Government of Karnataka

Department of Information

Sunday 01/11/2015

District News 01-09-2015

Date : Tuesday, September 1st, 2015

ಬಾಲ ನ್ಯಾಯ ಕಾಯಿದೆ ಉಲ್ಲಂಘನೆಗೆ ಕ್ರಮ

ಬೆಂಗಳೂರು: ಮಾ, 10 : ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 72 ಸಂಸ್ಥೆಗಳು ನೊಂದಣಿಯಾಗಿದ್ದು, ಈ ಸಂಸ್ಥೆಗಳ ನೋಂದಣಿ ಅವಧಿ ಮುಗಿಯುತ್ತಿರುವುದರಿಂದ ಈ ಸಂಸ್ಥೆಗಳು ಕೂಡ ನವೀಕರಿಸಿಕೊಳ್ಳತಕ್ಕದ್ದು. ತಪ್ಪಿದ್ದಲ್ಲಿ ಸಂಸ್ಥೆಯು ಯಾವುದೇ ಕಾಯಿದೆಯಲ್ಲಿ ನೋಂದಣಿಯಾಗಿದ್ದರೂ ಸಹ ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ಅಲ್ಲದೆ ಈ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ್ದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯನ್ನು ಕಛೇರಿಯ ವೆಬ್‍ಸೈಟ್ www.dcpublr.org ಯಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ನಮೂನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕಿರಣ, ಡಾ: ಎಂ.ಹೆಚ್.ಮರೀಗೌಡ ರಸ್ತೆ, ಕಿದ್ವಾಯಿ ಆಸ್ಪತ್ರೆ ಪಕ್ಕ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ: ವೆಬ್‍ಸೈಟ್ : www.dcpublr.org ಇ.ಮೇಲ್: [email protected] ದೂರವಾಣಿ: 080-26560273.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಮೀಕ್ಷಾ ಸಭೆ

ಕೋಲಾರ, ಸೆಪ್ಟೆಂಬರ್ 01 : (ಕರ್ನಾಟಕ ವಾರ್ತೆ): ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿಗೆ ಕುರಿತಂತೆ ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಮೀಕ್ಷಾ ಸಭೆಯನ್ನು ದಿನಾಂಕ: 03-09-2015 ರಂದು ಮಧ್ಯಾಹ್ನ 3.00 ಗಂಟೆಗೆ ಜಿಲ್ಲಾ ಪಂಚಾಯತ್ ತರಬೇತಿ ಕೊಠಡಿಯಲ್ಲಿ ಏರ್ಪಡಿಸಲಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ಕೋಲಾರ ಇವರು ತಿಳಿಸಿದ್ದಾರೆ.

ಕೋಲಾರ, ಸೆಪ್ಟೆಂಬರ್ 01 : (ಕರ್ನಾಟಕ ವಾರ್ತೆ): ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಆಧಾರ್ ಕಾರ್ಡ್‍ನ್ನು ಕಡ್ಡಾಯಗೊಳಿಸುತ್ತಿರುವ ಹಿನ್ನೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲು ಜಿಲ್ಲೆಯ ಎಲ್ಲಾ 27 ನಾಡಕಛೇರಿಗಳಲ್ಲಿ ಶಾಶ್ವತ ಆಧಾರ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸದರಿ ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿಯನ್ನೂ ಸಹ ಮಾಡಲಾಗುತ್ತದೆ. ಮುಂದುವರೆದು ಹೆಚ್ಚುವರಿಯಾಗಿ ತಲಾ ಒಂದು ಕಿಟ್‍ಗಳನ್ನು ಮುಂದಿನ ಆದೇಶದವರೆಗೆ ಜಿಲ್ಲೆಯ ಎಲ್ಲಾ ನಗರಸಭೆ ಮತ್ತು ಪುರಸಭೆಗಳಲ್ಲಿ ಸ್ಥಾಪಿಸಲಾಗಿದೆ. ಸದರಿ ಕೇಂದ್ರಗಳಲ್ಲಿ ನಾಗರೀಕರು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಮಾಡಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತದಿಂದ ಕೋರಲಾಗಿದೆ.

ನವಲಗುಂದ ತಾಲೂಕ ಸ್ಥಿರ ಆಸ್ತಿಗಳ ಮೌಲ್ಯ ಪರಿಷ್ಕರಣೆ

ಧಾರವಾಡ (ಕರ್ನಾಟಕ ವಾರ್ತೆ) ಸೆ.01 : ನವಲಗುಂದ ತಾಲೂಕಿನ ಉಪನೋಂದಣಿ ಕಚೇರಿ ವ್ಯಾಪ್ತಿಯ 2015-16 ನೇ ಸಾಲಿನ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿ ಪಟ್ಟಿಯನ್ನು ಜಾರಿಗೊಳಿಸುವ ಕುರಿತು ಉಪ ನೋಂದಣಿ ಕಚೇರಿಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ಥಿರಾಸ್ತಿಗಳ ಅಂದಾಜು ಸರಾಸರಿ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಇದಕ್ಕೆ ಸಾರ್ವಜನಿಕರ ಆಕ್ಷೇಪಣೆ ಮತ್ತು ಸಲಹೆಗಳು ಇದ್ದಲ್ಲಿ ಲಿಖಿತ ಪತ್ರ ಮುಖೇನ ಸಲ್ಲಿಸಲು ಉಪ ನೋಂದಣಿ ಕಚೇರಿ, ತಹಶೀಲದಾರ ಕಚೇರಿ, ಪುರಸಭೆ, ಲೋಕೋಪಯೋಗಿ ಕಚೇರಿಗಳಲ್ಲಿ ಪ್ರಚಾರ ಪಡಿಸಿ, 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಉಪನೋಂದಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿ ನವಲಗುಂದ ತಾಲೂಕಗಳ ಸ್ಥಿರಾಸ್ತಿಗಳ ಮೌಲ್ತ ನಿರ್ಧರಣಾ ಉಪ ಸಮಿತಿ ನವಲಗುಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರವಾನಗಿ ನವೀಕರಿಸದ ಲೇವಾದೇವಿ ಸಂಸ್ಥೆಗಳ ಭಧ್ರತಾ ಠೇವಣಿ ಮುಟ್ಟುಗೋಲು : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಕರ್ನಾಟಕ ಲೇವಾದೇವಿ ಹಾಗೂ ಗಿರವಿ ಕಾಯಿದೆ ಅನುಸಾರ ವ್ಯವಹಾರ ನಡೆಸಲು ಪರವಾನಗಿ ಪಡೆದಿದ್ದ 49 ಮಂದಿ ಪರವಾನಗಿಯನ್ನು ನವೀಕರಿಸದೆ ಇರುವುದರಿಂದ ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಉದ್ದೇಶಿಸಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಕರ್ನಾಟಕ ಲೇವಾದೇವಿ ಕಾಯಿದೆಯಡಿ ಪರವಾನಗಿ ಪಡೆದುಕೊಂಡಿದ್ದ 49 ಮಂದಿಗೆ ಅನೇಕ ತಿಳುವಳಿಕೆ ಪತ್ರ ನೀಡಿದ್ದರೂ ಸಹ ಪರವಾನಗಿಯನ್ನು ನವೀಕರಿಸಿಕೊಂಡಿಲ್ಲ. ಅವರ ವಿವರ ಹೀಗಿದೆ- ಬಿ.ಎಸ್. ವೆಂಕಟರತ್ನನಂ ಶೆಟ್ಟಿ, ನಂ. 482/1, ಪಾಟ್ ಸ್ಟ್ರೀಟ್, ಚಾಮರಾಜನಗರ, ಮಹದೇಶ್ವರ ಫೈನಾನ್ಸ್ ಕಾರ್ಪೊರೇಷನ್, ಇ 22/6, ಗುಂಡ್ಲುಪೇಟೆ ವೃತ್ತ, ಹೊಸನೂರು ರಸ್ತೆ, ಚಾ.ನಗರ, ಶ್ರೀ ಶಿವಶಕ್ತಿ ಫೈನಾನ್ಸ್ ಕಾರ್ಪೊರೇಷನ್, ಮಾರ್ಕೆಟ್ ರೋಡ್, ಚಾ.ನಗರ, ಶ್ರೀ ನಂದಿ ಫೈನಾನ್ಸ್ ಕಾರ್ಪೊರೇಷನ್, ಕೆ.ಸಿ.ಬಿ. ಕಾಂಪ್ಲೆಕ್ಸ್, ಮಾರ್ಕೆಟ್ ರಸ್ತೆ, ಚಾ.ನಗರ, ಶ್ರೀ ಅನ್ನಪೂಣೇಶ್ವರಿ ಎಂಟರ್ ಪ್ರೈಸಸ್, ಬಿ.ಆರ್. ನಾರಾಯಣ ಸ್ವಾಮಿ ಬಿಲ್ಡಿಂಗ್, ದೊಡ್ಡ ಅಂಗಡಿ ಬೀದಿ, ಚಾ.ನಗರ, ವರಲಕ್ಷ್ಮಿ ಫೈನಾನ್ಸ್ ಕಾರ್ಪೊರೇಷನ್, ವೆಂಕಟ ನಿಲಯ, ಕಾರ್ ಸ್ಟ್ರೀಟ್, ಚಾ.ನಗರ, ಕಾಮಧೇನು ಎಂಟರ್ ಪ್ರೈಸಸ್, ನಂ.3, ನಂದಿ ಬೀದಿ, ಚಾ.ನಗರ, ಶುಭಂ ಎಂಟರ್ ಪ್ರೈಸಸ್, ಕಾರ್ ಸ್ಟ್ರೀಟ್, ಚಾ.ನಗರ, ನಿಮಿಷಾಂಬ ಎಂಟರ್ ಪ್ರೈಸಸ್, ಸ್ನೇಹಸೇತು, ಭ್ರಮರಾಂಬ ಎಕ್ಸ್‍ಟೆನ್ಸನ್, ಚಾ.ನಗರ, ಈಶ್ವರಿ ಫೈನಾನ್ಸ್, ಕೆಸಿಬಿ ಕಾಂಪ್ಲೆಕ್ಸ್, ಚಾ.ನಗರ, ಮಾರುತಿ ಫೈನಾನ್ಸ್ ಅಂಡ್ ಇನ್ವೆಸ್ಟ್‍ಮೆಂಟ್, ಮಳಿಗೆ ನಂ. 1, ರಾಜಶೇಖರ್ ಬಿಲ್ಡಿಂಗ್, ಕಾರ್ ಸ್ಟ್ರೀಟ್, ಚಾ.ನಗರ, ಶ್ರೀ ಲಕ್ಷ್ಮೀ ಫೈನಾನ್ಸ್, ಕಾರ್ ಸ್ಟ್ರೀಟ್, ಚಾ.ನಗರ, ಕಲ್ಪವೃಕ್ಷ ಫೈನಾನ್ಸ್ ಅಂಡ್ ಇನ್ವೆಸ್ಟ್‍ಮೆಂಟ್, 761/4, ಭ್ರಮರಾಂಬ ಎಕ್ಸ್‍ಟೆನ್ಸನ್, ಚಾ.ನಗರ, ಮೆ: ಸ್ಪೂರ್ತಿ ಫೈನಾನ್ಸ್ ಕಾರ್ಪೊರೇಷನ್, ಗುಂಡ್ಲುಪೇಟೆ ರಸ್ತೆ, ಚಾ.ನಗರ, ಎ. ಶ್ರೀನಿವಾಸನ್, ಮೆ: ಶ್ರೀನಿಧಿ ಫೈನಾನ್ಸ್ ಕಾರ್ಪೊರೇಷನ್, ಭ್ಯಾಗ್ಯಶ್ರೀ ಕಾಂಪ್ಲೆಕ್ಸ್, ಡೀವಿಯೇಷನ್ ರಸ್ತೆ, ಚಾ.ನಗರ, ಸಂಜಯ್ ಕುಮಾರ್ ಬಿನ್ ಸಂಪತ್ ಲಾಲ್, ನಾಗೇಶ್ ಬ್ಯಾಂಕರ್ಸ್, ಡೀವಿಯೇಷನ್ ರಸ್ತೆ, ಚಾ.ನಗರ, ಗೌತಮ್ ಕುಮಾರ್ ಜೈನ್ ಬಿನ್ ಮಕರಾಜ್ ಜೈನ್, ಧನಶ್ರೀ ಪಾನ್ ಬ್ರೋಕರ್ಸ್, 22/291/5, ಡೀವಿಯೇಷನ್ ರಸ್ತೆ, ಚಾ.ನಗರ, ಬಾಲನಾಗರಾಜಶೆಟ್ಟಿ ಎನ್ ಬಿನ್ ನಾರಾಯಣ ಶೆಟ್ಟಿ, ತಿರುಮಲ ಫೈನಾನ್ಸ್, ಸಂಪಿಗೆ ರಸ್ತೆ, ಚಾ.ನಗರ, ಎಂ.ಎನ್. ಸುಬ್ಬಣ್ಣ ಬಿನ್ ಎಸ್.ಎಂ. ಶಿವಪ್ಪ, ಶ್ರೀ ಮಹದೇಶ್ವರ ಫೈನಾನ್ಸ್ ಕಾರ್ಪೊರೇಷನ್, ಕವಿ ಬಸವೇಶ್ವರ ಕಾಂಪ್ಲೆಕ್ಸ್, ಸಂತೆಮರಹಳ್ಳಿ, ಚಾಮರಾಜನಗರ ತಾಲೂಕು, ಜಿ.ಎ. ವಿವೇಕ್ ಬಿನ್ ಜಿ.ಆರ್. ಅಶ್ವತ್ ನಾರಾಯಣ, ಮೆ: ರಾಜಯ್ಯ ಶೆಟ್ಟಿ ಸನ್ಸ್ ಬ್ಯಾಂಕರ್ಸ್, ದೊಡ್ಡ ಅಂಗಡಿ ಬೀದಿ, ಚಾ.ನಗರ, ಎ. ಸುಬ್ರಮಣ್ಯ ಬಿನ್ ಅಂಕಶೆಟ್ಟಿ, ಮೆ: ಬಾಲಾಜಿ ಫೈನಾನ್ಸ್, ನಂ.1, ಪದ್ಮಶ್ರೀ ಬಿಲ್ಡಿಂಗ್, ಹಳ್ಳದ ಬೀದಿ, ಬಣಜಿಗರ ಮೊಹಲ್ಲ, ಚಾ.ನಗರ, ಮಹೇಶ್ ಎಂ ಬಿನ್ ಮರಿಸ್ವಾಮಿ, ಮೆ. ಕಲ್ಪವೃಕ್ಷ್ ಫೈನಾನ್ಸ್, ವಿರಕ್ತ ಮಠದ ಬಿಲ್ಡಿಂಗ್, ಚಾ.ನಗರ, ಅಕ್ಷತಾ ಎಂಟರ್ ಪ್ರೈಸಸ್, ನಂ.2, ಜಿವಿಎಸ್ ಕಾಂಪ್ಲೆಕ್ಸ್, ಡೀವಿಯೇಷನ್ ರಸ್ತೆ, ಚಾ.ನಗರ, ಶ್ರೀ ಮಹಾಲಕ್ಷ್ಮಿ ಫೈನಾನ್ಸ್, ಕಾರ್ ಸ್ಟ್ರೀಟ್, ಚಾ.ನಗರ, ಸೂರ್ಯ ಫೈನಾನ್ಸ್, ಟಿಬಿಎಲ್ ಬಿಲ್ಡಿಂಗ್, ಬಿಗ್ ಬಜಾರ್ ಸ್ಟ್ರೀಟ್, ಚಾ.ನಗರ, ಎ.ಶ್ರೀನಿವಾಸನ್ ಬಿನ್ ಅರುಚೆಟ್ಟಿಯಾರ್, ವಿನಾಯಕ ಫೈನಾನ್ಸ್ ಕಾರ್ಪೊರೇಷನ್, ಭಾಗ್ಯಶ್ರಿ ಕಾಂಪ್ಲೆಕ್ಸ್, ಡೀವಿಯೇಷನ್ ರಸ್ತೆ, ಚಾ.ನಗರ, ಆರ್. ಪರಿಣಿತಿ ಕೋಂ ವಿ. ರಾಜೀವ್, ಮೆ. ಸಂವೃದ್ಧಿ ಫೈನಾನ್ಸ್ ಅಂಡ್ ಪಾನ್ ಬ್ರೋಕರ್ಸ್, ನಂ.6, ತಿರುವiಲ ಕಾಂಪ್ಲೆಕ್ಸ್, ಕಾರ್ ಸ್ಟ್ರೀಟ್, ಚಾ.ನಗರ, ಹೆಚ್.ಪಿ. ನಿರಂಜನಮೂರ್ತಿ ಬಿನ್ ಪುಟ್ಟಸ್ವಾಮಪ್ಪ, ಮೆ. ಧನಲಕ್ಷ್ಮಿ ಫೈನಾನ್ಸ್ ಕಾರ್ಪೋರೇಷನ್, ಕೊಳದ ಬೀದಿ, ಚಾ.ನಗರ, ಎಂ. ರಾಜಣ್ಣ ಬಿನ್ ಎನ್. ಮರಿಬಸಪ್ಪ, ಮೆ. ವಿಘ್ನೇಶ್ವರ ಎಂಟರ್ ಪ್ರೈಸಸ್, ಗುಂಡ್ಲುಪೇಟೆ ಸರ್ಕಲ್, ಚಾ.ನಗರ, ಜೆ.ಎಸ್. ನಂದೀಶ್ ಬಿನ್ ಸೋಮಣ್ಣ, ಶ್ರೀ ವೆಂಕಟೇಶ್ವರ ಫೈನಾನ್ಸ್, ಬಿಎಸ್‍ಆರ್ ಕಾಂಪ್ಲೆಕ್ಸ್, ವಾಸವಿ ಮಹಲ್ ಹತ್ತಿರ, ಕಾರ್ ಸ್ಟ್ರೀಟ್, ಚಾ.ನಗರ, ಬಸವರಾಜು ಬಿನ್ ಎಸ್. ಮಹದೇವಪ್ಪ, ಮೆ. ವಿಘ್ನೇಶ್ವರ ಫೈನಾನ್ಸ್, ಸಂತೇಮರಳ್ಳಿ, ಚಾ. ನಗರ ತಾಲೂಕು, ಹೆಚ್.ಎನ್. ವೀರಭದ್ರಚಾರಿ, ರಾಜರಾಜೇಶ್ವರಿ ಪಾನ್ ಬ್ರೋಕರ್ಸ್, ಮುಖ್ಯ ರಸ್ತೆ, ಚಾ.ನಗರ, ಬಿ.ಆರ್. ಶ್ರೀನಿವಾಸ್, ಮೆ. ತೇಜಸ್ ಫೈನಾನ್ಸ್ ಕಾರ್ಪೋರೇಷನ್, 2ನೇ ಕ್ರಾಸ್, ಶಂಕರಪುರÀ, ಚಾ.ನಗರ, ಡಿ.ಪಿ. ಪ್ರಕಾಶ್ ಬಿನ್ ಪುಟ್ಟಮಲ್ಲಪ್ಪ, ಶ್ರೀ ಪಾರ್ವತಿ ಫೈನಾನ್ಸ್ ಕಾಪೆರ್Àೂರೇಷನ್, ಮೈನ್ ರೋಡ್, ಸಂತೆಮರಳ್ಳಿ, ಚಾ.ನಗರ ತಾಲೂಕು, ಸಿದ್ದರಾಜು ಬಿನ್ ಸಿ.ಎನ್. ಮಹದೇವಯ್ಯ, ನಂಜುಂಡೇಶ್ವರ ಫೈನಾನ್ಸ್, ಚನ್ನಬಸವೇಶ್ವರ ವಾಣಿಜ್ಯ ಸಂಕೀರ್ಣ, ಮಾರಿಗುಡಿ ಎದುರು, ಚಾ.ನಗರ, ಕು. ರತ್ನಮ್ಮ ಬಿನ್ ರಂಗನಾಯಕ, ಆಡಳಿತ ಪಾಲುಗಾರರು, ನಿತ್ಯಶ್ರೀ ಫೈನಾನ್ಸ್ ಕಾರ್ಪೋರೇಷನ್, ಬಿ ಎಸ್ ವಿ ಶೆಟ್ಟಿ, ಕಾರ್ ಸ್ಟ್ರೀಟ್, ಚಾ.ನಗರ, ಕೆ.ಸಿ. ಉಮೇಶ್ ಬಿನ್ ಚಿಕ್ಕಮಾದಪ್ಪ, ಮೆ. ಫ್ರೆಂಡ್ಸ್ ಫೈನಾನ್ಸ್, ಸಿಕೆಟಿ ಕಾಂಪ್ಲೆಕ್ಸ್, ಕೆಎಸ್‍ಆರ್‍ಟಿಸಿ ಬಸ್ ಸ್ಟ್ಯಾಂಡ್ ಹತ್ತಿರ, ಚಾ.ನಗರ, ಬಸವರಾಜು ಬಿನ್ ಸಿ.ಎ. ನಂಜುಂಡಪ್ಪ, ಮೆ. ಲಕ್ಷ್ಮೀ ಫೈನಾನ್ಸ್, ಬಿ ಆರ್ ಹಿಲ್ಸ್ ರೋಡ್, ಚಂದಕವಾಡಿ, ಚಾ.ನಗರ ತಾಲೂಕು, ಚೆನ್ನಾರಾಂ ಬಿನ್ ಕಿಯರಾಂ, ಮೆ. ರಾಂದೇವ್ ಬ್ಯಾಂಕರ್ಸ್, ಸಂತೆಮರಹಳ್ಳಿ, ಚಾ.ನಗರ ತಾಲೂಕು, ಕೆ.ಪಿ. ಸುರೇಶ್ ಬಿನ್ ಕೆ.ಎ. ಪೊನ್ನ, ಜನರಲ್ ಮ್ಯಾನೇಜರ್, ಮಣಿಪುರಂ ಜನರಲ್ ಫೈನಾನ್ಸ್ ಆಚಿಡ್ ಲೀಸಿಂಗ್, ಚಾ.ನಗರ, ಡಿ.ಎಂ. ಮಹೇಶ್ ಬಿನ್ ಮಹದೇವಪ್ಪ, ದೇಶದವಳ್ಳಿ, ವಿಜಯಲಕ್ಷ್ಮಿ ಫೈನಾನ್ಸ್ ಮತ್ತು ಇನ್‍ವೆಸ್ಟ್‍ಮೆಂಟ್, ಸಂತೆಮರಹಳ್ಳಿ, ನಾಗೇಶ್ ಬಿನ್ ಎ. ವiಹದೇವಶೆಟ್ಟಿ, ಶ್ರೀ ಮಹದೇಶ್ವರ ಫೈನಾನ್ಸ್ ಕಾರ್ಪೋರೇಷನ್, ರಾಶಿ ಕಾಂಪ್ಲೆಕ್ಸ್, ಸಂತೆಮರಹಳ್ಳಿ ರಸ್ತೆ, ಚಾ.ನಗರ, ಪಿ. ರಾಜಣ್ಣ ಬಿನ್ ಆರ್. ಪುಟ್ಟಣ್ಣಶೆಟ್ಟಿ, ಪಿ ಮಹಾಲಕ್ಷ್ಮಿ ಫೈನಾನ್ಸ್ ಅಂಡ್ ಇನ್ ವೆಸ್ಟ್ ಮೆಂಟ್, ನಂ. ಸಿ 233, ಬಜಾರ್ ರಸ್ತೆ, ಚಾ.ನಗರ, ರಘುನಾಥ್ ಬಿನ್ ವೆಂಕಟಯ್ಯ, ಐಶ್ವರ್ಯ ಫೈನಾನ್ಸ್, ಕುಮಾರ್ ಲಾಡ್ಜ್ ಬಿಲ್ಡಿಂಗ್, ಕಾರ್ ಸ್ಟ್ರೀಟ್, ಚಾ.ನಗರ, ಎಂ. ಬಸವರಾಜು ಬಿನ್ ಮಾದಯ್ಯ, ಶ್ರೀ ಮಲೈಮಹದೇಶ್ವರ ಫೈನಾನ್ಸ್ ಅಂಡ್ ಪಾನ್ ಬ್ರೋಕರ್ಸ್, ಭೀಮ ಸದನ, ರಾಮಸ್ವಾಮಿ ಲೇಔಟ್, ಚಾ.ನಗರ, ಸಪ್ತಗಿರಿ ಫೈನಾನ್ಸ್, ನಂ.1, ನೆಲ ಅಂತಸ್ತು, ಕೆಸಿಬಿ ಕಾಂಪ್ಲೆಕ್ಸ್, ಕಾರ್ ಸ್ಟ್ರೀಟ್, ಚಾ.ನಗರ, ಕೋಹಿಲಬಾಯಿ ಬಿನ್ ಜಸ್ ರಾಂ ಚೌಧರಿ, ಕಾವೇರಿ ಪಾನ್ ಬ್ರೋಕರ್ಸ್, ಮುಖ್ಯ ಬಜಾರ್ ಸ್ಟ್ರೀಟ್, ಚಾ.ನಗರ, ಜಸ್ ರಾಂ ಬಿನ್ ಓಕರಾಂಜೆ, ರಮೇಶ್ ಪಾನ್ ಬ್ರೋಕರ್ಸ್, ಬಸ್ ಸ್ಟ್ಯಾಂಡ್ ಹತ್ತಿರ, ಕುದೇರು, ಸಂತೆಮರಹಳ್ಳಿ ಹೋಬಳಿ, ಚಾ.ನಗರ ತಾಲೂಕು, ಡಿ. ಲೋಕೇಶ್ ಬಿನ್ ವಿ. ದಾಸಶೆಟ್ಟಿ, ವಿಜಯಲಕ್ಷ್ಮಿ ಫೈನಾನ್ಸ್, ಶ್ರೀರಾಮ ಕಾಂಪ್ಲೆಕ್ಸ್, ಸಂಪಿಗೆ ರಸ್ತೆ, ಚಾ.ನಗರ.

