District News 24-03-2012

Saturday, March 24th, 2012

27 ರಂದು ನೇರ ಸಂದರ್ಶನ

           ದಾವಣಗೆರೆ, ಮಾ.24- ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮದ ಜಾರಿಗೆ ಐ.ಟಿ ಕನ್ಸಲ್‌ಟೆಂಟ್ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿರುತ್ತದೆ. ಈ ನಿಟ್ಟಿನಲ್ಲಿ ಮಾ.27ರ ಮಂಗಳವಾರ ಸಂಜೆ 5 ಗಂಟೆಗೆ ದಾವಣಗೆರೆ ಜಿಲ್ಲಾಧಿಕಾರಿಗಳ ಕಛೇರಿ (ರೈತ ಭವನ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದರು, ದಾವಣಗೆರೆ) ಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ (ವಾಕ್‌ಇನ್ ಇಂಟರ್‌ವ್ಯೋವ್) ವನ್ನು ಏರ್ಪಡಿಸಲಾಗಿದೆ. 

         ವಿದ್ಯಾರ್ಹತೆ ಇಂತಿದೆ - ಬಿಇ/ಬಿಟೆಕ್ (ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಿಕಲ್) ಅಥವಾ ಎಂಸಿಎ.  ಮಾಸಿಕ ವೇತನ 15,000-00 ರೂ. ಗಳನ್ನು ಸಕಾಲ ಮಿಷನ್‌ನಿಂದ ಪಾವತಿಸಲಾಗುವುದು. ಅರ್ಹ ಅಭ್ಯರ್ಥಿಗಳು ಮಾ.27ರ ಸಂಜೆ 5 ಗಂಟೆಗೆ ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿಯವರ ಕಚೇರಿ ಪ್ರಕಟಣೆ ತಿಳಿಸಿದೆ.

ಸಹಾಯವಾಣಿ ಕಾರ್ಯಕ್ರಮ

           ದಾವಣಗೆರೆ, ಮಾ.24- ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುವ ನಿಟ್ಟಿನಲ್ಲಿ ಸಹಾಯವಾಣಿ ಕಾರ್ಯಕ್ರಮವನ್ನು ಮಾರ್ಚ್ 19 ರಿಂದ 31 ರವರೆಗೆ ಹಾಗೂ ಏಪ್ರಿಲ್ 02 ರಿಂದ 16 ರವರೆಗೆ ನಡೆಸಲಾಗುತ್ತಿದೆ. ಸಹಾಯವಾಣಿ ಸಂಖ್ಯೆ ಇಂತಿದೆ. 080-23312245 ಮತ್ತು 080-23312246. ಈ ಸಂಖ್ಯೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 5 ಗಂಟೆವರೆಗೆ ಕರೆ ಮಾಡ ಮಾಡಬಹುದು  ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತರ್ಜಾಲ ಸೇವಾ ಕೇಂದ್ರ ಉದ್ಘಾಟನಾ ಸಮಾರಂಭ

           ದಾವಣಗೆರೆ, ಮಾ.24- ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ನಗರ ಕೇಂದ್ರ ಗ್ರಂಥಾಲಯದಲ್ಲಿ ಅಂತರ್ಜಾಲ ಸೇವಾ ಕೇಂದ್ರ ಉದ್ಘಾಟನಾ ಸಮಾರಂಭವನ್ನು ಮಾ.27 ರ ಬೆಳಿಗ್ಗೆ 11 ಗಂಟೆಗೆ ನಗರದ ಪಿ.ಜೆ.ಬಡಾವಣೆಯಲ್ಲಿರುವ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದೆ.

        ಮಹಾನಗರ ಪಾಲಿಕೆಯ ಮಹಾಪೌರರಾದ ಶ್ರೀಮತಿ ಟಿ.ಜೆ. ಸುಧಾ ಜಯರುದ್ರೇಶ್ ಅವರು ಅಧ್ಯಕ್ಷತೆಯನ್ನು ವಹಿಸುವರು. ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಮಹೇಶ್ ರಾಯಚೂರು ಅವರು ಉದ್ಘಾಟಿಸುವರು.

         ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರು ಹೆಚ್.ಎನ್. ಗುರುನಾಥ್, ವ್ಯಂಗ್ಯ ಚಿತ್ರಕಾರರಾದ ಹೆಚ್.ಬಿ. ಮಂಜುನಾಥ್ ಹಾಗೂ ಜನಪ್ರತಿನಿಧಿಗಳು ಭಾಗವಹಿಸುವರು.

ದ್ವಿತೀಯ ಪಿಯುಸಿ ಪರೀಕ್ಷೆ ವೇಳಾ ಪಟ್ಟಿ

         ದಾವಣಗೆರೆ, ಮಾ.24- ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ.15 ರಿಂದ ಪ್ರಾರಂಭಗೊಂಡಿರುತ್ತವೆ. ಗಣಿತ ಮತ್ತು ಭೌತಶಾಸ್ತ್ರ ವಿಷಯಗಳ ಪ್ರಶ್ನೆ ಪತ್ರಿಕೆಗಳು ಬಯಲಾದ ಕಾರಣ ಮಾ. 24 ರಿಂದ ನಡೆಯಬೇಕಾಗಿರುವ ಪರೀಕ್ಷಾ ವಿಷಯಗಳ ಪರಿಷ್ಕೃತ ವೇಳಾ ಪಟ್ಟಿ ವಿವರ ಇಂತಿದೆ.

         ಮಾ.24 ರ ಬೆಳಿಗ್ಗೆ 9 ರಿಂದ 12.15 ರವರೆಗೆ ಐಚ್ಛಿಕ ಕನ್ನಡ/ಸಂಖ್ಯಾಶಾಸ್ತ್ರ/ ಗೃಹವಿಜ್ಞಾನ, ಮಾ.27 ರಂದು ಭೌತಶಾಸ್ತ್ರ/ತರ್ಕಶಾಸ್ತ್ರ/ ಶಿಕ್ಷಣ, ಮಾ.28 ರಂದು ಕನ್ನಡ/ತಮಿಳು/ಮಳಯಾಳಂ/ಅರೇಬಿಕ್, ಮಾ.29 ರಂದು ಇಂಗ್ಲೀಷ್, ಮಾ.30 ರಂದು ಮರಾಠಿ/ಉರ್ದು/ಫ್ರೆಂಚ್, ಮಾ.31 ರಂದು ರಸಾಯನಶಾಸ್ತ್ರ/ಬಿಸಿನೆಸ್ ಸ್ಟಡೀಸ್, ಏಪ್ರಿಲ್ 03 ರಂದು ಗಣಿತ ಹಾಗೂ ಏ.05 ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15 ರವರೆಗೆ ಹಿಂದಿ/ತೆಲುಗು/ಸಂಸ್ಕೃತ ವಿಷಯಗಳ ಪರೀಕ್ಷೆ ನಡೆಯಲಿವೆ ಎಂದು ಪದವಿಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ವಿಶ್ವ ಪರಿಸರ ಅಭಿಯಾನ

          ದಾವಣಗೆರೆ, ಮಾ.24-ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಗೋ-ಗ್ರೀನ್ (ಹಸಿರಿನೆಡೆಗೆ) ಅಚಿವರ್ಸ್ ಕ್ಲಬ್, ಜಿಲ್ಲಾಡಳಿತದ ಸಹಯೋಗದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. 

         ಗೋ-ಗ್ರೀನ್ (ಹಸಿರಿನೆಡೆಗೆ) ಅಚಿವರ್ಸ್ ಕ್ಲಬ್ ಹಾಗೂ ಜೆಸಿಎ ಸಂಸ್ಥೆ ವತಿಯಿಂದ ಪರಿಸರ ಜಾಗೃತಿ ಮೂಡಿಸಲು 100 ಕಿ.ಮೀ. ಪರಿಸರ ಸಂರಕ್ಷಣೆಯ ಅರಿವನ್ನು ಮೂಡಿಸುವ ಕಾಟನ್ ಬ್ಯಾನರ್‌ಗಳನ್ನು ಪ್ರದರ್ಶಿಸುವ ಕಾರ್ಯಕ್ರಮವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾ.25 ರ ಬೆಳಿಗ್ಗೆ 10.30 ಕ್ಕೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಗೋ ಗ್ರೀನ್ ಆರ್ಚೀವರ್‍ಸ್ ಕ್ಲಬ್‌ನ ಪ್ರಕಟಣೆ ತಿಳಿಸಿದೆ.

ನಿಯಮಿತ ಚಿಕಿತ್ಸೆಯಿಂದ ಕ್ಷಯ ಸಂಪೂರ್ಣ ಗುಣಪಡಿಸಲು ಸಾಧ್ಯ ಡಾ. ಡಿ.ಬಿ. ಚನ್ನಶೆಟ್ಟಿ

ಗದಗ(ಕರ್ನಾಟಕ ವಾತೆ) ಮಾರ್ಚ 24:  ಕ್ಷಯರೋಗವು ಮೈಕ್ರೋಬ್ಯಾಕ್ಟೀರಿಯಂ ಟ್ಯುಬರ್ ಕೋಲೇಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರಬಹುದಾದ ರೋಗವಾಗಿದ್ದು ನಿರಂತರ ಚಿಕಿತ್ಸೆ ಪಡೆಯುವುದರಿಂದ ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿದೆ ಎಂದು ಜಿಲ್ಲಾ  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಡಿ.ಬಿ. ಚೆನ್ನಶೆಟ್ಟಿ ಹೇಳಿದರು.

          ಅವರು ಮಲ್ಲಸಮುದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದಲ್ಲಿ  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ, ಜಿಲ್ಲಾ ವಾರ್ತಾ ಇಲಾಖೆ, ಕ್ಯಾಥೋಲಿಕ್ ಹೆಲ್ತ್ ಅಸೋಸಿಯೇಶನ್ ಆಫ್ ಇಂಡಿಯಾ, ರೋಟರಿ ಕ್ಲಬ್ ಗದಗ-ಬೆಟಗೇರಿ, ಮಹೇಶ್ವರಿ ಹಾಗೂ ಮದರ್ ಥೆರೇಸಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ಗದಗ ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರ ಮಲ್ಲಸಮುದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ  ವಿಶ್ವ ಕ್ಷಯ ರೋಗ ದಿನಾಚರಣೆ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

      ಹಿಂದಿನ ಕಾಲದಲ್ಲಿ ಕ್ಷಯ ರೋಗವನ್ನು ಭಯಾನಕ ರೋಗವೆಂದು ಪರಿಗಣಿಸಲಾಗುತ್ತಿತ್ತು.  ಆದರೆ ಇಂದಿನ ದಿನಗಳಲ್ಲಿ ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದಲ್ಲಿ ಇದನ್ನು ತಡೆಗಟ್ಟಬಹುದು ಎಂದರು.  ಜಿಲ್ಲೆಯಲ್ಲಿ ಟಿಬಿ ರೋಗಿಗಳ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ.  ಇದು ಆರೋಗ್ಯ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಯ ಪರಿಶ್ರಮದ ಫಲ ಎಂದರು.  ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಾರ್‍ಯ ಮಾಡಿದಲ್ಲಿ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಸಾಧ್ಯ ಎಂದರು. 

        ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ  ಶಸ್ತ್ರಚಿಕಿತ್ಸಕರಾದ ಡಾ. ಆರ್.ಎನ್. ಪಾಟೀಲ ಮಾತನಾಡಿ ಜಗತ್ತಿನಾದ್ಯಂತ ಇರುವ  ಕ್ಷಯರೋಗಿಗಳಲ್ಲಿ ಅರ್ಧದಷ್ಟು ಜನ ಭಾರತದಲ್ಲಿದ್ದಾರೆ. ಪ್ರತಿ ವರ್ಷ 30 ರಿಂದ 50 ವರ್ಷದೊಳಗಿನ 1.5 ಮಿಲಿಯನ್ ಜನರು ಈ ರೋಗಕ್ಕೆ ಒಳಗಾಗುತ್ತಿದ್ದಾರೆ ಹಾಗೂ 5 ಮಿಲಿಯನ್‌ನಷ್ಟು ಜನ ಇದರಿಂದ ಸಾವನ್ನಪ್ಪುತ್ತಿದ್ದಾರೆ.  ಇದರಿಂದ ದೇಶಕ್ಕೆ ದೊಡ್ಡ ಪ್ರಮಾಣದ ಹಾನಿಯಾಗುತ್ತದೆ .  ಇದನ್ನು ತಡಗಟ್ಟಲು ಈ ಕಾರ್‍ಯಕ್ರಮವನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

          ವೈಜ್ಞಾನಿಕವಾಗಿ ಇದು ಸೂಕ್ಷ್ಮಾಣುವಿನಿಂದ ಬರುವ ರೋಗ ಎನ್ನುವುದು ಸಾಬೀತಾಗಿದ್ದು ನಿಯಮಿತ ಔಷಧಿ ಸೇವನೆಯಿಂದ ಇದನ್ನು ಸಂಪೂರ್ಣ ಗುಣಪಡಿಸಬಹುದು.  ರೋಗಿಗಳು ಚಿಕಿತ್ಸೆ ಪಡೆಯುತ್ತಿರುವಾಗ ಅರ್ಧದಲ್ಲಿ ನಿಲ್ಲಿಸಬಾರದು ಎಂದರು.  ರೋಗ ಬಂದನಂತರ ಪಡೆಯುವ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ಮುಂಜಾಗ್ರತೆ ವಹಿಸುವುದು ಮುಖ್ಯ ಎಂದರು.

         ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಜ್ಯೋತಿಶ್ರೀ ಕಮತ ಮಾತನಾಡಿ ಕ್ಷಯವನ್ನು ತಡೆಗಟ್ಟಲು ಹಾಗೂ ಮುಂಜಾಗರೂಕತೆಗಾಗಿ ದೂರದರ್ಶನದಲ್ಲಿ ಪ್ರಚಾರ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರಲ್ಲದೇ ಕ್ಷಯ ರೋಗ ತಡೆಗಟ್ಟಲು ಕ್ಲಬ್ ನಿಂದ ಅನೇಕ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

         ಕಾರ್‍ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್‍ಯದರ್ಶಿ ಶ್ರೀ ಚನ್ನವೀರ ಹುಣಸಿಕಟ್ಟಿ , ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಎಫ್.ಎಮ್. ಸಾಲಿಗೌಡ್ರ, ಆರ್.ಸಿ. ಎಚ್ ನ ಡಾ. ಎಚ್. ಕಬಾಡಿ, ಡಿ.ಪಿ.ಎಂ.ಓ ಡಾ. ವೈ.ಕೆ. ಭಜಂತ್ರಿ, ಎನ್.ಡಿ. ಓ ಶ್ರೀಮತಿ ವೈ.ಎಚ್. ಭಜಂತ್ರಿ, ರೋಣ ತಾಲೂಕಾ ಆರೋಗ್ಯಾಧಿಕಾರಿ ಶ್ರೀ ಬಿ.ಎಚ್. ಭಜಂತ್ರಿ,  ಒಔಖಿಅ   ಗದಗ ಡಾ. ಎಂ.ಎಂ. ಸೊಲ್ಲಾಪುರ, ಮದರ ಥೆರೇಸ್ಸಾ ನರ್ಸಿಂಗ್ ಇನ್ಸ್ಟಿಟ್ಯೂಟ್  ಪ್ರಾಚಾರ್‍ಯ ಮರ್ಸಿಲ್ ಪಿ.ಕೆ. ಮಹೇಶ್ವರಿ ಇನ್ಟ್ಟಿಟ್ಯೂಟ್  ಪ್ರಾಚಾರ್‍ಯರು ಆಶಾ ಕಾರ್ಯಕರ್ತೆಯರು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

         ಎಸ್.ಎಸ್. ನೀಲಗುಂದ ಉಪನ್ಯಾಸ ನೀಡಿದರು. ಆರೋಗ್ಯ ಸಹಾಯಕರಾದ ಶ್ರೀ ಎಸ್.ಎಫ್ . ಅಂಗಡಿ ಸ್ವಾಗತಿಸಿದರು.  ಹಿರಿಯ ಪುರುಷ ಆರೋಗ್ಯ ಸಹಾಯಕ ಶ್ರೀ ಆರ್.ವಿ. ಕುಪ್ಪಸ್ತ ವಂದಿಸಿದರು.   ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀ ಬಿ.ಎನ್. ಮಸರಕಲ್ಲ ನಿರೂಪಿಸಿದರು.   ಇದೇ ಸಂದರ್ಭದಲ್ಲಿ ಆರ್.ಎನ್.ಟಿ.ಸಿ.ಪಿ. ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗಳಿಗೆ ಹಾಗೂ ಡಾಟ್ಸ್ ಚಿಕಿತ್ಸೆಯಿಂದ ಗುಣಮುಖರಾದ ಫಲಾನುಭವಿಗಳಿಗೆ ಸನ್ಮಾನಿಸಲಾಯಿತು.  

ನರೇಗಾ ಯೋಜನೆ ಕಾಮಗಾರಿ : ಸಾಮಾಜಿಕ ಲೆಕ್ಕಪರಿಶೋಧನೆಗೆ ಹಾವೇರಿ ಜಿಲ್ಲೆ ಆಯ್ಕೆ

 ಹಾವೇರಿ: ಮಾ.24: ರಾಜ್ಯಾದ್ಯಂತ ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿರುವ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋಧನೆಯನ್ನು  ಕರಾರುವಕ್ಕು, ಪರಿಣಾಮಗಾರಿ ಹಾಗೂ ವ್ಯವಸ್ಥಿತವಾಗಿ ನಡೆಯುವಂತೆ ಮಾಡಲು  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಯೋಜನೆಯೊಂದನ್ನು ರೂಪಿಸಿ ಪ್ರಾಯೋಗಿಕವಾಗಿ ರಾಜ್ಯದ 2 ತಾಲೂಕುಗಳಲ್ಲಿ ಜಾರಿಗೆ ನೀಡಿದೆ. ಈ ಅನುಭವದ ಆಧಾರದ ಮೇಲೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಸಾಮಾಜಿಕ ಪರಿಶೋಧನೆಯನ್ನು ವಿಸ್ತರಿಸಲಾಗುವುದು. ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನ ರಾಜ್ಯದ ಹಾಸನ ಜಿಲ್ಲೆಯ (ಹಾಸನ ತಾಲೂಕು) ಹಾಗೂ ಹಾವೇರಿ ಜಿಲ್ಲೆಯ (ರಾಣೇಬೆನ್ನೂರು ತಾ:) ತಲಾ ಒಂದು ತಾಲೂಕುಗಳನ್ನು ಆಯ್ಕೆಮಾಡಲಾಗಿದೆ.

         ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನಲ್ಲಿ ಪ್ರಾಯೋಗಿಕ ಸಾಮಾಜಿಕ ಲೆಕ್ಕಪರಿಶೋಧನೆ ಇದೇ ಮಾರ್ಚ್ 26 ರಿಂದ 2012ರ ಮೇ8ರ ವರೆಗೆ ಸುಮಾರು ಒಂದೂವರೆ ತಿಂಗಳ ಕಾಲ ನಡೆಯಲಿದೆಯೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅವರು ತಿಳಿಸಿದ್ದಾರೆ.

     ರಾಣೇಬೆನ್ನೂರು ತಾಲೂಕಿನಲ್ಲಿ 35 ಗ್ರಾಮ ಪಂಚಾಯತಿಗಳಿದ್ದು, ಪ್ರತಿಗ್ರಾಮ ಪಂಚಾಯತಿಯ ಸಾಮಾಜಿಕ ಲೆಕ್ಕ ಪರಿಶೋಧನೆ 6 ದಿನಗಳಕಾಲ ನಡೆಯುವುದು. ಲೆಕ್ಕಪರಿಶೋಧನೆಗಾಗಿ  ಪ್ರತಿ ಗ್ರಾಮ ಪಂಚಾಯತಿಗೆ ಒಂದರಂತೆ ಜನಪ್ರತಿನಿಧಿಗಳ ತಂಡವನ್ನು ತಾಲೂಕು ಸಾಮಾಜಿಕ ಲೆಕ್ಕಪರಿಶೋಧನಾ ಸಂಯೋಜಕರ ನೇತೃತ್ವದಲ್ಲಿ  ರಚಿಸಲಾಗುವುದು. ಲೆಕ್ಕ ಪರಿಶೋಧನೆಯ ಕೊನೆಯದಿನದಂದು ಗ್ರಾಮ ಸಭೆನಡೆಸಿ, ಸಾರ್ವಜನಿಕ ವಿಚಾರಣೆ ಏರ್ಪಡಿಸಲಾಗುವುದು. ಈ ಗ್ರಾಮಸಭೆಯ ಅಧ್ಯಕ್ಷತೆಯನ್ನು ತಾಲೂಕುಮಟ್ಟದಿಂದ ನಿಯೋಜಿತ ಅಧಿಕಾರಿಯೊಬ್ಬರು ವಹಿಸುವರು.

        ಆರು ದಿನಗಳ ಸಾಮಾಜಿಕ ಪರಿಶೋಧನೆಯ ಮೊದಲ ದಿನದಂದು ತಾಲೂಕು ಮಟ್ಟದ ಸಂಪನ್ಮೂಲವ್ಯಕ್ತಿಗಳಿಂದ ಗ್ರಾಮ ಪಂಚಾಯತಿಯಿಂದ ಗುರುತಿಸಲಾದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ ನೀಡಲಾಗುವುದು. 2ನೇ ದಿನ, ಗ್ರಾಮ ಪಂಚಾಯತಿಯ ಸಂಪನ್ಮೂಲ ವ್ಯಕ್ತಿಗಳು ಮನೆಮನೆ ಸಮೀಕ್ಷೆ ನಡೆಸಿ, ಉದ್ಯೋಗ ಚೀಟಿಯ ಪ್ರಕಾರ ವಿವರಗಳು ಮತ್ತು ಕೂಲಿ ಪಾವತಿಯಾದುದನ್ನು ಪರಿಶೀಲಿಸಿ, ಇತರ ವಿವರಗಳನ್ನು ಸಂಗ್ರಹಿಸುವರು.

         ಮೂರು ಮತ್ತು 4ನೇದಿನ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ, ಸೌಕರ್ಯಗಳ ಪೂರೈಕೆ, ಅಂತರ ಹಾಗೂ ಕಾಮಗಾರಿಗಳ ಗುಣಮಟ್ಟವನ್ನು ಗಮನಿಸುವರು. ಐದನೇ ದಿನ ವರದಿಯನ್ನು ತಯಾರಿಸಿ, ಆರನೇದಿನ ಜರುಗುವ ಗ್ರಾಮ ಸಭೆಯಲ್ಲಿ ಸಾರ್ವಜನಿಕ ವಿಚಾರಣೆ ನಡೆಸಲಾಗುವುದು. ಸಾಮಾಜಿಕ ಲೆಕ್ಕಪರಿಶೋಧನೆಯ ಅಂತ್ಯದಲ್ಲಿ ಲೆಕ್ಕಪರಿಶೋಧನೆಯ ನಿರ್ಣಯವನ್ನು ಗ್ರಾಮ ಸಭೆಯಲ್ಲಿ ಮಂಡಿಸಲಾಗುವುದು. ಅಧ್ಯಕ್ಷತೆ ವಹಿಸಿದ ಅಧಿಕಾರಿಗಳು,  ಮೇಲ್ನೋಟಕ್ಕೆ ಕಂಡುಬರುವ ಮೋಸ ಇಲ್ಲವೆ ದುರುಪಯೋಗದ ಪ್ರಕರಣಗಳನ್ನು ಗ್ರಾಮಸಭೆಯ ಒಪ್ಪಿಗೆಯೊಂದಿಗೆ ಓಂಬಡ್ಸ್‌ಮನ್‌ಗೆ ಒಪ್ಪಿಸಲು ಅವಕಾಶವಿದ್ದು, ಓಂಬಡ್ಸ್‌ಮನ್ ಅವರು ಕಾನೂನು ರೀತ್ಯ ಈ ಪ್ರಕರಣಗಳನ್ನು ಇತ್ಯರ್ಥಪಡಿಸಬೇಕಾಗುವುದು.

       ಪ್ರಾಯೋಗಿಕವಾಗಿ ನಡೆಸಬೇಕಾಗಿರುವ  ಈ ಸಾಮಾಜಿಕ ಪರಿಶೋಧನೆಗಾಗಿ ಜಿಲ್ಲಾ ಪಂಚಾಯತಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಈ ಲೆಕ್ಕಪರಿಶೋಧನೆ 2011-12ರ ಸಾಲಿನ ಆರ್ಥಿಕ ವರ್ಷದ ಪ್ರಥಮಾರ್ಧ ಅವಧಿಗೆ ಸೀಮಿತವಾಗಿರುತ್ತದೆ. ಪ್ರತಿ ಗ್ರಾಮ ಪಂಚಾಯತಿಯ ಸಾಮಾಜಿಕ ಪರಿಶೋಧನೆ ಅಂತ್ಯಕ್ಕೆ ನಡೆಯುವ ಗ್ರಾಮ ಸಭೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಖುದ್ದಾಗಿಯಾಗಲಿ ಇಲ್ಲವೆ ಅವರ ಸಮಾನಾಂತರ ದರ್ಜೆಯ ಅಧಿಕಾರಿಗಳಾಗಲಿ ಹಾಜರಿರುತ್ತಾರೆ. ಇಡೀ ತಾಲೂಕಿನ  ಎಲ್ಲ 35 ಗ್ರಾಮ ಪಂಚಾಯತಿಗಳ ಪರಿಶೋಧನೆಗೆ ಸುಗಮವಾಗಿ ನೆರವೇರಲು ಜಿಲ್ಲೆಯಲ್ಲಿನ ಸಹಾಯಕ ನಿರ್ದೆಶಕರನ್ನು  ನೇಮಿಸಲಾಗಿದೆ.

         ಗ್ರಾಮ ಪಂಚಾಯತಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಸಂಖ್ಯೆಗನುಗುಣವಾಗಿ ಸಾಮಾಜಿಕ ಪರಿಶೋಧನೆಗೆ, ಓದು ಬರಹ ಬಲ್ಲ, ಯೋಜನೆಯ ಬಗ್ಗೆ ತಿಳುವಳಿಕೆಯುಳ್ಳ ಮತ್ತು ಕಾಮಗಾರಿಯಲ್ಲಿ ಕಾರ್ಮಿಕರಾಗಿ ದುಡಿದ ಕನಿಷ್ಠ 2 ರಿಂದ 5 ಜನ ಮಹಿಳೆಯರು, ರೈತರು ಹಾಗೂ ಇತರರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ  ಆಯ್ಕೆಮಾಡಲಾಗುತ್ತಿದೆ. ಒಂದು ಗ್ರಾಮ ಪಂಚಾಯತಿಯ ಸಂಪನ್ಮೂಲ ವ್ಯಕ್ತಿಗಳನ್ನು ಇನ್ನೊಂದು ಗ್ರಾಮ ಪಂಚಾಯತಿಗೆ ಪರಿಶೋಧನೆಗಾಗಿ ನಿಯೋಜಿಸಲಾಗುವುದು.

        ಈ ಎಲ್ಲ ಪ್ರಕ್ರಿಯೆಗಳನ್ನು ಇಲಾಖಾ ಮಾರ್ಗಸೂಚಿಯನ್ವಯ ನಿರ್ವಹಿಸಲಾಗುವುದೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ ಅವರು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆ : ಮಾ.27 ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ

ಹಾವೇರಿ: ಮಾ.24: ಬರುವ ಏಪ್ರಿಲ್ 2 ರಿಂದ ಎ.16ವರೆಗೆ ಜರುಗುವ  ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು, ಹಾವೇರಿ ಜಿಲ್ಲೆಯ 7 ತಾಲೂಕಿನ 83 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿವೆ.

          ಪರೀಕ್ಷೆಗಳನ್ನು ಅತ್ಯಂತ ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ, ಜಿಲ್ಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇದೇ ಮಾ.27 ರಂದು ಮಧ್ಯಾಹ್ನ 4 ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ, ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ಕರೆಯಲಾಗಿದೆ ಎಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ.ಕೊಡ್ಲಿ ಅವರು ತಿಳಿಸಿದ್ದಾರೆ.

ವಿಶೇಷ ಉಪನ್ಯಾಸ ಕಾರ್ಯಕ್ರಮ

ಹಾವೇರಿ: ಮಾ.24: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಾಲುಮತ ಅಧ್ಯಯನ ಪೀಠವು ಮಾ.28 ರಿಂದ ಎಪ್ರಿಲ್ 1ರವರೆಗೆ ಹಾವೇರಿ ಜಿಲ್ಲೆಯ ಬಂಕಾಪುರ, ರಾಣೇಬೆನ್ನೂರು, ಕೆರಿಮತ್ತಿಹಳ್ಳಿ ಮತ್ತು ಭರಡಿಯಲ್ಲಿ ಕುರುಬ ಸಮುದಾಯ ಹಾಗೂ ಇನ್ನಿತರೆ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಾಲುಮತ ಸಮಾಜ ಸಾಹಿತ್ಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.

          ಮಾ.28 ರಂದು ಮಧ್ಯಾಹ್ನ 2 ಗಂಟೆಗೆ ರೇವಣಸಿದ್ದೇಶ್ವರ ಕೆಂಡದಮಠದ ಸಹಯೋಗದಲ್ಲಿ ಬಂಕಾಪುರದ ಕೆಂಡದಮಠದ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕನ್ನಡ ವಿಶ್ವವಿದ್ಯಾಲಯದ  ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯ ಅವರ ಅಧ್ಯಕತೆಯಲ್ಲಿ, ರಾಜ್ಯ ಕುರಿತು ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಅವರು ಸಮಾರಂಭದ ಉದ್ಘಾಟನೆ ನೆರವೇರಿಸುವರು.

       ಕಲಘಟಗಿಯ ಪ್ರಾಧ್ಯಾಪಕ ಡಾ.ಬಿ.ಜಿ.ಬಿರಾದಾರ ಅವರು ಬಂಕಾಪುರದ ಕೆಂಡದಮಠ, ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ ಅಭಿಯಂತರ ಡಾ.ಲಿಂಗದಹಳ್ಳಿ ಹಾಲಪ್ಪ ಅವರು ಹಂಡೆ ಅರಸುಮನೆತನ, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎಫ್.ಟಿ.ಹಳ್ಳಿಕೇರಿ ಅವರು ಬಸವಣ್ಣೆಪ್ಪ ನೀಲಪ್ಪ ಹಳವಳ್ಳಿ ಸಾಹಿತ್ಯ ಸಾಧನೆ ಹಾಗೂ ಶ್ರೀಮತಿ ಶಶಿಕಲಾ ಹುಡೇದ ಅವರು ಹಾಲುಮತ ಪುರಾಣಗಳು ಎಂಬ ವಿಷಯದ ಬಗೆಗೆ ಉಪನ್ಯಾಸ ನೀಡುವರು.

        ಮಾ.29 ರಂದು ಸಾಯಂಕಾಲ 5.50ಕ್ಕೆ ರಾಣೇಬೆನ್ನೂರು ತಾಲೂಕು ಕುರುಬ ನೌಕರರ ಸಂಘದ ಸಹಯೋಗದಲ್ಲಿ ರಾಣೇಬೆನ್ನೂರಿನ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು  ನೌಕರ ಸಂಘದ ಅಧ್ಯಕ್ಷ ಗುಡ್ಡಪ್ಪ ತಹಶೀಲ್ದಾರ ವಹಿಸುವರು. ಶಕ್ತಿನಗರದ ಕರ್ನಾಟಕ ವಿದ್ಯುತ್ ನಿಗಮದ ಅಭಿಯಂತರ ಡಾ.ಲಿಂಗದಹಳ್ಳಿ ಹಾಲಪ್ಪ ಅವರು, ಬೀರದೇವರ ಆಚರಣೆ ಮತ್ತು ಸಂಪ್ರದಾಯಗಳು, ಪ್ರಾಧ್ಯಾಪಕರಾದ ಕೆ.ನ್.ಅಂಬಿಗೇರ ಅವರು, ಕಂಬಳಿ ಉದ್ಯಮದ ಆಗುಹೋಗುಗಳು, ಡಾ.ಮುದೇನೂರ ನಿಂಗಪ್ಪ ಅವರು, ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಮೌಲ್ಯಗಳು ಹಾಗೂ ವಾಣಿಜ್ಯ ಆದಾಯ ಇಲಾಖೆಯ ಅರ್ಜುನ ತೋತೆಪ್ಪನವರ ಅವರು, ಸ್ವಾತಂತ್ರ್ಯ ಹೋರಾಟಗಾರ ಕರಿಯಪ್ಪ ಸಂಗೂರ ಅವರ ಕುರಿತು ಉಪನ್ಯಾಸ ನೀಡುವರು.

         ಮಾ.30 ರಂದು ಬೆಳಿಗ್ಗೆ 11 ಗಂಟೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಹಯೋಗದಲ್ಲಿ ಕೆರಿಮತ್ತಿಹಳ್ಳಿಯ ಕ.ವಿ.ವಿ.ಸ್ನಾತಕೋತ್ತರ ಕೇಂದ್ರದಲ್ಲಿ, ಡಾ.ಟಿ.ಎಂ.ಭಾಸ್ಕರ ಅವರ ಅಧ್ಯಕ್ಷತೆಯಲ್ಲಿ, ಡಾ.ಅನ್ನಪೂರ್ಣ ಗೋಸ್ಬಾಳ ಅವರು, ಹಾಲುಮತ ಗುರು ರೇವಣಸಿದ್ದೇಶ್ವರ, ಡಾ.ಜಗನ್ನಾಥ ಗೇಣನ್ನವರ ಅವರು, ಕನಕದಾಸರ ನೆಲೆಗಳು ಹಾಗೂ ಅಧ್ಯಾಪಕರಾದ ಲಿಂಗರಾಜ ಪಾಟೀಲ ಅವರು, ಸಮಾಜ ಸುಧಾರಕ ಕರಿಯಪ್ಪ ಹುಚ್ಚಣ್ಣವರ ವಿಷಯ ಕುರಿತು ಉಪನ್ಯಾಸ ನೀಡುವರು.

         ಏ.1 ರಂದು ಸಾಯಂಕಾಲ 5ಕ್ಕೆ ಹಾವೇರಿ ತಾಲೂಕಿನ ಭರಡಿಯ ಬೀರಲಿಂಗೇಶ್ವರ ಯುವಸೇನೆಯ ಸಹಯೋಗದಲ್ಲಿ, ಬೀರೇಶ್ವರ ದೇವಸ್ಥಾನದ ಆವರಣದಲ್ಲಿ, ಕನ್ನಡ ಪ್ರಾಧ್ಯಾಪಕ ಡಾ.ಸಿದ್ದಣ್ಣ ಜಕಬಾಳ ಅವರು, ರ್‍ವಾಣಗಳು ಸಾಂಸ್ಕೃತಿಕ ಮಹತ್ವ, ಸಂಶೋಧನ ವಿದ್ಯಾರ್ಥಿ ಎನ್.ಬಿ.ವಿರುಪಾಕ್ಷಿ ಅವರು, ಹಾವೇರಿ ಜಿಲ್ಲೆಯ ಹಾಲುಮತ ಕ್ಷೇತ್ರಗಳು ಹಾಗೂ ಡಾ.ಎನ್.ಎಂ.ಅಂಬಲಿಯವರು ನಿಸ್ಸಿಮಪ್ಪ ನೀಲಪ್ಪ ಆಲದಕಟ್ಟಿ ಶೈಕ್ಷಣಿಕ ಸೇವೆ ವಿಷಯ ಕುರಿತು ಉಪನ್ಯಾಸ ನೀಡುವರು ಎಂದು ಹಾಲುಮತ ಅಧ್ಯಯನ ಪೀಠದ ಸಂಚಾಲಕ ಡಾ.ಎಫ್.ಟಿ.ಹಳ್ಳಿಕೇರಿ ಅವರು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಹಾಯವಾಣಿ ಸೌಲಭ್ಯ

ಹಾವೇರಿ: ಮಾ.24:  ರಾಜ್ಯದಲ್ಲಿ ಏಪ್ರಿಲ್ 2 ರಿಂದ ಏ.16ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆಯಲಿವೆ. ಪರೀಕ್ಷೆಯಲ್ಲಿ ಮಕ್ಕಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಏಕಾಗ್ರತೆಯನ್ನು ಕಳೆದುಕೊಂಡು ಹಲವು ಸಮಸ್ಯೆಗಳಿಂದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದೆ ಇರುವುದನ್ನು ಗಮನಿಸಿ ಪರೀಕ್ಷಾ ಮಂಡಳಿ, ವಿದ್ಯಾರ್ಥಿಗಳ ಸಮಸ್ಯೆಗಳನ್ನು ನಿವಾರಣೆ ಮಾಡಿ ಪರೀಕ್ಷೆಯನ್ನು  ಸಮರ್ಥವಾಗಿ ಬರೆಯಲು ಸ್ಪೂರ್ತಿ ನೀಡುವ ಉದ್ದೇಶದಿಂದ ದಿ.19-3-2012 ರಿಂದ 31-3-2012ರವರೆಗೆ ಪ್ರತಿದಿನ ಮಧ್ಯಾಹ್ನ 3 ಗಂಟೆಯವರೆಗೆ ಸಹಾಯವಾಣಿ ಪ್ರಾರಂಭಿಸಿದೆ. ದೂರವಾಣಿ ಸಂಖ್ಯೆ:080-2331145, 080-23312246 ಇಲ್ಲಿಗೆ ಕರೆ ಮಾಡಬಹುದು.

        ಏ.2 ರಿಂದ ಏ.16ರವರೆಗೆ ಸಹಾಯವಾಣಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. ಪರಿಣಿತ ಮನಃಶಾಸ್ತ್ರಜ್ಞನರು, ವೈದ್ಯರು, ಸಮಾಜ ಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ಇಲಾಖಾ ಅಧಿಕಾರಿಗಳು ಭಾಗವಹಿಸುವರು. ಪೋಷಕರು ಈ ದೂರವಾಣಿ ಸಂಖ್ಯೆಗೆ ಭಾನುವಾರ ಮತ್ತು ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ, ಕರೆಮಾಡಿ ತಮ್ಮ ಸಮಸ್ಯೆ, ಸಂದೇಹಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ಜೊತೆಗೆ ಪರೀಕ್ಷಾ ಸಿದ್ಧತೆ, ಪ್ರಶ್ನೆ ಪತ್ರಿಕೆಯ ಮಾದರಿ, ಅಧ್ಯಯನ ಕೌಶಲ್ಯ, ಪರೀಕ್ಷಾ ಭೀತಿ, ಸಮಯ ನಿರ್ವಹಣೆ, ನೆನಪಿನ ಶಕ್ತಿ ಉಳಿಸಿಕೊಳ್ಳುವ ವಿಧಾನ, ತಂದೆ-ತಾಯಿಗಳ, ಸಮಾಜ, ಸ್ನೇಹಿತರ ಒತ್ತಡ, ಮುಂದಿನ ಶಿಕ್ಷಣದ ಅರಿವು, ಪರೀಕ್ಷೆ ಹತ್ತಿರವಾಗುತ್ತಿರುವಂತೆ ವಿದ್ಯಾರ್ಥಿಗಳ ವರ್ತನೆಯ ಬದಲಾವಣೆ, ಇಷ್ಟವಿಲ್ಲದ ವಿಷಯಗಳನ್ನು ಓದಬೇಕಾದ ಅನಿವಾರ್ಯತೆ, ಕೀಳರಿಮೆ ಮುಂತಾದ ವಿಷಯಗಳಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಕರೆ ಮಾಡಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ.ಕೊಡ್ಲಿ ತಿಳಿಸಿದ್ದಾರೆ.

95 ಖಾಸಗಿ ಭೂಮಾಪಕರ ಪರವಾನಿಗೆಗಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮಾ.24.(ಕ.ವಾ.)-ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆ ಇಲಾಖೆಯ ಕ್ರಯ ಪಾಲು ವಿಂಗಡಣೆ ಮುಂತಾದ ಸಂದರ್ಭಗಳಲ್ಲಿ ಜಮೀನುಗಳ ಹಾಗೂ ಸರ್ಕಾರವು ವಹಿಸಬಹುದಾದ ಅಳತೆ ಕಾರ್ಯವನ್ನು ಖಾಸಗಿಯಾಗಿ ನಿರ್ವಹಿಸುವ ಭೂಮಾಪಕರಿಗೆ ಪರವಾನಗಿ ನೀಡಲು ಉದ್ದೇಶಿಸಿದ್ದು, ಗುಲಬರ್ಗಾ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಗಳನ್ನು ಜಿಲ್ಲಾಧಿಕಾರಿ ಕಚೇರಿಯ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಗುಲಬರ್ಗಾ ಕೊಠಡಿ ಸಂಖ್ಯೆ 24, ಮಿನಿ ವಿಧಾನಸೌಧ ಕಚೇರಿಯಲ್ಲಿ ನಿಗದಿತ ಶುಲ್ಕ 200 ರೂ.ಗಳನ್ನು ಆಯುಕ್ತರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳು ಬೆಂಗಳೂರು ಇವರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಪಾವತಿಯಾಗುವಂತೆ ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕಿನಿಂದ ಕ್ರಾಸ್ ಡಿಡಿ ಮೂಲಕ ಪಾವತಿಸಿ, ಅರ್ಜಿ ಹಾಗೂ ಪ್ರಾಸ್ಪೆಕ್ಟ್‌ಸ್‌ನ್ನು ಪಡೆಯಬಹುದಾಗಿದೆ. ಒಬ್ಬ ಅಭ್ಯರ್ಥಿಯು ಒಂದು ಜಿಲ್ಲೆಯಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಗುಲಬರ್ಗಾ ಜಿಲ್ಲೆಯಲ್ಲಿ ಅಗತ್ಯವಾಗಿರುವ ಪರವಾನಿಗೆ ಭೂಮಾಪಕರ ಸಂಖ್ಯೆಯು 95 ಇರುತ್ತದೆ. ಈ ಜಿಲ್ಲೆಗೆ ಸೀಮಿತವಾದಂತೆ ಪರವಾನಿಗೆ ಭೂಮಾಪಕರಿಗೆ ಪರವಾನಿಗೆಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್ ಅವರು ತಿಳಿಸಿದ್ದಾರೆ.

          ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಇಲಾಖೆ ನಿರ್ದೇಶನಾಲಯದಿಂದ ನಡೆಸುವ ಲ್ಯಾಂಡ್ ಆಂಡ್ ಸಿ.ಟಿ. ಸರ್ವೇ (ಜೆ.ಓ.ಸಿ.ಟಿ-11) ಶಿಕ್ಷಣದಲ್ಲಿ / ಅಥವಾ ಕರ್ನಾಟಕ ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿ ನಡೆಸುವ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾ ಅಥವಾ ಇದಕ್ಕೆ ತತ್ಸಮಾನ ವಿದ್ಯಾರ್ಹತೆ ಅಥವಾ ಕರ್ನಾಟಕದ ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಸಿವಿಲ್ ಇಂಜಿನಿಯರಿಂಗ್ ಪದವಿ ಅಥವಾ ಇದಕ್ಕೆ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಅಥವಾ ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೇ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ್ಕೆ ಒಳಪಟ್ಟ ಉದ್ಯಮಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಿಗೆ ಪಡೆಯಲು ಅರ್ಹರಾಗಿರುತ್ತಾರೆ.

        ಅಭ್ಯರ್ಥಿಗಳು 2012ರ ಏಪ್ರಿಲ್ 25ಕ್ಕೆ 18ರಿಂದ 65 ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಭರ್ತಿ ಮಾಡುವ ಮುನ್ನ ಅರ್ಜಿಯೊಂದಿಗಿನ ಸೂಚನೆಗಳನ್ನು ಗಮನಿಸಲು ಸೂಚಿಸಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾಧಿಕಾರಿ ಕಚೇರಿಯ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಗುಲಬರ್ಗಾ ಕೊಠಡಿ ಸಂಖ್ಯೆ: 24, ಮಿನಿ ವಿಧಾನಸೌಧ, ಕಚೇರಿಯಲ್ಲಿ ಸಲ್ಲಿಸಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 26-04-2012 ಆಗಿದ್ದು, ವಿವರ ಕೆಳಗಿನಂತೆ ಇರುತ್ತದೆ.

       2012ರ ಮಾರ್ಚ್ 26ರಿಂದ ನಿಗದಿತ ಅರ್ಜಿಗಳನ್ನು ನೀಡುವ ಹಾಗೂ ಸ್ವೀಕರಿಸುವ ಕಾರ್ಯ ಪ್ರಾರಂಭವಾಗುವುದು. ಅರ್ಜಿ ನಮೂನೆಗಳನ್ನು ನೀಡಲು ಕೊನೆಯ ದಿನಾಂಕ ಮಾರ್ಚ್ 25 ಹಾಗೂ ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ ಮಾರ್ಚ್ 26 ಇರುತ್ತದೆ ಮತ್ತು ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಗುಲಬರ್ಗಾ ಕೊಠಡಿ ಸಂಖ್ಯೆ 24, ಮಿನಿ ವಿಧಾನಸೌಧ ಇವರನ್ನು ಸಂಪರ್ಕಿಸಬಹುದಾಗಿದೆ.

        ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಗುಲಬರ್ಗಾ ಜಿಲ್ಲೆಯವರಾಗಿದ್ದು, ಈ ಕುರಿತು ಸಂಬಂಧಿಸಿದ ಕಂದಾಯ ಇಲಾಖೆ/ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ/ ಪುರಸಭೆ/ ನಗರ ಸಭೆಗಳಿಂದ ವಾಸವಿರುವ ಬಗ್ಗೆ ದೃಢೀಕರಣಪತ್ರ ಸಲ್ಲಿಸಬೇಕು. ಇತರೆ ಜಿಲ್ಲೆಯ ಅಭ್ಯರ್ಥಿಗಳು ಅರ್ಜಿ ಹಾಕಲು ಅವಕಾಶವಿರುವುದಿಲ್ಲ ಮತ್ತು ಒಬ್ಬ ಅಭ್ಯರ್ಥಿಯು ಗುಲಬರ್ಗಾ ಜಿಲ್ಲೆಗೆ ಸೀಮಿತವಾದಂತೆ ಅರ್ಜಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಎರಡು ಜಿಲ್ಲೆಗಳಿಗೆ ಅರ್ಜಿ ಹಾಕಿರುವುದು ಕಂಡುಬಂದಲ್ಲಿ ಯಾವುದೇ ಸೂಚನೆಯಿಲ್ಲದೆ ರದ್ದು ಪಡಿಸಲಾಗುವುದು. ಅರ್ಜಿ ಹಾಕಿದ ಅಭ್ಯರ್ಥಿಗಳು ಅವರ ವಿದ್ಯಾರ್ಹತೆಗೆ ಸೀಮಿತವಾದಂತೆ ಆಯ್ಕೆಯಾದ ನಂತರ ತರಬೇತಿ ನೀಡಿ ಅರ್ಜಿ ಹಾಕಿದ ಗುಲಬರ್ಗಾ ಜಿಲ್ಲೆಯಲ್ಲಿಯೇ ಕಾರ್ಯಕ್ಷೇತ್ರ ನಿಗದಿಪಡಿಸಲಾಗುವುದು. ನಂತರ ಕಾರ್ಯಕ್ಷೇತ್ರ ಬದಲಾವಣೆಗೆ ಅವಕಾಶವಿರುವುದಿಲ್ಲ. ನಿಗದಿಪಡಿಸಿರುವ ವಯೋಮಿತಿ ಇರುವವರೆಗೂ ಈ ಜಿಲ್ಲೆಯಲ್ಲಿಯೇ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿನ ಕೊಠಡಿ ಸಂಖ್ಯೆ 24ರ ಪದನಿಮಿತ್ತ ಬೂಧಾಖಲೆಗಳ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.

ಮಾರ್ಚ್ 26 ಮತ್ತು 27ರಂದು ದೈಹಿಕ ಅರ್ಹತೆ ಮತ್ತು ದೇಶಿ ಕ್ರೀಡೆಗಳಲ್ಲಿ ಕ್ರೀಡಾ ಪಟುಗಳ ಪೌಷ್ಟಿಕತೆ ವಿಚಾರ ಸಂಕಿರಣ

ಗುಲಬರ್ಗಾ,ಮಾ.24.(ಕ.ವಾ.)-ಇಡೀ ಭಾರತ ದೇಶದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯು.ಜಿ.ಸಿ.) ವಿಶೇಷ ನೆರವು ಯೋಜನೆಯ (ಎಸ್.ಎ.ಪಿ.) ಮಾನ್ಯತೆ ನೀಡಿ ಐದು ವರ್ಷಕ್ಕೆ 45 ಲಕ್ಷ ರೂ. ಮಂಜೂರು ಮಾಡಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎನ್.ಜಿ. ಕಣ್ಣೂರ ಅವರು ತಿಳಿಸಿದ್ದಾರೆ.

         ಈ ಯೋಜನೆಯಡಿ ಭಾರತದ ದೇಶಿ ಕ್ರೀಡೆಗಳ ಬಲವರ್ಧನೆ ಮತ್ತು ಪ್ರೋತ್ಸಾಹ ಹಾಗೂ ಅತ್ಯುತ್ತಮ ಕ್ರೀಡೆ ಪ್ರದರ್ಶನಾಧಾರಿತ ಕಾರ್ಯಕ್ರಮಗಳ ಅಭಿವೃದ್ಧಿ ಎಂಬ ಎರಡೂ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ಗುಲಬರ್ಗಾ ವಿಶ್ವವಿದ್ಯಾಲಯದ ವ್ಯಾಪಿಗೊಳಪಡುವ ಬೀದರ, ಗುಲಬರ್ಗಾ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ದೇಶಿ ಕ್ರೀಡೆಗಳಾದ ಕಬಡ್ಡಿ, ಖೋ-ಖೋ ಮತ್ತು ಕುಸ್ತಿಯನ್ನು ತಳ ಮಟ್ಟದಿಂದ ಉತ್ತೇಜನಗೊಳಿಸುವ ಯೋಜನೆಯಾಗಿದೆ.

          ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಕ್ರೀಡಾ ಉಪಕರಣಗಳ ಖರೀದಿಗೆ, ಪುಸ್ತಕಗಳ ಖರೀದಿಗೆ, ಕ್ರೀಡಾ ತಜ್ಞರಿಂದ ವಿಶೇಷ ಉಪನ್ಯಾಸಗಳ ಸಲುವಾಗಿ ಹಾಗೂ ಸಂಬಂಧಿಸಿದ ಪ್ರಮುಖ ಕ್ಷೇತ್ರದಲ್ಲಿ ವಿಚಾರ ಸಂಕಿರಣ ಏರ್ಪಡಿಸಲು ಧನಸಹಾಯ ಆಯೋಗವು ಅನುದಾನ ಬಿಡುಗಡೆ ಮಾಡಿದೆ. ಈ ಕಾರ್ಯಕ್ಕೆ ಸಹಾಯ ಮಾಡಲು 5 ವರ್ಷದವರಗೆ ಒಬ್ಬ ಪ್ರೋಜೆಕ್ಟ್ ಫೆಲೋಗಾಗಿ ಪ್ರತಿ ತಿಂಗಳು 14000 ರೂ. ಸಂಭಾವನೆ ನೀಡುವುದು.

         ಸದರಿ ಯೋಜನೆಯಡಿ 2012ರ ಮಾರ್ಚ್ 26 ಮತ್ತು 27ರಂದು ದೈಹಿಕ ಅರ್ಹತೆ ಮತ್ತು ದೇಶಿ ಕ್ರೀಡೆಗಳಲ್ಲಿ ಕ್ರೀಡಾ ಪಟುಗಳ ಪೌಷ್ಟಿಕತೆ ಕುರಿತು ಮೂರನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಲ್ಲಿ ಏರ್ಪಡಿಸಲಾಗುತ್ತಿದೆ. ಈ ವಿಚಾರ ಸಂಕಿರಣದಲ್ಲಿ ಚೆನ್ನೈನ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಆರ್. ತಿರಯಮಲೈಸ್ವಾಮಿ ಅವರು ಮಾರ್ಚ್ 26ರಂದು ಬೆಳಗಿನ 10-30 ಗಂಟೆಗೆ ಆಶಯ ಭಾಷಣ ಮಾಡಲಿದ್ದಾರೆ. ಈ ಸಮ್ಮೇಳನವನ್ನು ಶಾಸಕಿ ಅರುಣಾ.ಸಿ. ಪಾಟೀಲ ಅವರು ಉದ್ಘಾಟಿಸುವರು. ವಿಶೇಷ ಅತಿಥಿಗಳಾಗಿ ಗುಲಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯರುಗಳಾದ ಪ್ರೊ. ಆರ್. ಬಿ. ಮಾಲಿಪಾಟೀಲ್, ರಾಘವೇಂದ್ರ ಕುಲಕರ್ಣಿ ಹಾಗೂ ಮಹಾರುದ್ರ ಹೂಗಾರ ಭಾಗವಹಿಸುವರು ಹಾಗೂ ಅಧ್ಯಕ್ಷತೆಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಈ.ಟಿ. ಪುಟ್ಟಯ್ಯ ಅವರು ವಹಿಸುವರು.

        ಮಾರ್ಚ್ 27 ರಂದು ಸಂಜೆ 4-30 ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭವು ಜರುಗಲಿದೆ. ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಂಧ್ರಪ್ರದೇಶ ಸರ್ಕಾರದ ಮಾಜಿ ತಾಂತ್ರಿಕ ಸಲಹೆಗಾರ ಪ್ರೊ. ಪಿ.ಚೆನ್ನಪ್ಪ ರೆಡ್ಡಿ ಅವರು ಭಾಗವಹಿಸುವರು. ಗೌರವಾನ್ವಿತ ಅತಿಥಿಗಳಾಗಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರತಾಪಸಿಂಗ್ ತಿವಾರಿ ಅವರು ಭಾಗವಹಿಸುವರು. ವಿಶೇಷ ಆಹ್ವಾನಿತರಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರುಗಳಾದ ಶಾಂತಲಿಂಗ ಸಾವಳಗಿ, ಎಸ್.ಜಿ. ಭಾರತಿ ಹಾಗೂ ಸುಭಾಷ ರಾಠೋಡ ಭಾಗವಹಿಸುವರು ಹಾಗೂ ಅಧ್ಯಕ್ಷತೆಯನ್ನು ಕುಲಸಚಿವ ಪ್ರೊ. ಎಸ್.ಎಲ್. ಹಿರೇಮಠ ಅವರು ವಹಿಸುವರು.

       ಇದಲ್ಲದೆ ಸ್ಥಳೀಯ ಕ್ರೀಡೆಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳ ಬಗ್ಗೆ ವಿವಿಧ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ದೈಹಿಕ ಶಿಕ್ಷಣ ತಜ್ಞರು ಪ್ರಬಂಧ ಮಂಡಿಸುವರು. ಡಾ. ಸುಂದರ ರಾಜ ಅರಸ, ಡಾ. ಪಿ.ಸಿ. ಕೃಷ್ಣಸ್ವಾಮಿ, ಇಸ್ಮಾಯಿಲ್, ಡಾ.ಎನ್. ಚಂದ್ರಪ್ಪ, ಡಾ. ರೇಣುಕಾ ಬುರ್ಜುಕೆ, ಪ್ರೊ. ಚಿನ್ನಪ್ಪರಡ್ಡಿ, ಡಾ. ಅಪ್ಪಣ್ಣ ಗಸ್ತಿ, ಡಾ. ಪ್ರತಾಪಸಿಂಗ್ ತಿವಾರಿ, ಡಾ. ಎ.ದಯಾನಂದ. ಈ ವಿಚಾರ ಸಂಕಿರಣದಲ್ಲಿ ಸುಮಾರು 350 ಪ್ರತಿನಿಧಿಗಳು ಭಾಗವಹಿಸುತ್ತಾರೆ. ಈ ವಿಚಾರ ಸಂಕಿರಣ ದೇಶಿ ಕ್ರೀಡೆಗಳಾದ ಕಬಡ್ಡಿ, ಖೋ-ಖೋ ಮತ್ತು ಕುಸ್ತಿಯನ್ನು ತಳಮಟ್ಟದಿಂದ ಉತ್ತೇಜನ ನೀಡಲು ಸಹಕಾರ ಆಗಿರುತ್ತದೆ.

ಅಬಕಾರಿ ಸಚಿವರ ಪ್ರವಾಸ

ಗುಲಬರ್ಗಾ,ಮಾ.24.(ಕ.ವಾ.)-ಅಬಕಾರಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು 2012ರ ಮಾರ್ಚ್ 26ರಂದು ಬೆಳಗಿನ 5 ಗಂಟೆಗೆ ರೈಲು ಮೂಲಕ ಗುಲಬರ್ಗಾಕ್ಕೆ ಆಗಮಿಸುವರು. ನಂತರ ಬೆಳಗಿನ 11 ಗಂಟೆಗೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮಕ್ಕೆ ಆಗಮಿಸಿ ಸಾಮೂಹಿಕ ವಿವಾಹ ಮತ್ತು ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಜೇವರ್ಗಿಯಿಂದ ಹೈದ್ರಾಬಾದಿಗೆ ಪ್ರಯಾಣ ಮಾಡುವರು.

ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ಗುಲಬರ್ಗಾ,ಮಾ.24.(ಕ.ವಾ.)-ಗುಲಬರ್ಗಾ ವಿಭಾಗ-1ರ ವ್ಯಾಪ್ತಿಯಲ್ಲಿ ಬರುವ ಆಳಂದ ತಾಲೂಕಿನ 33/11 ಕೆ.ವಿ. ಮಾದನಹಿಪ್ಪರಗಾ ಉಪವಿತರಣಾ ಕೇಂದ್ರದಲ್ಲಿ 2012ರ ಮಾರ್ಚ್ 26ರಂದು ಬೆಳಗಿನ 10ರಿಂದ ಸಾಯಂಕಾಲ 5 ಗಂಟೆಯವರೆಗೆ ಸುಧಾರಣೆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಈ ಪ್ರಯುಕ್ತ ಅಂದು ಈ ಮುಂದೆ ತೋರಿಸಿರುವ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಮಾದನಹಿಪ್ಪರಗಾ, ನಿಂಗದಳ್ಳಿ, ದರ್ಗಾಶಿರೂರ, ಕೇರೂರ, ಮದ್ಗುಣಕಿ, ಮೋಗಾ(ಕೆ), ಮೋಗಾ(ಬಿ), ಜಳಕಿ(ಡಿ), ಚಳಗೇರಾ ಮತ್ತು ಖೇಡ ಉಮರಗಾ ಮತ್ತು ಸುತ್ತಮುತ್ತಲಿನ ಗ್ರಾಮಗಳು. ತೊಂದರೆಯಾಗಲಿರುವ ಗ್ರಾಮಗಳ ವಿದ್ಯುತ್ ಗ್ರಾಹಕರು ಜೆಸ್ಕಾಂದೊಂದಿಗೆ ಸಹಕರಿಸುವಂತೆ ಕೋರಲಾಗಿದೆ.

ಗುಲಬರ್ಗಾ ಹಾಲು ಒಕ್ಕೂಟ: ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

ಗುಲಬರ್ಗಾ,ಮಾ.24.(ಕ.ವಾ.)-ಕರ್ನಾಟಕ ಸರ್ಕಾರವು 2011-12ನೇ ಸಾಲಿನಲ್ಲಿ ಘೋಷಿಸಿರುವ ಅಮೃತ ಯೋಜನೆ, ಗಿರಿಜನ ಉಪಯೋಜನೆ ಹಾಗೂ ವಿಶೇಷ ಘಟಕ ಯೋಜನೆ ಅನುಷ್ಠಾನಗೊಳಿಸುತ್ತಿದೆ.  ಸದರಿ ಯೋಜನೆಯಲ್ಲಿ ದೇವದಾಸಿ, ವಿಧವೆಯರು/ ಜೀವನಾಧಾರವಿಲ್ಲದ ಸಂಕಷ್ಟಕ್ಕೊಳಗಾದ ನಿರ್ಗತಿಕ/ ಕೂಲಿ ಕಾರ್ಮಿಕ ಮಹಿಳೆಯರಿಗೆ ಮಿಶ್ರತಳಿ ಹಸು/ ಎಮ್ಮೆ ಖರೀದಿಸಲು ಆರ್ಥಿಕ ಸೌಲಭ್ಯ ಒದಗಿಸಲಾಗುವುದು. ಈ ಘಟಕದ ವೆಚ್ಚ 35000 ರೂ. ಇರುತ್ತದೆ. ದೇವದಾಸಿಯರು, ವಿಧವೆಯರು/ ಜೀವನ ಆಧಾರವಿಲ್ಲದ ಸಂಕಷ್ಟಕ್ಕೊಳಗಾದ/ ನಿರ್ಗತಿಕ/ ಕೂಲಿ ಕಾರ್ಮಿಕ ಫಲಾನುಭವಿಗಳಿಗೆ ಹಸರು/ ಎಮ್ಮೆ ಖರೀದಿಸಲು ಶೇ. 50ರ ಅನುದಾನ, ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ಶೇ. 60ರ ಅನುದಾನ ಮತ್ತು ಗಿರಿಜನ ಉಪಯೋಜನೆ ಫಲಾನುಭವಿಗಳಿಗೆ ಶೇ. 75ರ ಅನುದಾನ ಮಂಜೂರು ಮಾಡಲಾಗುವುದು. ಈ ಯೋಜನೆಯು ನಗರ ಪ್ರದೇಶದ ವ್ಯಾಪ್ತಿಗೊಳಪಡುವ ಫಲಾನುಭವಿಗಳಿಗೆ ಶೇ. 10 ಮತ್ತು ಅಂಗವಿಕಲರ ಮಹಿಳೆಯರಿಗೆ ಶೇ. 03ರಂತೆ ಮೀಸಲಿಡಲಾಗವುದು. ಹಾಲು ಉತ್ಪಾದಕರ ಸಹಕಾರ ಸಂಘಗಳಿರುವ ಗ್ರಾಮಗಳ ಫಲಾನುಭವಿಗಳು ಗುಲಬರ್ಗಾ ಹಾಲು ಒಕ್ಕೂಟದಿಂದ ಸಂಘಗಳಿಲ್ಲದೆ ಇರುವ ಗ್ರಾಮಗಳ ಫಲಾನುಭವಿಗಳು ಜಿಲ್ಲಾ ಉಪನಿರ್ದೇಶಕರು ಪಶುಸಂಗೋಪನೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಿಂದ ಉಚಿತವಾಗಿ ಅರ್ಜಿಗಳನ್ನು 26-03-2012 ರಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು 25-04-2012 ರಂದು ಮೇಲ್ಕಂಡ ಇಲಾಖೆಗಳ ಮುಖಾಂತರ ಸಲ್ಲಿಸಬೇಕು. ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಇಚ್ಛಿಸುವ ಫಲಾನುಭವಿಗಳು ಹಿಂದಿನ ಮೂರು ವರ್ಷಗಳಲ್ಲಿ ಹೈನುಗಾರಿಕೆ ಸಾಲ/ ಅನುದಾನವನ್ನು ಯಾವುದೇ ಯೋಜನೆಗಳ ಅಡಿಯಲ್ಲಿ ಪಡೆದಿರಬಾರದೆಂದು ಗುಲಬರ್ಗಾ ಹಾಲು ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಎಸ್.ಎಸ್.ಎಲ್.ಸಿ. ಪರೀಕ್ಷೆಗಾಗಿ ಸಹಾಯವಾಣಿ ಪ್ರಾರಂಭ

ಗುಲಬರ್ಗಾ,ಮಾ.24.(ಕ.ವಾ.)-ಎಸ್.ಎಸ್.ಎಲ್.ಸಿ. ಪರೀಕ್ಷೆ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿರುತ್ತದೆ. ಈ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸ್ಫೂರ್ತಿ ನೀಡಬೇಕಾದ ಅವಶ್ಯಕತೆ ಇದೆ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಕಂಡುಹಿಡಿಯುವ ಹಾಗೂ ಏಕಾಗ್ರತೆ, ಆತ್ಮಸ್ಥೈರ್ಯ ತುಂಬುವ ಮತ್ತು ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಫೂರ್ತಿ ನೀಡುವ ಸದುದ್ದೇಶದಿಂದ ಕರ್ನಾಟಕ ಪೌಢಶಿಕ್ಷಣ ಪರೀಕ್ಷಾ ಮಂಡಳಿ ಹಿಂದಿನ ವರ್ಷಗಳಂತೆ ಈ ವರ್ಷವೂ ಸಹಾಯವಾಣಿ ಕೌನ್ಸಿಲಿಂಗ್ ಕಾರ್ಯಕ್ರಮವನ್ನು 2012ರ ಮಾರ್ಚ್ 19 ಸೋಮವಾರದಿಂದ ಪ್ರಾರಂಭಿಸಿದೆ. ಇದಕ್ಕಾಗಿ ಈ ಮುಂದೆ ತೋರಿಸಿರುವ ದೂರವಾಣಿ ಸಂಖ್ಯೆಗಳು ಮೀಸಲಿಡಲಾಗಿದೆ. 080-23312245 ಮತ್ತು 080-23312246 ಈ ಸಹಾಯವಾಣಿಯು ಮಾರ್ಚ್ 19ರಿಂದ 31ರವರೆಗೆ ಪ್ರತಿದಿನ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. 2012ರ ಏಪ್ರಿಲ್ 2 ರಿಂದ 16ರವರೆಗೆ ಸಹಾಯವಾಣಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. ಮಾರ್ಚ್ 19ರಂದು ಬೆಳಗಿನ 10-15 ಗಂಟೆಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಣ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸಹಾಯವಾಣಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಹಾಯವಾಣಿ ಕಾರ್ಯಕ್ರಮದಲ್ಲಿ ಪರಿಣಿತರಾದ ಮನಶಾಸ್ತ್ರಜ್ಞರು, ವೈದ್ಯರು, ಸಮಾಜಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಇವರ ಜೊತೆಯಲ್ಲಿ ಇಲಾಖಾ ಅಧಿಕಾರಿಗಳು ವಿದ್ಯಾರ್ಥಿಗಳು ಉಪಸ್ಥಿತರಿರುತ್ತಾರೆ. ಪೋಷಕರು ಮೇಲೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಕರೆಮಾಡಿ ತಮ್ಮ ಸಮಸ್ಯೆಗಳಿಗೆ, ಸಂದೇಹಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು, ಪೋಷಕರು ಈ ಮುಂದೆ ತೋರಿಸಿರುವ ವಿಷಯಗಳ ಬಗ್ಗೆ ಪ್ರಶ್ನೆ ಕೇಳಬಹುದು. ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ವಿಧಾನ, ಪ್ರಶ್ನೆಪತ್ರಿಕೆಯ ಮಾದರಿ, ಅಧ್ಯಯನ ಕೌಶಲ್ಯ ಇವುಗಳನ್ನು ಅಳವಡಿಸಿಕೊಳ್ಳುವ ವಿಧಾನ, ಪರೀಕ್ಷಾ ಭೀತಿ, ಸಮಯ ನಿರ್ವಹಣೆ, ಜ್ಞಾಪಕಶಕ್ತಿ ಕಡಿಮೆ ಎಂಬ ಭಾವನೆ, ಮರೆವು, ನೆನಪಿನ ಶಕ್ತಿ ಉಳಿಸಿಕೊಳ್ಳುವ ವಿಧಾನ, ತಂದೆ, ತಾಯಿಗಳ, ಸಮಾಜ, ಸ್ನೇಹಿತರ ಒತ್ತಡ, ಮುಂದಿನ ಶಿಕ್ಷಣದ ಅರಿವು/ ವೃತ್ತಿ ಕುರಿತು ಮಾಹಿತಿ, ಪರೀಕ್ಷೆ ಹತ್ತಿರವಾಗುತ್ತಿರುವ ವಿದ್ಯಾರ್ಥಿಗಳ ವರ್ತನೆಯು ಬದಲಾವಣೆಯಾಗುವುದು ಮತ್ತು ಇಷ್ಟವಿಲ್ಲದ ವಿಷಯಗಳನ್ನು ಓದಬೇಕಾದ ಅನಿವಾರ್ಯತೆ, ಒತ್ತಡ, ಕೀಳರಿಮೆ ಇತ್ಯಾದಿ. ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿದಾಗ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬಾರದೆಂದು ಪರೀಕ್ಷೆಗಳ ನಿರ್ದೇಶಕ ಡಿ. ವೆಂಕಟೇಶಯ್ಯ ಕೋರಿದ್ದಾರೆ.

ವಿದ್ಯುಚ್ಛಕ್ತಿ ದರ ಹೆಚ್ಚಳ: ಏಪ್ರಿಲ್ 9ರಂದು ಸಾರ್ವಜನಿಕ ವಿಚಾರಣೆ

ಗುಲಬರ್ಗಾ,ಮಾ.24.(ಕ.ವಾ.)-ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯು 2012-13ನೇ ಸಾಲಿಗೆ ಪ್ರತಿ ಯುನಿಟ್ಟಿಗೆ 73 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಿಸಬೇಕೆಂದು ಕೋರಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಪ್ರಯುಕ್ತ ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ಆಯೋಗವು 2012ರ ಏಪ್ರಿಲ್ 9 ರಂದು ಬೆಳಗಿನ 10ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕ ವಿಚಾರಣೆಯನ್ನು ಏರ್ಪಡಿಸಿದೆ. ಸಾರ್ವಜನಿಕರು ಈ ವಿಚಾರಣೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಜೆಸ್ಕಾಂ ಮುಖ್ಯ ಅಭಿಯಂತರರು ಕೋರಿದ್ದಾರೆ.

ತಿದ್ದುಪಡಿ

ಗುಲಬರ್ಗಾ,ಮಾ.24.(ಕ.ವಾ.)-ಗುಲಬರ್ಗಾ ಜಿಲ್ಲೆಯ ಆಳಂದ ವಲಯದ ವಾಹನ ಸಂಖ್ಯೆ ಕೆ.ಎ.-32/ಬಿ 6176 ಹೀರೋ ಹೊಂಡಾ ಫ್ಯಾಶನ್ ಬದಲಾಗಿ ಕೆ.ಎ.32/ಯು-6516 ಹೀರೋ ಹೋಂಡಾ ಫ್ಯಾಶನ್ ಎಂದು ಓದಿಕೊಳ್ಳಲು ಹಾಗೂ ಸದರಿ ವಾಹನದ ಹರಾಜು ನಿರ್ವಹಣಾಧಿಕಾರಿಯಾಗಿ ಗುಲಬರ್ಗಾ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರನ್ನು ನೇಮಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.

ಮಾರ್ಚ್ 26ರಂದು ಜಿಲ್ಲಾ ಯೋಜನಾ ಸಮಿತಿ ಸಭೆ

ಗುಲಬರ್ಗಾ,ಮಾ.24.(ಕ.ವಾ.)-ಗುಲಬರ್ಗಾ ಜಿಲ್ಲಾ ಯೋಜನಾ ಸಮಿತಿ ಸಭೆಯು 2012ರ ಮಾರ್ಚ್ 26ರಂದು ಬೆಳಗಿನ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಹಳೆ ಸಭಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಶಶಿಧರ ಪುಣ್ಯಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರುಗುವ ಈ ಸಭೆಯಲ್ಲಿ 12ನೇ ಪಂಚವಾರ್ಷಿಕ ಯೋಜನೆಯ ಮುನ್ನೋಟ, ಯೋಜನೆಗೆ ಸಂಬಂಧಿಸಿದ ವಿವಿಧ ಇಲಾಖೆಗಳಿಂದ ವಿಷಯ ಮಂಡನೆ, ಮಾದರಿ ಗ್ರಾಮ ಪಂಚಾಯಿತಿ ಯೋಜನೆ, 2010-11 ಮತ್ತು 2011-12ನೇ ಸಾಲಿನ ಬಿ.ಆರ್.ಜಿ.ಎಫ್. ಯೋಜನೆಯ ಪ್ರಗತಿ ಪರಿಶೀಲನೆ ಹಾಗೂ ಚರ್ಚೆ ನಡೆಯಲಿದೆ.

ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರೆ

ಗುಲಬರ್ಗಾ,ಮಾ.24.(ಕ.ವಾ.)-ಕ್ಷಯರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಹಾಗೂ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಖಾಸಗಿ ವೈದ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಅವರು ಹೇಳಿದರು.

ಅವರು ಶನಿವಾರ ಗುಲಬರ್ಗಾದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಕ್ಷಯರೋಗಿಗಳಿಗೆ ಡಾಟ್ಸ್ ಮಾತ್ರೆಯನ್ನು ನುಂಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಎಂ.ಆರ್. ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ಮುರುಗೇಶ ಪಸ್ತಾಪೂರ ಅವರು ಮಾತನಾಡಿ ಕ್ಷಯರೋಗಾಣುವನ್ನು ರಾಬರ್ಟ್ ಕಾಕ್ ವಿಜ್ಞಾನಿ 1882ರಲ್ಲಿ ಕಂಡು ಹಿಡಿದಿದ್ದು ಈ ರೋಗದ ಪತ್ತೆಗಾಗಿ ಕಫ್ ಪರೀಕ್ಷೆ ಮಾಡುವುದು ಮುಖ್ಯವಾಗಿದೆ. ಈ ರೋಗವನ್ನು ಡಾಟ್ಸ್ ಚಿಕಿತ್ಸೆಯಿಂದ ಗುಣುಪಡಿಸಬಹುದಾಗಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ಅವರು ಅಧ್ಯಕ್ಷತೆ ವಹಿಸಿ ಕ್ಷಯರೋಗದ ಲಕ್ಷಣಗಳನ್ನು ವಿವರಿಸುತ್ತ ಕ್ಷಯರೋಗದ ಪರೀಕ್ಷೆ ಮತ್ತು ಚಿಕಿತ್ಸೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ಷಯರೋಗದಿಂದ ಡಾಟ್ಸ್ ಚಿಕಿತ್ಸೆ ಮೂಲಕ ಸಂಪೂರ್ಣ ಗುಣಮುಖ ಹೊಂದಿದ ಶಾಮ ಮತ್ತು ಅಚಿಜನಾದೇವಿ ಅವರು ತಮ್ಮ ಅನಿಸಿಕೆಗಳನ್ನು ವಿವರಿಸಿ ಡಾಟ್ಸ್ ಮಾತ್ರೆಗಳನ್ನು ನಿಯಮಿತವಾಗಿ ಸೇವಿಸಿ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆರೋಗ್ಯವಂರಾಗಿದ್ದೇವೆ. ಈ ಚಿಕಿತ್ಸೆಗೆ ಯಾವುದೇ ಹಣದ ಖರ್ಚು ಉಂಟಾಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು. ಡಾ. ವಾಣಿಶ್ರೀ ಪಾಟೀಲ್ ಸ್ವಾಗತಿಸಿದರು. ಡಾ. ಎಂ.ಎಸ್. ವರ್ಮಾ ವಂದಿಸಿದರು. ಸುರೇಶ ಎಸ್. ದೊಡ್ಮನಿ ಕಾರ್ಯಕ್ರಮ ನಿರೂಪಿಸಿದರು.

ಇದಕ್ಕೂ ಮುನ್ನ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಮತ್ತು ಜಿಲ್ಲಾ ಶಸ್ತ್ರಜ್ಞೆ ಡಾ. ಸುಲೋಚನಾ ಎಸ್. ಮಿಂಚ್ ಅವರು ಚಾಲನೆ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿಗಳು , ನರ್ಸಿಂಗ್ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸ್ವಯಂ ಸೇವಾ ಸಂಘದ ಸಿಬ್ಬಂದಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದರು.

ಮತ್ತೂರು-ಹೊಸಹಳ್ಳಿಯಲ್ಲಿ ಮತ್ಸ್ಯಧಾಮದ ಕುರಿತು ಸಂವಾದ

          ಶಿವಮೊಗ್ಗ, ಮಾರ್ಚ್ 24 (ಕರ್ನಾಟಕ ವಾರ್ತೆ) ಮೀನುಗಾರಿಕೆ ಇಲಾಖೆಯು ಅಳಿವಿನಂಚಿನಲ್ಲಿರುವ ಹಾಗೂ ಅಪರೂಪದ ಮಹಶೀರ್ ತಳಿಯ ಮೀನನ್ನು ಸಂರಕ್ಷಿಸಲು ಉದ್ಧೇಶಿಸಿದ್ದು, ಶಿವಮೊಗ್ಗ ತಾಲ್ಲೂಕಿನ ಮತ್ತೂರು-ಹೊಸಹಳ್ಳಿ ಮಧ್ಯೆ ಹರಿಯುವ ತುಂಗಾ ನದಿಯ ಭಾಗವನ್ನು ಮತ್ತೂರು ಮತ್ಸ್ಯಧಾಮ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ.

         ಈ ಸಂರಕ್ಷಿತ ಪ್ರದೇಶದಲ್ಲಿ ಮೀನುಕೃಷಿಯಲ್ಲಿ ತೊಡಗಿರುವ ಮೀನುಗಾರರಿಗೆ, ಸ್ಪೋಟಕಗಳನ್ನು ಬಳಸದಂತೆ, ಪರಿಸರಕ್ಕೆ ಹಾನಿಯುಂಟಾಗದಂತೆ ಸ್ಥಳೀಯರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಲು ವಿಶೇಷ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

       ಮಾರ್ಚ್ 27ರಂದು ಬೆಳಿಗ್ಗೆ 10.30ಕ್ಕೆ ಮತ್ತೂರಿನ ಮತ್ಸ್ಯಧಾಮದಲ್ಲಿ ಹಾಗೂ ಮಾರ್ಚ್ 28ರಂದು ಬೆಳಿಗ್ಗೆ 10.30ಕ್ಕೆ ಹೊಸಹಳ್ಳಿಯ ಮತ್ಸ್ಯಧಾಮದಲ್ಲಿ ಸಂರಕ್ಷಿತ ಪ್ರದೇಶದ ರಕ್ಷಣೆ ಮತ್ತು ಅಭಿವೃದ್ಧಿಯ ಕುರಿತು ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಸ್ಥಳೀಯರು, ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ಸಕಾಲ’-  ಜಿಲ್ಲಾ  ಮಾಹಿತಿ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ                                            

       ಶಿವಮೊಗ್ಗ, ಮಾರ್ಚ್ 24 (ಕರ್ನಾಟಕ ವಾರ್ತೆ) `ಸಕಾಲ ಮಿಷನ್’- ಅಡಿಯಲ್ಲಿ  (ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ- 2011) ಜಿಲ್ಲಾ ಮಾಹಿತಿ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

  ಅಭ್ಯರ್ಥಿಗಳ ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್) ಅಥವಾ ಎಂ.ಸಿ.ಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಕಲಿತಿರಬೇಕು. ಕನಿಷ್ಠ 2 ವರ್ಷಗಳ ಅನುಭವವಿರಬೇಕು. ಎಂ.ಎಸ್ ಆಫೀಸ್ ಸೇರಿದಂತೆ  ಕಂಪ್ಯೂಟರ್‌ನ ಇತರೆ ವಿಷಯಗಳಲ್ಲಿ ಕುಶಲತೆ ಇರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ಹಾಗೂ ಬೆರಳಚ್ಚು ಮಾಡಲು ಬರಬೇಕು. ಮಾಸಿಕ ರೂ. 15,000/- ಗಳ ವೇತನ ನೀಡಲಾಗುವುದು.

