Government of Karnataka

Department of Information

Tuesday 12/12/2017

ರಾಜ್ಯ ವಾರ್ತೆ 19-01-2017

Date : ಗುರುವಾರ, ಜನವರಿ 19th, 2017

ಪತ್ರಿಕಾ ಆಮಂತ್ರಣ

1. ಜನ-ಮನ
ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಂವಾದ

ಕೆ.ಜೆ. ಜಾರ್ಜ್. ಬೆಂಗಳೂರು ನಗರ ಅಭಿವೃದ್ಧಿ ಮತ್ತು ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರು.

ದಿನಾಂಕ: 20-01-2017 ಶುಕ್ರವಾರ. ಸಮಯ: ಬೆಳಿಗ್ಗೆ 11.00 ಗಂಟೆಗೆ
ಸ್ಥಳ: ಕೃಷ್ಣಪ್ರಿಯ ಕಲ್ಯಾಣ ಮಂಟಪ, ಕೆಂಗೇರಿ, ಬೆಂಗಳೂರು.

2. ಪತ್ರಿಕಾಗೋಷ್ಠಿ:
ರಾಜ್ಯ ಚಾನಲೈಸಿಂಗ್ ಏಜೆನ್ಸಿಗಳಿಗೆ ನೀಡುವ “ಅತ್ಯುತ್ತಮ ಕಾರ್ಯಕ್ಷಮತಾ ಪ್ರಶಸ್ತಿ” ಕುರಿತಂತೆ

ಜೆ. ಹುಚ್ಚಪ್ಪ, ಅಧ್ಯಕ್ಷರು, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿ,

ದಿನಾಂಕ: 20-01-2017 ಶುಕ್ರವಾರ. ಸಮಯ: ಬೆಳಿಗ್ಗೆ 11.00 ಗಂಟೆಗೆ
ಸ್ಥಳ: ನಂ 16-ಡಿ, ದೇವರಾಜ ಅರಸು ಭವನ, 4ನೇ ಮಹಡಿ, ಮಿಲ್ಲರ್ ಟ್ಯಾಂಕ್ ಬಂಡ್ ಏರಿಯಾ, ವಸಂತನಗರ, ಬೆಂಗಳೂರು – 560 052.

3. ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಉದ್ಫಾಟನಾ ಸಮಾರಂಭ:

ಉದ್ಫಾಟನೆ: ಎಸ್.ಎಸ್. ಮಲ್ಲಿಕಾರ್ಜುನ, ತೋಟಗಾರಿಕಾ ಸಚಿವರು
ಅಧ್ಯಕ್ಷತೆ:
ಆರ್.ವಿ. ದೇವರಾಜ್, ಶಾಸಕರು, ಚಿಕ್ಕಪೇಟೆ
ದಿನಾಂಕ: 20-01-2017 ಶುಕ್ರವಾರ, ಸಮಯ: ಬೆಳಿಗ್ಗೆ 11.00 ಗಂಟೆಗೆ.
ಸ್ಥಳ: ಲಾಲ್‍ಬಾಗ್‍ನ ಗಾಜಿನ ಮನೆ, ಬೆಂಗಳೂರು.

4. ಕಾರ್ಯಾಗಾರ
ನೇಚರ್ ದ ಗರ್ಲ್ ಚೈಲ್ಡ್ – ನರ್ಚರ್ ದ ನೇಚರ್

ಉದ್ಘಾಟನೆ:
ಪ್ರಧಾನ ಕಾರ್ಯದರ್ಶಿಗಳು,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ದಿನಾಂಕ: 20-01-2017 ಶುಕ್ರವಾರ ಸಮಯ: 11.00 ಗಂಟೆಗೆ
ಸ್ಥಳ: ಮಹಾರಾಣಿ ಕಲೆ ಮತ್ತು ವಾಣಿಜ್ಯ ಕಾಲೇಜು
ಶೇಷಾದ್ರಿ ರಸ್ತೆ, ಬೆಂಗಳೂರು

ಪತ್ರಿಕಾ ಪ್ರಕಟಣೆ

ಮನೆಯಂಗಳದಲ್ಲಿ ಮಾತುಕತೆ – ತಿಂಗಳ ಅತಿಥಿಯಾಗಿ ಹಿರಿಯ ರಂಗರ್ಮಿ ಹಾಗೂ ಚಲನಚಿತ್ರ ನಟ ವೈಜನಾಥ್ ಬಿರಾದರ್

ಬೆಂಗಳೂರು, ಜನವರಿ 19 (ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕøತಿ ಇಲಾಖೆಯವತಿಯಿಂದ ಪ್ರತಿ ಮಾಹೆ ನಡೆಸುವ “ಮನೆಯಂಗಳದಲ್ಲಿ ಮಾತುಕತೆ” ಕಾರ್ಯಕ್ರಮದಲ್ಲಿ ಜನವರಿ 21 ರ ಶನಿವಾರದಂದು ಸಂಜೆ 4.00 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಿರಿಯ ರಂಗಕರ್ಮಿ ಹಾಗೂ ಚಲನಚಿತ್ರ ನಟರಾದ ವೈಜನಾಥ್ ಬಿರಾದರ್ ಅವರು ತಿಂಗಳ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅಂದು ಮಧ್ಯಾಹ್ನ 3.00 ಗಂಟೆಗೆ ಸಿದ್ಧರಾಮ ಪೊಲೀಸ್ ಪಾಟೀಲ ಕುಕನೂರು ಅವರಿಂದ ಹಿಂದೂಸ್ತಾನಿ ಗಾಯನವನ್ನು ಸಹ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಶ್ರೇಷ್ಠ ಲೇಖಕ ಪ್ರಶಸ್ತಿ – ಪುಸ್ತಕ ಸಲ್ಲಿಸಲು ಅವಧಿ ವಿಸ್ತರಣೆ

ಬೆಂಗಳೂರು, ಜನವರಿ 19 (ಕರ್ನಾಟಕ ವಾರ್ತೆ) ; ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕೃಷಿ, ವಿಜ್ಞಾನ, ತಂತ್ರಜ್ಞಾನ ಮತ್ತು ವೈದ್ಯಕೀಯ ವಿಷಯಗಳಲ್ಲಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಿರುವ ಲೇಖಕರಿಂದ 2016-17 ನೇ ಸಾಲಿನ ‘ಶ್ರೇಷ್ಠ ಲೇಖಕ’ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿತ್ತು.

ಜನವರಿ 2015 ರಿಂದ ಡಿಸೆಂಬರ್ 2016 ರೊಳಗೆ ಪುಸ್ತಕ ಪ್ರಕಟವಾಗಿರಬೇಕು, ಲೇಖಕರು ಮತ್ತು ಪ್ರಕಾಶಕರಿಂದ ಬಂದ ಬೇಡಿಕೆಯನ್ನು ಪರಿಗಣಿಸಿ, ಪುಸ್ತಕ ಸಲ್ಲಿಸಲು ನಿಗದಿಯಾದ ಕೊನೆಯ ದಿನಾಂಕವನ್ನು ಜನವರಿ 31, 2017 ಕ್ಕೆ ವಿಸ್ತರಿಸಲಾಗಿದೆ. ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ www.kstacademy.in ಅನ್ನು ವೀಕ್ಷಿಸಬಹುದಾಗಿದೆ ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಿಗೆ “ಪುಸ್ತಕ ದಾಸೋಹ” ಯೋಜನೆಯಡಿ ಕನ್ನಡ ಪುಸ್ತಕ ವಿತರಣೆ

ಬೆಂಗಳೂರು, ಜನವರಿ 19 (ಕರ್ನಾಟಕ ವಾರ್ತೆ) ; ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕನ್ನಡ ಮಾಧ್ಯಮದ ಶಾಲಾ ಮಕ್ಕಳಿಗೆ ವಿದ್ಯಾರ್ಥಿ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡ ಅಬಿವೃದ್ಧಿ ಪ್ರಾಧಿಕಾರದ ಭಾಷಾ ಸಂಸ್ಕೃತಿ ರಕ್ಷಣೆಯ ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಪ್ರಾಧಿಕಾರದ ಅಧ್ಯಕ್ಷರ ಭರವಸೆಯನುಸಾರ ಕರ್ನೂಲು ಜಿಲ್ಲೆಯ 45 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಜ್ಞಾನಾರ್ಜನೆಗಾಗಿ ಪುಸ್ತಕ ದಾಸೋಹ ಯೋಜನೆಯಡಿ ಕನ್ನಡ ಪುಸ್ತಕ ಕಾರ್ಯಕ್ರಮವನ್ನು ಜನವರಿ 27 ರ ಅಪರಾಹ್ನ 12 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಆವರಣ, ಗೂಳ್ಯಂ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ನೂರಾರು ಶೀರ್ಷಿಕೆಗಳ ಅತ್ಯುತ್ತಮ ಕನ್ನಡ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್, ಸಪ್ನಾ ಬುಕ್‍ಹೌಸ್, ಅಂಕಿತ ಪ್ರಕಾಶನ, ಅಭಿನವ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್ ಹಾಗೂ ಕನ್ನಡ ಲೇಖಕಿಯರ ಸಂಘದಂತಹ ಪ್ರಮುಖ ಸಂಘ ಸಂಸ್ಥೆಗಳು ಪ್ರಾಧಿಕಾರಕ್ಕೆ ಈ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿವೆ.