Government of Karnataka

Department of Information

Thursday 30/06/2016

District News 05-04-2016

Date : Tuesday, April 5th, 2016

ಬೆಂಗಳೂರು ನಗರ ಜಿಲ್ಲೆ ಸ್ಥಳೀಯ ಸಂಸ್ಥೆಗಳ ಚುನಾವಣಾ ವೇಳಾಪಟ್ಟಿ

ಬೆಂಗಳೂರು, ಏಪ್ರಿಲ್ 5: ಬೆಂಗಳೂರು ನಗರ ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ, ಚಂದಾಪುರ, ಅತ್ತಿಬೆಲೆ, ಬೊಮ್ಮಸಂದ್ರ ಮತ್ತು ಜಿಗಣಿ ಪುರಸಭೆ ಬೆಂಗಳೂರು ಉತ್ತರ, ಪೂರ್ವ ಹಾಗೂ ದಕ್ಷಿಣ ತಾಲ್ಲೂಕಿನ ಕಸಘಟ್ಟಪುರ, ಕುಂಬಳಗೋಡು, ದೊಡ್ಡತೋಗೂರು, ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ, ಗ್ರಾಮ ಪಂಚಾಯಿತಿಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

ಬೆಂಗಳೂರು ಉತ್ತರ ತಾಲ್ಲೂಕಿನ ಕಸಘಟ್ಟಪುರ, ದಕ್ಷಿಣ ತಾಲ್ಲೂಕಿನ ಕುಂಬಳಗೋಡು, ದೊಡ್ಡತೋಗೂರು, ಪೂರ್ವ ತಾಲ್ಲೂಕಿನ ದೊಡ್ಡಬನಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ತೆರವಾಗಿರುವ ಸದಸ್ಯ ಸ್ಥ್ಥಾನಗಳಿಗೆ ನಡೆಯುವ ಉಪಚುನಾವಣೆಯ ಅಧಿಸೂಚನೆಯನ್ನು ದಿನಾಂಕ: 4-4-2016 ರಂದು ಚುನಾವಣಾ ಆಯೋಗ ಹೊರಡಿಸಿದೆ. ದಿನಾಂಕ: 7-4-2016 ನಾಮಪತ್ರ ಸಲ್ಲಿಸಲು ಕೊನೆಯ ದಿನ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ: 11-4-2016. ದಿನಾಂಕ: 18-4-2016 ರಂದು ಮತದಾನ. ದಿನಾಂಕ: 20-4-2016 ರಂದು ಮತ ಎಣಿಕೆ ದಿನ. ಸದಾಚಾರ ಸಮಿತಿಯು ಚುನಾವಣಾ ನಡೆಯುವ ಗ್ರಾಮ ಪಂಚಾಯಿತಿ. ಸದಸ್ಯ ಸ್ಥಾನಗಳಿಗೆ ದಿನಾಂಕ: 4-4-2016 ರಿಂದ 20-4-2016 ರವರೆಗೆ ಜಾರಿಯಲ್ಲಿರುತ್ತದೆ.

ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ನಗರಸಭೆ, ಚಂದಾಪುರ, ಅತ್ತಿಬೆಲೆ, ಬೊಮ್ಮಸಂದ್ರ ಮತ್ತು ಜಿಗಣಿ ಪುರಸಭೆಗಳ ಸಾರ್ವತ್ರಿಕ ಚುನಾವಣೆ ಅಧಿಸೂಚನೆಯನ್ನು ಚುನಾವಣಾ ಆಯೋಗವು ದಿನಾಂಕ: 5-4-2016 ರಂದು ಹೊರಡಿಸಿದೆ. ದಿನಾಂಕ: 12-4-2016 ನಾಮಪತ್ರ ಸಲ್ಲಿಸಲು ಕೊನೆಯ ದಿನ. ದಿನಾಂಕ: 15-4-2016 ರಂದು ಉಮೇದುದಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ದಿನಾಂಕ: 24-4-2016 ಮತದಾನ. ದಿನಾಂಕ: 27-4-2016 ಮತ ಎಣಿಕೆ ನಡೆಯಲಿದೆ. ಸದಾಚಾರ ಸಮಿತಿಯು ಚುನಾವಣೆ ನಡೆಯುವ ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನಾಂಕ: 31-3-2016 ರಿಂದ 27-4-2016 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶ್ರೀ ವಿ.ಶಂಕರ್ ಅವರು ತಿಳಿಸಿದರು.

ಶ್ರವಣದೋಷ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಬೆಂಗಳೂರು, ಏಪ್ರಿಲ್ 5: ಇಂದಿರಾನಗರದ ಬಳಿ ಇರುವ ಹಳೆ ಬಿನ್ನಮಂಗಲದ ಹಂಸಧ್ವನಿ ಕಿವುಡು ಮತ್ತು ಮೂಕ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಪ್ರವೇಶಕ್ಕೆ ಶ್ರವಣ ದೋಷವುಳ್ಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

1ನೇ ತರಗತಿಯಿಂದ 10ನೇ ತರಗತಿಯವರೆಗೆ ಉಚಿತ ಪ್ರವೇಶವಿದ್ದು, ಪ್ರಸಕ್ತ ಸಾಲಿಗೆ ಶ್ರವಣದೋಷವುಳ್ಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.