Chief Minister

Download Sri Siddaramaiah Profile here.

ಸಿದ್ದರಾಮಯ್ಯ ಈ ನಾಡು ಕಂಡ ಪ್ರಾಮಾಣಿಕ ರಾಜಕಾರಣಿ. ಮೈಸೂರು ಇವರ ತವರು ಜಿಲ್ಲೆ. ರಾಜ್ಯದ ಏಳಿಗೆಗಾಗಿ ದುಡಿದ ರಾಜಕಾರಣಿಗಳಲ್ಲಿ ಒಬ್ಬರು. ಹಣಕಾಸು ಸಚಿವರಾಗಿ ಜಾರಿಗೆ ತಂದ ಯೋಜನೆಗಳು ಇಂದಿಗೂ ಜನಪ್ರಿಯವಾಗಿವೆ. ನೇರ ನಡೆ-ನುಡಿಗೆ ಹೆಸರಾಗಿರುವ ಸಿದ್ದರಾಮಯ್ಯ ಅವರು ಕರ್ನಾಟಕದ ಪ್ರಮುಖ ಹಾಗೂ ಪ್ರಭಾವಿ ರಾಜಕಾರಣಿ. ರಾಜಕೀಯ ಜೀವನದಲ್ಲಿ ಮೂರು ಬಾರಿ ಹಣಕಾಸು ಸಚಿವರಾಗಿ ಜನಪರವಾದ ಅತ್ಯುತ್ತಮ ಬಜೆಟ್‌ಗಳನ್ನು ನೀಡಿದ್ದಾರೆ. ಎರಡು ಬಾರಿ ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈಗ ನಾಡಿನ 21ನೇ ಮುಖ್ಯಮಂತ್ರಿಯಾಗಿದ್ದಾರೆ.

1948ರ ಆಗಸ್ಟ್ 12ರಂದು ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ ಜನಿಸಿದರು. ರಾಜ್ಯದ ಮೂರನೇ ಅತೀ ದೊಡ್ಡ ಸಮುದಾಯವಾದ ಕುರುಬ ಸಮುದಾಯವನ್ನು ಇವರು ಪ್ರತಿನಿಧಿಸುತ್ತಾರೆ. ಆರಂಭದಲ್ಲಿ ವಕೀಲರಾಗಿ ಮೈಸೂರಿನಲ್ಲಿ ಕೆಲಸ ಮಾಡಿದ್ದಾರೆ. ಕೆಲಕಾಲ ಕಾನೂನನ್ನು ಕಲಿಸುವ ಕೆಲಸವನ್ನೂ ಮಾಡಿದ್ದಾರೆ.

ಭಾರತೀಯ ಲೋಕ್ ದಳದಿಂದ 1983ರಲ್ಲಿ 7ನೇ ವಿಧಾನ ಸಭೆಗೆ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಆರಿಸಿಬಂದಿದ್ದರು. ಬಳಿಕ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಅವರು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.  1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಆರಿಸಿ ಬಂದ ಅವರು ಮೊದಲ ಬಾರಿಗೆ ಪಶುಸಂಗೋಪನಾ ಸಚಿವರಾಗಿದ್ದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಪ್ರಮುಖ ಖಾತೆಗಳೆನಿಸಿದ ರೇಷ್ಮೆ, ಪಶುಸಂಗೋಪನೆ ಮತ್ತು ಸಾರಿಗೆಯಂತಹ ಜವಾಬ್ದಾರಿ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು.

1989ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಪ್ರಭಾವಿ ರಾಜಕಾರಣಿ ರಾಜಶೇಖರಮೂರ್ತಿ ಅವರ ಎದುರು ಪರಾಭವಗೊಂಡಿದ್ದರು. 1992ರಲ್ಲಿ ಜನತಾ ದಳದ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷವನ್ನು ಹೆಚ್ಚಿನ ರೀತಿಯಲ್ಲಿ ಸಂಘಟಿಸಿದ್ದರು. ಜನತಾದಳ ವಿಭಜನೆಯಾದಾಗ ಅವರು ಜನದಾ ದಳ (ಎಸ್)ಗೆ ಸೇರ್ಪಡೆಗೊಂಡಿದ್ದರು. ಅಲ್ಲದೆ, ರಾಜ್ಯ ಘಟಕದ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದರು. 1994ರಲ್ಲಿ ಮತ್ತೆ ಆಯ್ಕೆಯಾದ ಅವರು ಜನತಾ ದಳ ಸರ್ಕಾರದಲ್ಲಿ ಮೊದಲ ಬಾರಿಗೆ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಜೆ.ಹೆಚ್. ಪಟೇಲ್ ಅವರು ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ, ಸತತ ಐದು ಬಜೆಟ್‌ಗಳನ್ನು ಮಂಡಿಸಿದ್ದಾರೆ, ಇದು ಸೇರಿದಂತೆ ಒಟ್ಟು ಅತಿ ಹೆಚ್ಚು ಅಂದರೆ ಏಳು ಬಾರಿ ಆಯವ್ಯಯ ಮಂಡಿಸಿದ ಏಕೈಕ ಹಣಕಾಸು ಸಚಿವನೆಂಬ ದಾಖಲೆ ಇವರ ಹೆಸರಿನಲ್ಲಿದೆ.

ಕರ್ನಾಟಕದಲ್ಲಿ ಹಣಕಾಸು ಸಚಿವರಾಗಿ ದುಸ್ಥಿತಿಯಲ್ಲಿದ್ದ ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ತಮ್ಮ ಸಾಮಾನ್ಯಜ್ಞಾನ ಮತ್ತು ಕಟ್ಟುನಿಟ್ಟಿನ ಆರ್ಥಿಕ ಶಿಸ್ತಿನ ಮೂಲಕ ಸುಸ್ಥಿತಿಗೆ ತಂದು ನಿಲ್ಲಿಸಿದ ಹಿರಿಮೆ ಇವರಿಗೆ ಸಲ್ಲುತ್ತದೆ. ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಪದ್ಧತಿಯನ್ನು ಪರಿಚಯಿಸಿದ ಶ್ರೇಯವನ್ನು ಇವರು ಹೊಂದಿದ್ದಾರೆ.

ಅಧಿಕಾರಿ ವಲಯದಲ್ಲಿ ನಡುಕ ಹುಟ್ಟಿಸುವ ಸಿದ್ದರಾಮಯ್ಯನವರು ಸಮಾಜ ಮುಖಿ ಚಿಂತನೆಗೆ ಹೆಸರಾದವರು. ಹಿಂದುಳಿದ ವರ್ಗಗಳ ಅಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿರುವ ಇವರು ತಮ್ಮ ಆಡಳಿತಾವಧಿಯಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದಾರೆ.

1999ರ ಚುನಾವಣೆಯಲ್ಲಿ ಪರಾಭವಗೊಂಡ ಅವರು 2004ರಲ್ಲಿ ಮತ್ತೆ ಚುನಾಯಿತರಾಗಿದ್ದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಗೂಡಿ ಮೈತ್ರಿ ಸರ್ಕಾರವನ್ನು ರಚಿಸಿದಾಗ ಮತ್ತೊಮ್ಮೆ ಉಪ ಮುಖ್ಯಮಂತ್ರಿಯಾಗಿದ್ದರು.

ಅನಿರೀಕ್ಷಿತ ಬೆಳವಣಿಗೆಗಳು ನಡೆದು 2006ರಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು 257 ಮತಗಳ ಅಂತರದಿಂದ ಗೆದ್ದಿದ್ದರು. 2008ರಲ್ಲಿ ಮತ್ತೊಮ್ಮೆ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಐದನೇ ಬಾರಿಗೆ ಆಯ್ಕೆಯಾಗಿ, ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಗೌರವ ತಂದುಕೊಟ್ಟಿದ್ದರು.

2013ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವಲ್ಲಿ ಗಮನಾರ್ಹ ಕೊಡುಗೆ ನೀಡಿದ ಸಿದ್ದರಾಮಯ್ಯ ಅವರು ಶಾಸಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.

ಸಿದ್ದರಾಮಯ್ಯ ಅವರು ನಡೆದು ಬಂದ ರಾಜಕೀಯ ಹಾದಿ

1. ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನವನ್ನು 1978ರಲ್ಲಿ ಮೈಸೂರು ತಾಲೂಕು ಬೋರ್ಡ್ ಸದಸ್ಯರಾಗಿ ಆರಂಭಿಸಿದರು.

2. 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕ ದಳದಿಂದ ಕರ್ನಾಟಕ ವಿಧಾನ ಸಭೆಗೆ  ಪ್ರಥಮವಾಗಿ ಪ್ರವೇಶಿಸಿದರು. ನಂತರ ಅವರು ಜನತಾ ಪಕ್ಷಕ್ಕೆ ಸೇರಿದರು. ಅದೇ ಅವಧಿಯಲ್ಲಿ ಕನ್ನಡ ಕಾವಲು ಸಮಿತಿಯ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು.

3. 1985ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮರು ಆಯ್ಕೆಗೊಂಡರು. ರಾಮಕೃಷ್ಣ ಹೆಗ್ಡೆಯವರ ಮಂತ್ರಿ ಮಂಡಲದಲ್ಲಿ ಪಶು ಸಂಗೋಪನೆ, ರೇಷ್ಮೆ, ಸಾರಿಗೆ ಇಲಾಖೆಯ ಮಂತ್ರಿಯಾಗಿದ್ದರು.

4. 1989ರಲ್ಲಿ ನಡೆದ ಚುನಾವಣೆಯಲ್ಲಿ ಅಂದಿನ ಪ್ರಭಾವಿ ನಾಯಕ ರಾಜಶೇಖರ್ ಮೂರ್ತಿ ಎದುರು ಪರಾಭವಗೊಂಡರು.

5. 1992ರಲ್ಲಿ ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.

6. 1994ರಲ್ಲಿ ದೇವೇಗೌಡರ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿಗಳಾಗಿದ್ದರು.

7. 1996ರಲ್ಲಿ ಜೆ.ಎಚ್.ಪಟೇಲ್ ನೇತೃತ್ವದ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು.

8. ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ದೇವೇಗೌಡರ ನೇತೃತ್ವದಲ್ಲಿನ ಜಾತ್ಯತೀತ ಜನತಾದಳದ ರಾಜ್ಯಾಧ್ಷರಾಗಿ ಆಯ್ಕೆಗೊಂಡರು.

9. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಪರಾಭವಗೊಂಡರು.

10. 2004ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾದ ಸಿದ್ದರಾಮಯ್ಯನವರು ಧರಂಸಿಂಗ್ ನೇತೃತ್ವದ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಮಂತ್ರಿಯಾಗಿ ಕಾರ್ಯ ನಿರ್ವಹಿಸಿದರು.

11. 2006ರಲ್ಲಿ ಜನತಾ ದಳವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿದರು. ಅಂದು ನಡೆದ ಉಪಚುನಾವಣೆಯಲ್ಲಿ ಸಿದ್ದರಾಮಯ್ಯನವರು 257 ಮತಗಳಿಂದ ಶಿವಬಸಪ್ಪರವರನ್ನು ಪರಾಭವಗೊಳಿಸಿದರು.

12. 2008ರಲ್ಲಿ ವರುಣಾ ಕ್ಷೇತ್ರದಿಂದ ಮರು ಆಯ್ಕೆಗೊಂಡರು. ವಿಧಾನ ಸಭೆಯ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು.

13. 2013ರಲ್ಲಿ ಮತ್ತೆ ಇದೇ ವರುಣಾ ಕ್ಷೇತ್ರದಿಂದ ಆಯ್ಕೆಗೊಂಡು ಮುಖ್ಯಮಂತ್ರಿಯಾಗಿದ್ದಾರೆ.

14. ಸತತ ಐದು ಬಾರಿ ಹಾಗೂ ಒಟ್ಟು ಅತಿ ಹೆಚ್ಚು ಅಂದರೆ ಏಳು ಬಾರಿ ಆಯವ್ಯಯ ಮಂಡಿಸಿದ ಏಕೈಕ ಹಣಕಾಸು ಸಚಿವನೆಂಬ ದಾಖಲೆ.

15. ರಾಜ್ಯದಲ್ಲಿ ಮೌಲ್ಯವರ್ಧಿತ ತೆರಿಗೆ ಪದ್ಧತಿಯನ್ನು ಪರಿಚಯಿಸಿದ ಶ್ರೇಯವನ್ನು ಇವರು ಹೊಂದಿದ್ದಾರೆ.

16. ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿರುತ್ತಾರೆ. ಅವರ ಮೊದಲ ಮಗನ ಹೆಸರು ರಾಕೇಶ್.  ಅವರ ಚಿಕ್ಕ ಮಗ ಡಾ.ಯತೀಂದ್ರ ಡಾಕ್ಟರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಮಾಣ ವಚನ ಸಮಾರಂಭಕ್ಕೆ ವಾರ್ತಾ ಇಲಾಖೆಯ ಅವಶ್ಯಕತೆಗಳು

ಮುಖ್ಯಮಂತ್ರಿಗಳು ಮತ್ತು ಅವರ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ದಾಖಲೀಕರಿಸುವ ಮಹತ್ವದ ಕಾರ್ಯವನ್ನು ಇಲಾಖೆಯು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದೆ.

ಸಮಾರಂಭವನ್ನು ದಾಖಲೀಕರಿಸುವುದರ ಜೊತೆಗೆ ಅವುಗಳನ್ನು ಮಾಧ್ಯಮಗಳಿಗೆ ಇಲಾಖೆಯ ವತಿಯಿಂದಲೇ ಬಿಡುಗಡೆ ಮಾಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಸಂಸ್ಥೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ, ಕೆಲವೊಂದು ಸಂದರ್ಭಗಳಲ್ಲಿ ಉಂಟಾಗುವ ನೂಕು ನುಗ್ಗಲಿನಲ್ಲಿ ಅತ್ಯುತ್ತಮ ಛಾಯಾಚಿತ್ರಗಳನ್ನು ತೆಗೆಯಲು ಮತ್ತು ವಿಡಿಯೋ ಚಿತ್ರೀಕರಣ ಮಾಡಲು ಅಡಚಣೆ ಉಂಟಾಗುತ್ತಿದೆ. ಹೀಗಾಗಿ, ಇಲಾಖೆಯ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಹಕರಿಗೆ ವೇದಿಕೆಯ ಮೇಲಿಂದಲೇ ಚಿತ್ರೀಕರಿಸಲು ಅವಕಾಶ ನೀಡುವುದು.

ಸಮಾರಂಭವನ್ನು ಅಚ್ಚುಕಟ್ಟಾಗಿ ದಾಖಲೀಕರಿಸಲು ಅನುವಾಗುವಂತೆ ಇಲಾಖೆಯ ಛಾಯಾಗ್ರಾಹಕರು ಮತ್ತು ವಿಡಿಯೋ ಕ್ಯಾಮರಾಮನ್‌ಗಳಲ್ಲಿ ಆಯ ಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಚಿತ್ರಿಕರಿಸಲು ಅವಕಾಶ ಮಾಡಿಕೊಡಬೇಕಾಗಿರುತ್ತದೆ.

ಮುಖ್ಯಮಂತ್ರಿಗಳ ಪ್ರಮಾಣ ವಚನದ ಸಮಾರಂಭದ ವರದಿ ಮಾಡಲು ಬೆಂಗಳೂರಿನ ಸುಮಾರು 400ಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಆಗಮಿಸಲಿದ್ದಾರೆ. ಅಲ್ಲದೆ ದೆಹಲಿ ಮತ್ತು ಇನ್ನಿತರ ಪ್ರಮುಖ ರಾಜ್ಯಗಳಿಂದಲೂ ಸುಮಾರು 100 ಮಂದಿ ಆಗಮಿಸಲಿದ್ದಾರೆ. ಇವರೆಲ್ಲರಿಗೂ ಸಮಾರಂಭದಲ್ಲಿ ಪ್ರತ್ಯೇಕ ಆಸನ ಮತ್ತು ಪಾಸ್‌ನ ವ್ಯವಸ್ಥೆಯನ್ನು ಮಾಡಬೇಕಾಗಿರುತ್ತದೆ.

ರಾಜ್ಯದ್ದೇ ಆದ ಕನ್ನಡದ 9 ಸುದ್ದಿವಾಹಿನಿಗಳು ಮತ್ತು 3 ಪ್ರಾದೇಶಿಕ ಕನ್ನಡ ವಾಹಿನಿಗಳು, 15 ರಾಷ್ಟ್ರೀಯ ಹಿಂದಿ ಮತ್ತು ಇಂಗ್ಲೀಷ್‌ನ ವಾಹಿನಿಗಳು, ಪಕ್ಕದ ರಾಜ್ಯಗಳಾದ ಆಂಧ್ರ, ಕೇರಳ ಮತ್ತು ತಮಿಳುನಾಡಿನ 9 ಸುದ್ದಿವಾಹಿನಿಗಳು ಮತ್ತು ದೆಹಲಿಯ 3 ಮೂರು ವಾಹಿನಿಗಳು ವರದಿ ಮಾಡಲು ಸಮಾರಂಭಕ್ಕೆ ಆಗಮಿಸಲಿದ್ದಾರೆ. ಒಟ್ಟಾರೆಯಾಗಿ, 40 ರಿಂದ 45 ವಾಹಿನಿಗಳವರು ಆಗಮಿಸಲಿದ್ದಾರೆ. ಪ್ರತಿ ವಾಹಿನಿಯಿಂದ ಓರ್ವ ಕ್ಯಾಮರಾಮನ್ ಓರ್ವ ಸಹಾಯಕರು ಇರುತ್ತಾರೆ. ಹೀಗಾಗಿ ಸುಮಾರು 100 ರಿಂದ 125 ಮಂದಿಗೆ ಆಗುವಂತೆ ಪ್ರತ್ಯೇಕವಾದ ಕ್ಯಾಮರಾಮನ್‌ಗಳಿಗೆ ಮೀಸಲಾದ ವೇದಿಕೆಯನ್ನು ನಿರ್ಮಿಸಬೇಕಾಗುತ್ತದೆ.

ಹಾಗೆಯೇ, ವಿವಿಧ ಮಾಧ್ಯಮಗಳನ್ನು ಪ್ರತಿನಿಧಿಸುವ 150ಕ್ಕೂ ಹೆಚ್ಚು ಛಾಯಾಗ್ರಾಹಕರು (ಸ್ಟಿಲ್ ಫೋಟೋಗ್ರಾಫರ‍್ಸ್) ಸಮಾರಂಭವನ್ನು ಸೆರೆ ಹಿಡಿಯಲು ಬರುತ್ತಾರೆ. ಹೀಗಾಗಿ ಇವರಿಗೂ ಪ್ರತ್ಯೇಕವಾದ ವೇದಿಕೆಯನ್ನು ನಿರ್ಮಿಸುವುದು ಸೂಕ್ತವಾಗಿರುತ್ತದೆ.

ಪ್ರಮಾಣ ವಚನ ಕಾರ್ಯಕ್ರಮವನ್ನು 30ಕ್ಕೂ ಹೆಚ್ಚು ವಾಹಿನಿಗಳು ನೇರ ಪ್ರಸಾರ ಮಾಡುತ್ತವೆ. ಹೀಗಾಗಿ, ರಾಜ್ಯದ, ಹೊರ ರಾಜ್ಯದ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಗಳ ಓಬಿ ವ್ಯಾನ್‌ಗಳಿಗೆ ಸಮಾರಂಭ ನಡೆಯುವ ಸ್ಥಳದಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡುವುದು. ಪ್ರಮಾಣ ವಚನ ಸ್ವೀಕರಿಸಿದ ನಂತರ ನಡೆಯುವ ಮೊದಲ ಸಚಿವ ಸಂಪುಟ ಸಭೆ ಹಾಗೂ ಬಳಿಕ ನಡೆಯುವ ಪತ್ರಿಕಾಗೋಷ್ಠಿಗೆ ಸುಮಾರು 500 ಮಂದಿ ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕಾಗಿರುತ್ತದೆ.

ಸಂಜೆ ನಡೆಯುವ ಔತಕೂಟಕ್ಕೆ ಪ್ರಮುಖ ಪತ್ರಕರ್ತರನ್ನು ಆಹ್ವಾನಿಸುವುದು ವಾಡಿಕೆ, ಹೀಗಾಗಿ, ಎಲ್ಲಾ ಸುದ್ದಿವಾಹಿನಿಗಳ ಮತ್ತು ಪ್ರಮುಖ ಪತ್ರಿಕೆಗಳ ಸಂಪಾದಕರು ಮತ್ತು ಮುಖ್ಯವರದಿಗಾರರನ್ನು ಈ ಔತಣ ಕೂಟಕ್ಕೆ ಆಹ್ವಾನಿಸಲು ಅನುವಾಗುವಂತೆ 100 ಪಾಸ್‌ಗಳನ್ನು ನೀಡುವುದು.

ಎನ್.ಆರ್. ವಿಶುಕುಮಾರ್

ನಿರ್ದೇಶಕರು, ವಾರ್ತಾ ಇಲಾಖೆ

ಸಿದ್ದರಾಮಯ್ಯ ಅವರ ಬಾಲ್ಯ….

ಸಿದ್ದರಾಮಯ್ಯ ಅವರು 1948ರ ಆಗಸ್ಟ್ 12ರಂದು ಜನನಿಸಿದರು. ಮೈಸೂರು ಜಿಲ್ಲೆಯ ವರುಣಾ ಹೊಬಳಿಯ ಸಿದ್ದರಾಮಯ್ಯನಹುಂಡಿಯಲ್ಲಿ ಜನಿಸಿದರು. ಬಡ ರೈತ ಕುಟುಂಬದ ಹಿನ್ನೆಲೆಯಲ್ಲಿ ಜನಿಸಿದ ಅವರು, ಸದಾ ಬಡರೈತರ ಹಿತಕ್ಕಾಗಿ ಹಾತೊರೆಯುತ್ತಿದ್ದರು. ತಂದೆಯ ಜೊತೆಗಿನ ಹುಸಿಮುನಿಸಿದ ಹೊರತಾಗಿಯೂ ಸಿದ್ದರಾಮಯ್ಯ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿಧರಾದರು. ಬಳಿಕ ಛಲಬಿಡದೆ  ಕಾನೂನು ಪದವಿಧರಾದರು. ಸ್ವಲ್ಪ ಸಮಯ ವಕೀಲರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಆದರೆ, ಆಗಲೇ ಅವರಲ್ಲಿ ಮನೆ ಮಾಡಿತ್ತು ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಆನ್ಯಾಯಗಳ ಕುರಿತ ಒಂದು ರೀತಿಯಲ್ಲಿ ಜ್ಞಾನೋದಯ. ಹಾಗೆಂದು ಅವರು ಮುಂದುವರಿದ ವರ್ಗಗಳ ಅಥವಾ ಜಾತಿಗಳ ಕುರಿತಾಗಿ ಅಸಹ್ಯ ಅಥವಾ ಉಪೇಕ್ಷಿತ ಮನೋಭಾವ ಹೊಂದಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಸಕಲ ಜನ-ವರ್ಗಗಳ ನಾಯಕರಾಗಿ ರೂಪಿತಗೊಳ್ಳಲು ಸಾಧ್ಯವಾಯಿತು. ತಮ್ಮೆಲ್ಲಾ ಜೀವನವನ್ನು ಒಟ್ಟಾರೆ ಸಮಾಜದ ಪ್ರಗತಿ-ಅಭಿವೃದ್ಧಿಗಾಗಿ ಮೀಸಲಿಟ್ಟ ಸಿದ್ದರಾಮಯ್ಯ ಅವರು ಜನನಾಯಕರಾಗಿ ದಿನೇ ದಿನೇ ಪ್ರವರ್ಧಮಾನಕ್ಕೆ ಬಂದರು. ವಿದ್ಯಾರ್ಥಿ ಜೀವನದಲ್ಲೇ ಭಾರತದಲ್ಲಿ ಸಮಾಜವಾದಿ ತತ್ವದ ಪ್ರಬಲ ಪ್ರತಿಪಾದಕರಾದ ಡಾ. ರಾಮ ಮನೋಹರ ಲೋಹಿಯಾ ಚಿಂತನೆಯಿಂದ ಪ್ರಭಾವಿತರಾಗಿದ್ದ ಶ್ರೀ ಸಿದ್ದರಾಮಯ್ಯನವರು, ಆಗಲೇ ಕಾಲೇಜು ಮಟ್ಟದಲ್ಲಿ ತಮ್ಮ ವಾಕ್ಪಟುತ್ವದಿಂದ  ವಿದ್ಯಾರ್ಥಿಗಳ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಸಾಮಾಜಿಕ ನ್ಯಾಯದ ಕುರಿತು ಸಿದ್ದರಾಮಯ್ಯ ಅವರು ಪ್ರತಿಪಾದನೆ ಮಾಡುತ್ತಿದ್ದರೆ, ಇಡೀ ಸಭಾಂಗಣವೇ ನಿಶ್ಶಬ್ದವಾಗಿ ಅವರ ಮಾತುಗಳನ್ನು ಆಲಿಸುತ್ತಿತ್ತು. ಇದೇ ಪರಿಸ್ಥಿತಿ, ಮುಂದೆ ಅವರು ಅರ್ಥ ಸಚಿವರಾಗಿ ಮಾತನಾಡುತ್ತಿದ್ದಾಗ ಅಥವಾ ವಿರೋಧಿ ಪಕ್ಷದ ನಾಯಕರಾಗಿ ಆರ್ಥಿಕ ವಿಷಯದ ಬಗ್ಗೆ ತಮ್ಮ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾಗ ಇಡೀ ಸದನವೇ ಮೌನವಾಗಿ, ಅವರು ಹೇಳುತ್ತಿದ್ದ ಅಥವಾ ನೀಡುತ್ತಿದ್ದ ಸಲಹೆ-ಸೂಚನೆಗಳನ್ನು ಪಕ್ಷಬೇಧ ಮರೆತು ಸಚಿವ-ಶಾಸಕರೆಲ್ಲರೂ ನೋಟ್ ಮಾಡಿಕೊಳ್ಳುತ್ತಿದ್ದರು.

ರಾಜಕೀಯ ಜೀವನ…

ಭಾರತೀಯ ಲೋಕದಳ ಪಾರ್ಟಿಯ ಮೂಲಕ ೭ನೇ ಕರ್ನಾಟಕ ರಾಜ್ಯ ವಿಧಾನಸಭೆಯನ್ನು ಶಾಸಕರಾಗಿ 198೩ರಲ್ಲಿ ಸಿದ್ದರಾಮಯ್ಯ ಪ್ರವೇಶಿದರು.  ಇದೇ ಸಂದರ್ಭದಲ್ಲಿ ಕನ್ನಡವನ್ನು ರಾಜ್ಯ ಸರ್ಕಾರದ ಭಾಷೆಯನ್ನಾಗಿ ಮತ್ತು ಕನ್ನಡವನ್ನು ಈ ನೆಲದಲ್ಲಿ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ರಚನೆಯಾದ ಕರ್ನಾಟಕ ಕಾವಲು ಸಮಿತಿಯ ಅಧ್ಯಕ್ಷರಾಗಿ ಕನ್ನಡ ಭಾಷೆಯ ಉನ್ನತಿಗೆ ಕಾರಣರಾದರು. ಬಳಿಕ ರೇಷ್ಮೆ ಸಚಿವರಾಗಿ ಕರ್ನಾಟಕ ರಾಜ್ಯದಲ್ಲಿ ಬಡತನದಿಂದ ಬಳಲುತ್ತಿರುವ ರೈತರಿಗೆ ರೇಷ್ಮೆ ಕೃಷಿಯ ಮೂಲಕ ಮತ್ತೆ ಜೀವ ಸೆಲೆ ಉಕ್ಕುವಂತೆ ಮಾಡಿದರು. 1985ರ ಮಧ್ಯಂತರ ಚುನಾವಣೆಯಲ್ಲಿ 8ನೇ ರಾಜ್ಯ ವಿಧಾನಸಭೆಗೆ ಮತ್ತೆ ಶಾಸಕರಾಗಿ ಸಿದ್ದರಾಮಯ್ಯ ಅವರು ಆಯ್ಕೆಯಾದರು. ಈ ಸಂದರ್ಭದಲ್ಲಿ ಪಶುಸಂಗೋಪನಾ ಸಚಿವರಾದರು ಅವರು ಮಾಡಿದ ಜನಪರ ಕಾರ್ಯಗಳನ್ನು ಮಾಡಿದರು. ಬಳಿಕ  ಸಾರಿಗೆ ಸಚಿವರಾಗಿ ಅಭೂತಪೂರ್ವ ಕೆಲಸಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರರಾದರು.

ಸಮೂಹ ಜನನಾಯಕರಾದ ಸಿದ್ದರಾಮಯ್ಯ ಅವರು, ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಈ ಸಂದರ್ಭದಲ್ಲಿ ಹೊರಹೊಮ್ಮಿದರು. ಸ್ವತಃ ಆರ್ಥಿಕ ತಜ್ಞರಾಗಿರುವ ಸಿದ್ದರಾಮಯ್ಯ, ಏಳು ಬಾರಿ ರಾಜ್ಯದ ಬಜೆಟ್ ಅನ್ನು ಮಂಡಿಸಿದ್ದಾರೆ. ಪ್ರತಿಬಾರಿಯ ಅವರ ಬಜೆಟ್ ನಲ್ಲೂ ಖೋತಾ ಬಜೆಟ್ ಅನ್ನುವುದು ಇರಲೇ ಇಲ್ಲ. ರಾಜ್ಯದ ಬೊಕ್ಕಸವನ್ನು ಹೇಗೆ ತುಂಬಿಸಬೇಕು, ಆ ಮೂಲಕ ರಾಜ್ಯವನ್ನು ಯಾವ ರೀತಿಯಲ್ಲಿ ಆರ್ಥಿಕ ಪ್ರಗತಿ ಪಥದಲ್ಲಿ ನಡೆಸಬೇಕು ಎನ್ನುವುದು ಅವರಿಗೆ ಚೆನ್ನಾಗಿ ತಿಳಿದಿದೆ. ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ, ಆರ್ಥಿಕ, ಕೈಗಾರಿಕಾ, ಸಾಮಾಜಿಕ ಮತ್ತು ಅಧಿಕಾರಶಾಹಿ ಒತ್ತಡಕ್ಕೆ ಅವರು ಯಾವತ್ತೂ ಮಣಿದಿಲ್ಲ.

ಸಚಿವರಾಗಿ ಸಿದ್ದರಾಮಯ್ಯ…

ಎರಡು ಬಾರಿ ಅಂದರೆ 1996 ಮತ್ತು 2೦೦4ರಲ್ಲಿ ಯಶಸ್ವಿಯಾಗಿ ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಸಿದ್ದರಾಮಯ್ಯ ಅವರು, ಏಳು ಬಾರಿ  ರಾಜ್ಯ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಾತಿ-ಧರ್ಮ-ಮತಗಳ ಬೇಧವಿಲ್ಲದೆ ಸರ್ವ ಭಾವ-ಸಮಬಾಳ್ವೆ ಸಿದ್ಧಾಂತದಡಿ, ಬಡ ಜನರ ಅದರಲ್ಲೂ ಬಡ ರೈತರಿಗೆ ಅನುಕೂಲ ಮಾಡುವ ಎಲ್ಲಾ ಅಂಶಗಳನ್ನೂ ತಮ್ಮ ಬಜೆಟ್ ಗಳಲ್ಲಿ ಮಂಡಿಸಿ ಜನಪ್ರಿಯರಾಗಿದ್ದಾರೆ. ಉಪ ಮುಖ್ಯಮಂತ್ರಿ-ಹಣಕಾಸು ಸಚಿವರಾಗಿ ಬಡ ರೈತರ ಸಾಲ ಮನ್ನಾದಂತಹ ಮಹತ್ವದ ಜೊತೆಗೆ ಸರ್ಕಾರಗಳಿಗೆ ಸವಾಲೆನಿಸುವಂತಹ ಯೋಜನೆಗಳನ್ನು ರಾಜ್ಯದ ಒಟ್ಟಾರೆ ಹಣಕಾಸು ಪರಿಸ್ಥಿತಿಯ ಮೇಲೆ ಹೆಚ್ಚಿನ ಹೊರೆ ಬೀಳದಂತೆ ಮಾಡಿದಂತಹ ಮುತ್ಸದ್ಧಿ ರಾಜಕಾರಣಿ ಶ್ರೀ ಸಿದ್ದರಾಮಯ್ಯನವರು. ಎಲ್ಲರನ್ನೂ ಸಮಾನ ಪ್ರಜೆಗಳೆಂದು ಪರಿಗಣಿಸಿ, ಯಾರಿಗೂ ಹೆಚ್ಚಿನ ಹೊರೆ ಅದರಲ್ಲೂ ಹಣಕಾಸಿನ ಹೆಚ್ಚಿನ ಹೊರೆ ಬೀಳದಂತೆ ಮಾಡಿ ತಮ್ಮ ಸಚಿವ ಸ್ಥಾನದ ಘನತೆಗೂ ಧಕ್ಕೆ ಬಾರದ ರೀತಿಯಲ್ಲಿ ನಿರ್ವಹಣೆ ಮಾಡಿದವರು ಸಿದ್ದರಾಮಯ್ಯನವರು. ಸಿದ್ದರಾಮಯ್ಯನವರು ಕೇವಲ ಒಂದು ಜನಾಂಗ ಅಥವಾ ಜಾತಿಯ ನಾಯಕರಾಗಿಲ್ಲ. ಬದಲಾಗಿ ಸಮಸ್ತ ಮತ್ತು ಸಮಗ್ರ ಕರ್ನಾಟಕದ ಶ್ರೇಯೋಭಿವೃದ್ಧಿಯನ್ನು ಬಯಸಿ, ರಾಜ್ಯವನ್ನು ಸಮಗ್ರ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುವ ನಾಯಕರಾಗಿದ್ದಾರೆ. ಈಗ ರಾಜ್ಯದ ಪರಮೋಚ್ಚ ಸ್ಥಾನವನ್ನು ಅಂದರೆ ಮುಖ್ಯಮಂತ್ರಿ ಸ್ಥಾನವನ್ನು ಪಡೆಯುತ್ತಿರುವ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಹಾಗೆಯೇ, ಅವರನ್ನು ಇಂತಹ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಮತದಾನ ಮಾಡಿ ಗೆಲ್ಲಿಸಿಕೊಟ್ಟ ರಾಜ್ಯದ 6 ಕೋಟಿ ಜನತೆಗೆ ಹೃತ್ಪೂರ್ವಕ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ನೀವು ಏನು ಅಭಿವೃದ್ಧಿಯ ಕನಸು ಕಂಡಿದ್ದೀರಿ ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಖಂಡಿತಾ ಪ್ರಾಮಾಣಿಕವಾಗಿ ಶ್ರಮವಹಿಸುತ್ತಾರೆ ಎಂದು ಆಶಿಶೋಣ.


Sri Siddaramaiah - A profile

Hard worker, team player, sincere and transparent, Former Deputy Chief Minister and Congress leader,  Sri Siddaramaiah was born on 12th August 1948  at Siddaramanahundi, a village in Varuna Hobli of Mysore district. Sri Siddaramaiah hails from a poor farming community. Coming from a rural family, Sri Siddaramaiah is the maiden sophomore of his family who graduated from Mysore University with B.Sc. degree later completed Law degree from the same University and pursued it as a profession for some time with his practice and teaching.

Sri Siddaramaiah as an eloquent speaker in his student days was known for his eloquence and oratory power. His early life was influenced by Socialism advocated by Dr. Ram Monohar Lohia. To explore more meaningful and effective avenues to achieve social justice for the downtrodden and the weaker sections of the society, he bade adieu to his law pursuits and entered the political field.

Contesting on Loka Dal Party, he entered the 7th Karnataka Legislative Assembly as its member in 1983 from Chamundeshwari Constituency in Mysore district. Later, he joined the ruling Janata Party. He was the first President of Kannada Watchdog Committee (Kannada Kavalu Samiti) set up to supervise the implementation of Kannada as an official language.   He worked assiduously for the enrichment of Kannada language and Culture. Later, he became the State Minister for Sericulture and was instrumental in the all round development of Sericulture Department and Silk Industry in the State.

During the mid-term poll in 1985, Sri Siddaramaiah was re-elected from the same Constituency for the 8th Karnataka Legislative Assembly. He became the Minister for Animal Husbandry and Veterinary Services, which he served with remarkable agility and distinction. People still recall the implementation of innovative programmes and policies as a Minister for Transport.

Sri. Siddaramaiah undoubtedly, is a leader of the masses. He is popular among all sections of the society in general and a symbol of hope for the backward class in particular.

He won again in the 1994  elections to the Karnataka Legislative Assembly from the Chamundeshwari constituency.   Again, the intensity of his hard work came to the fore when he became the Minister for Finance, which displayed his unswerving love for the people of Karnataka. He filled the coffers of the state, repaid the debts of previous Governments and the State never again went for an overdraft for successive years. It was an amazing feat by any standards. He pooled effectively the resources for development activities. In fact, M/s CRISIL, a leading independent credit rating company, in its report had placed Karnataka as a state with sound financial position in the country.

Sri Siddaramaiah has always proved himself to be a pioneering and a visionary leader with a clear self made mandate for a prosperous Karnataka.  In August  2004, Assembly Election again he was adorned with a responsibility of being the Deputy Chief Minister of Karnataka together with finance portfolio. He strived for better economic growth and improvement of the revenue in tax system and excise through his initiatives of plugging the leakages. All his budgets were appreciated by all classes of people of the state as well as the central economists. He was instrumental in introducing the VAT in the state.

After conducting three “AHINDA” conventions, he quit  JD(S) in 2005.  After an offer by the Congress Party, he joined with his followers in 2006.  A new chapter in his political life began with the joining of the Congress Party.  In December 2007 he faced the election in Chamundeshwari Constituency and won the election.

Congress Party  appointed him Chairman of the KPCC Publicity Committee of  Elections in 2008. Later he was appointed as the Leader of the Opposition in the Legislative Assembly.

He toured all over Karnataka in addition to his Padayatra from Bangalore to Bellary in protest against illegal mining. He revived Congress Party in a systematic manner in view of Karnataka State Legislative Assembly Elections 2013. He took the initiative of developing leadership within the Congress Party and took into confidence the grass-root level leaders and assisted them in working for the party at various levels much ahead of the Assembly Elections.

The Congress Party has won 121 seats with a comfortable majority to form the new government on its own in the state after a gap of 9 years.
Sri Siddaramaiah is a straight forward, transparent and efficient financial management expert who has presented seven successful budgets.                         Sri Siddaramaiah is an asset to the Congress Party and the state.

At the personal front, Sri Siddaramaiah lives with his wife and two sons forming a happy and loving family.