Government of Karnataka

Department of Information

Wednesday 09/11/2016

ಜಿಲ್ಲಾ ವಾರ್ತೆ 05-11-2016

Date : ಶನಿವಾರ, ನವೆಂಬರ 5th, 2016

ಜಿಲ್ಲಾ ಸುದ್ದಿಗಳು

ಪಿಸಿ & ಪಿ ಎನ್ ಡಿ ಟಿ ( ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994ರ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಕಾರ್ಯಾಗಾರ

ಗದಗ (ಕರ್ನಾಟಕ ವಾರ್ತೆ) ನವೆಂಬರ್ 5: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ ಇಲಾಖೆ, ವಾರ್ತಾ ಮತ್ತು ಪ್ರಚಾರ ಇಲಾಖೆ , ವಕೀಲರ ಸಂಘ , ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಗರ್ಭದಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಪತ್ತೆ ತಂತ್ರ ವಿಧಾನಗಳ ( ಲಿಂಗ ಆಯ್ಕೆ ನಿಷೇಧ) ಅಧಿನಿಯಮ 1994 ಕಾಯ್ದೆಯ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಕಾರ್ಯಾಗಾರ 2016 ನ್ನು ದಿ: 7-11-2016 ರಂದು ಬೆ.10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯದ ಜಲಸಂಪನ್ಮೂಲ ಇಲಾಖೆ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕ ರಾಮಕೃಷ್ಣ ದೊಡ್ಡಮನಿ, ಜಿ.ಪಂ. ಅಧ್ಯಕ್ಷ ವಾಸಣ್ಣ ಕುರಡಗಿ, ಜಿಲ್ಲೆಯ ಸಂಸದರು, ವಿಧಾನಪರಿಷತ್ ಹಾಗೂ ವಿಧಾನಸಭಾಸದಸ್ಯರು, ಗದಗ ಜಿ.ಪಂ. ಉಪಾಧ್ಯಕ್ಷರು, ಗದಗ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು, ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಜಿಲ್ಲಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ, ಜಿ.ಪಂ. ಸದಸ್ಯರು, ಜಿಲ್ಲಾಧಿಕಾರಿಗಳು , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಐ.ಎಂ.ಎ ದ ಅಧ್ಯಕ್ಷರು, ಐ.ಆರ್ .ಐ.ಎ ದ ಪ್ರತಿನಿಧಿಗಳು, ಪಿ.ಸಿ. ಮತ್ತು ಪಿ.ಎನ್.ಡಿ.ಟಿ. ಘಟಕದ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷರು ಆಗಮಿಸುವರು. ಡಾ. ಪ್ರಶಾಂತ ಅಡಿಗ, ಡಾ. ರಾಹುಲ ಶಿರೋಳ, ಡಾ. ವೈ.ಕೆ. ಭಜಂತ್ರಿ ಅವರು ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ಏಕೀಕರಣಕ್ಕೆ 60 ವರ್ಷ ಮಧುರ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ಗಾನ-ಯಾನ

