District News 12-04-2012

Friday, April 13th, 2012

ಏಪ್ರಿಲ್ 16 ರಂದು ಜಿಲ್ಲಾ ಪಂಚಾಯತ್‌ನಲ್ಲಿ ಕೆ.ಡಿ.ಪಿ. ಸಭೆ

    ಮಂಗಳೂರು ಎಪ್ರಿಲ್12(ಕರ್ನಾಟಕ ವಾರ್ತೆ) ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ.ಶೈಲಜಾಭಟ್ ಅವರ ಅಧ್ಯಕ್ಷತೆಯಲ್ಲಿ ದಿನಾಂಕ:16-4-2012ರಂದು ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ 2012ರ ಮಾರ್ಚ ತಿಂಗಳ, ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಆಯೋಜಿಸಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಎಂ.ಎ./ಎಂ.ಕಾಂ ವಾಆರ್ಷಿಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚನೆ

      ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯ 2011-2012ನೇ ಸಾಲಿನ ಪ್ರಥಮ ಹಾಗೂ ಅಂತಿಮ ವರ್ಷದ ಎಂ.ಎ/ಎಂ.ಕಾಂ ಪರೀಕ್ಷೆಗಳು ಮೇ/ಜೂನ್ 2012ರಲ್ಲಿ ನಡೆಯಲಿದ್ದ, ವಿದ್ಯಾರ್ಥಿಗಳು ಪರಿಕ್ಷಾ ಶುಲ್ಕವನ್ನು ದಂಡ ಶುಲ್ಕ  ರೂ.200/=ಸಹಿತ ಪಾವತಿಸಲು ಕೊನೆಯ ದಿನಾಂಕ:23-04-2012 ಆಗಿರುತ್ತದೆ.

      ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಸಲು ಅರ್ಜಿ/ಸತ್ತೋಲೆಯನ್ನು ಅಂಚೆಯ ಮೂಲಕ ಈಗಾಗಲೇ ರವಾನಿಸಲಾಗಿದೆ. ತಲುಪದೆ ಇರುವ ವಿದ್ಯಾರ್ಥಿಗಳು ತಮ್ಮ ಹತ್ತಿರದ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಪಡೆದು ಕುಲಸಚಿವ (ಪರೀಕ್ಷಾಂಗ) ಕರಾಮುವ, ಮಾನಸ ಗಂಗೋತ್ರಿ, ಮೈಸೂರು-06 ಈ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಿದೆ.

      ಹೆಚ್ಚಿನ ಮಾಹಿತಿಗಾಗಿ ಕುಲಸಚಿವರು(ಪರೀಕ್ಷಾಂಗ)ಅವರ ದೂರವಾಣಿ ಸಂಖೆ:0821-2519942,2515405, ವಿಸ್ತರಣೆ 216,354,343,353,220,221 ಸಂಪರ್ಕಿಸಲು ತಿಳಿಸಿದೆ.

ನೌಕ ದಳದಿಂದ ನಿವೃತ್ತರಾದ ಮಾಜಿ ಸೈನಿಕರ ಗಮನಕ್ಕೆ

      ನೌಕ ದಳದಿಂದ ನಿವೃತ್ತರಾದ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗಾಗಿ Naval Regimental System(NRS)ನ್ನು ಸ್ಥಾಪಿಸಲಾಗಿದ್ದು, ಇದರ ಮೂಲಕ ಯಾವುದೇ ಕುಂದುಕೊರತೆಗಳಿದ್ದಲ್ಲಿ ಬಗೆಹರಿಸಿಕೊಳ್ಳಬಹುದು. NRS ನ ಪ್ರತಿಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಕಾರ್ಯಾಲಯದಿಂದ ಪಡೆಯುವಂತೆ ತಿಳಿಸಿದೆ.

      ನೌಕ ದಳದಲ್ಲ;ಇ ಸೇವೆ ಸಲ್ಲಿಸಿ ನಿವೃತ್ತರಾಗಿ ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರು ಮತ್ತು ವಿದವೆಯರಿಗಾಗಿ ರೆಕಾರ್ಡ್ ಆಫಿಸಿನಲ್ಲಿ Pension Help Desk ಸ್ಥಾಪಿಸಿದ್ದು, ತಮ್ಮ ಪಿಂಚಣಿ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಟಾಲ್ ಫ್ರಿ ನಂ. 1800-200-560ಗೆ ಕಛೆರಿ ಕೆಲಸದ ಸಮಯ ಸಂಪರ್ಕಿಸಬಹುದೆಂದು ಈ ಮೂಲಕ ತಿಳಿಸಲಾಗಿದೆ.

ಕಾರು ಖರೀದಿಸುವ ಮಾಜಿ ಸೈನಿಕರ ಗಮನಕ್ಕೆ

      ಮಾಜಿ ಸೈನಿಕರು ಇನ್ನು ಮುಂದೆ ಕಾರು ಖರೀದಿಸಬೇಕಾದಲ್ಲಿ ಅರ್ಜಿಯನ್ನು Dy Dte Gen Canteen Services, Room No 14A L-1 Block Church Road, New Delhi   ಇವರಿಗೆ ಸಲ್ಲಿಸಭೆಕೆಂದು ಈ ಮೂಲಕ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖೆ 011-23092563 ಮತ್ತು 011-23093572ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಸ್ವ ಇಚ್ಚೆ ಲ್ಯಾಂಡ್ ಬ್ಯಾಂಕ್

      ರಾಜ್ಯದಲ್ಲಿ ತ್ವರಿತ ಹಾಗೂ ಸಮತೋಲನ ಕೈಗಾರಿಕಾ ಬೆಳವಣಿಗೆಗಾಗಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಹಿನ್ನೆಲೆಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮೂಲಭತ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಲಾಗಿದೆ.

      ಕರ್ನಾಟಕ ಕೈಗಾಅರಿಕಾಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ಮುಖೇನ ರಾಜ್ಯದಾದ್ಯಂತ ಕೃಷಿಗೆ ಯೋಗ್ಯವಲ್ಲದ ಭೂಮಿಯನ್ನು ಸ್ವಾಧೀನಪಡಿಸಿ ಅಭಿವೃದ್ದಿ ಪಡಿಸಿ ಕೈಗಾರಿಕೆ ಸ್ಥಾಪನೆಗೆ ಹಂಚಿಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕನಾಟಕ ಕೈಗಾರಿಕಾಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ವತಿಯಿಂದ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲಾಗಿದ್ದು, ಇದರ ಅಡಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ, ಅಭವೃದ್ದಿ ಪಡಿಸುತ್ತಿರುವ ಹಾಗೂ ಹಂಚಿಕೆಗೆ ಲಭ್ಯವಿರುವ ಭೂ ವಿವರಗಳನ್ನು ಅಳವಡಿಸಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಕೈಗಾರಿಕೆ ಸ್ಥಾಪನೆಗೆ ಕರ್ನಾಟಕ ಕೈಗಾರಿಕಾಪ್ರದೇಶಾಭಿವೃದ್ದಿ ಮಂಡಳಿ ಅಭಿವೃದ್ದಿ ಪಡಿಸಿದ ಜಾಗವಲ್ಲದೆ ಕೈಗಾರಿಕೋದ್ಯಮಿಗಳು ರೈತರೊಡನೆ ಒಪ್ಪಂದ ಮಾಡಿಕೊಂಡು ಖರೀದಿಸಲು ಇಚ್ಚಿಸುವ ಜಮೀನುಗಳಿಗೂ ಸಹ ಕೈಗಾರಿಕೆ ಸ್ಥಾಪನಗೆ ಅನುಮೋದನೆ ನೀಡಲಾಗುತ್ತಿದೆ.

      ರಾಜ್ಯದಲ್ಲಿ ಹೆಚ್ಚಿನ ಕೈಗಾರಿಕಾ ಬಂಡವಾಲ ಹೂಡಿಕೆಯ ಹಿನ್ನೆಲೆಯಲ್ಲಿ 2010 ರ ಸಾಲಿನಲ್ಲಿ ನಡೆಸಲಾದ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದ ಯಶಸ್ವಿ ಹಿನ್ನೆಲೆಯಲ್ಲಿ 2012 ನೇ ಸಾಲಿನ ಜೂನ್ ಮಾಹೆಯಲ್ಲಿ ಮ,ತ್ತೊಂದು ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿದ್ದು, ಕೃಷಿ, ಪ್ರವಾಸೋಧ್ಯಮ, ಐಟಿ/ಬಿಟಿ, ಅಟೋಮೊಬೈಲ್, ಹಾರ್ಡವೇರ್ ಪಾರ್ಕ, ಏರೋಸ್ಪೇಸ್ ಆಹಾರ ಸಂಸ್ಕರಣೆ ಮತ್ತು ಮೂಲಭೂತ ಸೌಕರ್ಯಗಳು ಇತ್ಯಾದಿ ಕ್ಷೇತ್ರಗಳಡಿ ಸುಮಾರು ರೂ.5.00ಲಕ್ಷ ಕೋಟಿ ಬಂಡವಾಳ ನಿರೀಕ್ಷಿಸಲಾಗಿದೆ. ಇದರೊಂದಿಗೆ ಸಾಕಷ್ಟು ಉದ್ಯೋಗಗಳನ್ನು ಸಹ ನಿರೀಕ್ಷಿಸಲಾಗಿದೆ. ಬಂಡವಾಳ ಹೂಡಿಕೆದಾರರಿಗೆ ಅಗತ್ಯ ಭೂಮಿ ಒದಗಿಸುವುದು ಅವಶ್ಯಕವಾಗಿದೆ. ಕೆಐಡಿಬಿ ವತಿಯಿಂದ ಸ್ಥಾಪಿಸಿರುವ ಲ್ಯಾಂಡ್ ಬ್ಯಾಂಕ್‌ನಡಿ ಲಭ್ಯವಿರುವ ಜಾಗವಲ್ಲದೆ ಬಂಡವಾಳ ಹೂಡಿಕೆದಾರರು ಅವರ ಯೋಜನೆಗೆ ತಕ್ಕಂತೆ ಭೂಮಿಯನ್ನು ರೈತರು/ಖಾಸಗಿಯವರು/ಕೈಗಾರಿಕೆ ನಡೆಸಿ ಭೂಮಿಯನ್ನು ಮಾರಾಟ ಮಾಡುವವರಿಂದ ಖರೀದಿಸಲು ಇಚ್ಚಿಸುವ ಸಂಭವವಿರುವುದರೀದ ರಾಜ್ಯದಲ್ಲಿ ಕೈಗಾರಿಕೆ ಸ್ಥಾಪನೆಗೆ ಸ್ವ ಇಚ್ಚೆ ಮೇರೆಗೆ ರೈತರು/ಖಾಸಗಿಯವರು/ಕೈಗಾರಿಕೆ ನಡೆಸಿ ಭೂಮಿಯನ್ನು ಮಾರಾಟ ಮಾಡಲು ಉದ್ದೇಶಿಸಿರುವ ಭೂ ವಿವರಗಳ ಮಾಹಿತಿಯನ್ನು ಕ್ರೋಡಿಕರಿಸಿಬಂಡವಾಳ ಹೂಡಿಕೆದಾರರಿಗೆ ಈ ಮಾಹಿತಿಯನ್ನು ನೀಡಿ ಅವರು ಇಚ್ಚಿಸಿದಲ್ಲಿ ರೈತರ ನಡುವೆ ನೇರ ಸಂಪರ್ಕ ಕಲ್ಪಿಸಲು ಸ್ವ ಇಚ್ಚೆ ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲಾಗಿದೆ. ರೈತರು/ಖಾಸಗಿಯವರು/ಕೈಗಾರಿಕೆ ನಡೆಸಿ ಭೂಮಿಯನ್ನು ಮಾರಾಟ ಮಾಡುವವರ ಭೂವಿವರಗಳನ್ನು ಸಂಬಂದಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರಗಳಲ್ಲಿ ಕೊಡಬಹುದಾಗಿದೆ ಅಥವಾ ವೆಬ್ ಸೈಟ್ http://74.53.137.123/voluntarylandbank ಅಡಿಯಲ್ಲಿ ಮಾಹಿತಿನೀಡಲು ಅವಕಾಶ ಕಲ್ಪಿಸಲಾಗಿದೆ. ಬಂಡವಾಳ ಹೂಡಿಕೆದಾರರು ಈ ವೆಬ್ ಸೈಟ್ ಸಂಪರ್ಕಿಸಿ ಸ್ವಇಚ್ಚೆ ಇಂದ ಮಾರಾಟ ಮಾಡುವ ಭೂವಿವರಗಳನ್ನು ತಳಿದುಕೊಂಡು ತಮ್ಮ ಯೋಜನೆಯ ಅನಷ್ಟಾನ ಪ್ರಕ್ರಿಯೆಗೆಅವಕಾಶ ಕಲ್ಪಿಸಲಾಗುವುದೆಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರಿ ಕೆ. ಜೋತಿರಾಮಲಿಂಗಂ ಅವರು ದಕ್ಷಿಣ ಕನ್ನಡ ಜಿಲ್ಲಾದಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರಿಗೆ ಪತ್ರ ಬರೆದಿದ್ದಾರೆ.

ದ.ಕ, ಸಹಕಾರಿ ಹಾಲು ಒಕ್ಕೂಟಕ್ಕೆ  ರಾಷ್ಟ್ರೀಯ ಸಹಕಾರಿ ಹೈನು ಸಂಸ್ಥೆ ನಿರ್ದೇಶಕರಾದ ಶ್ರೀ ಸುಭಾಶ್ಚಂದ್ರ ಮಾಂಡ್ಗ

      ಮಧ್ಯಪ್ರದೇಶ ರಾಜ್ಯದ ಡೈರಿ ಮಹಾಮಂಡಳೀಯ ಅಧ್ಯಕ್ಷರೂ, ರಾಷ್ಟ್ರೀಯಸಹಕಾರಿ ಹೈನು ಸಂಸ್ಥೆ ನಿರ್ದೇಶರು ಆದ ಶ್ರೀಮಾನ್ ಸುಭಾಶ್ಚಂದ್ರ ಮಾಂಡ್ಗ ಅವರು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ,ಕುಲಶೇಖರ ಮಂಗಳೂರು ಇಲ್ಲಿಗೆ 13-4-2012 ರಂದು ಮದ್ಯಾಹ್ನ 3-00 ಗಂಟೆಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಡೈರಿ ಆವರಣದಲ್ಲಿ  ಹೈನುಗಾರಿಕೆ ಅಭವೃದ್ದಿ ಕುರಿತು ವಿಚಾರ ವಿನಿಮಯ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಆಸಕ್ತ ಹೈನುಗಾರರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಸದಸ್ಯರು ಭಾಗವಹಿಸಬಹುದೆಂದು ಒಕ್ಕೂಟದ ಅಧ್ಯಕ್ಷರಾದ ಶ್ರೀ ರವಿರಾಜ ಹೆಹಡೆರವರು ತಿಳಿಸಿದ್ದಾರೆ.                       

ಯುವಜನರು ವೃದ್ದರು ಅಶಕ್ತರಿಗೆ ನೆರವಾಗಬೇಕು-ಶೈಲೇಶ್ ಕುಮಾರ್

      ಯುವಜನಾಂಗ ವಯಸ್ಸಾದವರ ಜವಾಬ್ದಾರಿಯನ್ನು ತಗೆದುಕೊಳ್ಳುವ ಮೂಲಕ ಅವರ ಆರೋಗ್ಯದೆಡೆ ಹೆಚ್ಚಚಿನ ಗಮನ ಹರಿಸುವಂತೆ ದ.ಕ. ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶೈಲೇಶ್ ಕುಮಾರ ಅವರು ಯುವಜನತೆಗೆ ಕರೆನೀಡಿದ್ದಾರೆ.

    ಅವರು ಇಂದು ಕ್ಷೇತ್ರ ಪ್ರಚಾರ ನಿರ್ದೇಶನಾಲಯ,ಮಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹಾಗೂ ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

     ಸದೃಡ ಸಮಾಜ ನಿರ್ಮಾಣಕ್ಕಾಗಿ ಸಮಾಜದಲ್ಲಿನ ಎಲ್ಲರೂ ತಮ್ಮ ತಮ್ಮ ವೈಯುಕ್ತಿಕ ಆರೋಗ್ಯದೆಡೆಗೆ ಗಮನ ಹರಿಸಬೇಕು  ಅಲ್ಲದೆ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕೆಂದು ತಿಳಿಸಿದರು.

     ಸಹಾಯಕ ಆರೋಗ್ಯಾದಿಕಾರಿ ಕುಮಾರಿ ಲೋಲಾಕ್ಷಿ ಅವರು ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಮನಸ್ಸು ಆರೋಗ್ಯದಿಂದಿರಲು ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವಂತೆ ತಿಳಿಸಿದರು. ಸ್ಥಳೀಯ ಸ್ತ್ರೀಶಕ್ತಿ ಸಂಘದ ಅದ್ಯಕ್ಷೆ ಶ್ರೀಮತಿ ಸಾವಿತ್ರಿ ಅಧ್ಯಕ್ಷತೆ ವಹಿಸಿದ್ದರು.ಸಹಾಯಕ ಶಿಶು ಅಬಿವೃದ್ದಿ ಯೋಜನಾದಿಕಾರಿ ಕೇಶವ್ ಊಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಕ್ಷೇತ್ರ ಪ್ರಚಾರಾದಿಕಾರಿ ಟಿ.ಬಿ. ನಂಜುಂಡಸ್ವಾಮಿ ಬಹುಮಾನಗಳನ್ನು ವಿತರಿಸಿದರು..

ಎಪ್ರಿಲ್ 15ರಂದು ಜಿಲ್ಲೆಯಲ್ಲಿ 1ಲಕ್ಷ65ಸಾವಿರ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡುವ ಗುರಿ

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012 ಎಪ್ರಿಲ್ 15ರಂದು 921 ಲಸಿಕಾ ಕೇಂದಗಳಲ್ಲಿ ಒಟ್ಟು 1,65,136 0-5ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ|ಶ್ರೀರಂಗಪ್ಪ ಅವರು ತಿಳಿಸಿದ್ದಾರೆ.

     ಆವರು ಇಂದು ತಮ್ಮ ಕಚೇರಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿದಿಗಳಿಗೆ ಮಾಹಿತಿ ನೀಡಿದರು. ವಲಸೆ ಕಾರ್ಮಿಕರ ಮಕ್ಕಳ ಸಂಕೆ1427 ಎಂದು ಅಂದಾಜು ಮಾಢಲಾಗಿದ್ದು ಈ ಬಾರಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲೀಯೋ ಲಸಿಕೆ ಹಾಕುವ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

     ಸಾರ್ವಜನಿಕರು ತಮ್ಮ ಮಕ್ಕಳಿಗೆ ಏಪ್ರಿಲ್ 15 ರ ಭಾನುವಾರದಂದೇ ಪೋಲಿಯೋ ಲಸಿಕೆ ಹಾಕಿಸಲು ತಮ್ಮ ಮನೆ ಹತ್ತಿರದ ಲಸಿಕಾ ಕೇಂದ್ರಕ್ಕೆ ತೆರಳುವಂತೆ ಅವರು ವಿನಂತಿಸಿದ್ದಾರೆ. 6 ಸಂಚಾರಿ ತಂಡ ಹಾಗೂ 21 ಟ್ರಾನ್ಸಿಟ್ ಲಸಿಕಾ ಘಟಕಗಳನ್ನು ರೂಪಿಸಲಾಗಿದೆ. ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲು 3788 ಲಸಿಕೆ ನೀಡುವವರು ಹಾಗೂ 187 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸದಿದ್ದಾರೆ.

ಪುತ್ತೂರು ತಾಲ್ಲೂಕು ಸವಣೂರಿಗೆ ಡಾ|ಅಂಬೇದ್ಕರ್ ಯುವಜನ ಅಭಿವೃದ್ದಿ ಕೇಂದ್ರ ಮಂಜೂರು-ಶ್ರೀಮತಿ ಶೈಲಜಾ ಭಟ್

 ಕರ್ನಾಟಕ ಸಕಾರವು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವಿಶೇಷ ಘಟಕ ಯೋಜನೆಯಡಿ 2011-12ನೇ ಸಾಲಿನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಡಾ|ಅಂಬೇಡ್ಕರ್ ಯುವಜನ ಅಭವೃದ್ದಿ ಕೇಂದ್ದವನ್ನು ಸ್ಥಾಪಿಸಲು ತಲಾ ರೂ.10.00ಲಕ್ಷಗಳನ್ನು ಮೀಸಲಾಗಿಟ್ಟಿದ್ದು, ಅದರಂತೆ ದ.ಕ. ಜಿಲ್ಲೆಗೆ ನಿಗದಿಯಾಗಿರುವ ಡಾ|ಅಂಬೇಡ್ಕರ್ ಯುವಜನ ಅಭಿವೃದ್ದಿ ಕೇಂದ್ರವನ್ನು ಪುತ್ತೂರು ತಾಲ್ಲೂಕಿನ ಸವಣೂರು ಗ್ರಾಮದಲ್ಲಿ ನಿರ್ಮಿಸಲು ಮಂಜೂರಾತಿ ದೊರಕಿರುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಆದ್ಯಕ್ಷರಾದ ಶ್ರೀಮತಿ ಶೈಲಜಾ ಭಟ್‌ಅವರು ತಿಳಿಸಿದ್ದಾರೆ.

     ಈ ಉದ್ದೆಶಕ್ಕಾಗಿ ಗ್ರಾಮ ಪಂಚಾಯತ್ ವತಿಯಿಂದ 20 ಸೆಂಟ್ಸ್ ಜಾಗವನ್ನು ಗುರುತಿಸಲಾಗಿದೆ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಈಗಾಗಲೇ ಅಂದಾಜು ಪಟ್ಟಿ ಹಾಗೂ ನೀಲಿ ನಕಾಶೆಯನ್ನು ತಯಾರಿಸಲಾಗಿರುತ್ತದೆ, ಶೀಘ್ರವೇ ಸದರಿ ಕೇಂದ್ರದ ಕಾಮಗಾರಿಯನ್ನು ಆರಂಭಿಸಿ ಕೇಂದ್ರವನ್ನು ಪರಶಿಷ್ಟ ಜಾತಿ ಯುವಜನರ ಚಟುವಟಿಕೆಗಳಿಗೆ ಒದಗಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಪರಿಷೃತ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ. ಪಿ. ರೇಣುಕಾಚಾರ್ಯ ಅವರು ಏಪ್ರಿಲ್ 13 ಹಾಗೂ  14 ರಂದು  ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.  ಏಪ್ರಿಲ್ 13 ರಂದು ಬೆಳಿಗ್ಗೆ 11 ಗಂಟೆಗೆ ಬೇಗೂರಿಗೆ ಆಗಮಿಸುವ ಸಚಿವರು ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ ದ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಬೆಳಿಗ್ಗೆ 11-45 ಗಂಟೆಗೆ ರಾಘವಪುರ ಗ್ರಾಮದಲ್ಲಿ ಬರ ಪರಿಹಾರ ಕಾಮಗಾರಿಗಳ ಪರಿವೀಕ್ಷಣೆ ಮಾಡುವರು. ಮಧ್ಯಾಹ್ನ 12-30 ಗಂಟೆಗೆ ಅಗತಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮೇವು ವಿತರಣೆ ಮಾಡುವರು. ಮಧ್ಯಾಹ್ನ 1 ಗಂಟೆಗೆ ಮಳವಳ್ಳಿ ಗ್ರಾಮದ ಕೆರೆ ಅಭಿವೃದ್ದಿ ಕಾಮಗಾರಿ ವೀಕ್ಷಣೆ ಮಾಡುವರು. ಬಳಿಕ ಗುಂಡ್ಲುಪೇಟೆಯಲ್ಲಿ ಅಧಿಕಾರಿಗಳೊಂದಿಗೆ ಬರಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸುವರು. ಮಧ್ಯಾಹ್ನ 3 ಗಂಟೆಗೆ ಗುಂಡ್ಲುಪೇಟೆ ಪಟ್ಟಣದ ಆಸ್ಪತ್ರೆಯ ನೂತನ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ ಚಾಮರಾಜನಗರಕ್ಕೆ ಪ್ರಯಾಣ ಬೆಳೆಸುವರು. 

  ಏಪ್ರಿಲ್ 14 ರಂದು ಬೆಳಿಗ್ಗೆ 9-30 ಗಂಟೆಗೆ ಚಾಮರಾಜನಗರದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಬಳಿಕ 11 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿಶೇಷ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಪ್ರವಾಸಿ ಟ್ಯಾಕ್ಸಿಗಳ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಸ್ಥಳೀಯ ಕಾಮಗಾರಿಗಳ ವೀಕ್ಷಣಿ ಮಾಡುವರು. ಅಂದು ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರೆಳುವರು ಎಂದು ಪ್ರಕಟಣೆ ತಿಳಿಸಿದೆ.

ಏ. 13 ರಂದು ಬೇಗೂರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡಕ್ಕೆ ಶಂಕುಸ್ಥಾಪನೆ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ಗುಂಡ್ಲುಪೇಟೆ ತಾಲ್ಲೂಕು ಬೇಗೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಶಂಕುಸ್ಥಾಪನಾ ಸಮಾರಂಭವು ಏಪ್ರಿಲ್ 13 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

    ಮುಖ್ಯ ಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಉದ್ಘಾಟನೆ ನೇರವೇರಿಸುವರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ ಜ್ಯೋತಿ ಬೆಳಗಿಸುವರು. ಶಾಸಕರಾದ ಹೆಚ್.ಎಸ್. ಮಹದೇವಪ್ರಸಾದ್ ಅಧ್ಯಕ್ಷತೆ ವಹಿಸುವರು.

   ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ರಾಜೇಶ್ವರಿ ಶ್ರೀನಿವಾಸ ಮೂರ್ತಿ, ಶಾಸಕರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಎಸ್. ಸಂದೇಶ್ ನಾಗರಾಜು, ಗೋ ಮಧುಸೂಧನ್, ಮರಿತಿಬ್ಬೇಗೌಡ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹದೇವ್, ಜಿ.ಪಂ. ಸದಸ್ಯರಾದ ಡಿ.ಸಿ. ನಾಗೇಂದ್ರ, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕೋಮಲ, ಮಲ್ಲಿದಾಸ್, ಗ್ರಾ.ಪಂ. ಅಧ್ಯಕ್ಷರಾದ ಕೆ.ಆರ್. ರೇಖಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಏ. 13 ರಂದು ಗುಂಡ್ಲುಪೇಟೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣ ಕಟ್ಟಡದ ಶಂಕುಸ್ಥಾಪನೆ ಸಮಾರಂಭ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಆರೋಗ್ಯ ಪದ್ದತಿ ಅಭಿವೃದ್ದಿ ಹಾಗೂ ಸುಧಾರಣ ಯೋಜನೆಯಡಿ ಗುಂಡ್ಲುಪೇಟೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಉನ್ನತೀಕರಣ ಕಟ್ಟಡದ ಶಂಕುಸ್ಥಾಪನೆ ಸಮಾರಂಭವನ್ನು ಏಪ್ರಿಲ್ 13 ರಂದು ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

   ಮುಖ್ಯ ಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಉದ್ಘಾಟನೆ ನೇರವೇರಿಸುವರು. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ ಜ್ಯೋತಿ ಬೆಳಗಿಸುವರು. ಶಾಸಕರಾದ ಹೆಚ್.ಎಸ್. ಮಹದೇವಪ್ರಸಾದ್ ಅಧ್ಯಕ್ಷತೆ ವಹಿಸುವರು.

   ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ರಾಜೇಶ್ವರಿ ಶ್ರೀನಿವಾಸ ಮೂರ್ತಿ, ಶಾಸಕರಾದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಎಸ್. ಸಂದೇಶ್ ನಾಗರಾಜು, ಗೋ ಮಧುಸೂಧನ್, ಮರಿತಿಬ್ಬೇಗೌಡ, ಪುರಸಭೆ ಅಧ್ಯಕ್ಷರಾದ ರಾಧಮ್ಮ, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಮಹದೇವ್, ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕೋಮಲ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ಏಪ್ರಿಲ್ 15 ರಂದು ಪಲ್ಸ್ ಪೋಲಿಯೋ: ಪೂರ್ವಭಾವಿ ಸಭೆ

ಚಾಮರಾಜನಗರ ಏಪ್ರಿಲ್ 11 (ಕರ್ನಾಟಕ ವಾರ್ತೆ): ಬಹು ಮಹತ್ವದ ರಾಷ್ಟ್ರೀಯ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ   ಏಪ್ರಿಲ್ 15  ರಂದು ಹಮ್ಮಿಕೊಳ್ಳಲಾಗಿದೆ. ಅಂದು ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ ಎಲ್ಲ ಮಕ್ಕಳಿಗೂ ತಪ್ಪದೆ ಪೋಲಿಯೋ ಲಸಿಕೆ ಹಾಕಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗಳಾದ ಡಾ.ಎಚ್.ಟಿ. ಚಂದ್ರಶೇಖರ್  ತಿಳಿಸಿದ್ದಾರೆ.

   ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಇಂದು ನಡೆದ  ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತ ಸಮನ್ವಯ  ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

   ಜಿಲ್ಲೆಯಲ್ಲಿ ಮೊದಲ ಹಂತದ ಪೋಲಿಯೋ ಲಸಿಕಾ ಕಾರ್ಯಕ್ರಮವು ಈ ಹಿಂದೆ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿ ಜರುಗಿದೆ. ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವು ಸಹ ಫಲಪ್ರದವಾಗಲು ಅಧಿಕಾರಿಗಳು ಹೆಚ್ಚಿನ ಹೊಣೆಗಾರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೆಚ್.ಟಿ. ಚಂದ್ರಶೇಖರ್ ತಿಳಿಸಿದರು.    

    ಲಸಿಕೆ ನೀಡುವ ಸಲುವಾಗಿ ಸರ್ಕಾರಿ, ಖಾಸಗಿ ಬಸ್ಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜನ ಸಂದಣಿ ಸ್ಥಳಗಳಲ್ಲಿ  ಟ್ರಾನ್ಸಿಟ್ ಬೂತ್‌ಗಳನ್ನು ತೆರೆಯಲಾಗಿದೆ. ಅಲ್ಲದೆ ಸಂಚಾರಿ ಬೂತ್ ವ್ಯವಸ್ಥೆ ಸಹ ಮಾಡಲಾಗಿದೆ. 5 ವರ್ಷದ ವರೆಗಿನ ಎಲ್ಲ ಮಕ್ಕಳಿಗೆ ಈ ಹಿಂದೆ ಎಷ್ಟು ಬಾರಿ ಲಸಿಕೆ ನೀಡಿದ್ದರು ಸಹ ಅಂದು ಲಸಿಕೆ ಕೊಡಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಮನವಿ ಮಾಡಿದರು.

    ಪೊಲೀಸ್ ಇಲಾಖೆ ಪ್ರತಿ ಬಸ್ಸುಗಳನ್ನು ನಿಲ್ಲಿಸಿ ಪೋಲಿಯೋ ಹನಿ ಹಾಕಿಸಲು ಸಹಕಾರ ನೀಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಕೇಂದ್ರ ತೆರೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಗತ್ಯ ವ್ಯವಸ್ಥೆ ಮಾಡಬೇಕು. ಲಸಿಕೆ ಶೀಥಲಿಕರಣಕ್ಕಾಗಿ ಕಾರ್ಯಕ್ರಮಕ್ಕೂ ಮೊದಲ ಮೂರು ದಿನಗಳಂದು ನಿರಂತರ ವಿದ್ಯುತ್ ಪೂರೈಕೆಯನ್ನು ಸೆಸ್ಕ್ ಮಾಡಬೇಕು ಎಂದು ಚಂದ್ರಶೇಖರ್ ಸೂಚಿಸಿದರು.

   ಪೋಲಿಯೋ ಕಾರ್ಯಕ್ರಮಕ್ಕೆ ಅವಶ್ಯವಿರುವ ಸರ್ಕಾರಿ ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ನಿಯೋಜಿಸಬೇಕು. ಲಸಿಕೆ ನೀಡುವ ದಿನದಂದು ಬೆಳಿಗ್ಗೆ 8 ರಿಂದ ಸಂಜೆ 5 ರ ವರೆಗೆ ಕಾಡಂಚಿನ ಗ್ರಾಮಗಳಲ್ಲಿ ಪೋಲಿಯೋ ಕಾರ್ಯಕ್ರಮಕ್ಕೆ ನಿರತವಾಗಿರುವ ವಾಹನಗಳ ಓಡಾಟಕ್ಕೆ ಅನುಮತಿ ನೀಡುವಂತೆ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

    ಪಟ್ಟಣ ಪ್ರದೇಶಗಳಲ್ಲಿ ಪೌರಾಡಳಿತ ಇಲಾಖೆ, ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತ್ ಇಲಾಖೆ ಅಧಿಕಾರಿಗಳು ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿ ಅಗತ್ಯ ವ್ಯವಸ್ಥೆಗೆ ಏರ್ಪಾಡು ಮಾಡಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ ಕುಡಿಯುವ ನೀರು, ಉಪಾಹಾರಕ್ಕೆ ಪೂರ್ವಭಾವಿ ವ್ಯವಸ್ಥೆ ಕೈಗೊಳ್ಳಬೇಕು ಎಂದು ಚಂದ್ರಶೇಖರ್ ತಿಳಿಸಿದರು.

    ಜಿಲ್ಲಾ ವ್ಯಾಪ್ತಿಯ ಎಲ್ಲ ನರ್ಸಿಂಗ್ ಶಾಲೆಗಳ ಮುಖ್ಯಸ್ಥರು, ಸ್ವಯಂ ಸೇವಾ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ಪೋಷಕರು, ಸಂಘ ಸಂಸ್ಥೆಗಳು ಜಿಲ್ಲಾ ಜನತೆ  ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎನ್. ರಮೇಶ್ ಬಾಬು  ಮಾತನಾಡಿ, ಏಪ್ರಿಲ್ 15 ರಂದು ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾಗುವ ಲಸಿಕಾ ಕೇಂದ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಎರಡನೇ ಮತ್ತು ಮೂರನೇ ದಿನ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುವುದು. ಪಟ್ಟಣ ಪ್ರದೇಶದಲ್ಲಿ ನಾಲ್ಕನೇ ದಿನವು ಸಹ ಭೇಟಿ ನೀಡಿ ಮಕ್ಕಳಿಗೆ ಲಸಿಕೆ ಹಾಕಲಾಗುತ್ತದೆ ಎಂದರು.

    ಆರ್.ಸಿ.ಎಚ್. ಅಧಿಕಾರಿ ಡಾ. ಗಿರಿಜಾಂಬ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಸಿದ್ದಲಿಂಗಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಶಹೀರ ಬಾನು, ತಾಲ್ಲೂಕು ವೈದ್ಯಾಧಿಕಾರಿಗಳು, ನಗರಸಭೆ, ಪುರಸಭೆ ಅಧಿಕಾರಿಗಳು ಇತರರು ಸಭೆಯಲ್ಲಿ ಹಾಜರಿದ್ದರು.

ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ತಾಲ್ಲೂಕು ವೈದ್ಯಾಧಿಕಾರಿ ಮನವಿ

ಚಾಮರಾಜನಗರ ಏಪ್ರಿಲ್ 11 (ಕರ್ನಾಟಕ ವಾರ್ತೆ):-  ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮವು ಏಪ್ರಿಲ್ 15 ರಂದು ನಡೆಯಲಿದ್ದು, ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷ ವಯೋಮಿತಿಯ ಎಲ್ಲಾ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸುವಂತೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ. ಮಲ್ಲಿಕಾ ಮನವಿ ಮಾಡಿದ್ದಾರೆ.

   ಚಾಮರಾಜನಗರ ತಾಲ್ಲೂಕಿನಲ್ಲಿ 75986 ಮನೆಗಳಿದ್ದು ಅಂದಾಜು 30598 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ತಾಲ್ಲೂಕಿನಲ್ಲಿ ಒಟ್ಟು 198 ಬೂತ್‌ಗಳನ್ನು ತೆರೆಯಲಾಗುತ್ತಿದೆ. ಇದರಲ್ಲಿ  4 ಟ್ರಾನ್ಸಿಟ್, 3 ಸಂಚಾರಿ, ಬೂತುಗಳು ಸೇರಿವೆ. 792 ವ್ಯಾಕ್ಸಿನೇಟರ್ ಹಾಗೂ 40 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸ್ವಯಂ ಸೇವಕರು ಹಾಗೂ ರೋಟರಿ ಸಂಸ್ಥೆಯವರು ಪೋಲಿಯೋ ಲಸಿಕೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು  ಮಲ್ಲಿಕಾ ತಿಳಿಸಿದ್ದಾರೆ.

    ಚಾಮರಾಜನಗರ ಪಟ್ಟಣದಲ್ಲಿ ರಾಮಸಮುದ್ರ, ದೊಡ್ಡ ಹರಿಜನ ಬೀದಿ, ಕುರುಬರ ಬೀದಿ, ಉರ್ದು ಶಾಲೆ, ಚಿಕ್ಕ ಹರಿಜನ ಬೀದಿ, ಎ.ಜಿ. ಕಾಲೋನಿ, ನಾಯಕರ ಬೀದಿ, ಕರಿನಂಜನಪುರ, ಪಿ.ಡಬ್ಲ್ಯೂಡಿ ಕಾಲೋನಿ, ಕೆ.ಪಿ. ಮೊಹಲ್ಲಾ 1 ಮತ್ತು 2, ಕೆ.ಎನ್. ಮೊಹಲ್ಲಾ, ರಹಮತ್ ನಗರ, ಸೋಮವಾರ ಪೇಟೆ, ಟಿ.ಕೆ.ಮೋಳೆ, ಬೂದಿ ತಿಟ್ಟು, ಅಹಮದ್ ನಗರ 1 ಮತ್ತು 2, ವರದರಾಜಪುರ, ಗಾಳಿಪುರ, ಬೀಡಿ ಕಾಲೋನಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ರೈಲ್ವೆ ಬಡಾವಣೆ, ಭುಜಂಗೇಶ್ವರ ಬಡಾವಣೆ, ಕೆ.ಪಿ.ಮೊಹಲ್ಲಾ, ಪ್ರಜ್ಜಲ್ ಮಹಿಳಾ ಸಂಘ, ಚಾಮರಾಜೇಶ್ವರ ದೇವಸ್ಥಾನ, ಮೇಗಲ ನಾಯಕರ ಬೀದಿ, ಉಪ್ಪಾರ ಬೀದಿ, ಕೆಳಗಡೆ ನಾಯಕರ ಬೀದಿ, ಜಾಮಿಯಾ ಮಸೀದಿ, ಶಂಕರಪುರ, ಗಣಪತಿ ದೇವಸ್ಥಾನ, ಚನ್ನಿಪುರದ ಮೋಳೆ, ರೋಟರಿ ಶಾಲೆ, ಜಿಲ್ಲಾ ಆಸ್ಪತ್ರೆ, ಚನ್ನಿಪುರ ಮೋಳೆ, ಜಾಲಹಳ್ಳಿ ಹುಂಡಿ, ಜಾಲಹಳ್ಳಿ ಹುಂಡಿ ಬಡಾವಣೆ, ಮೂಡ್ಲಮೋಳೆ, ಹಾಗೂ ಮತ್ತು ಅಂಗನವಾಡಿಗಳ ಕೇಂದ್ರಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ.

    ಪಲ್ಸ್ ಪೋಲಿಯೋ ಸಂಬಂಧ ಯಾವುದೇ ಮಾಹಿತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ದೂರವಾಣಿ ಸಂಖ್ಯೆ 9449843047 ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ 9448436277 ನ್ನು ಸಂಪರ್ಕಿಸುವಂತೆ ಅವರು  ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

ಏಪ್ರಿಲ್ 17 ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಖಾಸಗಿ ಶಾಲೆ ಆಡಳಿತ ಮಂಡಳಿ ಸಭೆ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- 2012-13 ನೇ ಸಾಲಿನ ಪ್ರವೇಶ ಹಾಗೂ ಶುಲ್ಕ ನಿಯಂತ್ರಣದ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ  ಏಪ್ರಿಲ್ 17 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿ ಸಭೆ ಕರೆಯಲಾಗಿದೆ.

   ಅಂದು ನಡೆಯುವ ಸಭೆಗೆ ಜಿಲ್ಲೆಯ ಎಲ್ಲಾ ಖಾಸಗಿ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಕಡ್ಡಾಯವಾಗಿ ಭಾಗವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾದ ಬೆಳ್ಳಶೆಟ್ಟಿ  ತಿಳಿಸಿದ್ದಾರೆ.

   ಈ ಸಭೆಗೆ ಜಿಲ್ಲೆಯ ಸಂಘ ಸಂಸ್ಥೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಹಾಗೂ ನಾಗರಿಕರು ಭಾಗವಹಿಸಿ ಕುಂದುಕೊರತೆಗಳ ಬಗ್ಗೆ ಚರ್ಚಿಸುವಂತೆಯು ಬೆಳ್ಳಶೆಟ್ಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಏಪ್ರಿಲ್ 16 ರಂದು ಬಿಳಿಗಿರಿರಂಗನಾಥ ಸ್ವಾಮಿ ಜಾತ್ರೆ ಪೂರ್ವ ಸಿದ್ದತಾ ಸಭೆ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ  ಶ್ರೀ ಬಿಳಿಗಿರಿರಂಗನಾಥ ಸ್ವಾಮಿಯವರ ಬ್ರಹ್ಮ ರಥೋತ್ಸವ ಮೇ 4 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಾತ್ರೆ ಪೂರ್ವ ಸಿದ್ದತೆ ಕುರಿತು ಚರ್ಚಿಸಲು ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 16 ರಂದು ಬೆಳಿಗ್ಗೆ 10-30 ಗಂಟೆಗೆ ಬಿಳಿಗಿರಿರಂಗನಬೆಟ್ಟದಲ್ಲಿರುವ ಬಿಳಿಗಿರಿ ಭವನ ವಸತಿ ಗೃಹ ಸಭಾಂಗಣದಲ್ಲಿ ಸಭೆ ಕರೆಯಲಾಗಿದೆ ಎಂದು ಯಳಂದೂರು ತಹಶೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೃಹರಕ್ಷಕರ ಹುದೆಗಳ  ನೇಮಕಕ್ಕೆ ಅರ್ಜಿ ಆಹ್ವಾನ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ಜಿಲ್ಲಾ ಗೃಹರಕ್ಷಕ ದಳ ಸ್ವಯಂ ಸೇವಾ ಸಂಸ್ಥೆಯು ಪ್ರಸ್ತಕ ಸಾಲಿನಲ್ಲಿ ಪುರುಷ ಹಾಗೂ ಮಹಿಳಾ ಗೃಹ ರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಚಾಮರಾಜನಗರ, ಗುಂಡ್ಲುಪೇಟೆ, ತೆರಕಣಾಂಬಿ, ಕೊಳ್ಳೇಗಾಲ, ಯಳಂದೂರು, ಕುದೇರು, ಹನೂರು, ಅಗರ-ಮಾಂಬಳ್ಳಿ, ರಾಮಾಪುರ ಸುತ್ತಮುತ್ತಲಿನ ಪ್ರದೇಶದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು 4 ನೇ ತರಗತಿಗಿಂತ ಮೇಲ್ಪಟ್ಟು  ವಿದ್ಯಾರ್ಹತೆ ಹೊಂದಿರಬೇಕು. ಕನಿಷ್ಠ 20 ವರ್ಷಗಳಾಗಿರಬೇಕು. ದೃಡಕಾಯರಾಗಿರಬೇಕು. ಆಸಕ್ತರು ತಮ್ಮ ಸಂಪೂರ್ಣ ವಿವರಗಳನ್ನು ಒಳಗೊಂಡ ಲಿಖಿತ ಅರ್ಜಿಯನ್ನು ಮೇ 19 ರೊಳಗೆ ಆಯಾ ತಾಲ್ಲೂಕಿನ ಘಟಕಾಧಿಕಾರಿಗಳನ್ನು ಸಂಪರ್ಕಿಸಿ ಸಲ್ಲಿಸಬಹುದು. ಘಟಕಾಧಿಕಾರಿಗಳ ವಿವರ ಹೀಗಿದೆ.

    ಟಿ. ಮಹದೇವಸ್ವಾಮಿ, ಚಾಮರಾಜನಗರ(ದೂ. ಸಂ. 9739421156), ಕೆ.ಎಸ್. ಶ್ರೀನಿವಾಸನ್, ಗುಂಡ್ಲುಪೇಟೆ (ದೂ.ಸಂ. 9449679209), ಎನ್. ಬಿಳಿಗಿರಿರಂಗಯ್ಯ, ಯಳಂದೂರು (ದೂ.ಸಂ. 9980369148), ದೇವರಾಜು, ಅಗರ-ಮಾಂಬಳ್ಳಿ (ದೂ.ಸಂ. 9008081713), ಎಸ್. ರಮೇಶ, ಹನೂರು (ದೂ.ಸಂ. 9141465500), ದೊಡ್ಡಸ್ವಾಮಿ, ರಾಮಾಪುರ (ದೂ.ಸಂ. 9902422129), ಸಿದ್ದರಾಜು, ಕುದೇರು (ದೂ.ಸಂ. 9481189079), ಶಿವಣ್ಣ, ಕೊಳ್ಳೇಗಾಲ (ದೂ.ಸಂ. 9910686050), ಸಿ. ಸಿದ್ದರಾಜು, ತೆರಕಣಾಂಬಿ (ದೂ. ಸಂ. 8749049920).

   ನೇಮಕಾತಿ ಸಂಬಂಧ ಸಂಪೂರ್ಣ ಮಾಹಿತಿಗಾಗಿ ನಗರದ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಅಥವಾ ದೂರವಾಣಿ ಸಂಖ್ಯೆ 08226-225856 ಸಂಪರ್ಕಿಸುವಂತೆ ಗೃಹರಕ್ಷಕ ದಳ ಸಮಾದೇಷ್ಟರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 15 ರಂದು ಮಾಜಿ ಸೈನಿಕರಿಗೆ ಉದ್ಯೋಗ ಮೇಳ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ನಿರುದ್ಯೋಗಿ ಮಾಜಿ ಸೈನಿಕರು ಹಾಗೂ ವೀರನಾರಿಯರಿಗೆ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಏಪ್ರಿಲ್ 15 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕರ್ನಾಟಕ ಮತ್ತು ಕೇರಳ ಸಬ್ ಏರಿಯಾ ಆಶ್ರಯದಲ್ಲಿ ಏರ್ಪಡಾಗಿರುವ ಉದ್ಯೋಗ ಮೇಳದಲ್ಲಿ ಬೆಂಗಳೂರಿನ ವಿವಿಧ ಕೈಗಾರಿಕಾ ಉದ್ದಿಮೆ, ಕಂಪನಿಗಳು ಭಾಗವಹಿಸಲಿವೆ. ಮಾಜಿ ಸೈನಿಕರು ಹಾಗೂ ವೀರನಾರಿಯರು ಉದ್ಯೋಗ ಮೇಳದ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ ಆರ್.ಎಸ್. ವಿಶ್ವನಾಥ ಪ್ರಕಟಣೆಯಲ್ಲಿ ಕೋರಿದ್ದಾರೆ. 

ವಿವಿಧ ಹುದ್ದೆಗಳ ಭರ್ತಿಗೆ ಸ್ಪರ್ಧಾತ್ಮಕ ಪರೀಕ್ಷೆ: ಅರ್ಜಿ ಆಹ್ವಾನ

ಚಾಮರಾಜನಗರ ಏಪ್ರಿಲ್ 12 (ಕರ್ನಾಟಕ ವಾರ್ತೆ):- ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದೆಗಳ ನೇಮಕಕ್ಕಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಸಿಬ್ಬಂದಿ ನೇಮಕಾತಿ ಆಯೋಗ ಅರ್ಜಿ ಆಹ್ವಾನಿಸಿದೆ. ಅಪ್ಪರ್ ಡಿವಿಜನ್ ಕ್ಲರ್ಕ್ಸ್, ಡಿವಿಜನಲ್ ಅಕೌಂಟೆಂಟ್ಸೆ, ಎನ್‌ಫೋರ್‍ಸಮೆಂಟ್ ಆಫೀಸರ್‍ಸ್, ಸೆಂಟ್ರಲ್ ಎಕ್ಸೈಜ್ ಇನ್ಸ್‌ಫೆಕ್ಟರ್, ಇನ್ ಕಂ ಟ್ಯಾಕ್ಸ್ ಇನ್ಸ್‌ಫೆಕ್ಟರ್, ಸಿ.ಬಿ.ಐ. ಸಬ್ ಇನ್ಸ್‌ಫೆಕ್ಟರ್, ಇನ್ಸ್‌ಫೆಕ್ಟರ್ ಆಫ್ ಪೋಸ್ಟ್, ಆಡಿಟರ್‍ಸ್, ಅಕೌಂಟೆಂಟ್ಸ್, ಸ್ಟಾಟಿಸ್ಟಿಕಲ್ ಇನ್‌ವೆಸ್ಟಿಗೇಟರ್, ಅಸಿಸ್ಟೆಂಟ್ಸ್  ಮುಂತಾದ ಹುದ್ದೆಗಳಿಗೆ ಕಂಬೈನ್ಡ್ ಗ್ರಾಜುಯೇಟ್ ಲೆವಲ್ ಪರೀಕ್ಷೆ ನಡೆಸಲಾಗುತ್ತದೆ.  

   ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದ ಪದವಿ ಪಡೆದಿರಬೇಕು. ಅರ್ಜಿಗಳನ್ನು  http://ssc online.nic.in ಅಥವಾ   http://ssc registration.sifytest.com  ವೆಬ್ ಸೈಟ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಏಪ್ರಿಲ್ 17 ಕಡೆಯ ದಿನ.

   ಹೆಚ್ಚಿನ ಮಾಹಿತಿಗೆ ಮೇಲ್ಕಂಡ ವೆಬ್ ಸೈಟ್ ನೋಡಬಹುದು ಅಥವಾ ಮೈಸೂರಿನ ವಿಶ್ವವಿದ್ಯಾನಿಲಯದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, (ದೂರವಾಣಿ ಸಂಖ್ಯೆ 0821-2516844, ಮೊಬೈಲ್ ಸಂಖ್ಯೆ 9449686641) ಸಂಪರ್ಕಿಸಬಹುದು ಎಂದು  ಪ್ರಕಟಣೆ ತಿಳಿಸಿದೆ.

ಏಪ್ರಿಲ್ 13 ರಂದು ನಗರದಲ್ಲಿ ಡಾ|| ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆ ಕುರಿತು ವಿಚಾರ ಸಂಕಿರಣ

ಚಾಮರಾಜನಗರ ಏಪ್ರಿಲ್ 11 (ಕರ್ನಾಟಕ ವಾರ್ತೆ):- ಸಂವಿಧಾನ ಶಿಲ್ಪಿ ಡಾ|| ಬಿ.ಆರ್. ಅಂಬೇಡ್ಕರ್ ಅವರ 121 ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಏಪ್ರಿಲ್ 13 ರಂದು ಬೆಳಿಗ್ಗೆ 10 ಗಂಟೆ ನಗರ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಅಂಬೇಡ್ಕರ್ ವಿಚಾರಧಾರೆಗಳ ಕುರಿತು ವಿಚಾರ ಸಂಕಿರಣ  ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧಿಕಾರಿಗಳಾದ ಕೆ. ಆರ್. ಸುಂದರ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಪ್ರಭಾರ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎ.ಪಿ. ಶಂಕರರಾಜು ಅಧ್ಯಕ್ಷತೆ ವಹಿಸುವರು.

   ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ಡಾ|| ದೇವರಾಜು ಅವರು ಭಾರತ ಸಂವಿಧಾನ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಎಂಬ ವಿಷಯ ಕುರಿತು ವಿಚಾರ ಮಂಡಿಸುವರು.  ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ.ಕೆ. ಮಹೇಶ್  ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆರ್ಥಿಕ ಮತ್ತು ಸಾಮಾಜಿಕ ಚಿಂತನೆಗಳ ಕುರಿತು ವಿಚಾರ ಮಂಡನೆ ಮಾಡುವರು. ಕಾನೂನು ಇಲಾಖೆಯ ಉಪಕಾರ್ಯದರ್ಶಿಗಳಾದ ಆರ್. ಮಹಾದೇವಯ್ಯ ಅವರು ಅಸ್ಪೃಶ್ಯತೆ ಮತ್ತು ಪಿ.ಟಿ.ಸಿ.ಎಲ್ ಕಾಯಿದೆ ಬಗ್ಗೆ, ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಆರ್. ಮಹಾದೇವಪ್ಪ ಅವರು ಭೌದ್ದ ದಮ್ಮ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಿಷಯ ಕುರಿತು ವಿಚಾರ ಮಂಡಿಸುವರು ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಉಪ ಸಮಿತಿಯ ಅಧ್ಯಕ್ಷರು  ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ಏ.16-18: ಜಿಲ್ಲೆಯಲ್ಲಿ ಕಾನೂನು ಸಾಕ್ಷರತಾ ರಥ

ಚಿಕ್ಕಮಗಳೂರು ಏ.12: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ವಿವಿಧ ಇಲಾಖೆಗಳ ಹಾಗೂ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಕಾನೂನು ಸಾಕ್ಷರತಾ ರಥ ಏಪ್ರಿಲ್-16 ರಿಂದ 18ರವೆರೆಗೆ ಸಂಚರಿಸಲಿದೆ. ಏಪ್ರಿಲ್ 16ರಂದು ಬೆಳಗ್ಗೆ 10ಗಂಟೆಗೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ್.ಎ.ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

   ಅಂದು ಮಧ್ಯಾಹ್ನ 12ಗಂಟೆಗೆ ನಗರದ ಬಿಜಿಎಸ್ ಶಿಕ್ಷಣ ಕಾಲೇಜು, ಸಂಜೆ 5ಗಂಟೆಗೆ ಮಲ್ಲಂದೂರು ಪ್ರಾಥಮಿಕ ಶಾಲೆ, ಏಪ್ರಿಲ್ 17ರಂದು ಬೆಳಗ್ಗೆ 10ಗಂಟೆಗೆ ನಗರದ ನಗರದ ಎಂಎಲ್‌ಎಂಎನ್ ಶಿಕ್ಷಣ ಕಾಲೇಜು, ಮಧ್ಯಾಹ್ನ 12ಗಂಟೆಗೆ ಚಿಕ್ಕಮಗಳೂರು ನಗರಸಭೆ ಸಭಾಂಗಣ, ಸಂಜೆ 5ಗಂಟೆಗೆ ಹಿರೇಮಗಳೂರು, ಏಪ್ರಿಲ್ 18ರಂದು ಬೆಳಗ್ಗೆ 10ಗಂಟೆಗೆ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನ ಸಭಾಂಗಣ, ಮಧ್ಯಾಹ್ನ 12ಗಂಟೆಗೆ ಕೆಎಸ್‌ಆರ್‌ಟಿಸಿ ಕಾರ್ಯಾಗಾರ, ಸಂಜೆ 5ಗಂಟೆಗೆ ನಗರದ ಕಸ್ತೂರಬಾ ಸದನ ಇಲ್ಲಿಗೆ ಕಾನೂನು ಸಾಕ್ಷರತಾ ರಥ ಆಗಮಿಸಲಿದೆ.

   ಕಾರ್ಯಕ್ರಮ ನಡೆಯುವ ಎಲ್ಲ ಸ್ಥಳಗಳಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ವಿವಿಧ ವಿಷಯಗಳ ಬಗ್ಗೆ ಕಾನೂನು ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪನ್ಯಾಸ ನೀಡಲಿದ್ದಾರೆ. ಸಾರ್ವಜನಿಕರು ಇದರ ಹೆಚ್ಚಿನ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

2ನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾಡಳಿತ ಮನವಿ

ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ಇದೇ ಏ.15ರಂದು ಎರಡನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ವಿಗೆ ಎಲ್ಲಾ ಇಲಾಖೆ ಅಧಿಕಾರಿಗಳೂ ಮತ್ತು ಸಿಬ್ಬಂಧಿಗಳು ಪಣತೊಡಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಏ.11ರಂದು ನಡೆದ 2ನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮ ಸಿದ್ದತೆ ಬಗ್ಗೆ ಪರಿಶೀಲಿಸಿ, ಸಂಬಂಧಿಸಿದ ನೋಡಲ್ ಅಧಿಕಾರಿಯಿಂದ ಮಾಹಿತಿ ಪಡೆದು ಅವರು ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು 2ನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡುವಂತೆ ನಾನಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.   

ದೇಶವು ಪಲ್ಸ್ ಪೋಲಿಯೊದಿಂದ ಮುಕ್ತವಾಗಲು ಎರಡನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮ ಮಹತ್ವದ್ದಾಗಿದ್ದು, ಆ ದಿಸೆಯಲ್ಲಿ ಏಪ್ರಿಲ್ 15 ಹಾಗೂ 16, 17 ರಂದು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಐದು ವರ್ಷದೊಳಿಗಿನ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ. ಹಾಗೆಯೇ ಏ.18ರಂದು ನಗರ ಪ್ರದೇಶಗಳಲ್ಲಿ ಪೋಲಿಯೊ ಲಸಿಕೆ ಹಾಕಲಿದ್ದು ಈ ದಿನಗಳಲ್ಲಿ ಪೋಲಿಯೊ ಲಸಿಕೆ ಹಾಳಾಗದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕ್ ಕಾರ್ಯಪಾಲಕ ಅಭಿಯಂತರರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯ ಅಲ್ಲಲ್ಲಿ ಮನೆಗಳು ಇರುವುದರಿಂದ ಮತ್ತು ಕುಗ್ರಾಮಗಳಿಗೆ ಪಲ್ಸ್ ಪೋಲಿಯೊ ಪೂರೈಕೆ ಮಾಡಲು  ಅಗತ್ಯ  ವಾಹನಗಳನ್ನು ನಾನಾ ಇಲಾಖೆ ಅಧಿಕಾರಿಗಳು ಒದಗಿಸಬೇಕು. ಈ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯವರು ಅಗತ್ಯವಾಗಿ ಬೇಕಿರುವ ಹೆಚ್ಚುವರಿ ವಾಹನ ಸೌಲಭ್ಯ ಕಲ್ಪಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ನಿರ್ದೇಶನ ನೀಡಿದರು.

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊವನ್ನು ಕಡ್ಡಾಯವಾಗಿ ಹಾಕಬೇಕು ಮತ್ತು ಕೊಡಗು ಜಿಲ್ಲೆಯಿಂದ ಹೊರ ಹೋಗುವ ಮತ್ತು ಬರುವ ವಲಸೆ ಮಕ್ಕಳನ್ನು ಜತೆಗೆ ಕಳೆದ ಬಾರಿ ಪಲ್ಸ್ ಪೋಲಿಯೊದಿಂದ ಹೊರಗುಳಿದ ಮಕ್ಕಳನ್ನು ಗುರ್ತಿಸಿ ಪಲ್ಸ್ ಪೋಲಿಯೊ ಹನಿ ಹಾಕಬೇಕು. ಹಾಗೆಯೇ ಜಿಲ್ಲೆಯ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ತಂಡ ರಚಿಸಿ ಪಲ್ಸ್ ಪೋಲಿಯೊ ಹಾಕಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪಲ್ಸ್ ಪೋಲಿಯೊ ಜಿಲ್ಲೆಯಲ್ಲಿ ಯಶಸ್ವಿಯಾಗಲು ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಜವಾಬ್ದಾರಿ ಹೆಚ್ಚಿನದಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಕೈಜೋಡಿಸಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಮೊದಲ ಹಂತದ ಪಲ್ಸ್ ಪೋಲಿಯೊದಂತೆಯೇ 2ನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಉಪಾಹಾರ ಮತ್ತು ಊಟ ಒದಗಿಸಲು ಸಂಬಂಧಿಸಿದವರು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಮಾತನಾಡಿ ಪಲ್ಸ್ ಪೋಲಿಯೊ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇದರ ಯಶಸ್ಸು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಜಿಲ್ಲಾ ಪಂಚಾಯತ್ ವತಿಯಿಂದ ಆರೋಗ್ಯ ಇಲಾಖೆಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು ಎಂದರು. ಪಲ್ಸ್  ಪೋಲಿಯೊ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಡಾ.ಆನಂದ್ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಐದು  ವರ್ಷದೊಳಗಿನ 52,140 ಮಕ್ಕಳಿದ್ದು, ಇವರಲ್ಲಿ 6,133 ನಗರ ಮತ್ತು 46,007 ಗ್ರಾಮೀಣ ಪ್ರದೇಶದ ಮಕ್ಕಳಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಎರಡನೇ ಹಂತದ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಒಟ್ಟು 469 ಬೂತ್‌ಗಳನ್ನು ತೆರೆಯಲಾಗಿದೆ. ಅಲ್ಲದೆ 20 ಟ್ರಾನ್ಸಿಸ್ಟ್ ತಂಡಗಳು, 2 ಸಂಚಾರಿ ಲಸಿಕಾ ತಂಡಗಳನ್ನು ವ್ಯವಸ್ಥೆ ಮಾಡಲಾಗಿದೆ. 1896 ಮಂದಿ ಲಸಿಕೆ ಹಾಕುವವರು 87 ಮಂದಿ ಮೇಲ್ವಿಚಾರಕರು, 918 ತಂಡಗಳು ಮನೆ ಮನೆಗೆ ಭೇಟಿ ನೀಡಿ ಪೋಲಿಯೊ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ ಎಂದು ಡಾ. ಆನಂದ್ ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಐದು ವರ್ಷದೊಳಗೆ 220 ವಲಸಿಗ ಮಕ್ಕಳಿದ್ದು, ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಅಂಗನವಾಡಿ,  ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿಯರನ್ನು ನಿಯೋಜಿಸಲಾಗಿದೆ ಎಂದು ಡಾ.ಆನಂದ್ ಅವರು ತಿಳಿಸಿದರು. ಭಾರತೀಯ ವೈದ್ಯಕೀಯ ಸಂಘ ಹಾಗೂ ರೋಟರಿಯ ಪ್ರತಿನಿಧಿಗಳು ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸತೀಶ್, ವಿರಾಜಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್, ಸೋಮವಾರಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಚೇತನ್ ಹಾಗೂ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.

ಕಾನೂನು ಸಾಕ್ಷರತಾ ರಥಾಗೆ ನಿಜಗಣ್ಣವರ್ ಚಾಲನೆ

               ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಏಪ್ರಿಲ್,12 ರಿಂದ ಏ.16 ರವರೆಗೆ 5 ದಿನಗಳ ಕಾಲ ‘ಕಾನೂನು ಅರಿವು ಶಿಬಿರ ಮತ್ತು ಜನತಾ ನ್ಯಾಯಾಲಯ ಕಾರ್ಯಕ್ರಮ’ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥಾಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಶೋಕ್ ಜಿ.ನಿಜಗಣ್ಣವರ್ ಅವರು ನಗರದ ನ್ಯಾಯಾಲಯ ಆವರಣದಲ್ಲಿಂದು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

                ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೋಲಿಸ್ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕಾನೂನು ಸಾಕ್ಷರತಾ ರಥಗೆ ಚಾಲನೆ ನೀಡಿ ಮಾತನಾಡಿ ಸಮಾಜದ ಪ್ರತಿಯೊಬ್ಬರು ಸಂವಿಧಾನದ ಆಶಯಗಳು ಹಾಗೂ ಕಾನೂನುಗಳ ಬಗ್ಗೆ ತಿಳುವಳಿಕೆ ಹೊಂದುವಂತಾಗಲು ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

              ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಹೇಮಾವತಿ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮಹಮ್ಮದ್ ಇಮ್ತ್ಯಾಜ್ ಅಹ್ಮದ್, ಅಪರ ಸಿವಿಲ್ ನ್ಯಾಯಾಧೀಶರಾದ ಪ್ರೇಮ ವಸಂತರಾವ್ ಪವಾರ್, ವಕೀಲರ ಸಂಘದ ಅಧ್ಯಕ್ಷರಾದ ಕೆ.ಕೆ.ನಿರ್ಮಲಾನಂದ, ನ್ಯಾಯಾಲಯ ಇಲಖೆಯ ಜಯಪ್ಪ, ಸರ್ಕಾರದ ಅಭಿಯೋಜಕರು, ವಕೀಲರು ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.

            ಇಂದು ಮಡಿಕೇರಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಮಕ್ಕಳ ಹಕ್ಕಳು ಮತ್ತು ಮಹಿಳಾ ಹಕ್ಕುಗಳ ಕುರಿತು ವಕೀಲರಾದ ಎಂ.ಎಸ್.ಜಯಚಂದ್ರ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಕೆ.ಡಿ.ದಯಾನಂದ ಅವರು ಉಪನ್ಯಾಸ ನೀಡಿದರು. ಮಡಿಕೇರಿಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಮದ್ಯಾಹ್ನದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ಕುರಿತು ವಕೀಲರಾದ ಡಿ.ಎಂ.ಕೇಶವ ಮತ್ತು ದಸ್ತಗಿರಿಯಾದ ವ್ಯಕ್ತಿಗಳ ಹಕ್ಕುಗಳ ಕುರಿತು ವೈ.ಮನೋಜ್ ಬೋಪಯ್ಯ ಅವರು ಕಾನೂನು ಅರಿವು ಮೂಡಿಸಲಾಯಿತು. ಉಪನ್ಯಾಸ ನೀಡಿದರು.

             ಏಪ್ರಿಲ್, 13ರಂದು ಕರಡಿಗೋಡು, ನಲವತ್ತೆಕ್ರೆ ಅಂಗನವಾಡಿ ಕೇಂದ್ರ, ಏಪ್ರಿಲ್, 14ರಂದು ಮಡಿಕೇರಿಯ ಮಿಷನ್ ಶಾಲೆ, ಏಪ್ರಿಲ್. 16ರಂದು ಕುರುಳಿ ಪೈಸಾರಿ ಅಂಗನವಾಡಿ ಕೇಂದ್ರ, ಮಡಿಕೇರಿಯ ಅಶೋಕ್‌ಪುರಂನಲ್ಲಿ ಕಾನೂನು ಅರಿವು ಶಿಬಿರದ ಸಮಾರೋಪ ಸಮಾರಂಭ ನಡೆಯಲಿದೆ.            

ಗಣತಿ ಕಾರ್ಯ; ವೈಜ್ಞಾನಿಕ ಮತ್ತು ವಾಸ್ತವಿಕ ಮಾಹಿತಿ ಒಳಗೊಂಡಿರಲಿ: ಜಿಲ್ಲಾಧಿಕಾರಿ

              ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯವನ್ನು ಜಿಲ್ಲೆಯಲ್ಲಿ ಶೇ. 100ರಷ್ಟು ಸಾಧನೆ ಮಾಡುವುದರ ಜೊತೆಗೆ ವೈಜ್ಞಾನಿಕ ಮತ್ತು ವಾಸ್ತವಿಕ ಮಾಹಿತಿಗಳನ್ನು ಒಳಗೊಂಡಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

              ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಿನ್ನೆ ನಡೆದ ಸಾಮಾಜಿಕ, ಆರ್ಥಿಕ ಹಾಗೂ ಜಾತಿಗಣತಿ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಧಿಕಾರಿ ಮತ್ತು ಸಿಬ್ಬಂದಿಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಗತಿ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ತಳಮಟ್ಟದಿಂದ ಜಿಲ್ಲಾ ಮಟ್ಡದ ಅಧಿಕಾರಿಗಳ ತನಕ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಡಾ.ಎನ್.ವಿ.ಪ್ರಸಾದ್ ಅವರು ನಿರ್ದೇಶನ ನೀಡಿದರು.

               ಸಾಮಾಜಿಕ, ಆರ್ಥಿಕ ಜಾತಿಗಣತಿ ಕಾರ್ಯದಲ್ಲಿ ತಪ್ಪು ಮಾಹಿತಿ ಕಂಡು ಬಂದರೆ ಸಂಬಂಧಿಸಿದ ಜಿಲ್ಲಾ ನೋಡಲ್ ಅಧಿಕಾರಿ ಅವರನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಎಚ್ಚರಿಕೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ ಈ ಗಣತಿ ಕಾರ್ಯದ ನಮೂನೆ ಭರ್ತಿ ಮಾಡುವಲ್ಲಿ ಗೊಂದಲಗಳಿದ್ದರೆ ತಕ್ಷಣವೇ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ತಿಳಿಸಿ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

            ಜಿಲ್ಲೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿಗಣತಿ ಕಾರ್ಯ ಇನ್ನಷ್ಟು ಚುರುಕುಗೊಳ್ಳುವಂತಾಗಬೇಕು. ಈ ಕಾರ್ಯಕ್ಕೆ ನಿಯೋಜಿಸಿರುವ ಮೇಲ್ವಿಚಾರಕರು ತಹಶೀಲ್ದಾರರ ಜೊತೆ ನಿರಂತರ ಸಮನ್ವಯತೆ ಸಾಧಿಸಿ ಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ಪೂರ್ಣಗೊಳಸಬೇಕು ಎಂದು ಅವರು ಸಲಹೆ ಮಾಡಿದರು.          ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಆರ್ಥಿಕ ಮತ್ತು ಜಾತಿಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಹಲವು ಸಲಹೆಗಳನ್ನು ನೀಡಿದರು. 

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನಾ ಕಾರ್ಡ್ ತಲುಪಿಸಲು ಜಿಲ್ಲಾಧಿಕಾರಿ ಸೂಚನೆ

            ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಕಾರ್ಮಿಕ ಕುಟುಂಬದ ಸದಸ್ಯರಿಗೆ ಆರೋಗ್ಯ ಸೇವಾ ಸೌಲಭ್ಯ ಒದಗಿಸಲು ಉತ್ತಮ ಯೋಜನೆಯಾಗಿದ್ದು. ಈ ಯೋಜನೆಯಡಿ ಅರ್ಹ ಎಲ್ಲಾ ಕಾರ್ಮಿಕ ಕುಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಕಾರ್ಡನ್ನು ತಲುಪಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

           ಕಾರ್ಮಿಕ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಎಲ್ಲಾ ಇಲಾಖೆ ಅಧಿಕಾರಿಗಳು ಕೈಜೋಡಿಸಿ ‘ಸ್ಮಾರ್ಟ್ ಕಾರ್ಡ್’ನ್ನು ತುರ್ತಾಗಿ ತಲುಪಿಸಿ ಈ ಯೋಜನೆಯ ಶೇ.100ರಷ್ಟು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಅನುಷ್ಟಾನ ಸಮರ್ಪಕವಾಗಿ ಆಗಿಲ್ಲ. ವಿರಾಜಪೇಟೆ ತಾಲ್ಲೂಕಿನಲ್ಲಿ ಶೇ.43 ರಷ್ಟು ಮಾತ್ರ ಕಾರ್ಡ್ ವಿತರಿಸಲಾಗಿದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.

            ರಾಷ್ಟ್ರೀಯ ಸ್ವಾಸ್ಥ್ಯ ಭೀಮ ಯೋಜನೆಯಡಿ ಕಾರ್ಮಿಕ ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಕಾರ್ಯಕ್ರಮ ಪುಣ್ಯದ ಕೆಲಸವಾಗಿದ್ದು, ಕಾರ್ಮಿಕರು 30 ರೂ. ನೀಡಿ ಹೆಸರು ನೋಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡ್ ಪಡೆದರೆ ಫಲಾನುಭವಿ ಕುಟುಂಬದವರು ಒಂದು ವರ್ಷಕ್ಕೆ 30 ಸಾವಿರ ರೂ.ವರೆಗೆ ಚಿಕಿತ್ಸೆ ವೆಚ್ಚವನ್ನು ನಿಗಧಿತ ಆಸ್ಪತ್ರೆಗಳ್ಲಲಿ ಉಚಿತವಾಗಿ ಆರೋಗ್ಯ ಸೇವೆ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

           ಜಿಲ್ಲೆಯ ಎಲ್ಲಾ ಕಾರ್ಮಿಕರಿಗೆ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯ ಸ್ಮಾರ್ಟ್ ಕಾರ್ಡನ್ನು ಸಮರ್ಪಕವಾಗಿ ವಿತರಿಸುವಂತಾಗಲು 2 ರಿಂದ 3 ಗ್ರಾಮ ಪಂಚಾಯತ್‌ಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಯಿತು. ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಫಲಾನುಭವಿ ಕುಟುಂಬದ ಐದು ಮಂದಿ ಈ  ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

ಲೋಕ ಅದಾಲತ್ ಸಭೆ; ಪೂರ್ವ ತಯಾರಿ ಮಾಡಿಕೊಳ್ಳಲು ಡಿಸಿ ಸೂಚನೆ

           ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ಇದೇ ಏಪ್ರಿಲ್ 23ರಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ‘ಲೋಕ ಅದಾಲತ್’ ನಡೆಯಲಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪರಿಸರಕ್ಕೆ ಸಂಬಂಧಿಸಿದಂತೆ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತು ವಿಲೇವಾರಿ, ಕೆರೆಗಳ ರೆಸ್ಟೋರೇಷನ್, ಬಯೋ ಮೆಡಿಕಲ್ ವೇಸ್ಟ್, ಕಾಸಾಯಿಖಾನೆಯ ತ್ಯಾಜ್ಯ ವಸ್ತುಗಳ ನಿರ್ವಹಣೆ ಮತ್ತಿತರ ವಿಷಯಗಳ ಕುರಿತು ನ್ಯಾಯಾಧೀಶರು ಮಾಹಿತಿ ಪಡೆಯಲಿದ್ದು ಅಧಿಕಾರಿಗಳು ಈಗಿನಿಂದಲೇ ಪರೀಕ್ಷಾ ಮಾದರಿಯಲ್ಲಿ ತಯಾರಿ ಮಾಡಿಕೊಳ್ಳಬೇಕು ಎಂದು ಜಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

            ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಅರಣ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಬೃಹತ್ ಮತ್ತು ಸಣ್ಣ ನೀರಾವರಿ, ತೋಟಗಾರಿಕೆ, ಮೀನುಗಾರಿಕೆ, ಪಶುಪಾಲನೆ, ಸಮಾಜ ಕಲ್ಯಾಣ ಮತ್ತು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಮಾಲಿನ್ಯ ನಿಯಂತ್ರಣ ಮಂಡಳಿ, ಲೋಕೋಪಯೋಗಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಕೈಗಾರಿಕೆ ಮತ್ತು ವಾಣಿಜ್ಯ, ಕೃಷಿ, ಕಾವೇರಿ ಜಲಾನಯನ, ಗಣಿ ಮತ್ತು ಭೂ ವಿಜ್ಞಾನ, ಪ್ರಾದೇಶಿಕ ಸಾರಿಗೆ, ಜಲಾನಯನ ಮತ್ತಿತರ ಇಲಾಖೆಗಳ ಅಧಿಕಾರಿಗಳು ಅಂದು(ಏ.23) ನಡೆಯುವ ಲೋಕ ಅದಾಲತ್‌ನಲ್ಲಿ ಸಮರ್ಪಕ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು. ಲೋಕ ಅದಲಾತ್ ಸಂಬಂಧಿಸಿದಂತೆ ಏಪ್ರಿಲ್ 16ರೊಳಗೆ ಮಾಹಿತಿ ನೀಡಬೇಕು. ಅಂದು(ಏ.16) ಮಧ್ಯಾಹ್ನ ಸಿದ್ದತೆ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಏಪ್ರಿಲ್ 21 ರಂದು ಮತ್ತೊಮ್ಮೆ ಪೂರ್ವ ಸಿದ್ದಥೆ ಬಗ್ಗೆ ಸಭೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಹೆಚ್ಚವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಲೋಕ್ ಆದಾಲತ್ ಸಭೆ ಸಿದ್ದತೆ ಮಾಡಿಕೊಳ್ಳುವ ಬಗ್ಗೆ ಹಲವು ಸಲಹೆಗಳನ್ನು ನೀಡಿದರು. 

ಸಕಾಲ: ಕಾಲಮಿತಿಯೊಳಗೆ ಸಮರ್ಪಕ ಮಾಹಿತಿ ನೀಡಲು ಜಿಲ್ಲಾಧಿಕಾರಿ ನಿರ್ದೇಶನ

               ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ಪಾರದರ್ಶಕ ಆಡಳಿತ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸರ್ಕಾರದ ಪ್ರಮಾಣ ಪತ್ರ ಮತ್ತು ಅಗತ್ಯ ದಾಖಲೆಗಳನ್ನು ನಿಗಧಿತ ಅವಧಿಯೊಳಗೆ ನೀಡುವಂತಾಗಲು ಸರ್ಕಾರ ಜಾರಿಗೊಳಿಸಿರುವ ‘ಸಕಾಲ’ ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ್ ಅವರು ಪರಿಶೀಲನೆ ನಡೆಸಿದರು. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಿನ್ನೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ 11 ಇಲಾಖೆಗಳಿಗೆ ಎಷ್ಟು ಅರ್ಜಿಗಳು ಬಂದಿವೆ ಎಂದು ಮಾಹಿತಿ ಪಡೆದರು.

          ಕಂದಾಯ, ಪೊಲೀಸ್, ಸ್ಥಳೀಯ ಪ್ರಾಧಿಕಾರ, ಪಂಚಾಯತ್ ರಾಜ್, ಆಹಾರ ಮತ್ತು ನಾಗರಿಕ ಸರಬರಾಜು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಾರ್ಮಿಕ ಮತ್ತು ಸಾರಿಗೆ ಇಲಾಖೆಗಳಿಗೆ ಎಷ್ಟು ಅರ್ಜಿಗಳು ಬಂದಿವೆ. ಎಷ್ಟು ವಿಲೇವಾರಿ ಆಗಿವೆ ಎಂದು ಅವರು ಮಾಹಿತಿ ಪಡೆದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ ಅವರು ಅರ್ಜಿ ಬಂದಿರುವ ಬಗ್ಗೆ ಕೂಡಲೇ ವರದಿ ನೀಡಬಕು. ಸರ್ಕಾರ ನಿರ್ದೇಶನದಂತೆ ಕಾರ್ಯ ನಿರ್ವಹಿಸಬೇಕು ಎಂದು ಅವರು ಸಲಹೆ ಮಾಡಿದರು.        ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ ಅವರು ಸಕಾಲಕ್ಕೆ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು. ಸಕಾಲ ನೋಡಲ್ ಅಧಿಕಾರಿ ಅವರು ಹಲವು ಮಾಹಿತಿ ನೀಡಿದರು. ಪಾರದರ್ಶಕ ಆಡಳಿತ ನಿರ್ವಹಣೆ ಮತ್ತು ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸರ್ಕಾರ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ನಿಗಧಿತ ಅವಧಿಯೊಳಗೆ ನೀಡುವಂತಾಗಲು ಜಾರಿಗೊಳಿಸಿರುವ ‘ಸಕಾಲ’ ಯೋಜನೆ ಬಗ್ಗೆ ಜಿಲ್ಲಾಧಿಕಾರಿ ಪ್ರಗತಿ ಪರಿಶೀಲನೆ ನಡೆಸಿದರು. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ 11 ಇಲಾಖೆಗಳ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಯಾವ ಯಾವ ಇಲಾಖೆಗಳಿಗೆ ಎಷ್ಟು ಅರ್ಜಿ ಬಂದಿವೆ.

ಏ. 14ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ 121 ನೇ ಜನ್ಮ ದಿನಾಚರಣೆ

      ಮಡಿಕೇರಿ ಏ.12(ಕರ್ನಾಟಕ ವಾರ್ತೆ):-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್, 14ರಂದು ಬೆಳಗ್ಗೆ 10.30ಗಂಟೆಗೆ ಮಡಿಕೇರಿ ಕಾವೇರಿ ಕಲಾ ಕ್ಷೇತ್ರದಲ್ಲಿ ಸಂವಿಧಾನ ಶಿಲ್ಪಿ ಹಾಗೂ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 121 ನೇ ಜನ್ಮ ದಿನಾಚರಣೆ ನಡೆಯಲಿದೆ.

      ವಿಧಾನ ಸಭಾಧ್ಯಕ್ಷರಾದ ಕೆ.ಜಿ.ಬೋಪಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ವಿಧಾನ ಪರಿಷತ್ ಸದಸ್ಯರಾದ ಎಂ.ಸಿ.ನಾಣಯ್ಯ, ಟಿ.ಜಾನ್, ಸಂಸದರಾದ ಅಡಗೂರು ಹೆಚ್.ವಿಶ್ವನಾಥ್, ನಗರಸಭೆ ಅಧ್ಯಕ್ಷರಾದ ಹೆಚ್.ಎಂ.ನಂದಕುಮಾರ್, ಜಿ.ಪಂ.ಉಪಾಧ್ಯಕ್ಷರಾದ ಹೆಚ್.ಎಂ.ಕಾವೇರಿ, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಡಿ.ಬಿ.ಧರ್ಮಪ್ಪ ಹಾಗೂ ಮಡಿಕೇರಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ಕವಿತಾ ಪ್ರಭಾಕರ್ ಅವರು ಪಾಲ್ಗೊಳ್ಳಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ನಿರ್ಮಲರಾಜು ಅವರು ಪಾಲ್ಗೊಳ್ಳಲಿದ್ದಾರೆ.

ಏಪ್ರಿಲ್ 13ರ ಕಾರ್ಯಕ್ರಮಗಳು

ಏ.13 ರಂದು ಸಂಪೂರ್ಣ ಅಂಚೆ ಉಳಿತಾಯ ಹೋಬಳಿ ಉದ್ಘಾಟನಾ ಸಮಾರಂಭ

      ಭಾರತೀಯ ಅಂಚೆ, ಕೊಡಗು ಅಂಚೆ ವಿಭಾಗ ವತಿಯಿಂದ ಏಪ್ರಿಲ್, 13 ರಂದು ಬೆಳಗ್ಗೆ 11 ಗಂಟೆಗೆ ಶನಿವಾರಸಂತೆ ಬಸಪ್ಪ ಸಭಾಂಗಣದಲ್ಲಿ ಶನಿವಾರಸಂತೆ ಸಂಪೂರ್ಣ ಅಂಚೆ ಉಳಿತಾಯ ಹೋಬಳಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಂಗಳೂರು ದಕ್ಷಿಣ ಕರ್ನಾಟಕ ವಲಯ ಅಂಚೆ ಸೇವೆಗಳ ನಿರ್ದೇಶಕರಾದ ಡಾ.ಪಿ.ಎಂ.ಸರವಣನ್ ಅವರು ಉದ್ಘಾಟನೆ ಮತ್ತು ಶನಿವಾರಸಂತೆ ಸಂಪೂರ್ಣ ಅಂಚೆ ಉಳಿತಾಯ ಹೋಬಳಿ ಘೋಷಣೆ ಮಾಡಲಿದ್ದಾರೆ.  ಕೊಡಗು ಅಂಚೆ ವಿಭಾಗದ ಅಧೀಕ್ಷಕರಾದ ಕೆ.ರಾಮಲಿಂಗಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಕೆ.ಎಂ.ಚಂದ್ರೇಗೌಡ, ಸೋಮವಾರಪೇಟೆ ತಹಶೀಲ್ದಾರರು ಕೆ.ಆರ್.ಭಾಸ್ಕರ್, ಶನಿವಾರಸಂತೆ ಆರಕ್ಷಕ ಉಪನಿರೀಕ್ಷಕರಾದ ಮಹದೇವಯ್ಯ ಅವರು ಭಾಗವಹಿಸಲಿದ್ದಾರೆ.  

ಮೆಳ್ಳೆಗಣ್ಣು ಮತ್ತು ನೇತ್ರ ಸುರೂಪ ಶಸ್ತ್ರಚಿಕಿತ್ಸೆ ಶಿಬಿರ

           ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಆಸ್ಪತ್ರೆ, ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್, 13 ಮತ್ತು 14 ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಮೆಳ್ಳೆಗಣ್ಣು ಮತ್ತು ನೇತ್ರ ಸುರೂಪ ಶಸ್ತ್ರಚಿಕಿತ್ಸೆ ಶಿಬಿರವನ್ನು ಏರ್ಪಡಿಸಲಾಗಿದೆ.

           ಈ ಶಿಬಿರವನ್ನು ಮೈಸೂರಿನ ತಜ್ಞ ಶಸ್ತ್ರ ಚಿಕಿತ್ಸಕರಾದ ರೊ.ಡಾ.ಕೆ.ವಿ.ರವಿಶಂಕರ್ ಹಾಗೂ ಡಾ.ಹೆರಳೆ ಅವರು ನಡೆಸಿಕೊಡಲಿದ್ದಾರೆ. ಮಳ್ಳೆಗಣ್ಣು, ಕೆಂಗಣ್ಣು ಇನ್ನಿತರ ನೇತ್ರ ವಿಕೃತಿಗಳಿಗೆ ತಪಾಸಣೆ ಹಾಗೂ ಚಿಕಿತ್ಸೆ ನಡೆಸಲಾಗುವುದು. ಈ ಶಿಬಿರದಲ್ಲಿ ನೊಂದಾಯಿಸಿಕೊಳ್ಳಲು 9448119993 ನ್ನು ಸಂಪರ್ಕಿಸಬಹುದಾಗಿದೆ ಎಂದು ಮಡಿಕೇರಿ ಮಿಸ್ಟಿ ಹಿಲ್ಸ್‌ನ ಅಧ್ಯಕ್ಷರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು  ಜಂಟಿಯಾಗಿ ಕೋರಿದ್ದಾರೆ.

ನಗರದಲ್ಲಿಂದು ನೀರು ಪೂರೈಕೆಯಲ್ಲಿ ವ್ಯತ್ಯಯ

ಬಳ್ಳಾರಿ. ಏ.12 ( ಕರ್ನಾಟಕ ವಾರ್ತೆ):  ಗಾಂಧಿನಗರ ಬೂಸ್ಟರ್ ಯಂತ್ರಗಾರದಿಂದ ನೀರು ಸರಬರಾಜಾಗುವ ಪ್ರದೇಶಗಳಿಗೆ ಏಪ್ರಿಲ್ 13ರಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಶ್ರೀ ಡಿ.ಎಲ್ ನಾರಾಯಣ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೋಕಾ ಕೇಂದ್ರ ಸ್ಥಾವರದಲ್ಲಿ ಗಾಂಧಿನಗರ ಬೂಸ್ಟರ್ ಯಂತ್ರಾಗಾರದವರೆಗೆ ಶುದ್ಧ ನೀರು ಸರಬರಾಜು  ಮಾಡುವ 450 ಎಂ.ಎಂ. ವ್ಯಾಸದ ಏರು ಕೊಳವೆ ಮಾರ್ಗದ ವಿವಿಧ ಸ್ಥಳಗಳಲ್ಲಿ ನೀರು ಸೋರುವಿಕೆಯನ್ನು ತಡೆಗಟ್ಟಲು ದುರಸ್ತೆ ಕಾರ್ಯ ಕೈಗೊಳ್ಳಲಾಗುವುದರಿಂದ ಏ.13ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.   ನಾಗರಿಕರು ಪಾಲಿಕೆ ಹಾಗೂ ಜಲಮಂಡಳಿಯೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಕೊಲೆ : ಅಪರಾಧಿಗಳಿಗೆ ಕಠಿಣ ಶಿಕ್ಷೆ

ಬಳ್ಳಾರಿ. ಏ.12 ( ಕರ್ನಾಟಕ ವಾರ್ತೆ):  ಸಂಗನಕಲ್ಲು ಗ್ರಾಮದಲ್ಲಿ ಹರಿಜನ ಕೇರಿಗೆ ನುಗ್ಗಿ ದೊಂಬಿ ಮಾಡಿ ಗುಡಿಸಲುಗಳನ್ನು ಸುಟ್ಟು ಹಾಕಿ ಹರಿಜನ ಮಹಿಳೆ ಶ್ರೀಮತಿ ಹುಲಿಗೆಮ್ಮನನ್ನು ಕೊಲೆ ಮಾಡಿದ ಅಪರಾಧಿಗಳಿಗೆ 1ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಬಿ.ಎಂ. ರಾಜು ಅವರು ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿ ಏಪ್ರಿಲ್ 9ರಂದು ತೀರ್ಪು ನೀಡಿದ್ದಾರೆ. ಸಂಗನಕಲ್ಲು ಗ್ರಾಮದ ರಾಜಶೇಖರಪ್ಪ ಹಾಗೂ 113 ಜನರು   1990ರ ಏಪ್ರಿಲ್ 29ರಂದು  ಈ ಕೃತ್ಯ ಎಸಗಿದ್ದಾರೆ.  ಅಪರಾಧಿ ರಾಜಶೇಖರಪ್ಪ ಹಾಗೂ ಇನ್ನಿತರರು ಮಾರಾಕಾಯುಧಗಳೊಂದಿಗೆ ಗುಂಪುಗೂಡಿಕೊಂಡು   ಗ್ರಾಮದ ಹರಿಜನ ಭರ್‍ಮಪ್ಪ ಹಾಗೂ ಮತ್ತಿತರ ಹರಿಜನರಿಗೆ ಹಲ್ಲೆ ನಡೆಸಿದ್ದಾರೆ.  ಹರಿಜನರಿಗೆ ಸಂಬಂಧಿಸಿದ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಸುಮಾರು 108100 ರೂ.ಗಳಷ್ಟು ನಷ್ಟ ಉಂಟು ಮಾಡಿದ್ದಾರೆ.  ಈ ಗಲಾಟೆಯಲ್ಲಿ ಗ್ರಾಮದ ಶ್ರೀಮತಿ ಹುಲಿಗೆಮ್ಮನಿಗೆ ತೀವ್ರ ಸ್ವರೂಪದ ಗಾಯಗಳಾಗಿ ಏಪ್ರಿಲ್ 30ರಂದು ಬಳ್ಳಾರಿ ಎಂ.ಸಿ.ಹೆಚ್ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ.  ಗುಡಿಸಲುಗಳನ್ನು ಸುಟ್ಟು ಶ್ರೀಮತಿ ಹುಲಿಗೆಮ್ಮ ಅವರ ಸಾವಿಗೆ ರಾಜಶೇಖರಪ್ಪ ಹಾಗು ಅವನ ಸಂಗಡಿಗರೇ ಕಾರಣ ಎಂದು ವಿಚಾರಣೆಯಿಂದ ಸಾಬೀತಾಗಿದೆ. 

ಪ್ರಕರಣದಲ್ಲಿ ಭಾಗಿಯಾಗಿದ್ದ ಹಲವಾರು ಆರೋಪಿತರು ಮೃತಪಟ್ಟಿರುತ್ತಾರೆ.  ಅಪರಾಧಿ ರಾಜಶೇಖರಪ್ಪ ಹಾಗೂ ಅವನ 20 ಮಂದಿ ಸಂಗಡಿಗರಿಗೆ 6 ಸಾವಿರ ರೂ. ದಂಡ ಹಾಗೂ 6 ತಿಂಗಳ ಕಠಿಣ ಶಿಕ್ಷೆ ವಿಧಿಸಲಾಗಿದೆ.  7ನೇ ಅಪರಾಧಿ ಅಮರೇಶ (ತಂ. ಕಲ್ಲಹಳ್ಳಿ ಭೀಮಪ್ಪ) ನಿಗೆ 8 ವರ್ಷ ಕಠಿಣ ಶಿಕ್ಷೆ ಹಾಗೂ ಹತ್ತು ಸಾವಿರ ರೂ. ದಂಡ ರಾಜಶೇಖರಪ್ಪ ಹಾಗೂ ಪಿಂಜಾರ ಬಲಗುಡ್ಡದ ಹೊನ್ನೂರು ಸಾಬ್‌ಗೆ 4 ವರ್ಷ ಕಠಿಣ ಶಿಕ್ಷೆ ಹಾಗೂ 10ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಲಾಗಿದೆ. ಬಳ್ಳಾರಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡು 114 ಜನರ ವಿರುದ್ಧ ಆಪಾದನಾ ಪಟ್ಟಿ ಸಲ್ಲಿಸಿದ್ದರು.  ಅಧಿಕ ಸರ್ಕಾರಿ ಅಭಿಯೋಜಕ  ಶ್ರೀ ಆರ್.ಎಲ್. ರಾಥೋಡ್ ವಾದ ಮಂಡಿಸಿದ್ದರು ಎಂದು ನ್ಯಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನ

            ಬಳ್ಳಾರಿ. ಏ.12 (ಕರ್ನಾಟಕ ವಾರ್ತೆ): ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯು ಹೊಲಿಗೆ ತರಬೇತಿ ನೀಡಲು  ಬಳ್ಳಾರಿ ತಾಲ್ಲೂಕಿನ  ಪ್ರವರ್ಗ 1, ಪ್ರವರ್ಗ 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ತಾಲೂಕು ಪಂಚಾಯತ್ ಕಾರ್‍ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ. ಅಭ್ಯರ್ಥಿಗಳು  35 ವರ್ಷದೊಳಗಿನವರಾಗಿದ್ದು, ಪ್ರವರ್ಗ-1 ಮತ್ತು ಪ.ಜಾ/ಪ.ಪಂ.ದ ಅಭ್ಯರ್ಥಿಗಳನ್ನು ಹೊರತುಪಡಿಸಿ ಅಭ್ಯರ್ಥಿಯ ಕುಟುಂಬದ ವಾರ್ಷಿಕ ವರಮಾನ 15,000/- ರೂ. ಒಳಗಿರಬೇಕು.  ಕನಿಷ್ಟ 7 ನೇ ತರಗತಿ ಉತ್ತೀರ್ಣರಾಗಿರಬೇಕು. ಆಸಕ್ತರು ತಾಲ್ಲೂಕ ಪಂಚಾಯತ್ ಕಾರ್‍ಯಾಲಯದಲ್ಲಿ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಏಪ್ರಿಲ್ 25 ರೊಳಗೆ ಇದೇ ಕಚೇರಿಗೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ.

ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

            ಬಳ್ಳಾರಿ. ಏ.12 (ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ಶಿಶು ಅಭಿವೃದ್ಧಿ ಯೋಜನೆಯಡಿ ಬರುವ ಮಿಲ್ಲರ್‌ಪೇಟೆ ಗಡ್ಡೆ ಕೆಳಗೆ, ಕಂಟೋನ್‌ಮೆಂಟ್ ಮತ್ತು ಅಂದ್ರಾಳ್-1 ಅಂಗವಾಡಿ ಕೇಂದ್ರಗಳಲ್ಲಿ ಖಾಲಿಯಿರುವ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.  4ನೇ ತರಗತಿ ಮೇಲ್ಪಟ್ಟು ಮತ್ತು ಎಸ್‌ಎಸ್‌ಎಲ್‌ಸಿವರೆಗೆ ವಿದ್ಯಾಭ್ಯಾಸ ಮಾಡಿದವರಿಗೆ ಆದ್ಯತೆ ನೀಡಲಾಗುವುದು.  ಸಂಬಂಧಿಸಿದ ವಾರ್ಡುಗಳಲ್ಲಿ ವಾಸವಿರುವ ಮಹಿಳಾ ಅಭ್ಯರ್ಥಿಗಳು ಏಪ್ರಿಲ್ 17ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆಳು ಬಳ್ಳಾರಿ(ನಗರ) ಕ್ಲಬ್ ರಸ್ತೆ, ದೇವಿನಗರ, ಬಳ್ಳಾರಿ ಇವರಿಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಬಳ್ಳಾರಿ(ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಿಳಿಸಿದ್ದಾರೆ.

‘ಡಿ’ ಗ್ರೂಪ್ ಹುದ್ದೆಗಾಗಿ ಅರ್ಜಿ ಆಹ್ವಾನ

ಬಳ್ಳಾರಿ. ಏ.12 (ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 100 ಗ್ರೂಪ್ ಡಿ ಹುದ್ದೆಗಳಿಗೆ ಕುಷ್ಠ ರೋಗದಿಂದ ಗುಣಮುಖ ಹೊಂದಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಶ್ರೀಕಾಂತ ಬಾಸೂರು ತಿಳಿಸಿದ್ದಾರೆ.

ಗುಣಮುಖ ಹೊಂದಿದ ಕುಷ್ಠರೋಗಿಗಳಲ್ಲಿ ಗ್ರೇಡ್ II ಅಂಗವಿಕಲತೆಯಿದ್ದು, ಕಚೇರಿ ಕೆಲಸಕ್ಕೆ ಸಮರ್ಥರಾಗಿರುವವರು ಅರ್ಜಿ ಸಲ್ಲಿಸಬಹುದಾಗಿದೆ.  ಆಸಕ್ತ ಅಭ್ಯರ್ಥಿಗಳು ವೆಬ್‌ಸೈಟ್ ವಿಳಾಸ www.karhfw.gov.in ಅನ್ನು ಸಂಪರ್ಕಿಸಿ ಆನ್‌ಲೈನ್ ಮುಖಾಂತರ ಏಪ್ರಿಲ್ 30ರೊಳಗಾಗಿ ಅರ್ಜಿ ಸಲ್ಲಿಸಬಹುದು.  ಹುದ್ದೆಗಳ ಮೀಸಲಾತಿ ವರ್ಗೀಕರಣ, ಶುಲ್ಕ ಪಾವತಿ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸವನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಥಿ ಕಾಣೆ

            ಬಳ್ಳಾರಿ, ಏ. 12 ( ಕರ್ನಾಟಕ ವಾರ್ತೆ)  :   ದೇವಿನಗರದ ನಿವಾಸಿ ಶ್ರೀ ತಿಮ್ಮಪ್ಪ ಅವರ  15 ವರ್ಷದ ಮಗ ನರೇಶ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, 2012ರ ಫೆ.22ರಂದು ಬೆಳಿಗ್ಗೆ 8-30 ಗಂಟೆಯಿಂದ ಕಾಣೆಯಾಗಿದ್ದಾನೆ ಎಂದು  ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎಂದು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ನರೇಶನು ಫೆ. 22ರಂದು ಶಾಲೆಗೆ  ಹೋದವನು  ಮರಳಿ ಬಂದಿರುವುದಿಲ್ಲ.     ಇವನು ದುಂಡು ಮುಖ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು,  ಆರೆಂಜ್ ಕಲರ್ ಆಫ್ ಷರ್ಟ್, ಬ್ಲಾಕ್ ಕಲರ್ ಪ್ಯಾಂಟ್ ಧರಿಸಿದ್ದನು.  ಕನ್ನಡ, ತೆಲುಗು ಭಾಷೆ ಮಾತನಾಡಲು ಬರುತ್ತದೆ.  ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.    ಈತನ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಲ್ಲಿ ದೂರವಾಣಿ ಸಂಖ್ಯೆ   ಮೊಬೈಲ್ ಸಂಖ್ಯೆ 9980715711ನ್ನು ಸಂಪರ್ಕಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಧಿಕಾರ ಸ್ವೀಕಾರ

ಮಂಡ್ಯ, ಏ.12 (ಕ.ವಾ):- ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಮಂಡ್ಯ ಶಾಖಾ ಕಛೇರಿಯ ನೂತನ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಎನ್.ಜಿ. ಚಂದ್ರೇಗೌಡ ಇವರು ಏಪ್ರಿಲ್ 9 ರಂದು ಅಧಿಕಾರ ಸ್ವೀಕರಿಸಿರುತ್ತಾರೆ. ಶ್ರೀಯುತರು ಈ ಹಿಂದೆ ಇದೇ ಶಾಖೆಯಲ್ಲಿ 2003 ರಿಂದ 2007 ರವರೆಗೆ 4 ವರ್ಷಗಳ ಕಾಲ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು, ಇವರ ಅವಧಿಯಲ್ಲಿ ಶಾಖಾ ಕಛೇರಿಯು ರಾಜ್ಯದಲ್ಲಿಯೇ ಉತ್ತಮ ಪ್ರಗತಿ ಸಾಧಿಸಿತ್ತು ಎಂದು ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ವೈದ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

ಮಿಮ್ಸ್ ಬೋಧಕ ಆಸ್ಪತ್ರೆ, ಮಂಡ್ಯ ಇಲ್ಲಿನ ಎ.ಆರ್.ಟಿ. ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ಹಿರಿಯ ವೈದ್ಯಾಧಿಕಾರಿ (ಒಂದು ಹುದ್ದೆ) ಹಾಗೂ ವೈದ್ಯಾಧಿಕಾರಿ (ಒಂದು ಹುದ್ದೆ) ಯನ್ನು 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಏಪ್ರಿಲ್ 18 ರಂದು ಬೆಳಿಗ್ಗೆ 11.00 ಗಂಟೆಗೆ ವೈದ್ಯಕೀಯ ಅಧೀಕ್ಷಕರು/ಜಿಲ್ಲಾ ಶಸ್ತ್ರ ಚಿಕಿತ್ಸಕರು, ಜಿಲ್ಲಾ ಆಸ್ಪತ್ರೆ, ಮಂಡ್ಯ ಇಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ಎಂ.ಡಿ. (ಜನರಲ್ ಮೆಡಿಸಿನ್) ಪದವಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಎಂ.ಡಿ (ಜಿ.ಎಂ.) ಪದವಿ ಅಬ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಇತರೆ ಸ್ನಾತಕೋತ್ತರ ಪದವಿ ಪರಿಗಣಿಸಲಾಗುವುದು. ಅರ್ಹ ಅಬ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅನುಭವವುಳ್ಳ ಎಂ.ಬಿ.ಬಿ.ಎಸ್. ಪದವೀಧರರನ್ನೇ ಪರಿಗಣಿಸಲಾಗುವುದು.

ವೈದ್ಯಾಧಿಕಾರಿ ಹುದ್ದೆಗೆ ಎಂ.ಬಿ.ಬಿ.ಎಸ್. ಪದವಿ ಪಡೆದಿರುವವರನ್ನು ಪರಿಗಣಿಸಲಾಗುವುದು. ಆಸಕ್ತರು ತಮ್ಮ ಸ್ವ ವಿವರಗಳನ್ನೊಳಗೊಂಡ ಅರ್ಜಿ ಹಾಗೂ ದೃಢೀಕೃತ ನಕಲು ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವುದು. ಹೆಚ್ಚಿನ ಮಾಹಿತಿಗಾಗಿ ಮಿಮ್ಸ್ ನ ಸಹಾಯಕ ಆಡಳಿತಾಧಿಕಾರಿಗಳನ್ನು ಸಂಪರ್ಕಿಸುವುದು. 

ಅಂಗನವಾಡಿ ಸಹಾಯಕಿಯರ ಹಾಗೂ ಕಾರ್ಯಕರ್ತೆಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

            ಮಳವಳ್ಳಿ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ  ಅಂಗನವಾಡಿ ಸಹಾಯಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ  ಹುದ್ದೆಗಳಿಗೆ ಗೌರವಧನದ ಆಧಾರದ ಮೇಲೆ 18 ರಿಂದ 44 ವರ್ಷ ವಯೋಮಿತಿಯೊಳಗಿನ ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅಂಗನವಾಡಿ ಸಹಾಯಕಿಯರ ಹುದ್ದೆಗೆ 4ನೇ ತರಗತಿ ವಿದ್ಯಾರ್ಹತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನಾಂಕವಾಗಿದ್ದು, ಆಸಕ್ತರು ಹುದ್ದೆ ಖಾಲಿ ಇರುವ ಕೇಂದ್ರಗಳ ವಿವರ, ಅರ್ಜಿ ನಮೂನೆ ಹಾಗೂ ನಿಬಂಧನೆಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ, ಮಳವಳ್ಳಿ ಇಲ್ಲಿ ಸಂಪರ್ಕಿಸಬಹುದಾಗಿದೆ.

ಕುಡಿಯುವ ನೀರು : ವಿದ್ಯುತ್ ಸರಬರಾಜಿನಲ್ಲಿ ತೊಂದರೆ ಇದ್ದಲ್ಲಿ ದೂರು ಸಲ್ಲಿಸಿ

ಬರಪರಿಸ್ಥಿತಿಯ ಹಿನ್ನಲೆಯಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜಿನಲ್ಲಿ ಆಗುವ ತೊಂದರೆಗಳ ಬಗ್ಗೆ ದೂರಗಳನ್ನು ಸ್ವೀಕರಿಸಲು ತಾಲ್ಲೂಕುವಾರು ಕಂಟ್ರೋಲ್ ರೂಮ್‌ಗಳನ್ನು ತೆರೆಯಲಾಗಿದೆ.

ಮಂಡ್ಯ ತಾಲ್ಲೂಕಿಗೆ ಸಂಬಂಧಿಸಿದಂತೆ ಸುಬ್ಬಣ್ಣ-9448994829, ಮದ್ದೂರು ತಾಲ್ಲೂಕಿಗೆ ಸಂಬಂಧಿಸಿದಂತೆ ಮಂಜುನಾಥ್-9448994850, ಮಳವಳ್ಳಿ ತಾಲ್ಲೂಕಿಗೆ ಸಂಬಂಧಿಸಿದಂತೆ ಶ್ರೀಕಾಂತ್- 9448994859, ಪಾಂಡವಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಪರಮೇಶ್ವರಪ್ಪ-9448994894, ಶ್ರೀರಂಗಪಟ್ಟಣ ತಾಲ್ಲೂಕಿಗೆ ಸಂಬಂಧಿಸಿದಂತೆ ರಘು-9448994901, ಕೆ.ಆರ್.ಪೇಟೆ ತಾಲ್ಲೂಕಿಗೆ ಸಂಬಂಧಿಸಿದಂತೆ ರಾಜಶೇಖರಮೂರ್ತಿ-9448994911 ಹಾಗೂ ನಾಗಮಂಗಲ ತಾಲ್ಲೂಕಿಗೆ ಸಂಬಂಧಿಸಿದಂತೆ ಮರಿಸ್ವಾಮಿ- 9448994906 ಈ ಅಧಿಕಾರಿಗಳನ್ನು ಸಾರ್ವಜನಿಕರು ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸೆಸ್ಕ್‌ನ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ವಿದ್ಯುತ್ ಅದಾಲತ್ 

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಏಪ್ರಿಲ್ 16 ರಂದು ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ  ವಿದ್ಯುತ್ ಬಳಕೆದಾರರ ಕುಂದು ಕೊರತೆ ಹಾಗೂ ದೂರುಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಗ್ರಾಹಕರು ಲಿಖಿತ ರೂಪದಲ್ಲಿ ಮನವಿ ಸಲ್ಲಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸೆಸ್ಕ್‌ನ ಕಾರ್ಯನಿರ್ವಾಹಕ ಇಂಜಿನಿಯರ್ (ವಿ),  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಡಾ.ಬಿ.ಆರ್.ಅಂಬೇಡ್ಕರ್ ರವರ 121 ನೇ ಜನ್ಮದಿನಾಚರಣೆ

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಏಪ್ರಿಲ್ 14 ರಂದು ಬೆಳಿಗ್ಗೆ 10.00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅವರ 121ನೇ ಜನ್ಮ ದಿನಾಚರಣೆಯನ್ನು  ಆಚರಿಸಲಾಗುವುದು.

ಗೃಹ, ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೈಸೂರು ರಾಜ್ಯ ಸಂಪನ್ಮೂಲ ಕೇಂದ್ರದ ಹಿರಿಯ ಕಾರ್ಯಕ್ರಮ ಸಂಯೋಜಕ ಎಸ್.ತುಕಾರಾಂ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ರಾಜ್ಯಸಭೆ ಉಪ ಸಭಾಪತಿ ಕೆ. ರೆಹಮಾನ್ ಖಾನ್, ವಿಧಾನಪರಿಷತ್ ಉಪ ಸಭಾಪತಿ ವಿಮಲಾಗೌಡ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶಿವಣ್ಣ, ಲೋಕಸಭಾ ಸದಸ್ಯ ಎನ್. ಚಲುವರಾಯಸ್ವಾಮಿ, ವಿಧಾನಸಭೆಯ ಶಾಸಕರುಗಳಾದ ಸಿ.ಎಸ್. ಪುಟ್ಟರಾಜು, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ಬಾಬು ಬಂಡೀಸಿದ್ದೇಗೌಡ, ಕೆ.ಬಿ.ಚಂದ್ರಶೇಖರ್, ಸುರೇಶ್‌ಗೌಡ, ಕಲ್ಪನಾ ಸಿದ್ಧರಾಜು ಹಾಗೂ ವಿಧಾನ ಪರಿಷತ್ ಶಾಸಕರುಗಳಾದ ಮರಿತಿಬ್ಬೇಗೌಡ, ಅಶ್ವಥ್ ನಾರಾಯಣ್, ಡಿ.ಎಸ್.ವೀರಯ್ಯ, ಬಿ. ರಾಮಕೃಷ್ಣ, ಗೋ.ಮಧುಸೂದನ್, ಮೈಸೂರು ಸಕ್ಕರೆ ಕಂಪನಿಯ ಅಧ್ಯಕ್ಷ ನಾಗರಾಜಪ್ಪ, ಕಾಡಾ ಅಧ್ಯಕ್ಷರಾದ ಡಿ.ರಾಮಲಿಂಗಯ್ಯ, ನಗರಸಭೆಯ ಅಧ್ಯಕ್ಷರಾದ ಅರುಣ್ ಕುಮಾರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಸವೇಗೌಡ, ಮತ್ತು ಮಂಡ್ಯ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರಾದ ಭದ್ರಾಚಲಮೂರ್ತಿ ರವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಜಿಲ್ಲಾಧಿಕಾರಿಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾದ ಡಾ. ಪಿ.ಸಿ. ಜಾಫರ್  ತಿಳಿಸಿರುತ್ತಾರೆ.

ಡಾ|| ಬಿ.ಆರ್. ಅಂಬೇಡ್ಕರ್ ರವರ ಜನ್ಮ ದಿನಾಚರಣೆ

ಜಿಲ್ಲಾಡಳಿತ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಏಪ್ರಿಲ್ 14 ರಂದು ಬೆಳಿಗ್ಗೆ 10.00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅವರ 121ನೇ ಜನ್ಮದಿನಾಚರಣೆಯನ್ನು  ಆಚರಿಸಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟರಮಣ ರೆಡ್ಡಿ ತಿಳಿಸಿದ್ದಾರೆ.

ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್‌ಗೆ ಅರ್ಜಿ ಆಹ್ವಾನ

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪದವಿ ವಿದ್ಯಾರ್ಹತೆಗೆ ಅನುಗುಣವಾಗಿ ವಿವಿಧ ಹುದ್ದೆಗಳನ್ನು ಒಂದೇ ರೀತಿಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿಕೊಳ್ಳಲು ಸಿಬ್ಬಂದಿ ನೇಮಕಾತಿ ಆಯೋಗವು ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ ಎಕ್ಸಾಮಿನೇಷನ್‌ಗೆ ಅಂಗೀಕೃತ ವಿಶ್ವ ವಿದ್ಯಾನಿಲಯದಲ್ಲಿ ಪದವಿ ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಏಪ್ರಿಲ್ 17 ಕೊನೆಯ ದಿನಾಂಕವಾಗಿದ್ದು,  ಆಸಕ್ತರು http://ssconline.nic.in  ಅಥವಾ  http://ssc registration.sifytest.com ವೆಬ್‌ಸೈಟ್ ವಿಳಾಸದಲ್ಲಿ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು-6 ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 0821-2516844, ಮೊಬೈಲ್ ಸಂಖ್ಯೆ 9449686641 ನ್ನು ಸಂಪರ್ಕಿಸುವುದು.  

ಕರ ಬಾಕಿ ನಳಗಳ  ಜೋಡಣೆ ಕಡಿತ

 ಹುಬ್ಬಳ್ಳಿ (ಕರ್ನಾಟಕ ವಾರ್ತೆ ) ಏ.12.  ಹುಬ್ಬಳ್ಳಿ ನಗರದ ವ್ಯಾಪ್ತಿತಿಯಲ್ಲಿ ಜಲಮಂಡಳಿಯ ನೀರಿನ ಕರ ಬಾಕಿ ತುಂಬದ ಬಾಕಿದಾರರ ನೀರು ಸಂಪರ್ಕ ಕಡಿತಗೊಳಿಸುವ ಕಾರ್ಯಾಚರಣೆ  ಅಂಗವಾಗಿ ಜಲಮಂಡಳಿಯ  ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಅರ್. ವಿ ಪಾಟೀಲ ,  ಅವರ  ನೇತೃತ್ವದ ತಂಡ ವಾರ್ಡ ನಂ.30 ರ ಕುಸುಗಲ್ ರಸ್ತೆ ಮತ್ತು 53 ರ ಘಂಟಿಕೇರಿ ಪ್ರದೇಶಗಳಲ್ಲಿ ವಾಣಿಜ್ಯ ಬಳಕೆಯ ಹೊಟೇಲ್ ಉದ್ದಿಮೆ ನಳದ ಜೋಡಣೆಗಳನ್ನು ಮತ್ತು  ಗೃಹ ಬಳಕೆ ನಳಗಳ ಜೋಡಣೆಯನ್ನು ಕಡಿತಗೊಳಿಸಿದೆಯೆಂದು  ಹು.ಧಾ ಜಲ ಮಂಡಳಿ  ನಿರ್ವಹಣಾ (ಪೂರ್ವ) ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಬಾಕಿ ಹಣ ನೀಡಬೇಕಾದ ಬಳಕೆದಾರರಿಗೆ ಈಗಾಗಲೇ ಸಾಕಷ್ಟು ಅವಕಾಶಗಳನ್ನು ಮತ್ತು ಒಂದೇ ಕಂತಿನ ತೀರುವಳಿಯ ಸೌಲಭ್ಯ ಪಡೆಯಲು ತಿಳಿಸಲಾಗಿದ್ದರೂ ಸದರಿ ಸೌಲಭ್ಯ ಸದುಪಯೋಗ ಮಾಡಿಕೊಳ್ಳದೇ ಇರುವ ಪ್ರಯುಕ್ತ ಅನಿವಾರ್ಯವಾಗಿ ಈ ಕ್ರಮ ಜರುಗಿಸಲಾಗಿದೆಯೆಂದು ಅವರು  ಅವರು ತಿಳಿಸಿದ್ದಾರೆ.   ಈ ಕಾರ್ಯಾಚರಣೆಯಲ್ಲಿ  ಅಧಿಕಾರಿಗಳು ಸೇರಿದಂತೆ 15 ಕ್ಕೂ ಹೆಚ್ಚು ಜಲಮಂಡಳಿ ಸಿಬ್ಬಂದಿಗಳು ಭಾಗವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ :

ಏಪ್ರಿಲ್ 15 ರಂದು ಎರಡನೇ ಹಂತದ  ಪಲ್ಸ್ ಪೋಲಿಯೋ  ಕಾರ್ಯಕ್ರಮ

 ಹುಬ್ಬಳ್ಳಿ (ಕರ್ನಾಟಕ ವಾರ್ತೆ ) ಏ.12.  ಹುಬ್ಬಳ್ಳಿ ತಾಲೂಕ ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲ ಅರ್ಹ ಮಕ್ಕಳಿಗೂ  ಪಲ್ಸ್ ಪೋಲಿಯೋ   ಹನಿ ವಿತರಿಸಲು ನಿಯೋಜಿತ ಅಧಿಕಾರಿಗಳು ಕಾಳಜಿ ಪೂರ್ವಕ ಕಾರ್ಯನಿರ್ವಹಿಸಲು ಹುಬ್ಬಳ್ಳಿ ತಹಶೀಲ್ದಾರ ಶ್ರೀ ಎಸ್. ಎಸ್. ಬಿರಾದಾರ ಇಂದಿಲ್ಲಿ ಸೂಚನೆ ನೀಡಿದರು.

   ಪಲ್ಸ್ ಪೋಲಿಯೋ  ತಾಲೂಕ  ಟಾಸ್ಕ ಫೋರ್ಸ್ ಸಮಿತಿ  ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಏಪ್ರಿಲ್ 15 ರಂದು ರಾಷ್ಟ್ರೀಯ  ಪಲ್ಸ್ ಪೋಲಿಯೋ  ಎರಡನೇ ಸುತ್ತಿನ ಹನಿ ವಿತರಣೆ ಕಾರ್ಯಕ್ರಮ ಜರುಗಲಿದ್ದು , ಅದಕ್ಕಾಗಿ ಕೈಗೊಂಡ ಪೂರ್ವಸಿದ್ಧತೆಗಳನ್ನು ತಹಶೀಲ್ದಾರರು

 ಪರಿಶೀಲಿಸಿದರು.  ದಿನಾಂಕ 15 ರಂದು ನಡೆಯುವ  ಬೂತ್ ಮಟ್ಟದ ಹನಿ ವಿತರಣೆ ಹಾಗೂ ದಿ. 16 ಮತ್ತು 17 ರಂದು ಮನೆ ಮನೆಗೆ ತೆರಳಿ ಹನಿ ವಿತರಿಸುವ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬರು ಸಹಕರಿಸಬೇಕು ಹಾಗೂ ಈ ಸಂಧರ್ಭದಲ್ಲಿ ಲಸಿಕಾ ಶೀತಲ ಸರಪಳಿ  ಸಂರಕ್ಷಣೆಗಾಗಿ ನಿರಂತರ ವಿದ್ಯುತ್ ಪೂರೈಸಲು  ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.   ಕಾರ್ಯನಿರ್ವಹಣೆಗೆ ವಿವಿಧ ಇಲಾಖೆಗಳ ವಾಹನಗಳನ್ನು ನಿಯೋಜಿಸಲಾಗಿದೆ.  ಆಯಾ ಇಲಾಖೆಯ ಅಧಿಕಾರಿಗಳು 13 ರಂದು ಸಂಜೆ ತಮ್ಮ ವಾಹನಗಳನ್ನು ಕಿಮ್ಸ್ ಆವರಣದಲ್ಲಿರುವ  ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯಕ್ಕೆ ಕಳುಹಿಸಲು ಸೂಚನೆ ನೀಡಿದರು.  ಪ್ರತಿಯೊಂದು ಗ್ರಾಮದಲ್ಲಿ ಸಾರ್ವಜನಿಕ ಮಾಹಿತಿಗಾಗಿ ಡಂಗುರು ಸಾರಿಸಲು ಕ್ರಮ ಕೈಗೊಳ್ಳುವಂತೆ  ತಾ. ಪಂ ಅಧಿಕಾರಿಗಳಿಗೆ ತಿಳಿಸಿದರು.

    ಈ ಪಲ್ಸ್ ಪೋಲಿಯೋ  ಕಾರ್ಯಕ್ರಮದಂಗವಾಗಿ ಹುಬ್ಬಳ್ಳಿ ಗ್ರಾಮೀಣ ಪ್ರದೇಶದ  6 ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ 48 ಗ್ರಾಮಗಳಲ್ಲಿರುವ 5 ವರ್ಷದೊಳಗಿನ 17157 ಮಕ್ಕಳಿಗೆ ಪಲ್ಸ್ ಪೋಲಿಯೋ  ಹನಿ ವಿತರಿಸಲು ಕ್ರಮ ಕೈಕೊಳ್ಳಲಾಗಿದೆ . ಇದಕ್ಕಾಗಿ 79 ಹನಿ ವಿತರಣಾ  ಕೇಂದ್ರಗಳನ್ನು  ( ಬೂತಗಳು)  ರಚಿಸಲಾಗಿದ್ದು  316 ಸಿಬ್ಬಂದಿಗಳನ್ನು ಹಾಗೂ 16 ಮೇಲ್ವಿಚಾರಕರನ್ನು  ನೇಮಿಸಲಾಗಿದೆಯೆಂದು ತಾಲೂಕಾ ಅರೋಗ್ಯ ಅಧಿಕಾರಿ ಡಾ ||  ಡಿ. ಪ್ರಮೀಳಾ ಸಭೆಗೆ ವಿವರಿಸಿದರು. ಸಭೆಯಲ್ಲಿ ಡಾ || ಎನ್. ಬಿ ಕರ್ಲವಾಡ , ಡಾ || ಪಿ. ಅರ್. ವಿಶ್ವನಾಥ ಸೇರಿದಂತೆ ವಿವಿಧ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ತಾ. ಪಂ ಸಭಾಭವನದಲ್ಲಿ ಅಂಬೇಡ್ಕರ್ ಜಯಂತಿ

   ಹುಬ್ಬಳ್ಳಿ (ಕರ್ನಾಟಕ ವಾರ್ತೆ ) ಏ.12. ಡಾ || ಬಿ. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ  ಏಪ್ರಿಲ್ 14 ರಂದು ಬೆಳಿಗ್ಗೆ 9 ಗಂಟೆಗೆ ಮಿನಿ ವಿಧಾನ ಸೌಧದ ತಾ.ಪಂ ಸಭಾ ಭವನದಲ್ಲಿ ಡಾ || ಅಂಬೇಡ್ಕರ್ ಅವರ ಭಾವಚಿತ್ರದ  ಪೂಜಾ ಕಾರ್ಯಕ್ರಮದ ಮೂಲಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವದೆಂದು ತಾಲೂಕ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ|| ಬಾಬು ಜಗಜೀವನರಾಂ ಹಾಗೂ ಡಾ|| ಬಿ.ಆರ್.ಅಂಬೇಡ್ಕರ್  ಜಯಂತಿ ಕಾರ್ಯಕ್ರಮ

                ಗದಗ (ಕರ್ನಾಟಕ ವಾರ್ತೆ) ಏಪ್ರಿಲ್  12 : ಜಿಲ್ಲಾ  ಆಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಗದಗ-ಬೆಟಗೇರಿ ನಗರಸಭೆ ಹಾಗೂ ಗದಗ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ  ಹಸಿರು ಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ|| ಬಾಬು ಜಗಜೀವನರಾಂ ರವರ 105ನೇ ಜನ್ಮ ದಿನಾಚರಣೆ ಮತ್ತು ಸಂವಿಧಾನ ಶಿಲ್ಪಿ ಭಾರತರತ್ನ ಡಾ|| ಬಿ.ಆರ್. ಅಂಬೇಡ್ಕರ್  ರವರ 121ನೇ ಜನ್ಮ ದಿನಾಚರಣೆಯ ಕಾರ್‍ಯಕ್ರಮವನ್ನು  

     ದಿನಾಂಕ: 14-4-2012 ರಂದು ಬೆಳಿಗ್ಗೆ 10.30  ಗಂಟೆಗೆ ಗದಗ-ಬೆಟಗೇರಿ ನಗರಸಭೆ ಆವರಣದಲ್ಲಿ  ಹಮ್ಮಿಕೊಳ್ಳಲಾಗಿದೆ. ಅದೇದಿನ ಬೆಳಿಗ್ಗೆ 9.00 ಗಂಟೆಗೆ ಭಾವಚಿತ್ರಗಳ ಮೆರವಣಿಗೆಯನ್ನು ಏರ್ಪಡಿಸಲಾಗಿದ್ದು, ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನಃ ನಗರಸಭೆ ಆವರಣಕ್ಕೆ ಬಂದು ಸೇರುವದು. 

        ಈ ಸಮಾರಂಭವನ್ನು ರೋಣ ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ಕಳಕಪ್ಪ ಬಂಡಿ ಅವರು ಉದ್ಘಾಟನೆ ನೆರವೇರಿಸಿ  ಭಾವಚಿತ್ರಕ್ಕೆ  ಪೂಜೆ ಸಲ್ಲಿಸುವರು  . ಗದಗ ಶಾಸಕ ಶ್ರೀಶೈಲಪ್ಪ ಬಿದರೂರ  ಅಧ್ಯಕ್ಷತೆ ವಹಿಸಲಿರುವ ಈ ಕಾರ್‍ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿ.ಪಂ. ಅಧ್ಯಕ್ಷೆ ಶ್ರೀಮತಿ ಬಸವರಾಜೇಶ್ವರಿ ಪಾಟೀಲ ಸೇರಿದಂತೆ ಸಂಸದರು, ಶಾಸಕರು, ಜಿ.ಪಂ. ಉಪಾಧ್ಯಕ್ಷರು, ತಾ.ಪಂ. ಅಧ್ಯಕ್ಷರು ಉಪಾಧ್ಯಕ್ಷರು, ನಗರಸಭೆ ಅಧ್ಯಕ್ಷರು ಉಪಾಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಭಾಗವಹಿಸುವರು. ಈ ಕಾರ್‍ಯಕ್ರಮದಲ್ಲಿ  ಶ್ರೀ ಎಸ್.ಎನ್.ಬಳ್ಳಾರಿ   ಹಾಗೂ ಶ್ರೀ ವೆಂಕಟೇಶಯ್ಯ   ಅವರು ಉಪನ್ಯಾಸ ನೀಡಲಿದ್ದಾರೆ.

         ಜಿಲ್ಲಾಧಿಕಾರಿ ಶ್ರೀ ಪಾಂಡುರಂಗ ನಾಯಕ, ಜಿ.ಪಂ. ಮುಖ್ಯ ಕಾರ್‍ಯನಿರ್ವಾಹಕ ಅಧಿಕಾರಿ ಶ್ರೀ ವ್ಹಿ.ಜಿ ತುರಮರಿ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶೀ ರವಿಕುಮಾರ ನಾಯಕ, ಗದಗ-ಬೆಟಗೇರಿ  ನಗರಸಭೆ ಆಯುಕ್ತರಾದ ಶ್ರೀ ಎನ್. ರೇಣುಕ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶ್ರೀ ಆರ್.ಬಿ.ಕಮ್ಮಾರ ಅವರು ಸರ್ವರಿಗೂ  ಸ್ವಾಗತ ಕೋರಿದ್ದಾರೆ.

ಏಪ್ರಿಲ್-17 ರಂದು  ಸಚಿವರ ತಂಡದಿಂದ ಜಿಲ್ಲಾ ಬರ ಪರಿವೀಕ್ಷಣೆ

                   ಗದಗ (ಕರ್ನಾಟಕ ವಾರ್ತೆ) ಏಪ್ರಿಲ್  12 : ಗದಗ ಜಿಲ್ಲೆಯಲ್ಲಿ ಬರ ಪರಿವೀಕ್ಷಣೆಗಾಗಿ ಸಚಿವರ ತಂಡವು ಆಗಮಿಸಲಿದ್ದು, ಪೂರ್ವನಿಯೋಜಿತ ಪಟ್ಟಿಯಂತೆ  ಸಚಿವರುಗಳಾದ   ಶ್ರೀ ಜಗದೀಶ ಶೆಟ್ಟರ, ಶ್ರೀ ಗೋವಿಂದ ಎಂ.ಕಾರಜೋಳ, ಶ್ರೀ ಸಿ.ಎಂ. ಉದಾಸಿ ಮತ್ತು ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಇವರುಗಳು ದಿನಾಂಕ:17-4-2012 ಬೆಳಿಗ್ಗೆ 9.00 ಗಂಟೆಗೆ ಬರಪೀಡಿತ ಪ್ರದೇಶಗಳ ಪರಿವೀಕ್ಷಣೆ ಮಾಡಲಿದ್ದಾರೆ. ನಂತರ 2.00 ಗಂಟೆಗೆ  ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಅನಂತರ  ರಸ್ತೆ ಮೂಲಕ ಧಾರವಾಡಕ್ಕೆ ತೆರಳುವರೆಂದು ಕಾರ್‍ಯಾಲಯದ ಪ್ರಕಟಣೆ ತಿಳಿಸಿದೆ.

ಅನದೀಕೃತ ಮರಳು ಸಾಗಾಣಿಕೆ ಲಾರಿ ಜಪ್ತಿ

                                ಗದಗ (ಕರ್ನಾಟಕ ವಾರ್ತೆ) ಏಪ್ರಿಲ್  12 : ದಿನಾಂಕ: 12-4-2012 ರಂದು ಬೆಳಗಿನ ಜಾವಾದಲ್ಲಿ ಮುಳಗುಂದ ಲಕ್ಷ್ಮೇಶ್ವರ ಹಾಗೂ ಮುಂಡರಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಗದಗ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ವತಿಯಿಂದ ಕಾರ್ಯಾಚರಣೆ ಕೈಗೊಂಡು ಅನಧಿಕೃತ ಮರಳು ಸಾಗಾಣಿಕೆ ಮಾಡುತ್ತಿದ್ದ ಒಟ್ಟು 14 ಲಾರಿಗಳನ್ನು ಜಪ್ತು ಮಾಡಿ ಮುಳಗುಂದ ಲಕ್ಷ್ಮೇಶ್ವರ ಹಾಗೂ ಮುಂಡರಗಿ ಪೊಲೀಸ್ ಠಾಣೆ ಸುಪರ್ದಿಯಲ್ಲಿ ಇಡಲಾಗಿದ್ದು, ಮುಂದಿನ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಟಾಸ್ಕ್‌ಪೋರ್ಸ್ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.

ಭಾವಚಿತ್ರ ಇರುವ ಗುರುತಿನ ಚೀಟಿ ಹೊಂದಲು ಜಿಲ್ಲಾಧಿಕಾರಿ ಸೂಚನೆ

              ಗದಗ (ಕರ್ನಾಟಕ ವಾರ್ತೆ) ಏಪ್ರಿಲ್  12 : ಮತದಾರ ಪಟ್ಟಿಯಲ್ಲಿ ಮತದಾರರ  ಭಾವಚಿತ್ರ ಇರುವುದು ಕಡ್ಡಾಯವಾಗಿದೆ. ಮುಂಬರುವ ಚುನಾವಣೆಗಳಲ್ಲಿ ಮತದಾರ ಪಟ್ಟಿಗಳಲ್ಲಿ ಯಾರ ಭಾವಚಿತ್ರವಿರುವುದಿಲ್ಲವೋ ಅಂತ ಮತದಾರರು ಮತದಾನದಿಂದ ವಂಚಿತರಾಗುವ ಸಂಭವವಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಗದಗ ಜಿಲ್ಲೆಯ ಮತದಾರ ಪಟ್ಟಿಗಳಲ್ಲಿ ಭಾವಚಿತ್ರ ವಿಲ್ಲದ ಮತದಾರರು ಅವರ ಭಾವಚಿತ್ರಗಳನ್ನು ಮತದಾರರ ಪಟ್ಟಿಯಲ್ಲಿ ಅಳವಡಿಸಲು ಹಾಗೂ ಭಾವಚಿತ್ರ ಗುರುತಿನ ಚೀಟಿಗಳನ್ನು ಪಡೆಯಲು ಅವಕಾಶಗಳನ್ನು ಕಲ್ಪಿಸಿದ್ದು ಇರುತ್ತದೆ. ಅದರಂತೆ ಭಾವಚಿತ್ರ ಗುರುತಿನ ಚೀಟಿ ಹೊಂದದೇ ಇರುವ ಮತದಾರರು ಅವರ ಭಾವಚಿತ್ರಗಳನ್ನು ಸಂಬಂಧಿಸಿದ ತಾಲೂಕಿನ ತಹಶೀಲ್ದಾರ ಕಾರ್ಯಾಲಯಗಳಿಗೆ ಅಥವಾ ಸಂಬಂಧಿಸಿದ   ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ (ಬಿ.ಎಲ್.ಓ) ತಮ್ಮ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಪೋಟೋವನ್ನು ನಿಗದಿತ ನಮೂನೆ ನಂ.8 ರಲ್ಲಿ ಲಗತ್ತಿಸಿ ಸಲ್ಲಿಸಿದಲ್ಲಿ ಸದರಿ ಮತದಾರರ ಭಾವಚಿತ್ರಗಳನ್ನು ಆಯಾ ಮತದಾರ ಪಟ್ಟಿಗಳಲ್ಲಿ ಅಳವಡಿಸುವುದಲ್ಲದೇ, ಮತದಾರರ ಭಾವಚಿತ್ರ ಗುರುತಿನ ಚೀಟಿಯನ್ನು ಸಹ ನೀಡಲು ಅನುಕೂಲವಾಗುವುದು. ಈ ಅವಕಾಶದ ಉಪಯೋಗವನ್ನು ಮತದಾರರು ಪಡೆದುಕೊಳ್ಳಬೇಕಾಗಿ ಮತದಾರರಲ್ಲಿ ಕೋರಲಾಗಿದೆ.

    ದಿನಾಂಕ: 1-1-2012ಕ್ಕೆ ಅರ್ಹತಾ ದಿನಾಂಕವುಳ್ಳಂತೆ ಪ್ರಕಟ ಪಡಿಸಿದ ಭಾವಚಿತ್ರ ಉಳ್ಳ ಮತದಾರ ಪಟ್ಟಿಗಳು ಸಂಬಂಧಪಟ್ಟ ಬಿ.ಎಲ್.ಓ ಬಳಿ ತಹಶೀಲ್ದಾರ ಕಾರ್ಯಾಲಯದಲ್ಲಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿರುತ್ತದೆ. ಭಾವಚಿತ್ರ ವಿಲ್ಲದ ಮತದಾರರ ಪಟ್ಟಿ www.ceokarnataka.kar.nic.in  ವೆಬ್ ಸೈಟ್‌ನಲ್ಲಿಯು ಸಹ ಪರಿಶೀಲನೆಗೆ ಲಭ್ಯವಿರುತ್ತವೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ: ಬಾಬಾ ಸಾಹೇಬ ಅಂಬೇಡ್ಕರ್ ರವರ 121 ನೇ ಜಯಂತ್ಯೋತ್ಸವ

ಯಾದಗಿರಿ: ಏಪ್ರೀಲ್ 12 (ಕ.ವಾ.)  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ: ಬಾಬಾ ಸಾಹೇಬ ಅಂಬೇಡ್ಕರ್ ರವರ 121 ನೇ ಜಯಂತ್ಯೋತ್ಸವ  ಏಪ್ರಿಲ್ 14 ರಂದು ಬೆಳಿಗ್ಗೆ 9 ಗಂಟೆಗೆ ಡಾ: ಬಿ.ಆರ್. ಅಂಬೇಡ್ಕರ್ ಭವನ ಅಂಬೇಡ್ಕರ್ ನಗರ ಯಾದಗಿರಿ ಜರುಗುವುದು. ಈ ಕಾರ್ಯಕ್ರಮಕ್ಕೆ ಸಣ್ಣ ಕೈಗಾರಿಕೆ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ನರಸಿಂಹ ನಾಯಕ (ರಾಜುಗೌಡ) ಉದ್ಫಾಟಿಸುವರು.

            ಯಾದಗಿರಿ ಶಾಸಕರಾದ ಡಾ. ಎ.ಬಿ. ಮಾಲಕರೆಡ್ಡಿ ಅಧ್ಯಕ್ಷತೆ ವಹಿಸುವರು.  ಮುಖ್ಯ ಅತಿಥಿಗಳಾಗಿ, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯರಾದ ಸಣ್ಣ ಫಕೀರಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬಸವರಾಜೇಶ್ವರಿ ಬಿ. ತಂಗಡಗಿ,  ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಮರನಾಥ ಪಾಟೀಲ್, ಕೃಷ್ಣ ಕಾಡಾ ಭೀಮರಾಯನ ಗುಡಿ ಶಹಾಪೂರ ಬಿ.ಪಿ. ಹಳ್ಳೂರ, ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ  ಡಾ.ವೆಂಕಟೇಶ ಗಡ್ಡಿಮನಿ, ಎಂ. ಎಸ್. ಐ.ಎಲ್. ಬೆಂಗಳೂರು ಡಾ. ವಿಕ್ರಂ ಪಾಟೀಲ್,  ಕಾಡಾ ನೀರಾವರಿ ಯೋಜನಾ ವಲಯ ಗುಲಬರ್ಗಾದ ಅಧ್ಯಕ್ಷರಾದ ಶ್ರೀ ಗರೀಶ ಮಟ್ಟಣನವರ, ಶಹಾಪೂರ ಸನ್ಮಾನ್ಯ ಶರಣಬಸಪ್ಪಗೌಡ ದರ್ಶನಾಪೂರ, ಗುರುಮಿಠಕಲ್ ಶಾಸಕರಾದ ಶ್ರೀ ಬಾಬುರಾವ ಚಿಂಚನಸೂರ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಶೀಲ ಜಿ. ನಮೋಶಿ, ಮನೋಹರ ಮಸ್ಕಿ, ಅಲ್ಲಂಪ್ರಭು ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದೇವಿಂದ್ರನಾಥ ನಾದ, ನಗರಸಭೆ ಅಧ್ಯಕ್ಷರಾದ ಕು. ಲಲಿತಾ ಮೌಲಾಲಿ ಅನಪೂರ, ತಾಲೂಕ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಬಿ. ಕವಾಲ್ದಾರ ಸಹ ಪ್ರಾಧ್ಯಾಪಕರಾದ ಸರಕಾರಿ ಪದವಿ ಕಾಲೇಜ ಯಾದಗಿರಿ ಡಾ: ಆಶೋಕ ಕುಮಾರ ಮಟ್ಟಿ, ಉಪನ್ಯಾಸಕರಾಗಿ ಆಗಮಿಸುವರು. ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಮತ್ತು ಸದಸ್ಯರು ಡಾ: ಬಾಬಾ ಸಾಹೇಬ ಅಂಬೇಡ್ಕರ್ ಜಯಂತ್ಯೋತ್ಸವ ಸಮಿತಿ   ಜಿಲ್ಲಾಧಿಕಾರಿ ಶ್ರೀಮತಿ ಗುರುನೀತ್ ತೇಜ್ ಮೆನನ್ ಅವರ ಸ್ವಾಗತಿಸಿದ್ದಾರೆ.

ಪ್ರಥಮ ಪಿ.ಯು.ಸಿ. ಪೂರಕ ಪರೀಕ್ಷೆ 2012

ಯಾದಗಿರಿ: ಏಪ್ರಿಲ್ 12 (ಕ.ವಾ.) ಪ್ರಥಮ ಪಿ.ಯು.ಸಿ. ಪೂರಕ ಪರೀಕ್ಷೆ 2012 ನ್ನು ದಿನಾಂಕ 02-5-2012 ರಿಂದ 12-5-2012 ರವರೆಗೆ ಈ ಕೆಳಗಿನ ತಾಲ್ಲೂಕವಾರು ಪರೀಕ್ಷೆ ಕೇಂದ್ರಗಳಲ್ಲಿ ಜರುಗಿಸಲಾಗುತ್ತಿದೆ. ಅನುತ್ತಿರ್ಣ ಮತ್ತು ಗೈರುಹಾಜರಾದ ವಿದ್ಯಾರ್ಥಿಗಳು ತಾವು ವ್ಯಾಸಾಂಗ ಮಾಡುತ್ತಿರುವ ಕಾಲೇಜುಗಳ ಪ್ರಾಂಶುಪಾಲರುಗಳ ಮೂಲಕ ದಿನಾಂಕ: 16-4-2012 ರೊಳಗೆ ಪರೀಕ್ಷೆ ಶುಲ್ಕವನ್ನು ಪಾವತಿಸಿಕೊಳ್ಳುವುದು.

            ಸರಕಾರಿ ಪದವಿಪೂರ್ವ ಕಾಲೇಜು ಬಾಲಕೀಯರ ಯಾದಗಿರಿ ಸರಕಾರಿ  ಪದವಿ ಪೂರ್ವ ಕಾಲೇಜು ಬಾಲಕರ ಶಹಾಪೂರ, ಸರಕಾರಿ ಪದವಿ ಪೂರ್ವ ಕಾಲೇಜು ಬಲಕರ ಸುರಪುರ  ಪರೀಕ್ಷೆ ಕೇಂದ್ರಗಳ ಸ್ಥಳಗಳು ಇರುತ್ತವೆ ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಬಿ.ಆರ್. ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾಣಿವಧೆ ಹಾಗೂ ಮಾಂಸ ಮಾರಾಟ ನಿಷೇಧ

ಯಾದಗಿರಿ: ಏಪ್ರಿಲ್ 12 (ಕ.ವಾ.) ಡಾ: ಬಾಬಾ ಸಾಹೇಬ ಅಂಬೇಡ್ಕರ್ ಜಯಂತಿ ಇರುವ ಪ್ರಯುಕ್ತ ಏಪ್ರಿಲ್ 13 ರಂದು ಮಧ್ಯರಾತ್ರಿಯಿಂದ ಏಪ್ರಿಲ್ 14 ರಂದು  ಮಧ್ಯರಾತ್ರಿಯವರೆಗೆ ಜಿಲ್ಲೆಯ ಎಲ್ಲಾ ಕಸಾಯಿಖಾನೆಗಳನ್ನು ಮುಚ್ಚಿ ಮಾಂಸ ಮಾರಾಟ ಮಾಡುವುದುನ್ನು ಕಡ್ಡಾಯವಾಗಿ ನಿಷೇಧಿಸಿ ಅದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿ ಶ್ರೀಮತಿ ಗುರುನೀತ್ ತೇಜ್ ಮೆನನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ

ಯಾದಗಿರಿ: ಏಪ್ರಿಲ್ 12 (ಕ.ವಾ.) ಯಾದಗಿರಿ ಜಿಲ್ಲೆಯಾದ್ಯಂತ ಏಪ್ರಿಲ್ 14 ರಂದು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಲಿರುವುದರಿಂದ ಏಪ್ರಿಲ್ 13 ರಿಂದ ಮಧ್ಯರಾತ್ರಿ ಏಪ್ರಿಲ್ 14 ರ ಮಧ್ಯರಾತ್ರಿಯವರೆಗೆ ಯಾದಗಿರಿ ಜಿಲ್ಲೆಯಲ್ಲಿರುವ ಎಲ್ಲಾ ವೈನ್ ಶಾಪ್ ಬಾರ್‌ಗಳು ಸಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ನೀಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾದಂಡಾಧಿಕಾರಿ ಶ್ರೀಮತಿ ಗುರುನೀತ್ ತೇಜ್ ಮೆನನ್ ಅವರು ಆದೇಶ ಹೊರಡಿಸಿದ್ದಾರೆ.

ಏಪ್ರಿಲ್ 24 ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ ಆಚರಣೆ

ಯಾದಗಿರಿ: ಏಪ್ರಿಲ್ 12 (ಕ.ವಾ.) ರಾಷ್ಟ್ರೀಯ ಪಂಚಾಯತ್ ರಾಜ್ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಲು  ಏಪ್ರೀಲ್ 24 ರಂದು ಬೆಳಿಗ್ಗೆ 10 ಗಂಟೆಗೆ ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿದೆ ಎಂದು  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಸೈಯದ್ ಅಬ್ದುಲ್ ರಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.