Government of Karnataka

Department of Information

Monday 21/09/2015

District News 05-09-2015

Date : Saturday, September 5th, 2015
ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ
1. ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತಿ ಶಿಕ್ಷಕರೊಡನೆ ಶಿಕ್ಷಣ ಸಚಿವರ ಸಂವಾದ ದಿನಾಂಕ 5-9-2015 ಮಧ್ಯಾಹ್ನ 2-00 ಗಂಟೆಗೆ ಡಾ: ಬಿ.ಆರ್.ಅಂಬೇಡ್ಕರ್ ಭವನ, ಮಿಲ್ಲರ್‍ಸ್ ರಸ್ತೆ, ವಸಂತನಗರ, ಬೆಂಗಳೂರು - 52
2 ಬೆಂಗಳೂರು ನಗರ ಜಿಲ್ಲಾಮಟ್ಟದ ಯುವಜನೋತ್ಸವ -2015
ಉದ್ಘಾಟನೆ
ಶ್ರೀ ರಾಮಲಿಂಗಾರೆಡ್ಡಿ,
ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ, ಬೆಂಗಳೂರು ನಗರ ಜಿಲ್ಲೆ
ಅಧ್ಯಕ್ಷತೆ:
ಆರ್.ರೋಷನ್‍ಬೇಗ್,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವರು
ಮುಖ್ಯ ಅತಿಥಿ:
1). ಕೆ.ಜೆ.ಜಾರ್ಜ್
ಗೃಹ ಸಚಿವರು
2). ದಿನೇಶ್ ಆರ್.ಗುಂಡೂರಾವ್
ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ನಾಗರೀಕ ಸರಬರಾಜು ರಾಜ್ಯ ಸಚಿವರು
3). ಕೃಷ್ಣಬೈರೇಗೌಡ
ಕೃಷಿ ರಾಜ್ಯ ಸಚಿವರು
4). ಕೆ.ಸಿ.ರಾಮಚಂದ್ರ
ಅಧ್ಯಕ್ಷರು, ಬೆಂಗಳೂರು ನಗರ ಜಿಲ್ಲಾ ಪಂಚಾಯತ್
ದಿನಾಂಕ 6-9-2015
ಬೆಳಿಗ್ಗೆ 10-30 ಗಂಟೆಗೆ
ಯವನಿಕ ರಂಗಮಂದಿರ
ರಾಜ್ಯ ಯುವಕ ಕೇಂದ್ರ
ನೃಪತುಂಗ ರಸ್ತೆ
ಬೆಂಗಳೂರು

ಪಾಟಾ – 2015 ಪ್ರವಾಸಿಮೇಳ ಭಾರಿ ಸರಕು ವಾಹನಗಳ ನಿಷೇಧ

ಬೆಂಗಳೂರು: ಸೆ, 5: ಬೆಂಗಳೂರು ಮತ್ತು ತುಮಕೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿನ ಮಾದಾವರ ಬಳಿ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ದಿನಾಂಕ: 6-9-2015 ರಿಂದ 8-9-2015 ರವರೆಗೆ ಫೆಸಿಫಿಕ್ ಏಷ್ಯಾ ಟ್ರಾವೆಲ್ ಅಸೋಶಿಯೇಷನ್ (PATA) ಪ್ರವಾಸಿಮೇಳ ನಡೆಯುವುದರಿಂದ ಭಾರಿ ಸರಕು ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ತುಮಕೂರು, ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮಾದನಾಯಕನಹಳ್ಳಿ ಜೆಂಕ್ಷನ್‍ನಿಂದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದವರೆಗೂ ಬಿ.ಎಂ.ಟಿ.ಸಿ. ಮತ್ತು ಕೆ.ಎಸ್.ಆರ್.ಟಿ.ಸಿ., ಖಾಸಗಿ ಬಸ್ಸುಗಳನ್ನು ಹೊರತುಪಡಿಸಿ ಭಾರಿ ಸರಕು ವಾಹನಗಳಾದ ಲಾರಿ ಟ್ರಕ್ ಇನ್ನಿತರೆ ಸರಕು ಸಾಗಾಣಿಕೆ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಈ ವಾಹನಗಳಿಗೆ ತುಮಕೂರು ಕಡೆಯಿಂದ ಬೆಂಗಳೂರು ರಸ್ತೆಗೆ ಬದಲಿ ಮಾರ್ಗವಾದ ನೆಲಮಂಗಲ ಟೋಲ್‍ನಿಂದ ಸರ್ವಿಸ್ ರಸ್ತೆಯಲ್ಲಿ ಎಡಕ್ಕೆ ತಿರುಗಿ ಸೊಂಡೆಕೊಪ್ಪ-ತಾವರೆಕೆರೆ-ಮಾಗಡಿರಸ್ತೆ-ಸುಮನಹಳ್ಳಿ ಜಂಕ್ಷನ್ ಪ್ಲೇಓವರ್ ಮೂಲಕ ಎಫ್‍ಟಿಐ ಹೊರ ವರ್ತುಲ ರಸ್ತೆಯಿಂದ ಸಿ.ಎಂ.ಟಿ.ಐ. ಜಂಕ್ಷನ್‍ನಿಂದ ಸರ್ವಿಸ್ ರಸ್ತೆಗೆ ಚಲಿಸಿ ಮಾರಪ್ಪನಹಳ್ಳಿ ಜಂಕ್ಷನ್‍ನಿಂದ ಬೆಂಗಳೂರು ಕಡೆಗೆ ಮಾರ್ಗ ಬದಲಿದೆ.

ಈ ಬದಲಾವಣೆಯು ದಿನಾಂಕ; 5-9-2015ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ: 9-9-2015 ರಾತ್ರಿ 12.00 ಗಂಟೆವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಪನಿರ್ದೇಶಕರು