Government of Karnataka

Department of Information

Friday 01/04/2016

ಜಿಲ್ಲಾ ವಾರ್ತೆ 03-02-2016

Date : ಬುಧವಾರ, ಫೆಬ್ರವರಿ 3rd, 2016

ಮತದಾರರಿಗೆ NOTA ಚಲಾಯಿಸಲು ಅವಕಾಶ

ಬೆಂಗಳೂರು, ಫೆ, 3: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರನು ಯಾವುದೇ ಅಭ್ಯರ್ಥಿಯ ಪರವಾಗಿ ಮತ ನೀಡಲು ಬಯಸದಿದ್ದ ಪಕ್ಷದಲ್ಲಿ ಮತ ಪತ್ರದಲ್ಲಿ, ಅಂಚೆ ಮತ ಪತ್ರದಲ್ಲಿ ಮತ್ತು ವಿದ್ಯುನ್ಮಾನ ಮತ ಯಂತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಕೆಳಗಿನ ಅಂಕಣದಲ್ಲಿ ‘’ಮೇಲ್ಕಂಡ ಯಾರೂ ಅಲ್ಲ’’ (NOTA) ಎಂದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಮತದಾರರು ತಮ್ಮ ಇಚ್ಛೆಯಂತೆ ಓಔಖಿಂ ಮತ ನೀಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯು ಕಡ್ಡಾಯ ಮತದಾನ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅರಿವು ಮೂಡಿಸುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ

ಬೆಂಗಳೂರು, ಫೆ, 3: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಡೆಯುವ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ನಗರ/ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ವಾಸಿಗರು ಮತ್ತು ಮತದಾರರಿಗೆ ಹಣ, ಮದ್ಯ ಇತ್ಯಾದಿ ವಸ್ತುಗಳ ಆಮಿಷ ನೀಡುವುದು ಮತ್ತು ಹಂಚುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಬ್ರಷ್ಠಾಚಾರ ಪ್ರಕರಣವನ್ನು ದಾಖಲಿಸಲಾಗುವುದೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದ್ದಾರೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಕಛೇರಿಗಳಲ್ಲಿ ತೆರೆಯಲಾಗಿರುವ ನಿಯಂತ್ರಣ ಕೊಠಡಿಯಲ್ಲಿ ದೂರು ದಾಖಲಿಸಿ ಹಾಗೂ ನೀತಿ ಸಂಹಿತೆ ಉಲ್ಲಂಘಿಸಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಪ್ರಕರಣದಡಿ ಶಿಕ್ಷಾರ್ಹ ಅಪರಾಧವಾಗಿದ್ದು, 5 ವರ್ಷಗಳ ಅವಧಿವರೆಗೆ ಯಾವುದೇ ಸ್ಥಳೀಯ ಪ್ರಾಧಿಕಾರದ ಸದಸ್ಯತ್ವಕ್ಕೆ ಅನರ್ಹಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 080-22211106, 22240614 (ಜಿಲ್ಲಾಧಿಕಾರಿಗಳ ಕಛೇರಿ), 22232050 (ಬೆಂಗಳೂರು ಉತ್ತರ), 38560696, 28560763 (ಬೆಂಗಳೂರು ಉತ್ತರ (ಅಪರ), 22223152 (ಬೆಂಗಳೂರು ದಕ್ಷಿಣ), 9535113676 (ಆನೇಕಲ್) 9481633873, 9480852007, 9980538272 (ಜಿಲ್ಲಾ ಪಂಚಾಯಿತಿ ಕಛೇರಿ)