Government of Karnataka

Department of Information

Friday 08/07/2016

District News 05-07-2016

Date : Tuesday, July 5th, 2016

ಹಣ ದುರುಪಯೋಗ – ಏಜೆನ್ಸಿ ರದ್ದು

ಬೆಂಗಳೂರು: ಜುಲೈ 5, 2016: ಸಣ್ಣ ಉಳಿತಾಯ ಹಾಗೂ ಎಸ್.ಎಸ್.ಏಜೆಂಟರಾಗಿ ರಾಜಾಜಿನಗರ, ಮುಖ್ಯ ಅಂಚೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಕೆ.ಪದ್ಮಾವತಿ ಅವರು ಹಣ ದುರುಪಯೋಗಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಎರಡು ಏಜೆನ್ಸಿಗಳನ್ನು ರದ್ದುಪಡಿಸಲಾಗಿದೆ.

ಸಾರ್ವಜನಿಕರು ಇವರ ಏಜೆನ್ಸಿ ಮೂಲಕ ಯಾವುದೇ ಠೇವಣಿ ಮಾಡಬಾರದೆಂದು ಬೆಂಗಳೂರುು ಉತ್ತರ ಸಣ್ಣ ಉಳಿತಾಯ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರುು ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವ

ಬೆಂಗಳೂರು: ಜುಲೈ 5, 2016: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಬೆಂಗಳೂರು ಹೋಬಳಿ ಮಟ್ಟದ ಗ್ರಾಮೀಣ ಕ್ರೀಡೋತ್ಸವವನ್ನು ಜುಲೈ 8 ರಂದು ಕೆ.ಗೊಲ್ಲಹಳ್ಳಿ, ಸರ್ಕಾರಿ ಪ್ರೌಢಶಾಲೆ, 15 ರಂದು ಸರಸ್ವತಿ ವಿದ್ಯಾನಿಕೇತನ, ದೊಮ್ಮಸಂದ್ರ, 22 ರಂದು ಸರ್ಕಾರಿ ಪ್ರೌಢಶಾಲೆ, ಜೋಡಿಹುಸ್ಕೂರು ಶಾಲೆಗಳಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ.

ಕ್ರೀಡೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಪುರುಷ/ಮಹಿಳೆಯರು ಭಾಗವಹಿಸಬಹುದಾಗಿದ್ದು, ಯಾವುದೇ ವಯೋಮಿತಿ ನಿರ್ಬಂಧವಿರುವುದಿಲ್ಲ. ಕ್ರೀಡೋತ್ಸವದಲ್ಲಿ ಓಟ, ಹಗ್ಗ ಜಗ್ಗಾಟ, ನದಿ ದಡ ಮ್ಯೂಜಿಕಲ್ ಚೇರ್, ಮೂರು ಕಾಲಿನ ಓಟ, ಗೋಣಿ ಚೀಲದ ಓಟ, ರಂಗೋಲಿ ಸ್ಪರ್ಧೆಗಳು ನಡೆಯುತ್ತಿದ್ದು, ಸಂಘ ಸಂಸ್ಥೆಗಳು, ಯುವಕ, ಯುವತಿಯರು ಶಾಲಾ ಕ್ರೀಡಾ ಪಟುಗಳು, ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ.

ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಕ್ರೀಡಾಕೂಟದಂದು ಬೆಳಿಗ್ಗೆ 9.30 ರೊಳಗೆ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು, ಬೆಳಿಗ್ಗೆ 09.30 ಗಂಟೆಗೆ ಕ್ರೀಡಾಂಗಣದಲ್ಲಿ ಹಾಜರಾಗಬೇಕು. ಕ್ರೀಡೆಯಲ್ಲಿ ಗೆದ್ದವರಿಗೆ ಮೊದಲನೇ ಬಹುಮಾನ ರೂ. 1000/- ಗಳು. ಎರಡನೇ ಬಹುಮಾನ ರೂ. 750/- ಮೂರನೇ ಬಹುಮಾನ ರೂ. 500/- ಗಳನ್ನು ಚೆಕ್ ಮುಖಾಂತರ ನೀಡಲಾಗುವುದು. ಆಯೋಜಕರು ಹಾಗೂ ತೀರ್ಪುಗಾರರ ತೀಮಾನವೇ ಅಂತಿಮ ತೀರ್ಮಾವಾಗಿರುತ್ತದೆ. ಕ್ರೀಡೆಗಳ ನಿಯಮಾವಳಿಗಳನ್ನು ಕ್ರೀಡಾಪಟುಗಳು ಶಿಸ್ತಿನಿಂದ ಕಡ್ಡಾಯವಾಗಿ ಪಾಲಿಸಬೇಕು. ಕ್ರೀಡೋತ್ಸವದಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕ್ರೀಡಾಪಟುಗಳು ಕ್ರೀಡಾ ಸಾಮಗ್ರಿಗಳನ್ನು ತಾವೇ ತರುವುದು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರುು ನಗರ ಜಿಲ್ಲೆ ದೂರವಾಣಿ ಸಂಖ್ಯೆ: 0802223977 ಮೊ:94886470ಇ-ಮೇಲ್ [email protected][email protected] ಸಂಪರ್ಕಿಸಬಹುದು.

ಸಾಹಸ ಕ್ರೀಡಾ ತರಬೇತಿ ಶಿಬರಿ

ಬೆಂಗಳೂರು: ಜುಲೈ 5, 2016: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡಮಿ ವತಿಯಿಂದ 2016-17ಸಾಲಿನ ಜಲ ಸಾಹಸ ಹಾಗೂ ಭೂ ಸಾಹಸ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಈ ತರಬೇತಿ ಶಿಬಿರಗಳನ್ನು ಅಕಾಡೆಮಿಯು ಹೊಂದಿರುವ ಸಾಹಸ ಕೇಂದ್ರಗಳಲ್ಲಿ ಹಾಗೂ ರಾಜ್ಯ ವಿವಿಧೆಡೆ ಸ್ಥಳಗಳಲ್ಲಿ ಲಭ್ಯವಿರುವ ಸೌಲಭ್ಯಗಳನುಸಾರ ಆಯೋಜಿಸಲಾಗುವುದು.

16 ರಿಂದ 35 ವರ್ಷ ವಯೋಮಿತಿಯ ಯುವ ಜನರಿಗೆ ಜಲಸಾಹಸ ಮತ್ತು ಭೂ ಸಾಹಸ ಕ್ರೀಡೆಗಳಾದ ರಿವರ್ ರ್ಯಾಪ್ಟಿಂಗ್, ವೈಟ್‍ವಾಟರ್ ರ್ಯಾಪ್ಟಿಂಗ್, ಟ್ರಕ್ಕಿಂಗ್, ಪ್ರಕೃತಿ ಅಧ್ಯಯನ ಶಿಬಿರ, ಓರಿಯಂಟೇಷನ್‍ನಲ್ಲಿ ಬೇಸಿಕ್ ಹಾಗೂ ಅಡ್ವಾನ್ಸ್ ತರಬೇತಿ ಶಿಬಿರಗಳನ್ನು ಜುಲೈನಿಂದ ಸೆಪ್ಟೆಂಬರ್‍ವರೆಗೆ ನಡೆಸಲಾಗುವುದು.

ಆಸಕ್ತ ಯುವ ಜನರು ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಂಗಳೂರುು ನಗರ ಜಿಲ್ಲೆ, ಗೇಟ್ ನಂ.-12ರ ಕೊಠಡಿ ಸಂಖ್ಯೆ 17 ಕಸ್ತೂರಿ ಬಾ ರಸ್ತೆ, ಶ್ರೀ ಕಂಠೀರವ ಕ್ರೀಡಾಂಗಣ, ಬೆಂಗಳೂರುು -01 ದೂರವಾಣಿ ಸಂಖ್ಯೆ 080-22239771 ಮೊ. 9480886470, 9480886470 ಅನ್ನು ಸಂಪರ್ಕಿಸಬಹುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಎಲ್.ದೇವಿಕಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.