District News 31-07-2013

Wednesday, July 31st, 2013

ಜಿಲ್ಲಾ ವರದಿಗಳು

Date: 31-07-2013

ಇಂದಿನಿಂದ ಜಿಲ್ಲೆಯ 4ಲಕ್ಷ 61 ಸಾವಿರ ಮಕ್ಕಳಿಗೆ ಕ್ಷೀರ ಭಾಗ್ಯ ಕ್ಷೀರ ಭಾಗ್ಯ ಯೋಜನೆಗೆ ಇಂದು ಚಾಲನೆ

ವಿಜಾಪುರ.ಜು,31- ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಗೆ ಇಂದು ವಿಜಾಪುರ ಜಿಲ್ಲೆಯಲ್ಲಿ ಚಾಲನೆ ದೊರೆಯಲಿದೆ. ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ 2ಲಕ್ಷ 65 ಸಾವಿರ ಹಾಗೂ ಅಂಗನವಾಡಿಯ 1ಲಕ್ಷ 96 ಸಾವಿರ ಮಕ್ಕಳಿಗೆ ವಾರಕ್ಕೆ ಮೂರು ದಿವಸ ಉಚಿತ ಹಾಲು ನೀಡುವ ಸರ್ಕಾರದ ಮಹತ್ವಾಕಾಂಕ್ಷೆಯ ಕ್ಷೀರ ಭಾಗ್ಯ ಯೋಜನೆಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕಾವ್ಯ ಕಲ್ಲಪ್ಪ ದೇಸಾಯಿ ಚಾಲನೆ ನೀಡಲಿದ್ದಾರೆ.

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್), ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ    ನಗರದ ಇಬ್ರಾಹಿಂಪೂರ ಬಡಾವಣೆಯ ಸರ್ಕಾರಿ ಪ್ರಾಥಮಿಕ ಶಾಲೆ (ನಂ.6)ಸಭಾಂಗಣದಲ್ಲಿ ಆಗಸ್ಟ್ 1ರ ಬೆಳಿಗ್ಗೆ 10-30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕೆನೆಭರಿತ ಹಾಲು ನೀಡುವುದರ ಮೂಲಕ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಕೆ.ಎಂ.ಎಫ್. ಅಧ್ಯಕ್ಷ ಗಂಗಪ್ಪ ಉಳ್ಳಾಗಡ್ಡಿ, ನಿರ್ದೇಶಕರಾದ ಗಿರಿಶ ಗಿರಡ್ಡಿ, ಮಲ್ಲಿಕಾರ್ಜುನ ಜೋಗೂರ, ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಶಿವಕುಮಾರ ಕೆ.ಎಂ.ಎಫ್.ಅಧಿಕಾರಿ ಅಜೀಜ ಇತರರು ಭಾಗವಹಿಸಲಿದ್ದಾರೆ.

ಜಿಲ್ಲೆಯ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 2,65,000 ಮಕ್ಕಳಿಗೆ ಕೆನೆಭರಿತ ಹಾಲನ್ನು ಹಾಗೂ 1,96,000 ಮಕ್ಕಳಿಗೆ ಕೆನೆರಹಿತ ಹಾಲನ್ನು ವಿತರಿಸಲಾಗುವುದು. ವಾರದಲ್ಲಿ ಮೂರು ದಿವಸ ಅಂದರೆ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಹಾಲು ವಿತರಣಾ ಕಾರ್ಯ ನಡೆಯಲಿದ್ದು, ಉರ್ದು ಶಾಲಾ ಮಕ್ಕಳಿಗೆ ಶುಕ್ರವಾರದ ಬದಲು ಶನಿವಾರ ಹಾಲು ವಿತರಣೆ ನಡೆಯಲಿದೆ. ಪ್ರತಿ ದಿನ 4 ಮೆಟ್ರಿಕ್ ಟನ್ ಕೆನೆ ಭರಿತ್ ಹಾಗೂ 2.5 ಮೆಟ್ರಿಕ್  ಟನ್ ಕೆನೆ ರಹಿತ ಹಾಲು ಅವಶ್ಯವಿದೆ. ಮಕ್ಕಳಿಗೆ ಅವಶ್ಯವಿರುವ ಹಾಲಿನ ಪುಡಿಯನ್ನು ವಿಜಾಪುರ-ಬಾಗಲಕೋಟೆ ಹಾಲು ಒಕ್ಕೂಟ ಪೂರೈಸಲಿದೆ.

ಗ್ರಾಮ ಪಂಚಾಯತಿಗೆ ಮಾಹೆಯಾನ 25ಶೌಚಾಲಯ ನಿರ್ಮಾಣ ಗುರಿ ವಿದ್ಯಾರ್ಥಿಗಳು ಶೌಚಾಲಯ ಬಳಕೆ ಮಾಡದಿದ್ದರೆ ಶಾಲಾ ಮುಖ್ಯಶಿಕ್ಷಕರ ಮೇಲೆ ಶಿಸ್ತು ಕ್ರಮ

ವಿಜಾಪುರ.ಜು,31- ಶಾಲಾ ಮಕ್ಕಳು ಶೌಚಾಲಯ ಬಳಕೆ ಮಾಡುವ ಕುರಿತಂತೆ ಶಾಲಾ ಹಂತದಲ್ಲೇ ಶಿಕ್ಷಕರು ಅರಿವು ಮೂಡಿಸಬೇಕು. ಶೌಚಾಲಯಗಳಿದ್ದರೂ ವಿದ್ಯಾರ್ಥಿಗಳು ಬಳಕೆ ಮಾಡದಿದ್ದರೆ ಅಂತಹ ಶಾಲೆಯ ಶಾಲಾ ಮುಖ್ಯ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ.ಶಿವಕುಮಾರ ಎಚ್ಚರಿಸಿದರು.

ಇಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕಾವ್ಯ ಕಲ್ಲಪ್ಪ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ಜರುಗಿತು.

ಯಾವುದೇ ವಿದ್ಯಾರ್ಥಿಗಳು ಬಯಲು  ಶೌಚಕ್ಕೆ ಹೋಗಬಾರದು. ಈ ಕುರಿತಂತೆ ಮಕ್ಕಳಿಗೆ ಜಾಗೃತಿ ಮೂಡಿಸಿ, ಶಾಲೆಯಲ್ಲಿಯೇ ಶೌಚಾಲಯ ಬಳಕೆಯ ರೂಢಿ ಮಾಡಿ, ಇದು ವಿದ್ಯಾರ್ಥಿಗಳ ಮನೆಯಲ್ಲೂ ಶೌಚ ಬಳಕೆ ರೂಢಿಗತವಾಗುತ್ತದೆ. ಶೌಚಾಲಯ ಬಳಸುವ ಪ್ರವೃತ್ತಿಯನ್ನು ಶಾಲಾ ಹಂತದಲ್ಲೇ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ರೂಢಿ ಮಾಡಬೇಕು. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಬೇಕು. ಶಾಲಾವಾರು ಭೇಟಿ ನೀಡಿ, ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು. ಇದೇ ಮಾದರಿಯಲ್ಲಿ ಅಂಗನವಾಡಿಯಲ್ಲೂ ಈ ಕ್ರಮ ಜಾರಿಗೊಳ್ಳಬೇಕು. ಅಂಗನವಾಡಿ ಮೇಲ್ವಿಚಾರಕಿಯರು, ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಈ ಕುರಿತಂತೆ ಸೂಕ್ತ ಕ್ರಮ ವಹಿಸಬೇಕೆಂದು ಹೇಳಿದರು. ಶಾಲೆಗಳ  ಶೌಚಾಲಯ, ಕುಡಿಯುವ ನೀರಿನ ನಿರ್ವಹಣೆಗೆ ಪ್ರಸಕ್ತ ವರ್ಷದಿಂದ ಶಾಲಾವಾರು ಅನುದಾನವನ್ನು ಬಿಡುಗಡೆಗೊಳಿಸಲಾಗುವದೆಂದು ಹೇಳಿದರು.

25 ಗುರಿ: ಗ್ರಾಮ ಪಂಚಾಯತಿಗಳಿಗೆ ಪ್ರತಿ ಮಾಹೆ 25 ಶೌಚಾಲಯಗಳನ್ನು ನಿರ್ಮಾಣ ಮಾಡುವ ಗುರಿ ನೀಡಲಾಗಿದೆ. ವಿಶೇಷ ಗ್ರಾಮಸಭೆಗಳನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ಜಿಪಿಎಸ್‌ಗೆ ಅಳವಡಿಸಬೇಕು. ಶೌಚಾಲಯಗಳ ನಿರ್ಮಾಣ,ಜಾಗೃತಿ ಕುರಿತಂತೆ ಗ್ರಾಮವಾರು ಅರಿವು ಆಂದೋಲನ, ಗೋಡೆ ಬರಹ, ಇತರ ಪ್ರಚಾರ ಕೈಗೊಳ್ಳಲು ಗ್ರಾಮ ಪಂಚಾಯತಿಗಳಿಗೆ 3 ಸಾವಿರ ರೂ.  ಹಣ ಬಿಡುಗಡೆ ಮಾಡಲಾಗುವುದು. ಹಾಗೂ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಶೌಚಾಲಯ ಬಳಕೆ ಜಾಗೃತಿ ಮೂಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ನೇತೃತ್ವದಲ್ಲಿ ಪ್ರತಿ ದಿನಗಳಿಗೊಮ್ಮೆ ಗ್ರಾಮ ಪಂಚಾಯತಿವಾರು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು.

ಪ್ರಸ್ತಾವನೆ: ಶೌಚಾಲಯವೊಂದಕ್ಕೆ 8 ಸಾವಿರ ರೂ. ಅನುದಾನ ಸಾಧ್ಯವಾಗುತ್ತಿಲ್ಲ. ಕನಿಷ್ಠ 12 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಹೆಚ್ಚುವರಿ ಅನುದಾನವನ್ನು ಶಾಸಕರು ಮತ್ತು ಸಂಸದರ ನಿಧಿಯಿಂದ ಭರಿಸುವ ಕುರಿತಂತೆ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣಕ್ಕೆ ನಿವೇಶನ ಕೊರತೆಯಿದ್ದು, ಪ್ರತಿ ಕುಟುಂಬಕ್ಕೊಂದು ಶೌಚಾಲಯದಂತೆ ಸಮುದಾಯ ಶೌಚಾಲಯಗಳ ಮಾದರಿಯಲ್ಲಿ ನಿರ್ಮಾನ ಮಾಡಿ, ಆಯಾ ಮನೆಗಳಿಗೆ ಶೌಚಾಲಯಗಳನ್ನು ಹಂಚಿಕೆ ಮಾಡಬೇಕು ಹಾಗೂ ಬಿಪಿಎಲ್ ಕುಟುಂಬಗಳಿಗೂ ಶೌಚಾಲಯ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂದು ಜಿಲ್ಲಾ ಪಂಚಾಯತ್  ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಉಮೇಶ ಕೋಳಕೂರ ಸಲಹೆ ನೀಡಿದರು.

ಜಮೀನು ಖರೀದಿ: ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಜಾರಿಗೊಳಿಸುವ ಬದಲು ಊರಿನ ಹೊರಗಡೆ ಜಮೀನುಗಳನ್ನು ಖರೀದಿಸಿ ಮನೆವಾರು ತಿಪ್ಪೆಗಳ ನಿರ್ಮಾಣ ಮಾಡಲು ಅವಕಾಶ ಕಲ್ಪಿಸಬೇಕು. ಇದರಿಂದ ಘನತ್ಯಾಜ್ಯದಿಂದ ಉತ್ಪತ್ತಿಯಾದ ಗೊಬ್ಬರವನ್ನು ರೈತರ ಜಮೀನಿಗೆ ಬಳಸಲು ಅನುಕೂಲವಾಗುತ್ತದೆ ಎಂದು ಉಮೇಶ ಕೋಳಕೂರ ಸಲಹೆ ನೀಡಿದರು.

ಸರ್ವೇ: ಶೌಚಾಲಯ ನಿರ್ಮಾಣ ಆಂದೋಲನ ತೀವ್ರಗೊಳಿಸಲು ಜಿಲ್ಲೆಯ ಸರ್ಕಾರಿ ನೌಕರರು, ಗ್ರಾಮ ಪಂಚಾಯತಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳ ಮನೆಗಳಲ್ಲಿ ಶೌಚಾಲಯವಿದೇಯೇ? ಎಂಬುದನ್ನು ಸರ್ವೇ ಕೈಗೊಂಡು ಮಾಹಿತಿ ಸಂಗ್ರಹಿಸಬೇಕು. ಶೌಚಾಲಯವಿಲ್ಲದ ಜನಪ್ರತಿನಿಧಿಗಳಿಗೆ ಸರ್ಕಾರದ ನಿಯಮಾನುಸಾರ ನೋಟಿಸ್ ಜಾರಿಗೊಳಿಸಬೇಕು. ಮಹಿಳಾ ಸಾಮಖ್ಯ ಸೇರಿದಂತೆ ವಿವಿಧ ಸಂಘಟನೆಗಳನ್ನು ಜಾಗೃತಿಗಾಗಿ ಬಳಸಿಕೊಳ್ಳುವಂತೆ ಬಾಬುರಾವ ಸಲಹೆ ನೀಡಿದರು.

9 ಗ್ರಾಮಗಳು: ಪ್ರಸಕ್ತ ವರ್ಷ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಕಾರಜೋಳ, ಬಾಬಾನಗರ, ಉಕ್ಕಳಿ, ಕೊಣ್ಣೂರ, ರಕ್ಕಸಗಿ, ಇಂಚಗೇರಿ, ಉಮರಾಣಿ, ಚಿಕ್ಕರೂಗಿ, ಹುಣಶ್ಯಾಳ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ನಿರ್ಮಲ ಭಾರತ ಅಭಿಯಾನದ ನೋಡಲ್ ಅಧಿಕಾರಿ ಬಾಗವಾನ ಸಭೆಗೆ ವಿವರಿಸಿದರು.

