Government of Karnataka

Department of Information

Saturday 21/01/2017

ರಾಜ್ಯ ವಾರ್ತೆ 09-01-2017

Date : ಸೋಮವಾರ, ಜನವರಿ 9th, 2017

ಪ್ರಧಾನ ಮಂತ್ರಿಯವರ ನಿರ್ಗಮನ

ಬೆಂಗಳೂರು, ಜ.08: (ಕರ್ನಾಟಕ ವಾರ್ತೆ): ಪ್ರವಾಸಿ ಭಾರತೀಯ ದಿವಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ಆಗಮಿಸಿದ್ದ ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಕಾರ್ಯಕ್ರಮ ಉದ್ಘಾಟನೆ ನಂತರ ಇಂದು ಮಧ್ಯಾಹ್ನ ಹೆಚ್.ಎ.ಎಲ್.ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದರು.

ಈ ಸಂದರ್ಭದಲ್ಲಿ ಸನ್ಮಾನ್ಯ ರಾಜ್ಯಪಾಲರಾದ ವಜೂಭಾಯಿ ರೂಢಾಭಾಯಿ ವಾಲಾ, ಕೇಂದ್ರ ಸಚಿವರಾದ ಅನಂತಕುಮಾರ್, ಕೃಷಿ ಸಚಿವರಾದ ಕೃಷ್ಣ ಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾz sಸುಭಾಷ್ ಚಂದ್ರ ಕುಂಟಿಯಾ, ಪೊಲೀಸ್ ಮಹಾನಿರ್ದೇಶಕರಾದ ಓಂಪ್ರಕಾಶ್, ಬೆಂಗಳೂರು ಪೊಲೀಸ್ ಆಯುಕ್ತರಾದ ಪ್ರವೀಣಸೂದ್ ಹಾಗೂ ಮತ್ತಿತರ ಗಣ್ಯರು ಹಾಜರಿದ್ದು ಪ್ರಧಾನ ಮಂತ್ರಿಗಳನ್ನು ಬೀಳ್ಕೊಟ್ಟರು.