Government of Karnataka

Department of Information

Tuesday 13/09/2016

ಜಿಲ್ಲಾ ವಾರ್ತೆ 11-03-2016

Date : ಶುಕ್ರವಾರ, ಮಾರ್ಚ 11th, 2016

ಗ್ರಾಮೀಣ ಕ್ರೋಡೋತ್ಸವ

ಬೆಂಗಳೂರು, ಮಾರ್ಚ್ 11: ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕು ಮತ್ತು ಪೂರ್ವ ತಾಲ್ಲೂಕಿನ ಗ್ರಾಮೀಣ ಕ್ರೀಡೋತ್ಸವವನ್ನು ತಾವರೆಕೆರೆ ಹೋಬಳಿ, ಚಂದ್ರಪ್ಪ ಸರ್ಕಲ್, ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ: 12-3-2016 ರಂದು ಮತ್ತು ಪೂರ್ವ ತಾಲ್ಲೂಕಿನ ಬಿದರಹಳ್ಳಿಯಲ್ಲಿ ದಿನಾಂಕ: 19-3-2016 ರಂದು ಬೆಳಿಗ್ಗೆ 10.00 ಗಂಟೆಗೆ ಉದ್ಘಾಟಿಸಲಾಗುವುದು.

ಕ್ರೀಡಾಕೂಟದಲ್ಲಿ ಸಾಮೂಹಿಕ ಓಟ, ಗೋಣಿಚೀಲದ ಓಟ, ರಂಗೋಲಿ, ನಿಂಬೆಹಣ್ಣು ಚಮಚ, ಮೂರು ಕಾಲಿನ ಓಟ, ಕಾಂಗರೋ ರಿಲೇ ಮತ್ತು ಸಂಗೀತ ಕುರ್ಚಿ ಇತ್ಯಾದಿ ಸ್ಪರ್ಧೆಗಳನ್ನು ಬಾಲಕ/ಬಾಕಿಯರು ಮತ್ತು ಮಹಿಳೆಯರು ಮತ್ತು ಪುರುಷರಿಗಾಗಿ ಏರ್ಪಡಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ನಗರ ಜಿಲ್ಲೆ COTPA ಉನ್ನತ ಅನುಷ್ಠಾನ ಜಿಲ್ಲೆ ಘೋಷಣೆ

ಬೆಂಗಳೂರು, ಮಾರ್ಚ್ 11: ರಾಜ್ಯ ತಂಬಾಕು ನಿಯಂತ್ರಣ ಮಂಡಳಿಯು ಬೆಂಗಳೂರು ನಗರ ಜಿಲ್ಲೆಯನ್ನು ಕೋಟ್ಪಾ ಕಾಯಿದೆಯ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸಲಾಯಿತು.

ಬೆಂಗಳೂರು ನಗರ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಅಧ್ಯಕ್ಷರಾದ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀ ಆರ್. ವೆಂಕಟಾಚಲಪತಿಯವರು ಜಿಲ್ಲೆಯ 4 ತಾಲ್ಲೂಕುಗಳಲ್ಲಿನ 63 ವಾರ್ಡ್‍ಗಳಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಅಂಕ ಗಳಿಸಿ ಅತ್ಯುನ್ನತವಾದ ಸಾಧನೆಯನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಕೋಟ್ಪಾ 2003 ರ ಕಾಯಿದೆಯನ್ನು ಬಹಳ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೂ ಜಿಲ್ಲೆಯಲ್ಲಿ ತಂಬಾಕು ಉತ್ಪನ್ನಗಳ ಸೇವನೆಗಳ ದುಷ್ಪರಿಣಾಮದ ಬಗ್ಗೆ ಇನ್ನಷ್ಟು ಜನಜಾಗೃತಿ ಮೂಡಿಸಲು ಸಂಬಂಧಪಟ್ಟ ಅಧಿಕಾರಿಗಳು ಪ್ರಯತ್ನಿಸಬೇಕೆಂದು ತಿಳಿಸಿ ಭಾಗವಹಿಸಿದ್ದ ಇಲಾಖೆಯ ಎಲ್ಲಾ ಅಧಿಕಾರಿಗಳನ್ನು ಸಾಧನೆಯ ಪ್ರತೀಕವಾಗಿ ಪ್ರಶಂಶಿಸಿ ಅಭಿನಂದನಾ ಪತ್ರವನ್ನು ಹಸ್ತಾಂತರಿಸಿದರು.

ರಾಜ್ಯ ತಂಬಾಕು ನಿಯಂತ್ರಣ ಘಟಕ ಬ್ಲೂಬರ್ಗ್ ಇನಿಷಿಯೇಟಿವ್ ಯೋಜನೆ ಸಂಯೋಜಕ ಶ್ರೀ ಪ್ರಭಾಕರ್ ಅವರು ಕೋಟ್ಪಾ 2003ರ ಅನುಸರಣಾ ಸಮೀಕ್ಷಾ ಫಲಿತಾಂಶದ ಬಗ್ಗೆ ವಿವರಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ವಿಜಯ ಮೋಹನ್‍ರೆಡ್ಡಿ ಹಾಗೂ ವಿವಿಧ ಇಲಾಖೆಯ ಪ್ರತಿನಿಧಿಗಳು ಭಾಗವಹಿಸಿದ್ದರು.