ಜಿಲ್ಲೆಯಲ್ಲಿ 57509 ಬಿಪಿಎಲ್, 56385 ಎಪಿಎಲ್ ಕುಟುಂಬಗಳಿಗೆ ಶೌಚಾಲಯ ನಿರ್ಮಾಣ ಮಾಡಲಾಗಿದೆ. 2126 ಶಾಲಾ ಹಾಗೂ 581 ಅಂಗನವಾಡಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಅನುದಾನೊಳಗೊಂಡಂತೆ 2770.05 ಲಕ್ಷ ರೂ. ಬಿಡುಗಡೆಯಾಗಿದ್ದು, ಈ ಪೈಕಿ 1782.79ಲಕ್ಷ ರೂ. ಅನುದಾನವನ್ನು ವಿನಿಯೋಗಿಸಲಾಗಿದೆ ಎಂದು ಸಭೆಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ  ಶ್ರೀಮತಿ ಅನುಸುಯಾ ಕೃಷ್ಣಾ ಜಾಧವ, ಜಿಲ್ಲಾ ಪಂಚಾಯತ್ ಸಹ ಕಾರ್ಯದರ್ಶಿ ಹಿಟ್ನಳ್ಳಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ವಸಂತ ಪ್ರೇಮ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

18 ದಿನಗಳ ಕೌಶಲ್ಯಾಧಾರಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಕರೆ

ವಿಜಾಪುರ.ಜು,31-  ಧಾರವಾಡದ ಸಿಡಾಕ್ ಕೇಂದ್ರ ಹಾಗೂ ವಿಜಾಪುರ ಜಿಲ್ಲಾ ಕೈಗಾರಿಕಾ ಕೇಂದ್ರ, ಇವರ ಸಹಯೋಗದಲ್ಲಿ ಆಯೋಜಿಸಿರುವ 18 ದಿನಗಳ ಕೌಶಲ್ಯಾಧಾರಿತ ಉದ್ಯಮಶೀಲತಾಭಿವೃದ್ದಿ ತರಬೇತಿಗೆ ನಿರುದ್ಯೋಗ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಯಲ್ಲಿ ಭಾಗವಹಿಸುವ ಯುವಕ ಯುವತಿಯರಿಗೆ  ಮೋಬೈಲ್ ಫೋನ್ ರಿಪೇರಿ ಮತ್ತು ಸರ್ವಿಸಿಂಗ್,ಮಾಹಿತಿಯನ್ನು ಪರಿಣಿತರಿಂದ ಒದಗಿಸಲಾಗುವುದು.

ಇದೇ ಆಗಸ್ಟ್ 10ರೊಳಗೆ ಪಿಯುಸಿ, ಐಟಿಐ, ಜೆಓಡಿಸಿ ಪಾಸಾದ  21 ರಿಂದ 35 ವರ್ಷ ವಯಸ್ಸಿನ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದು.  ಅರ್ಜಿ  ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು   ಜಿಲ್ಲಾ ಉಪ ನಿರ್ದೇಶಕರು,(ತರಬೇತಿ), ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ,ಸ್ಟೇಶನ ಬ್ಯಾಕ್ ರೋಡ, ಶಿಕಾರಖಾನೆ, ವಿಜಾಪುರ. ಮೋ: 9481313786 ಇವರನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.      

ವಿದ್ಯುತ್ ಸಮಸ್ಯೆ : ಜಿಲ್ಲೆಯ ಹೆಸ್ಕಾಂ ಅಭಿಯಂತರರ ಸಂಪರ್ಕ ವಿವರ

ವಿಜಾಪುರ.ಜು,30- ವಿದ್ಯುತ್ ಸರಬರಾಜು ಹಾಗೂ ಇತರ ವಿದ್ಯುತ್ ಸಮಸ್ಯೆಗಳಿಗಾಗಿ ತುರ್ತು ಪರಿಹಾರಕ್ಕಾಗಿ ಸಾರ್ವಜನಿಕರು ಈ ಕೆಳಕಂಡ ಆಯಾ ವಿಭಾಗದ ಅಭಿಯಂತರರನ್ನು ಸಂಪರ್ಕಿಸಲು ವಿಜಾಪುರ ಹೆಸ್ಕಾಂ ಕಾರ್ಯ ಮತ್ತು ಪಾಲನೆ ವೃತ್ತದ ಅಭಿಯಂತರ ವಿ.ಎಸ್.ತೇಲಿ ಮನವಿ ಮಾಡಿಕೊಂಡಿದ್ದಾರೆ. ಹೆಸ್ಕಾಂನ ವಿಜಾಪುರ ಕಾರ್ಯ ಮತ್ತು ಪಾಲನೆ ವೃತ್ತದ ಅಧೀಕ್ಷಕ ಇಂಜಿನೀಯರರು ವ್ಹಿ.ಎಸ್.ತೇಲಿ ಮೋ: 9448370248,

ಕಾರ್ಯನಿರ್ವಾಹಕ ಇಂಜಿನೀಯರರು (ವಿ), 33 ಕೆ.ವಿ.ಮಾರ್ಗ ಮತ್ತು ಉಪಕೇಂದ್ರ ವಿಭಾಗ, ವಿಜಾಪುರ, ಎಂ.ಎಚ್.ಕುಲಕರ್ಣಿ ಮೋ: 9449831212, ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ವಿಜಾಪುರ ಜಿ.ಕೆ.ಗೋಟ್ಯಾಳ ಮೋ: 9448370249, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-1, ವಿಜಾಪುರ ಎಂ.ಕೆ.ಜೀರ ಮೋ: 9448370250, ವಿಜಾಪುರ ಉಪವಿಭಾಗ : ಸಹಾಯಕ ಕಾರ್ಯನಿವಾಹಕ ಇಂಜಿನೀಯರರು(ವಿ), ಕಾರ್ಯ ಮತ್ತು ಪಾಲನೆ ನಗರ ಉಪ ವಿಭಾಗ-2 ವಿಜಾಪುರ ಮೋ: 9448375711,

ಶಾಖಾಧಿಕಾರಿ: ಶಾಖೆ-1 ಎಸ್.ಆರ್.ಹಜೇರಿ ಮೋ: 9480882633, ಶಾಖೆ-4 ಜಯಸಿಂಗ ಚವ್ಹಾಣ ಮೋ: 9480882634, ಶಾಖೆ-3 ಶ್ರೀಧರ ಗಡೇದ, ಮೋ: 9480882635, ಶಾಖೆ-4   ಎನ್.ಜಿ.ಕೋರಡ್ಡಿ ಮೋ: 9480882636, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ) ಕಾರ್ಯ ಮತ್ತು ಪಾಲನೆ ಗ್ರಾಮೀಣ ಉಪ ವಿಭಾಗ ವಿಜಾಪುರ ಆರ್.ಸಿ.ಅರಕೇರಿ ಮೋ: 9448370251, ಶಾಖಾಧಿಕಾರಿ ಗ್ರಾಮೀಣ ಕೆ.ಪಿ.ಮನಗೋಳಿ ಮೋ: 9480882649, ಶಾಖಾಧಿಕಾರಿ ಕನ್ನೂರ ಐ.ಡಿ.ಹೊನ್ನುಟಗಿ ಮೋ: 9480882650, ಶಾಖಾಧಿಕಾರಿ ತಿಕೋಟಾ ಗುಡ್ಡೆವಾಡಿ ಮೋ: 9480882648, ಶಾಖಾಧಿಕಾರಿ ಶಿವಣಗಿ  ಶಂಕರ ಲಮಾಣಿ ಮೋ:9480882651, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ) ಕಾರ್ಯ ಮತ್ತು ಪಾಲನೆ ಉಪ ವಿಭಾಗ ಬಬಲೇಶ್ವರ ಎಸ್.ಹೆಚ್.ಸುಲಾಖೆ ಮೋ: 9449825955, ಶಾಖಾಧಿಕಾರಿ ಬಬಲೇಶ್ವರ ಸಜ್ಜನ ಮೋ: 9480882652, ಶಾಖಾಧಿಕಾರಿ ಮಮದಾಪೂರ ನಾಗಣಶೆಟ್ಟರ ಮೋ: 9480882653, ಶಾಖಾಧಿಕಾರಿ ದೇವರಗೆಣ್ಣೂರ  ಝಡ್ ಎಂ.ರಿಸಾಲ್ದಾರ ಮೋ: 9480883607,

ಬಸವನ ಬಾಗೇವಾಡಿ ವಿಭಾಗ: ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಬಾಗೇವಾಡಿ ಜಿ.ಬಿ.ಹಳವರ ಮೋ: 9480882627,, ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಡಬ್ಲ್ಯೂ ಎ.ಜಹಾಗೀರದಾರ ಮೋ: 9448370256, 

ಶಾಖಾಧಿಕಾರಿಗಳು: ಬಾಗೇವಾಡಿ  ಬಸವೇಶ ಪಾಟೀಲ ಮೋ: 9900214208, ಮನಗೂಳಿ ಅತ್ತಾರ ಮೋ: 9480882782, ಹೂವಿನ ಹಿಪ್ಪರಗಿ  ಬಿರಾದಾರ ಮೋ: 9480882645,  ಇಂಗಳೇಶ್ವರ ಅತ್ತಾರ ಮೋ: 9480882782,

ಮುದ್ದೇಬಿಹಾಳ ವಿಭಾಗ: ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಮುದ್ದೇಬಿಹಾಳ ಎಂ.ಎಂ.ಚನಗೊಂಡ ಮೋ: 9448370257,

ಶಾಖಾಧಿಕಾರಿಗಳು: ಮುದ್ದೇಬಿಹಾಳ ಬಿ.ಎಂ.ಅಪಘಾನ ಮೊ: 9480882643,  ತಂಗಡಗಿ ತೆಗ್ಗಿನಮಠ ಮೋ: 9481630854, ನಾಲತವಾಡ  ವ್ಹಿ.ವಾಯ್.ಕಾಶಿನಕುಂಟೆ ಮೋ: 9538260844,  ಹುಲ್ಲೂರ ವಾಂಗಿ ಮೋ: 9480882637, 

ನಿಡಗುಂದಿ ವಿಭಾಗ: ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ನಿಡಗುಂದಿ  ಆರ್.ಹೆಚ್. ಹೊಸೂರ ಮೋ: 9449723522,

ಶಾಖಾಧಿಕಾರಿ:  ನಿಡಗುಂದಿ  ಹಾವರಗಿ ಮೋ: 9480882647,  ಕೋಲ್ಹಾರ  ಎಲ್.ಕೆ.ಸಾಸಬಾಳ ಮೋ: 9620290041, ಕೂಡಗಿ ಎಸ್.ವ್ಹಿ. ಮುರನಾಳ ಮೋ: 9480882644, ತೆಲಗಿ ರಮೇಶ ಲಮಾಣಿ ಮೋ:9480882646, ತಾಳಿಕೋಟೆ : ಉಪ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಆರ್.ಆರ್.ಹಂಡಿ ಮೋ: 9902953038,

ಶಾಖಾಧಿಕಾರಿ:  ತಾಳಿಕೋಟೆ ನಗರ  ಎಸ್.ಕೆ.ಚವ್ಹಾಣ ಮೋ: 9480882638,  ತಾಳಿಕೋಟೆ ಗ್ರಾಮೀಣ  ಹೆಬ್ಬಾಳ ಮೋ: 8861189915,  ಮಡಕೇಶ್ವರ ಯಲಗೋಡ ಮೋ: 9686630466,

ಇಂಡಿ ವಿಭಾಗ: ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಇಂಡಿ  ಕೆ.ಜಿ.ಹಿರೇಮಠ ಮೋ: 9448143362,

ಉಪ ವಿಭಾಗ: ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಇಂಡಿ ಜಿ.ವ್ಹಿ. ಸಂಪನ್ನವರ ಮೋ: 9448370253,

ಶಾಖಾಧಿಕಾರಿ: ಇಂಡಿ ನಗರ ಶಹಾ ಮೋ: 9480882927, ಇಂಡಿ ಗ್ರಾಮೀಣ ಡಿ.ಎಂ.ಮೂಲಿಮನಿ ಮೋ: 9480882933,  ಅಥರ್ಗಾ ಲಾಳಸಂಗಿ ಮೋ: 9480882932, ತಾಂಬಾ  ಆರ್.ಟಿ.ಚವ್ಹಾಣ ಮೋ: 9480882937, ಲಚ್ಯಾಣ ಆರ್.ಕೆ.ಚವ್ಹಾಣ ಮೋ: 9480882936.

ಉಪವಿಭಾಗ ಚಡಚಣ: ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ,   ಚಡಚಣ ಎಸ್.ಎಂ.ಬಿರಾದಾರ ಮೋ: 9449858124,

ಶಾಖಾಧಿಕಾರಿ:  ಚಡಚನ  ಬಡಿಗೇರಿ ಮೋ: 9480882935, ಝಳಕಿ ಹಿರೇಮಠ ಮೋ: 9480883619,

ಉಪ ವಿಭಾಗ ಸಿಂದಗಿ: ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ಉಪ ವಿಭಾಗ,  ಸಿಂದಗಿ  ಎಸ್.ಎ.ಬಿರಾದಾರ ಮೋ:9448370254,

ಶಾಖಾಧಿಕಾರಿ:  ಸಿಂದಗಿ ನಗರ  ವಿಜಯಕುಮಾರ ಹವಾಲ್ದಾರ ಮೋ: 9480882928, ಸಿಂದಗಿ ಗ್ರಾಮೀಣ ಆರ್.ವ್ಹಿ. ಕುಂಬಾರ ಮೋ: 9964055525, ಆಲಮೇಲ ಡಿ.ಎಸ್. ಗುಡ್ಡಳ್ಳಿ ಮೋ: 9480882934,

ಉಪವಿಭಾಗ ದೇವರಹಿಪ್ಪರಗಿ:  ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ದೇವರಹಿಪ್ಪಗಿ  ಪಿ.ವ್ಹಿ. ಚವ್ಹಾಣ ಮೋ:9480882923,

ಶಾಖಾಧಿಕಾರಿ: ದೇವರಹಿಪ್ಪರಗಿ ಬಾಬಾನಗರ ಮೋ: 9686007008,  ಕೋರವಾರ ಕಟ್ಟಿಮನಿ ಮೋ: 9480883621

C.W.C Format

Sl.No.

Name of Reservoir

Date

FRL in Mt

Capacity in TMC

Inflow Cusecs

Outflow to river

Outflow to Canal

Total Outflow Cusecs

1

2

3

4

5

6

7

8

9

1

Almatti Dam

31.7.2013

517.15

86.335

248517

42000

(Through Gates 221811)

465

263276

 

 ಯೋಜನೆ ಮತ್ತು ಸಾಂಖ್ಯಿಕ ಸಚಿವರ ಪ್ರವಾಸ ಕಾರ್ಯಕ್ರಮ

ಬೆಳಗಾವಿ:ಜುಲೈ:31:(ಕರ್ನಾಟಕ ವಾರ್ತೆ):  ರಾಜ್ಯದ ಯೋಜನೆ ಮತ್ತು ಸಾಂಖ್ಯಿಕ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವರಾದ ಶ್ರೀ. ಎಸ್.ಆರ್. ಪಾಟೀಲ ಅವರು ಇದೇ ಆಗಸ್ಟ್ 1 ರಂದು ಬೆಳಿಗ್ಗೆ 9-05 ಗಂಟೆಗೆ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ನಂತರ ಬೆಳಿಗ್ಗೆ 9-30 ಗಂಟೆಗೆ ಬೆಳಗಾವಿಯಿಂದ ಬಾಗಲಕೋಟೆಗೆ ಪ್ರಯಾಣ ಬೆಳೆಸುವರು.

ಆಗಸ್ಟ್ 1 ರಿಂದ ನಗರದಲ್ಲಿ ಆಟೋರಿಕ್ಷಾಗಳಿಗೆ ಮೀಟರ್ ಕಡ್ಡಾಯ - ಜಿಲ್ಲಾಧಿಕಾರಿ ಶ್ರೀ.ಎನ್. ಜಯರಾಂ

ಬೆಳಗಾವಿ:ಜುಲೈ:31:(ಕರ್ನಾಟಕ ವಾರ್ತೆ):  ಆಗಸ್ಟ್ 1 ರಿಂದ ನಗರದಲ್ಲಿ  ಕಡ್ಡಾಯವಾಗಿ ಮೀಟರ ಅಳವಡಿಸಿಕೊಂಡ ಆಟೋರಿಕ್ಷಾಗಳು ಮಾತ್ರ ಸಂಚರಿಸಬೇಕು. ಮೀಟರ್ ಇಲ್ಲದಿದ್ದ ಆಟೋರಿಕ್ಷಾಗಳು ರಸ್ತೆ ಮೇಲೆ ಸಂಚರಿಸುವಂತಿಲ್ಲ. ಮೀಟರ ಅಳವಡಿಸಿಕೊಳ್ಳಲಾರದೇ ಸಂಚರಿಸುವ ಆಟೋ ರಿಕ್ಷಾಗಳಿಗೆ 2500 ರೂ.ಗಳ ದಂಡವನ್ನು ವಿಧಿಸಿ ಆಟೋರಿಕ್ಷಾವನ್ನು ಜಪ್ತ ಮಾಡಿ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗುವುದೆಂದು ಜಿಲ್ಲಾಧಿಕಾರಿಗಳಾದ ಶ್ರೀ. ಎನ್. ಜಯರಾಂ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಈಗಾಗಲೇ 4500 ದಿಂದ 5000 ಆಟೋರಿಕ್ಷಾಗಳಿಗೆ ಮೀಟರನ್ನು ಅಳವಡಿಸಲಾಗಿದೆ.  ಆಟೋ ಚಾಲಕರ ಸಂಘದ ಮನವಿಯ ಮೇರೆಗೆ 3-4 ಬಾರಿ ಸಮಯ ವಿಸ್ತರಣೆ ಮಾಡಿ ಆಟೋ ದರಗಳನ್ನು ಪರಿಷ್ಕರಿಸಲಾಗಿದೆ ಎಂದ ಅವರು. ಈಗಿನ ಆಟೋ ರಿಕ್ಷಾದ ಪರಿಷ್ಕೃತ ದರಗಳು ಸಾರ್ವಜನಿಕರಿಗೂ ಹಾಗೂ ಆಟೋ ಚಾಲಕರಿಗೂ ಅನುಕೂಲವಾಗಿದ್ದು, ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಂಡು ಆಟೋರಿಕ್ಷಾಗಳನ್ನು ಓಡಿಸಬೇಕೆಂದರು.

ದಿನನಿತ್ಯ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋರಿಕ್ಷಾ ಚಾಲಕರು ತಮ್ಮ ಆಟೋರಿಕ್ಷಾಗಳಿಗೆ ಮೀಟರ ಅಳವಡಿಸಿಕೊಂಡು 6 ಮಕ್ಕಳನ್ನು ಮಾತ್ರ ಕರೆದುಕೊಂಡು ಹೋಗಬೇಕು. ಇದು ಸವೋಚ್ಛ ನ್ಯಾಯಾಲಯದ ತೀರ್ಪಾಗಿದ್ದು, ಸಾರ್ವಜನಿಕರು ಹಾಗೂ ಪಾಲಕರು ನಿಯಮ ಪಾಲಿಸಲು ಸಹಕರಿಸಬೇಕು. ಪರ್ಮೀಟ್ ಇಲ್ಲದ ಆಟೋರಿಕ್ಷಾಗಳು ರಸ್ತೆಯ ಮೇಲೆ ಓಡಾಡುವಂತಿಲ್ಲ. ಪರ್ಮಿಟ್ ಇಲ್ಲದೇ ಓಡಾಡುವ ಆಟೋರಿಕ್ಷಾಗಳ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್‌ಗೆ ಆಟೋ ಚಾಲಕರು ತಿಳಿಸಲು ಮನವಿ ಮಾಡಿದರು. ಈಗಾಗಲೇ 150 ಪರ್ಮಿಟ್ ಇಲ್ಲದ ಆಟೋರಿಕ್ಷಾಗಳ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ.

ಸಾರ್ವಜನಿಕರು ಮೀಟರ್ ಅಳವಡಿಸದೇ ಇರುವ ಆಟೋರಿಕ್ಷಾಗಳನ್ನು ಉಪಯೋಗಿಸದೇ ಇರಲು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು ಅಂತಹ ಆಟೋರಿಕ್ಷಾಗಳ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಕಂಟ್ರೋಲ್ ರೂಮ್‌ಗೆ ತಿಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.  ಮುಂಜಾಗೃತಾ ಕ್ರಮವಾಗಿ ನಾಳೆಯಿಂದ ನಗರದಲ್ಲಿ ಸಿಟಿ ಬಸ್‌ಗಳನ್ನು ಹೆಚ್ಚಾಗಿ ಓಡಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.  ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಚಂದ್ರಗುಪ್ತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀ.ವಿ.ಕೆ. ಹೇಮಾದ್ರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಆಗಸ್ಟ್ 1 ರಂದು ಅಂಗನವಾಡಿ ಮಕ್ಕಳು-ಶಾಲಾ ವಿದ್ಯಾರ್ಥಿಗಳಿಗೆ ಹಾಲು ವಿತರಣೆಯ ಉದ್ಘಾಟನಾ ಸಮಾರಂಭ

ಬೆಳಗಾವಿ:ಜುಲೈ:31:(ಕರ್ನಾಟಕ ವಾರ್ತೆ): ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಾಲು ಒಕ್ಕೂಟ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಆಗಸ್ಟ್ 1 ರಂದು ಅಂಗನವಾಡಿ ಮಕ್ಕಳು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಹಾಲು ವಿತರಣೆಯ ಉದ್ಘಾಟನಾ ಸಮಾರಂಭವು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯಲಿದೆ.

ಅಂದು ಬೆಳಿಗ್ಗೆ 10-30 ಗಂಟೆಗೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಸತೀಶ  ಜಾರಕಿಹೊಳಿ ಅವರು ಈ ಸಮಾರಂಭವನ್ನು ಉದ್ಘಾಟಿಸುವರು. ರಾಜ್ಯದ ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಖಾತೆ ಸಚಿವರಾದ ಶ್ರೀ. ಪ್ರಕಾಶ ಹುಕ್ಕೇರಿ, ಸರ್ಕಾರಿ ಮುಖ್ಯ ಸಚೇತಕರಾದ ಶ್ರೀ. ಅಶೋಕ ಮ. ಪಟ್ಟಣ ಮುಖ್ಯ ಅತಿಥಿಗಳಾಗಿ ಹಾಗೂ ಬೆಳಗಾವಿ ಉತ್ತರ ಶಾಸಕ ಶ್ರೀ. ಫಿರೋಜ ಶೇಠ ಸಮಾರಂಭದ ಅಧ್ಯಕ್ಷತೆವಹಿಸುವರು. ಜಿಲ್ಲೆಯ ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು, ಇತರ ಗಣ್ಯರು, ಅಧಿಕಾರಿಗಳು ಅತಿಥಿಗಳಾಗಿ ಉಪಸ್ಥಿತರಿರುವರು.

