Government of Karnataka

Department of Information

Saturday 21/01/2017

ರಾಜ್ಯ ವಾರ್ತೆ 09-01-2017

Date : ಸೋಮವಾರ, ಜನವರಿ 9th, 2017

ಪತ್ರಿಕಾ ಆಮಂತ್ರಣ

1. ಸಫಾಯಿ ಕರ್ಮಚಾರಿಗಳ/ಮ್ಯಾನ್ಯುಯಲ್ ಸ್ಕ್ಯಾವೆಂಜರ್‍ಗಳ ಸಬಲೀಕರಣ ಕುರಿತು ಕಾರ್ಯಾಗಾರ
ಉದ್ಘಾಟನೆ:
ಹೆಚ್. ಆಂಜನೇಯ,
ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು
ಸ್ಥಳ: ಕೊಠಡಿ ಸಂಖ್ಯೆ 419, ನಾಲ್ಕನೇ ಮಹಡಿ, ವಿಕಾಸ ಸೌಧ, ಬೆಂಗಳೂರು
ದಿನಾಂಕ: 10-1-2017 ಮಂಗಳವಾರ ಸಮಯ: ಬೆಳಿಗ್ಗೆ 10-00 ಗಂಟೆಗೆ

2. ಕರ್ನಾಟಕ ಸಾಹಿತ್ಯ ಅಕಾಡೆಮಿ 2016 ರ ಗೌರವ ಪ್ರಶಸ್ತಿ ಆಯ್ಕೆ ಹಾಗೂ 2015ರ ಪುಸ್ತಕ ಬಹುಮಾನ ಆಯ್ಕೆ ಕುರಿತು
ಪತ್ರಿಕಾಗೋಷ್ಠಿ:
ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ
ಸ್ಥಳ: ಅಧ್ಯಕ್ಷರ ಕೊಠಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು
ದಿನಾಂಕ: 10-1-2017 ಮಂಗಳವಾರ ಸಮಯ: ಸಂಜೆ 4-00 ಗಂಟೆಗೆ

ಕೃಷಿ ಬೆಲೆ ಆಯೋಗದಲ್ಲಿ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಜನವರಿ 9(ಕರ್ನಾಟಕ ವಾರ್ತೆ) ; ಕೃಷಿ ಬೆಲೆ ಆಯೋಗಕ್ಕೆ ಅಗತ್ಯವಿರುವ ತಾಂತ್ರಿಕ ಸಹಾಯಕರ 1 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕಾರಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಕೃಷಿ, ಅರ್ಥಶಾಸ್ತ್ರ ಅಥವಾ ಕೃಷಿ ಮಾರುಕಟ್ಟೆ ಅಥವಾ ಕೃಷಿ ಸಂಖ್ಯಾ ಶಾಸ್ತ್ರ ಅಥವಾ ಕೃಷಿ ವಿಸ್ತರಣೆ ವಿಷಯಗಳಲ್ಲಿ ಸ್ನಾತಕೋತ್ತರ /ಪಿ.ಹೆಚ್.ಡಿ ಪದವಿ ಹೊಂದಿದ್ದು ಜೊತೆಗೆ ಕಂಪ್ಯೂಟರ್ ಮಾಡೆಲ್/ಸಾಫ್ಟ್‍ವೇರ್‍ಗಳನ್ನು ಬಳಸುವ ಜ್ಞಾನವಿರಬೇಕು. ಅರ್ಜಿ ಸಲ್ಲಿಸಲು ಜನವರಿ 20 ಕಡೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ http://raitamitra.kar.nic.in ನೋಡಬಹುದಾಗಿದೆ ಅಥವಾ ದೂರವಾಣಿ ಸಂಖ್ಯೆ: 080-22074118 ಸಂಪರ್ಕಿಸಬಹುದಾಗಿದೆ ಎಂದು ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಿ ಕೆಲಸ – ಕಾಗೋಡು ತಿಮ್ಮಪ್ಪ

