Government of Karnataka

Department of Information

Friday 01/04/2016

ಜಿಲ್ಲಾ ವಾರ್ತೆ 10-02-2016

Date : ಬುಧವಾರ, ಫೆಬ್ರವರಿ 10th, 2016

ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗೆ ಪಾಸ್ ವಿತರಣೆ

ದಿನಾಂಕ: 13-2-2016 ರಂದು ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ, ಮತದಾನ ಕೇಂದ್ರ ಮತ್ತು ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಲು ಚುನಾವಣಾ ಪ್ರವೇಶ ಪತ್ರಗಳನ್ನು ದಿನಾಂಕ: 11-2-2016 ರಂದು ಬೆಳಿಗ್ಗೆ 11.00 ಗಂಟೆಯಿಂದ ಸಂಜೆ 5.30 ಗಂಟೆವರೆಗೆ ಈ ಕಛೇರಿಯಿಂದ ವಿತರಿಸಲಾಗುವುದು. ಮಾನ್ಯತೆ ಪಡೆದ ಪತ್ರಕರ್ತರು ಎರಡು ಭಾವಚಿತ್ರಗಳು ಹಾಗೂ ಪ್ರವೇಶ ಪತ್ರ ಪಡೆಯಲು ತಮ್ಮ ಸಂಸ್ಥೆಯಿಂದ ಪತ್ರ ಪಡೆದು ಸಲ್ಲಿಸುವುದು.

ಉಪನಿರ್ದೇಶಕರು

ಪತ್ರಿಕಾ ಪ್ರಕಟಣೆ

ಬೆಂಗಳೂರು ನಗರ ಜಿಲ್ಲೆಯಲ್ಲಿ 8.40 ಲಕ್ಷ ಮತದಾರರು

ಬೆಂಗಳೂರು, ಫೆ, 10: ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಇದೇ ಫೆಬ್ರವರಿ 13 ರಂದು ನಡೆಯುವ ಚುನಾವಣೆಯಲ್ಲಿ ಒಟ್ಟು 840449 ಮತದಾರರು ಮತ ಚಲಾಯಿಸಲಿದ್ದಾರೆ. ಒಟ್ಟು 878 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇವುಗಳಲ್ಲಿ 312 ಸೂಕ್ಷ್ಮ ಮತ್ತು 230 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಶ್ರೀ ವಿ.ಶಂಕರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಚುನಾವಣಾ ನೀತಿ ಸಂಹಿತೆಯು ದಿನಾಂಕ: 18-1-2016 ರಿಂದ 24-2-2016 ರವರೆಗೆ ಜಾರಿಯಲ್ಲಿರುತ್ತದೆ. ಬಿತ್ತಿಪತ್ರ, ಕಟೌಟ್, ಬೋರ್ಡ್ ಇತ್ಯಾದಿಗಳನ್ನು ತೆರವುಗೊಳಿಸಲು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಭೆ ಸಮಾರಂಭಗಳನ್ನು ನಡೆಸಲು ಚುನಾವಣಾಧಿಕಾರಿ ಅಥವಾ ಪೊಲೀಸ್, ಸಾರಿಗೆ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಬೇಕೆಂದು ಅವರು ತಿಳಿಸಿದರು.

ಚುನಾವಣೆಯು ಶಾಂತಿ ಮತ್ತು ಸುವ್ಯವಸ್ಥತೆಯಿಂದ ನಡೆಯಲು ಚುನಾವಣಾ ವೀಕ್ಷಕರಾಗಿ ಶ್ರೀ ಮನೋಜ್‍ಕುಮಾರ್ ಇವರನ್ನು ನೇಮಕ ಮಾಡಲಾಗಿದೆ. ಮತದಾರರು ನಿರ್ಭೀತಿ ಮತ್ತು ನಿರ್ಭೀಡೆಯಿಂದ ತಮ್ಮ ಅಮೂಲ್ಯ ಮತಗಳನ್ನು ತಪ್ಪದೇ ಚಲಾಯಿಸಬೇಕು. ಇದಕ್ಕಾಗಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ವ್ಯಾಪಕ ಪ್ರಚಾರ ಮಾಡಿ ಮತ ಚಲಾಯಿಸಲು ಜಾಗೃತಿ ಮೂಡಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಚುನಾವಣಾ ತರಬೇತಿಗೆ ಗೈರುಹಾಜರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಮುಂದೆ ನಡೆಯುವ ಚುನಾವಣಾ ತರಬೇತಿಗೆ ತಪ್ಪದೇ ಹಾಜರಾಗಲು ಚುನಾವಣಾ ಸಿಬ್ಬಂದಿಗೆ ಗೈರುಹಾಜರಾಗದಂತೆ ಸೂಚನೆ ನೀಡಿದರು. ರಾಜ್ಯ ಚುನಾವಣಾ ಆಯೋಗದಂತೆ ಪಾನ ನಿಷೇದವನ್ನು ದಿನಾಂಕ: 12-2-2016 ರಂದು ಬೆಳಿಗ್ಗೆ 7.00 ಗಂಟೆಯಿಂದ ದಿನಾಂಕ:13-2-2016 ರ ಮದ್ಯರಾತ್ರಿ 12.00 ಗಂಟೆವರೆಗೆ ದಿನಾಂಕ: 22-2-2016 ರ ರಾತ್ರಿ 10.00 ಗಂಟೆಯಿಂದ, ದಿನಾಂಕ: 23-2-2016ರ ಮದ್ಯ ರಾತ್ರಿ 12.00 ಗಂಟೆವರೆಗೆ ಮದ್ಯಮಾರಾಟ, ಸರಬರಾಜು, ಅಕ್ರಮ ಮದ್ಯ ಸರಬರಾಜು ಮತ್ತು ಅಕ್ರಮ ಸಾಗಾಣಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಬೆಂಗಳೂರು ಉತ್ತರ ಮತ್ತು (ಅಪರ) ತಾಲ್ಲೂಕಿನ ಮತಗಳನ್ನು ಸರ್ಕಾರಿ ಪ್ರೌಢಶಾಲೆ, ಕಾಳಹಸ್ತಿನಗರ, ಟಿ.ದಾಸರಹಳ್ಳಿ, ಬೆಂಗಳೂರು, ಉತ್ತರ ಮತ್ತು (ಅಪರ) ತಾಲ್ಲೂಕಿನ ಮತಗಳನ್ನು ಸರ್ಕಾರಿ ಪ್ರೌಢಶಾಲೆ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಮತ ಎಣಿಕೆಯನ್ನು ನ್ಯಾಷನಲ್ ಕಾಲೇಜು, ಜಯನಗರ, 7ನೇ ಹಂತ, ಬೆಂಗಳೂರು ಪೂರ್ವ ತಾಲ್ಲೂಕಿನ ಮತ ಎಣಿಕೆಯನ್ನು ಐಟಿಐ, ವಿದ್ಯಾಮಂದಿರ ಪ್ರೌಢಶಾಲೆ, ದೂರವಾಣಿ ನಗರ, ಕೆ.ಆರ್.ಪುರಂ ಮತ್ತು ಆನೇಕಲ್ ತಾಲ್ಲೂಕಿನ ಮತ ಎಣಿಕೆಯನ್ನು ಸರ್ಕಾರಿ ಎ.ಎಸ್.ಬಿ. ಪದವಿ ಪೂರ್ವ ಕಾಲೇಜು, ಅತ್ತಿಬೆಲೆ ರಸ್ತೆ, ಆನೇಕಲ್‍ನ ಟೌನ್ ಇಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಮೇಶ್, ಉಪವಿಭಾಗಾಧಿಕಾರಿ ಶ್ರೀ ಎಲ್.ಸಿ.ನಾಗರಾಜು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರು ದಕ್ಷಿಣ ವಲಯ-ಅನಧಿಕೃತ ಶಾಲೆಗಳ ಪಟ್ಟಿ

ಬೆಂಗಳೂರು, ಫೆ, 10: ಬೆಂಗಳೂರು ನಗರ ದಕ್ಷಿಣ ವಲಯ – 3 ವ್ಯಾಪ್ತಿಗೆ ಸಂಬಂಧಿಸಿದಂತೆ 2016-17ನೇ ಸಾಲಿಗೆ ಅನಧಿಕೃತ ಶಾಲೆಗಳ ಮಾಹಿತಿಯನ್ನು ಈ ಕೆಳಕಂಡಂತೆ ನಮೂದಿಸಲಾಗಿದ್ದು, ಇಲಾಖಾ ಅನುಮತಿಯನ್ನು ಪಡೆಯದೆ ಶಾಲಾ ಆಡಳಿತ ಮಂಡಳಿಯವರು ನಡೆಸುತ್ತಿರುವ ಶಾಲೆಗೆ ಮಕ್ಕಳನ್ನು ದಾಖಲು ಮಾಡಬಾರದಾಗಿ ಬೆಂಗಳೂರು ದಕ್ಷಿಣ ವಲಯ – 3ರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆಗಳು : ಮದರ್ ಮೇರಿ ಕಾನ್ವೆಂಟ್, ಹೊಸಗುರಪ್ಪನ ಪಾಳ್ಯ, ಬೆಂಗಳೂರು, ಗ್ಲೋಬಲ್ ಪಬ್ಲಿಕ್ ಸ್ಕೂಲ್, ಹೊಸಗುರಪ್ಪನ ಪಾಳ್ಯ, ಬೆಂಗಳೂರು, ಸೆಂಟ್‍ಜಾನ್ ಆಫ್ ಆರ್ಚ್ ಪೌಂಡೇಷನ್ ಶಾಲೆ, ಹೆಚ್.ಎಸ್.ಆರ್.ಲೇಔಟ್, ಬೆಂಗಳೂರು, ಸೆಂಟ್ ಸಾರಾಸ್ ಶಾಲೆ, ವಿನಾಯಕ ನಗರ, ಬೆಂಗಳೂರು, ರಿಲಾಯನ್ಸ್ ಪಬ್ಲಿಕ್ ಸ್ಕೂಲ್, ಆಸ್ಟಿನ್ ಟೌನ್, ಬೆಂಗಳೂರು, ರಾಜೀವ್‍ಗಾಂಧಿ ಮೆಮೋರಿಯಲ್ ಶಾಲೆ, ಕೋರಮಂಗಲ 2ನೇ ಹಂತ, ಬೆಂಗಳೂರು – 47, ಡ್ಯಾನಿಯಲ್ ಪಬ್ಲಿಕ್ ಸ್ಕೂಲ್, ಗಂಗಮ್ಮ ಲೇಔಟ್, ಬೆಂಗಳೂರು – 68, ಎಸ್.ಕೆ.ಇಂಗ್ಲೀಷ್ ಸ್ಕೂಲ್, ಮಂಗಮ್ಮನ ಪಾಳ್ಯ, ಬೆಂಗಳೂರು – 68, ಎಂ.ಇ.ಎಸ್. ಹಿರಿಯ ಪ್ರಾಥಮಿಕ ಶಾಲೆ, ಜಯನಗರ 4ನೇ ಬ್ಲಾಕ್, ಬೆಂಗಳೂರು, ಸೀಮಾ ಆಂಗ್ಲ ಶಾಲೆ, ದೇವರ ಚಿಕ್ಕನಹಳ್ಳಿ, ಬೆಂಗಳೂರು
ಪ್ರೌಢ ಶಾಲೆಗಳು : ಗ್ಲೋಬಲ್ ಪಬ್ಲಿಕ್ ಸ್ಕೂಲ್, ಹೊಸ ಗುರಪ್ಪನಪಾಳ್ಯ, ಬೆಂಗಳೂರು, ಸೆಂಟ್ ಪೀಟರ್ ಶಾಲೆ, ಹುಳಿ ಮಾವು, ಬೆಂಗಳೂರು, ಶ್ರೀ ವಿದ್ಯಾನಿಕೇನ ಶಾಲೆ, ಜರಗನಹಳ್ಳಿ, ಬೆಂಗಳೂರು, ಸಹನಾ ವಿದ್ಯಾಮಂದಿರ್, ನಾಗನಾಥಪುರ, ಆಕ್ಟಿವ್ ಪಬ್ಲಿಕ್ ಸ್ಕೂಲ್, ಹೊಮ್ಮದೇವನಹಳ್ಳಿ, ಬೆಂಗಳೂರು .