ಆಗಸ್ಟ್ 3 ರಂದು ಚಿಂಚಲಿಯಲ್ಲಿ ರಾಜ್ಯಮಟ್ಟದ ಜಾನಪದ ಕಲಾ ಮೇಳ

ಬೆಳಗಾವಿ:ಜುಲೈ:31:(ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು, ಡಾ|| ಅಂಬೇಡ್ಕರ ಜಾನಪದ ಕಲಾ ಪೋಷಕ ಸಂಘ ಚಿಂಚಲಿ, ನಿಸರ್ಗ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜೈ ಹನುಮಾನ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘ ಚಿಂಚಲಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಆಗಸ್ಟ್ 3 ರಂದು ರಾಯಬಾಗ ತಾಲೂಕಿನ ಚಿಂಚಲಿಯಲ್ಲಿ ರಾಜ್ಯಮಟ್ಟದ ಜಾನಪದ ಕಲಾ ಮೇಳವನ್ನು ಏರ್ಪಡಿಸಲಾಗಿದೆ.

ಅಂದು ಸಂಜೆ 4-30 ಗಂಟೆಗೆ ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ. ಸತೀಶ ಜಾರಕಿಹೊಳಿ ಅವರು ಈ ಜಾನಪದ ಕಲಾ ಮೇಳವನ್ನು ಉದ್ಘಾಟಿಸುವರು. ಕೌಲಗುಡ್ಡ ಮತ್ತು ಹಣಮಾಪೂರ ಶ್ರೀ ಸಿದ್ಧಾಶ್ರಮದ ಶ್ರೀ. ಸಿದ್ಧಯೋಗಿ ಅಮರೇಶ್ವರ ಮಹಾರಾಜರು ದಿವ್ಯ ಸಾನಿಧ್ಯವಹಿಸುವರು. ರಾಯಬಾಗ ಶಾಸಕ ಶ್ರೀ. ಡಿ.ಎಮ್. ಐಹೊಳೆ ಸಮಾರಂಭದ ಅಧ್ಯಕ್ಷತೆವಹಿಸುವರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ. ಶಾಂತಾ ಕೃಷ್ಣ ಕಲ್ಲೋಳಿಕರ, ಕುಡಚಿ ಶಾಸಕ ಶ್ರೀ. ಪಿ. ರಾಜೀವ, ಮಾಜಿ ಶಾಸಕ ಶ್ರೀ. ಎಸ್.ಬಿ. ಘಾಟಗೆ, ಇತರ ಗಣ್ಯರು ಹಾಗೂ ಉಪನ್ಯಾಸ ಅತಿಥಿಗಳು, ಪ್ರಶಸ್ತಿ ಪುರಸ್ಕೃತರು, ಸತ್ಕಾರ ಮೂರ್ತಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಮಂಗಲವಾದ್ಯ ಮೇಳ, ಜೋಗತಿ ನೃತ್ಯ, ತತ್ವಪದ, ಸಿತಾರವಾದನ, ಗೀಗೀ ಪದ, ಕರಬಲ್ ಕುಣಿತ, ಸಮೂಹ ನೃತ್ಯ, ಖಣಿ ವಾದನ, ಭಜನೆ, ಭರಟ ನಾಟ್ಯ, ಸುಗಮ ಸಂಗೀತ, ಡೊಳ್ಳಿನ ಪದ, ಸೋಬಾನ ಪದ, ತಾಸೇ ವಾದನ, ಜಾನಪದ ಸಂಗೀತ ಹಾಗೂ ಕರಡಿ ಮಜಲು ಕಾರ್ಯಕ್ರಮಗಳು ನಡೆಯಲಿವೆ.

ಆ. 1ರಂದು ನಗರದಲ್ಲಿ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಮಕ್ಕಳಿಗೆ ಹಾಲು ವಿತರಣೆ ಚಾಲನೆ ಕಾರ್ಯಕ್ರಮ ಹಾಗೂ ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆ. 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಆರ್. ಜನ್ನು ಉದ್ಘಾಟನೆ ನೆರವೇರಿಸುವರು. ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅಧ್ಯಕ್ಷತೆ ವಹಿಸುವರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ: ಆನಂದರಾಜ್, ತಾಲೂಕು ವೈದ್ಯಾಧಿಕಾರಿ ಡಾ: ಮಲ್ಲಿಕಾ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾ.ಪಂ. ಉಪಚುನಾವಣೆ : ಸಂತೆ, ಜಾತ್ರೆ ನಿಷೇಧ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ) - ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಆಗಸ್ಟ್ 4ರಂದು ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಸಂತೆ, ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ತಾಲೂಕಿನ ಮಸಣಾಪುರ, ದೇಮಹಳ್ಳಿ, ನಾಗವಳ್ಳಿ, ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ, ಹುತ್ತೂರು, ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರ, ಕೆಲಸೂರು, ಶಿವಪುರ, ಕೊಡಸೋಗೆ, ಚಿಕ್ಕಾಟಿ, ಯಳಂದೂರು ತಾಲೂಕಿನ ಎಲಿಯೂರು ಗ್ರಾಮ ಪಂಚಾಯಿತಿ ಕ್ಷೇತ್ರದ ವ್ಯಾಪ್ತಿಯಲ್ಲಿ ಆಗಸ್ಟ್ 4ರಂದು ಚುನಾವಣೆ ನಿಗದಿಯಾಗಿದೆ. ಈ ಕ್ಷೇತ್ರದಲ್ಲಿ ಅಂದು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ದನಗಳ ಜಾತ್ರೆಯೂ ಸೇರಿದಂತೆ ಎಲ್ಲಾ ರೀತಿಯ ಜಾತ್ರೆ, ಸಂತೆ ನಡೆಸದಂತೆ ಜಿಲ್ಲಾಧಿಕಾರಿಗಳಾದ ಎಂ.ವಿ. ಸಾವಿತ್ರಿ ಆದೇಶದಲ್ಲಿ ತಿಳಿಸಿದ್ದಾರೆ.

ಪರಿಷತ್ ಉಪ ಚುನಾವಣೆ : ಆ. 1ರಂದು ನೀತಿಸಂಹಿತೆ ಸಭೆ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ) - ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಲಿರುವ ವಿಧಾನ ಪರಿಷತ್ ಸದಸ್ಯತ್ವದ ಉಪ ಚುನಾವಣೆ ಸಂಬಂಧ ನೀತಿಸಂಹಿತೆ ಕುರಿತು ಚರ್ಚಿಸಲು ಆಗಸ್ಟ್ 1ರಂದು ಮಧ್ಯಾಹ್ನ 4 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉಪ ಚುನಾವಣೆ : ಆ. 1ರಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ) - ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಲಿರುವ ವಿಧಾನ ಪರಿಷತ್ ಸದಸ್ಯತ್ವದ ಉಪ ಚುನಾವಣೆ ನೀತಿಸಂಹಿತೆ ಕುರಿತು ಚರ್ಚಿಸಲು ಆಗಸ್ಟ್ 1ರಂದು ಮಧ್ಯಾಹ್ನ 3 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಕರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಆ. 3ರಂದು ಗುಂಡ್ಲುಪೇಟೆಯಲ್ಲಿ ಶಿಕ್ಷಣ ಅದಾಲತ್

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ) - ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಅಧಿಕಾರಿ, ಸಿಬ್ಬಂದಿ ಸಮಸ್ಯೆ, ಶಾಲಾ ಮೂಲ ಸೌಲಭ್ಯ ಇನ್ನಿತರ ಅಹವಾಲು ಆಲಿಕೆಗಾಗಿ ಗುಂಡ್ಲುಪೇಟೆ ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಆಗಸ್ಟ್ 3ರಂದು ಶಿಕ್ಷಣ ಅದಾಲತ್ ಹಮ್ಮಿಕೊಳ್ಳಲಾಗಿದೆ.      ಶಾಲಾ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ತೊಂದರೆ, ಶಾಲಾ ಆಸ್ತಿ ಸಂಬಂಧ

ಸರಿಯಾದ ದಾಖಲೆಗಳನ್ನು ಹೊಂದದೇ ಇರುವುದು, ಕಟ್ಟಡದ ಕೊರತೆ ಇತರೆ ಸಮಸ್ಯೆಗಳ ಬಗ್ಗೆ ಲಿಖಿತ ದಾಖಲೆಗಳನ್ನು ಪಡೆದು ಸ್ಥಳದಲ್ಲಿಯೇ ಸಮಸ್ಯೆ ಪರಿಹರಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ.

ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯ ಶಿಕ್ಷಕರ ಸಮಸ್ಯೆ ಹಾಗೂ ಶಾಲಾ ಸೌಕರ್ಯಗಳ ತೊಂದರೆಗಳ ಬಗ್ಗೆ ಪರಿಹರಿಸಲು ಕ್ರಮ ವಹಿಸಲಾಗುವುದು.  ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಯಾವುದೇ ದೂರು, ಸಮಸ್ಯೆಗಳಿದ್ದಲ್ಲಿ ಅಂದು ನಡೆಯುವ ಶಿಕ್ಷಣ ಅದಾಲತ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎನ್. ಚಂದ್ರೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆ. 25ರಂದು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ) - ಸಹಕಾರ ಚುನಾವಣಾ ಆಯೋಗವು ಮಾರ್ಚ್ 31ಕ್ಕೆ ನಡೆಯಬೇಕಾಗಿದ್ದ ಹಾಗೂ ಹೊಸದಾಗಿ ನೋಂದಣಿಯಾದ ಎಲ್ಲಾ ಸಹಕಾರ ಸಂಘಗಳಿಗೂ, ಸೌಹಾರ್ಧ ಸಹಕಾರಿಗಳಿಗೂ ಚುನಾವಣೆ ನಡೆಸಲು ದಿನಾಂಕ ನಿಗಧಿಪಡಿಸಲಾಗಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ   ಆಗಸ್ಟ್ 25ರಂದು ಚುನಾವಣೆ ನಡೆಯಲಿದೆ.

 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೆಪ್ಟೆಂಬರ್ 1ರಂದು, ಇತರೆ ಪತ್ತಿನ ಸಹಕಾರ ಸಂಘ ಮತ್ತು ಪಟ್ಟಣ ಸಹಕಾರ ಬ್ಯಾಂಕುಗಳಿಗೆ ಸೆಪ್ಟೆಂಬರ್ 7 ಹಾಗೂ 8ರಂದು ಮತ್ತು ಇತರೆ ಎಲ್ಲಾ ಪ್ರಾಥಮಿಕ ಸಹಕಾರ ಸಂಘಗಳಿಗೆ ಸೆಪ್ಟೆಂಬರ್ 15ರಂದು ಚುನಾವಣೆ ನಡೆಯಲಿದೆ.

ನಿಗಧಿತ ಚುನಾವಣೆ ದಿನಾಂಕಕ್ಕೆ 15 ದಿನಗಳ ಪೂರ್ವದಲ್ಲಿ ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಆಯಾ ಸಹಕಾರ ಸಂಘಗಳಲ್ಲಿ ಪ್ರಕಟಿಸಲಾಗುವುದು. ಕರಡು ಪಟ್ಟಿಯಲ್ಲಿ ಯಾವುದೇ ಬದಲಾವಣೆ, ಆಕ್ಷೇಪಣೆಗಳಿಗೆ  ಲಿಖಿತವಾಗಿ ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ 1 ದಿನ ಮುಂಚಿತವಾಗಿ ಆಯಾ ಸಹಕಾರ ಸಂಘಗಳ ಕಾರ್ಯದರ್ಶಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ದಾಖಲೆಗಳೊಡನೆ ಸಲ್ಲಿಸಬಹುದಾಗಿದೆ.

ಇಲಾಖಾ ವತಿಯಿಂದ ಚುನಾವಣಾ ಸಂಬಂಧ ಮಾಹಿತಿ ನೀಡಲು ಕಂಟ್ರೋಲ್ ರೂಂ ತೆರೆಯಲಾಗಿದ್ದು,  ಸಹಕಾರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಲಕ್ಷ್ಮಿ ಅವರನ್ನು ನಿಯೋಜಿಸಲಾಗಿದೆ. ದೂರವಾಣಿ ಸಂಖ್ಯೆ 08226-24725, 9663056197, 9448576251 ಸಂಪರ್ಕಿಸಬಹುದು.

ಅಕ್ಟೋಬರ್ ಮಾಹೆಯೊಳಗೆ ಚುನಾವಣೆ ನಡೆಯಬೇಕಾಗಿದ್ದು, ಇದುವರೆವಿಗೂ ತಿದ್ದುಪಡಿ ಕಾಯ್ದೆಯನುಸಾರ ಉಪನಿಯಮ ತಿದ್ದುಪಡಿ ಮಾಡಿಕೊಳ್ಳದಿರುವ ಸಹಕಾರ ಸಂಘಗಳು ಆಡಳಿತ ಮಂಡಳಿ ಸದಸ್ಯರ ಸಂಖ್ಯೆ ನಿಗಧಿಗೊಳಿಸುವ ಸಂಬಂಧ ತಿದ್ದುಪಡಿಯನ್ನು ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿ ತ್ರಿಪ್ರತಿಯಲ್ಲಿ ಸಲ್ಲಿಸಬೇಕು. ವ್ಯಾಪ್ತಿಯ ಸಹಕಾರ ಇಲಾಖಾ ಅಧಿಕಾರಿಗಳಿಂದ ಅನುಮೋದನೆ ಪಡೆಯಲು ತುರ್ತು ಕ್ರಮ ವಹಿಸಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪೈಕಾ ಕ್ರೀಡಾಕೂಟ : ಪಟ್ಟಣ ವ್ಯಾಪ್ತಿ ವ್ಯಾಸಂಗ, ಕೆಲಸ ನಿರ್ವಹಿಸುತ್ತಿರುವವರಿಗೂ ಅವಕಾಶ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ) - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿರುವ ತಾಲೂಕು ಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದಲ್ಲಿ ಪಟ್ಟಣ, ಪುರಸಭೆ ಅಥವಾ ನಗರ ಪ್ರದೇಶದಲ್ಲಿ ವ್ಯಾಸಂಗ ಅಥವಾ ಕೆಲಸ ನಿರ್ವಹಿಸುತ್ತಿರುವ ಗ್ರಾಮೀಣ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎಲ್. ದೇವಿಕಾ ಸ್ಪಷ್ಟಪಡಿಸಿದ್ದಾರೆ.

ಆಗಸ್ಟ್ 1ರಂದು ಬೆಳಿಗ್ಗೆ 9 ಗಂಟೆಗೆ ಗುಂಡ್ಲುಪೇಟೆ ಪಟ್ಟಣದ ಡಿ. ದೇವರಾಜ ಅರಸು ಕ್ರೀಡಾಂಗಣದಲ್ಲಿ ಗುಂಡ್ಲುಪೇಟೆ ತಾಲೂಕು ಮಟ್ಟದ ಕ್ರೀಡಾಕೂಟ ನಿಗದಿಯಾಗಿದೆ. ಆಗಸ್ಟ್ 6ರಂದು ಬೆಳಿಗ್ಗೆ 9 ಗಂಟೆಗೆ ಕೊಳ್ಳೇಗಾಲದ ಶ್ರೀ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಳ್ಳೇಗಾಲ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಲಿದೆ.

ಈ ಕ್ರೀಡಾಕೂಟಗಳಿಗೆ ಪಟ್ಟಣ ವ್ಯಾಪ್ತಿಯಲ್ಲಿ ವ್ಯಾಸಂಗ ಹಾಗೂ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯುವಜನರು, ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. ಕ್ರೀಡಾಸಕ್ತರು ತಮ್ಮ ಗ್ರಾಮ ಪಂಚಾಯಿತಿಯ ಪಿಡಿಓಗಳಿಂದ ಗ್ರಾಮ ಪಂಚಾಯಿತಿ ವಿದ್ಯಾರ್ಥಿಗಳೆಂದು ದೃಢೀಕರಣ ತಂದಲ್ಲಿ ಕ್ರೀಡಾಕೂಟದ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಿರುತ್ತಾರೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎಲ್. ದೇವಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈರುಳ್ಳಿ ಬೆಳೆಗೆ ಸೂಕ್ತ ಕ್ರಮ ಅನುಸರಿಸಲು ತೋಟಗಾರಿಕೆ ಇಲಾಖೆ ಸಲಹೆ

ಚಾಮರಾಜನಗರ, ಜು. 31 (ಕರ್ನಾಟಕ ವಾರ್ತೆ):- ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಪ್ರಮುಖ ತೋಟಗಾರಿಕೆ ಬೆಳೆಯಾದ ಈರುಳ್ಳಿ ಬೆಳೆಗೆ ಸೂಕ್ತ ಕ್ರಮಗಳನ್ನು ಅನುಸರಿಸುವಂತೆ ತೋಟಗಾರಿಕೆ ಇಲಾಖೆ ಸಲಹೆ ಮಾಡಿದೆ.

ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ಪ್ರಾರಂಭಿಸಲು ಜೂನ್, ಜುಲೈ, ಸೆಪ್ಟೆಂಬರ್, ಅಕ್ಟೋಬರ್ ತಿಂಗಳು ಸೂಕ್ತವಾಗಿದೆ. ಈರುಳ್ಳಿಯಲ್ಲಿ ಸಂಕೀರ್ಣಾ ತಳಿಗಳಾದ ಅರ್ಕಾಕೀರ್ತಿಮಾನ್ ಮತ್ತು ಅರ್ಕಾಬಿಂದು (20 ರಿಂದ 25 ಟನ್ ಇಳುವರಿ ಎಕರೆಗೆ) ಗಳನ್ನು ಈ ಮಳೆಗಾಲದ ಹಂಗಾಮಿಗೆ ನಾಟಿ ಮಾಡಬಹುದು. ಸಣ್ಣ ಗಡ್ಡೆಯುಳ್ಳ ತಳಿಗಳಲ್ಲಿ ಅರ್ಕಾಬಿಂದು ಸೂಕ್ತವಾದ ತಳಿಯಾಗಿದೆ. ಮತ್ತು ಬಹಳ ದಿನಗಳವರೆಗೆ ಅಂದರೆ 3 ರಿಂದ 4 ತಿಂಗಳ ಕಾಲ ಶೇಖರಣೆ ಮಾಡಲು ಸಾಧ್ಯವಿದೆ. ಬೆಳೆಯ ಅವಧಿ 90 ರಿಂದ 100 ದಿವಸಗಳಾಗಿವೆ.

ನಾಟಿ ಮಾಡುವ ಮುನ್ನ ಪೂರ್ತಿ ಪ್ರಮಾಣದ ಕೊಟ್ಟಿಗೆ ಮತ್ತು ರಾಸಾಯನಿಕ ಗೊಬ್ಬರ (ಪ್ರತಿ ಎಕರೆಗೆ 12 ಟನ್  ಸ:ರಂ:ಪೊ: ಶಿಫಾರಸ್ಸು ಮಾಡಿರುವಂತೆ 50:20:20) ಶೇಕಡ 50ರ ಸಾರಜನಕ ಮತ್ತು ಪೂರ್ತಿ ಪ್ರಮಾಣದ ರಂಜಕ  ಪೊಟ್ಯಾಷ್‌ನ್ನು ಭೂಮಿಗೆ ಸೇರಿಸಬೇಕು.

15 ಸೆಂ.ಮೀ. ಅಂತರದ ಬದುಗಳನ್ನು ಮಾಡಿ ಬದುವಿನ ಪಕ್ಕದಲ್ಲಿ ಪ್ರತಿ 10 ಸೆಂ.ಮೀ.ಗೆ ಒಂದರಂತೆ ಗಡ್ಡೆ ನಾಟಿ ಮಾಡಿ ನೀರು ಹಾಯಿಸಿ ಉಳಿದ ಅರ್ಧ ಭಾಗ ಸಾರಜನಕವನ್ನು 6 ವಾರಗಳ ನಂತರ ಮೇಲುಗೊಬ್ಬರವಾಗಿ ಕೊಡಬೇಕು.

ಸಸಿ ನಾಟಿ ಮಾಡಿದ ದಿವಸ ಅಥವಾ ಮರುದಿನ ಎಕರೆಗೆ 300 ಎಂ.ಎಲ್. ಶೇ. 50 ಇ.ಸಿ. ಆಲೋಕ್ಲೋರ್ ಅಥವಾ 300 ಮಿಲಿ 23.5 ಇಸಿ ಆಕ್ಸಿಫ್ಲೋರೋಫೆನ್ ಅನ್ನು 750 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ನಂತರ ಭೂಮಿಯನ್ನು ತುಳಿಯಬಾರದು. ಸಿಂಪರಣೆ ಸಂದರ್ಭದಲ್ಲಿ ಮಣ್ಣಿನಲ್ಲಿ ಸಾಕಷ್ಟು ತೇವಾಂಶ ಇರಬೇಕು. ಹೆಚ್ಚು ಹಂಟೆಗಳಿರದಂತೆ ಎಚ್ಚರ ವಹಿಸಬೇಕು. ಬೀಜದಿಂದ ಪ್ರಸಾರವಾಗುವ ಕಳೆಗಳನ್ನು ಪ್ರಾರಂಭದ 40 ದಿವಸಗಳವರೆಗೆ ಹತೋಟಿ ಮಾಡಬಹುದು.

ಥ್ರೀಪ್ಸ್ ನುಸಿಯ ಹತೋಟಿಗೆ 1.7 ಮಿಲಿ ಹೈಮಿಥೋಯೆಟ್ 1 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ನೇರಳೆ ಎಲೆ ಮಚ್ಚೆ ರೋಗ ಕಂಡುಬಂದಾಗ 2 ಗ್ರಾಂ ಮ್ಯಾಂಕೋಜಿವ್ 1 ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಪಾದರಸ ಸಂಯುಕ್ತ ಔಷದದಿಂದ ಅಥವಾ ಕ್ಯಾಪ್ಸನ್‌ನಿಂದ ಬೀಜಗಳನ್ನು ಉಪಚರಿಸಬೇಕು. (ಪ್ರತಿ ಕೆಜಿ ಬೀಜಕ್ಕೆ 2 ಗ್ರಾಂ ಬಳಸಬೇಕು). ಹನಿ ನೀರಾವರಿ ಬಳಕೆ ಮಾಡುವುದರಿಂದ ಉತ್ತಮ ಇಳುವರಿ ಪಡೆಯಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.