ಗದಗ(ಕರ್ನಾಟಕ ವಾರ್ತೆ) ನವೆಂಬರ್ 5 : ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಇವುಗಳ ಸಹಯೋಗದಲ್ಲಿ ವಾರ್ತಾ ಮತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕರ್ನಾಟಕ ಏಕೀಕರಣದ 60 ವರ್ಷಗಳ ವಜ್ರಮಹೋತ್ಸವದ ಅಂಗವಾಗಿ ಕನ್ನಡನಾಡು ನುಡಿ, ಇತಿಹಾಸ, ಕಲೆ ಮತ್ತು ಸಾಹಿತ್ಯ ಶ್ರೀಮಂತಿಕೆಯ ಕುರಿತು ಬೆಂಗಳೂರಿನ ಮೆ. ಹಂಸಲೇಖಾ ಇಮೇಜಸ್ ಪ್ರೈ.ಲಿ. ತಂಡದ ಗಾಯಕರುಗಳಾದ ಶ್ರೀಮತಿ ಲತಾ ಹಂಸಲೇಖಾ, ಶ್ರುತಿ, ಪಾತೀಮಾ, ಶಶಿ, ಗುರು, ದೀಪಕ, ವಾದ್ಯ ತಂಡದವರಾದ ಸತ್ಯ ನಾರಾಯಣ, ಪ್ರಸನ್ನ, ಬಾಲಾಜಿ, ಅನಂತು ಹಾಗೂ ರಾಘವ ಇವರುಗಳಿಂದ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮವಾದ “ ಗಾನ ಯಾನ” ಕಾರ್ಯಕ್ರಮವನ್ನು ನವೆಂಬರ್ 6 ರಂದು ಸಂಜೆ 6 ಗಂಟೆಗೆ ನಗರದ ಮುನ್ಸಿಪಲ್ ಕಾಲೇಜ್ ಅವರಣದಲ್ಲಿ ಏರ್ಪಡಿಸಲಾಗಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ, ಪಂಚಾಯತ ರಾಜ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು, ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಲೋಕಸಭೆ, ವಿಧಾನ ಸಭೆ ಹಾಗೂ ವಿಧಾನ ಪರಿಷತ ಸದಸ್ಯರು, ತಾ.ಪಂ., ನಗರ ಸಭೆ ಅಧ್ಯಕ್ಷರು ಉಪಾಧ್ಯಕ್ಷರು, ನಗರ ಸಭೆ ಸದಸ್ಯರು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಇದೇ ಸಂದರ್ಭದಲ್ಲಿ ರಾಜ್ಯ ವ್ಯಾಪಿ ಸಂಚರಿಸುತ್ತಿರುವ ವಜ್ರ ಮಹೋತ್ಸವ ಕನ್ನಡ ರಥಕ್ಕೆ ಅಂದು ಸಂಜೆ 4 ಗಂಟೆಗೆ ಗದುಗಿನ ಭೀಷ್ಮ ಕೆರೆ ದ್ವಾರದಲ್ಲಿ ಸ್ವಾಗತ ಹಾಗೂ ಗಾನ ಯಾನ ಕಾರ್ಯಕ್ರಮ ಸ್ಥಳದವರೆಗೆ ಮೆರವಣಿಗೆ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಾರ್ತಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರುಗಳುವಿನಂತಿಸಿದ್ದಾರೆ.

ನ. 07 ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ

ಕೊಪ್ಪಳ ನ. 05 (ಕರ್ನಾಟಕ ವಾರ್ತೆ): ಕರ್ನಾಟಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ನ. 07 ರಂದು ಬೆಳಿಗ್ಗೆ 10 ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಎರಡನೆ ಹಂತದಲ್ಲಿ ವಿಶೇಷ ಆರೋಗ್ಯ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಇದೀಗ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ. ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಾರ್ವಜನಿಕರು ಈ ಆರೋಗ್ಯ ತಪಾಸಣಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ತಂತ್ರಜ್ಞಾನ ಸಪ್ತಾಹ-2016

ಶಿವಮೊಗ್ಗ, ನವೆಂಬರ್ 05 (ಕರ್ನಾಟಕ ವಾರ್ತೆ): ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಚೈತನ್ಯ ರೂರಲ್ ಡೆವಲಪ್‍ಮೆಂಟ್ ಸೊಸೈಟಿ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನ.08 ರಿಂದ ನ. 12 ರವರೆಗೆ ನಗರದ ನವಿಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 5 ದಿನಗಳ ಕೃಷಿ ತಂತ್ರಜ್ಞಾನ ಸಪ್ತಾಹ-2016ನ್ನು ಆಯೋಜಿಸಲಾಗಿದೆ.

ಈ ಸಪ್ತಾಹದ ಉದ್ಘಾಟನಾ ಸಮಾರಂಭವು ನ.08ರಂದು ಬೆಳಿಗ್ಗೆ 10.00ಕ್ಕೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಲಿದ್ದು, ಕೃಷಿ ಮತ್ತು ತೋಟಗಾರಿಕೆ ವಿ.ವಿಯ ಗೌರವಾನ್ವಿತ ಕುಲಪತಿ ಡಾ|| ಸಿ. ವಾಸುದೇವಪ್ಪರವರು ಉದ್ಘಾಟಿಸುವರು. ಕೃತೋವಿವಿಯ ವಿಸ್ತರಣಾ ನಿರ್ದೇಶಕ ಡಾ|| ಟಿ.ಹೆಚ್. ಗೌಡ ಅಧ್ಯಕ್ಷತೆ ವಹಿಸುವರು. ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ|| ಶ್ರೀನಾಥ ದೀಕ್ಷಿತ್, ಕೃತೋವಿವಿ ಸಂಶೋಧನಾ ನಿರ್ದೇಶಕ ಡಾ|| ಎಂ.ಕೆ. ನಾಯಕ್, ಜಂಟಿ ಕೃಷಿ ನಿರ್ದೇಶಕ ಡಾ|| ಮಧುಸೂಧನ್ ಕೆ., ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ|| ಎಂ. ವಿಶ್ವನಾಥ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಇವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಅಂದು ಮಧ್ಯಾಹ್ನ 12.30ಕ್ಕೆ ತಾಂತ್ರಕ ಸಮಾವೇಶ ಕೃಷಿ ಸುಸ್ಥಿರತೆ ಮಣ್ಣಿನ ಆರೋಗ್ಯ ಎಂಬ ವಿಷಯದ ಕುರಿತು ಡಾ|| ಹೆಚ್.ಎಂ ಚಿದಾನಂದಪ್ಪರವರಿಂದ ಉಪನ್ಯಾಸ ನ. 09 ರಂದು ಬೆಳಿಗ್ಗೆ 10.00 ರಿಂದ ಬೆಳೆ ಪದ್ಧತಿಗಳಲ್ಲಿ ದ್ವಿದಳ ಧಾನ್ಯ ಬೆಳೆಗಳ ಪಾತ್ರ ಎಂಬ ವಿಷಯದ ಕುರಿತು ಡಾ|| ಜಿ.ಕೆ. ಗಿರಿಜೇಶ್ ಮತ್ತು ಡಾ|| ಜಯಲಕ್ಷ್ಮೀ ಹೆಗಡೆ, ನ. 10 ರಂದು ಬೆಳಿಗ್ಗೆ 10.00ಕ್ಕೆ ದ್ವಿದಳ ಧಾನ್ಯಗಳ ಪೌಷ್ಠಿಕತೆ ಹಾಗೂ ಮೌಲ್ಯವರ್ಧನೆ ಎಂಬು ವಿಷಯದ ಕುರಿತು ಶ್ರೀಮತಿ ಜ್ಯೋತಿ ಎಂ. ರಾಠೋಡ್ ಮತ್ತು ಡಾ|| ಮಾರುತೇಶ.ಎ.ಎಂ. ನ. 11 ರಂದು ಹಿತ್ತಲ ಕೋಳಿ ಸಾಕಾಣಿಕೆ ಎಂಬ ವಿಷಯದ ಕುರಿತು ಡಾ|| ಕೃಷ್ಣಮೂರ್ತಿ ಮತ್ತು ಡಾ|| ಬಿ.ಯು. ಉಮೇಶ್ ಹಾಗೂ ನ. 12 ರಂದು ಶುಂಠಿ ಬೆಳೆಯ ಉತ್ಪಾದನಾ ತಾಂತ್ರಿಕತೆಗಳು ಎಂಬ ವಿಷಯದ ಕುರಿತು ಡಾ|| ಕೆ. ಎಸ್. ಶೇಷಗಿರಿ ಮತ್ತು ಡಾ|| ಹೆಚ್. ನಾರಾಯಣ ಸ್ವಾಮಿ ಇವರುಗಳು ಉಪನ್ಯಾಸ ನೀಡುವರು. ಈ ಎಲ್ಲಾ ದಿನಗಳಲ್ಲಿ ಚರ್ಚಾಗೋಷ್ಠಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಪ್ರಾತ್ಯಕ್ಷಿತಾ ತಾಕುಗಳು ಹಾಗೂ ನರ್ಸರಿಗೆ ಭೇಟಿ ನೀಡಲಾಗುವುದು. ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ನ.12ರಂದು ಮಧ್ಯಾಹ್ನ 3.00ಕ್ಕೆ ಡಾ|| ಟಿ.ಹೆಚ್. ಗೌಡರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.

ಕೇಂದ್ರ ತಂಡದಿಂದ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ

ಮಂಡ್ಯ ನ.5 (ಕರ್ನಾಟಕ ವಾರ್ತೆ) ತಲೆದೋರಿರುವ ಬರ ಪರಿಸ್ಥಿತಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡವು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಚೆಟ್ಟೆನಹಳ್ಳಿ, ಚಿಕೋನಹಳ್ಳಿಪುರ ಹಾಗೂ ವಡ್ಡರಹಟ್ಟಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಅಧಿಕಾರಿಗಳ ತಂಡವು ಒಣಗಿರುವ ಕೃಷಿ ಭೂಮಿ ಹಾಗೂ ಬೆಳೆ ಹಾಳಗಿರುವ ಪ್ರದೇಶಗಳನ್ನು ವಿಕ್ಷಿಸಿ, ಅಧಿಕಾರಿಗಳಿಂದ ಇದರ ಬಗ್ಗೆ ಮಾಹಿತಿ ಪಡೆದರು.
ಹೈದ್ರಾಬಾದ್‍ನ ಎಣ್ಣೆಬೀಜ ವಿಭಾಗದ ನಿರ್ದೇಶಕರಾದ ಎಸ್.ಎಂ. ಕೂಲ್ಹಾತ್ಕರ್, ಕೇಂದ್ರದ ಜಲಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತರಾದ ಸತೀಶ್ ಕುಮಾರ್ ಕಾಂಬೋಜ್, ಕೇಂದ್ರ ಹಣಕಾಸು ಇಲಾಖೆಯ ಜಂಟಿ ನಿರ್ದೇಶಕರಾದ ಎಸ್.ಎಸ್. ಮೀನಾ ಅವರುಗಳನ್ನೊಳಗೊಂಡ ತಂಡ ಅಧ್ಯಯನ ನಡೆಸಿತು.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾಧಿಕಾರಿಗಳಾದ ಎಸ್. ಜಿಯಾವುಲ್ಲಾ, ಜಂಟಿ ಕೃಷಿ ನಿರ್ದೇಶಕರಾದ ರಾಜ ಸುಲೋಚನಾ, ಜಿಲ್ಲಾ ಪಂಚಾಯತ್ ಕಾರ್ಯಪಾಲಕ ಅಭಿಯಂತರಾದ ಚಂದ್ರಹಾಸ್, ತೋಟಗಾರಕೆ ಉಪ ನಿರ್ದೇಶಕರಾದ ರುದ್ರೇಶ್ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಬೇಕು

ತುಮಕೂರು (ಕ.ವಾ.) ನ.4- ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ನೆರವು ನೀಡಬೇಕು ಎಂದು ಸದ್ಗುರು ಶ್ರೀ ಯೋಗಿ ನಾರೇಯಣ ಟ್ರಸ್ಟ್‍ನ ಅಧ್ಯಕ್ಷ ಕೃಷ್ಣ ಅವರು ತಿಳಿಸಿದರು.

ತಾಲ್ಲೂಕಿನ ಅಕ್ಕಿರಾಂಪುರದ ಸಜ್ಜನ್ ಗಂಗಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ 240 ಮಂದಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟಕ್ಕಾಗಿ ಟ್ರಸ್ಟ್‍ನಿಂದ ಉಚಿತ ಊಟದ ತಟ್ಟೆಗಳನ್ನು ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳು ಸೇರುವುದು ಕಡಿಮೆಯಾಗುತ್ತಿರುವಾಗ ಸರ್ಕಾರಿ ಶಾಲೆಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಕಡಿಮೆ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು ಎಂದರು.

ಸರ್ಕಾರಿ ಶಾಲೆಗಳಿಗೆ ಸಕಾರ ಒದಗಿಸುವ ಸೌಲಭ್ಯಗಳ ಜೊತೆಗೆ ಸಂಘಸಂಸ್ಥೆಗಳು ತಮ್ಮ ಕೈಲಾದ ನೆರವು ನೀಡಿ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಣೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.

ಶಾಲೆಯ ಮುಖ್ಯೋಪಾಧ್ಯರಾದ ಗಂಗಮ್ಮ ಅವರು ಮಾತನಾಡಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದ್ದರೂ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ಸರಿಯಲ್ಲ ಎಂದು ವಿಷಾದಿಸಿದರು.

ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸೌಲಭ್ಯ ಒದಗಿಸಲು ಸಂಘಸಂಸ್ಥೆಗಳು ಮುಂದಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ನಮ್ಮ ಶಾಲೆಗೆ ಮಧ್ಯಾಹ್ನ ಬಿಸಿ ಊಟ ನೀಡಲು ಉಚಿತವಾಗಿ ತಟ್ಟೆಗಳನ್ನು ನೀಡಿದ ಯೋಗಿ ನಾರೇಯಣ ಟ್ರಸ್ಟ್‍ನ ಪದಾಧಿಕಾರಿಗಳನ್ನು ಅಭಿನಂಧಿಸಿದರು.

ಕಾರ್ಯಕ್ರಮದಲ್ಲಿ ಟ್ರಸ್ಟ್‍ನ ನಿರ್ದೇಶಕ ರಾಜು,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಪ್ಪ,ಶ್ರೀ ಆಂಜನೇಯ ಸದ್ಗುರು ಸಾಯಿ ದೇವಾಲಯ ಟ್ರಸ್ಟ್‍ನ ಕಾರ್ಯದರ್ಶಿ ಲೋಕೇಶ್ ಗ್ರಾಮಪಂಚಾಯ್ತಿ ಸದಸ್ಯರಾದ ರಮೇಶ್,ನಯಾಜ್ ಮುಖಂಡರಾದ ರಾಜಣ್ಣ, ಈಶ್ವರ ಅವರು ಭಾಗವಹಿಸಿದ್ದರು.

ಧನಶ್ರೀ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ

ಬೆಂ.ನ.ಜಿ. ನ. 05 (ಕರ್ನಾಟಕ ವಾರ್ತೆ) :ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ಧನಶ್ರೀ ಯೋಜನೆಯಡಿ ಶೇ 4%ರ ಬಡ್ಡಿದರದಲ್ಲಿ ರೂ. 40 ಸಾವಿರ ಸಾಲ ಮತ್ತು 10 ಸಾವಿರ ರೂ.ಗಳ ಸಹಾಯಧನಕ್ಕಾಗಿ ಜಿಲ್ಲೆಯ 18 ರಿಂದ 60 ವರ್ಷ ವಯೋಮಿತಿಯುಳ್ಳ ಹೆಚ್‍ಐವಿ ಸೋಂಕಿತ ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.

ಆಸಕ್ತ ಮಹಿಳೆಯರು ನಿಗದಿತ ಅರ್ಜಿ ನಮೂನೆಗಳನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಶಿಶು ಅಭಿವೃದ್ದಿ ಯೋಜನೆ ಕಛೇರಿಗಳಾದ ಬೆಂಗಳೂರು ಕೇಂದ್ರ ಸ್ತ್ರೀಶಕ್ತಿ ಭವನ, (ಮಡಿವಾಳ),ದೂರವಾಣಿ ಸಂಖ್ಯೆ: 222344490, ಬೆಂಗಳೂರು ರಾಜ್ಯ ಎನ್.ಆರ್.ಕಾಲೋನಿ, (ಬಸವನಗುಡಿ), ದೂರವಾಣಿ: 22121917, ಬೆಂಗಳೂರು ಉತ್ತರ, ಪೂರ್ವ, (ಯಲಹಂಕ ಉಪನಗರ), ಮಿನಿವಿಧಾನಸೌಧ, ದೂರವಾಣಿ ಸಂ: 28462513, ಬೆಂಗಳೂರು ದಕ್ಷಿಣ, (ಬನಶಂಕರಿ) ದೂರವಾಣಿ ಸಂ: 26713097 ಮತ್ತು ಆನೇಕಲ್ ದೂರವಾಣಿ ಸಂ: 78309662 ಇಲ್ಲಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ನವೆಂಬರ್ 15 ರೊಳಗೆ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ,9663683150 ಮತ್ತು 8431558525ಗೆ ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ಪಕಟಣೆಯಲ್ಲಿ ತಿಳಿಸಿದ್ದಾರೆ.

ಸಮೃದ್ಧಿ ಯೋಜನೆಯಡಿ ಅರ್ಜಿ ಆಹ್ವಾನ

ಬೆಂ.ನ. ನ. 05 (ಕರ್ನಾಟಕ ವಾರ್ತೆ) : ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನಲ್ಲಿ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿ ಎಂದು ನೋಂದಣಿ ಮಾಡಿಸಿರುವ ಮಹಿಳೆಯರಿಗೆ ರೂ. 10000/- ಗಳ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸುವವರು ನಗರ ಸಭೆ ಅಥವಾ ಗ್ರಾಮ ಪಂಚಾಯಿತಿ ನೋಂದಣಿ ಅಧಿಕಾರಿ(ಪಿ.ಡಿ.ಒ)ಗಳಿಂದ ಬೀದಿ ಬದಿ ವ್ಯಾಪಾರಿ ಎಂದು ನೋಂದಣಿ ಮಾಡಿಸಿರುವ ಗುರುತಿನ ಚೀಟಿ ಹೊಂದಿರಬೇಕು, 18 ರಿಂದ 60 ವರ್ಷ ವಯೋಮಿತಿಯಲ್ಲಿರಬೇಕು,

ಅರ್ಜಿ ಸಲ್ಲಿಸಲು ನವೆಂಬರ್ 15 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಬೆಂಗಳೂರು ಕೇಂದ್ರ ಸ್ತ್ರೀಶಕ್ತಿ ಭವನ, (ಮಡಿವಾಳ), ದೂರವಾಣಿ ಸಂಖ್ಯೆ: 222344490, ಬೆಂಗಳೂರು ರಾಜ್ಯ ಎನ್.ಆರ್.ಕಾಲೋನಿ, (ಬಸವನಗುಡಿ), ದೂರವಾಣಿ: 22121917 ಬೆಂಗಳೂರು ಉತ್ತರ, ಪೂರ್ವ, ಯಲಹಂಕಉಪನಗರ, (ಮಿನಿವಿಧಾನಸೌಧ) ದೂರವಾಣಿ ಸಂ: 28462513, ಬೆಂಗಳೂರು ದಕ್ಷಿಣ, (ಬನಶಂಕರಿ) ದೂರವಾಣಿ ಸಂ: 26713097 ಮತ್ತು ಆನೇಕಲ್ ದೂರವಾಣಿ ಸಂ: 78309662ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ನ. 3 ರಂದು ಜಿಲ್ಲಾ ಉಸ್ತುವಾರಿ ಸಚಿವರ ಜನ ಸಂಪರ್ಕ ಸಭೆ

ದಾವಣಗೆರೆ ನ. 05 - (ಕರ್ನಾಟಕ ವಾರ್ತೆ)7 : ಸರ್ಕಾರವು ರೂಪಿಸಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಅನುಷ್ಟಾನಗೊಳಿಸುವ ಸಂಬಂಧವಾಗಿ ಜನಸಾಮಾನ್ಯರಿಗೆ ತಲುಪಿಸುವ ಕುರಿತು ಹಾಗೂ ಸಾರ್ವಜನಿಕ ಕುಂದುಕೊರತೆಗಳನ್ನು ನಿವಾರಿಸಲು ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ ಇವರ ಅಧ್ಯಕ್ಷತೆಯಲ್ಲಿ ನವೆಂಬರ್ 7 ರ ಮಧ್ಯಾಹ್ನ 3 ಗಂಟೆಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಜನಪರ ಯೋಜನೆಗಳ ಪರಿಣಾಮಕಾರಿ ಅನುಷ್ಟಾನ-ಪ್ರಮೋದ್

ಉಡುಪಿ, ನವೆಂಬರ್ 5 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ 31080 ಹೈನುಗಾರಿಕೆ ಫಲಾನುಭವಿಗಳಿಗೆ 884.7 ಲಕ್ಷ ರೂ. ಪ್ರೋತ್ಸಾಹಧನ ನೀಡಿದ್ದು, ಜನಪರ ಕಾರ್ಯಕ್ರಮ ಅನುಷ್ಠಾನದಲ್ಲಿ ಜಿಲ್ಲೆ ಮುಂದಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರಿಂದು ನಾರಾಯಣ ಗುರು ಸಭಾಂಗಣ ಬನ್ನಂಜೆಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರದ ಪ್ರಮುಖ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ, ಕೃಷಿ, ಮನಸ್ವಿನಿ, ಮೈತ್ರಿ ಯೋಜನೆಗಳಿಂದ ಜನಸಾಮಾನ್ಯರಿಗೆ ಬಹಳಷ್ಟು ಉಪಯೋಗವಾಗಿದ್ದು, ಇಂದು ನಡೆದ ಸಭೆಯಲ್ಲಿ 320 ಜನರಿಗೆ ಪಿಂಚಣಿ, 94 ಸಿ ಯಡಿ 14 ಜನರಿಗೆ ಹಕ್ಕುಪತ್ರ, 11ಮೀನುಗಾರರಿಗೆ ಸಾಧ್ಯತಾ ಪತ್ರ, ಒಬ್ಬ ಮೀನುಗಾರರಿಗೆ ಸಂಕಷ್ಟ ಪರಿಹಾರ ಯೋಜನೆಯಡಿ ಎರಡು ಲಕ್ಷ ರೂ.ಗಳನ್ನು ವಿತರಿಸಲಾಯಿತು.

ಉಡುಪಿ ನಗರಸಭೆ ವತಿಯಿಂದ ದೀನದಯಾಳ್ ಅಂತ್ಯೋದಯ ಯೋಜನೆಯಡಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಲ್ಲಿ 50 ಫಲಾನುಭವಿಗಳಿಗೆ ಲಘು ವಾಹನ ಚಾಲನಾ ತರಬೇತಿ ನೀಡಿದ್ದು, ಅವರಿಗೆ ವಾಹನ ಚಾಲನಾ ಪರವಾನಿಗೆ ವಿತರಿಸಲಾಯಿತು.

ವಿದ್ಯಾಂಗ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಣೆಯೂ ಇಂದಿನ ಸಭೆಯಲ್ಲಿ ನಡೆಯಿತಲ್ಲದೆ, 35 ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು.
ಜನಸ್ಪಂದನದಲ್ಲಿ ಸುಮಾರು 42 ಅರ್ಜಿಗಳನ್ನು ಸ್ವೀಕರಿಸಿ, ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸ್ಥಳದಲ್ಲಿ ಪರಿಹಾರ ನೀಡಲು ಸೂಚನೆ ನೀಡಿದರು. ಹೆಚ್ಚಿನ ಅರ್ಜಿಗಳು ರಸ್ತೆ ಮತ್ತು ಮೂಲಸೌಕರ್ಯ ಕೋರಿ, ಪೊಲೀಸ್ ಇಲಾಖೆಯಲ್ಲಿ ಅನುಕಂಪ ಆಧಾರಿತ ಕೆಲಸ ಕೊಡಿಸಲು, ಮತ್ಸ್ಯಾಶ್ರಯ ಯೋಜನೆಯಡಿ ಮನೆ ನೀಡಿ ಎಂದು, ವಿಕಲಚೇತನರಿಗೆ ಸೌಲಭ್ಯ ನೀಡಲು ಕೋರಿ ಅರ್ಜಿಗಳು ಸ್ವೀಕೃತವಾಯಿತು.

ಸಭೆಗೆ ಹಾಜರಾಗದ ಬಂದರು ಮತ್ತು ಒಳನಾಡು ಜಲಸಾರಿಗೆ, ಮೀನುಗಾರಿಕೆ ಅಧಿಕಾರಿ ಹಾಗೂ ಸಾಲಿಗ್ರಾಮ ಮುಖ್ಯಾಧಿಕಾರಿಗೆ ನೋಟೀಸು ನೀಡಲು ಅಪರ ಜಿಲ್ಲಾಧಿಕಾರಿಗೆ ಸೂಚಿಸಿದರು.

ತಾಲೂಕು ಪಂಚಾಯಚಾತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನರಸಿಂಹ ಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ತೋನ್ಸೆ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಅನುರಾಧ ಸ್ವಾಗತಿಸಿದರು. ಪೌರಾಯುಕ್ತ ಮಂಜುನಾಥಯ್ಯ ವಂದಿಸಿದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಸಹಾಯಕ ವಿಭಾಗಾಧಿಕಾರಿ ಅಶ್ವಥಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಜನಸ್ಪಂದನದಲ್ಲಿ ಪಾಲ್ಗೊಂಡರು.

