Government of Karnataka

Department of Information

Tuesday 13/09/2016

ಜಿಲ್ಲಾ ವಾರ್ತೆ 16-03-2016

Date : ಬುಧವಾರ, ಮಾರ್ಚ 16th, 2016

ಶ್ರವಣದೋಷ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಬೆಂಗಳೂರು, ಮಾರ್ಚ್ 16: ಇಂದಿರಾನಗರದ ಬಳಿ ಇರುವ ಹಳೆ ಬಿನ್ನಮಂಗಲದ ಹಂಸಧ್ವನಿ ಕಿವುಡು ಮತ್ತು ಮೂಕ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಪ್ರವೇಶಕ್ಕೆ ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

1ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ಪ್ರವೇಶವಿದ್ದು, ಪ್ರಸಕ್ತ ಸಾಲಿಗೆ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.