Government of Karnataka

Department of Information

Thursday 21/07/2016

State News

Training Programme for newly elected members of the State Legislative Council on June 30 and July 1

Saturday, June 25th, 2016 Training Programme for newly elected members of the State Legislative Council on June 30 and July 1

ಬೆಂಗಳೂರು, ಜೂನ್ 25 (ಕರ್ನಾಟಕ ವಾರ್ತೆ) : ರಾಜ್ಯ ವಿಧಾನ ಪರಿಷತ್‍ಗೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಜೂನ್ 30 ಹಾಗೂ ಜುಲೈ 1 ರಂದು ಎರಡು ದಿನಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಕರ್ನಾಟಕ ವಿಧಾನ ಮಂಡಲ ತರಬೇತಿ ಸಂಸ್ಥೆ ಏರ್ಪಡಿಸಿರುವ ಈ ಶಿಬಿರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂನ್ 30 ರಂದು ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಅದೇ ದಿನ ರಾಜ್ಯ ವಿಧಾನ ಪರಿಷತ್‍ನ ಮಾಜಿ ಸಭಾಪತಿ ಬಿ. ಎಲ್. ಶಂಕರ್ ಅವರು ಭಾರತ ಸಂವಿಧಾನದ ಆಶಯಗಳು […]

Read More

Nodal Officers appointed in Chief Minister’s Secretariat

Saturday, June 25th, 2016 Nodal Officers appointed in Chief Minister's Secretariat

ಬೆಂಗಳೂರು, ಜೂನ್ 25 (ಕರ್ನಾಟಕ ವಾರ್ತೆ) : ಇನ್ವೆಸ್ಟ್ ಕರ್ನಾಟಕ-2016 ರ ಹೂಡಿಕೆ ಪ್ರಸ್ತಾವನೆಗಳ ಪ್ರಗತಿ ಸಾಧಿಸಲು ಮುಖ್ಯಮಂತ್ರಿಯವರ ಅಪರ ಕಾರ್ಯದರ್ಶಿ ಬಿ. ಎಸ್. ಶೇಖರಪ್ಪ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಅಂತೆಯೇ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಬಾಕಿ ಇರುವ ರಾಜ್ಯ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಗುತ್ತಿ ಜಂಬುನಾಥ್ ಅವರನ್ನು ನೋಡೆಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

Read More

Chief Minister to attend Maharaja’s Wedding

Saturday, June 25th, 2016 Chief Minister to attend Maharaja's Wedding

ಬೆಂಗಳೂರು, ಜೂನ್ 25 (ಕರ್ನಾಟಕ ವಾರ್ತೆ) : ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ಅವರ ಮದುವೆಯ ಆರತಕ್ಷತಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಳ್ಳಲಿದ್ದಾರೆ. ಜೂನ್ 27 ರಂದು ಸಂಜೆ ಮೈಸೂರಿಗೆ ರಸ್ತೆಯ ಮೂಲಕ ತೆರಳಿ ಆರತಕ್ಷತಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಅದೇ ದಿನ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

Read More

Chief Minister’s Iftar Party for Muslims on June 26

Saturday, June 25th, 2016 Chief Minister's Iftar Party for Muslims on June 26

ಬೆಂಗಳೂರು, ಜೂನ್ 25 (ಕರ್ನಾಟಕ ವಾರ್ತೆ) : ಪವಿತ್ರ ರಂಜಾನ್ ಮಾಸದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸಲ್ಮಾನ ಬಾಂಧವರಿಗೆ ಜೂನ್ 26 ರಂದು ಬೆಂಗಳೂರು ಅರಮನೆ ಆವರಣದಲ್ಲಿ ಇಫ್ತಾರ್ ಔತಣ ಕೂಟವನ್ನು ಏರ್ಪಡಿಸಿದ್ದಾರೆ. ಆಮಂತ್ರಿತರು ವಸಂತ ನಗರ ದ್ವಾರದಿಂದ ಪ್ರವೇಶ ಪಡೆದು, ಸಂಜೆ 6-50 ಗಂಟೆಗೆ ಆಯೋಜಿಸಿರುವ ಮಘ್ರೀಭ್ ನಮಾಜ್‍ನಲ್ಲಿ ಭಾಗವಹಿಸಿ¸ ಇಫ್ತಾರ್ ಔತಣ ಕೂಟದಲ್ಲಿ ಪಾಲ್ಗೊಳ್ಳಬಹುದಾಗಿದೆ.

Read More

State Cabinet Meeting on June 29

Saturday, June 25th, 2016 State Cabinet Meeting on June 29

ಬೆಂಗಳೂರು, ಜೂನ್ 25 (ಕರ್ನಾಟಕ ವಾರ್ತೆ) :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜೂನ್ 29 ರಂದು ಸಂಜೆ 4-00 ಗಂಟೆಗೆ ವಿಧಾನ ಸೌಧದ ಸಚಿವ ಸಂಪುಟ ಸಭಾ ಮಂದಿರದಲ್ಲಿ 2016 ನೇ ಸಾಲಿನ ರಾಜ್ಯ ಸಚಿವ ಸಂಪುಟದ ಹತ್ತನೇ ಸಭೆ ನಡೆಯಲಿದೆ. ರಾಜ್ಯ ಸಚಿವ ಸಂಪುಟ ಪುನಾರಚನೆಯ ಬಳಿಕ ನಡೆಯುತ್ತಿರುವ ಪ್ರಪ್ರಥಮ ಸಚಿವ ಸಂಪುಟ ಸಭೆ ಇದಾಗಿದೆ.

Read More

Conference of the Regional Commissioners, Deputy Commissioners and Chief Executive Officers of the Zilla Panchayats

Saturday, June 25th, 2016 Conference of the Regional Commissioners, Deputy Commissioners and Chief Executive Officers of the Zilla Panchayats

ಬೆಂಗಳೂರು, ಜೂನ್ 25 (ಕರ್ನಾಟಕ ವಾರ್ತೆ) :  ರಾಜ್ಯದ ಎಲ್ಲಾ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಎರಡು-ದಿನಗಳ ಸಮ್ಮೇಳನವು ಜೂನ್ 27 ಮತ್ತು 28 ರಂದು ವಿಧಾನ ಸೌಧಧ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ ರಾಜ್ಯ ಸಚಿವ ಸಂಪುಟದ ಎಲ್ಲಾ ಸದಸ್ಯರೂ ಪಾಲ್ಗೊಳ್ಳಲಿದ್ದಾರೆ

Read More

Chief Minister calls on Dr Shivakumara Swamiji of Sri Siddaganga Math and wishes him a speedy recovery

Friday, June 24th, 2016

Wish you speedy recovery The Chief Minister Mr Siddaramaiah called on Dr Shivakumara Swamiji of Sri Siddaganga Math, who has been admitted to BGS Global Hospital  in Bengaluru on June 24.  Mr Siddaramaiah also met the doctors treating the seer and inquired about the centenarian saint’s health. Member of Parliament Mr B.S. Yeddyurappa, Legislators Mr […]

Read More

State News 24-06-2016

Friday, June 24th, 2016 State News 24-06-2016

ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ 1. ಹಿಂದುಳಿದ ವರ್ಗದ ಸಮಸ್ಯೆಗಳ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ: ಉದ್ಘಾಟನೆ: ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ  ಮುಖ್ಯ ಅತಿಥಿಗಳು: ಹೆಚ್. ಆಂಜನೇಯ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರು   ಅಧ್ಯಕ್ಷತೆ: ಶ್ರೀ ಹೆಚ್. ಕಾಂತರಾಜು, ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 25-06-2016 ಶನಿವಾರ ಬೆಳಿಗ್ಗೆ  10-00 ಗಂಟೆಗೆ ರವೀಂದ್ರಕಲಾಕ್ಷೇತ್ರ                   ಜೆ.ಸಿ. ನಗರ ಬೆಂಗಳೂರು 2. ಪತ್ರಿಕಾಗೋಷ್ಠಿ: […]

Read More

State News 23-06-2016

Thursday, June 23rd, 2016

ಜಾತಿ ಸಮೀಕ್ಷೆ ವರದಿ ಸೋರಿಕೆ: ಸತ್ಯಕ್ಕೆ ದೂರ - ಕಾಂತರಾಜು ಬೆಂಗಳೂರು, ಜೂನ್ 23, 2016: ಇತ್ತೀಚಿಗೆ ಮಾದ್ಯಮಗಳಲ್ಲಿ ಸೋರಿಕೆಯಾಗಿರುವ ಜಾತಿ ಸಮೀಕ್ಷೆ ಸಂಖ್ಯೆಗಳು ಸತ್ಯತೆಯಿಂದ ಕೂಡಿಲ್ಲ, ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ವಿವಿಧ ಚುನಾವಣೆಗಳ ಕಾರಣ ಅಧಿಕಾರಿಗಳು ಜಾತಿ ಸಮೀಕ್ಷೆ ವರದಿಯನ್ನು ಪೂರ್ಣಗೊಳಿಸಲಾಗಿಲ್ಲ. ಇನ್ನೂ 8 ಜಿಲ್ಲೆಗಳ ವರದಿ ಬರಬೇಕಿದ್ದು ಅದರ ನಂತರ ರಾಜ್ಯ ಆಯೋಗವು ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ. ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಶೇ 88 ಮತ್ತು ರಾಜ್ಯದ ಶೇ 98 ಜನರು […]

Read More