ಬೆಂಗಳೂರು, ಜನವರಿ 9(ಕರ್ನಾಟಕ ವಾರ್ತೆ) ; ರಾಜ್ಯದಲ್ಲಿ ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಗಂಭೀರ ಪರಿಸ್ಥಿತಿ ಎದುರಾಗಬಹುದೆಂದು ಅಂದಾಜಿಸಲಾಗಿದ್ದು, ಕುಡಿಯುವ ನೀರು ಸರಬರಾಜಿಗೆ ಮೊದಲ ಆದ್ಯತೆ ನೀಡಿರುವ ಸರ್ಕಾರ ಇದಕ್ಕೆ 350 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ವಿಧಾನ ಸೌಧದ ತಮ್ಮ ಕಛೇರಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ಬರ ಅಧ್ಯಯನಕ್ಕೆ ಸಚಿವರ ನಾಲ್ಕು ತಂಡಗಳು ತೆರಳಿದ್ದು, ಅಧ್ಯಯನ ಮುಗಿದಿದೆ. ವರದಿ ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು ಬರದಿಂದ ರಾಜ್ಯದಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ. ನಷ್ಠ ಆಗಿದೆ. ಕೇಂದ್ರದಿಂದ ರೂ. 1754 ಕೋಟಿ ಬಂದಿದ್ದು, ಇನ್ನೂ 900 ಕೋಟಿ ರೂ. ಹಣ ನೀರಿಕ್ಷಿಸಲಾಗಿದೆ ಎಂದರು.

ನಮಗೆ ಬೆಳೆ ಪರಿಹಾರದ ಹಣ ಮೂರು ಸಾವಿರ ಕೋಟಿ ರೂ. ಆಗಿದ್ದು ರೈತರಿಗೆ ನಿಯಮಾವಳಿ ಪ್ರಕಾರ ಒಂದು ಹೆಕ್ಟೇರ್ ಪ್ರದೇಶಕ್ಕೆ 6350 ರೂ. ಪರಿಹಾರ ನೀಡಬೇಕಾಗುತ್ತದೆ ಎಂದ ಸಚಿವರು ಮುಂದಿನ ಮಾರ್ಚ್, ಏಪ್ರಿಲ್ ವೇಳೆಗೆ ಬೇಸಿಗೆ ಇನ್ನೂ ಗಂಭೀರವಾಗಲಿದ್ದು ಕುಡಿಯುವ ನೀರು ಪೂರೈಕೆಗಾಗಿಯೇ ನಮಗೆ 1500 ಕೋಟಿ ರೂ. ಹಣ ಬೇಕಾಗುತ್ತದೆ. ಸರ್ಕಾರ ಹೊಸ 33 ತಾಲ್ಲೂಕುಗಳ ರಚನೆಗೆ ಚಿಂತನೆ ನಡೆಸಿದ್ದು ಮುಂದಿನ ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಆನ್‍ಲೈನ್ ಮೂಲಕ ಎ.ಪಿ.ಎಲ್. ಕಾರ್ಡು ಪಡೆಯುವ ಕಾರ್ಯಕ್ರಮಕ್ಕೆ ಚಾಲನೆ- ಯು.ಟಿ. ಖಾದರ್

ಬೆಂಗಳೂರು, ಜನವರಿ 9(ಕರ್ನಾಟಕ ವಾರ್ತೆ) : ಆನ್‍ಲೈನ್ ಮೂಲಕ ಎ.ಪಿ.ಎಲ್. ಪಡಿತರ ಕಾರ್ಡ್ ವಿತರಿಸುವ ಸರ್ಕಾರದ ಮಹತ್ವದ ಯೋಜನೆಗೆ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ಇಂದು ಚಾಲನೆ ನೀಡಿದರು.

ವಿಕಾಸ ಸೌಧದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿದ ಸಚಿವರು ಇಂದಿನಿಂದಲೇ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಕ್ಷಣವೇ ತಾತ್ಕಾಲಿಕ ಎ.ಪಿ.ಎಲ್. ಪಡಿತರ ಚೀಟಿ ಪಡೆಯಬಹುದು, ತಾತ್ಕಾಲಿಕ ಪಡಿತರ ಚೀಟಿ ಪಡೆದ 15 ದಿನಗಳ ಒಳಗಾಗಿ ಖಾಯಂ ಪಡಿತರ ಚೀಟಿ ತಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.

ಎ.ಪಿ.ಎಲ್. ಕಾರ್ಡ್ ಪಡೆಯಲು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್‍ಮಾಡಿ ahar.kar.nic.in   ಗೆ ಲಾಗಿನ್ ಆದಲ್ಲಿ ಹೊಸ ಕಾರ್ಡ್ ಪಡೆಯುವ ಮಾಹಿತಿ ಲಭ್ಯವಾಗಲಿದೆ ಎಂದ ಸಚಿವರು ತಮ್ಮ ಮನೆಯಲ್ಲಿ ಅಥವಾ ಸೈಬರ್ ಸೆಂಟರ್‍ಗಳಲ್ಲಿಯೂ ಮಾಹಿತಿ ನೀಡಿ ಎ.ಪಿ.ಎಲ್. ಕಾರ್ಡ್ ಪಡೆಯಬಹುದಾಗಿದೆ .ದೇಶದಲ್ಲೇ ಮೊದಲ ಬಾರಿಗೆ ಪಡಿತರ ಚೀಟಿ ಪಡೆಯುವ ಯೋಜನೆಯನ್ನು ಸಕಾಲ ಯೋಜನೆಯಡಿ ಸೇರಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಬಿ.ಪಿ.ಎಲ್. ಕಾರ್ಡ್‍ಗಳನ್ನು ಪಡೆಯಲು ನ್ಯಾಯಬೆಲೆ ಅಂಗಡಿಗಳಲ್ಲೂ ಅರ್ಜಿ ಸಲ್ಲಿಸುವಂತಹ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದ ಸಚಿವರು ಬಿ.ಪಿ.ಎಲ್. ಕಾರ್ಡ್‍ಗಳನ್ನು ಅರ್ಹರಿಗೆ 15 ದಿನಗಳ ಒಳಗಾಗಿ ನೀಡಲು ಕ್ರಮ ಜರುಗಿಸಲಾಗುವುದು ಎಂದರು.

ಉಚಿತ ಗ್ಯಾಸ್ ಸ್ಟೌವ್ ವಿತರಣೆ:

ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಈಗಾಗಲೇ ಮೂರು ಲಕ್ಷ ಜನರು ಅರ್ಜಿ ಸಲ್ಲಿಸಿದ್ದು ಆಯ್ಕೆಯಾಗಿರುವ ಎಲ್ಲಾ ಫಲಾನುಭವಿಗಳಿಗೂ ಎರಡು ಬರ್ನರ್‍ಗಳುಳ್ಳ ಗ್ಯಾಸ್‍ಸ್ಟೌವ್‍ನ್ನು ಉಚಿತವಾಗಿ ನೀಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದು ಇದಕ್ಕೆ ಅವರು ಒಪ್ಪಿದ್ದಾರೆ, ಸಧ್ಯದಲ್ಲೇ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಯು.ಟಿ. ಖಾದರ್ ತಿಳಿಸಿದರು.

ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆ

ಬೆಂಗಳೂರು, ಜನವರಿ 9(ಕರ್ನಾಟಕ ವಾರ್ತೆ) : ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿಕರ್ನಾಟಕ ರಾಜ್ಯದ ಪ್ರೌಢ ಶಾಲೆಗಳಲ್ಲಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2016-17 ನೇ ಶೈಕ್ಞಣಿಕ ವರ್ಷದಲ್ಲಿ ರಾಜ್ಯಮಟ್ಟದ ಯುವ ಸಂಸತ್ ಸ್ವರ್ಧೆಗಳನ್ನು ನಡೆಸಲಾಗುತ್ತಿದ್ದು, ಈ ಸ್ವರ್ಧೆಗಳನ್ನು ಬೆಂಗಳೂರಿನ ಕಬ್ಬನ್‍ಉದ್ಯಾನವನದಲ್ಲಿರುವ ಕೆ.ಜಿ.ಎಸ್. ಕ್ಲಬ್‍ನ ಚನ್ನಬಸಪ್ಪ ಸಭಾಂಗಣದಲ್ಲಿ ಜನವರಿ 12 ಮತ್ತು 13 ರಂದು ಪ್ರೌಢಶಾಲಾ ವಿಧ್ಯಾರ್ಥಿಗಳಿಗೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಆಯಾ ದಿನಗಳಂದು ಸ್ವರ್ಧೆಯಲ್ಲಿ ವಿಜೇತರಾದವರಿಗೆ ಅಪರಾಹ್ನ 3.00 ಗಂಟೆಗೆ ಬಹುಮಾನ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಯುವ ಸಂಸತ್ ಸ್ವರ್ಧೆಯ ಬಹುಮಾನ ವಿತರಣಾ ಸಮಾರಂಭವು ಜನವರಿ 12 ರಂದು ಮಧ್ಯಾಹ್ನ 3-00 ಗಂಟೆಗೆ ಕಬ್ಬನ್‍ಪಾರ್ಕ್‍ನ ಶ್ರೀ ಚೆನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಭಾಗವಹಿಸುವರು.

election-1
election-2
election-3