   ಅಭ್ಯರ್ಥಿಗಳ ವಯೋಮಿತಿ 40 ವರ್ಷದೊಳಗಿರಬೇಕು. ಸಾಮಾನ್ಯ ಯೋಗ್ಯತಾ ಪರೀಕ್ಷೆ, ಬೆರಳಚ್ಚು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಜಿಲ್ಲಾ ಆಯ್ಕೆ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಸಕ್ತ ಅಭ್ಯರ್ಥಿಗಳು ಇದೇ ಮಾರ್ಚ್ 26 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಪ್ರಾರಂಭವಾಗಲಿರುವ ನೇರ ಸಂದರ್ಶನಕ್ಕೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಅಂದು ಬೆಳಿಗ್ಗೆ 11.00 ಗಂಟೆಗೆ ನೋಂದಣಿ ಮುಕ್ತಾಯಗೊಂಡು, ಪರೀಕ್ಷೆಗಳು 11.00 ಗಂಟೆಯಿಂದ ಪ್ರಾರಂಭವಾಗಲಿವೆ. ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ಪೋಷಕರ ಪತ್ತೆಗೆ ನೆರವು ನೀಡಿ

      ಶಿವಮೊಗ್ಗ, ಮಾರ್ಚ್ 24 (ಕರ್ನಾಟಕ ವಾರ್ತೆ) ಕು. ಕಾವ್ಯ ಬಿನ್ ಮೆಸ್ತ್ರಿ ಎಂಬ 5 ವರ್ಷದ ಬಾಲಕಿಯು ಇತ್ತೀಚೆಗೆ ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಿಂದ ಸರ್ಕಾರಿ ಬಾಲಮಂದಿರದ ಸ್ವಾಗತ ಕೇಂದ್ರಕ್ಕೆ ದಾಖಲಾಗಿರುತ್ತಾಳೆ.

       3.4 ಅಡಿ ಎತ್ತರ, ಗೋಧಿ ಬಣ್ಣ ಹಾಗೂ ಬಲಗೈ ಕೀಲು ಭಾಗದ ಮೇಲೆ ಗುರುತು ಹೊಂದಿರುವ ಬಾಲಕಿಯ ಪೋಷಕರ ಕುರಿತು ಮಾಹಿತಿ ದೊರೆತಲ್ಲಿ ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲಮಂದಿರ, ಹಾಲ್ಕೊಳ, ಶಿವಮೊಗ್ಗ ಇವರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ

ಚಿಕ್ಕಮಗಳೂರು ಮಾ.24: ಕಾರ್ಪೊರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ನಿರುದ್ಯೋಗ ಯುವಕ/ಯುವತಿಯರಿಗಾಗಿ 2012 ಏಪ್ರಿಲ್ ನಿಂದ ಮಾರ್ಚ್ ವರೆಗೆ ಸ್ವ ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

  ಡ್ರೆಸ್ ಡಿಸೈನಿಂಗ್, ಹ್ಯಾಂಡ್ ಎಂಬ್ರಾಯ್ಡರಿ, ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್, ಕಂಪ್ಯೂಟರ್ ಡಿ.ಟಿ.ಪಿ, ಕಂಪ್ಯೂಟರ್ ಟ್ಯಾಲಿ, ಗೃಹೋಪಯೋಗಿ ವಿದ್ಯುತ್ ಉಪಕರಣಗಳ ರಿಪೇರಿ, ಮಲ್ಟಿಫೋನ್ ಸರ್ವಿಸಿಂಗ್, ಹೈನುಗಾರಿಕೆ, ಇನ್ವರ್ಟರ್/ಯು.ಪಿ.ಎಸ್.ತಯಾರಿಕೆ ಮತ್ತು ರಿಪೇರಿ, ಕಂಪ್ಯೂಟರ್ ಬೇಸಿಕ್, ಪೇಪರ್ ಕವರ್, ಪೇಪರ್ ಬ್ಯಾಗ್, ಎನ್ವಲಪ್ ಮತ್ತು ಫೈಲ್ ಗಳ ತಯಾರಿಕೆ, ಗೃಹೋಪಯೋಗಿ ವಸ್ತುಗಳ ತಯಾರಿಕೆ ಮುಂತಾದ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತರಬೇತಿ ಸಮಯದಲ್ಲಿ ಉಚಿತ ಊಟ ಮತ್ತು ವಸತಿ ಸೌಕರ್ಯ ಒದಗಿಸಲಾಗುವುದು.

  18 ರಿಂದ 40ವರ್ಷದ ವಯೋಮಿತಿ ಒಳಗಿನ ಅರ್ಹ ಅಭ್ಯರ್ಥಿಗಳು ಸ್ವ ವಿವರದೊಂದಿಗೆ  ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕಾರ್ಪೊರೇಷನ್ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ(ರಿ) ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಹತ್ತಿರ ಕಡೂರು ರಸ್ತೆ, ದೂ.ಸಂ.08262-210064,210477 ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಜಿಲ್ಲಾ ಸಾಲ ಯೋಜನೆ ಬಿಡುಗಡೆ ಸಮಾರಂಭ

ಚಿಕ್ಕಮಗಳೂರು ಮಾ.24: ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ನಗರದ ಎಂ.ಜಿ.ರಸ್ತೆಯ ಲೀಡ್ ಬ್ಯಾಂಕ್ ಕಛೇರಿ ಸಭಾಂಗಣದಲ್ಲಿ ಮಾರ್ಚ್ 27ರ ಬೆಳಗ್ಗೆ 11ಗಂಟೆಗೆ 2012-13ನೇ ಸಾಲಿನ ಜಿಲ್ಲಾ ಸಾಲ ಯೋಜನೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭವನ್ನು ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಂಗೇಗೌಡ  ಉದ್ಘಾಟಿಸಲಿದ್ದಾರೆ.

ಆರ್.ಬಿ.ಐನ ಮಹಾಪ್ರಬಂಧಕ ಭಟ್ಟಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪುಸ್ತಕ ಮಾರಾಟ 

ಚಿಕ್ಕಮಗಳೂರು ಮಾ.24: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟವಾದ ಡಾ.ಅಂಬೇಡ್ಕರ್ ಬರಹ ಭಾಷಣಗಳ ಸಂಪುಟ 5,6,7,8,9 ಮಾರಾಟಕ್ಕೆ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಛೇರಿಯ ಆವರಣದಲ್ಲಿ ಇರಿಸಲಾಗಿದೆ. ಎಂದು ಪ್ರಕಟಣೆ ತಿಳಿಸಿದೆ. 

ದ್ವಿತೀಯ ಪಿಯುಸಿ ಪರೀಕ್ಷೆ: ವೇಳಾಪಟ್ಟಿ ಬದಲಾವಣೆ

ಚಿಕ್ಕಮಗಳೂರು ಮಾ.24: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 15ರಿಂದ ಮಾರ್ಚ್ 31ರವರೆಗೆ ನಿಗಧಿಪಡಿಸಲಾಗಿದ್ದು, ಗಣಿತ ಮತ್ತು ಭೌತಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಭೌತಶಾಸ್ತ್ರ ಪರೀಕ್ಷೆಯು ಮಾರ್ಚ್ 27 ಹಾಗೂ ಗಣಿತ ಶಾಸ್ತ್ರ ಪತ್ರಿಕೆಯು ಏಪ್ರಿಲ್ 3 ರಂದು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

6ನೇ ತರಗತಿ ಪ್ರವೇಶ ಪರೀಕ್ಷೆ

ಚಿಕ್ಕಮಗಳೂರು ಮಾ.24:  ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಗಳ ವತಿಯಿಂದ ನಡೆಯುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ 2012-13ನೇ ಸಾಲಿಗೆ 6ನೇ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿಗೆ ಪ್ರವೇಶ  ಪರೀಕ್ಷೆಯು  ಮಾರ್ಚ್  25 ರ  ಬೆಳಗ್ಗೆ  11  ಗಂಟೆಗೆ ನಗರದ ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆ, ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಪ್ಪದ ಸರ್ಕಾರಿ ಪದವಿ ಪೂರ್ವ ಕಾಲೇಜು, ಮೂಡಿಗೆರೆಯ ಸೆಂಟ್ ಮಾರ್ಥನ್ ಹಿರಿಯ ಪ್ರಾಥಮಿಕ ಶಾಲೆ, ಎನ್.ಆರ್.ಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಶೃಂಗೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜು, ತರೀಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. 

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕಛೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

ಕೇಂದ್ರ ಸಚಿವರುಗಳ ಪ್ರವಾಸ ಕಾರ್ಯಕ್ರಮ

ಚಿಕ್ಕಮಗಳೂರು ಮಾ.24: ಭಾರತ ಸರ್ಕಾರದ ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ಡಾ||ಎಂ.ವೀರಪ್ಪ ಮೊಯಿಲಿ ಹಾಗೂ ರೈಲ್ವೇ ಸಚಿವರಾದ ಕೆ.ಎಚ್.ಮುನಿಯಪ್ಪ ರವರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಸಚಿವರುಗಳು ಮಧ್ಯಾಹ್ನ 2ಗಂಟೆಗೆ ನಗರದ ಸ್ಥಳೀಯ ನಿಯೋಜಿತ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ.

‘ಸಕಾಲ’ ಜಿಲ್ಲಾ ಮಾಹಿತಿ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನ

ವಿಜಾಪುರ,ಮಾ.24- ಸಕಾಲ ಮಿಷನ್‌ಅಡಿಯಲ್ಲಿ (ಕರ್ನಾಟಕ ನಾಗರೀಕ ಸೇವಾ ಖಾತರಿ ಅಧಿನಿಯಮ-2011) ಜಿಲ್ಲಾ ಮಾಹಿತಿ ಸಲಹೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

    ಅಭ್ಯರ್ಥಿಗಳ ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್) ಅಥವಾ ಎಂ.ಸಿ.ಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಕಲಿತಿರಬೇಕು. ಎಂ.ಸಿ.ಎ ಕಲಿತವರಿಗೆ ಕನಿಷ್ಠ 2 ವರ್ಷಗಳ ಅನುಭವವಿರಬೇಕು. ಎಂ.ಎಸ್ ಆಫೀಸ್ ಸೇರಿದಂತೆ  ಕಂಪ್ಯೂಟರ್‌ನ ಇತರೆ ವಿಷಯಗಳಲ್ಲಿ ಕುಶಲತೆ ಇರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ಹಾಗೂ ಬೆರಳಚ್ಚು ಮಾಡಲು ಬರಬೇಕು. ಮಾಸಿಕ ರೂ. 15,000/- ಗಳ ವೇತನ ನೀಡಲಾಗುವುದು.

    ಅಭ್ಯರ್ಥಿಗಳ ವಯೋಮಿತಿ 40 ವರ್ಷದೊಳಗಿರಬೇಕು. ಸಾಮಾನ್ಯ ಯೋಗ್ಯತಾ ಪರೀಕ್ಷೆ, ಬೆರಳಚ್ಚು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಜಿಲ್ಲಾ ಆಯ್ಕೆ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಸಕ್ತ ಅಭ್ಯರ್ಥಿಗಳು  ದಿ: 26-3-2012 ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಬೆಳಿಗ್ಗೆ 10.00 ಗಂಟೆಯಿಂದ ಪ್ರಾರಂಭವಾಗಲಿರುವ ನೇರ ಸಂದರ್ಶನಕ್ಕೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಅಂದು ಬೆಳಿಗ್ಗೆ 11.00 ಗಂಟೆಗೆ ನೋಂದಣಿ ಮುಕ್ತಾಯಗೊಂಡು, ಪರೀಕ್ಷೆಗಳು 11.00 ಗಂಟೆಯಿಂದ ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿಜಾಪುರ,ಮಾ.24- ಬ.ಬಾಗೇವಾಡಿ-ಬಾಗಲಕೋಟ-2 110 ಕೆ.ವ್ಹಿ. ಸರ್ಕ್ಯೂಟ್ ಮಾರ್ಗದಲ್ಲಿ ತುರ್ತು ಕೆಲಸ ನಿರ್ವಹಿಸುವುದರಿಂದ ಮಾರ್ಚ 27ರಂದು 110 ಕೆ.ವಿ. ಮುದ್ದೇಬಿಹಾಳ, 110 ಕೆ.ವ್ಹಿ. ಮುಕರ್ತಿಹಾಳ, 110 ಕೆ.ವ್ಹಿ. ನಿಡಗುಂದಿ ವಿದ್ಯುತ್ ಉಪ ಕೇಂದ್ರಗಳ ಮೇಲೆ ಬರುವ ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಎಲ್ಲಾ ಹಳ್ಳಿಗಳು ಮತ್ತು ಸುತ್ತಮುತ್ತಲ ಗ್ರಾಮೀಣ ಪ್ರದೇಶಗಳಲ್ಲಿ ಮುಂಜಾನ 8ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

ವಿವಿಧ ಹುದ್ದೆ ಭರ್ತಿಗಾಗಿ ಮಾರ್ಚ 27ರಂದು ನೇರ ಸಂದರ್ಶನ

ವಿಜಾಪುರ,ಮಾ.24- ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರದ ಆಶ್ರಯದಲ್ಲಿ ವಿವಿಧ ಕಂಪನಿಗಳಲ್ಲಿ ಖಾಲಿಯಿರುವ ವಿವಿಧ ಹುದ್ದೆಗಳ ಭರ್ತಿಗಾಗಿ ದಿ: 27-3-2012ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸ್ಟೇಶನ ರಸ್ತೆಯಲ್ಲಿರುವ  ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.

ಟ್ರೇನಿ ಮ್ಯಾನೇಜರ್, ಐ.ಟಿ.ಐ (Fitter, Motor mechanic) , ಸೇಲ್ಸ ಎಕ್ಸಿಕ್ಯುಟಿವ್ ಬ್ಯುಸಿನೆಸ್ ಅಡ್ವೈಸರ್

ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ (MBA, MCA),ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್, ಗ್ರೂಪ್ ಕೋ-ಆರ್ಡಿನೇಟರ್ ಹುದ್ದೆಗಳಿಗಾಗ ಸಂದರ್ಶನ ಏರ್ಪಡಿಸಲಾಗಿದ್ದು, ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿಧರರು, ಐ.ಟಿ.ಐ,  ಮತ್ತು ಒಃಂ, ಒಅಂ ಅಭ್ಯರ್ಥಿಗಳು ಭಾಗವಹಿಸಬಹುದು.                                                                                     

       ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಾನವ ಸಂಪನ್ಮೂಲ ಅಭಿವೃದ್ದಿ ಕೇಂದ್ರ ಸ್ಟೇಶನ ರಸ್ತೆ ಬಿಜಾಪುರ ಪೋನ ನಂ: 08352-240957 ಇವರನ್ನು ಸಂಪರ್ಕಿಸಲು ಕೋರಲಾಗಿದೆ.  

`ಸಕಾಲ’- ಜಿಲ್ಲಾ  ಮಾಹಿತಿ ತಂತ್ರಜ್ಞಾನ ಸಲಹೆಗಾರ ಹುದ್ದೆಗೆ ನೇರ ಸಂದರ್ಶನ:

ಹಾವೇರಿ: ಮಾ.24:  `ಸಕಾಲ ಮಿಷನ್’- ಅಡಿಯಲ್ಲಿ  (ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ- 2011) ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದು ಜಿಲ್ಲಾ ಮಾಹಿತಿ ಸಲಹೆಗಾರ ( ಐಟಿ ಕನ್ಸಲ್ಟಂಟ್) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

   ಅಭ್ಯರ್ಥಿಗಳ ವಿದ್ಯಾರ್ಹತೆ: ಬಿ.ಇ/ಬಿ.ಟೆಕ್ (ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್) ಅಥವಾ ಎಂ.ಸಿ.ಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ಸ್) ಓದಿರಬೇಕು. ಎಂ.ಸಿ.ಎ ಕಲಿತವರಿಗೆ ಕನಿಷ್ಠ 2 ವರ್ಷಗಳ ಅನುಭವವಿರಬೇಕು. ಎಂ.ಎಸ್ ಆಫೀಸ್ ಸೇರಿದಂತೆ  ಕಂಪ್ಯೂಟರ್‌ನ ಇತರೆ ವಿಷಯಗಳಲ್ಲಿ ಕುಶಲತೆ ಇರಬೇಕು. ಕನ್ನಡ ಓದಲು, ಬರೆಯಲು, ಮಾತನಾಡಲು ಹಾಗೂ ಬೆರಳಚ್ಚು ಮಾಡಲು ಬರಬೇಕು. ಮಾಸಿಕ ರೂ. 15,000/- ಗಳ ಸಂಚಿತ ವೇತನ ನೀಡಲಾಗುವುದು.

    ಅಭ್ಯರ್ಥಿಗಳ ವಯೋಮಿತಿ 40 ವರ್ಷದೊಳಗಿರಬೇಕು. ಸಾಮಾನ್ಯ ಯೋಗ್ಯತಾ ಪರೀಕ್ಷೆ, ಬೆರಳಚ್ಚು ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಜಿಲ್ಲಾ ಆಯ್ಕೆ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಸಕ್ತ ಅಭ್ಯರ್ಥಿಗಳು ಇದೇ ಮಾರ್ಚ್ 26 ರಂದು ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10.00 ಗಂಟೆಯಿಂದ ಪ್ರಾರಂಭವಾಗಲಿರುವ ನೇರ ಸಂದರ್ಶನಕ್ಕೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಅಂದು ಬೆಳಿಗ್ಗೆ 11.00 ಗಂಟೆಗೆ ನೋಂದಣಿ ಮುಕ್ತಾಯಗೊಂಡು, ಪರೀಕ್ಷೆಗಳು 11.00 ಗಂಟೆಯಿಂದ ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

ನೇರ ಸಂದರ್ಶನ

ತುಮಕೂರು ಮಾ.24: ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿರ್ದೇಶನದ ಮೇರೆಗೆ ಕರ್ನಾಟಕದ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮವನ್ನು ಜಾರಿಗೊಳಿಸುವ ಬಗ್ಗೆ ಐಟಿ ಕನ್ಸಲ್‌ಟೆಂಟ್‌ರವರ ಸೇವೆಗಳನ್ನು ಪಡೆಯಲು ಈ ಕೆಳಕಾಣಿಸಿದಂತೆ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಮಾರ್ಚ್ 26, 2012ರಂದು ಬೆಳಿಗ್ಗೆ 10-00 ಗಂಟೆಯಿಂದ ಜಿಲ್ಲಾಧಿಕಾರಿಗಳ ಕಛೇರಿಯ ಕೆಎಸ್‌ಡಬ್ಲ್ಯೂಎಎನ್ ಸಭಾಂಗಣದಲ್ಲಿ ನೇರ ಸಂದರ್ಶನ ಕರೆಯಲಾಗಿದೆ

  1. BE/BTech (Computer Science, Electronics, Electrical) or MCA (Master in Computer Applications)
  2. Rs. 15000/- per month remuneration by SAKALA MISSION)
  3. Proficiency in `computers including MS Office & knowledge of Kannada reading, writing, speaking and typing (type test will be taken through no minimum pass marks)
  4. Upper age limit 40 years
  5. Selection based on common written aptitude test, typing test, interview by District Selection Committee.
  6. Contractual engagement.

Canditates to bring the original certificates of their Degree or Course completion certificates..

ಇಚ್ಚೆಯುಳ್ಳ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**************

ಸಕಾಲ ಯೋಜನೆ - ಸಮಿತಿ ರಚನೆ

ತುಮಕೂರು ಮಾ.24: ತುಮಕೂರು ಜಿಲ್ಲೆಯಲ್ಲಿ  ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ 2011 ಹಾಗೂ ನಿಯಮ 2012ನ್ನು ಅನುಷ್ಟಾನಗೊಳಿಸಲು 11 ಇಲಾಖೆಗಳ ಮುಖಾಂತರ 151 ಸೇವೆಗಳನ್ನು ಕಾಲಮಿತಿಯೊಳಗೆ ಒದಗಿಸಲು ಹಾಗೂ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ದಕ್ಷತೆಯನ್ನು ತರಲು ಅಧಿನಿಯಮವನ್ನು ಏಪ್ರಿಲ್ 2, 2012ರಿಂದ ಜಾರಿಗೊಳಿಸಬೇಕಾಗಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಕಾಲ ಸಮನ್ವಯ ಯೋಜನೆಯ ಆದೇಶದಂತೆ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ.

           ಸಮಿತಿಯು ಒಟ್ಟಾರೆಯಾಗಿ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮದ ಬಗ್ಗೆ ಅಧಿಕಾರಿ/ ಸಿಬ್ಬಂದಿ ಹಾಗೂ ನಾಗರೀಕರಲ್ಲಿ ಸಮಯ ಪ್ರಜ್ಞೆ ಮತ್ತು ಒಲವು ಮೂಡಿಸಲು ಪ್ರೇರೇಪಿಸಲಿದೆ. 

          ಸಮಿತಿಯ ಕಾರ್ಯವಿಧಾನ:- ಅಧಿಕೃತ ಅರ್ಜಿ ನಮೂನೆಗಳನ್ನು ಪ್ರಕಟಿಸಿ ಕಛೇರಿಯಲ್ಲಿ ಅಥವಾ ಸಹಾಯ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆಯೇ? ಯಾವುದೇ ಕಾರಣಕ್ಕೂ ಮಧ್ಯವರ್ತಿಗಳು ಪ್ರವೇಶಿಸಿ ನಾಗರೀಕರಿಗೆ ಶೋಷಣೆ ಮಾಡದಂತೆ ಸಮಿತಿಯು ನೋಡಿಕೊಳ್ಳುವುದು, ಸೇವೆಗಳು ಸಮಯಬದ್ದವಾಗಿ ನೀಡುವುದು, ಮೇಲಿನ ಹಂತದಿಂದ ಕೆಳಗಿನ ಹಂತದವರೆಗಿನ ಎಲ್ಲಾ ಅಧಿಕಾರಿಗಳ ಜವಾಬ್ದಾರಿಯಾಗಿದ್ದು, ಖಾತರಿ ಪಡಿಸಿಕೊಳ್ಳುವುದು, ನಿಗದಿತ ಸಮಯದಲ್ಲಿ ಸೇವೆಗಳನ್ನು ಒದಗಿಸುವುದು ಕಷ್ಟವೆಂದು ಕಂಡು ಬಂದರೆ ಆ ಸಮಸ್ಯೆಗೆ ಕಾರಣವನ್ನೂ ಕಂಡು ಹಿಡಿಯುವುದು, ಪ್ರತಿ ತಿಂಗಳು ಯಾವ ಸೇವೆಯಲ್ಲಿ ವಿಳಂಬ/ ವಿಫಲತೆ ಆಗಿದ್ದರೆ ಅದರ ಬಗ್ಗೆ ಪರಿಶೀಲಿಸಿ ಸುಧಾರಣಾ ಕ್ರಮವನ್ನು ತೆಗೆದುಕೊಂಡು ಸರ್ಕಾರಕ್ಕೆ ವರದಿ ಮಾಡುವುದು, ಸಾರ್ವಜನಿಕರಿಗೆ ಈ ಅಧಿನಿಯಮದಡಿ ಸೇವೆಗಳನ್ನು ಪಡೆಯಲು ನಿರಂತರ ತಿಳುವಳಿಕೆ/ ಪ್ರಚಾರ ನೀಡುವುದು, ಜಿಲ್ಲೆಗೆ ಸಂಬಂಧಿಸಿದಂತೆ ಈ ಅಧಿನಿಯಮದಡಿ ಆಗಿರುವ ಪ್ರಗತಿಯ ಮೌಲ್ಯ ಮಾಪನವನ್ನು ನಡೆಸಿ ಸರಳೀಕರಣ ಮತ್ತು ಗಣಕೀಕರಣ ಯೋಜನೆಯನ್ನು ರೂಪಿಸುವುದು, ಇಲಾಖೆಗಳಲ್ಲಿ  ಖಾಲಿ ಹುದ್ದೆಗಳ ಬಗ್ಗೆ ವಿಮರ್ಶಿಸಿ ನೌಕರರನ್ನು ಒದಗಿಸುವುದು, ಪ್ರತ್ಯೇಕವಾಗಿ ಪ್ರತಿ ಇಲಾಖೆ ಕಾರ್ಯಭಾರವನ್ನು ವಿಶ್ಲೇಷಿಸಿ ಅಧಿಕ ಹುದ್ದೆಗಳ ಬಗ್ಗೆ ವಿವರಗಳನ್ನು ಸಕಾರಣಗಳೊಂದಿಗೆ ವರದಿಯನ್ನು ಸಂಬಂಧಿತ ಇಲಾಖಾ ಕಾರ್ಯದರ್ಶಿಗೆ ಕಳುಹಿಸುವುದು, ಸ್ಥಾಪಿಸಲಾಗಿರುವ ಕರೆ ಕೇಂದ್ರಗಳಲ್ಲಿ ಸ್ವೀಕೃತವಾಗಬಹುದಾದ ನಾಗರೀಕರ ಪ್ರಶ್ನೆ ಅವರ ಅರ್ಜಿಗಳ ಮೇಲ್ವಿಚಾರಣೆ ಬಗ್ಗೆ ಹಾಗೂ ಕರೆ ಕೇಂದ್ರಗಳ ಸಿಬ್ಬಂದಿಗಳ ಕೋರಿಕೆ ಬಗ್ಗೆ ಜಿಲ್ಲೆಯಲ್ಲಿನ ನೋಡಲ್ ಅಧಿಕಾರಿಗಳು ಕೂಡಲೇ ಸ್ಪಂದಿಸಿ ಸರಿಯಾದ ಮಾರ್ಗದರ್ಶನ ನೀಡುವುದು, ಆಗಿದ್ದಾಗ್ಗೆ ಸೇವಾ ಕೇಂದ್ರಗಳಿಂದ ಮಾಹಿತಿ ಪಡೆದು ಉದ್ಭವಿಸಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡುವುದು.