Government of Karnataka

Department of Information

Tuesday 23/01/2018

ಮುಖ್ಯ ಮಂತ್ರಿಗಳು

ಹೆಸರು : ಶ್ರೀ ಜಗದೀಶ್ ಶೆಟ್ಟರ್
ವಿಳಾಸ : ನಂ. 31, ಮಧುರಾ ಎಸ್ಟೇಟ್, ನಾಗಶೆಟ್ಟಿಕೊಪ್ಪ, ಹುಬ್ಬಳ್ಳಿ-580 023.
ತಂದೆಯ ಹೆಸರು : ಶ್ರೀ ಶಿವಪ್ಪ ಶಿವಮೂರ್ತೆಪ್ಪ ಶೆಟ್ಟರ.
ತಂದೆಯವರ ವೃತ್ತಿ : ವಕೀಲರು, ಮಾಜಿ ಮಹಾಪೌರರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.
ತಾಯಿಯ ಹೆಸರು : ಶ್ರೀಮತಿ ಬಸವಣ್ಣೆಮ್ಮ ಕೋಂ.ಶಿವಪ್ಪ ಶೆಟ್ಟರ.
ಹುಟ್ಟಿದ ದಿನಾಂಕ : 17ನೇ ಡಿಸೆಂಬರ್ 1955.
ಹುಟ್ಟಿದ ಸ್ಥಳ : ಕೆರೂರು, ತಾಲೂಕ ಬದಾಮಿ, ಜಿಲ್ಲಾ ಬಾಗಲಕೋಟ.
ಮದುವೆಯಾದ ವರ್ಷ : 1984.
ಧರ್ಮಪತ್ನಿಯ ಹೆಸರು : ಶ್ರೀಮತಿ ಶಿಲ್ಪಾ ಜಗದೀಶ ಶೆಟ್ಟರ.
ಮಕ್ಕಳ ಹೆಸರು : 1) ಪ್ರಶಾಂತ (ಮಗ), 2) ಸಂಕಲ್ಪ (ಮಗ).
ಸಹೋದರ ಮತ್ತು ಸಹೋದರಿ : ಸಹೋದರರು: 1) ಪ್ರದೀಪ ಶೆಟ್ಟರ, 2) ಮೋಹನ ಶೆಟ್ಟರ. ಸಹೋದರಿ: ಶ್ರೀಮತಿ ವಿಜಯಾ.
ವೃತ್ತಿ : ನ್ಯಾಯವಾದಿ, 20 ವರ್ಷಗಳ ಅನುಭವ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ : ಹುಬ್ಬಳ್ಳಿ ಬಾಸೆಲ್ ಮಿಶನ್ ಪ್ರಾಥಮಿಕ ಶಾಲೆ ಮತ್ತು ಬಾಸೆಲ್ ಮಿಶನ್ ಹೈಯರ್ ಸೆಕೆಂಡರಿ ಹೈಸ್ಕೂಲ್.
ಪದವಿ ಶಿಕ್ಷಣ : ಬಿ.ಕಾಂ. ಜೆ.ಜಿ.ಕಾಮರ್ಸ್ ಕಾಲೇಜು, ಹುಬ್ಬಳ್ಳಿ.
ಕಾನೂನು ಶಿಕ್ಷಣ : ಎಲ್.ಎಲ್.ಬಿ. (ಸ್ಪೇಷಲ್), ಹುಬ್ಬಳ್ಳಿ. ಜೆ.ಎಸ್.ಎಸ್. ಸಕ್ರಿ ಲಾ ಕಾಲೇಜು. (ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ).
ರಾಜಕೀಯ ಅನುಭವ :

i) ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನಲ್ಲಿ ಸಕ್ರೀಯ ಸೇವೆ.

ii) ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್.ಎಸ್.ಎಸ್.)ದ ಸ್ವಯಂ ಸೇವಕ.

iii) 1990-ಹುಬ್ಬಳ್ಳಿ ಗ್ರಾಮೀಣ ಘಟಕದ ಅಧ್ಯಕ್ಷರಾಗಿ ಸೇವೆ.

iv) 1994-ಧಾರವಾಡ ಜಿಲ್ಲೆ ಬಿ.ಜೆ.ಪಿ. ಅಧ್ಯಕ್ಷರು.

v) 1996-ರಾಜ್ಯ ಬಿ.ಜೆ.ಪಿ. ಕಾರ್ಯದರ್ಶಿ.

vi) 1999-ವಿಧಾನ ಸಭೆಯ ಪ್ರತಿ ಪಕ್ಷದ ನಾಯಕರು.

vii) 2005-ರಾಜ್ಯ ಬಿ.ಜೆ.ಪಿ. ಅಧ್ಯಕ್ಷರು.

viii) 2006-ಕರ್ನಾಟಕ ಸರ್ಕಾರದ ಕಂದಾಯ ಸಚಿವರು.

ix) 2008-ಕರ್ನಾಟಕ ವಿಧಾನಸಭೆಯ ಅಧ್ಯಕ್ಷರು.

x) 2009-ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು.

ಚುನಾವಣಾ ಸಾಧನೆ :

1994-ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ 16,000 ಮತಗಳ ಅಂತರದಿಂದ ಪ್ರಥಮ ಬಾರಿ ಗೆಲುವು.

1999-ವಿಧಾನಸಭೆಗೆ ಸತತ ಎರಡನೇ ಬಾರಿ 25,000 ಮತಗಳ ಅಂತರದಿಂದ ಗೆಲುವು.

2004-ವಿಧಾನಸಭೆಗೆ ಸತತ ಮೂರನೇ ಬಾರಿ 26,000 ಮತಗಳ ಅಂತರದಿಂದ ಆಯ್ಕೆ.

2008-ವಿಧಾನಸಭೆಗೆ ಸತತ ನಾಲ್ಕನೇ ಬಾರಿ 26,000 ಮತಗಳ ಅಂತರದಿಂದ ಆಯ್ಕೆ.

ಕೌಟುಂಬಿಕ ರಾಜಕೀಯ ಹಿನ್ನೆಲೆ : ಚಿಕ್ಕಪ್ಪನವರಾದ ದಿ. ಸದಾಶಿವ ಶೆಟ್ಟರ ರವರು 1967ರಲ್ಲಿ ಹುಬ್ಬಳ್ಳಿ ನಗರ ಕ್ಷೇತ್ರದಿಂದ ಜನಸಂಘದಿಂದ ವಿಧಾನ ಸಭೆಗೆ ಆಯ್ಕೆ. ದಕ್ಷಿಣ ಭಾರತದಲ್ಲಿ ಜನಸಂಘದಿಂದ ಪ್ರಥಮ ಶಾಸಕರು. ತಂದೆ ಶ್ರೀ ಎಸ್.ಎಸ್.ಶೆಟ್ಟರ ರವರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಸತತ 5 ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆ. ಒಂದು ಬಾರಿ ಮಹಾಪೌರರಾಗಿ ಆಯ್ಕೆ. ದಕ್ಷಿಣ ಭಾರತದಲ್ಲೇ ಜನಸಂಘದ ಪ್ರಥಮ ಮಹಾಪೌರರು. ಹುಬ್ಬಳ್ಳಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಸತತವಾಗಿ 50 ವರ್ಷಗಳಿಂದ ನಿರ್ದೇಶಕರು ಮತ್ತು 50 ವರ್ಷಗಳಿಂದ ವಕೀಲ ವೃತ್ತಿ.
ಪ್ರಮುಖ ಸಾಧನೆಗಳು :

ಜನಪರ ಸಮಸ್ಯೆಗಳ ಮತ್ತು ರೈತರ ಪರ ಹೋರಾಟಗಳಲ್ಲಿ ಸಕ್ರೀಯ ಭಾಗವಹಿಸುವಿಕೆ.

ನಿರ್ಲಕ್ಷಿತ ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಸತತ ಹೋರಾಟ.

ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿಯಲ್ಲಿ ಸ್ಥಾಪಿಸಲು ಪ್ರಮುಖ ಪಾತ್ರ.

ಸರ್ವಧರ್ಮಗಳ ಸಮನ್ವಯ ಸಾಧನೆ. ಸತತ ಜನಸಂಪರ್ಕ, ಪಾದಯಾತ್ರೆ ಹಾಗೂ ಜನ ಸಮಸ್ಯೆಗಳ ಸ್ಪಂದನ.

ವಿಧಾನ ಸಭೆಯಲ್ಲಿ 5 ವರ್ಷ ಪ್ರತಿ ಪಕ್ಷದ ನಾಯಕನಾಗಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಣೆ.

ಇತರ ಹವ್ಯಾಸ : ಓದಿನಲ್ಲಿ ಆಸಕ್ತಿ-ಸಾಹಿತ್ಯದಲ್ಲಿ ಆಸಕ್ತಿ. ಕೆಲವು ವರ್ಷ ಪತ್ರಕರ್ತರಾಗಿ ಕೆಲಸ ನಿರ್ವಹಣೆ. ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ. ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಮತ್ತು ನಾಟಕಗಳಲ್ಲಿ ಪಾತ್ರಾಭಿನಯ.