Government of Karnataka

Department of Information

Saturday 20/12/2014

District News 16-02-2012

Date : ಶುಕ್ರವಾರ, ಫೆಬ್ರವರಿ 17th, 2012

ಜ್ಯೋತಿ ಭತ್ತ ಖರೀದಿಗೆ ಕೇಂದ್ರಕ್ಕೆ ಮನವಿ: ಶೀಘ್ರವೇ ಅನುಮತಿ ದೊರೆಯುವ ನಿರೀಕ್ಷೆ

ಚಾಮರಾಜನಗರ ಫೆಬ್ರವರಿ 16 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ರೈತರು ಬೆಳೆದಿರುವ ಜ್ಯೋತಿ ತಳಿಯ ಭತ್ತವನ್ನು ಖರೀದಿಸಲು ಕೇಂದ್ರ ಸರ್ಕಾರಕ್ಕೆ ಕೋರಲಾಗಿದ್ದು. ಸದ್ಯದಲ್ಲೇ ಒಪ್ಪಿಗೆ ನೀಡುವ ಭರವಸೆ ಇದೆ. ಅನುಮತಿ ಸಿಕ್ಕ ಕೂಡಲೆ ಜ್ಯೋತಿ ತಳಿ ಭತ್ತ ಖರೀದಿ ಪ್ರಾರಂಭಿಸಲಾಗುವುದು ಎಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತರಾದ ಕೆ.ಎಚ್. ಗೋವಿಂದರಾಜ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಚಾಮರಾಜನಗರ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಜ್ಯೋತಿ ತಳಿಯ ಭತ್ತವನ್ನು ಬೆಳೆಯಲಾಗಿದೆ. ಈ ಭತ್ತವನ್ನು ಕೇರಳ ರಾಜ್ಯದಲ್ಲಿ ಕುಸುಬಲ ಅಕ್ಕಿಯಾಗಿ ತಯಾರಿಸಿ ಬಳಸಲಾಗುತ್ತಿದೆ. ಈ ವರ್ಷ ಬೃಹತ್ ಪ್ರಮಾಣದಲ್ಲಿ ಜ್ಯೋತಿ ಭತ್ತವನ್ನು ರೈತರು ಬೆಳೆದಿದ್ದಾರೆ. ಈ ಭತ್ತವನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿಸಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದಾರೆ ಎಂದು ಗೋವಿಂದರಾಜ್ ತಿಳಿಸಿದ್ದಾರೆ.

ಭಾರತ ಆಹಾರ ನಿಗಮದ ಅಧಿಕಾರಿಗಳನ್ನು ಈ ಬಗ್ಗೆ ವಿಚಾರಿಸಿದ್ದು ಜ್ಯೋತಿ ಭತ್ತವು ಸಾರ್ವಜನಿಕ ಪಡಿತರ ವ್ಯವಸ್ಥೆಗೆ ತಕ್ಕದ್ದು ಆಗಿರುವುದಿಲ್ಲವಾದ ಕಾರಣದಿಂದ ಖರೀದಿಸಲು ನಿರಾಕರಿಸಿರುತ್ತಾರೆ. ಆದರೆ ಕೇರಳ ರಾಜ್ಯದಲ್ಲಿ ಜ್ಯೋತಿ ತಳಿಯ ಭತ್ತಕ್ಕೆ ಬೇಡಿಕೆ ಇರುವುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಈ ಭತ್ತವನ್ನು ಖರೀದಿಸಿ ಅದರಿಂದ ತಯಾರಾದ ಕುಸುಬಲ ಅಕ್ಕಿಯನ್ನು ಕೇರಳ ರಾಜ್ಯಕ್ಕೆ ಒದಗಿಸುವ ದೃಷ್ಠಿಯಿಂದ ಬೆಂಬಲ ಬೆಲೆ ಯೋಜನೆ ಅಡಿ ಜ್ಯೋತಿ ಭತ್ತ ಖರೀದಿ ಪ್ರಾರಂಭಿಸಲು ವಿನಂತಿಸಲಾಗಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಥಾಮಸ್ ಅವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 9 ರಂದು ನಡೆದ ಸಭೆಯಲ್ಲಿ ಈ ವಿಷಯ ಮಂಡಿಸಲಾಗಿದೆ.

ಸಚಿವರು ಸದರಿ ಭತ್ತ ಖರೀದಿಸಲು ಭಾರತ ಆಹಾರ ನಿಗಮದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯೋತಿ ವಿಧದ ತಳಿಯ ಭತ್ತವನ್ನು ಖರೀದಿಸಲು ಶೀಘ್ರದಲ್ಲೇ ಕೇಂದ್ರ ಸರ್ಕಾರದ ಅನುಮತಿ ಸಿಗುವ ಭರವಸೆ ಇದೆ. ಅನುಮತಿ ಸಿಕ್ಕ ತಕ್ಷಣ ಭತ್ತ ಖರೀದಿ ಆರಂಭಿಸಲಾಗುವುದು. ಜಿಲ್ಲೆಯ ರೈತರು ಈ ವಿಷಯದಲ್ಲಿ ಅನಗತ್ಯ ಒತ್ತಡ ಹೇರದೆ ಸಹಕರಿಸಬೇಕು ಎಂದು ಆಯುಕ್ತರಾದ ಗೋವಿಂದರಾಜ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ಗುಂಡ್ಲುಪೇಟೆ: ಗಣತಿ ಕಾರ್ಯಕ್ಕೆ ಸಹಕರಿಸಲು ಮನವಿ

ಚಾಮರಾಜನಗರ ಫೆಬ್ರವರಿ 16 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಆರಂಭವಾಗಿರುವ ಆರ್ಥಿಕ, ಸಾಮಾಜಿಕ ಮತ್ತು ಜಾತಿಗಣತಿಗೆ ನಾಗರಿಕರು ನಿಖರ ಮಾಹಿತಿ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ಮನವಿ ಮಾಡಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿ ಪುರಸಭಾ ಅಧ್ಯಕ್ಷರಾದ ರಾಧಮ್ಮ ಉಪಾಧ್ಯಾಕ್ಷರಾದ ಸೈಯದ್‌ದಸ್ತಗೀರ್ ಅವರ ಮನೆಯನ್ನು ಸಂದರ್ಶಿಸುವ ಮೂಲಕ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಗಣತಿ ಕಾರ್ಯಕ್ಕಾಗಿ 23 ವಾರ್ಡ್‌ಗಳಿಂದ 64 ಬ್ಲಾಕ್‌ಗಳನ್ನು ರಚಿಸಲಾಗಿದೆ. ಗಣತಿ ಕೆಲಸಕ್ಕೆ 16 ಮಂದಿ ಗಣತಿದಾರರು ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ಗಣತಿದಾರರು ಮಾಹಿತಿ ಸಂಗ್ರಹಣೆಗಾಗಿ ಮನೆಗೆ ಭೇಟಿ ನೀಡಿದಾಗ ಪಟ್ಟಣದ ಜನತೆ ನಿಖರ ಮಾಹಿತಿ ನೀಡಬೇಕು. ರಾಷ್ಟ್ರೀಯ ಪ್ರಗತಿಗೆ ಪೂರಕವಾದ ನೂತನ ಯೋಜನೆ ರೂಪಿಸಲು ಸಹಾಯಕವಾಗುವ ಗಣತಿ ಕಾರ್ಯಕ್ಕೆ ಸಹಕರಿಸಬೇಕು ಯಾವುದೇ ಮನೆಗಳು ಗಣತಿಯಿಂದ ಕೈಬಿಟ್ಟಿದ್ದಲ್ಲಿ ಚಾರ್ಚ್ ಅಧಿಕಾರಿ ಎಂ.ಜಿ. ರಮೇಶ್ ಅವರ ಮೊಬೈಲ್ ದೂರವಾಣಿ ಸಂಖ್ಯೆ 9449822073 ಸಂಪರ್ಕಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅಂಗನವಾಡಿ ಹುದ್ದೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಚಾಮರಾಜನಗರ ಫೆಬ್ರವರಿ 16 (ಕರ್ನಾಟಕ ವಾರ್ತೆ):- ನಗರದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯಿಂದ ಅಂಗನವಾಡಿ ಕೇಂದ್ರಗಳ ಸಹಾಯಕರ ಹುದ್ದೆಗೆ ಕರೆಯಲಾಗಿದ್ದ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 23 ರವರೆಗೆ ವಿಸ್ತರಿಸಲಾಗಿದೆ.

ಶಿಶು ಅಭಿವೃದ್ದಿ ಯೋಜನೆಯಡಿ ವ್ಯಾಪ್ತಿಯ 10 ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರ ಹುದ್ದೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಸಾಕಾಷ್ಟು ಅರ್ಜಿಗಳು ಇದುವರೆಗೆ ಸಲ್ಲಿಕೆಯಾಗದ ಕಾರಣ ಅರ್ಜಿ ಸಲ್ಲಿಸುವ ಅವಧಿಯನ್ನು ಫೆಬ್ರವರಿ 23 ರವರೆಗೆ ವಿಸ್ತರಿಸಲಾಗಿದೆ ಎಂದು ನಗರದ ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರವರಿ ತಿಂಗಳ ಆಹಾರ ಪಡಿತರ ಬಿಡುಗಡೆ

ಚಾಮರಾಜನಗರ ಫೆಬ್ರವರಿ 16 (ಕರ್ನಾಟಕ ವಾರ್ತೆ):- ಜಿಲ್ಲೆಯ ವಿವಿಧ ವರ್ಗಗಳ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಲು ಫೆಬ್ರವರಿ ಮಾಹೆಗೆ 39530 ಕ್ವಿಂಟಾಲ್ ಅಕ್ಕಿ, 5720 ಕ್ವಿಂಟಾಲ್ ಗೋಧಿ, 1188 ಕ್ವಿಂಟಾಲ್ ಸಕ್ಕರೆಯನ್ನು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದೆ.

ಭಾವಚಿತ್ರ ತೆಗೆಸಿರುವ ವಿವಿಧ ಕಾರ್ಡುದಾರರಿಗೆ, ಪಡಿತರ ಚೀಟಿದಾರರಿಗೆ ಯೂನಿಟ್‌ವಾರು ಅಕ್ಕಿ ಗೋಧಿ ಪ್ರಮಾಣ ಮತ್ತು ದರ ವಿವರವನ್ನು ನಿಗಧಿಪಡಿಸಲಾಗಿದೆ.

ಅಂತ್ಯೋದಯ ಪಡಿತರ ಚೀಟಿಗೆ 29 ಕೆಜಿ ಅಕ್ಕಿ, 6 ಕೆಜಿ ಗೋದಿ, 1 ಕೆಜಿ ಸಕ್ಕರೆ ನೀಡಲಾಗುತ್ತದೆ. ಅಕ್ಷಯ ಪಡಿತರ ಚೀಟಿದಾರರಿಗೆ ಏಕಸದಸ್ಯರಿಗೆ 4 ಕೆಜಿ ಅಕ್ಕಿ, 1 ಕೆಜಿ ಗೋಧಿ, 1 ಕೆಜಿ ಸಕ್ಕರೆ. ದ್ವಿಸದಸ್ಯರಿಗೆ 8 ಕೆಜಿ ಅಕ್ಕಿ, 1 ಕೆಜಿ ಗೋಧಿ, 1 ಕೆಜಿ ಸಕ್ಕರೆ. ಮೂವರು ಸದಸ್ಯರಿಗೆ 12 ಕೆಜಿ ಅಕ್ಕಿ, 2 ಕೆಜಿ ಗೋಧಿ, 1 ಕೆಜಿ ಸಕ್ಕರೆ. ನಾಲ್ವರು ಸದಸ್ಯರಿಗೆ 16 ಕೆಜಿ ಅಕ್ಕಿ, 3 ಕೆಜಿ ಗೋಧಿ, 1 ಕೆಜಿ ಸಕ್ಕರೆ ಹಾಗೂ ಐದು ಮತ್ತು ಅದಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಕುಟುಂಬಕ್ಕೆ 20 ಕೆಜಿ ಅಕ್ಕಿ, 3 ಕೆಜಿ ಗೋಧಿ, 1 ಕೆಜಿ ಸಕ್ಕರೆಯನ್ನು ವಿತರಿಸಲಾಗುತ್ತದೆ.

ಅಕ್ಕಿ ಪ್ರತಿ ಕೆಜಿಗೆ 3 ರೂ, ಗೋದಿ ಪ್ರತಿ ಕೆಜಿಗೆ 3 ರೂ. ಮತ್ತು ಸಕ್ಕರೆ ಪ್ರತಿ ಕೆಜಿಗೆ ರೂ 13-50 ರಂತೆ ದರ ನಿಗದಿ ಮಾಡಲಾಗಿದೆ. ಅಂತ್ಯೋದಯ ಪಡಿತರ ಚೀಟಿದಾರರು ಪಡೆಯುವ ಪ್ರತಿ ಕೆ.ಜಿ ಗೋದಿಗೆ 2 ರೂ. ನಿಗದಿ ಮಾಡಲಾಗಿದೆ.

ಎಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಕೆ.ಜಿ.ಗೆ 9-40 ರೂ. ದರದಲ್ಲಿ 10 ಕೆ.ಜಿ. ಅಕ್ಕಿ, ವಿತರಿಸಲಾಗುತ್ತದೆ. ಜಿಲ್ಲೆಯ ಪಡಿತರದಾರರಿಗೆ ಹಂಚಿಕೆ ಮಾಡಲು 44 ಕೆ.ಎಲ್. ಸೀಮೆಎಣ್ಣೆ ಬಿಡುಗಡೆ ಮಾಡಲಾಗಿದೆ.

ಚಾಮರಾಜನಗರ, ಕೊಳ್ಳೇಗಾಲ, ನಗರ ಪ್ರದೇಶಕ್ಕೆ 6 ಲೀ, ಗುಂಡ್ಲುಪೇಟೆ, ಯಳಂದೂರು, ಹನೂರು ಪಟ್ಟಣ ಪಡಿತರದಾರರಿಗೆ 6 ಲೀ, ಮತ್ತು ಹನೂರು ಹೊರತು ಪಡಿಸಿ ಜಿಲ್ಲೆಯ ಉಳಿದ ನಾಲ್ಕು ತಾಲ್ಲೂಕುಗಳ ಗ್ರಾಮಾಂತರ ಪ್ರದೇಶ ಪಡಿತರದಾರರಿಗೆ 4 ಲೀ. ಸೀಮೆಎಣ್ಣೆ ವಿತರಿಸಲಾಗುತ್ತದೆ.

ಚಾಮರಾಜನಗರ ಪಟ್ಟಣ ಪಡಿತರದಾರರಿಗೆ ಪ್ರತಿ ಲೀಟರ್‌ಗೆ ರೂ. 15-20 ರಂತೆ, ಗ್ರಾಮಾಂತರಕ್ಕೆ ರೂ. 15-50, ಕೊಳ್ಳೇಗಾಲ ಪಟ್ಟಣಕ್ಕೆ ರೂ. 15-10 ರಂತೆ ಗ್ರಾಮಾಂತರಕ್ಕೆ ರೂ. 15-40, ಗುಂಡ್ಲುಪೇಟೆ ಪಟ್ಟಣಕ್ಕೆ ರೂ. 15-30 ರಂತೆ, ಗ್ರಾಮಾಂತರಕ್ಕೆ ರೂ. 15-60, ಯಳಂದೂರು ಪಟ್ಟಣಕ್ಕೆ ಪ್ರತಿ ಲೀ.ಗೆ ರೂ. 15-20 ರಂತೆ ಗ್ರಾಮಾಂತರಕ್ಕೆ ರೂ.15-50 ರಂತೆ ಹನೂರು ಪಟ್ಟಣಕ್ಕೆ ಪ್ರತಿ ಲೀಟರ್‌ಗೆ ರೂ. 15-10 ರಂತೆ ದರ ನಿಗಧಿಪಡಿಸಲಾಗಿದೆ.

ವಿತರಣೆಯಾಗದೇ ಬಾಕಿ ಉಳಿದಿರುವ ಖಾಯಂ ಗಣಕೀಕೃತ ಪಡಿತರ ಚೀಟಿಗಳಿಗೆ ಪಡಿತರ ಹಂಚಿಕೆ ಮಾಡಲಾಗಿಲ್ಲ. ಪ್ರಸಕ್ತ ತಿಂಗಳ ಪಡಿತರವನ್ನು ಫೆಬ್ರವರಿ 20 ರೂಳಗೆ ಪಡಿತರ ಚೀಟಿದಾರರಿಗೆ ವಿತರಿಸುವಂತೆ ಎಲ್ಲ ನ್ಯಾಯಬೆಲೆ, ಸೀಮೆಎಣ್ಣೆ ಅಂಗಡಿ ಮಾಲೀಕರಿಗೆ ಸೂಚಿಸಲಾಗಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರು ನಿಗಧಿ ಮಾಡಿದ ದರಕಿಂತ ಹೆಚ್ಚಿನ ದರದಲ್ಲಿ ಪಡಿತರ ಮಾರಾಟ ಮಾಡುವುದು ಕಂಡುಬಂದಲ್ಲಿ ದೂರು ಸಲ್ಲಿಸಬಹುದಾಗಿದೆ. ಆಯಾ ತಿಂಗಳ ಕೊನೆಯದಿನದೊಳಗೆ ಆಹಾರ ಧಾನ್ಯ ಹಾಗೂ ಸೀಮೆಎಣ್ಣೆ ದೊರೆಯದಿದ್ದಲ್ಲಿ ಪಡಿತರದಾರರು ಆಯಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಥವಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣ ಅಧಿಕಾರಿ ಅಥವಾ ತಹಶೀಲ್ದಾರ್ ಇಲ್ಲವೆ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆಹಾರ ವಿಭಾಗಕ್ಕೆ (08226-224660) ದೂರು ಸಲ್ಲಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಾದ ಡಾ. ಎಸ್.ಇ. ಮಹದೇವಪ್ಪ ಪ್ರಕಟಣೆಯಲ್ಲಿ ಕೋರಿದ್ದಾರೆ.

ಫೆಬ್ರವರಿ 25 ರಂದು ಮಳೆಯಾಶ್ರಿತ ರೇಷ್ಮೆ ಕೃಷಿ ಕುರಿತು ಕಾರ್ಯಾಗಾರ

ಚಾಮರಾಜನಗರ ಫೆಬ್ರವರಿ 16 (ಕರ್ನಾಟಕ ವಾರ್ತೆ):- ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ವತಿಯಿಂದ ಮಳೆಯಾಶ್ರಿತ ರೇಷ್ಮೆ ಕೃಷಿಯಲ್ಲಿ ನೂತನ ತಾಂತ್ರಿಕತೆ ಕುರಿತ ಕಾರ್ಯಾಗಾರವನ್ನು ಫೆಬ್ರವರಿ 25 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೈಸೂರಿನ ಸಿ.ಎಸ್.ಆರ್.ಟಿ.ಐ. ನಿರ್ದೇಶಕರಾದ ಡಾ.ಎಸ್.ಎಮ್.ಎಚ್. ಖಾದ್ರಿ ಕಾರ್ಯಾಗಾರ ಉದ್ಘಾಟಿಸುವರು. ರೇಷ್ಮೆ ಇಲಾಖೆಯ ಜಂಟಿ ನಿರ್ದೇಶಕರಾದ ಲಕ್ಷ್ಮಿಕಾಂತರಾಜೇ ಅರಸ್ ಅಧ್ಯಕ್ಷತೆ ವಹಿಸುವರು.

ಜಿಲ್ಲಾಧಿಕಾರಿಗಳಾದ ಕೆ. ಆರ್. ಸುಂದರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ. ಸುಂದರ್ ನಾಯಕ್, ಸಿ.ಎಸ್.ಆರ್.ಟಿ.ಐ, ವಿಸ್ತರಣಾ ವಿಭಾಗದ ವಿಜ್ಞಾನಿ-ಡಿ ಡಾ.ಜಿ.ಎಸ್. ವಿಂಧ್ಯಾ, ತರಬೇತಿ ವಿಭಾಗದ ವಿಜ್ಞಾನಿ ಆರ್. ಕೆ. ಸುಬ್ರಮಣ್ಯಂ, ಕೃಷಿ ವಿಜ್ಞಾನ ಕೇಂದ್ರದ ತರಬೇತಿ ಸಂಯೋಜಕರಾದ ಡಾ. ಸಿ. ದೊರೆಸ್ವಾಮಿ, ರೇಷ್ಮೆ ಇಲಾಖೆಯ ಉಪನಿರ್ದೇಶಕರಾದ ಎನ್.ವೈ. ಚಿಗರಿ, ಕೆ.ಎಚ್. ಪೃಥ್ವಿರಾಜ್ ಅತಿಥಿಗಳಾಗಿ ಭಾಗವಹಿಸುವರು.

ರೇಷ್ಮೆ ಕೃಷಿ ಕುರಿತು ರೈತರೊಂದಿಗೆ ಸಂವಾದ ಪ್ರಾತ್ಯಕ್ಷಿಕೆ, ಪ್ರಗತಿ ಪರ ರೈತರಿಂದ ವಿಚಾರ ವಿನಿಮಯದಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜಿಲ್ಲೆಯ ರೇಷ್ಮೆ ಬೆಳೆಗಾರರು, ರೈತರು ಕಾರ್ಯಾಗಾರದ ಪ್ರಯೋಜನ ಪಡೆಯುವಂತೆ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಡಿ.ಎಸ್. ಚಂದ್ರಶೇಖರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಅನಾಥಾಶ್ರಮ ವೃದ್ದಾಶ್ರಮ, ಸಹಾಯಧನಕ್ಕೆ ಕ್ರೈಸ್ತ ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ

ಚಾಮರಾಜನಗರ ಫೆಬ್ರವರಿ 16 (ಕರ್ನಾಟಕ ವಾರ್ತೆ):- ಕ್ರಿಶ್ಚಿಯನ್ ಸಮುದಾಯದ ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಅನಾಥಾಶ್ರಮ ಮತ್ತು ವೃದ್ದಾಶ್ರಮಗಳನ್ನು ಪ್ರೋತ್ಸಾಹಿಸಲು ನೀಡುವ ಸಹಾಯ ಅನುದಾನಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯಲ್ಲಿ ವೃದ್ದಾಶ್ರಮ ಸ್ಥಾಪಿಸಲು ಆಸಕ್ತಿಯುಳ್ಳ ಅಲ್ಪಸಂಖ್ಯಾತರ ಕ್ರಿಶ್ಚಿಯನ್ ಸ್ವಯಂ ಸೇವಾ ಸಂಸ್ಥೆಗಳು ಅಗತ್ಯ ದಾಖಲಾತಿಗಳೊಂದಿಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಫೆಬ್ರವರಿ 25 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ(ದೂರವಾಣಿ ಸಂಖ್ಯೆ: 08226-22180) ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಫೆ.19ರಂದು ಪಲ್ಸ್ ಪೊಲಿಯೋ ಕಾರ್ಯಕ್ರಮ

ಬಳ್ಳಾರಿ, ಫೆ.16( ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಫೆಬ್ರುವರಿ 19 ರಿಂದ 22ರವರೆಗೆ ಮೊದಲನೇ ಸುತ್ತಿನ ಪಲ್ಸ್‌ಪೊಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ|| ಮೋಹನ್‌ಕುಮಾರಿ ಅವರು ತಿಳಿಸಿದ್ದಾರೆ.

ಬಳ್ಳಾರಿ ತಾಲೂಕಿನ ವ್ಯಾಪ್ತಿಯಲ್ಲಿ ಪೊಲಿಯೋ ಲಸಿಕೆ ಹಾಕಲು ಸರ್ಕಾರಿ ಆಸ್ಪತ್ರೆ, ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ 416 ಬೂತ್‌ಗಳನ್ನು ತೆರೆಯಲಾಗಿದ್ದು, ಈ ಬಾರಿ ನಗರ ಪ್ರದೇಶದ 62597 ಮಕ್ಕಳು ಹಾಗೂ ಗ್ರಾಮೀಣ 53400 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ಫೆಬ್ರುವರಿ 20, 21, 22ರಂದು ಮನೆ ಮನೆಗಳಿಗೆ ಭೇಟಿ ನೀಡಿ ಪೋಲಿಯೋ ಹನಿ ಹಾಕಲಾಗುವುದು. ಐದು ವರ್ಷದೊಳಗಿನ ಎಲ್ಲ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ನಿಗದಿತ ದಿನಾಂಕಗಳಂದು ಪಲ್ಸ್ ಪೋಲಿಯೋ ಹನಿ ಹಾಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಕ್ರೀಡಾ ಶಾಲೆಗಳಿಗೆ ಕ್ರೀಡಾಪಟುಗಳ ಆಯ್ಕೆ

ಬಳ್ಳಾರಿ. ಫೆ.16 ( ಕರ್ನಾಟಕ ವಾರ್ತೆ) : ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತಿ ಅಧೀನದ ಕ್ರೀಡಾ ಶಾಲೆಗಳಿಗೆ 2012-13ನೇ ಸಾಲಿನ ಪ್ರವೇಶಕ್ಕಾಗಿ ಫೆಬ್ರುವರಿ 17 ರಿಂದ 25ರವರೆಗೆ ಎಲ್ಲ ತಾಲೂಕುಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀ ರಾಜು ಬಾವಿಹಳ್ಳಿ ತಿಳಿಸಿದ್ದಾರೆ.

ಫೆಬ್ರುವರಿ 17ರಂದು ಛತ್ರಪತಿ ಶಿವಾಜಿ ಪದವಿಪೂರ್ವ ಕಾಲೇಜು, ಸಂಡೂರು, ತೋರಣಗಲ್ಲು; ಫೆ. 18ರಂದು ಸಿರುಗುಪ್ಪ ತಾಲೂಕು ಕ್ರೀಡಾಂಗಣ, ತೆಕ್ಕಲಕೋಟೆ; 20ರಂದು ಹಡಗಲಿ ತಾಲೂಕು ಕ್ರೀಡಾಂಗಣ; 21ರಂದು ಜಿಲ್ಲಾ ಕ್ರೀಡಾಂಗಣ ಬಳ್ಳಾರಿ, ಕುಡುತಿನಿ, ಹಲಕುಂದಿ, ಕುರುಗೋಡು; 23ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಕೂಡ್ಲಿಗಿ, ಕೊಟ್ಟೂರು; 24ರಂದು ಮರಿಯಮ್ಮನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, 25ರಂದು ಹೊಸಪೇಟೆ ತಾಲೂಕು ಕ್ರೀಡಾಂಗಣ, ಕಮಲಾಪುರದಲ್ಲಿ ನಡೆಯಲಿದೆ. ಆಸಕ್ತರು ನಿಗದಿತ ಸ್ಥಳದಲ್ಲಿ ನಿಗದಿತ ದಿನಾಂಕದಂದು ಹಾಜರಿರಬೇಕೆಂದು ಅವರು ತಿಳಿಸಿದ್ದಾರೆ.

ಯುವ ವಿಜ್ಞಾನ ಪ್ರಶಸ್ತಿಗಾಗಿ ಅರ್ಜಿ ಕರೆ

ಬಳ್ಳಾರಿ, ಫೆ.16( ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ 2011-12ನೇ ಸಾಲಿಗೆ ಯುವ ವಿಜ್ಞಾನಿ ಪ್ರಶಸ್ತಿ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ. 15 ರಿಂದ 18 ವರ್ಷ ವಯೋಮಾನದೊಳಗಿನ ಪ್ರೌಢಶಾಲಾ/ಪದವಿ ಪೂರ್ವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಡಿಎಸ್‌ಇಆರ್ ಟಿ ವತಿಯಿಂದ ಏರ್ಪಡಿಸಿರುವ ವಿಜ್ಞಾನ ಗೋಷ್ಠಿ, ವಿಜ್ಞಾನ ರಸಪ್ರಶ್ನೆ, ವಿಜ್ಞಾನ ವಸ್ತುಪ್ರದರ್ಶನ, ಬಾಲ ವಿಜ್ಞಾನ ನಾಟಕ, ವಿಜ್ಞಾನಕ್ಕೆ ಸಂಬಂಧಿಸಿದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ, ವಿಜ್ಞಾನ ವಿಷಯದಲ್ಲಿ ಪಡೆದ ಅಂಕಗಳು, ವಿಜ್ಞಾನಕ್ಕೆ ಆಯೋಜಿಸಿದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಆಸಕ್ತರು ತಮ್ಮ ಶಾಲೆ/ಕಾಲೇಜಿನ ಮುಖ್ಯಸ್ಥರಿಂದ ದೃಢೀಕರಿಸಿದ ಅರ್ಜಿಯನ್ನು ದ್ವಿಪ್ರತಿಯಲ್ಲಿ ಫೆಬ್ರುವರಿ 20ರೊಳಗಾಗಿ ಉಪನಿರ್ದೇಶಕರು, ಸಾರ್ವಜನಿಕರ ಶಿಕ್ಷಣ ಇಲಾಖೆ, ಬಳ್ಳಾರಿ ಇವರಿಗೆ ಸಲ್ಲಿಸಬೇಕು. ಅರ್ಜಿ ನಮೂನೆ ಮತ್ತಿತರ ಮಾಹಿತಿಗಾಗಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಂಪರ್ಕಿಸಲು ಕೋರಲಾಗಿದೆ.

ಕುಡಿಯುವ ನೀರಿನ ಸಮಸ್ಯೆಗಾಗಿ ಕಂಟ್ರೋಲ್ ರೂಂ

ಬಳ್ಳಾರಿ, ಫೆ.16( ಕರ್ನಾಟಕ ವಾರ್ತೆ): ಬಳ್ಳಾರಿ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ದೂರು ಸ್ವೀಕರಿಸಲು ಕಂಟ್ರೋಲ್ ರೂಂ ಅನ್ನು ತೆರೆಯಲಾಗಿದೆ ಎಂದು ಬಳ್ಳಾರಿಯ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಕೂಡಲೇ ಪರಿಹಾರ ಒದಗಿಸಲು ಈ ಕಂಟ್ರೋಲ್ ರೂಂ ತೆರೆಯಲಾಗಿದ್ದು, ದಿನದ 24 ಗಂಟೆಗಳೂ ಸಹ ಕಾರ್ಯನಿರ್ವಹಿಸಲಿದೆ. ಇದಕ್ಕಾಗಿ ಫೆಬ್ರುವರಿ 16 ರಿಂದ 29ರವರೆಗೆ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಕಾರ್ಯನಿರ್ವಹಿಸಲು ಶ್ರೀ ಚನ್ನಬಸವನಗೌಡ, 10 ಗಂಟೆಯಿಂದ 5-30ರವರೆಗೆ ಶ್ರೀಮತಿ ಸಿ.ಎಂ. ನಿರ್ಮಲ ಹಾಗೂ 11 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಶ್ರೀ ಯು. ರಾಘವೇಂದ್ರರಾವ್ ಅವರನ್ನು ನೇಮಕ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-256203 ಅನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದ್ದಾರೆ.

ರಸ್ತೆ ಸಂಚಾರ ಮಾದರಿ ಸಮೀಕ್ಷೆ

ಬಳ್ಳಾರಿ, ಫೆ.16( ಕರ್ನಾಟಕ ವಾರ್ತೆ): ಲೋಕೋಪಯೋಗಿ ಇಲಾಖೆಯು ರಸ್ತೆಗಳ ಸಂಚಾರ ಸಾಂದ್ರತೆ ಹಾಗೂ ತೀವ್ರತೆ ಕಂಡುಹಿಡಿಯುವ, ರಸ್ತೆಗಳ ಅಗಲಳತೆ ನಿರ್ಧಾರ, ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ರಸ್ತೆಗಳ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ರಸ್ತೆ ಸಂಚಾರ ಮಾದರಿ ಸಮೀಕ್ಷೆ ನಡೆಸಲಿದೆ. ಸಮೀಕ್ಷೆಯು ಫೆಬ್ರುವರಿ 22ರ ಬೆಳಿಗ್ಗೆ 6 ಗಂಟೆಯಿಂದ 24ರ ಬೆಳಿಗ್ಗೆ 6 ಗಂಟೆಯವರೆಗೆ ನಡೆಸಲಾಗುವುದು. ಸಮೀಕ್ಷೆಯನ್ನು ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಕೈಗೊಳ್ಳಲಾಗುವುದು. ಇದಕ್ಕಾಗಿ ರಸ್ತೆಗಳ ಮೇಲೆ ಗಣತಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಗಣತಿ ಕೇಂದ್ರಗಳ ಬಳಿ ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ. ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ ಎಂದು ಸೂಚನಾ ಫಲಕಗಳನ್ನು ತೂಗು ಬಿಟ್ಟಿರುತ್ತಾರೆ. ಎಲ್ಲ ವಾಹನ ಚಾಲಕರು ತಮ್ಮ ವಾಹನವನ್ನು ಸೂಚನಾ ಫಲಕ ಇರುವ ಕಡೆ ನಿಧಾನವಾಗಿ ಸಾಗಿಸಿಕೊಂಡು ಮುಂದೆ ಸಾಗಬೇಕೆಂದು ಧಾರವಾಡದ ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕಟ್ಟಡ ಉತ್ತರ) ಅವರು ಮನವಿ ಮಾಡಿದ್ದಾರೆ.

ಮೊದಲ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಜ್ಜು

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ಮೊದಲ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮವು ರಾಷ್ಟ್ರಾದ್ಯಂತ ಫೆ.19 ರಂದು ನಡೆಯಲಿದ್ದು, ಕೊಡಗಿನಲ್ಲಿ ಜಿಲ್ಲಾಡಳಿತ ಕೂಡ ಈ ರಾಷ್ಟ್ರೀಯ ಮಹತ್ವದ ಕಾರ್ಯಕ್ರಮದ ಯಶಸ್ಸಿಗೆ ಸಿದ್ದತೆ ಕೈಗೊಂಡಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಮೊದಲ ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಕೈಗೊಳ್ಳಲಾಗಿರುವ ಸಿದ್ದತೆಗಳ ಕುರಿತು ಪರಿಶೀಲನಾ ಸಭೆ ನಡೆಸಿ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿ.ಪಂ.ಮುಖ್ಯಾಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಮಾತನಾಡಿ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇದರ ಯಶಸ್ಸು ಪ್ರತಿಯೊಬ್ಬರ ಜವಬ್ದಾರಿಯಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯ ನಿರ್ವಹಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಶಿಶು ಅಭಿವೃದ್ಧಿ ಅಧಿಕಾರಿಗಳು ಹೀಗೆ ಎಲ್ಲಾ ತಾಲ್ಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ವಿವಿಧ ಹಾಡಿಗಳು ಮತ್ತು ಕುಗ್ರಾಮಗಳಿಗೆ ತೆರಳಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಹಾಕುವಂತೆ ಮತ್ತು ಜಿಲ್ಲೆಯ ಯಾವುದೇ ಅರ್ಹ ಮಕ್ಕಳು ಈ ಸೌಲಭ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಪಲ್ಸ್ ಪೋಲಿಯೋ ಒಂದು ಮಹತ್ವ ಕಾರ್ಯವಾಗಿದ್ದು ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು ಒಟ್ಟುಗೂಡಿ ಈ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಹಕಾರ ನೀಡವಂತೆ ಕೋರಿದರು.

ಕೊಡಗು ಜಿಲ್ಲೆ ಬೆಟ್ಟಗುಡ್ಡ ಕಾನನಗಳಿಂದ ಕೂಡಿದ್ದು ಮನೆಗಳು ಬಹಳ ದೂರಲ್ಲಿವೆ. ಅಂತಹ ಕುಟುಂಬಗಳಿಗೆ ತೆರಳಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಬೇಕಿದೆ. ಆ ದಿಸೆಯಲ್ಲಿ ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ವಾಹನಗಳನ್ನು ಪ್ರಾದೇಶಿಕ ಸಾರಿಗೆ ಇಲಾಖೆ ಒದಗಿಸಬೇಕು ಹಾಗೆಯೇ ಪೋಲಿಯೋ ಲಸಿಕೆ ಹಾಳಾಗದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸೆಸ್ಕ್ ಕಾರ್ಯಪಾಲಕ ಅಭಿಯಂತರರಿಗೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣಾಧಿಕಾರಿ ಡಾ.ಶಿವಕುಮಾರ್ ಅವರು ಮಾತನಾಡಿ ಫೆ.19ರಂದು ಬೂತ್‌ಗಳಲ್ಲಿ ಲಸಿಕೆ ಹಾಕಲಾಗುತ್ತದೆ. ನಂತರ ಎರಡು ದಿಗಳ ಕಾಲ ಮನೆ ಮನೆಗೆ ತೆರಳಿ ಪಲ್ಸ್ ಪೋಲಿಯೋ ಹಾಕಿಸದಿರುವರನ್ನೂ ಖಾತರಿ ಪಡಿಸಿಕೊಂಡು ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದ ಅವರು ಈ ಮೂರು ದಿನಗಳಲ್ಲಿ ಅಗತ್ಯ ವಾಹನ ಸೌಲಭ್ಯ ಒದಗಿಸಬೇಕೆಂದು ಅವರು ಕೋರಿದರು.

ಎರಡು ಹಂತದ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಒಟ್ಟು 469 ಬೂತ್‌ಗಳನ್ನು ತೆರೆಯಲಾಗಿದೆ. 20 ಟ್ರಾನ್ಸಿಟ್ ತಂಡಗಳು ಎರಡು ಸಂಚಾರಿ ಲಸಿಕಾ ತಂಡಗಳನ್ನು ರಚಿಸಲಾಗಿದೆ. 1886 ಮಂದಿ ಲಸಿಕೆ ಹಾಕುವವರು ಮತ್ತು 87 ಮಂದಿ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಡಾ.ಶಿವಕುಮಾರ್ ಅವರು ತಿಳಿಸಿದರು.

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಹಬೀಬುಲ್ಲಾ ಖಾನ್, ಸೆಸ್ಕ್ ಕಾರ್ಯಪಾಲಕ ಅಭಿಯಂತರಾದ ದಿವಾಕರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎನ್.ಎ.ರಾಮಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ವಿಜಯಲಕ್ಷ್ಮಿ ಶೈಣೈ ಅವರು ತಿಳಿಸಿದರು.

ಸಭೆಯ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಪುಟ್ಟರಾಜು ಅವರು ಸ್ಲೈಡ್ ಶೋ ಮೂಲಕ ಪಲ್ಸ್ ಪೋಲಿಯೋ ಬಗ್ಗೆ ಸಮಗ್ರ ಮಾಹಿತಿ ನೀಡದರು.

ಜಿಲ್ಲಾ ಪಲ್ಸ್ ಪೋಲಿಯೋ ನೋಡಲ್ ಅಧಿಕಾರಿ ಡಾ. ಆನಂದ ಅವರು ಮೊದಲ ಹಂತದ ಪಲ್ಸ್ ಪೊಲಿಯೋ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಮುತ್ತಪ್ಪ, ಪೌರಾಯುಕ್ತರಾದ ಎನ್.ಎಂ.ಶಶಿಕುಮಾರ್, ಮಡಿಕೇರಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸತ್ಯನಾರಯಣ, ಶಿಶು ಅಭಿವೃದ್ಧಿ ಅಧಿಕಾರಿ ಮಾದಪ್ಪ, ವಿಕಲವೇತನರ ಅಭಿವೃದ್ಧಿ ಅಧಿಕಾರಿ ನೀರಬಿದರೆ ನಾರಾಯಣ ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಭಾಗಮಂಡಲ ಗ್ರಾ.ಪಂ.ನ ಅಯ್ಯಂಗೇರಿಯ ಗೊಲ್ಲರ ಹಟ್ಟಿ ಅಭಿವೃದ್ದಿಗೆ 33ಲಕ್ಷ ರೂ. ಬಿಡುಗಡೆ

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರ ಶಿಫಾರಸಿನ ಮೇರೆಗೆ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಗ್ರಾ.ಪಂ.ವ್ಯಾಪ್ತಿಯ ಅಯ್ಯಂಗೇರಿ ಗ್ರಾಮದ ಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ವತಿಯಿಂದ 33 ಲಕ್ಷ ರೂ ಬಿಡುಗಡೆಯಾಗಿದೆ.

ಗೊಲ್ಲರ ಕೇರಿಯ ಅಚ್ಚೀರ ಮನೆ ಹತ್ತಿರ ಮಹಿಳಾ ಭವನ ನಿರ್ಮಾಣಕ್ಕೆ 5 ಲಕ್ಷ ರೂ, ಗೊಲ್ಲರ ಕೇರಿಯ ಬಿದ್ದಿಂಡ ಮನೆಯ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕಾಗಿ 8 ಲಕ್ಷ ರೂ, ಗೊಲ್ಲರ ಬಿದ್ದಿಂಡ ಮನೆಯ ಹತ್ತಿರದ ರಸ್ತೆ ಸೇತುವೆ ನಿರ್ಮಾಣಕ್ಕೆ 4 ಲಕ್ಷ ರೂ, ಗೊಲ್ಲರ ಕೇರಿಯ ಭೀಮಯ್ಯ ಅವರ ಮನೆಯ ಹತ್ತಿರ ಕಾಲು ಸೇತುವೆ ನಿರ್ಮಾಣಕ್ಕೆ 3.40 ಲಕ್ಷ ರೂ, ಗೊಲ್ಲರ ಕೆರಿಯ ಬಿದ್ದಿಂಡ ರಘುಪತಿ ಅವರ ಮನೆ ಹತ್ತಿರ ರಸ್ತೆ ನಿರ್ಮಾಣಕ್ಕೆ 5.48 ಲಕ್ಷ ರೂ, ಗೊಲ್ಲರ ಕೇರಿಯ ಅಚೀರ ರಮೇಶ್ ಅವರು ಮನೆಯ ಹತ್ತಿರ ರಸ್ತೆ ಕಾಲು ಸೇತುವೆ ನಿರ್ಮಾಣಕ್ಕಾಗಿ 4.11 ಲಕ್ಷ ರೂ ಗೊಲ್ಲರ ಅಚೀರ ಮನೆಯ ಹತ್ತಿರ ರಸ್ತೆ ಅಭಿವೃದ್ಧಿಗೆ 3 ಲಕ್ಷ ರೂ, ಗೊಲ್ಲರಕೇರಿ ಚಿನ್ನಿತಪ್ಪ ದೇವಸ್ಥಾನದ ಬಳಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ 2 ಲಕ್ಷ ರೂ, ಸೇರಿದಂತೆ ಒಟ್ಟು 33 ಲಕ್ಷ ರೂ. ಬಿಡುಗಡೆಯಾಗಿದೆ.

ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಶಿಪಾರಸ್ಸನ್ನು ಪರಿಗಣಿಸಿ ಸಮಾಜಿಕ ಕಲ್ಯಾಣಾ ಸಚಿವರಾದ ಎ.ನಾರಾಯಣ ಸ್ವಾಮಿ ಅವರ ಸೂಚನೆ ಮೇರೆಗೆ ಅಯ್ಯಂಗೇರಿ ಗ್ರಾಮದ ಗೊಲ್ಲರ ಹಟ್ಟಿಗಳಿಗೆ ಮೂಲಭೂತ ಅಭಿವೃದ್ಧಿಗೆ 3.ಲಕ್ಷ ರೂ ಅನುದಾನ ಮಾಡಲು ಸೂಚಿಸಿರುವ ಹಿನ್ನೆಲೆ ಸಾಮಾಜಿಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರು 33 ಲಕ್ಷ ರೂ ಅನುದಾನ ಬಿಡುಗಡೆಗೆ ಆದೇಶ ಹೊರಡಿಸಿದ್ದಾರೆ.

ಅಲೆಮಾರಿ ಜನಾಂಗದ ವ್ಯಾಪ್ತಿಗೆ ಬರುವ ಗೊಲ್ಲರ ಹಟ್ಟಿಗಳ ಅಭಿವೃದ್ದಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ರೂಪಿಸಿದ ಮಾರ್ಗಸೂಚಿಗಳನ್ವಯ ಈ ಅನುದಾನ ಬಿಡುಗಡೆ ಮಾಡಲಾಗಿದೆ.

ಫೆ.23ರಿಂದ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ ಆರಂಭ

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ಯುವಜನ ಸೇವ ಮತ್ತು ಕ್ರೀಡಾ ಇಲಾಖೆ ಹಾಗೂ ಕೊಡಗು ಜಿ.ಪಂ.ವತಿಯಿಂದ ಪೊನ್ನಂಪೇಟೆಯಲ್ಲಿನ ಬಾಲಕ-ಬಾಲಕಿಯರ ಕ್ರೀಡಾ ವಸತಿ ನಿಲಯ ಪ್ರವೇಶಕ್ಕೆ 2012-13ನೇ ಸಾಲಿಗೆ ಪ್ರತಿಭಾನ್ವಿತ ಹಾಕಿ ಕ್ರೀಡಾ ಪಟುಗಳ ಆಯ್ಕೆ ಪ್ರಕ್ರಿಯೆಯು ಫೆ.23ರಿಂದ ಮೂರು ದಿನಗಳ ಕಾಲ ನಡೆಯಲಿದೆ.

ಫೆಬ್ರವರಿ 23ರಂದು ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆಯ ಸರ್ಕಾರಿ ಪ್ರೌಢಶಾಲಾ ಕ್ರೀಡಾಂಗಣ, ಫೆ.24ರಂದು ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಮತ್ತು ಫೆ.25ರಂದು ವಿರಾಜಪೇಟೆ ತಾಲ್ಲೂಕಿನ ಪೊನ್ನಂಪೇಟೆಯ ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕಿಯೆ ನಡೆಯಲಿದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆಯಾಯಾ ದಿನದಂದು ಬೆಳಗ್ಗೆ 9 ಗಂಟೆ ಒಳಗೆ ಇಲಾಖೆ ತರಬೇತಿದಾರರಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಅರ್ಹತೆ:- ಕ್ರೀಡಾಪಟುಗಳು ಕೊಡಗು ಜಿಲ್ಲೆಯ ನಿವಾಸಿಗಳಾಗಿರಬೇಕು. 01-06-2012 ಕ್ಕೆ 14 ವರ್ಷದೊಳಗಿರಬೇಕು. 8ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಕ್ರೀಡಾಪಟುಗಳ ಎತ್ತರ 148 ಸೆಂ.ಮೀ ಕಡ್ಡಾಯವಾಗಿರಬೇಕು. ಆಯ್ಕೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು 7ನೇ ತರಗತಿಯಲ್ಲಿ ಓದುತ್ತಿರುವ ದೃಡೀಕರಣ ಪತ್ರ, ಜನ್ಮ ದಿನಾಂಕ ದೃಡೀಕರಣ ಪತ್ರ ಹಾಗೂ ನಡತೆ ದೃಡೀಕರಣ ಪತ್ರಗಳನ್ನು ಶಾಲಾ ಮುಖ್ಯೋಪಾದ್ಯಾಯರಿಂದ ದೃಡೀಕರಿಸಿ ಕಡ್ಡಾಯವಾಗಿ ತರಬೇಕು. ದೈಹಿಕ ಸಾಮರ್ಥ್ಯದ ಬಗ್ಗೆ ಸರ್ಕಾರಿ ವೈದ್ಯರಿಂದ ವೈದ್ಯಕೀಯ ದೃಡೀಕರಣ ಪತ್ರದೊಂದಿಗೆ ಆಗಮಿಸಬೇಕು,

ಈ ಆಯ್ಕೆ ಪ್ರಕ್ರಿಯೆಯಲ್ಲಿ ಅರ್ಹ ಹಾಕಿ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಯೋಜನಾ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ.ಗಾಯತ್ರಿ ಅವರು ಕೋರಿದ್ದಾರೆ.

ಫೆ.22 ರಂದು ಮಕ್ಕಳ ಗ್ರಾಮ ಸಭೆ

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ಚೆಟ್ಟಳ್ಳಿ ಗ್ರಾ.ಪಂ.ನ 2011-12ನೇ ಸಾಲಿನ ‘ಮಕ್ಕಳ ಗ್ರಾಮ ಸಭೆ’ಯು ಫೆಬ್ರವರಿ 22ರಂದು ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ ಎಂದು ಚೆಟ್ಟಳ್ಳಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

ದರಪಟ್ಟಿ ಆಹ್ವಾನ

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ಜಿಲ್ಲೆಯ ವಿವಿಧ ಕೋರ್ಟ್‌ಗಳಲ್ಲಿ ಇರುವ ಆಲ್ ಇಂಡಿಯಾ ರಿಪೋರ್ಟ್, ಕ್ರಿಮಿನಲ್ ಲಾ ಜರ್ನಲ್, ಕರ್ನಾಟಕ ಲಾ ಜರ್ನಲ್, ಆಕ್ಸಿಡೆಂಟ್ ಕ್ಲೇಮ್ಸ್ ಜರ್ನಲ್, ಇಂಡಿಯನ್ ಲಾ ರಿಪೋಟ್ಸ್, ಕರ್ನಾಟಕ ತೀರ್ಪುಗಳ ವರದಿ ಕುರಿತ ಕಾನೂನಿಗೆ ಸಂಬಂಧಿಸಿದ ಪುಸ್ತಕಗಳನ್ನು ಬೈಡಿಂಗ್ ಮಾಡುವುದಕ್ಕಾಗಿ ಅಧಿಕೃತರಿಂದ ದರಪಟ್ಟಿ ಆಹ್ವಾನಿಸಲಾಗಿದೆ. ದರಪಟ್ಟಿಯನ್ನು ಮಾರ್ಚ್ 12ರ ಸಂಜೆ 5.00 ಗಂಟೆ ಒಳಗೆ ಜಿಲ್ಲಾ ಮತ್ತು ಸತ್ರ ನ್ಯಾಯಧಿಶರ ಕಚೇರಿಗೆ ಸಲ್ಲಿಸಬೇಕು. ಷರತ್ತುಗಳು ಹಾಗೂ ಹೆಚ್ಚಿನ ಮಾಹಿತಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಚೇರಿಯಲ್ಲಿ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಫೆ.26ರಂದು ಜಾನಪದ ಕಲಾಮೇಳ

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ಕಿರುಗೂರು ಗ್ರಾಮ ಪಂಚಾಯತ್, ನೆಹರು ಯುವ ಕೇಂದ್ರ, ಕಿರುಗೂರು ಮಹಿಳಾ ಮಂಡಳಿ, ಕಿಗೂರು ಯುವಕ ಸಂಘ, ಕಿರುಗೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟ ಇವರ ಆಶ್ರಯದಲ್ಲಿ ವಿರಾಜಪೇಟೆ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಜಾನಪದ ಕಲಾಮೇಳವು ಫೆಬ್ರವರಿ 26 ರಂದು ಬೆಳಗ್ಗೆ 10.30 ಗಂಟೆಗೆ ಕಿರುಗೂರು ಮಹಿಳಾ ಮಂಡಳಿ ಸಂಭಾಗಣದಲ್ಲಿ ನಡೆಯಲಿದೆ.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕುಶಾಲಪ್ಪ ಎಂ.ಎಸ್. ಉದ್ಘಾಟಿಸಲಿದ್ದಾರೆ. ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೀಟಾ ಪೂಣಚ್ಚ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸದಸ್ಯರಾದ ಟಾಟು ಮೊಣ್ಣಪ್ಪ, ಮಡಿಕೇರಿ ಎನ್.ವೈ.ಕೆ. ಜಿಲ್ಲಾ ಯುವ ಸಮನ್ವಯಾಧಿಕಾರಿಗಳು, ವಿರಾಜಪೇಟೆ ತಾಲ್ಲೂಕು ಶ್ರೀಕ್ಷೇತ್ರ ಧರ್ಮಸ್ಥಳ ಯೋಜನಾಧಿಕಾರಿಯಾದ ಶೇಖರ ಗೌಡ,ಶ್ರೀಮತಿ ಸಿ.ಟಿ.ಕಾವೇರಮ್ಮ, ಶ್ರೀಮತಿ ಜೋತಿ ದೇವಯ್ಯ, ಕಂದಾ ದೇವಯ್ಯ ಶ್ರೀಮತಿ ಪಿ.ಎನ್.ವಿಮಲ ಪಾಲ್ಗೊಳ್ಳಲಿದ್ದಾರೆ.

ಪಡಿತರ ಆಹಾರ ಪದಾರ್ಥಗಳ ಬಿಡುಗಡೆ

ಮಡಿಕೇರಿ ಫೆ.16(ಕರ್ನಾಟಕ ವಾರ್ತೆ):-ಫೆಬ್ರವರಿ-2012ನೇ ಮಾಹೆಗೆ ಜಿಲ್ಲೆಯ ಅಂತ್ಯೋದಯ, ನೆಮ್ಮದಿ ಪೂರ್ವ, ನೆಮ್ಮದಿ ಕೇಂದ್ರಗಳಲ್ಲಿ ವಿತರಿಸಿರುವ ಪಡಿತರ ಚೀಟಿಗಳ ಪೈಕಿ ಭಾವಚಿತ್ರ ಸೆರೆಹಿಡಿಯಲಾಗಿರುವ ಅಂತ್ಯೋದಯ, ಅಕ್ಷಯ(ಬಿಪಿಎಲ್) ಮತ್ತು ಎಪಿಎಲ್ ಪಡಿತರ ಚೀಟಿಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಪಡಿತರ ಆಹಾರ ಪದಾರ್ಥಗಳು ಹಾಗೂ ಸೀಮೆಎಣ್ಣೆಯನ್ನು ತಾಲ್ಲೂಕುವಾರು ಪಡಿತರ ಬಿಡುಗಡೆ ಮಾಡಲಾಗಿದೆ. ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಂದ ಫೆಬ್ರವರಿ-2012 ಮಾಹೆಯ ಅಂತ್ಯದೊಳಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೋರಿದೆ.

ಪಡಿತರ ವಸ್ತುಗಳ ವಿತರಣಾ ಪ್ರಮಾಣ ಮತ್ತು ದರದ ವಿವರ ಇಂತಿದೆ:- ಅಂತ್ಯೋದಯ ಕಾರ್ಡುದಾರರಿಗೆ 3 ರೂ. ನಂತೆ 29 ಕೆ.ಜಿ ಅಕ್ಕಿ, 2 ರೂ. ನಂತೆ 6 ಕೆ.ಜಿ. ಗೋಧಿ, 13.50 ರೂ. ನಂತೆ 1 ಕೆ.ಜಿ. ಸಕ್ಕರೆ, ಅಕ್ಷಯ ಕಾರ್ಡುದಾರರಿಗೆ ಮತ್ತು ನೆಮ್ಮದಿ ಕೇಂದ್ರದಲ್ಲಿ ವಿತರಿಸಿರುವ ಅಕ್ಷಯ ಕಾರ್ಡುದಾರರಿಗೆ ಏಕವ್ಯಕ್ತಿ ಕುಟುಂಬಕ್ಕೆ 3 ರೂ. ನಂತೆ 4 ಕೆ.ಜಿ. ಅಕ್ಕಿ ಮತ್ತು 2ರೂ. ನಂತೆ 1 ಕೆ.ಜಿ. ಗೋಧಿ, 13.50 ರೂ. ನಂತೆ 1 ಕೆ.ಜಿ. ಸಕ್ಕರೆ, ಧ್ವಿ ಸದಸ್ಯ ಕುಟುಂಬಕ್ಕೆ 3 ರೂ. ನಂತೆ 8 ಕೆ.ಜಿ. ಅಕ್ಕಿ ಮತ್ತು 3 ರೂ. ನಂತೆ 1 ಕೆ.ಜಿ. ಗೋಧಿ, 13.50 ರೂ. ನಂತೆ 1 ಕೆ.ಜಿ. ಸಕ್ಕರೆ, ಮೂರು ಸದಸ್ಯರ ಕುಟುಂಬಕ್ಕೆ 3 ರೂ. ನಂತೆ 12 ಕೆ.ಜಿ. ಅಕ್ಕಿ ಮತ್ತು 3 ರೂ. ನಂತೆ 2 ಕೆ.ಜಿ. ಗೋಧಿ, 13.50 ರೂ. ನಂತೆ 1 ಕೆ.ಜಿ. ಸಕ್ಕರೆ, ನಾಲ್ಕು ಸದಸ್ಯರ ಕುಟುಂಬಕ್ಕೆ 3 ರೂ. ನಂತೆ 16 ಕೆ.ಜಿ. ಅಕ್ಕಿ ಮತ್ತು 3 ರೂ. ನಂತೆ 3 ಕೆ.ಜಿ. ಗೋಧಿ, 13.50 ರೂ. ನಂತೆ 1 ಕೆ.ಜಿ. ಸಕ್ಕರೆ ಹಾಗೂ ಐದು ಮತ್ತು ಅದಕ್ಕಿಂತ ಹೆಚ್ಚಿಗೆ ಸದಸ್ಯರಿರುವ ಕುಟುಂಬಕ್ಕೆ 3 ರೂ. ನಂತೆ 20 ಕೆ.ಜಿ. ಅಕ್ಕಿ ಮತ್ತು 3 ರೂ. ನಂತೆ 3 ಕೆ.ಜಿ. ಗೋಧಿ, 13.50 ರೂ. ನಂತೆ 1 ಕೆ.ಜಿ. ಸಕ್ಕರೆ. ಎಪಿಎಲ್ ಕಾರ್ಡುದಾರರಿಗೆ 9.40 ರೂ. ನಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗಿದೆ.

ಸೀಮೆಎಣ್ಣೆ ವಿತರಣೆ ಪ್ರಮಾಣ ಮತ್ತು ದರ:-ಮಡಿಕೇರಿ ತಾಲ್ಲೂಕಿನ ಪಟ್ಟಣ ಪ್ರದೇಶಕ್ಕೆ 14.90 ರೂ. ನಂತೆ 6ಲೀ. ಗ್ರಾಮಾಂತರ ಪ್ರದೇಶಕ್ಕೆ 15.20 ರೂ.ನಂತೆ 4ಲೀ, ಸೋಮವಾರಪೇಟೆ ಮತ್ತು ವಿರಾಜಪೇಟೆ ತಾಲ್ಲೂಕಿನ ಪಟ್ಟಣ ಪ್ರದೇಶಕ್ಕೆ 15ರೂ. ನಂತೆ 6ಲೀ, ಗ್ರಾಮಾಂತರ ಪ್ರದೇಶಕ್ಕೆ 15.30 ರೂ. ನಂತೆ 4ಲೀ ಸೀಮೆಎಣ್ಣೆಯನ್ನು ವಿತರಿಸಲಾಗುವುದು.

ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ: 08272-225500 ಮತ್ತು ಉಪ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮಡಿಕೇರಿ ಇವರ ಕಚೇರಿ ದೂರವಾಣಿ-08272-229457 ಹಾಗೂ ತಾಲ್ಲೂಕಿನ ತಹಶೀಲ್ದಾರರ ಕಚೇರಿ ಮಡಿಕೇರಿ ತಾಲ್ಲೂಕು-08272-228396, ವಿರಾಜಪೇಟೆ ತಾಲ್ಲೂಕು -08274-257328, ಸೋಮವಾರಪೇಟೆ ತಾಲ್ಲೂಕು-08276-282045 ಅಥವಾ ಆಯುಕ್ತರ ಕಚೇರಿಯ ನಿಯಂತ್ರಣ ಕೊಠಡಿಯ ಉಚಿತ ದೂರವಾಣಿ ಸಂಖ್ಯೆ: 18004259339ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ತಿಳಿಸಿದ್ದಾರೆ.

ಫೆಬ್ರವರಿ 17ರ ಕಾರ್ಯಕ್ರಮ

ಫೆ.17ರಂದು ರೈತ ಆರೋಗ್ಯ ರಕ್ಷಣಾ ಯೋಜನೆಯ ಸಭೆ

ಜಿಲ್ಲಾ ಮಟ್ಟದ ಯಶಸ್ವಿನಿ ಸಹಕಾರಿ ರೈತ ಆರೋಗ್ಯ ರಕ್ಷಣಾ ಯೋಜನೆಯ ಜಿಲ್ಲಾ ಮಟ್ಟದ ಸಮಿತಿ ಸಭೆಯನ್ನು ಜಿಲ್ಲಾ ಸಮಿತಿಯ ಅಧ್ಯಕ್ಷರು ಹಾಗೂ ಮಡಿಕೇರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ಎಂ.ಎ.ರಮೇಶ್ ಇವರ ಅಧ್ಯಕ್ಷತೆಯಲ್ಲಿ ಫೆಬ್ರವರಿ 17ರಂದು ಬೆಳಗ್ಗೆ 11 ಗಂಟೆಗೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಆಡಳಿತ ಮಂಡಳಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಮಡಿಕೇರಿ ಸಹಕಾರಿ ಸಂಘಗಳ ಉಪನಿಬಂಧಕರು, ಹಾಗೂ ಸದಸ್ಯ ಕಾರ್ಯದರ್ಶಿಯಾದ ವೆಂಕಟಸ್ವಾಮಿ ಅವರು ತಿಳಿಸಿದ್ದಾರೆ.

ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನ

ಗುಲಬರ್ಗಾ,ಫೆ.16.(ಕ.ವಾ.)-ಗುಲಬರ್ಗಾ ಜಿಲ್ಲೆಯ ಆಳಂದ ತಾಲೂಕು ಸಮಾಜಕಲ್ಯಾಣ ಇಲಾಖೆ ಹಾಗೂ ಬಿ.ಸಿ.ಎಂ. ಇಲಾಖೆಯಿಂದ ನಡೆಸಲ್ಪಡುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ 2012-13ನೇ ಸಾಲಿನಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಳಂದ ತಾಲೂಕಿನ ಆಳಂದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ, ಸಾವಳೇಶ್ವರ, ತಡಕಲ್ ಮತ್ತು ಬೆಳಮಗಿ ಪಟ್ಟಣಗಳಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಬಹುದು. ನಿಗದಿತ ಅರ್ಜಿ ನಮೂನೆಯನ್ನು ಆಳಂದ ತಾಲೂಕು ಸಮಾಜಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಪಡೆದು ಅವರಿಗೆ 2012ರ ಫೆಬ್ರುವರಿ 25ರೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇದೇ ಕಾರ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.

ಕೇಂದ್ರ ಕಾರ್ಮಿಕ ಸಚಿವರ ಪ್ರವಾಸ

ಗುಲಬರ್ಗಾ,ಫೆ.16.(ಕ.ವಾ.)-ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 2012ರ ಫೆಬ್ರುವರಿ 17ರಂದು ರಾತ್ರಿ 8.45 ಗಂಟೆಗೆ ಗುಲಬರ್ಗಾಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಸಚಿವರು ಫೆಬ್ರುವರಿ 18ರಂದು ಬೆಳಗಿನ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ಸರ್ಕಾರದ ಪ್ರಾಯೋಜಿತ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲಿಸಿ ವಾಸ್ತವ್ಯ ಮಾಡುವರು. ಫೆಬ್ರುವರಿ 19ರಂದು ಬೆಳಗಿನ 10 ಗಂಟೆಗೆ ಗುಲಬರ್ಗಾದಲ್ಲಿ ಯೂನೈಟೆಡ್ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿ 11.45 ಗಂಟೆಗೆ ಚಿತ್ತಾಪೂರ ತಾಲೂಕಿನ ಕೊಂಚೂರು ಗ್ರಾಮಕ್ಕೆ ಆಗಮಿಸಿ ಏಕಲವ್ಯ ವಸತಿ ಶಾಲೆಯ ಶಂಕುಸ್ಥಾಪನೆ ನೆರವೇರಿಸುವರು. ಸಂಜೆ 4 ಗಂಟೆಗೆ ಗುಲಬರ್ಗಾದಲ್ಲಿ ಏಶಿಯನ್ ಮಾಲ್ ಉದ್ಘಾಟಿಸಿ ಸಂಜೆ 5 ಗಂಟೆಗೆ ಗುಲಬರ್ಗಾದಿಂದ ಹೈದ್ರಾಬಾದಿಗೆ ತೆರಳುವರು.

ಫೆಬ್ರುವರಿ 17ರಂದು ಮಕ್ಕಳ ಹಬ್ಬ

ಗುಲಬರ್ಗಾ,ಫೆ.16.(ಕ.ವಾ.)-ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಗುಲಬರ್ಗಾ ಇವುಗಳ ಸಂಯುಕ್ತಾಶ್ರಯದಲ್ಲಿ 2012ರ ಫೆಬ್ರುವರಿ 17 ರಂದು ಬೆಳಗಿನ 11 ಗಂಟೆಗೆ ನಗರದ ಅಂಧಬಾಲಕರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಗುಲಬರ್ಗಾ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಶಾಸಕಿ ಅರುಣಾ ಚಂದ್ರಶೇಖರ ಪಾಟೀಲ (ರೇವೂರ) ವಹಿಸುವರು. ಈ ಕಾರ್ಯಕ್ರಮಕ್ಕೆ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಸೇರಿದಂತೆ ಗುಲಬರ್ಗಾ ಹಾಗೂ ಬೀದರ ಲೋಕಸಭಾ ಸದಸ್ಯರು ಹಾಗೂ ಗುಲಬರ್ಗಾ ಜಿಲ್ಲೆಯ ವಿಧಾನಸಭಾ, ವಿಧಾನ ಪರಿಷತ್ ಸಚಿವರು ಹಾಗೂ ಶಾಸಕರು ಮತ್ತು ವಿವಿಧ ಯೋಜನೆಗಳ ಅಧ್ಯಕ್ಷರು ಮತ್ತು ಮಹಾಪೌರರು ಆಗಮಿಸಿಲಿದ್ದಾರೆ.

ಆಹಾರ ಸಾಮಗ್ರಿ ಸಾಗಾಣಿಕೆಗಾಗಿ ಟೆಂಡರ್ ಅರ್ಜಿ ಆಹ್ವಾನ

ಗುಲಬರ್ಗಾ,ಫೆ.16.(ಕ.ವಾ.)-ಗುಲಬರ್ಗಾ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನೆಯ 420 ಅಂಗನವಾಡಿ ಕೇಂದ್ರಗಳಿಗೆ 2011-12ನೇ ಸಾಲಿನಲ್ಲಿ ಆಹಾರ ಸಾಮಗ್ರಿ ಸಾಗಾಣಿಕೆ ಮಾಡಲು ಅರ್ಹ ಮಹಿಳಾ ಮಂಡಳ/ ಸ್ವ-ಸಹಾಯ ಗುಂಪು/ ಗ್ರಾಮ್ ಸಮುದಾಯಗಳಿಂದ ಟೆಂಡರ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು 2012ರ ಫೆಬ್ರುವರಿ 28ರ ಮಧ್ಯಾಹ್ನ 1 ಗಂಟೆಯೊಳಗೆ ಗುಲಬರ್ಗಾ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಟೆಂಡರ್ ಅರ್ಜಿಗಳನ್ನು ಸದರಿ ದಿನದಂದೇ ಮಧ್ಯಾಹ್ನ 3 ಗಂಟೆಗೆ ತೆರೆಯಲಾಗುವುದು. ಅರ್ಜಿ ನಮೂನೆ, ಷರತ್ತು, ಮತ್ತಿತರ ಹೆಚ್ಚಿನ ವಿವರಗಳಿಗಾಗಿ ಸದರಿ ಕಚೇರಿ ಅಧಿಕಾರಿಗಳನ್ನು ಅಥವಾ ದೂರವಾಣಿ ಸಂಖ್ಯೆ 08472-278654ನ್ನು ಸಂಪರ್ಕಿಸಲು ಕೋರಿದೆ.

ಚಿಂಚೋಳಿ: ಶೇ.7.25 ಯೋಜನೆಯಡಿ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

ಗುಲಬರ್ಗಾ,ಫೆ.16.(ಕ.ವಾ.)-ಚಿಂಚೋಳಿ ಪಟ್ಟಣ ಪಂಚಾಯಿತಿಯಿಂದ ಬಡತನ ರೇಖೆಗಿಂತ ಕೆಳಗಿರುವ ನಿರುದ್ಯೋಗಿ ಯುವಕ/ ಯುವತಿಯರಿಗೆ 2011-12ನೇ ಸಾಲಿಗೆ ಶೇ. 7.25 ಯೋಜನೆಯಡಿ ವಿವಿಧ ಕಾರ್ಯಕ್ರಮಗಳಿಗೆ ಧನಸಹಾಯ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಾರ್ಯಕ್ರಮಗಳು ಹಾಗೂ ಲಗತ್ತಿಸಬೇಕಾದ ದಾಖಲಾತಿಗಳ ವಿವರ ಇಂತಿದೆ.

ಭಾರಿ ಶಸ್ತ್ರಚಿಕಿತ್ಸೆ ಮಾಡಿಕೊಂಡ ಫಲಾನುಭವಿಗಳಿಗೆ ಹಾಗೂ ಮಾರಕ ರೋಗ ರುಜಿನಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ಧನಸಹಾಯ ಒದಗಿಸಲು-ಜಾತಿ ಪ್ರಮಾಣಪತ್ರ, ವಾಸಸ್ಥಳ, ವೈದ್ಯಕೀಯ ಪ್ರಮಾಣಪತ್ರ, 4 ಭಾವಚಿತ್ರ ಲಗತ್ತಿಸಬೇಕು. ಯುವಕ/ಯುವತಿಯರಿಗೆ ಕಂಪ್ಯೂಟರ್ ತರಬೇತಿ ಕಾರ್ಯಕ್ರಮಕ್ಕಾಗಿ-ಪಿ.ಯು.ಸಿ. ಅಥವಾ ತತ್ಸಮಾನ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ವಾಸಸ್ಥಳ ಮತ್ತು 4 ಭಾವಚಿತ್ರಗಳು. ಗಾರ್ಮೆಂಟ್ಸ್ ತರಬೇತಿ ಕಾರ್ಯಕ್ರಮಕ್ಕಾಗಿ-ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ವಾಸಸ್ಥಳ ಮತ್ತು 4 ಭಾವಚಿತ್ರಗಳು. ಪಿ.ಯು.ಸಿ. ಮತ್ತು ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಇ., ಎಲ್ಲ ಪಿಜಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಖರೀದಿಸುವುದಕ್ಕಾಗಿ ಆರ್ಥಿಕ ಧನಸಹಾಯ ಒದಗಿಸಲು-ಜಾತಿ ಪ್ರಮಾಣಪತ್ರ, ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣಪತ್ರ, ವಾಸಸ್ಥಳ ಮತ್ತು 4 ಭಾವಚಿತ್ರಗಳು. ಕೆ.ಇ.ಬಿ. ಮೀಟರ್ ಡಿಪಾಸಿಟ್ ಪಾವತಿಸುವದಕ್ಕಾಗಿ-ಜಾತಿ ಪ್ರಮಾಣಪತ್ರ, ವಾಸಸ್ಥಳ ಮತ್ತು 4 ಭಾವಚಿತ್ರಗಳು.

2010-11ನೇ ಸಾಲಿನ ಯೋಜನೆಯ ವಿವರಗಳು: ಟೇಲರಿಂಗ್ ತರಬೇತಿ ಕಾರ್ಯಕ್ರಮಕ್ಕಾಗಿ-ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ವಾಸಸ್ಥಳ, 4 ಭಾವಚಿತ್ರಗಳು. ಗಂಭೀರ ಶಸ್ತ್ರಚಿಕಿತ್ಸೆ ಮಾಡಿಕೊಂಡ ಫಲಾನುಭವಿಗಳಿಗೆ ಹಾಗೂ ಮಾರಕ ರೋಗ ರುಜಿನಗಳಿಂದ ಬಳಲುತ್ತಿರುವವರಿಗೆ ಆರ್ಥಿಕ ಧನಸಹಾಯ ಒದಗಿಸಲು- ಜಾತಿ ಪ್ರಮಾಣಪತ್ರ, ವಾಸಸ್ಥಳ, ವೈದ್ಯಕೀಯ ಪ್ರಮಾಣಪತ್ರ, 4 ಭಾವಚಿತ್ರ ಲಗತ್ತಿಸಬೇಕು. ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಟ್ರೇನಿಂಗ್ ತರಬೇತಿ ಕಾರ್ಯಕ್ರಮಕ್ಕಾಗಿ-ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ವಾಸಸ್ಥಳ ಹಾಗೂ 4 ಭಾವಚಿತ್ರಗಳು. ಈ ಮೆಲ್ಕಂಡ ಎಲ್ಲ ದಾಖಲಾತಿಗಳೊಂದಿಗೆ ತಮ್ಮ ಅರ್ಜಿಯನ್ನು ದಿನಾಂಕ: 22-2-2012ರೊಳಗಾಗಿ ಚಿಂಚೋಳಿ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು.

ಬೈಂಡಿಂಗ್‌ಗಾಗಿ ದರಪಟ್ಟಿ ಅರ್ಜಿ ಆಹ್ವಾನ

ಗುಲಬರ್ಗಾ,ಫೆ.16.(ಕ.ವಾ.)-ಗುಲಬರ್ಗಾ ಜಿಲ್ಲೆಯ ವಿವಿಧ ಕೋರ್ಟುಗಳಲ್ಲಿ ಕಾನೂನು ನಿಯತಕಾಲಿಕೆ (ಜರ್ನಲ್) ಮತ್ತು ವಿವಿಧ ಕಾನೂನು ವರದಿ (ರಿಪೋರ್ಟ್ಸ್)ಗಳ ಬೈಂಡಿಂಗ್ ಮಾಡಲು ಅಧಿಕೃತ ಕಾನೂನು ಪುಸ್ತಕ ಬೈಂಡರ್ ಅವರಿಂದ ದರಪಟ್ಟಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಖಿಲ ಭಾರತ ವರದಿ, ಕ್ರಮಿನಲ್ ಲಾ, ಕರ್ನಾಟಕ ಲಾ, ಎಕ್ಸಿಡೆಂಟ್ ಕ್ಲೇಮ್ಸ್ ನಿಯತಕಾಲಿಕೆ, ಭಾರತೀಯ ಕಾನೂನು( ಕರ್ನಾಟಕ ಸಿರೀಜ್ ಮತ್ತು ಕರ್ನಾಟಕ) ವರದಿ, ಕರ್ನಾಟಕ ತೀರ್ಪುಗಳ ವರದಿಗಳನ್ನು ಬೈಂಡಿಂಗ್ ಮಾಡಬೇಕಾಗಿದೆ. ಭರ್ತಿ ಮಾಡಿದ ದರಪಟ್ಟಿಗಳನ್ನು ಸೀಲು ಮಾಡಿದ ಲಕೋಟೆಗಳಲ್ಲಿ ಗುಲಬರ್ಗಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ದಿನಾಂಕ: 2-3-2012ರಂದು ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು. ಲಕೋಟೆಗಳನ್ನು ದಿನಾಂಕ: 3-3-2012ರಂದು ಸಂಜೆ 5-30 ಗಂಟೆಗೆ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಚೇಂಬರಿನಲ್ಲಿ ತೆರೆಯಲಾಗುವುದು. ಷರತ್ತು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಗುಲಬರ್ಗಾ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಇರಕಲ್ಲಗಡ ಕ್ಷೇತ್ರ : ಮೂರು ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಕೊಪ್ಪಳ ಫೆ. 16 (ಕ.ವಾ): ಜಿಲ್ಲಾ ಪಂಚಾಯತಿಯ ಇರಕಲ್ಲಗಡಾ ಕ್ಷೇತ್ರ ಉಪಚುನಾವಣೆ ಸಂಬಂಧ ಸಲ್ಲಿಕೆಯಾಗಿರುವ ಮೂವರೂ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.

ಫೆ. 16 ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗಿದ್ದು, ದನಕನದೊಡ್ಡಿ ಗ್ರಾಮದ ರೇಣುಕಮ್ಮ ಗಂಡ ನಿಂಗಪ್ಪ ಕುಷ್ಟಗಿ-ಜೆಡಿಎಸ್, ಚಿಲಕಮುಖಿ ಗ್ರಾಮದ ರೇಣುಕಾ ಗಂಡ ನಿಂಗಪ್ಪ- ಕಾಂಗ್ರೆಸ್ ಹಾಗೂ ಯಲಮಗೇರಾ ಗ್ರಾಮದ ಕಸ್ತೂರಮ್ಮ ಗಂಡ ಬಸನಗೌಡ- ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ. ಒಟ್ಟಾರೆ ಈವರೆಗೆ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಫೆ. 18 ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕವಾಗಿದ್ದು, ಮತದಾನದ ಅಗತ್ಯ ಬಿದ್ದಲ್ಲಿ, ಮತದಾನವು ಫೆ. 26 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ ಎಂದು ಜಿ.ಪಂ. ಇರಕಲ್ಲಗಡ ಕ್ಷೇತ್ರ ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.

ಫೆ. 22 ರಿಂದ ರಸ್ತೆ ಸಂಚಾರ ಮಾದರಿ ಸಮೀಕ್ಷೆ

ಕೊಪ್ಪಳ ಫೆ.16 (ಕ.ವಾ) :ಲೋಕೋಪಯೋಗಿ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷವೂ ಫೆ. 22 ರಿಂದ 24 ರವರೆಗೆ ಎರಡು ದಿನಗಳ ಕಾಲ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಮೇಲೆ ವಾಹನ ಸಂಚಾರ ಮಾದರಿ ಸಮೀಕ್ಷಾ ಕಾರ್ಯವನ್ನು ಹಮ್ಮಿಕೊಂಡಿದೆ.

ಈ ಸಮೀಕ್ಷಾ ಕಾರ್ಯದಿಂದ ಸಂಗ್ರಹಿಸಿದ ಮಾಹಿತಿಯನ್ವಯ ಸರ್ಕಾರಕ್ಕೆ ರಸ್ತೆಗಳ ಸಂಚಾರ ಸಾಂದ್ರತೆ, ಸಂಚಾರ ತೀವ್ರತೆ ಕಂಡು ಹಿಡಿಯಲು ಅಲ್ಲದೆ ರಸ್ತೆಗಳ ಅಗಲಳತೆ ನಿರ್ಧರಿಸುವುದು, ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ರಸ್ತೆಗಳ ಸ್ಥಿತಿಗತಿ ಸುಧಾರಿಸಲು ಅನುಕೂಲವಾಗಲಿದೆ. ಫೆ. 22 ರಂದು ಬೆಳಿಗ್ಗೆ 6 ಗಂಟೆಯಿಂದ ಫೆ. 24 ರ ಬೆಳಿಗ್ಗೆ 06 ಗಂಟೆಯವರೆಗೆ ರಾಜ್ಯಾದ್ಯಂತ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಸ್ಥಾಪಿಸಲಾಗುವ ಗಣತಿ ಕೇಂದ್ರಗಳಲ್ಲಿ ನಡೆಸಲಾಗುವುದು. ಈ ಗಣತಿ ಕಾರ್ಯಕ್ಕೆ ಎಲ್ಲಾ ವಾಹನ ಚಾಲಕರ ಹಾಗೂ ಸಾರ್ವಜನಿಕರ ಸಹಾಯ, ಸಹಕಾರ ಅಗತ್ಯವಾಗಿದೆ. ಸಂಚಾರ ಮಾದರಿ ಸಮೀಕ್ಷೆಗಾಗಿ ಸ್ಥಾಪಿಸಲಾಗುವ ಗಣತಿ ಕೇಂದ್ರಗಳ ಬಳಿ ‘ವಾಹನಗಳ ರಸ್ತೆ ಸಂಚಾರ ಗಣತಿ ಕೇಂದ್ರವಿದೆ, ನಿಮ್ಮ ವಾಹನಗಳನ್ನು ನಿಧಾನವಾಗಿ ಚಲಿಸಿ’ ಎನ್ನುವ ಸೂಚನಾ ಫಲಕವನ್ನು ಹಾಕಲಾಗುವುದು. ವಾಹನ ಚಾಲಕರು ಇಂತಹ ಪ್ರದೇಶದಲ್ಲಿ ವಾಹನವನ್ನು ನಿಧಾನವಾಗಿ ಚಲಿಸಿಕೊಂಡು, ಸಂಚಾರ ಮಾದರಿ ಸಮೀಕ್ಷೆಗೆ ಸಹಕರಿಸುವಂತೆ ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ (ಸಂಪರ್ಕ ಮತ್ತು ಕಟ್ಟಡಗಳು) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಪ್ಪಳ : ಪ.ಜಾತಿ, ಪ.ಪಂಗಡದವರಿಗೆ ವಿವಿಧ ಸೌಲಭ್ಯ- ಅರ್ಜಿ ಆಹ್ವಾನ

ಕೊಪ್ಪಳ ಫೆ. 16 (ಕ.ವಾ): ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗಕ್ಕೆ ಸೇರಿದವರಿಗೆ ನಗರಸಭೆಯ ಪ್ರಸಕ್ತ ಸಾಲಿನ ಅನುದಾನದಲ್ಲಿ ಶೇ. 22. 75 ರ ಯೋಜನೆಯಲ್ಲಿ ವಿವಿಧ ಸೌಲಭ್ಯ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳ ನಗರದಲ್ಲಿನ ಪ.ಜಾತಿ, ಪ.ಪಂಗಡದವರಿಗೆ ವಯಕ್ತಿಕ ಶೌಚಾಲಯಕ್ಕಾಗಿ 10 ಲಕ್ಷ ರೂ., ಅಡುಗೆ ಅನಿಲ ಸಂಪರ್ಕ ಕೊಡಿಸುವುದಕ್ಕಾಗಿ- 19. 90 ಲಕ್ಷ ರೂ., ಸ್ವಯಂ ಉದ್ಯೋಗ ಮಾಡಲು ಆರ್ಥಿಕ ನೆರವು ನೀಡುವ ಸಲುವಾಗಿ- 5 ಲಕ್ಷ ರೂ., ಹಾಗೂ ನಮ್ಮ ಮನೆ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ವಂತಿಕೆ ಭರಿಸಲು ಸಾಧ್ಯವಿಲ್ಲದ ಪ.ಜಾತಿ, ಪ.ಪಂಗಡದ ಫಲಾನುಭವಿಗಳಿಗೆ ಸಹಾಯಧನಕ್ಕಾಗಿ 10 ಲಕ್ಷ ರೂ.ಗಳ ಅನುದಾನವನ್ನು 2011-12 ನೇ ಸಾಲಿನಲ್ಲಿ ಮೀಸಲಿರಿಸಲಾಗಿದೆ. ಈ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಚಾಲ್ತಿ ಸಾಲಿನ ಜಾತಿ, ಆದಾಯ ಪ್ರಮಾಣಪತ್ರ, ಕುಟುಂಬ ಪಡಿತರ ಚೀಟಿಯ ಸಂಪೂರ್ಣ ಜೆರಾಕ್ಸ್ ಪ್ರತಿ, ಇತ್ತೀಚಿನ 3 ಭಾವಚಿತ್ರಗಳು, ಚಾಲ್ತಿ ಸಾಲಿನ ಆಸ್ತಿಕರ ಪಾವತಿ ಮಾಡಿದ ರಸೀದಿ ಹಾಗೂ ನಮೂನೆ-3 ರ ಪ್ರತಿ, ಚುನಾವಣಾ ಆಯೋಗದ ಗುರುತಿನ ಚೀಟಿ/ ಆಧಾರ್ ಕಾರ್ಡ್, ನಮ್ಮ ಮನೆ ಯೋಜನೆ ವಂತಿಕೆ ಭರಿಸಲು ಸರ್ಕಾರದಿಂದ ನೀಡಿರುವ ಬಿ.ಪಿಎಲ್ ಪಡಿತರ ಚೀಟಿ ಲಗತ್ತಿಸಬೇಕು. ಸ್ವಯಂ ಉದ್ಯೋಗದ ಆರ್ಥಿಕ ನೆರವು ಪಡೆಯಲು ಸ್ವಯಂ ಉದ್ಯೋಗ ಮಾಡುತ್ತಿರುವ ಬಗ್ಗೆ ಅಂದರೆ ಮೊಬೈಲ್ ರಿಪೇರಿ/ಟಿ.ವಿ. ರಿಪೇರಿ/ಎಲೆಕ್ಟ್ರಿಕಲ್ ಸಾಮಗ್ರಿ ರಿಪೇರಿ ಅಥವಾ ಇನ್ನಿತರೆ ಬಗ್ಗೆ ತರಬೇತಿ ಪಡೆದ ಪ್ರಮಾಣ ಪತ್ರ ಹಾಜರುಪಡಿಸಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಪೌರಾಯುಕ್ತರು, ನಗರಸಭೆ, ಕೊಪ್ಪಳ ಇವರಿಗೆ ಮಾರ್ಚ್ 19 ರ ಒಳಗಾಗಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

ಅಪರಿಚಿತ ಶವ ಪತ್ತೆ ಗುರುತಿಗೆ ಸಹಕರಿಸಲು ಸೂಚನೆ

ಕೊಪ್ಪಳ ಫೆ. 16 (ಕ.ವಾ): ಕೊಪ್ಪಳ ನಗರದ ಬಸ್ ನಿಲ್ದಾಣ ಎದುರುಗಡೆಯ ನಗರಸಭೆ ಕಾಂಪ್ಲೆಕ್ಸ್ ಬಳಿ ಅಪರಿಚಿತ ಅಂಗವಿಕಲ ಪುರುಷ ಶವ ಪತ್ತೆಯಾಗಿದ್ದು, ಶವದ ಗುರುತು ಪತ್ತೆಗೆ ಸಹಕರಿಸುವಂತೆ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮನವಿ ಮಾಡಿದ್ದಾರೆ.

ಕೊಪ್ಪಳ ನಗರದಲ್ಲಿ ಕಳೆದ 15 ದಿನಗಳಿಂದ ಭಿಕ್ಷೆ ಬೇಡುತ್ತಿದ್ದ ಸುಮಾರು 30-35 ವರ್ಷದ ಅನಾಮಧೇಯ ಅಂಗವಿಕಲ ಪುರುಷ ಕಳೆದ ಜ. 24 ರಂದು ಖಾಯಿಲೆಯಿಂದ ಬಳಲಿ ಮೃತಪಟ್ಟಿದ್ದು, ಮೃತನ ಮರಣದಲ್ಲಿ ಯಾವುದೇ ಸಂಶಯ ಇತ್ಯಾದಿ ಇರುವುದಿಲ್ಲ. ಈ ಕುರಿತು ಭಾಗ್ಯನಗರದ ಮಂಜುನಾಥ ತಂದೆ ಸಕ್ರಪ್ಪ ಮೂಲಿಮನಿ ಅವರು ನಗರಠಾಣೆಗೆ ಪ್ರಕರಣ ದಾಖಲಿಸಿದ್ದು, ಮೃತ ವ್ಯಕ್ತಿಯ ಎತ್ತರ ಸುಮಾರು 5 ಅಡಿ, 5 ಇಂಚು. ಮಧ್ಯಮ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ಗಡ್ಡ, ಮೀಸೆ ಉದ್ದವಾಗಿದ್ದು, ಎಡಕಾಲ ತೊಡೆಯ ಹತ್ತಿರ ಕಾಲು ಅಂಗವೈಕಲ್ಯಕ್ಕೆ ಒಳಗಾಗಿದೆ. ಈತ ನಡೆದಾಡಲು ಬಳಸುತ್ತಿದ್ದ 2 ಬಿದಿರಿನ ಊರುಗೋಲು ಶವದ ಬಳಿ ಪತ್ತೆಯಾಗಿವೆ. ಮೃತನ ಬಲಕಣ್ಣಿನ ಕೆಳಗಡೆ ಹಳೆಯದಾದ ಚಿಕ್ಕ ಗಾಯದ ಗುರುತಿದೆ. ಮೃತ ವ್ಯಕ್ತಿ ಕೆಂಪು ಚೌಕಳಿಯ ಗೆರೆಗಳ ಫುಲ್ ಶರ್ಟ್ ಧರಿಸಿದ್ದು, ಶರ್ಟ್ ಕೊರಳುಪಟ್ಟಿಯಲ್ಲಿ ಎಸ್.ಎಮ್.ಎನ್. ಸತೀಶ್ ಟೈಲರ್‍ಸ್, ಲಚವನ್ ಪ್ರೊ. ಎಸ್.ಎಮ್. ನಿಂಬರ್ಗಿ ಎಂದು ಟೈಲರ್ ಲೇಬಲ್ ಇದೆ. ಈ ಚಹರೆಯುಳ್ಳ ಮೃತ ಅಂಗವಿಕಲ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ, ಕಂಟ್ರೋಲ್ ರೂಂ. 08539-230100, 230222, ಕೊಪ್ಪಳ ನಗರ ಪೊಲೀಸ್ ಠಾಣೆ- 9480803745, 220333 ಕ್ಕೆ ಸಂಪರ್ಕಿಸಿ ನೀಡುವಂತೆ ಪ್ರಕಟಣೆ ತಿಳಿಸಿದೆ.

ಫೋನ್‌ಇನ್ ಕಾರ್ಯಕ್ರಮ : 21 ದೂರು ದಾಖಲು

ಮೈಸೂರು ಫೆ. 16 (ಕರ್ನಾಟಕ ವಾರ್ತೆ) – ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಫೋನ್‌ಇನ್ ಕಾರ್ಯಕ್ರಮದಲ್ಲಿ ಇಪ್ಪತ್ತೊಂದು ದೂರುಗಳು ದಾಖಲಾದವು. ಮೈಸೂರು ಜಿಲ್ಲಾಧಿಕಾರಿ ಶ್ರೀ ಪಿ.ಎಸ್. ವಸ್ತ್ರದ್ ಅವರು ಗ್ರಾಮೀಣ ಜನರ ದೂರುಗಳನ್ನು ಆಲಿಸಿ, ಕೆಲವು ದೂರುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದರು. ಎಲ್ಲ ದೂರುಗಳನ್ನು ದಾಖಲಿಸಿ ವಿವರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.

ಜಿಲ್ಲೆಯ ಹನಗೋಡುನಿಂದ ಗ್ರಾಮಸಭೆಗಳಿಲ್ಲ, ಒತ್ತುವರಿಯಾಗಿದೆ ಎಂಬ ಎರಡು ದೂರು ಪ್ರಥಮವಾಗಿ ದಾಖಲಾಯಿತು. ಮೈಸೂರು ನಗರದ ಒಂದು ದೂರು, ಕೆ.ಆರ್. ನಗರ ತಾಲ್ಲೂಕು ಹಾಡ್ಯ ಗ್ರಾಮದಲ್ಲಿ ರಸ್ತೆ ಒತ್ತುವರಿ ಹಾಗೂ ಕೆರೆ ಒತ್ತುವರಿ ಕುರಿತ ಎರಡು ದೂರು, ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ನೀರಾವರಿ, ಕೆರೆ ಸಮಸ್ಯೆ ದೂರು, ತುರಗನೂರಿನಿಂದ ಗ್ರಾಮ ಪಂಚಾಯ್ತಿ ಬಗ್ಗೆ ದೂರು, ಮತ್ತೆ ಹನಗೋಡಿನಿಂದ ಗ್ರಾಮಸಭೆ ನಡೆದಿಲ್ಲ, ಮಾಹಿತಿ ಹಕ್ಕು ಮಾಹಿತಿ ಒದಗಿಸಿಲ್ಲ, ಟಿ. ನರಸೀಪುರ ತಾಲ್ಲೂಕು ತುರಗನೂರು ಒತ್ತುವರಿ ಸಮಸ್ಯೆ, ಸ್ಲಂ ಶುಚಿಗೊಳಿಸಿಲ್ಲ ಎಂಬ ದೂರುಗಳು ದಾಖಲಾದವು. ಇದೇ ರೀತಿ ಮೂಗೂರು, ಕೂರ್ಗಳ್ಳಿ, ಭೂತಹಳ್ಳಿ, ಕುರುಹಳ್ಳಿ, ದೊಡ್ಡಹನಸೋಗೆ, ನಂಜನಗೂಡು, ಹೆಮ್ಮರಗಾಲ ಮುಂತಾದ ಕಡೆಗಳಿಂದ ದೂರುಗಳು ದಾಖಲಾದವು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀ ಪಿ.ಎಸ್. ವಸ್ತ್ರದ್ ಅವರು ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ಹಾಗೂ ಫೋನ್ ಇನ್ ಕಾರ್ಯಕ್ರಮದ ನಂತರ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಭಗಳನ್ನು ನಡೆಸಿದರು.

ಮೇಲ್ಕಂಡ ಸಭೆಗಳಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಜಿ. ಸತ್ಯವತಿ, ಅಪರ ಜಿಲ್ಲಾಧಿಕಾರಿ ಶ್ರೀ ನಾಗಾನಾಯಕ್, ಉಪವಿಭಾಗಾಧಿಕಾರಿ ಶ್ರೀಮತಿ ಭಾರತಿ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಶ್ರೀಮತಿ ವಸುಂಧರಾದೇವಿ, ಜಿಲ್ಲಾಧಿಕಾರಿಗಳ ಕಚೇರಿ ಅಧಿಕಾರಿಗಳಾದ ಶ್ರೀ ರಂಗನಾಥ್, ಶ್ರೀ ಪ್ರಕಾಶ್ ಗೆಜ್ಜಿ, ಶ್ರೀ ಸೋಮಕುಮಾರ್ ಹಾಗೂ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಜಿಲ್ಲಾಧಿಕಾರಿಗಳಿಗೆ ಅಗತ್ಯ ಮಾಹಿತಿಗಳನ್ನು ಒದಗಿಸಿದರು.

ವಾಹನ ಸಂಚಾರ ಸಮೀಕ್ಷೆ

ಮೈಸೂರು, ಫೆ. 16 (ಕರ್ನಾಟಕ ವಾರ್ತೆ) – ಲೋಕೋಪಯೋಗಿ, ಬಂದವರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ 2012ನೇ ಸಾಲಿನಲ್ಲಿ ದಿನಾಂಕ 22.2.2012ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ 24.2.2012ರ ಬೆಳಿಗ್ಗೆ 6 ಗಂಟೆಯವರೆಗೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಹಾದುಹೋಗುವ ರಾಜ್ಯ ಹೆದ್ದಾರಿಗಳು ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ದ ಸ್ಥಳಗಳಲ್ಲಿ ಗಣತಿ ಕೆಂದ್ರಗಳನ್ನು ಸ್ಥಾಪಿಸಿ ವಾಹನ ಸಂಚಾರ ಮಾದರಿ ಸಮೀಕ್ಷೆಯನ್ನು ಸತತವಾಗಿ ಎರಡು ದಿನಗಳ ಕಾಲ ನಡೆಸಲಾಗುತ್ತಿದೆ.

ಆದುದರಿಂದ ಸಂಬಂಧಪಟ್ಟ ಎಲ್ಲಾ ವಾಹನ ಚಾಲಕರು ಈ ಗಣತಿ ಕೇಂದ್ರಗಳ ಬಳಿ ತಮ್ಮ ವಾಹನವನ್ನು ನಿಧಾನವಾಗಿ ಚಲಿಸಿ ಮುಂದೆ ಹೋಗಬೇಕೆಂದು ಕೋರಿದೆ.

ಈ ಸಮೀಕ್ಷೆ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಾರ್ವಜನಿಕರು ಹಾಗೂ ವಾಹನ ಚಾಲಕರು ಸಹಕರಿಸಲು ಲೋಕೋಪಯೋಗಿ, ಬಂದವರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಅಧೀಕ್ಷಕ ಇಂಜಿನಿಯರ್ ಶ್ರೀ ಆರ್.ಎಲ್. ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.

ಪಿಹೆಚ್‌ಡಿ ಪದವಿ

ಮೈಸೂರು, ಫೆ. 16 – ಮೈಸೂರು ವಿಶ್ವವಿದ್ಯಾನಿಲಯದ ಪಿಹೆಚ್‌ಡಿ ಪದವಿಯನ್ನು ಶ್ರೀಮತಿ ಕೆ. ಕಾವೇರಿ ಅವರಿಗೆ ಡಾ: ಭಾರತಿ ಪಿ. ಸಾಲಿಮಠ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಬಯೋಟೆಕ್ನಾಲಜಿ ವಿಷಯದ ಪ್ರಬಂಧಕ್ಕೆ ನೀಡಲಾಗಿದೆ.

ಉದ್ಯೋಗ ಮೇಳ

ಮೈಸೂರು, ಫೆ. 15 (ಕರ್ನಾಟಕ ವಾರ್ತೆ) – ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೆ.ಹೆಚ್.ಬಿ. ಕಟ್ಟಡ, ಸರಸ್ವತಿಪುರಂ, ಮೈಸೂರು ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್.ಆರ್. ಮೊಹಲ್ಲ, ಮೈಸೂರು – 07 ಈ ಕಚೇರಿಗಳ ಸಹಯೋಗದೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್.ಆರ್. ಮೊಹಲ್ಲ, (ಫೌಂಟನ್ ಸರ್ಕಲ್ ಹತ್ತಿರ) ಮೈಸೂರು – 07 ಈ ಸಂಸ್ಥೆಯ ಆವರಣದಲ್ಲಿ ದಿನಾಂಕ 23.02.2012ರ ಗುರುವಾರ ಬೆಳಿಗ್ಗೆ 10.30 ಗಂಟೆಗೆ ಉದ್ಯೋಗ ಮೇಳವನ್ನು ಏರ್ಪಡಿಸಿದೆ.

ಎನಾರ್‌ಕಾನ್ (ಇಂಡಿಯಾ) ಲಿ. ಮುಂಬೈ ಈ ಸಂಸ್ಥೆಯು 100ಕ್ಕೂ ಹೆಚ್ಚು ಟೆಕ್ನೀಷಿಯನ್ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳಲಿದ. ವಿದ್ಯಾರ್ಹತೆ – ಐಟಿಐ (ಫಿಟ್ಟರ್ / ಎಲೆಕ್ಟ್ರೀಷಿಯನ್ / ಎಲೆಕ್ಟ್ರಾನಿಕ್ ಮೆಕ್ಯಾನಿಕ್) ನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರುವ ಅವಿವಾಹಿತ ಪುರುಷ ಅಭ್ಯರ್ಥಿಗಳಾಗಿರಬೇಕು. ವಯೋಮಿತಿ 18 ರಿಂದ 24 ವರ್ಷಗಳಾಗಿರಬೇಕು. ಎತ್ತರ ಕನಿಷ್ಠ 165 ಸೆಂ.ಮೀ., ತೂಕ – ಕನಿಷ್ಠ 50 ಕೆಜಿ (ಎತ್ತರಕ್ಕೆ ತಕ್ಕಂತೆ), ಉತ್ತಮ ದೃಷ್ಠಿ ಹೊಂದಿರಬೇಕು. ಸೌಲಭ್ಯಗಳು ಸಂಸ್ಥೆಯ ನಿಯಮಾನುಸಾರ ದೊರಯಲಿದ್ದು ಅಭ್ಯರ್ಥಿಗಳನ್ನು ಲಿಖಿತ-ಂಔಖಿಕ ಹಾಗೂ ವೈದ್ಯಕೀಯ ಪರೀಕ್ಷೆಗಳ ಮುಖಾಂತರ ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವ ಇಚ್ಚೆ ಹಾಗೂ ಸ್ವಂತ ಖರ್ಚಿನಿಂದ ತಮ್ಮ ಭಾವಚಿತ್ರ, ಅಂಕಪಟ್ಟಿಗಳು ಹಾಗೂ ಬಯೋಡೇಟಾದೊಂದಿಗೆ 23.02.2012ರಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಎನ್.ಆರ್. ಮೊಹಲ್ಲ, (ಫೌಂಟನ್ ಸರ್ಕಲ್ ಹತ್ತಿರ) ಮೈಸೂರು – 07 ಇಲ್ಲಿಗೆ ಹಾಜರಾಗಿ, ನೇಮಕಾತಿಯ ಪ್ರಯೋಜನ ಪಡೆದುಕೊಳ್ಳಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821 – 2489972 / 0821 – 2498456ಗಳನ್ನು ಸಂಪರ್ಕಿಸಲು ಜಿಲ್ಲಾ ಉದ್ಯೋಗ ವಿನಿಯಯ ಕಚೇರಿಯ ಸಹಾಯಕ ನಿರ್ದೇಶಕ ಶ್ರೀ ಎಂ.ಬಿ. ತಿಮ್ಮೇಗೌಡ ಅವರು ಕೋರಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬಿಎ/ಬಿಕಾಂ ಪರೀಕ್ಷೆಯ ಇತರೆ ಕೇಂದ್ರಗಳು

ಮೈಸೂರು, ಫೆ. 16 (ಕರ್ನಾಟಕ ವಾರ್ತೆ) – ಕರ್ನಾಟಕ ರಾಜ್ಯ ಮುಖ್ಯ ವಿಶ್ವವಿದ್ಯಾನಿಲಯದ 2012ರ ಏಪ್ರಿಲ್ / ಮೇ ಮಾಹೆಯಲ್ಲಿ ನಡೆಯುವ ಬಿಎ / ಬಿಕಾಂ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವೇಳಾಪಟ್ಟಿಯಲ್ಲಿ ಬಿಟ್ಟುಹೋಗಿದ್ದ ಪರೀಕ್ಷಾ ಕೇಂದ್ರಗಳು ಕೆಳಕಂಡಂತಿದ್ದು, ಹಾಸನ ಹಾಗೂ ಮಂಡ್ಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳು ಕೆಳಕಂಡ ಪರೀಕ್ಷಾ ಕೇಂದ್ರಗಲ್ಲಿ ಪರೀಕ್ಷೆ ತೆಗೆದುಕೊಳ್ಳುವಂತೆ ಸೂಚಿಸಿದೆ ಹಾಗೂ ಪ್ರವೇಶ ಪತ್ರವನ್ನು ಪರೀಕ್ಷಾ ಕೇಂದ್ರದಲ್ಲಿಯೇ ಪಡೆಯುವುದು.

ಹಾಸನ ಪರೀಕ್ಷಾ ಕೇಂದ್ರ – ಬಿಎ – ಮಹಿಳೆಯರಿಗೆ ಮಾತ್ರ – ಸರ್ಕಾರಿ ಪುರುಷರ ಕಲಾ ಕಾಲೇಜು, ಹಾಸನ. ದೂರವಾಣಿ ಸಂಖ್ಯೆ 08172 – 267254. ಹಾಗೂ ಬಿಎ – ಪುರುಷರು ಮಾತ್ರ ಹಾಗೂ ಬಿಕಾಂ – ಮಹಿಳೆಯರು ಮತ್ತು ಪುರುಷರು – ಶ್ರೀಮತಿ ಬೆಳ್ಳಿಯಮ್ಮ ಪ್ರಥಮ ದರ್ಜೆ ಕಾಲೇಜು, ಲಲಿತ ಕೃಷ ಬಿಲ್ಡಿಂಗ್, ಬಿ.ಎಂ. ರಸ್ತೆ, ಹಾಸನ. ದೂರವಾಣಿ ಸಂಖ್ಯೆ 08172 – 235400.

ಮಂಡ್ಯ ಪರೀಕ್ಷಾ ಕೇಂದ್ರ – ಬಿಎ – ಮಹಿಳೆಯರಿಗೆ ಮಾತ್ರ – ಸರ್ಕಾರಿ ಪುರುಷರ ಕಲಾ ಕಾಲೇಜು, ಮಂಡ್ಯ. ದೂರವಾಣಿ ಸಂಖ್ಯೆ 08232 – 220036, ಮೊಬೈಲ್ 9448938469. ಹಾಗೂ ಪರೀಕ್ಷಾ ಕೇಂದ್ರ – ಬಿಎ – ಪುರುಷರು ಮಾತ್ರ, ಬಿಕಾಂ – ಮಹಿಳೆಯರು ಮತ್ತು ಪುರುಷರು – ಮಾಂಡವ್ಯ ಪ್ರತಮ ದರ್ಜೆ ಕಾಲೇಜು, ಎಂ.ಸಿ. ರಸ್ತೆ, ತಾವರೆಕೆರೆ, ಮಂಡ್ಯ. ದೂರವಾಣಿ ಸಂಖ್ಯೆ 08232 – 227786, 231243.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821 – 2519942, 2519943, 2519948ಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ಅರ್ಜಿ ಆಹ್ವಾನ

ಮೈಸೂರು, ಫೆ. 16 (ಕರ್ನಾಟಕ ವಾರ್ತೆ) – ಮೈಸೂರು ವೈದ್ಯಕೀಯ ಕಾಲೇಜು ಮತ್ತು sಸಂಶೋಧನಾ ಸಂಸ್ಥೆ, ಮೈಸೂರು ಇಲ್ಲಿನ ಎ.ಆರ್.ಟಿ. ವಿಭಾಗದ ಒಂದು ವರ್ಷದ ಅವಧಿಗೆ ನೇರ ಸಂದರ್ಶನದ ಮೂಲಕ ಗುತ್ತಿಗೆ ಆಧಾರದ ಮೇಲೆ ಅನುಭವ ಮತ್ತು ಅರ್ಹತೆಗನುಸಾರವಾಗಿ ನಿಗಧಿತ ವಯೋಮಾನದಡಿಯಲ್ಲಿ ನೇಮಕ ಮಾಡಿಕೊಳ್ಳಲು ಆಹ್ವಾನಿಸಲಾಗಿದೆ. ಅರ್ಹರಿರುವ ಅಭ್ಯರ್ಥಿಗಳು ದಿನಾಂಕ 22.2.2012 ಬೆಳಿಗ್ಗೆ 10 ಗಂಟೆಯಿಂದ 1.00 ಗಂಟೆಯೊಳಗೆ ವೈದ್ಯಕೀಯ ಅಧೀಕ್ಷಕರು, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮೈಸೂರು ಇವರಿಗೆ ವೈಯುಕ್ತಿಕ ವಿವರ ಮತ್ತು ವಿದ್ಯಾರ್ಹತೆ ಹಾಗೂ ಅನುಭವ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದಾಖಲಾತಿಗಳೊಂದಿಗೆ ಎಆರ್‌ಟಿ ಕೇಂದ್ರ ಕೊಠಡಿ ಸಂಖ್ಯೆ 18ರಲ್ಲಿ ನೇರ ಸಂದರ್ಶನಕ್ಕೆ (ವಾಕ್ ಇನ್ ಇಂಟರ್ ವ್ಯೂ) ಜೆರಾಕ್ಸ್ ಪ್ರತಿ ಹಾಗು ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಿದೆ. ಈ ಕೆಳಕಂಡ ಹುದ್ದೆಗೆ 10ಕ್ಕೂ ಮೇಲ್ಪಟ್ಟ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದರೆ ಲಿಖಿತ ಪರೀಕ್ಷೆ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲ www.mmcrimysore.org.in ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಆಧುನಿಕ ರೈಲ್‌ರೋಡ್ ಬಡಾವಣೆ (Model Railroad Layout) ಉದ್ಘಾಟನೆ

ಮೈಸೂರು, ಫೆ. 16 (ಕರ್ನಾಟಕ ವಾರ್ತೆ) – ರೈಲ್ವೆ ಇಲಾಖೆ, ಮೈಸೂರು ವಿಭಾಗ, ಮೈಸೂರು ಇವರ ವತಿಯಿಂದ ಆಧುನಿಕ ರೈಲ್ ರೋಡ್ ಬಡಾವಣೆ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದಿನಾಂಕ 17.02.2012ರಂದು ಬೆಳಿಗ್ಗೆ 10.30 ಗಂಟೆಗೆ ಹೆರಿಟೇಜ್ ಗ್ಯಾಲರಿ, ರೈಲ್ವೆ ನಿಲ್ದಾಣ, ಮೈಸೂರು ಇಲ್ಲಿ ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಶ್ರೀ ಎ.ಹೆಚ್. ವಿಶ್ವನಾಥ್ ಉದ್ಘಾಟಿಸುವರು. ಮೈಸೂರು ವಿಭಾಗೀಯ ರೈಲ್ವೇ ಮ್ಯಾನೇಜರ್ ಶ್ರೀ ವಿನೋದ್ ಕುಮಾರ್, ಹೆಚ್ಚುವರಿ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಕೇಶ್ ಕುಮಾರ್ ಗುಪ್ತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ರಸ್ತೆ ಸಂಚಾರ ಗಣತಿ

ಮಂಗಳೂರು ಫೆಬ್ರವರಿ 16(ಕರ್ನಾಟಕ ವಾರ್ತೆ):-2012 ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯು ದಿನಾಂಕ 22-2-12 ರ ಬೆಳಿಗ್ಗೆ 6.00 ಗಂಟೆಯಿಂದ 24-2-12 ರ ಬೆಳಿಗ್ಗೆ 6.00 ಗಂಟೆಯ ವರೆಗೆ ಸತತವಾಗಿ 2 ದಿನಗಳ ಕಾಲ ಮಂಗಳೂರು,ಬಂಟ್ವಾಳ,ಪುತ್ತೂರು,ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿರುವುದು. ಗಣತಿ ಕಾರ್ಯ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು,ಈ ಗಣತಿ ಕೇಂದ್ರಗಳಲ್ಲಿ ಒಂದು ನಿಮಿಷ ವಾಹನ ನಿಲ್ಲಿಸುವ ಮೂಲಕ ವಾಹನ ಸಂಚಾರ ಸಮೀಕ್ಷೆಗೆ ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸಲು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿರುತ್ತಾರೆ.

ಗೋವಿಂದದಾಸ ಕಾಲೇಜಿನಲ್ಲಿ ಮುಕ್ತ ಕ್ರೀಡಾಕೂಟ

ಮಂಗಳೂರು ಫೆಬ್ರವರಿ 16(ಕರ್ನಾಟಕ ವಾರ್ತೆ):-ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ,ನೆಹರು ಯುವ ಕೇಂದ್ರ,ಗೋವಿಂದದಾಸ ಕಾಲೇಜು ಸುರತ್ಕಲ್ ,ಗ್ರಾಮೀಣ ಮಾಹಿತಿ ತಂತ್ರಜ್ಞಾನ ಯುವ ಅಭಿವೃದ್ಧಿ ಕೇಂದ್ರ,ಗ್ರಾಮೀಣ ಕ್ರೀಡಾ ಕೇಂದ್ರ ತೋಕೂರು ,ಯುವಕಸಂಘ ಮತ್ತು ಮಹಿಳಾ ಮಂಡಲ ತೋಕೂರು ಇವರ ಸಂಯುಕ್ತಾಶ್ರಯದಲ್ಲಿ ಪಂಚಾಯತ್ ಯುವ ಕ್ರೀಡಾ ಹಾಗೂ ಖೇಲ್ ಅಭಿಯಾನದ ಯೋಜನೆಯಡಿ ದಿನಾಂಕ 3-3-12 ಮತ್ತು 4-3-12 ರಂದು ಮಂಗಳೂರು ತಾಲೂಕು ಮಟ್ಟದ ಪ್ರೌಢಶಾಲಾ ಮಕ್ಕಳ ಹಾಗೂ ಅಂತರ್ ಯುವ ಮಂಡಳ/ಮುಕ್ತ ಕ್ರೀಡಾಕೂಟವು ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಲಾಗಿದೆ.

ದಿನಾಂಕ 3-3-12 ರಂದು ಅತ್ಲೆಟಿಕ್ಸ್-ಯುವಕ/ಯುವತಿಯರಿಗೆ 100ಮೀ.200ಮೀ,400ಮೀ,ಉದ್ದಜಿಗಿತ,ಎತ್ತರ ಜಿಗಿತ,ಶಾಟ್‌ಪುಟ್,ಖೋಖೋ, ಪ್ರೌಢಶಾಲಾ ಬಾಲಕಿಯರಿಗೆ-100ಮೀ,200ಮೀ,400ಮೀ,ಉದ್ದಜಿಗಿತ,ಎತ್ತರಜಿಗಿತ,ಶಾಟ್‌ಪುಟ್,ಖೋಖೊ ಸೈಕ್ಲಿಂಗ್.ಸ್ಪರ್ಧೆಗಳು ನಡೆಯಲಿವೆ. ದಿನಾಂಕ 4-3-12 ರಂದು ವಾಲಿಬಾಲ್ (ಮುಕ್ತ) ತ್ರೋಬಾಲ್ ಯುವತಿಯರಿಗೆ(ಮುಕ್ತ) ಕಬ್ಬಡ್ಡಿ(ಮುಕ್ತ)ಪಂದ್ಯಾಟಗಳು ನಡೆಯಲಿವೆ.

ಆಸಕ್ತ ಸ್ಪರ್ಧಿಗಳು/ತಂಡಗಳು ತಮ್ಮ ಪ್ರವೇಶಪತ್ರಗಳನ್ನು ದಿನಾಂಕ 29-2-12 ರೊಳಗೆ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ/ಹಳೆಯಂಗಡಿ,ತೋಕೂರು ಯುವಕಸಂಘ ಇವರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ 0824-2422264/8050125374 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ರಾಜ್ಯ ಸಭಾ ಸದಸ್ಯ ಶ್ರೀ ವೆಂಕಯ್ಯ ನಾಯ್ಡುರವರಿಂದ ಶಾಲಾ ಕೊಠಡಿಗೆ ರೂ.5.00 ಲಕ್ಷ ಅನುದಾನ

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ):_ರಾಜ್ಯಸಭಾ ಸದಸ್ಯರಾದ ಶ್ರೀ ವೆಂಕಯ್ಯ ನಾಯ್ಡು ಅವರ ಸ್ಥಳೀಯಾಭಿವೃದ್ಧಿ ನಿಧಿಯಿಂದ ಮಂಗಳೂರು ತಾಲೂಕು ದಕ್ಷಿಣಕನ್ನಡ ಜಿಲ್ಲೆಯ ವಿವೇಕಾನಂದ ವಿದ್ಯಾವರ್ಧಕ ಸಂಘ ಇವರಿಂದ ನಡೆಸಲ್ಪಡುವ ಶ್ರೀ ಗಜಾನನ ಶಾಲೆಯ 5 (ಕ್ಲಾಸ್ ರೂಂ) ಶಾಲಾ ಕೊಠಡಿ ನಿರ್ಮಾಣಕ್ಕೆ 2011-12 ನೇ ಸಾಲಿನಲ್ಲಿ ರೂ.10.00 ಲಕ್ಷ ಅನುದಾನ ಮಂಜೂರಾಗಿದ್ದು,ಇದೀಗ ರೂ.5.00 ಲಕ್ಷ ಅನುದಾನವನ್ನು ನಿರ್ಮಿತಿ ಕೇಂದ್ರ ಪುತ್ತೂರು ಇವರಿಗೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುತ್ತಾರೆ.

ಕೆಡಿಪಿ ಸಭೆ ಮುಂದೂಡಿಕೆ

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ):_ದಿನಾಂಕ 22-2-12 ರಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯಬೇಕಾಗಿದ್ದ ಮಾಸಿಕ ಕೆಡಿಪಿ ಸಭೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆಯೆಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು ತಿಳಿಸಿರುತ್ತಾರೆ.

ವಿಕಲಚೇತನರ ಅಭಿವೃದ್ಧಿ ಸಂಘದ ಉದ್ಘಾಟನೆ

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ):_ಕರಾವಳಿ ವಿಕಲಚೇತನರ ಅಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭವನ್ನು ದಿನಾಂಕ 26-2-12 ರಂದು ಬೆಳಿಗ್ಗೆ 9.30 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದೆ. ದೀಪ ಪ್ರಜ್ವಲನೆಯನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ಶ್ರೀ ಗಣೇಶ ರಾವ್ ನೆರವೇರಿಸುವರು.ಅಧ್ಯಕ್ಷತೆಯನ್ನು ವಿಕಲಚೇತನರ ಅಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಡಾ.ಕದ್ರಿ ಗೋಪಾಲನಾಥ್ ವಹಿಸುವರುಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಕೆ .ಚಿನ್ನಪ್ಪ ಗೌಡ ಭಾಗವಹಿಸುವರೆಂದು ಸಂಘದ ಅಧ್ಯಕ್ಷರು ತಿಳಿಸಿರುತ್ತಾರೆ.

ನಿವೃತ್ತ ಮಾಜಿ ಸೈನಿಕರಿಗೆ ಮಾಹಿತಿ

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ):_ದಿ ಮೆಕನೈಜಡ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಎಕ್ಸ್ ಸರ್ವಿಸ್ ಮೆನ್ ವೆಲ್‌ಫೇರ್ ಆರ್ಗನೈಸೇಷನ್‌ನ್ನು ಸ್ಥಾಪಿಸಿದ್ದು,ಸದರಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಾಜಿ ಸೈನಿಕರು ಹಾಗೂ ಅವರ ಅವಲಂಭಿತರು ತಮ್ಮ ಪಿಂಚಣಿ ಮತ್ತು ಇನ್ನಿತರ ಕುಂದುಕೊರತೆಗಳಿದ್ದಲ್ಲಿ ಹೆಲ್ಪ್ ಲೈನ್ ನಂಬರ್ 0241-2330110 ಗೆ ಸಂಪರ್ಕಿಸಬಹುದಾಗಿದೆಯೆಂದು ಸೈನಿಕ ಕಲ್ಯಾಣ ಉಪನಿರ್ದೇಶಕರು ತಿಳಿಸಿರುತ್ತಾರೆ.

ಮಾಜಿ ಸೈನಿಕರ ಮಕ್ಕಳಿಗೆ ವೃತ್ತಿಪರ ಕೋರ್ಸ್‌ಗೆ ಮಾಹಿತಿ

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ):_ಆರ್ಮಿ ವೆಲ್‌ಫೇರ್ ಎಜುಕೇಷನ್ ಸೊಸೈಟಿ ಅಧೀನದಲ್ಲಿರುವ ಪ್ರೊಫೆಷನಲ್ ಕಾಲೇಜುಗಳಲ್ಲಿ ಹಲವಾರು ಪ್ರೊಫೆಷನಲ್ ಕೋರ್ಸುಗಳು ಲಭ್ಯವಿದ್ದು,ಕಾಲೇಜುಗಳ ವಿವರಗಳಿಗೆ ದೂರವಾಣಿ ಸಂ.080-25617559 ಅಥವಾ 080-25617309 ನ್ನು ಸಂಪರ್ಕಿಸಬಹುದಾಗಿದೆ.