ಮೇಲ್ಕಂಡ ಪರವಾನಗಿದಾರರು ಪರವಾನಗಿ ಅವಧಿ ಮುಕ್ತಾಯವಾಗಿದ್ದರೂ ಸಹ ಬಹಳ ಕಾಲದಿಂದ ನವೀಕರಿಸಿಕೊಳ್ಳದೇ ಲೇವಾದೇವಿ ಕಾಯಿದೆ ಉಲ್ಲಂಘಿಸಿರುವುದರಿಂದ ಅವರ ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಉದ್ದೇಶಿಸಲಾಗಿದೆ. ಈ ಬಗ್ಗೆ ಪರವಾನಗಿದಾರರಿಗೆ ಅಥವಾ ಗ್ರಾಹಕರು, ಸಾರ್ವಜನಿಕರಿಗೆ ಆಕ್ಷೇಪಣೆಗಳಿದ್ದಲ್ಲಿ 15 ದಿನಗಳೊಳಗೆ ಪೂರಕ ದಾಖಲೆಗಳ ಸಮೇತ ನಗರದ ಜಿಲ್ಲಾಡಳಿತ ಭವನದಲ್ಲಿರುವ ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಸಲ್ಲಿಸಬಹುದು. ತಪ್ಪಿದಲ್ಲಿ ಸದರಿ ಪರವಾನಗಿದಾರರ ಭದ್ರತಾ ಠೇವಣಿಗಳನ್ನು ಕರ್ನಾಟಕ ಲೇವಾದೇವಿ ಕಾಯಿದೆ 1961 ಪ್ರಕರಣ 7 (ಬಿ) ಅನುಸಾರ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ನಂತರ ಸ್ವೀಕೃತವಾಗುವ ಯಾವುದೇ ಗ್ರಾಹಕ ಅಥವಾ ಸಾರ್ವಜನಿಕರ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಜಿಲ್ಲಾ ಲೇವಾದೇವಿ ನಿಬಂಧಕರು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 5ರಂದು ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಣೆ

ಚಾಮರಾಜನಗರ, ಸೆ. 01 (ಕರ್ನಾಟಕ ವಾರ್ತೆ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 5ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಹಕಾರ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ವಿಧಾನಪರಿಷತ್ತಿನ ಉಪಸಭಾಪತಿಗಳಾದ ಮರಿತಿಬ್ಬೇಗೌಡ ಅವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.

ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದೇವಮ್ಮಣ್ಣಿ, ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಎಸ್.ಜಯಣ್ಣ, ಆರ್. ನರೇಂದ್ರ, ಗೋ. ಮಧÀುಸೂದನ್, ಎಸ್. ನಾಗರಾಜು (ಸಂದೇಶ್ ನಾಗರಾಜು) ಆರ್. ಧರ್ಮಸೇನ, ನಗರಸಭೆ ಅಧ್ಯಕ್ಷರಾದ ನಂಜುಂಡಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೈಯದ್ ರಫಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಕೇತಮ್ಮ ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಕೆ.ಎಂ. ಗುರುಮಲ್ಲಮ್ಮ, ನಗರಸಭೆ ಉಪಾಧ್ಯಕ್ಷರಾದ ವಿಜಯಕುಮಾರಿ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಲಲಿತಾ ನಾಗಯ್ಯ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ನಗರದ ಸಂಸ್ಕøತ ಪಾಠಶಾಲೆಯ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ದೀಕ್ಷಿತ್ ಮುಖ್ಯ ಭಾಷಣ ಮಾಡುವರು. ಇದೇವೇಳೆ ನಗರದ ನೂಪುರ ನೃತ್ಯಾಂಜಲಿ ಸಂಸ್ಥೆ ಕಲಾವಿದರು ಅಕ್ಷತಾ ಜೈನ್ ಅವರ ನಿರ್ದೇಶನದಲ್ಲಿ ಕೃಷ್ಣಲೀಲೆ ನೃತ್ಯರೂಪಕವನ್ನು ಪ್ರಸ್ತುತಪಡಿಸುವರೆಂದು ಪ್ರಕಟಣೆ ತಿಳಿಸಿದೆ.

ಗೌಳಿ ಮಹಾದೇವಪ್ಪ ನಿಧನಕ್ಕೆ ಸಚಿವ ಶಿವರಾಜ್ ತಂಗಡಗಿ ಸಂತಾಪ

ಕೊಪ್ಪಳ ಸೆ. 01 (ಕರ್ನಾಟಕ ವಾರ್ತೆ): ಗಂಗಾವತಿ ಮಾಜಿ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದಿ: ಗೌಳಿ ಮಹಾದೇವಪ್ಪ ಅವರ ನಿಧನಕ್ಕೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಗೌಳಿ ಮಹಾದೇವಪ್ಪ ನವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಮಾಜಿ ಶಾಸಕರಾಗಿ, ನಗರಸಭೆ ಸದಸ್ಯರಾಗಿ ಗಂಗಾವತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆ, ಧೀಮಂತ ನಾಯಕರಾಗಿ ಎಲ್ಲ ವರ್ಗದವರೊಡನೆ ಬೆರೆತು ಒಗ್ಗೂಡಿಸಿಕೊಂಡು, ಗಂಗಾವತಿಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ಹೈ-ಕ ವಿಮೋಚನಾ ಚಳುವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಸಂಸ್ಥಾಪನಾ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅವರು, ಶಾಸಕರಾಗಿದ್ದ ಅವಧಿಯಲ್ಲಿ ಶಿಕ್ಷಣ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಗೌಳಿ ಮಹಾದೇವಪ್ಪ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು, ಅವರ ಕುಟುಂಬ ವರ್ಗದವರಿಗೆ ಮತ್ತು ಸಮಸ್ತ ಗಂಗಾವತಿಯ ನಾಗರಿಕರಿಗೆ ನೀಡಲಿ ಎಂದು ಸಚಿವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಾಲ ನ್ಯಾಯ ಕಾಯಿದೆ ಉಲ್ಲಂಘನೆಗೆ ಕ್ರಮ

ಬೆಂಗಳೂರು: ಮಾ, 10 : ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 72 ಸಂಸ್ಥೆಗಳು ನೊಂದಣಿಯಾಗಿದ್ದು, ಈ ಸಂಸ್ಥೆಗಳ ನೋಂದಣಿ ಅವಧಿ ಮುಗಿಯುತ್ತಿರುವುದರಿಂದ ಈ ಸಂಸ್ಥೆಗಳು ಕೂಡ ನವೀಕರಿಸಿಕೊಳ್ಳತಕ್ಕದ್ದು. ತಪ್ಪಿದ್ದಲ್ಲಿ ಸಂಸ್ಥೆಯು ಯಾವುದೇ ಕಾಯಿದೆಯಲ್ಲಿ ನೋಂದಣಿಯಾಗಿದ್ದರೂ ಸಹ ಹಿಂಪಡೆಯಲು ಅಥವಾ ರದ್ದುಪಡಿಸಲು ಕ್ರಮ ಜರುಗಿಸಲಾಗುವುದು. ಅಲ್ಲದೆ ಈ ಸಂಸ್ಥೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದ್ದಲ್ಲಿ ಸಂಸ್ಥೆಯ ಮುಖ್ಯಸ್ಥರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ಸಂಸ್ಥೆಗಳು ನಿಗದಿತ ಅರ್ಜಿ ನಮೂನೆಯನ್ನು ಕಛೇರಿಯ ವೆಬ್‍ಸೈಟ್ www.dcpublr.org ಯಿಂದ ಡೌನ್‍ಲೋಡ್ ಮಾಡಿಕೊಂಡು ಭರ್ತಿ ಮಾಡಿದ ನಮೂನೆಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸುಧಾರಣಾ ಸಂಸ್ಥೆಗಳ ಸಂಕಿರಣ, ಡಾ: ಎಂ.ಹೆಚ್.ಮರೀಗೌಡ ರಸ್ತೆ, ಕಿದ್ವಾಯಿ ಆಸ್ಪತ್ರೆ ಪಕ್ಕ, ಬೆಂಗಳೂರು – 29 ಇಲ್ಲಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ: ವೆಬ್‍ಸೈಟ್ : www.dcpublr.org ಇ.ಮೇಲ್: [email protected] ದೂರವಾಣಿ: 080-26560273.
ಹೋಬಳಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ

ಉಡುಪಿ, ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ):- ಉಡುಪಿ ಜಿಲ್ಲೆಯಲ್ಲಿ ಆಧಾರ್ ನೋಂದಣಿ ಮಾಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಆಡಳಿತ ಕೇಂದ್ರದಿಂದ 4 ಮೊಬೈಲ್ ಕಿಟ್‍ಗಳು ಜಿಲ್ಲೆಗೆ ಸರಬರಾಜು ಆಗಿದೆ. ಇವುಗಳನ್ನು ಪಡುಬಿದ್ರೆ, ಅಮಾಸೆಬೈಲ್, ಈದು ಗ್ರಾಮ ಪಂಚಾಯತ್‍ಗಳಲ್ಲಿ ಹಾಗೂ ಉಡುಪಿ ನಗರ ಪ್ರದೇಶದಲ್ಲಿ ಕ್ಯಾಂಪ್‍ಗಳನ್ನು ಆಯೋಜಿಸಿ ಆಧಾರ್ ನೋಂದಣಿ ಕಾರ್ಯ ಪ್ರಗತಿಗೆ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕರು ಈ ಆಧಾರ್ ಕೇಂದ್ರಗಳ ಸಹಕಾರವನ್ನು ಪಡೆದು ನೋಂದಣಿ ಪ್ರಕ್ರಿಯೆಯಲ್ಲಿ ಸಹಕರಿಸಲು ಕೋರಿದೆ.

ಜಿಲ್ಲೆಯ ಕಾಪು, ಕೋಟ, ವಂಡ್ಸೆ, ಅಜೆಕಾರು ಹೋಬಳಿ ಕೇಂದ್ರಗಳಲ್ಲಿರುವ ಅಟಲ್‍ಜಿ ಜನಸ್ನೇಹಿ ಕೇಂದ್ರ ಹಾಗೂ ಉಡುಪಿ ಕುಂದಾಪುರ, ಕಾರ್ಕಳ,ಬ್ರಹ್ಮಾವರ, ಬೈಂದೂರು ತಾಲೂಕು ಕಚೇರಿಯ ಅಟಲ್‍ಜಿ ಜನಸ್ನೇಹಿ ಕೇಂದ್ರಗಳಲ್ಲಿ ಆಧಾರ್ ನೋಂದಣಿ ಕಾರ್ಯ ನಡೆಸಲಾಗುತ್ತಿದೆ.

ಹಿರಿಯಡಕ : ಮಾದಕ ವ್ಯಸನಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ

ಉಡುಪಿ, ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ):- ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ಘಟಕಗಳ ವತಿಯಿಂದ ಮಾದಕ ವ್ಯಸನಗಳ ದುಷ್ಪರಿಣಾಮಗಳ ಅರಿವು ಕಾರ್ಯಕ್ರಮ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಉಡುಪಿಯ ಡಾ|| ಎ.ವಿ. ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ಆರೋಗ್ಯಕರ ಆಹಾರ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ಮೊಬೈಲ್- ಇಂಟರ್‍ನೆಟ್‍ಗಳ ಚಟದಿಂದಾಗುವ ದುಷ್ಪರಿಣಾಮಗಳನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಇವುಗಳಿಂದ ದೂರವಿರಲು ಸಲಹೆ ನೀಡಿದರು. ಹದಿ-ಹರೆಯದ ವಿದ್ಯಾರ್ಥಿಗಳು ಡ್ರಗ್ಸ್, ಮದ್ಯ, ಸಿಗರೇಟು -ಮುಂತಾದ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಹಣ, ಆರೋಗ್ಯಗಳೆರಡನ್ನೂ ಕಳೆದುಕೊಂಡು ಜೀವನದ ಅಧಃಪತನಕ್ಕೆ ತಾವೇ ಕಾರಣರಾಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಎಚ್ಚರಿಕೆಯಲ್ಲಿ ತಾವಿರಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್.ಎಸ್.ಎಸ್. ಘಟಕದ ಯೋಜನಾಧಿಕಾರಿಗಳಾದ ರಾಜೇಶ್ ಶೆಟ್ಟಿ ಜಿ. ಹಾಗೂ ಶ್ರೀಮತಿ ಸುಷ್ಮಾ ರಾವ್ ಕೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವಿದ್ಯಾರ್ಥಿನಿ ಕು| ಕಲ್ಪಿತಾ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರೆ, ಸ್ವಾತಿಕುಮಾರಿ ಸ್ವಾಗತಿಸಿ, ವಿದ್ಯಾರ್ಥಿ ರಾಜೇಶ್ ವಂದಿಸಿದರು.

ಸಭಾಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಮಾದಕವಸ್ತುಗಳ ದುಷ್ಪರಿಣಾಮಗಳ ಅರಿವು ಮೂಡಿಸುವ ಸಲುವಾಗಿ ಕಾಲೇಜಿನಿಂದ ಹೊರಟು ಹಿರಿಯಡಕದ ಕೋಟ್ನಕಟ್ಟೆಯವರೆಗೆ ಜಾಥಾ ನಡೆಸಿದರು.

ಭತ್ತದ ಬೆಳೆಯಲ್ಲಿ ಬೀಜದಿಂದ ಬೀಜದವರೆಗೆ ಯಾಂತ್ರೀಕೃತ ಬೇಸಾಯ

ಉಡುಪಿ, ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ):- ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರದಲ್ಲಿ ಇತ್ತೀಚೆಗೆ “ಭತ್ತದ ಬೆಳೆಯಲ್ಲಿ ಬೀಜದಿಂದ ಬೀಜದವರೆಗೆ ಯಾಂತ್ರೀಕೃತ ಬೇಸಾಯ” ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಡಾ. ನವೀನ್ ಎನ್.ಈ., ವಿಷಯತಜ್ಞರು (ಬೇಸಾಯಶಾಸ್ತ್ರ), ಕೆ.ವಿ.ಕೆ., ಬ್ರಹ್ಮಾವರ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಡಾ. ಎಂ. ಹನುಮಂತಪ್ಪ, ಸಹ ಸಂಶೋಧನಾ ನಿರ್ದೇಶಕರು, ವ.ಕೃ.ತೋ.ಸಂ.ಕೇ., ಬ್ರಹ್ಮಾವರ ಇವರು ಕರಾವಳಿ ಭಾಗದಲ್ಲಿ ರೈತರು ಅನುಭವಿಸುವ ಸಮಸ್ಯೆಗಳಲ್ಲಿ ಅತೀ ಮುಖ್ಯವಾದಯಾವುದೆಂದರೆ ಕೂಲಿಯಾಳುಗಳ ಸಮಸ್ಯೆ. ಈ ಸಮಸ್ಯೆಯನ್ನು ನಿವಾರಿಸಲು ಬೇಕಾದ ಬೇಸಾಯ ಕ್ರಮವೇ ಯಾಂತ್ರೀಕೃತ ಭತ್ತದ ಬೇಸಾಯ. ಆದುದರಿಂದ ಮುಂದಿನ ದಿನಗಳಲ್ಲಿ ರೈತರು ಯಾವುದೇ ಸಮಸ್ಯೆಗಳಿಲ್ಲದೆ ಚಾಪೆನೇಜಿ ತಯಾರಿಸಿ ಯಾವ ರೀತಿ ಯಾಂತ್ರೀಕೃತ ಭತ್ತÀ ನಾಟಿ, ಗೊಬ್ಬರದ ಬಳಕೆ, ಬೀಜದ ಆಯ್ಕೆ, ಮೊಳಕೆ ಪ್ರಮಾಣ ಮತ್ತು ಕೋನೋವೀಡರ್‍ನ್ನು ಭತ್ತದ ಬೆಳೆಯಲ್ಲಿ ಹೇಗೆ ಬಳಸಿಕೊಳ್ಳಬೇಕು, ಶ್ರೀ ಪದ್ಧತಿ ಭತ್ತದ ಬೆಳೆ ಬಗ್ಗೆ ಮತ್ತು ಭತ್ತದ ಬೇಸಾಯದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಿ ಉತ್ತಮವಾದ ಯಾಂತ್ರೀಕೃತ ಭತ್ತದ ನಾಟಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಎಸ್. ಯು. ಪಾಟೀಲ್, ಸಹ ವಿಸ್ತರಣಾ ನಿರ್ದೇಶಕರು, ವ.ಕೃ.ತೋ.ಸಂ.ಕೇ., ಬ್ರಹ್ಮಾವರ ಇವರು ಯಾಂತ್ರೀಕೃತ ಬೇಸಾಯ ಕ್ರಮ ಅಳವಡಿಸುವ ಮೊದಲು ಯಂತ್ರದ ಬಗ್ಗೆ, ಯಂತ್ರವನ್ನು ಹೇಗೆ ಉಪಯೋಗಿಸಬೇಕು ಇದರ ಪ್ರಯೋಜನವೇನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಯಾಂತ್ರೀಕೃತ ಬೇಸಾಯ ಪದ್ಧತಿಯನ್ನು ಅಳವಡಿಸಬೇಕೆಂದು ತಿಳಿಸಿದರು ಹಾಗೂ ಯಾಂತ್ರೀಕೃತ ಕೃಷಿಯಲ್ಲಿ ಯಂತ್ರಗಳ ಬಗ್ಗೆ ಅದರ ಕಾರ್ಯ ವೈಕರಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ ಮತ್ತು ಚಾಪೆನೇಜಿ ಮಾಡುವ ರೀತಿ ಹಾಗೂ ಮಣ್ಣಿನ ಹದ, ಗದ್ದೆಯಲ್ಲಿ ನಿಲ್ಲುವ ನೀರು ಭತ್ತದ ಬೆಳೆಗೆ ಬೇಕಾದ ಪೋಷಕಾಂಶಗಳ ಬಗ್ಗೆ ವಿವರಿಸಿದರು. ಅಧ್ಯಕ್ಷರಾದ ಡಾ. ಧನಂಜಯ ಬಿ. ಕಾರ್ಯಕ್ರಮ ಸಂಯೋಜಕರು, ಕೆ.ವಿ.ಕೆ., ಬ್ರಹ್ಮಾವರ ಇವರು ಉಡುಪಿ ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ ಮೊದಲಿಗಿಂತ ಇತ್ತೀಚಿನ ದಿನಗಳಲ್ಲಿ ತುಂಬಾ ಕಡಿಮೆಯಾಗುತ್ತಾ ಬಂದಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಭತ್ತದ ಕೊರೆತೆಯ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಆದ್ದರಿಂದ ಕರಾವಳಿಯಲ್ಲಿ ಪ್ರತಿಯೊಬ್ಬರು ತಮ್ಮ ಮನೆಗೆ ಬೇಕಾಗುವಷ್ಟು ಭತ್ತದ ಬೆಳೆಯನ್ನಾದರೆ ಬೆಳೆದರೆ ಮುಂದಿನ ದಿನಗಳಲ್ಲಿ ಉಂಟಾಗುವ ಭತ್ತದ ಕೊರತೆಯನ್ನು ನಿವಾರಿಸಬಹುದು ಹಾಗೂ ಈಗಿನ ಭತ್ತದ ಬೇಸಾಯಕ್ಕೆ ಯಾಂತ್ರೀಕೃತ ಭತ್ತದ ಬೇಸಾಯ ಪದ್ಧತಿಯ ಅವಶ್ಯಕತೆ ಬಹಳಷ್ಟಿದೆ ಅದುದರಿಂದ ಉತ್ತಮ ರೀತಿಯ ಯಾಂತ್ರೀಕೃತ ಭತ್ತದ ಪದ್ಧತಿಯನ್ನು ತಮ್ಮ ಜಮೀನಿನಲ್ಲಿ ಅಳವಡಿಸಿ ಎಂದು ರೈತರಿಗೆ ಕರೆ ನೀಡಿದರು. ಸ್ವಾಗತವನ್ನು ಶ್ರೀ ಚೈತನ್ಯ ಹೆಚ್. ಎಸ್ ವಿಷಯತಜ್ಞರು(ತೋಟಗಾರಿಕೆ), ಕೆ.ವಿ.ಕೆ., ಬ್ರಹ್ಮಾವರ, ನಿರೂಪಣೆಯನ್ನು ಶ್ರೀ. ಸಂಜೀವ್ ಕ್ಯಾತಪ್ಪನವರು ತರಬೇತಿ ಸಹಾಯಕರು ಮತ್ತು ವಂದನಾರ್ಪಣೆಯನ್ನು ಶ್ರೀ. ಶ್ರೀನಿವಾಸ್ ಹೆಚ್. ಹುಲಕೋಟಿ ಇವರು ನೇರವೇರಿಸಿದರು. ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು ಶಿಭಿರಾರ್ಥಿಗಳು ಭಾಗವಹಿಸಿ ಈ ತರಬೇತಿಯ ಪ್ರಯೋಜನ ಪಡೆದುಕೊಂಡರು.

ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಉಡುಪಿ, ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ):- ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು. ಹಾಕಿಮಾಂತ್ರಿಕ ಧ್ಯಾನ್‍ಚಂದ್ ಇವರ ಹುಟ್ಟಿದ ದಿನವನ್ನು ದೇಶದಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತಿದೆ. ನಮ್ಮ ಕಾಲೇಜಿನಲ್ಲಿ ಸಹ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಹಿರಿಯರ ವಿಭಾಗದ ಅಂತಾರಾಷ್ಟ್ರೀಯ ಕ್ರೀಡಾಪಟುವಾದಂತಹ ಶ್ರೀಮತಿ ಅರುಣಕಲಾ ಎಸ್. ರಾವ್ ಇವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ ತಮ್ಮ 63ನೇ ಇಳಿ ವಯಸ್ಸಿನಲ್ಲಿಯೂ ಕ್ರೀಡಾ ವಿಭಾಗದಲ್ಲಿ ಮಾಡಿದ ಸಾಧನೆಯನ್ನು ವಿವರಿಸಿ, ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ನೀಡಿದರು. ಗ್ರಾಮೀಣ ವಿದ್ಯಾರ್ಥಿಗಳು ಶಾರೀರಿಕವಾಗಿ ಬಲಿಷ್ಠರಾಗಿರುತ್ತಾರೆ. ಅವರು ಸತತವಾಗಿ ಪ್ರಯತ್ನ ಮಾಡಿದ್ದಲ್ಲಿ ಕ್ರೀಡೆಯಲ್ಲಿ ನಗರದ ವಿದ್ಯಾರ್ಥಿಗಳನ್ನು ಮೀರಿಸಿ ಉತ್ತಮ ಸಾಧನೆಯನ್ನು ತೋರಬಹುದು ಎಂದರು. ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವಾಗ ಪ್ರಬಲ ಎದುರಾಳಿಗಳಿರಬಹುದೆಂಬ ಅಂಜಿಕೆ ಹಾಗು ಹಿಂಜರಿಕೆಯನ್ನು ತೋರದೆ ಧೈರ್ಯವಾಗಿ ಭಾಗವಹಿಸಿದ್ದಲ್ಲಿ ಕ್ರೀಡೆಯಲ್ಲಿ ಉತ್ತುಂಗಗಕ್ಕೆ ಏರಬಹುದು ಎಂದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಮಾತನಾಡಿ ಸೋಲೆ ಗೆಲುವಿಗೆ ಸೋಪಾನ, ಸೋಲಿನ ಭಯದಿಂದಾಗಿ ಗೆಲ್ಲುವ ಅವಕಾಶದಿಂದಾಗಿ ವಂಚಿತರಾಗಬಾರದು. ಶ್ರೀಮತಿ ಅರುಣಕಲಾ ಎಸ್. ರಾವ್ ಇವರು ಕ್ರೀಡಾಳುಗಳಿಗೆ ಮಾದರಿಯಾಗಿದ್ದಾರೆಂದು ಕಿವಿಮಾತು ಹೇಳಿದರು. ದೈಹಿಕ ಶಿಕ್ಷಣ ಬೋಧಕರಾದ ಶ್ರೀಮತಿ ಸವಿತಾ ಇವರು ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲರನ್ನು ಸ್ವಾಗತಿಸಿದರು. ಕ್ರೀಡಾ ಕಾರ್ಯದರ್ಶಿಯಾದ ಕುಮಾರಿ ವಾಣಿಶ್ರೀ ಅತಿಥಿಗಳ ಕಿರುಪರಿಚಯ ನೀಡಿದರು. ಕು| ಸುಜಾತ ನಿರೂಪಣೆ ಗೈದು ಸುಜಿತ್ ಕುಮಾರ್ ವಂದಿಸಿದರು.

ಹಿಂಗಾರು ರಸಗೊಬ್ಬರ ನೀಡುವ ಕುರಿತು

ಚಿಕ್ಕಮಗಳೂರು, ಸೆ.01:- ತೋಟಗಾರಿಕೆ ಇಲಾಖೆ ವತಿಯಿಂದ ಹಿಂಗಾರು ಮಳೆ ಪ್ರಾರಂಭವಾಗುವ ಅವಧಿಯಾಗಿದ್ದು, ಜಿಲ್ಲೆಯ ರೈತರು ಬೆಳೆದಿರುವ ತೋಟಗಾರಿಕೆ ಬೆಳೆಗಳಿಗೆ ಈ ಕೆಳಗೆ ತಿಳಿಸಿರುವ ಬೆಳೆ, ಬೆಳೆಯ ವಯಸ್ಸು ಮತ್ತು ರಸಗೊಬ್ಬರದ ಪ್ರಮಾಣವನ್ನು ನೀಡಬಹುದಾಗಿದೆ.

ತೆಂಗು (ಪ್ರತಿ 4 ವರ್ಷ ಮತ್ತು ಮೇಲ್ಪಟ್ಟ ಗಿಡಕ್ಕೆ): ಯೂರಿಯಾ 715 ಗ್ರಾಂ, ಸೂಪರ್ 1250 ಗ್ರಾಂ, ಪೊಟ್ಯಾಷ್ 1330 ಗ್ರಾಂ, ಅಡಿಕೆ (ಪ್ರತಿ 3 ವರ್ಷ ಮತ್ತು ಮೇಲ್ಪಟ್ಟ ಗಿಡಕ್ಕೆ): ಯೂರಿಯಾ 110 ಗ್ರಾಂ, ಸೂಪರ್ 125 ಗ್ರಾಂ, ಪೊಟ್ಯಾಷ್ 120 ಗ್ರಾಂ, ಕರಿಮೆಣಸು (ಪ್ರತಿ 3 ವರ್ಷ ಮತ್ತು ಮೇಲ್ಪಟ್ಟ ಗಿಡಕ್ಕೆ): ಯೂರಿಯಾ 110 ಗ್ರಾಂ, ಸೂಪರ್ 125 ಗ್ರಾಂ, ಪೊಟ್ಯಾಷ್ 120 ಗ್ರಾಂ, ಕಿತ್ತಳೆ (ಪ್ರತಿ ನಾಟಿ ಮಾಡಿ 3 ವರ್ಷ ಮೇಲ್ಪಟ್ಟ ಗಿಡಗಳಿಗೆ ಪ್ರಮಾಣವನ್ನು ಮಾರ್ಚ್, ಜೂನ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ನೀಡುವುದು): ಯೂರಿಯಾ 400 ಗ್ರಾಂ, ಸೂಪರ್ 770 ಗ್ರಾಂ, ಪೊಟ್ಯಾಷ್ 305 ಗ್ರಾಂ, ಬಾಳೆ (ಪ್ರತಿ ಕಂದು ಬಾಳೆ ನಾಟಿ ಮಾಡಿದ 2, 4 ಮತ್ತು 6 ನೇ ತಿಂಗಳಲ್ಲಿ ಗಿಡಕ್ಕೆ): ಯೂರಿಯಾ 130 ಗ್ರಾಂ, ಸೂಪರ್ 225 ಗ್ರಾಂ, ಪೊಟ್ಯಾಷ್ 125 ಗ್ರಾಂ, ಸಪೋಟ (ಪ್ರತಿ 11 ವರ್ಷ ಮತ್ತು ಮೇಲ್ಪಟ್ಟ ಮರÀಕ್ಕೆ): ಯೂರಿಯಾ 435 ಗ್ರಾಂ, ಸೂಪರ್ 500 ಗ್ರಾಂ, ಪೊಟ್ಯಾಷ್ 125 ಗ್ರಾಂ ಹಾಗೂ ಗೋಡಂಬಿ (ಪ್ರತಿ 4 ವರ್ಷ ಮತ್ತು ಮೇಲ್ಪಟ್ಟ ಮರÀಕ್ಕೆ): ಯೂರಿಯಾ 543 ಗ್ರಾಂ, ಸೂಪರ್ 780 ಗ್ರಾಂ, ಪೊಟ್ಯಾಷ್ 207 ಗ್ರಾಂ ಹಾಕಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಕೇಂದ್ರ, ಚಿಕ್ಕಮಗಳೂರು ದೂ.ಸಂ.08262-228267 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.

ಸೆ.10ಮತ್ತು 11ರಂದು ಕಾರವಾರ ನೌಕಾನೆಲೆಯಲ್ಲಿ ನೇಮಕಾತಿ

ಕಾರವಾರ, ಸೆ.01: ಅರಗಾದಲ್ಲಿರುವ ಕಾರವಾರ ನೌಕಾನೆಲೆಯಲ್ಲಿ ಎಸ್‍ಎಸ್‍ಆರ್ ಖಾಲಿ ಹುದ್ದೆಗಳಿಗೆ ನೇಮಕಾತಿ ಸೆಪ್ಟಂಬರ್ 10ಮತ್ತು 11ರಂದು ನಡೆಯಲಿದೆ.

ಸೆ.10ರಂದು ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ, ದೈಹಿಕ ಮತ್ತು ವೈದ್ಯಕೀಯ ತಪಾಸಣೆ ನಡೆಯಲಿದೆ. ಸೆ.10ರಂದು ಪರೀಕ್ಷೆ ಪೂರ್ಣಗೊಳ್ಳದ ಅಭ್ಯರ್ಥಿಗಳಿಗೆ ಸೆ.11ರಂದು ಪರೀಕ್ಷೆ ನಡೆಸಲಾಗುವುದು. ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಿಜ್ಞಾನ ಮ್ಯಾತ್ಸ್ ಮತ್ತು ಫಿಸಿಕ್ಸ್‍ನೊಂದಿಗೆ (ಮತ್ತು ಕೆಮಿಸ್ಟ್ರಿ, ಬಯೋಲಜಿ ಮತ್ತು ಕಂಪ್ಯೂಟ್ ಸೈನ್ಸ್ ಕನಿಷ್ಟ ಒಂದು ವಿಷಯ) ಪಾಸಾಗಿರಬೇಕು. ಫೆಬ್ರವರಿ ಒಂದು 1995 ಹಾಗೂ 31 ಜನವರಿ 1999ರ ನಡುವೆ ಜನಿಸಿರಬೇಕು.

ಪರೀಕ್ಷಾ ಪತ್ರಿಕೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುವುದು. ಇಂಗ್ಲಿಷ್, ವಿಜ್ಞಾನ, ಮೆತಮೆಟಿಕ್ಸ್, ಮತ್ತು ಸಾಮಾನ್ಯ ಜ್ಞಾನದ ಅಬ್ಜೆಟ್ಕಿವ್ ಮಾದಿರಯ ನಾಲ್ಕು ಪ್ರಶ್ನೆ ಪತ್ರಿಕೆಗಳಿರುವುದು. ಪ್ರಶ್ನೆ ಪತ್ರಿಕೆಗೆ ಒಂದು ಗಂಟೆ ಉತ್ತರಿಸಲು ಅವಧಿಯಿರುವುದು.

ದೈಹಿಕ ಪರೀಕ್ಷೆಯಲ್ಲಿ 7ನಿಮಿಷಗಳ ಅವಧಿಯಲ್ಲಿ 1.6ಕಿಮಿ ಪೂರ್ಣಗೊಳಿಸಬೇಕು. 20 ಉಟಕ್-ಬೈಟಕ್ ಮತ್ತು 10ಪುಷ್ ಅಪ್ ಪೂರ್ಣಗೊಳಿಸಬೇಕು. ದೈಹಿಕ ಪರೀಕ್ಷೆಗೆ ಸ್ಪೋಟ್ಸ್ ಶೂ ಮತ್ತು ಶಾಟ್ಸ್ ಧರಿಸಿರಬೇಕು. ಕನಿಷ್ಟ 157ಸೆಮಿ ಎತ್ತರ ಹಾಗೂ ಅದಕ್ಕೆ ತಕ್ಕ ಎದೆಯ ಸುತ್ತಳತೆ ಹೊಂದಿರಬೇಕು. ನೇಮಕಾತಿಗೆ ಹಾಜರಾಗುವ ಸಂದರ್ಭದಲ್ಲಿ ಮೆಟ್ರಿಕುಲೇಶನ್ ಸರ್ಟಿಫಿಕೇಟ್, ದ್ವಿತೀಯ ಪಿಯುಸಿ ಸರ್ಟಿಫಿಕೇಟ್ ಹಾಗೂ ಅಂಕಪಟ್ಟಿ, ಎನ್‍ಸಿಸಿ ಸರ್ಟಿಫಿಕೇಟ್ (ಇದ್ದರೆ), ಡೊಮೆಸೈಲ್ ಸರ್ಟಿಫಿಕೇಟ್ ಹಾಜರುಪಡಿಸಬೇಕು. ಎಲ್ಲಾ ದಾಖಲೆಗಳ ಮೂಲ ಹಾಗೂ ಅಟೆಸ್ಟೆಡ್ ಪ್ರತಿಗಳನ್ನು ತರಬೇಕು.

ಹೆಚ್ಚಿನ ಮಾಹಿತಿಗಾಗಿ ಐಎನ್‍ಎಸ್ ಕದಂಬ, ಅರಗಾ ಮುಖ್ಯಗೇಟ್, ನೌಕಾನೆಲೆ ಕಾರವಾರ, ದೂರವಾಣಿ ಸಂಖ್ಯೆ 08382-231251, 231250 ಹಾಗೂ ಸೆಲೆಬಸ್‍ಗಾಗಿ ವೆಬ್‍ಸೈಟ್ www.joinindiannavy.gov.in ಸಂಪರ್ಕಿಸಬಹುದು.

ಬರ್ಗಿ ಟ್ಯಾಂಕರ್ ದುರಂತ: ಸಚಿವ ಆರ್.ವಿ.ದೇಶಪಾಂಡೆ ಸೂಚನೆ

ಕಾರವಾರ ಸೆ.01: ಕುಮಟಾ ಸಮೀಪದ ಬರ್ಗಿ ಗ್ರಾಮದ ಬಳಿ ಮಂಗಳವಾರ ಸಂಭವಿಸಿದ ಟ್ಯಾಂಕರ್ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ, ಗಾಯಗೊಂಡವರಿಗೆ ಹಾಗೂ ಆಸ್ತಿಪಾಸ್ತಿ ಹಾನಿಯಾದವರಿಗೆ ಸೂಕ್ತ ಪರಿಹಾರ ಒದಗಿಸಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಳಗಿನ ಜಾವ ಗ್ಯಾಸ್ ಟ್ಯಾಂಕರ್ ಅಪಘಾತಕ್ಕೀಡಾಗಿ ಬೆಂಕಿ ಅವಘಡ ಸಂಭವಿಸಿರುವುದು ದುರ್ದೈವದ ಸಂಗತಿ. ಎಲ್ಲಾ ಗಾಯಾಳುಗಳಿಗೆ ಉಚಿತವಾಗಿ ತಕ್ಷಣ ಚಿಕಿತ್ಸೆ ನೀಡುವಂತೆ ಉತ್ತರಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಲಾಗಿದೆ. ತುರ್ತು ಚಿಕಿತ್ಸೆಗಾಗಿ ಮಣಿಪಾಲ ಅಥವಾ ಮಂಗಳೂರಿಗೆ ಸಾಗಿಸಲು ಅಂಬ್ಯುಲೆನ್ಸ್ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಹಾಗೂ ಜಿಲ್ಲಾಡಳಿತದಿಂದ ಎಲ್ಲಾ ನೆರವು ಒದಗಿಸಲು ತಕ್ಷಣ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇದೊಂದು ಅತ್ಯಂತ ಅಘಾತಕಾರಿ ಘಟನೆಯಾಗಿದ್ದು, ಗಾಯಾಳುಗಳು ಆದಷ್ಟು ಶೀಘ್ರವಾಗಿ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಅವರು ಹಾರೈಸಿದ್ದಾರೆ.

ಬೆಳಗಾವಿಗೆ ನಗರಾಭಿವೃದ್ಧಿ ಸಚಿವರು

ಬೆಳಗಾವಿ: ಸೆಪ್ಟೆಂಬರ್ 01 :(ಕರ್ನಾಟಕ ವಾರ್ತೆ):- ಮಾನ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ವಿನಯಕುಮಾರ್ ಸೊರಕೆ ಅವರು ಬುಧವಾರ ಸೆಪ್ಟೆಂಬರ್ 02 ರಂದು ಬೆಳಿಗ್ಗೆ 11-25 ಗಂಟೆಗೆ ಬೆಳಗಾವಿಗೆ ಆಗಮಿಸುವರು. ನಂತರ ಬೆಳಿಗ್ಗೆ 11-30 ಗಂಟೆಗೆ ನಗರದ ಕೆ.ಎಲ್.ಇ. ಕನ್ವೆನ್‍ಶನ್ ಸೆಂಟರ್‍ನಲ್ಲಿ 4ನೇ ಕ್ರೆಡಾಯಿ ಸ್ಟೇಟ್‍ಕಾನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.

ನಂತರ ಮಧ್ಯಾಹ್ನ 2 ಗಂಟೆಗೆ ಸಚಿವರು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡುವರು. ನಂತರ 3-20 ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳಸುವರು.

ಗ್ರಾಮ ಪಂಚಾಯಿತಿ ಅಧಿಸೂಚನೆ ಪ್ರಕಟ

ಬೆಳಗಾವಿ: ಸೆಪ್ಟೆಂಬರ್ 01 :(ಕರ್ನಾಟಕ ವಾರ್ತೆ):- ಬೆಳಗಾವಿ ಜಿಲ್ಲೆಯ ರಾಯಬಾಗ,ಹುಕ್ಕೇರಿ,ರಾಮದುರ್ಗ ತಾಲೂಕು ಗ್ರಾಮಗಳ ಗ್ರಾಮ ಪಂಚಾಯಿತಿ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳ ಕುರಿತು ಜಿಲ್ಲಾಧಿಕಾರಿ ಶ್ರೀ. ಎನ್. ಜಯರಾಮ್ ಅವರು ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ರಾಯಬಾಗ ತಾಲೂಕಿನ ನಂದಿಕುರಳಿ ಗ್ರಾಮವನ್ನು ಪಂಚಾಯತಿ ಕೇಂದ್ರ ಸ್ಥಾನವನ್ನಾಗಿ (ನಂದಿಕುರಳಿ ಒಳಗೊಂಡ ಗ್ರಾಮಗಳು) ಹಾಗೂ ಕೆಂಪಟ್ಟಿ ಗ್ರಾಮವನ್ನು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ ( ಕೆಂಪಟ್ಟಿ ಒಳಗೊಂಡ) ಗ್ರಾಮವನ್ನು ಪಂಚಾಯಿತಿ ಕೇಂದ್ರಸ್ಥಾನವೆಂದು ಅಧಿಸೂಚನೆ ಹೊರಡಿಸಲಾಗಿದೆ.

ಅದರಂತೆ ಹುಕ್ಕೇರಿ ತಾಲೂಕಿನ ಗುಡಸ ಗ್ರಾಮವನ್ನು ಪಂಚಾಯತಿ ಕೇಂದ್ರ ಸ್ಥಾನವನ್ನಾಗಿ (ಗುಡಸ ಒಳಗೊಂಡ ಗ್ರಾಮಗಳು) ಹಾಗೂ ಶಿರಡಾಣ ಗ್ರಾಮವನ್ನು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ ( ಶಿರಡಾಣ, ಝಂಗಟಿಹಾಳ ಒಳಗೊಂಡ) ಗ್ರಾಮವನ್ನು ಪಂಚಾಯಿತಿ ಕೇಂದ್ರಸ್ಥಾನವೆಂದು ಅಧಿಸೂಚನೆ ಹೊರಡಿಸಲಾಗಿದೆ.
ಅದರಂತೆ ರಾಮದುರ್ಗ ತಾಲೂಕಿನ ಮುದೇನೂರÀ ಗ್ರಾಮವನ್ನು ಪಂಚಾಯತಿ ಕೇಂದ್ರ ಸ್ಥಾನವನ್ನಾಗಿ ( ಮುದೇನೂರ, ಗೋಕುಲನಗರ ಒಳಗೊಂಡ ಗ್ರಾಮಗಳು) ಹಾಗೂ ಓಬಳಾಪೂರ ಗ್ರಾಮವನ್ನು ಗ್ರಾಮ ಪಂಚಾಯತಿ ಕೇಂದ್ರ ಸ್ಥಾನ (ಓಬಳಾಪೂರ, ಸೊಪ್ಪಡ್ಲ ಹಾಗೂ ವೆಂಕಟೇಶ್ವರ ನಗರÀ ಒಳಗೊಂಡ) ಗ್ರಾಮವನ್ನು ಪಂಚಾಯಿತಿ ಕೇಂದ್ರಸ್ಥಾನವೆಂದು ಅಧಿಸೂಚನೆ ಹೊರಡಿಸಲಾಗಿದೆ.

ಈ ಅಧಿಸೂಚನೆಯಿಂದ ಬಾಧಿತರಾಗಬಹುದಾದ ವ್ಯಕ್ತಿಗಳು ಬರುವ ಸೆಪ್ಟೆಂಬರ್ 9 ರೊಳಗಾಗಿ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಶ್ರೀ. ಎನ್. ಜಯರಾಮ್ ಅವರು ತಿಳಿಸಿದ್ದಾರೆ.

ದಸರಾ ಕ್ರೀಡಾಕೂಟ ಮುಂದೂಡಿಕೆ

ಮಂಗಳೂರು, ಸೆಪ್ಟಂಬರ್ 1. (ಕರ್ನಾಟಕ ವಾರ್ತೆ): ಸೆ.2ರಂದು ನಡೆಯಬೇಕಾಗಿದ್ದ ಮಂಗಳೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಕಾರ್ಮಿಕರ ಮುಷ್ಕರ ನಿಮಿತ್ತ ಮುಂದೂಡಲಾಗಿದೆ, ಸದರಿ ತಾಲೂಕು ದಸರಾ ಕ್ರೀಡಾಕೂಟವನ್ನು ಸಪ್ಟೆಂಬರ್ 7 ರಂದು ನಡೆಯಲಿದೆ. ಸೆ.3 ರಂದು ಮಂಗಳೂರು ತಾಲೂಕು ಮಟ್ಟದ ಗ್ರಾಮೀಣ ಮಟ್ಟದ ಕ್ರೀಡಾಕೂಟವು ನಡೆಯಲಿದೆ ಎಂದು ಸಹಾಯಕ ಯುವಸಬಲೀಕರಣ ಮತ್ತು ಕ್ರೀಡಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪಿಲಿಕುಲ: ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು

ಮಂಗಳೂರು, ಸೆಪ್ಟಂಬರ್ 1. (ಕರ್ನಾಟಕ ವಾರ್ತೆ): ಸೆ. 13ರಂದು ಪಿಲಿಕುಲ ಮತ್ಸ್ಯಾಲಯದ ಉದ್ಘಾಟನಾ ಸಮಾರಂಭವು ಪಿಲಿಕುಲ ದೋಣಿ ವಿಹಾರ ಕೇಂದ್ರದಲ್ಲಿ ನೆರವೇರಲಿದೆ. ಈ ನಿಮಿತ್ತವಾಗಿ ಮೀನು ತಳಿಗಳ ಬಗ್ಗೆ ಅರಿವು ಮೂಡಿಸಲು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಸೆ. 8ರಂದು ಪದವಿ ವಿದ್ಯಾಥಿಗಳಿಗೆ ಭಾಷಣ ಸರ್ಧೆ ಹಾಗೂ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯು ಮೀನುಗಾರಿಕಾ ಕಾಲೇಜಿನಲ್ಲಿ ನಡೆಯಲಿದೆ. ಸೆ. 13ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ-ಪೈಂಟಿಂಗ್ ಸ್ಪರ್ಧೆಯು ಪಿಲಿಕುಲ ಅರ್ಬನ್ ಹಾಥ್‍ನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳಿಗಾಗಿ www.pilikula.com ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ನಾರಿಶಕ್ತಿ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಸೆಪ್ಟಂಬರ್ 1. (ಕರ್ನಾಟಕ ವಾರ್ತೆ): ಕೇಂದ್ರ ಸರ್ಕಾರದಿಂದ ನೀಡಲ್ಪಡುವ 2015 ನೇ ಸಾಲಿನ ನಾರಿಶಕ್ತಿ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಪುರಸ್ಕಾರವನ್ನು ಮಹಿಳೆಯರಿಗಾಗಿ ಸಾಮಾಜಿಕ ಆರ್ಥಿಕ ಸಬಲೀಕರಣ ಅಭಿವೃದ್ಧಿ ಕಾರ್ಯದಲ್ಲಿ ಉನ್ನತ ಮಟ್ಟದ ಸಾಧನೆಗಾಗಿ ಈ ಕೆಳಗಿನ ಐತಿಹಾಸಿಕ ಸಾಧನೆ ಮಾಡಿದ ಮಹಿಳೆಯರ ಹೆಸರಿನಲ್ಲಿ 7 ಪ್ರಶಸ್ತಿಗಳನ್ನು ಸರಕಾರಿ/ಖಾಸಗಿ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ರಾಷ್ಟ್ರಮಟ್ಟದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನೀಡಲಾಗುತ್ತದೆ. ಪ್ರಶಸ್ತಿಯು ರೂ.2 ಲP್ಪ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಹಿಂಸೆ ವಿರುದ್ಧ ಧೈರ್ಯ ಪ್ರದರ್ಶಿಸಿದ ವ್ಯಕ್ತಿಗಳಿಗೆ ನೀಡಲಾಗುವ ಪ್ರಶಸ್ತಿಯು ರೂ.1.00 ಲಕ್ಷದ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಅರ್ಜಿಯೊಂದಿಗೆ ಸಾಧನೆಗಳ ಪ್ರಸ್ತಾವನೆಯನ್ನು ದ್ವಿ-ಪ್ರತಿಗಳಲ್ಲಿ ಆಂಗ್ಲ ಭಾಷೆಯಲ್ಲಿ ಸೆ.10 ರೊಳಗೆ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಸಂಕೀರ್ಣ, ಉರ್ವಾಸ್ಟೋರ್, ಮಂಗಳೂರು ಇಲ್ಲಿಗೆ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2451254 ನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

ಜಲಸಂಪನ್ಮೂಲ ಸಚಿವರ ಪ್ರವಾಸ

ತುಮಕೂರು ಸೆ.1: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಜಿಲ್ಲೆಯಲ್ಲಿ ಸೆಪ್ಟೆಂಬರ್ 2ರಂದು ಜಿಲ್ಲೆಗೆ ಆಗಮಿಸಲಿದ್ದು, ಅಂದು ಬೆಳಿಗ್ಗೆ 10-45 ಗಂಟೆಗೆ ಹೇಮಾವತಿ ನಾಲೆಯಿಂದ ನೀರೆತ್ತಿ ಗುಬ್ಬಿ ತಾಲೂಕಿನ 7 ಕುಡಿಯುವ ನೀರಿಗಾಗಿ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ ಸಂಬಂಧಿಸಿದಂತೆ ಗುಬ್ಬಿ ತಾಲೂಕಿನ ಮೂಗನಾಯಕನಕೋಟೆ ಬಳಿ ಭೂಮಿಪೂಜೆ ನೆರವೇರಿಸಲಿದ್ದಾರೆ.

ನಂತರ ಸಚಿವರು 11-30 ಗಂಟೆಗೆ ಹೊಸಕರೆಯ ಶ್ರೀ ಲಕ್ಷ್ಮೀರಂಗನಾಥಸ್ವಾಮಿ ತೇರುಬೀದಿ ಆವರಣದಲ್ಲಿ ಸದರಿ ಯೋಜನೆಗೆ ಶಿಲಾನ್ಯಾಸ ನೆರವೇರಿಸಿ ಮಧ್ಯಾಹ್ನ 2-30 ಗಂಟೆಗೆ ವಿಜಯಪುರಕ್ಕೆ ತೆರಳಲಿದ್ದಾರೆ.

ಕೃಷಿ ಮೇಳ-2015 ರ ಸಭೆ

ಧಾರವಾಡ (ಕರ್ನಾಟಕ ವಾರ್ತೆ) ಸೆ. 01 : ಕೃಷಿಮೇಳ -2015 ರ ಎರಡನೆಯ ಚಾಲನಾ ಸಮಿತಿಯ ಸಭೆಯನ್ನು ಕುಲಪತಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 02-09-2015 ರಂದು ಮಧ್ಯಾಹ್ನ 3 ಗಂಟೆಗೆ ಕುಲಪತಿಗಳ ಸಭಾಂಗಣದಲ್ಲಿ ಕುಲಪತಿಗಳ ಒಪ್ಪಿಗೆಯ ಮೇರೆಗೆ ಕರೆಯಲಾಗಿದೆ. ಕಾರಣ ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿಗಳು, ವಿಭಾಗೀಯ ಮುಖ್ಯಸ್ಥರುಗಳು, ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಇಲಾಖೆಗಳ ಮುಖ್ಯಸ್ಥರುಗಳು (ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ, ಪಶುಸಂಗೋಪನಾ ಇಲಾಖೆ ಇತ್ಯಾದಿ) ಹಾಗೂ ಕೃಷಿ ಮೇಳ-2015 ನ್ನು ವ್ಯವಸ್ಥಿತವಾಗಿ ಆಚರಿಸಲು ರಚಿಸಿರುವ ವಿವಿಧ ಸಮಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳು ಸದರಿ ಸಭೆಯಲ್ಲಿ ಭಾಗವಹಿಸಬೇಕೆಂದು ಕೃಷಿವಿಶ್ವವಿದ್ಯಾಲಯದ ಅಧ್ಯಕ್ಷರು, ಕೃಷಿಮೇಳ-2015 ಮತ್ತು ವಿಸ್ತರಣಾ ನಿರ್ದೇಶಕರು ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.