Government of Karnataka

Department of Information

Thursday 30/06/2016

District News 05-05-2016

Date : Thursday, May 5th, 2016
ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ
1. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಬೆಂಗಳೂರು ನಗರ ಜಿಲ್ಲೆ ಡಾ: ಬಿ.ಆರ್.ಅಂಬೇಡ್ಕರ್ ರವರ 125ನೇ ಜನ್ಮ ದಿನಾಚರಣೆ ಮತ್ತು ಡಾ: ಬಾಬು ಜಗಜೀವನ ರಾಮ್‌ರವರ 109ನೇ ಜನ್ಮ ದಿನಾಚರಣೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ  (ದೌರ್ಜನ್ಯ ಪ್ರತಿಬಂಧ) ಕಾಯ್ದೆ-1989 ರ ಬಗ್ಗೆ ಜಿಲ್ಲಾಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ  ಉದ್ಘಾಟನೆ: ವಿ.ಶಂಕರ್ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು. ಅಧ್ಯಕ್ಷತೆ : ಕು: ಮಂಜುಶ್ರೀ ಎನ್  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮುಖ್ಯ ಅತಿಥಿಗಳು: ಶ್ರೀ ಎಂ.ವೆಂಕಟಸ್ವಾಮಿ ರಾಜ್ಯಾಧ್ಯಕ್ಷರು ಶ್ರೀ ಮಾಕಳ್ಳಿ ಶಂಕರ್ ದಲಿತ ಸಂಘರ್ಷ ಸಮಿತಿ ಡಾ: ಕೆ.ಕೃಷ್ಣಪ್ಪ ಸಂಯೋಜಕರು, ಸ್ನಾತಕೋತ್ತರ ಅಧ್ಯಯನ ವಿಭಾಗ ಶ್ರೀ ಜಗದೀಶ್, ವಕೀಲರು ಶ್ರೀ ಅಶೋಕ್ ತಳವಾರ ಪಬ್ಲಿಕ್ ಪ್ರಾಸಿಕ್ಯೂಟರ್ ದಿನಾಂಕ 06-05-2016 (ಶುಕ್ರವಾರ) ಬೆಳಿಗ್ಗೆ 10-00 ಗಂಟೆಗೆ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣ, ಬನಶಂಕರಿ, ಬೆಂಗಳೂರು

ಉಚಿತ ಕರಾಟೆ ತರಬೇತಿ ಶಿಬಿರ

ಬೆಂಗಳೂರು: ಮೇ, 5: - ಬೆಂಗಳೂರು ನಗರ ಜಿಲ್ಲೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಏಪ್ರಿಲ್ 25 ರಿಂದ ಮೇ 15, 2016 ರವರೆಗೆ ಶ್ರೀ ಕಂಠೀರವ ಕ್ರೀಡಾಂಗಣ, ಕುಂಬಳಗೂಡು ಯುವಜನ ತರಬೇತಿ ಕೇಂದ್ರ ಹಾಗೂ ಒಳಾಂಗಣ, ಕ್ರೀಡಾಂಗಣ, ಕೋರಮಂಗಲ ಈ ಸ್ಥಳಗಳಲ್ಲಿ ಉಚಿತ ಕರಾಟೆ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿದೆ.

ಆಸಕ್ತ ಕ್ರೀಡಾಪಟುಗಳು ಹೆಚ್ಚಿನ ಮಾಹಿತಿಗಾಗಿ ಮೊ: 9902030203, 9886023378, 8197497519 ಹಾಗೂ 9480886470 ಅನ್ನು ಸಂಪರ್ಕಿಸಬಹುದು.

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅರಿವು ಶೈಕ್ಷಣಿಕ ಸಾಲ

ಬೆಂಗಳೂರು: ಮೇ, 5: - ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು 2016-17ನೇ ಸಾಲಿನ ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿ.ಇ.ಟಿ. ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಶೇಕಡಾ 2ರ ಬಡ್ಡಿ ದರದಲ್ಲಿ ವಾರ್ಷಿಕ ಗರಿಷ್ಠ ರೂ. 1.00 ಲಕ್ಷದವರೆಗೆ ಸಾಲ ನೀಡಲಾಗುವುದು. ಸಾಲ ಪಡೆಯಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ.ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಸಿ.ಇ.ಟಿ.ಗೆ ಜಮಾ ಮಾಡಲಾಗುವುದು.

ಸಾಲ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಅರ್ಜಿ ನಮೂನೆಗಳನ್ನು ಆಯಾ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ಕಛೇರಿಗಳಲ್ಲಿ ಅಥವಾ ನಿಗಮದ ವೆಬ್‍ಸೈಟ್ www.karnataka.gov.in/bcdc ರಲ್ಲಿ ಪಡೆದು ಅಗತ್ಯ ದಾಖಲೆಗಳೊಂದಿಗೆ ದಿನಾಂಕ: 20-5-2016 ರೊಳಗೆ ನಿಗಮದ ಆಯಾ ಜಿಲ್ಲಾ ಕಛೇರಿಗಳಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವುದು.