Government of Karnataka

Department of Information

Monday 02/05/2016

District News 06-02-2016

Date : Saturday, February 6th, 2016

ಪತ್ರಿಕಾ ಪ್ರಕಟಣೆ

ವಿಷಯ :- ಜಿಲ್ಲಾ/ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ-2016 ಸಂಬಂಧ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಒಂದನೇ ಮತಗಟ್ಟೆ ಅಧಿಕಾರಿಗಳು ಗೈರು ಹಾಜರಾಗಿರುವ ಬಗ್ಗೆ

ಜಿಲ್ಲಾ/ತಾಲ್ಲೂಕು ಪಂಚಾಯತಿ ಸಾರ್ವತ್ರಿಕ ಚುನಾವಣೆ-2016 ಸಂಬಂಧ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಒಂದನೇ ಮತಗಟ್ಟೆ ಅಧಿಕಾರಿಗಳಿಗೆ ದಿನಾಂಕ:03-02-2016ರಂದು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ತಾಲ್ಲೂಕುಗಳಲ್ಲಿ ತರಬೇತಿಯನ್ನು ಆಯೋಜಿಸಿದ್ದು ಸದರಿ ನಿಯೋಜಿತ ಸಿಬ್ಬಂದಿಯ ಪೈಕಿ ಸುಮಾರು 500ಕ್ಕೂ ಹೆಚ್ಚು ಸಿಬ್ಬಂದಿಯು ದಿನಾಂಕ:03-02-2016 ಗೈರು ಹಾಜರಾಗಿರುವುದರಿಂದ ಚುನಾವಣೆ ನಡೆಸಲು ತೊಂದರೆಯುಂಟಾಗಿರುತ್ತದೆ.

ಗೈರು ಹಾಜರಾಗಿರುವ ಹಾಗೂ ನೇಮಿಸಲಾದ ಸಿಬ್ಬಂದಿಯು ತಮ್ಮ ಆದೇಶಗಳಲ್ಲಿ ನಮೂದಿಸಿರುವ ಹಂಚಿಕೆ ಮಾಡಲಾದ ತಾಲ್ಲೂಕಿನ ತರಬೇತಿ ಕೇಂದ್ರದಲ್ಲಿ ಈ ನೌಕರರಿಗೆ ದಿನಾಂಕ:08-02-2016ರ ಸೋಮವಾರದಂದು ಸಮಯ ಬೆಳಿಗ್ಗೆ 10.00ಗಂಟೆಗೆ ತರಬೇತಿ ಆಯೋಜಿಸಿದ್ದು ತಮ್ಮ ಆದೇಶದಲ್ಲಿ ತಿಳಿಸಿರುವ ತರಬೇತಿ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಾಗತಕ್ಕದ್ದು. ಹಾಗೂ ದಿನಾಂಕ:13-02-2016ರಂದು ನಡೆಯುವ ಚುನಾವಣೆಗೆ ಈಗಾಗಲೇ ನೇಮಕ ಆಗಿರುವ ಎಲ್ಲಾ ಮತಗಟ್ಟೆ ಅಧಿಕಾರಿ 2, 3 ಮತ್ತು 4 ಸಿಬ್ಬಂದಿಗಳು ದಿನಾಂಕ:12-02-2016ರಂದು ಮಸ್ಟರಿಂಗ್ ಕೇಂದ್ರದಲ್ಲಿ ತಪ್ಪದೇ ಹಾಜರಾಗತಕ್ಕದ್ದು. ತಪ್ಪಿದಲ್ಲಿ ಪ್ರಜಾಪ್ರತಿನಿಧಿ ಖಾಯ್ದೆ ಕಲಂ 134 ಹಾಗೂ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರ ಕಲಂ 31ರಂತೆ ಶಿಸ್ತುಕ್ರಮ ಜರುಗಿಸಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಇಲಾಖಾ ಮುಖ್ಯಸ್ಥರಿಗೆ ತಿಳಿಸುವುದಲ್ಲದೇ ಸಂಬಂಧಿಸಿದ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದೆಂದು ಈ ಮೂಲಕ ಎಲ್ಲಾ ಗೈರು ಹಾಜರಾದ ನೌಕರರಿಗೆ ತಿಳಿಯಪಡಿಸಿದೆ.

-ಸಹಿ/-
(ವಿ.ಶಂಕರ್)
ಜಿಲ್ಲಾಧಿಕಾರಿಗಳು
ಬೆಂಗಳೂರು ಜಿಲ್ಲೆ, ಬೆಂಗಳೂರು