ಮುಂದುವರೆದ ಕೇಂದ್ರ ಬರ ಅಧ್ಯಯನ ತಂಡದ ಸಮೀಕ್ಷೆ

ಹಾಸನ, ನವೆಂಬರ್ 5- ರಾಜ್ಯದಲ್ಲಿ ಬರ ಪರಿಸ್ಥಿತಿ ಅರಿಯಲು ಜಿಲ್ಲೆಗೆ ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡವು ನವೆಂಬರ್ 5ರಂದು ಮುಂಜಾನೆ 6 ಗಂಟೆಯಿಂದಲೇ ತನ್ನ ಕಾರ್ಯಾರಂಭಿಸಿತು.

ಬೆಳ್ಳಂಬೆಳಿಗ್ಗೆ ಗಂಡಸಿಗೆ ಆಗಮಿಸಿದ ತಂಡವು ಅಲ್ಲಿನ ಜನರು ಕುಡಿಯುವ ನೀರಿಗಾಗಿ ಅನುಭವಿಸುತ್ತಿರುವ ಪರದಾಟವನ್ನು ಗಮನಿಸಿದರು. ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ಅರಸೀಕೆರೆ ತಾಲ್ಲೂಕಿನಲ್ಲಿರುವ ರೈತರ ಬವಣೆ, ಕುಡಿಯುವ ನೀರಿನ ಕೊರತೆ, ಅಂತರ್ಜಲದ ಕುಸಿತದ ಬಗ್ಗೆ ಕೇಂದ್ರ ತಂಡಕ್ಕೆ ವಿವರಿಸಿದರು.

ನಂತರ ಕೇಂದ್ರ ತಂಡ ಚನ್ನರಾಯಪಟ್ಟಣ ತಾಲ್ಲೂಕಿನ ಗೌಡಗೆರೆ, ಸಾತೇನಹಳ್ಳಿಯಲ್ಲಿ ಸಹ ಜೋಳ, ರಾಗಿ ಬೆಳೆಗಳು ಮಳೆಯ ಕೊರತೆಯಿಂದ ಹಾನಿಗೀಡಾಗಿರುವುದನ್ನು ಗಮನಿಸಿತು.

ಶಾಸಕರಾದ ಸಿ.ಎನ್.ಬಾಲಕೃಷ್ಣ ಅವರು ಕೇಂದ್ರ ತಂಡಕ್ಕೆ ಚನ್ನರಾಯಪಟ್ಟಣ ತಾಲ್ಲೂಕಿನ ರೈತಾಪಿ ಜನರ ಬದುಕು ಬವಣೆಗಳನ್ನು ವಿವರಿಸಿದರು. ಹೆಚ್ಚಿನ ನೆರವು ಒದಗಿಸಲು ಸಹಕರಿಸುವಂತೆ ಕೋರಿದರು.

ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥರು ಹಾಗೂ ಎಣ್ಣೆಬೀಜ ನಿಗಮದ ನಿರ್ದೇಶಕರಾದ ಕೋಲಾತ್‍ಕರ್, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಜಂಟಿ ನಿರ್ದೇಶಕರಾದ ಸತೀಶ್ ಕುಮಾರ್ ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ದೇಶಕರಾದ ಎಸ್.ಸಿ.ಮೀನಾ, ಉಪವಿಭಾಗಾಧಿಕಾರಿಗಳಾದ ಡಾ:ಹೆಚ್.ಎಲ್.ನಾಗರಾಜ್, ಶಿವರಾಜ್, ಜಂಟಿ ಕೃಷಿ ನಿರ್ದೇಶಕರಾದ ರಾಮಚಂದ್ರಪ್ಪ, ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಸಂಜಯ್, ಪಶುಪಾಲನಾ ಇಲಾಖ ಉಪನಿರ್ದೇಶಕರಾದ ಡಾ:ಧರ್ಮಪ್ಪ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ತಹಸೀಲ್ದಾರರು, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.