ಫೆ.22 ರಿಂದ ರಸ್ತೆ ಸಂಚಾರ ಗಣತಿ ಕಾರ್ಯಾರಂಭ

ಚಿತ್ರದುರ್ಗ,ಫೆ.16:-ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಶಿವಮೊಗ್ಗ ವೃತ್ತದಿಂದ ಇದೇ ಫೆಬ್ರವರಿ 22 ರ ಬೆಳಿಗ್ಗೆ 6 ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ 2 ದಿನಗಳ ರಸ್ತೆ ಸಂಚಾರ ಗಣತಿ ಕಾರ್ಯ ನಡೆಯಲಿದೆ.

ಶಿವಮೊಗ್ಗ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಗಣತಿ ಕೇಂದ್ರಗಳಿಂದ ಗಣತಿ ಕಾರ್ಯ ನಡೆಯಲಿದ್ದು, ಸಾರ್ವಜನಿಕರು, ವಾಹನಗಳ ಮಾಲೀಕರು, ಚಾಲಕರುಗಳು ಈ ಗಣತಿ ಕಾರ್ಯಕ್ಕೆ ಸಹಕರಿಸಲು ಕೋರಿದೆ.

ಗಣತಿ ಕಾರ್ಯದಿಂದ ಹೆದ್ದಾರಿ ಯೋಜನೆ ರೂಪಿಸಲು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ರಸ್ತೆ ಮೇಲ್ಮೈ ಸುಧಾರಿಸಲು, ರಸ್ತೆಗಳನ್ನು ಅಗಲಗೊಳಿಸಲು, ವಾಹನಸಂಚಾರ ಸುಗಮಗೊಳಿಸಲು, ಅಪಘಾತಗಳನ್ನು ನಿವಾರಿಸಿ ಸಂಚಾರದಲ್ಲಿ ಸುರಕ್ಷತೆ ಕಾಪಾಡಲು ರಸ್ತೆಗಳ ಅಭಿವೃದ್ದಿಪಡಿಸಲು ಅತ್ಯಾವಶ್ಯಕವಾಗಿರುವ ಸಮೀಕ್ಷೆಯಾಗಿರುವುದರಿಂದ ಈ ಗಣತಿ ಕಾರ್ಯ ಯಶಸ್ವಿಯಾಗಲು ಎಲ್ಲರೂ ಸಹಕರಿಸುವಂತೆ ಅಧೀಕ್ಷಕ ಅಭಿಯಂತರರು ಮನವಿ ಮಾಡಿದ್ದಾರೆ.

========

ಗ್ರಂಥಾಲಯ ಕಟ್ಟಡ ಉದ್ಘಾಟನೆ

ಚಿತ್ರದುರ್ಗ,ಫೆ.16:-ಚಿತ್ರದುರ್ಗ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ತುರುವನೂರು ಗ್ರಾಮಪಂಚಾಯಿತಿ ಸಹಯೋಗದಲ್ಲಿ ವಿಧಾನಪರಿಷತ್ ಸದಸ್ಯ ಶ್ರೀ ಎನ್.ತಿಪ್ಪಣ್ಣ ಅವರ ಅನುದಾನದಲ್ಲಿ ತುರುವನೂರಿನಲ್ಲಿ ನಿರ್ಮಿಸಿರುವ ಗ್ರಾಮಪಂಚಾಯಿತಿ ಗ್ರಂಥಾಲಯ ಕಟ್ಟಡದ ಉದ್ಘಾಟನೆ ಫೆಬ್ರವರಿ 18 ರಂದು ಜರುಗಲಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆನಂದ ವಸಂತ ಅಸ್ನೋಟಿಕರ್ ಅವರು ಕಟ್ಟಡ ಉದ್ಘಾಟಿಸುವರು. ಚಳ್ಳಕೆರೆ ಶಾಸಕರಾದ ಶ್ರೀ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವರು. ಗ್ರಂಥಾಲಯವನ್ನು ವಿಧಾನಪರಿಷತ್ ಸದಸ್ಯರಾದ ಶ್ರೀ ಎನ್.ತಿಪ್ಪಣ್ಣ ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಮಾನ್ಯ ಲೋಕಶಿಕ್ಷಣ, ಸಾರ್ವಜನಿಕ ಗ್ರಂಥಾಲಯ, ಸಣ್ಣ ಉಳಿತಾಯ, ಲಾಟರಿ ಹಾಗೂ ಪಶುಸಂಗೋಪನಾ ಸಚಿವರಾದ ಶ್ರೀ ರೇವೂನಾಯಕ್ ಬೆಳಮಗಿ, ಸರ್ಕಾರದ ಮುಖ್ಯ ಸಚೇತಕರಾದ ಡಾ: ಎ.ಹೆಚ್.ಶಿವಯೋಗಿಸ್ವಾಮಿ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಟಿ.ರವಿಕುಮಾರ್, ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿ, ವಿಧಾನಪರಿಷತ್ ಸದಸ್ಯರುಗಳಾದ ಶ್ರೀ ಜಿ.ಹೆಚ್.ತಿಪ್ಪಾರೆಡ್ಡಿ, ಶ್ರೀವೈ.ಎ.ನಾರಾಯಣಸ್ವಾಮಿ ಹಾಗೂ ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಜಲಾನಯನ ಮೇಳ

ಚಿತ್ರದುರ್ಗ,ಫೆ.16:-ಚಿತ್ರದುರ್ಗ ಜಲಾನಯನ ಅಭಿವೃದ್ದಿ ಇಲಾಖೆಯಿಂದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮದಡಿ ಜಲಾನಯನ ಮೇಳವನ್ನು ದಿನಾಂಕ 18-2-2012 ರಂದು ಬೆ.10-30 ಗಂಟೆಗೆ ಹೊಳಲ್ಕೆರೆ ತಾ: ಉಪ್ಪರಿಗೇನಹಳ್ಳಿಯ ಜೂನಿಯರ್ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆನಂದ ವಸಂತ ಅಸ್ನೋಟಿಕರ್ ಅವರು ನೆರವೇರಿಸುವರು. ವಸ್ತುಪ್ರದರ್ಶನ ಉದ್ಘಾಟನೆಯನ್ನು ಮಾನ್ಯ ಲೋಕಸಭಾ ಸದಸ್ಯರಾದ ಶ್ರೀ ಜನಾರ್ಧನಸ್ವಾಮಿಯವರು ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಸರ್ಕಾರದ ಮುಖ್ಯ ಸಚೇತಕರಾದ ಡಾ: ಎ.ಹೆಚ್.ಶಿವಯೋಗಿಸ್ವಾಮಿ, ಜಿ.ಪಂ.ಅಧ್ಯಕ್ಷ ಶ್ರೀ ಟಿ.ರವಿಕುಮಾರ್, ವಿಧಾನಪರಿಷತ್ ಸದಸ್ಯರಾದ ಶ್ರೀ ಜಿ.ಹೆಚ್.ತಿಪ್ಪಾರೆಡ್ಡಿ, ಶ್ರೀ ವೈ.ಎ.ನಾರಾಯಣಸ್ವಾಮಿ ಮತ್ತು ಚುನಾಯಿತ ಜನಪ್ರತಿನಿಧಿಗಳು ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಶ್ರೀ ವಿಪುಲ್ ಬನ್ಸಲ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಎನ್.ಜಯರಾಂ, ಬಬ್ಬೂರಿನ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ: ಡಿ.ಚಂದ್ರಪ್ಪ, ಜಿಲ್ಲಾ ಜಲಾನಯನ ಅಭಿವೃದ್ದಿ ಅಧಿಕಾರಿ ಡಾ: ಆರ್.ಕೃಷ್ಣಮೂರ್ತಿ ಇವರುಗಳು ಪಾಲ್ಗೊಳ್ಳುವರು.

ಏಕ ಗವಾಕ್ಷಿ ಸಭೆ ಹತ್ತು ಹೊಸ ಕೈಗಾರಿಕಾ ಘಟಕಗಳ ಸ್ಥಾಪನೆಗೆ ನಿವೇಶನ ಮಂಜೂರು : ಜಿಲ್ಲಾಧಿಕಾರಿ ಕಳಸದ

ವಿಜಾಪುರ,ಫೆ.16- ಜಿಲ್ಲೆಯಲ್ಲಿ ನೂತನವಾಗಿ ಆರಂಭಿಸಲು ಉದ್ದೇಶಿಸಿರುವ ಹತ್ತು ಕೈಗಾರಿಕೆ ಘಟಕಗಳಿಗೆ ಇಂದು ನಿವೇಶನ ಮಂಜೂರಾತಿ ನೀಡಲಾಯಿತು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ಮಟ್ಟದ ಏಕ ಗವಾಕ್ಷಿ ಸಭೆಯಲ್ಲಿ 10 ನೂತನ ಕೈಗಾರಿಕೆ ಘಟಕಗಳಿಗೆ ಭೂಮಿಯನ್ನು ಮಂಜೂರು ಮಾಡಿ ಕೆಐಎಡಿಬಿಗೆ ತ್ವರಿತವಾಗಿ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾದಿಕಾರಿಗಳು ಸೂಚಿಸಿದರು.

ಡ್ರೈಗ್ರೆಫ್ ಪ್ರೋಸೆಸಿಂಗ್ ಆಂಡ್ ಕೋಲ್ಡ ಸ್ಟೋರೇಜ್ ಘಟಕ, ನಿಂಬೆ ಸಂಸ್ಕರಣೆ ಮತ್ತು ತರಕಾರಿ ಮತ್ತು ಹಣ್ಣು ದಾಸ್ತಾನು ಶೀತಲ ಘಟಕ, ಬೇಳೆ ಘಟಕ ಸೇರಿದಂತೆ ವಿವಿಧ 10 ಉದ್ಯಮಗಳಿಗೆ ನಿವೇಶವನ್ನು ಹಂಚಿಕೆ ಮಾಡಲಾಯಿತು.

ಸಿಂದಗಿಯಲ್ಲಿ 28.36 ಎಕರೆ ಕೈಗಾರಿಕಾ ವಸಾಹತು ಅಭಿವೃದ್ದಿಪಡಿಸಿ ಅರ್ಜಿ ಆಹ್ವಾನಿಸುವುದರ ಮೂಲಕ ಹೊಸದಾಗಿ ಕೈಗಾರಿಕಾ ಆರಂಭಿಸುವವರಿಗೆ ಭೂಮಿ ಹಂಚಿಕೆ ಮಾಡಲು ಸೂಚಿಸಲಾಯಿತು. ಹಾಗೂ ವಿಜಾಪುರ ಕೈಗಾರಿಕಾ ಪ್ರದೇಶ ಮತ್ತು ಕೈಗಾರಿಕಾ ವಸಾಹತುವಿನಲ್ಲಿ ಕುಡಿಯುವ ನೀರು, ಒಳಚರಂಡಿ, ಬೀದಿ ದೀಪ ಸೌಕರ್ಯಗಳನ್ನು ತ್ವರಿತವಾಗಿ ವ್ಯವಸ್ಥೆ ಮಾಡಲು ಸೂಚಿಸಲಾಯಿತು.

ಡಾ: ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ.ಎನ್.ಪಾಟೀಲ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಫೆ.18ರಂದು ಜಿ.ಪಂ. ಸಾಮಾನ್ಯ ಸಭೆ

ವಿಜಾಪುರ,ಫೆ.16- ಜಿಲ್ಲಾ ಪಂಚಾಯತಿಯ 4ನೇ ಸಾಮಾನ್ಯ ಸಭೆಯು ದಿ:18-2-2012ರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಜರುಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಎನ್.ಪಾಟೀಲ ತಿಳಿಸಿದ್ದಾರೆ.

ಫೆ.18ರಂದು ಮಾಸ್ಟರ್ ಪ್ಲಾನ್ ಅನುಷ್ಠಾನ ಕುರಿತು ಸಭೆ

ವಿಜಾಪುರ,ಫೆ.16- ಫೆಬ್ರುವರಿ 18ರಂದು ವಿಜಾಪುರ ನಗರದಲ್ಲಿ ಮಾಸ್ಟರ್ ಪ್ಲಾನ್ ಯೋಜನೆ ಅನುಷ್ಠಾನಗೊಳಿಸುವ ಕುರಿತಂತೆ ದಿನಾಂಕ : 18-2-2012ರ ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯಲಾಗಿದೆ.

ಶಿವರಾತ್ರಿ ಅಮವಾಸ್ಯೆ ನಿಮಿತ್ಯ ವಿಶೇಷ ಸಾರಿಗೆ ಸೌಲಭ್ಯ

ವಿಜಾಪುರ,ಫೆ.16- ಶಿವರಾತ್ರಿ ಅಮವಾಸ್ಯೆ ನಿಮಿತ್ಯ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ವಿಜಾಪುರ ವಿಭಾಗದಿಂದ ವಿಜಾಪುರದಿಂದ ಶ್ರೀಶೈಲ, ಧರ್ಮಸ್ಥಳ, ಗುಡ್ಡಾಪುರ ಹಾಗೂ ಕೂಡಲಸಂಗಮಕ್ಕೆ ವಿಶೇಷ ಸಾರಿಗೆ ಬಸ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರ ಸೌಲಭ್ಯದ ಸದುಪಯೋಗಪಡೆದುಕೊಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಾ ಸಾರಿಗೆ ಘಟಕಗಳ ವ್ಯವಸ್ಥಾಪಕರಿಗೆ ಸಂಪರ್ಕಿಸಲು ಕೋರಲಾಗಿದೆ. ಮಾಹಿತಿಗಾಗಿ 08352-251344 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ವಿದ್ಯಾರ್ಥಿ ವೇತನ ಪಡೆಯಲು ಆಧಾರ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ

ವಿಜಾಪುರ,ಫೆ.14- ವಿಜಾಪುರ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ಸೌಲಭ್ಯಗಳನ್ನು ಪಡೆಯಲು 2012-13ನೇ ಆರ್ಥಿಕ ವರ್ಷದಿಂದ ಅರ್ಜಿಯೊಂದಿಗೆ ಕಡ್ಡಾಯವಾಗಿ ಆಧಾರ ಕಾರ್ಡ (ವಿಶಿಷ್ಟ ಗುರುತಿನ ಸಂಖ್ಯೆ ಪತ್ರ), ಬ್ಯಾಂಕ್ ಅಕೌಂಟ್ ನಂಬರ್, ಜೊತೆಗೆ ಐಎಫ್‌ಎಸ್‌ಸಿ ಕೋಡ್, ಹಾಗೂ ಎಸ್.ಎಸ್.ಎಲ್.ಸಿ ರಜಿಸ್ಟರ್ ನಂಬರ್ ದಾಖಲೆಗಳ ಜೊತೆಗೆ ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಪ್ರಾಂಶುಪಾಲರ ಮೂಲಕ ಕಡ್ಡಾಯವಾಗಿ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಲು ಸೂಚಿಸಿದೆ.

ಈ ದಾಖಲೆಗಳನ್ನು ಸಲ್ಲಿಸದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಮಂಜೂರು ಮಾಡಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಕಾರಣ 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ಇನ್ನೂ ಮುಂದೆ ವಿದ್ಯಾರ್ಥಿ ವೇತನ ಪಡೆಯಲು ಈ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ವಿಜಾಪುರ ತಾಲೂಕ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾಹಿತಿಗಾಗಿ ದೂ:08352-276124ಗೆ ಸಂಪರ್ಕಿಸಲು ಕೋರಲಾಗಿದೆ.

ಫೆಬ್ರುವರಿ 18ರಿಂದ ಗ್ರಾಮೀಣ ರಂಗೋತ್ಸವ ಕಾರ್ಯಕ್ರಮ

ವಿಜಾಪುರ,ಫೆ.16- ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಫೆಬ್ರುವರಿ 18 ಮತ್ತು 19 ರಂದು ಇಂಡಿ ತಾಲೂಕಿನ ಚಿಕ್ಕಮಣ್ಣುರ ಗ್ರಾಮದ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಗ್ರಾಮಿಣ ನಾಟಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಫೆಬ್ರುವರಿ 18ರ ಸಂಜೆ 6 ಗಂಟೆಗೆ ಗ್ರಾಮೀಣ ನಾಟಕೋತ್ಸವದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ಆರ್.ನಿರಾಣಿ ನೆರವೇರಿಸಲಿದ್ದಾರೆ. ಶಾಸಕ ಡಾ: ಸಾರ್ವಭೌಮ ಬಗಲಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ರಂಗಭೂಮಿಗೆ ಶ್ರೀರಂಗರ ಕೊಡುಗೆ ಕುರಿತು ವಿಚಾರಗೋಷ್ಠಿ, ಕೆಎಸ್‌ಆರ್‌ಟಿಸಿ ಕಲಾ ಬಳಗದಿಂದ ಸ್ಮರಣೆ ನಾಟಕ ಪ್ರದರ್ಶನ ಜರುಗಲಿದೆ.

ಫೆ.19ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದ್ದು, ಶ್ರೀದೇವಿ ಮಹಾತ್ಮೆ ಎಂಬ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಹಾಗೂ ವಿಜಾಪುರ ಜಿಲ್ಲೆಯ ಗ್ರಾಮಿಣ ರಂಗಭೂಮಿ ಪರಂಪರೆ ಕುರಿತು ವಿಚಾರಗೋಷ್ಠಿ ಜರುಗಲಿದೆ. ಸಮಾರೋಪ ಭಾಷಣವನ್ನು ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ನಡೆಸಿಕೊಡಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸೋಮಶೇಖರ ವಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಫೆಬ್ರುವರಿ ಮಾಹೆಯ ಪಡಿತರ ಕಾರ್ಡಿಗೆ ಅಕ್ಕಿ, ಗೋಧಿ ಬಿಡುಗಡೆ

ವಿಜಾಪುರ,ಫೆ.16- ನಗರ ಪ್ರದೇಶದ ಪಡಿತರ ಚೀಟಿದಾರರಿಗೆ ಅಂತ್ಯೋದಯ ಅನ್ನ, ಹಾಗೂ ಅಕ್ಷಯ ಪಡಿತರ ಚೀಟಿದಾರರಿಗೆ ಫೆಬ್ರುವರಿ 2012ರ ಮಾಹೆಯ ಅಕ್ಕಿ, ಮತ್ತು ಗೋಧಿ ಹಾಗೂ ಅನೀಲ ರಹಿತ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯನ್ನು ಬಿಡುಗಡೆಗೊಳಿಸಲಾಗಿದೆ.

ಅಂತ್ಯೋದಯ ಅನ್ನ ಪಡಿತರ ಚೀಟಿಗೆ 3ರೂ. ರಂತೆ ಅಕ್ಕಿ 29 ಕೆಜಿ, 2ರೂ. ರಂತೆ ಗೋಧಿ 6 ಕೆ.ಜಿ. ಮರು ಹಂಚಿಕೆ ಮಾಡಲಾಗಿದೆ. ಅಕ್ಷಯ ಪಡಿತರ ಚೀಟಿದಾರರಿಗೆ 3ರೂ. ರಂತೆ ಏಕ ಸದಸ್ಯರಾಗಿದ್ದಲ್ಲಿ 4 ಕೆ.ಜಿ. ದ್ವಿಸದಸ್ಯರಾಗಿದ್ದಲ್ಲಿ 8 ಕೆಜಿ, ತ್ರಿ ಸದಸ್ಯರಾಗಿದ್ದಲ್ಲಿ 12 ಕೆ.ಜಿ. ನಾಲ್ಕು ಸದಸ್ಯರಾಗಿದ್ದಲ್ಲಿ 16 ಕೆಜಿ. ಐದು ಹಾಗೂ ಐದಕ್ಕಿಂತ ಹೆಚ್ಚಿನ ಸದಸ್ಯರಿದ್ದಲಿ 20 ಕೆಜಿ ಯಂತೆ ವಿತರಿಸಲಾಗುವುದು. ಗೋಧಿ ಏಕ/ದ್ವಿ ಸದಸ್ಯರಿಗೆ 1ಕೆಜಿಯಂತೆ ತ್ರಿ ಸದಸ್ಯರಿಗೆ 2ಕೆಜಿಯಂತೆ ನಾಲ್ಕು/ಐದು ಹಾಗೂ ಅದಕ್ಕಿಂತ ಹೆಚ್ಚಿನ ಸದಸ್ಯರಾಗಿದ್ದಲ್ಲಿ 03 ಕೆಜಿಯಂತೆ ಪ್ರತಿ ಕೆಜಿಗೆ ರೂ. 3ರಂತೆ ವಿತರಿಸಲಾಗುವುದು.

ಸೀಮೆ ಎಣ್ಣೆ ಪ್ರತಿ ಅನಿಲ ರಹಿತ ಪಡಿತರ ಚೀಟಿಗೆ ಲೀಟರನಂತೆ ಪ್ರತಿ ಲೀಟರ್‌ಗೆ ರು. 14-70 ರಂತೆ ವಿತರಿಸಲಾಗುವುದು. ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ 29-2-2012ರೊಳಗಾಗಿ ಪಡಿತರ ಪದಾರ್ಥಗಳನ್ನು ಪಡೆದುಕೊಳ್ಳಲು ಆಹಾರ ನಾಗರೀಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಮುದ್ದೇಬಿಹಾಳ ಎಸ್.ಸಿ. ಎಸ್ಟಿ ಶಿಷ್ಯವೇತನ ವಿದ್ಯಾರ್ಥಿಗಳಿಗೆ ಸೂಚನೆ

ವಿಜಾಪುರ,ಫೆ.16- ಭಾರತ ಸರ್ಕಾರದ ಶಿಷ್ಯವೇತನ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸುವ ಮುದ್ದೇಬಿಹಾಳ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯಲ್ಲಿ ನೂನ್ಯತೆಗಳಿದ್ದು, ಸಂಬಂಧಪಟ್ಟ ಪ್ರಾಚಾರ್ಯರನ್ನು ಸಂಪರ್ಕಿಸಿ ನ್ಯೂನ್ಯತೆಗಳನ್ನು ಸರಿಪಡಿಸಿ 18-2-2012ರೊಳಗಾಗಿ ಮರು ಸಲ್ಲಿಸಲು ತಾಲೂಕಾ ಸಮಾಜ ಕಲ್ಯಾಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

ಇಂಡಿ ಉಪವಿಭಾಗ ಮಟ್ಟದ ಯುವ ಸಂಘಗಳ ಕ್ರೀಡಾಕೂಟ

ವಿಜಾಪುರ,ಫೆ.16- ಭಾರತ ಸರ್ಕಾರದ ನೆಹರು ಯುವ ಕೇಂದ್ರದ ವತಿಯಿಂದ ಫೆಬ್ರುವರಿ 22, 23 ರಂದು ಇಂಡಿ ತಾಲೂಕಿನ ಮಣಂಕಲಗಿ ಕ್ರಾಸ್ ಲೋಣಿ ಬಿ.ಕೆ. ಗ್ರಾಮದ ರುದ್ರೇಶ ಪ್ರಾಥಮಿಕ ಶಾಲಾ ಆವರಣದಲ್ಲಿ ಇಂಡಿ ಉಪ ವಿಭಾಗ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ಸದರಿ ಕ್ರೀಡಾಕೂಟದಲ್ಲಿ ಇಂಡಿ ಮತ್ತು ಸಿಂದಗಿ ತಾಲೂಕಿನ ಯುವಕರು ಭಾಗವಹಿಸಬಹುದಾಗಿದೆ. ಕಬ್ಬಡ್ಡಿ, ವಾಲಿಬಾಲ್, 100ಮೀ.ಓಟ, 400 ಮೀ.ಓಟ, ಗುಂಡು ಎಸೆತ, ಎತ್ತರ ಜಿಗಿತ, ಯುವತಿಯರಿಗಾಗಿ ಖೋಖೋ, 100 ಮತ್ತು 200 ಮೀ. ಓಟ, ಹಾಗೂ ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. 15ರಿಂದ 35ವರ್ಷದೊಳಗಿನ ಯುವಕ-ಯುವತಿಯರು, ಸಂಘದ ಪತ್ರದೊಂದಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯುವ ಸಮನ್ವಾಯಾಧಿಕಾರಿ ನೆಹರು ಯುವ ಕೇಂದ್ರ, ಸೈನಿಕ ಶಾಲೆ ಹತ್ತಿರ, ಅಥಣಿ ರಸ್ತೆ ವಿಜಾಪುರ. ದೂರವಾಣಿ: 08352-270130 ಮೋ: 9902781815 ಅಥವಾ 9448917024 ಸಂಪರ್ಕಿಸಲು ಕೋರಲಾಗಿದೆ.

ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ ಎಂಟನೇ ತರಗತಿ ಪ್ರವೇಶ ಪರೀಕ್ಷೆ ಅರ್ಜಿ ಕರೆ

ವಿಜಾಪುರ,ಫೆ.16- ಉತ್ತರಾಖಂಡ ರಾಜ್ಯದ ಡೆಹರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜ್‌ನಲ್ಲಿ ಜನವರಿ 2013ನೇ ಅಧಿವೇಶನಕ್ಕಾಗಿ ಎಂಟನೇ ತರಗತಿಗೆ ಪ್ರವೇಶ ಬಯಸುವ ಕರ್ನಾಟಕ ಮೂಲಕ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು 2012ರ ಜೂನ್ 01 ಮತ್ತು 02 ರಂದು ಬೆಂಗಳೂರ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಸದರಿ ಪರೀಕ್ಷೆ ಬರೆಯಲು ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ದಿನಾಂಕ 1-1-2013ರಂದು 111/2 ವರ್ಷದಿಂದ 13 ವರ್ಷದೊಳಗಿರುವ (ದಿ.2-1-2000 ರಿಂದ 1-7-2001ರೊಳಗೆ ಜನಿಸಿರುವ) ಬಾಲಕರು ಮಾತ್ರ ಸದರಿ ಪ್ರವೇಶ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ನಿಗದಿತ ಅರ್ಜಿ ನಮೂನೆ ಹಾಗೂ ವಿವರಣೆ ಪತ್ರವನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇಲ್ಲಿಂದ ಸೈನಿಕ ವೆಲ್‌ಫೇರ್ ಫಂಡ್ ಅಕೌಂಟ್, ಡಿರ್ಪಾಟಮೆಂಟ್ ಆಫ್ ಸೈನಿಕ್ ವೆಲಫೇರ್ ಆಂಡ್ ರಿಸೆಟಲ್‌ಮೆಂಟ್, ಬೆಂಗಳೂರು ಇವರ ಹೆಸರಿನಲ್ಲಿ 350ರೂ. ಗಳಿಗೆ ಪಡೆದ ಬ್ಯಾಂಕ್ ಡ್ರಾಫ್ಟ್‌ನ್ನು ಕಳುಹಿಸಿ ಪಡೆಯಬಹುದಾಗಿದೆ.

ರಿಜಿಸ್ಟ್ರರ್ ಪಾರ್ಸಲ ಮುಖಾಂತರ ಅರ್ಜಿ ನಮೂನೆಯನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಗೆ ರೂ.350ರ ಡಿ.ಡಿಯೊಂದಿಗೆ 11ಸೆಂ.ಮೀ. ಉದ್ದ ಹಾಗೂ 9 ಸೆಂ.ಮೀ. ಅಳತೆಯ ಸ್ವವಿಳಾಸದ ಕ್ಲಾಥ್ ಕೋಟೆಡ್ ಲಕೋಟೆಯ ಮೇಲೆ 40ರೂ. ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಿತಕ್ಕದ್ದು.

ಭರ್ತಿ ಮಾಡಿದ ಅರ್ಜಿ ನಮೂನೆಯ ಎರಡು ಪ್ರತಿ ಹಾಗೂ ಕಮಾಂಡೆಂಟ್ ಆರ್.ಆಯ್.ಎಂ.ಸಿ ಇವರ ಹೆಸರಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತೇಲ ಭವನ ಶಾಖೆ, ಕೋಡ್ ಸಂ.01576 ಡೆಹರಾಡೂನ್ ಇಲ್ಲಿಗೆ ಪಡೆದ 50ರೂ. ಡಿಡಿ. (ಎಸ್.ಸಿ.ಎಸ್ಟಿಗೆ 5ರೂ. ಮಾತ್ರ) ಯನ್ನು ಗ್ರಾಮ ಪಂಚಾಯತಿ, ಪುರಸಭೆ ಅಥವಾ ನಗರಸಭೆಯಿಂದ ಆಂಗ್ಲ ಭಾಷೆಯಲ್ಲಿ ಪಡೆದ ಅಭ್ಯರ್ಥಿಯ ಜನ್ಮ ದಿನಾಂಕ ಪ್ರಮಾಣ ಪತ್ರವನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢಿಕರಿಸಿದ ಎರಡು ಪ್ರತಿಗಳು, ಐದು ಪಾಸಪೋರ್ಟ ಸೈಜಿನ ಭಾವಚಿತ್ರ, ಸಕ್ಷಮ ಪ್ರಾಧಿಕಾರದಿಂದ ಪಡೆದ ಆಂಗ್ಲ ಭಾಷೆಯ ಜಾತಿ ಪ್ರಮಾಣ ಪತ್ರದ ಝರಾಕ್ಸ ಪ್ರತಿ, ಪರೀಕ್ಷಾ ಪ್ರವೇಶ ಪತ್ರವನ್ನು ಕಳುಹಿಸಲು 25 ರೂ. ಅಂಚೆ ಚೀಟಿ ಲಗತ್ತಿಸಿದ ಸ್ವ ವಿಳಾಸವುಳ್ಳ ಲಕೋಟೆ ಹಾಗೂ ಅಭ್ಯರ್ಥಿಯು ವ್ಯಾಸಂಗ ಮಾಡುತ್ತಿರುವ ಶಾಲಾ ಪ್ರಾಚಾರ್ಯರು ಅಥವಾ ಮುಖ್ಯಾಪಾಧ್ಯಾಯರಿಂದ ಪಡೆದ ಜನ್ಮ ದಿನಾಂಕ ಹಾಗೂ ಸ್ಟಡಿ ಸರ್ಟಿಫಿಕೇಟನ್ನು ದೃಢೀಕರಿಸಿ ದಿ: 31-3-2012ರೊಳಗೆ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಭವನ, ನಂ.58, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ರಸ್ತೆ, ಬೆಂಗಳೂರು-560025 ಇವರಿಗೆ ಸಲ್ಲಿಸತಕ್ಕದ್ದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರವಸತಿ ಇಲಾಖೆ ವಿಜಾಪುರ ಇವರ ಕಚೇರಿಯ ದೂರವಾಣಿ ಸಂ. 08352-250913 ಸಂಪರ್ಕಿಸಲು ಕೋರಲಾಗಿದೆ.

ಕಳ್ಳಭಟ್ಟಿ ಮುಕ್ತ ತಾಂಡಾಗಳಾಗಿ ಘೋಷಣೆ ಶೀಘ್ರ : ಜಿಲ್ಲಾಧಿಕಾರಿ ಕಳಸದ

ವಿಜಾಪುರ,ಫೆ.16- ಕಳ್ಳಭಟ್ಟಿ ದಂಧೆಗೆ ಕಡಿವಾಣ ಹಾಕಿ, ಪರ್ಯಾಯ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮಕೈಗೊಂಡು ಕಳ್ಳಭಟ್ಟಿಯ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲ ತಾಂಡಾಗಳನ್ನು ಕಳ್ಳಭಟ್ಟಿ ಮುಕ್ತ ತಾಂಡಾಗಳನ್ನಾಗಿ ಘೋಷಿಸುವಂತೆ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಸೂಚಿಸಿದರು.

ಮಂಗಳವಾರ ಸಂಜೆ ಅಬಕಾರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಕಳ್ಳಭಟ್ಟಿ ದಂಧೆಯಲ್ಲಿ ತೊಡಗಿರುವ ಜನರ ಮನವೊಲಿಸಿ, ಕಳ್ಳಭಟ್ಟಿ ತಯಾರಿಸುವುದನ್ನು ನಿಲ್ಲಿಸುವಂತೆ ಮನಪರಿವರ್ತನೆ ಮಾಡಲು ಸೂಚಿಸಿದರು.

ಕಳ್ಳಭಟ್ಟಿ ಚಟುವಟಿಕೆಯನ್ನು ಕೈಬಿಟ್ಟು, ಇತರ ಉದ್ಯೋಗ ಹಮ್ಮಿಕೊಳ್ಳಲು ಪುನರವಸತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಜನರ ಸಾಮಾಜಿಕ ಪರಿವರ್ತನೆಗೆ ಅನುಕೂಲವಾಗುವಂತೆ ಕೌನ್ಸೆಲಿಂಗ್ ಮನಪರಿವರ್ತನೆ ಚಟುವಟಿಕೆಗಳನ್ನು ಹಮ್ಮಿಕೊಂಡು ಕಳ್ಳಭಟ್ಟಿಯಿಂದಾಗು ದುಷ್ಪರಿಣಾಮಗಳ ಕುರಿತಂತೆ ಮನವರಿಕೆ ಮಾಡಿಕೊಡಲು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಅಬಕಾರಿ ಇಲಾಖೆ, ಪೋಲಿಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಕಾರ್ಯಾಚರಣೆಯ ಮೂಲಕ ಕಳ್ಳಭಟ್ಟಿ ದಂಧೆಯನ್ನು ಪೂರ್ಣವಾಗಿ ನಿಯಂತ್ರಿಸುವಂತೆ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ಸೂಚಿಸಿದರು.

82 ಮುಕ್ತ : ಜಿಲ್ಲೆಯ 101 ತಾಂಡಾಗಳಲ್ಲಿ ಕಳ್ಳಭಟ್ಟಿ ಚಟುವಟಿಕೆಗಳು ಜರುಗುತ್ತಿದ್ದು, ಈ ತಾಂಡಾಗಳ ಜನರ ಮನವೊಲಿಸಿ, ಈ ಪೈಕಿ 82 ತಾಂಡಾಗಳಲ್ಲಿ ಪೂರ್ಣಪ್ರಮಾಣದಲ್ಲಿ ಅಬಕಾರಿ ಚಟುವಟಿಕೆ ಸ್ಥಗಿತಗೊಂಡಿದೆ. ಉಳಿದ ತಾಂಡಾಗಳಲ್ಲಿ ಕಳ್ಳಭಟ್ಟಿ ತಯಾರಿಕೆ ಕೈಬಿಡುವಂತೆ ಜನರನ್ನು ಮನವೊಲಿಸಲಾಗುತ್ತಿದೆ. ಕಳ್ಳಭಟ್ಟಿ ತಯಾರಿಕೆ ಕೈಬಿಟ್ಟರೆ, ಪರ್ಯಾಯ ಉದ್ಯೋಗ ಚಟುವಟಿಕೆಗೆ ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಳಿದ ತಾಂಡಾಗಳಲ್ಲೂ ಕಳ್ಳಭಟ್ಟಿ ಚಟುವಟಿಕೆ ಕೈಬಿಡಲು ಜನ ಮುಂದೆ ಬಂದಿದ್ದು, ಎಲ್ಲ 101 ತಾಂಡಾಗಳನ್ನು ಕಳ್ಳಭಟ್ಟಿ ಮುಕ್ತ ತಾಂಡಾಗಳೆಂದು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಸಭೆಗೆ ವಿವರಿಸಿದರು.

ಮಾಂಸ ಮಾರಾಟ ನಿಷೇಧ

ಚಿಕ್ಕಮಗಳೂರು ಫೆ.16:ಫೆಬ್ರವರಿ 20ರಂದು ಮಹಾಶಿವರಾತ್ರಿ ಪ್ರಯುಕ್ತ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ. ಅಂದು ನಗರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚುವಂತೆ ಹಾಗೂ ಮಾಂಸ ಮತ್ತು ಮೀನು ಮಾರಾಟ ಮಾಡದಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಗರಸಭಾ ಕಾಯಿದೆಯನ್ವಯ ದಂಡ ವಿಧಿಸಿ ಪರವಾನಗಿ ರದ್ದುಪಡಿಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.

ಜಿ.ಪಂ.ಸಭೆ 27ರಂದು

ಚಿಕ್ಕಮಗಳೂರು ಫೆ.16: ಮುಂದೂಡಲಾಗಿದ್ದ ಜಿಲ್ಲಾ ಪಂಚಾಯಿತಿ ಸರ್ವ ಸದಸ್ಯರ ಸಾಮಾನ್ಯ ಸಭೆ ಫೆಬ್ರವರಿ 27ರಂದು ಬೆಳಗ್ಗೆ 11.30ಕ್ಕೆ ಅಧ್ಯಕ್ಷೆ ಸುಚಿತಾ ನರೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪುಸ್ತಕ ಮಾರಾಟ

ಚಿಕ್ಕಮಗಳೂರು ಫೆ.16: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಕಟವಾದ ಪುಸ್ತಕಗಳನ್ನು ನಗರದ ಕುವೆಂಪು ಕಲಾಮಂದಿರದಲ್ಲಿರುವ ಇಲಾಖೆಯ ಕಛೇರಿಯಲ್ಲಿ ಮಾರಾಟಕ್ಕಿಡಲಾಗಿದೆ. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.

ವಾದ್ಯಪರಿಕರಗಳ ವಿತರಣೆ

ಚಿಕ್ಕಮಗಳೂರು ಫೆ.16: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲಾ ತಂಡಗಳಿಗೆ ವಾದ್ಯಪರಿಕರಗಳ ವಿತರಣೆ ಫೆಬ್ರವರಿ 17ರಂದು ಬೆಳಗ್ಗೆ 10.30ಕ್ಕೆ ಕುವೆಂಪು ಕಲಾಮಂದಿರದಲ್ಲಿ ನಡೆಯಲಿದೆ. ಎಂದು ಪ್ರಕಟಣೆ ತಿಳಿಸಿದೆ.

ಶ್ರೀ. ಡಿ.ಎಸ್. ಕುಲಕರ್ಣಿ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ, ಫೆಬ್ರುವರಿ:16:(ಕರ್ನಾಟಕ ವಾರ್ತೆ) ಹಿರಿಯ ಪತ್ರಕರ್ತರಾದ ಶ್ರೀ. ಡಿ.ಎಸ್. ಕುಲಕರ್ಣಿ ಅವರಿಗೆ ಇಂದು 2010 ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಯನ್ನು ಇಂದಿಲ್ಲಿ ಪ್ರದಾನ ಮಾಡಲಾಯಿತು.

ಕಳೆದ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನಾರೋಗ್ಯದ ನಿಮಿತ್ತ ಶ್ರೀ. ಡಿ.ಎಸ್. ಕುಲಕರ್ಣಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿರಲಿಲ್ಲ. ಇಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪರವಾಗಿ ಹುಬ್ಬಳ್ಳಿಯಲ್ಲಿರುವ ಅವರ ನಿವಾಸದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ.ಬಸವರಾಜ ಕಂಬಿ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪರವಾಗಿ ಪ್ರಶಸ್ತಿ ಪತ್ರ, 10 ಸಾವಿರ ರೂ.ಗಳ ಚೆಕ್ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು. ಹುಬ್ಬಳ್ಳಿ ರಾಜ್ಯ ಸಮಾಚಾರ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ. ಪಿ.ಎಸ್. ಪರ್ವತಿ, ಧಾರವಾಡ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಶ್ರೀ. ಪಿ.ಎಸ್. ಹಿರೇಮಠ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗದಗ ಜಿಲ್ಲೆಯ ಹೊಳೆಮಣ್ಣೂರಲ್ಲಿ ಜನಿಸಿದ ಶ್ರೀ. ಡಿ.ಎಸ್. ಕುಲಕರ್ಣಿ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ 1960 ರಲ್ಲಿ ಎಂ.ಎ. ಇತಿಹಾಸ ಹಾಗೂ ಅರ್ಥಶಾಸ್ತ್ರಗಳಲ್ಲಿ ಪದವಿ ಪಡೆದ ಅವರು 1961 ರಲ್ಲಿ ‘ಸಂಯುಕ್ತ ಕರ್ನಾಟಕ’ ದಲ್ಲಿ ಉಪಸಂಪಾದಕರಾಗಿ ಸೇರ್ಪಡೆಗೊಂಡು ಸುದ್ದಿ ಸಂಪಾದಕರಾಗಿ ನಿವೃತ್ತಿಗೊಂಡರು.

ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಲೇ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದಾರೆ. ಹಲವಾರು ಪುಸ್ತಕಗಳನ್ನು ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದೂ ಧರ್ಮ ಸಿದ್ಧಾಂತ ಮತ್ತು ಜೀವನ ಮಾರ್ಗ (ಮೂಲ ಲೇಖಕರು: ಶ್ರೀ. ಸಿ. ರಾಜಗೋಪಾಲಚಾರಿ), ‘ಸಾಧನೆ ಮತ್ತು ಸಾಧ್ಯ’ ‘ಮೌಲ್ಯಗಳ ಮೌಲ್ಯ’, ಶ್ರೀ. ರುದ್ರಂ ಉಪನ್ಯಾಸಗಳ ಸಂಗ್ರಹ. ಸ್ವಾಮಿ ದಯಾನಂದ ಸರಸ್ವತಿಯವರ ‘ಕೇನೋಪನಿಷತ್’ ಇದರ ಭಾಷಾಂತರ ಮತ್ತು ವ್ಯಾಖ್ಯಾನ. ಹೀಗೆ ಹಲವಾರು ಮೌಲ್ಯಯುತ ಪುಸ್ತಕಗಳನ್ನು ಇವರು ಅನುವಾದಿಸಿದ್ದಾರೆ.

ಪಿ.ಎನ್.ಡಿ.ಟಿ. ಕಾಯ್ದೆ ಅನುಷ್ಠಾನ : ಅರ್ಜಿ ಆಹ್ವಾನ

ಹಾವೇರಿ ಫೆ.16: ಹಾವೇರಿ ಜಿಲ್ಲೆಯಲ್ಲಿ ಸರ್ಕಾರೇತರ ಸಂಸ್ಥೆಗಳಿಂದ (ಎನ್.ಜಿ.ಓ) 2012-13ರ ಸಾಲಿನಲ್ಲಿ ಪಿ.ಸಿ. ಮತ್ತು ಪಿಎನ್‌ಡಿಟಿ ಕಾಯದೆ 1994ರ ಅನುಷ್ಠಾನ ಸಂಬಂಧದ ಮಾಹಿತಿ, ಶಿಕ್ಷಣ ಹಾಗೂ ಪ್ರಚಾರ ಸಂಬಂಧದ (ಐಇಸಿ) ಚಟುವಟಿಕೆಗಳ ಅನುಷ್ಠಾನ ಕಾರ್ಯಕ್ಕಾಗಿ ಅಗತ್ಯವಾದ ಅನುದಾನ ನೀಡಿಕೆಗೆ ಇದೇ 20-2-2012 ರೊಳಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

ಈ ಸಂಬಂಧದ ಹೆಚ್ಚಿನ ವಿವರಗಳನ್ನು ವೆಬ್‌ಸೈಟ್ ವಿಳಾಸ www.mohfw.nic.in ಅಥವಾ www.pndt. gov.in ನಿಂದ ಪಡೆದು, ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿಮಾಡಿ, ಸೀಲ್ ಮಾಡಲಾದ ಲಕೋಟೆಯ ಮೇಲೆ ಅರ್ಜಿ ವಿಷಯ ಬರೆದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲಾ ಆಡಳಿತ ಭವನ (ದೂರವಾಣಿ ಸಂ:08375-249049) ದೇವಗಿರಿ, ಹಾವೇರಿ ಅವರಿಗೆ ಸಲ್ಲಿಸುವಂತೆ ಕೋರಿದೆ.

ಉಚಿತ ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಹಾವೇರಿ ಫೆ.16: ಹಳಿಯಾಳ ಕೆರನಾ ಬ್ಯಾಂಕ್ ಮತ್ತು ವಿ.ಆರ್.ಡಿ.ಎಂ.ಟ್ರಸ್ಟನಿಂದ ಪ್ರಾಯೋಜಿತ ದೇಶಪಾಂಡೆ ರುಡ್‌ಸೆಟ್ ಸಂಸ್ಥೆಯು ಮುಂದಿನ ಮಾರ್ಚ ತಿಂಗಳಲ್ಲಿ 7 ದಿನಗಳ ಮಶ್‌ರೂಮ್(ಅಣಬೆ) ತಯಾರಿಕೆ ಹಾಗೂ ಶೀವಿಂಗ್ ಮಶೀನ್(ಹೊಲಿಗೆ) ರಿಪೇರಿ) ತರಬೇತಿಗಳನ್ನು ಆಯೋಜಿಸಲಾಗಿದೆ.

ಈ ತರಬೇತಿಯು ಉ.ಕ.ಜಿಲ್ಲೆಯ ಹಳಿಯಾಳದ ದೇಶಪಾಂಡೆ ರುಡ್‌ಸೆಟ್ ಸಂಸ್ಥೆಯಲ್ಲಿ ಜರುಗಲಿದೆ. ತರಬೇತಿಯು ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದ್ದು, ಕರ್ನಾಟಕ ರಾಜ್ಯದ ಯಾವುದೇ ಪ್ರದೇಶದಿಂದ 18 ರಿಂದ 45 ವರ್ಷದೊಳಗಿನ ಆಸಕ್ತರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಮಶ್‌ರೂಮ್(ಅಣಬೆ) ತಯಾರಿಕೆ ತರಬೇತಿಗೆ ಸ್ವ-ಸಹಾಯ ಸಂಘದ ಸದಸ್ಯರಿಗೆ ಆಧ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಇಚ್ಛಿಸುವರು ತಮ್ಮ ಹೆಸರು, ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ, ಪಡೆಯಲಿಚ್ಚಿಸುವ ತರಬೇತಿ, ವಿದ್ಯಾರ್ಹತೆ, ತರಬೇತಿಯ ವಿಷಯದಲ್ಲಿ ಅನುಭವ ಮುಂತಾದ ವಿವರಗಳನ್ನೊಳಗೊಂಡ ಅರ್ಜಿಯನ್ನು ಬಿಳಿ ಹಾಳೆಯಲ್ಲಿ ಬರೆದು ಕೂಡಲೇ ನಿರ್ದೇಶಕರು, ದೇಶಪಾಂಡೆ ರುಡ್‌ಸೆಟ್ ಸಂಸ್ಥೆ, ದಾಂಡೇಲಿ ರಸ್ತೆ, ಹಳಿಯಾಳ (ಉ.ಕ) ಇವರಿಗೆ 5-3-2012ರೊಳಗಾಗಿ ಸಂಸ್ಥೆಗೆ ವೈಯಕ್ತಿಕವಾಗಿ ಬಂದು ಅಥವಾ ಅರ್ಜಿ ಮೂಲಕ ಅವಶ್ಯಕ ಮಾಹಿತಿ ನೀಡಿ ನೊಂದಣಿ ಮಾಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮತ್ತು ಸಂಸ್ಥೆಗೆ ಬರುವಾಗ ತರಬೇಕಾದ ದಾಖಲಾತಿಗಳ ಬಗ್ಗೆ ಸಂಸ್ಥೆಯ ದೂರವಾಣಿ ಸಂಖ್ಯೆ 08284-220807, 94821 88780 ಹಾಗೂ 94834 85489ನ್ನು ಸಂಪರ್ಕಿಸಲು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಫೆ.18 ರಂದು ಹಾವೇರಿಗೆ ಮಾಹಿತಿ ಆಯುಕ್ತರ ಭೇಟಿ

ಹಾವೇರಿ ಫೆ.16: ರಾಜ್ಯ ಮಾಹಿತಿ ಹಕ್ಕು ಆಯುಕ್ತರಾದ ಡಾ.ಶೇಖರ ಡಿ.ಸಜ್ಜನರ ಅವರು ಫೆಬ್ರವರಿ 17 ರಂದು ರಾತ್ರಿ 7.45ಕ್ಕೆ ಬೆಂಗಳೂರಿನಿಂದ ರೈಲಿನ ಮೂಲಕ ಹೊರಟು, ಫೆ.18 ರಂದು ಹಾವೇರಿಗೆ ಆಗಮಿಸುವರು. ನಂತರ ಅವರು 11.30ಕ್ಕೆ ಹಾವೇರಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ಹಾಗೂ ಅಧಿಕಾರಿಗಳಿಗೆ ಏರ್ಪಡಿಸಿದ ಕಾರ್ಯಗಾರದಲ್ಲಿ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಗದಗಿಗೆ ಪ್ರಯಾಣ ಬೆಳೆಸುವರು.

ಜಲಸಂಪನ್ಮೂಲ ಸಚಿವರ ಪ್ರವಾಸ ಕಾರ್ಯಕ್ರಮ

ಹಾವೇರಿ ಫೆ.16: ರಾಜ್ಯ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಅವರು ಫೆ.17 ರಂದು ಬೆಳಿಗ್ಗೆ 6ಕ್ಕೆ ಬೆಂಗಳೂರನಿಂದ ರಸ್ತೆ ಮೂಲಕ ಹೊರಟು, 11ಕ್ಕೆ ದಾವಣಗೆರೆ ಆಗಮಿಸುವರು. ಅಲ್ಲಿನ ಖಾಸಗಿ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ಶಿಗ್ಗಾಂವ ತಾಲೂಕ ಕನಕಬಾಡ ಗ್ರಾಮಕ್ಕೆ ಆಗಮಿಸಿ, ಧರ್ಮದೇವತೆ ಇಟಗಿ ಶ್ರೀ ಭೀಮಾಂಬಿಕಾ ದೇವಿ ಭಾವಚಿತ್ರದ ಭವ್ಯ ಮೆರವಣಿಗೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸಚಿವರು ಮಧ್ಯಾಹ್ನ 3ಕ್ಕೆ ಬಂಕಾಪೂರಕ್ಕೆ ಆಗಮಿಸಿ, ಶ್ರೀ ಅರಳೆಲೆ ಹಿರೇಮಠದ ಪ್ರಸಾದ ನಿಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸವರು. ನಂತರ ಸಾಯಂಕಾಲ 4.30ಕ್ಕೆ ಗುಡ್ಡದಚನ್ನಾಪೂರಕ್ಕೆ ತೆರಳಿ, ಕೊಟ್ಟೂರ ಬಸವೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಸಂಜೆ 5.30ಕ್ಕೆ ಶಿಗ್ಗಾಂವಿಗೆ ಆಗಮಿಸಿ, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರ ಭೇಟಿ ನಡೆಸಿ, 6.30ಕ್ಕೆ ಗಂಗಿಭಾವಿಗೆ ಆಗಮಿಸಿ, ಸರ್ವಜ್ಞ ವಿದ್ಯಾಸಂಸ್ಥೆಯ ಪ್ರಾಥಮಿಕ ಶಾಲಾ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ 8ಕ್ಕೆ ಗಂಗಿಭಾವಿಯಿಂದ ಹುಬ್ಬಳ್ಳಿಗೆ ತೆರಳಿ, ರೈಲಿನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಛಾಯಾಚಿತ್ರ ತಲೆಬರಹ: 5ನೇ ಹಾವೇರಿ ಜಿಲ್ಲಾ ಉತ್ಸವ-2012ದ ಅಂಗವಾಗಿ ಬ್ಯಾಡಗಿಯಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಹಾವೇರಿ ಜಿಲ್ಲಾಡಳಿತ ತಂಡ ಪ್ರಥಮಸ್ಥಾನ ಪಡೆದು ವಿಜೇತ ತಂಡವಾಗಿ ಹೊರಹೊಮ್ಮಿದೆ. ವಿಜೇತ ತಂಡದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನಸಿಂಗ್ ರಾಠೋಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಂ.ಅಗಡಿ, ಡಿ.ವೈ.ಎಸ್.ಪಿ. ಎಸ್.ಎಲ್.ಸಿಂಗದ ಸೇರಿದಂತೆ ಮತ್ತಿತರರು ಚಿತ್ರದಲ್ಲಿದ್ದಾರೆ.

ಫೆಬ್ರವರಿ 18 ರಂದು ಆಕಾಶವಾಣಿ ಹಬ್ಬ – 2012

ಧಾರವಾಡ (ಕರ್ನಾಟಕ ವಾರ್ತೆ) ಫೆ 16: ಧಾರವಾಡ ಆಕಾಶವಾಣಿ ಕೇಂದ್ರ ಇದೇ ಫೆಬ್ರವರಿ 18 ರಂದು ಧಾರವಾಡದ ಅಣ್ಣಾಜಿರಾವ್ ಶಿರೂರ ರಂಗಮಂದಿರದಲ್ಲಿ (ಸೃಜನಾ) ಸಂಜೆ 6-15 ಕ್ಕೆ ಆಕಾಶವಾಣಿ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಶ್ರೀ ಸಿ.ಯು ಬೆಳ್ಳಕ್ಕಿ ಅವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಅಂಗವಾಗಿ ಅಂದು ಸಂಜೆ 4.30 ಗಂಟೆಗೆ ಬಾನುಲಿ ಭಾವಚಿತ್ರ ಏರ್ಪಡಿಸಿದ್ದು, ಆಕಾಶವಾಣಿ ಧಾರವಾಡದ ಚಿತ್ರಭಂಡಾರದಿಂದಾಯ್ದ ಅಪರೂಪದ ಭಾವಚಿತ್ರಗಳು ಪ್ರದರ್ಶನಗೊಳ್ಳಲಿವೆ. ನಂತರ ಸಂಗೀತೋತ್ಸವ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಖ್ಯಾತ ಆಕಾಶವಾಣಿ ಕಲಾವಿದರಿಂದ ಸುಗಮ ಸಂಗೀತ ನಡೆಯಲಿದ್ದು, ಶ್ರೀ ವಸಂತ ಕರ್ಕಾಪೂರ, ಶ್ರೀ ಎ.ಆರ್. ಅಚ್ಯುತ್‌ರಾವ್ ಹಾಗೂ ಶ್ರೀ ಜಗದೀಶ ಮಳಗಿ ಅವರು ಸಂಗೀತ ನಿರ್ದೇಶನ ನೀಡಲಿದ್ದಾರೆ. ವಾದ್ಯತ್ರಯದಲ್ಲಿ ವಾಯೋಲಿನ್-ಸಿತಾರ-ವಾಯೋಲಿನ್ ಶ್ರೀ ಬಿ.ಎಸ್. ಮಠ, ಶ್ರೀ ಛೋಟೆರಹಿಮತ್‌ಖಾನ್, ಶ್ರೀ ಅಕ್ಕಮಹಾದೇವಿ ಹಿರೇಮಠ, ಶ್ರೀ ರಾಜೇಂದ್ರ ನಾಕೋಡ ತಬಲಾ ಸಾಥ್ ನೀಡಲಿದ್ದಾರೆ. ಹೊನ್ನಾವರದ ಶ್ರೀಮತಿ ದೇವಿ.ಪಿ. ಅವರಿಂದ ಗಾಯನ ನಡೆಯಲಿದ್ದು, ಡಾ. ಪಂಚಾಕ್ಷರಿ ಹಿರೇಮಠ ಹಾರ್ಮೋನಿಯಂ ಹಾಗೂ ಶ್ರೀ ಉದಯ ಕುಲಕರ್ಣಿ ತಬಲಾ ಸಾಥ್ ನೀಡಲಿದ್ದಾರೆ.

ಕಾರ್ಯಕ್ರಮದ ಧ್ವನಿಮುದ್ರಣ ನಡೆಯುವ ಕಾರಣ ಸೂಚಿತ ಸಮಯಕ್ಕೆ 15 ನಿಮಿಷ ಮುಂಚಿತವಾಗಿ ಆಸಕ್ತ ಸಾರ್ವಜನಿಕರು ಉಪಸ್ಥಿತರಿರಲು ಅವರು ಕೋರಿದ್ದಾರೆ.

ಜಿಲ್ಲಾ ಮಟ್ಟದ ಯುವ ಪ್ರಶಸ್ತಿಗಾಗಿ ಅರ್ಜಿ

ಧಾರವಾಡ (ಕರ್ನಾಟಕ ವಾರ್ತೆ) ಫೆ 16: ಧಾರವಾಡದ ನೆಹರು ಯುವ ಕೇಂದ್ರ 2011-12ನೇ ಸಾಲಿಗಾಗಿ ಜಿಲ್ಲಾ ಮಟ್ಟದ ಯುವ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಯುವಕ ಯುವತಿಯರು ಕರ್ನಾಟಕ ಸಂಘ ಸಂಸ್ಥೆಗಳ ಕಾಯ್ದೆ 1960 ರಡಿಯಲ್ಲಿ ನೊಂದಣಿಯಾದ ಯುವ ಮಂಡಳಿಯ ಸದಸ್ಯರಾಗಿರಬೇಕು. ಕಳೆದ ಎಪ್ರೀಲ್ 1, 2010 ರಿಂದ ಮಾರ್ಚ್ 31, 2011 ರ ಅವಧಿಯಲ್ಲಿ ಸಮಾಜದ ಕೆಲಸ ಕಾರ್ಯಗಳನ್ನು ಮಾಡಿರಬೇಕು. ಅರ್ಜಿ ಜೊತೆಗೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಲಗತ್ತಿಸಬೇಕು. ಜಿಲಾ ಮಟ್ಟದ ಯುವ ಪ್ರಶಸ್ತಿಗೆ ರೂ.5,000/-ಗಳು ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಜಿಲ್ಲೆಯ ಆಸಕ್ತ ಯುವಕ ಯುವತಿಯರು ತಮ್ಮ ಪೂರ್ಣವಾದ ಅರ್ಜಿಗಳನ್ನು ಫೆಬ್ರವರಿ 25 ರೊಳಗಾಗಿ ನೆಹರು ಯುವ ಕೇಂದ್ರ, ಮಿನಿವಿಧಾನ ಸೌಧ, ಧಾರವಾಡ ಇವರಿಗೆ ಸಲ್ಲಿಸಲು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836 – 2444676 ಅನ್ನು ಸಂಪರ್ಕಿಸಬಹುದು.

ದ್ವಿತೀಯ ಪಿಯುಸಿ ಪರೀಕ್ಷೆ

ಧಾರವಾಡ (ಕರ್ನಾಟಕ ವಾರ್ತೆ)ಫೆ.16: ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಮಾರ್ಚ್ ಮಾಹೆಯಲ್ಲಿ ನಡೆಯಲಿದೆ. ಪರೀಕ್ಷೆಗೆ ಕುಳಿತ ವಿದ್ಯಾರ್ಥಿಗಳಿಗೆ ಕೇಂದ್ರ ಕಚೇರಿಯಿಂದ ಬಿಡುಗಡೆ ಮಾಡಿರುವ ಪ್ರವೇಶ ಪತ್ರಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿರುವ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಫೆಬ್ರವರಿ 17 ರಂದು ಪ್ರವೇಶ ಪತ್ರಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿಯಿಂದ ಪಡೆಯಲು ಉಪನಿರ್ದೇಶಕರಾದ ಶ್ರೀ ರವೀಂದ್ರ ರಿತ್ತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರವಾಸ ಕಾರ್ಯಕ್ರಮ

ಮಂಡ್ಯ, ಫೆ.16(ಕ.ವಾ):- ಸರ್ವೆ ಸೆಟಲ್‌ಮೆಂಟ್ ಅಂಡ್ ಲ್ಯಾಂಡ್ ರೆಕಾರ್ಡ್ಸ್‌ನ ಆಯುಕ್ತ ವಿ.ಪೊನ್ನುರಾಜ್ ರವರು ಫೆಬ್ರವರಿ 17 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಬೆಳಿಗ್ಗೆ 11.00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಮೋಜಿನಿ ಮತ್ತು ಪೋಡಿ ಆಂದೋಲನದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ನೇಮಕ್ಕ ಅರ್ಜಿ ಆಹ್ವಾನ

ಮಂಡ್ಯ, ಫೆ.16(ಕ.ವಾ):- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇವರ ಆಧೀನದಲ್ಲಿರುವ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ 2 ಸಾಮಾನ್ಯ ಕರ್ತವ್ಯ ವೈದ್ಯಾದಿಕಾರಿಗಳ ಹುದ್ದಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಎಂ.ಬಿ.ಬಿ.ಎಸ್ ವಿದ್ಯಾರ್ಹತೆಯುಳ್ಳ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪರಿಶಿಷ್ಟ ಜಾತಿ ಅಭ್ಯರ್ಥಿಗಳಲ್ಲಿ ಗ್ರಾಮೀಣ ಹಾಗೂ ಮಾಜಿ ಸೈನಿಕ ಆಭ್ಯರ್ಥಿಗಳಿಲ್ಲದಿದ್ದಲ್ಲಿ ಪರಿಶಿಷ್ಟ ಜಾತಿಯ ಸಮಾನ್ಯ ಅಭ್ಯರ್ಥಿಯನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತರು ನಿಗದಿತ ಅರ್ಜಿ ನಮೂನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಮಂಡ್ಯ ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಕಲಾತಿಗಳನ್ನು ಲಗತ್ತಿಸಿ ಫೆಬ್ರವರಿ 29 ಸಂಜೆ 5.00 ಯೊಳಗಾಗಿ ಸಲ್ಲಿಸುವುದು.

ಫೆ.17 ರಂದು ಕುಳಗಿಯಲ್ಲಿ ವನ್ಯಜೀವಿ ವಿಧಿ ವಿಜ್ಞಾನ ಕಾರ್ಯಾಗಾರ

ಕಾರವಾರ-16 : ವನ್ಯ ಜೀವಿ ಸಂರಕ್ಷಣೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆಯ ಅಗತ್ಯತೆ, ಮಹತ್ವ, ಸದ್ಯದ ಸ್ಥಿತಿಗತಿ ಕುರಿತು ಸ್ಥಳೀಯರಿಗೆ ಅರಿವು ಮೂಡಿಸುವ ಕಾರ್ಯ ಒಂದೆಡೆಯಾದರೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೂ ಸಂರಕ್ಷಣೆ, ಕಳ್ಳ ಸಾಗಾಣಿಕೆ ತಡೆ, ವಿಧಾನಗಳ ಕುರಿತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ವನ್ಯ ಜೀವಿಗಳ ಕಳ್ಳ ಸಾಗಾಣಿಕೆ ವ್ಯಾಪಾರ, ವಿಧಾನಗಳು ಖೊಟ್ಟಿ ಚರ್ಮಗಳ ಗುರುತಿಸುವಿಕೆ ಕುರಿತಂತೆ ಫೆಬ್ರವರಿ 17 ರಂದು ದಾಂಡೇಲಿ ಹತ್ತಿರದ ಕುಳಗಿ ನೇಚರ್ ಕ್ಯಾಂಪ್‌ನಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ರಾಜ್ಯ ಮಟ್ಟದ ವನ್ಯಜೀವಿ ವಿಧಿ ವಿಜ್ಞಾನ ಕಾರ್ಯಾಗಾರವು (ವೈಲ್ಡ್ ಲೈಫ್ ಫೊರೆನ್ಸಿಕ್ ವರ್ಕಶಾಪ್) ಜರುಗಲಿದ್ದು, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ: ಬಿ.ಕೆ.ಸಿಂಗ್ ಉದ್ಘಾಟಿಸುವರು. ಸವೋಚ್ಛ ನ್ಯಾಯಾಲಯದಲ್ಲಿ ಪರಿಸರಪರ ಪ್ರಕರಣಗಳ ವಕಾಲತ್ತು ನಡೆಸುವ ಖ್ಯಾತ ನ್ಯಾಯವಾದಿ ರಿಕ್ವಿತ್ ದತ್ತಾ, ವೈಲ್ಡ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯಸ್ಥ ಡಾ: ಎಸ್.ಪಿ.ಗೋಯಲ್ ಹಾಗೂ ಟ್ರಾಫಿಕ್ ಇಂಡಿಯಾದ ಮುಖ್ಯಸ್ಥ ಸಮೀರ್ ಸಿನ್ನಾ ಉಪನ್ಯಾಸ ನೀಡುವರೆಂದು ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ: ಸುನಿಲ ಪನ್ವಾರ ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ವನ್ಯ ಜೀವಿಗಳ ಕಳ್ಳ ಸಾಗಾಣಿಕೆಯ ವಿಧಾನಗಳು ಎಲ್ಲಿಂದ ಹೇಗೆ ಬಂತು, ಪ್ರಾಣಿಯ ವಿವಿಧ ಅಂಗಾಂಗಗಳ ವ್ಯಾಪಾರ, ಅಸಲಿ-ನಕಲಿ ಗುರುತಿಸುವಿಕೆ, ಕುರಿತು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳೀಗೆ ತರಬೇತಿ ನೀಡಲಾಗುವುದೆಂದು ಪನ್ವಾರ ತಿಳಿಸಿದ್ದಾರೆ.

ಹುಲಿ ಯೋಜನೆ : ನೂರಾರು ಕುಟುಂಬಗಳು ಸ್ಥಳಾಂತರಕ್ಕೆ ಸಿದ್ಧ : ದಾಂಡೇಲಿ-ಅಣಶೀ ಹುಲಿ ಸಂರಕ್ಷಿತ ಯೋಜನೆಯಡಿಯ 886 ಚ.ಕೀ. ವ್ಯಾಪ್ತಿಯಲ್ಲಿ 52 ಅರಣ್ಯದಲ್ಲಿರುವ ನೂರಾರು ಕುಟುಂಬಗಳು ಸ್ಥಳಾಂತರಗೊಳ್ಳಲು ಹಾಗೂ ಪರಿಹಾರ ಪಡೆದುಕೊಳ್ಳಲು ಸಿದ್ಧರಿದ್ದಾರೆ. ಈವರೆಗೆ 52 ಗ್ರಾಮಗಳು 500 ಕ್ಕೂ ಹೆಚ್ಚು ಕುಟುಂಬಗಳು ಸ್ಥಳಾಂತರಕ್ಕೆ ಅರ್ಜಿ ನೀಡಿದ್ದು ಕಳೆದ ನಾಲ್ಕು ವರ್ಷಗಳಿಂದ ಪರಿಹಾರದ ನಿರೀಕ್ಷೆಯಲ್ಲಿವೆ. ಹುಲಿ ಸಂರಕ್ಷಣೆ ಯೋಜನೆಯಲ್ಲಿ ಸ್ಥಳಾಂತರಗೊಳ್ಳುವ ಕುಟುಂಬದ 18 ವರ್ಷ ಮೇಲ್ಪಟ್ಟ ಪುರುಷರಿಗೆ ತಲಾ 10 ಲಕ್ಷ ಪರಿಹಾರ ನೀಡಲಾಗುತ್ತದೆಯೆಂದು ಯೋಜನೆಯ ಹಿರಿಯ ಅಧಿಕಾರಿಗಳು 2007 ರಲ್ಲೇ ತಿಳಿಸಿದ್ದಾರೆ.

ಮೊದಲ ಹಂತದ 5 ಕೋಟಿ ರೂ.ಗಳ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಶೀಘ್ರವೇ ಹಣ ಬಿಡುಗಡೆಯಾಗಲಿದೆಯೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ: ಸುನಿಲ ಪನ್ವಾರ ತಿಳಿಸಿದ್ದಾರೆ. ಗುಂದ ಹತ್ತಿರದ ಅವುರ್ಲಿ ಗ್ರಾಮದ ರಾಮಚಂದ್ರ ಭಾಗ್ವತ ಸ್ಥಳಾಂತರಕ್ಕೆ ಎರಡು ವರ್ಷಗಳಿಂದಲೇ ಸಿದ್ಧರಾಗಿದ್ದು ಪರಿಹಾರವನ್ನು ಎದುರು ಕಾಯುತ್ತಿದ್ದಾರೆ. ಹುಲ್ಲು ಹಾಗೂ ಬಿದಿರಿನ ಗುಡಿಸಲಿನಲ್ಲೇ ವಾಸವಾಗಿರುವ ರಾಮಚಂದ್ರ 2.5 ಎಕರೆ ತೋಟವನ್ನು ಹೊಂದಿದ್ದು ಮನೆ ಕಟ್ಟುವ ಅಥವಾ ದುರಸ್ತಿಗೆ ತಲೆ ಹಾಕಿಲ್ಲ. ಸ್ಥಳಾಂತರದ ಪರಿಹಾರ ದೊರೆತರೆ ಮನೆ ದುರಸ್ತಿ ಬಿಟ್ಟು ಬೇರೆಡೆ ವಾಸವಾಗಲು ಬಯಸಿದ್ದಾರೆ.

ಬೇಟೆ ಪ್ರಕರಣಗಳ ಇಳಿಮುಖ : ಕಳೆದ ನಾಲ್ಕು ವರ್ಷಗಳಿಂದ ಕೇವಲ ನಾಲ್ಕು ಬೇಟೆ ಪ್ರಕರಣಗಳು ಕಂಡು ಬಂದಿದ್ದು ವನ್ಯ ಪ್ರಾಣಿಗಳ ಬೇಟೆಯು ಗಣನೀಯವಾಗಿ ಇಳಿಮುಖಗೊಂಡಿದ್ದು ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಗುತ್ತಿದೆಯೆನ್ನುತ್ತಾರೆ. ಡಾ: ಸುನಿಲ ಪನ್ವಾರ ಕಳೆದೆರಡು ವರ್ಷಗಳಿಂದ 52 ಗ್ರಾಮಗಳ ಸುಮಾರು 2000 ವಿದ್ಯಾರ್ಥಿಗಳಿಗೆ ನಿಯಮಿತವಾಗಿ ವನ್ಯಜೀವಿ ಸಂರಕ್ಷಣೆ ಹಾಗೂ ಮಹತ್ವ ಕುರಿತಂತೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬೇಟೆ ನಿಯಂತ್ರಣಕ್ಕೆ 12 ಕೇಂದ್ರಗಳನ್ನು ತೆರೆಯಲಾಗಿದೆ. ಪರಿಸರವಾದಿಗಳಾದ ನರಸಿಂಹ ಛಾಪಖಂಡ ರವಿ ಡೇರೆಕರ, ಸುದರ್ಶನ ಹೆಗಡೆ ಅಶ್ವಥ ಹೆಗಡೆ ಯುವಪಡೆಯು ಅನೇಕ ಬೀದಿ ನಾಟಕಗಳನ್ನು ಪ್ರದರ್ಶಿಸಿ ಗ್ರಾಮಸ್ಥರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ. ಬಹುತೇಕ ಮಕ್ಕಳು ಕಾಡು ಪ್ರಾಣಿಗಳ ಮಾಂಸಕ್ಕೆ ನಿರ್ಭಂಧ ಹೇರಿದ ಅನೇಕ ಉದಾಹರಣೆಗಳು ಸಹ ಕಂಡು ಬಂದಿವೆ.