಲ್ಟಿಪರ್ಪಸ್ ಕೋ-ಆಪ್ ಸೊಸೈಟಿ […]

Read More

ಜಿಲ್ಲಾ ವಾರ್ತೆ 17-12-2016

ಶನಿವಾರ, ದಶಂಬರ 17th, 2016 ಜಿಲ್ಲಾ ವಾರ್ತೆ 17-12-2016

ಜಿಲ್ಲಾ ಸುದ್ದಿಗಳು: ಕಲೆ ವಿಶ್ವವ್ಯಾಪಿಯಾಗಿದ್ದುಇದಕ್ಕೆ ಸರಸ್ವತಿಓಟು ಸಾಕು : ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ದಾವಣಗೆರೆ ಡಿ. 17-(ಕರ್ನಾಟಕ ವಾರ್ತೆ)-: ಕಲೆ ವಿಶ್ವವ್ಯಾಪಿ.ಅದು ನಿಂತ ನೀರಲ್ಲ. ಸಾಗರೋಪಾದಿಯಲ್ಲಿ ಹರಿಯುತ್ತಿರುವುದು.ಕಲೆಗೆ ಯಾವುದೇ ವ್ಯಾಪ್ತಿಯಿಲ್ಲಎಂದುಕರ್ನಾಟಕ ಶಿಲ್ಪಕಲಾ ಅಕಾಡೆಮಿಅಧ್ಯಕ್ಷ ಮಹಾದೇವಪ್ಪ ಶಂಭುಲಿಂಗಪ್ಪ ಶಿಲ್ಪಿ ಹೇಳಿದರು. ಅವರು ನಗರದದೃಶ್ಯಕಲಾಕಾಲೇಜು ಸಭಾಂಗಣದಲ್ಲಿಕರ್ನಾಟಕ ಶಿಲ್ಪಕಲಾ ಅಕಾಡೆಮಿ ಶುಕ್ರವಾರ ಹಮ್ಮಿಕೊಂಡಿದ್ದ 2016 ರಗೌರವ ಪ್ರಶಸ್ತಿ ಪದಾನ ಹಾಗೂ 12 ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ 2016 ರ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದ ಉಪನಿಷತ್‍ಗಳಲ್ಲೂ ಕಲೆಯ ಸರ್ವವ್ಯಾಪ್ತತೆಯನ್ನುಕಾಣಬಹುದು.ಕಲೆ ಕರ್ಮ ಮೀರಿ […]

Read More

ಜಿಲ್ಲಾ ವಾರ್ತೆ 16-12-2016

ಶುಕ್ರವಾರ, ದಶಂಬರ 16th, 2016 ಜಿಲ್ಲಾ ವಾರ್ತೆ 16-12-2016

ಜಿಲ್ಲಾ ಸುದ್ದಿಗಳು: ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಿ- ಡಾ. ಎಂ.ಬಿ. ಪಾಟೀಲ ಕೊಪ್ಪಳ ಡಿ. 16 (ಕರ್ನಾಟಕ ವಾರ್ತೆ): ಪದೇ ಪದೇ ಬರ ಪರಿಸ್ಥಿತಿಗೆ ಒಳಗಾಗುತ್ತಿರುವ ಇಂದಿನ ದಿನಮಾನಗಳಲ್ಲಿ ರೈತರು ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದು ಎಂದು ಅತ್ಯವಶ್ಯಕವಾಗಿದೆ ಎಂದು ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ಬಿ. ಪಾಟೀಲ್ ಅವರು ರೈತ ಅನುವುಗಾರರಿಗೆ ಕರೆ ನೀಡಿದರು. […]

Read More

ಜಿಲ್ಲಾ ವಾರ್ತೆ 15-12-2016

ಗುರುವಾರ, ದಶಂಬರ 15th, 2016 ಜಿಲ್ಲಾ ವಾರ್ತೆ 15-12-2016

ಜಿಲ್ಲಾ ಸುದ್ದಿಗಳು: ಡಿಸೆಂಬರ್ 16ರಂದು ಕೆ.ಡಿ.ಪಿ.ಸಭೆ ಶಿವಮೊಗ್ಗ, ಡಿಸೆಂಬರ್ 15 (ಕರ್ನಾಟಕ ವಾರ್ತೆ): ಡಿಸೆಂಬರ್ 16ರಂದು ಬೆಳಿಗ್ಗೆ 11ಗಂಟೆಗೆ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಎಸ್.ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ನವೆಂಬರ್ ಮಾಹೆಯ ಅಂತ್ಯದವರೆಗಿನ ಮಾಸಿಕ ಕೆ.ಡಿ.ಪಿ.ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಲಾಗಿದೆ. ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಅಗತ್ಯ ದಾಖಲೆಗಳೊಂದಿಗೆ ಸಭೆಗೆ ಆಗಮಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಂದಾಯ ಸಚಿವರ ಪ್ರವಾಸ ಕಾರ್ಯಕ್ರಮ ಹಾಸನ, […]

Read More