Government of Karnataka

Department of Information

Wednesday 29/06/2016

District News 06-05-2016

Date : Friday, May 6th, 2016

ಹಿಂದುಳಿದ ವರ್ಗದವರಿಗೆ ಸಾಲ ಸೌಲಭ್ಯ ನೆರವು

ಬೆಂಗಳೂರು: ಮೇ, 6: ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2016-17ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಸಾಲ ಸೌಲಭ್ಯ ಪಡೆಯಬಯಸುವವರಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ನಿಗಮವು ಹಿಂದುಳಿದ ವರ್ಗಗಳ ಜನರ ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳಾದ ಚೈತನ್ಯ ಸಬ್ಸಿಡಿ ಕಂ ಸಾಪ್ಟ್‍ಲೋನ್ ಯೋಜನೆ, ಅರಿವು ಶೈಕ್ಷಣಿಕ ನೇರ ಸಾಲ ಯೋಜನೆ, ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲ, ಡಿ.ದೇವರಾಜ ಅರಸು ಸ್ವಯಂ ಉದ್ಯೋಗ, ವೈಯಕ್ತಿಕ ಸಾಲ, ಕಿರು ಸಾಲಸೌಲಭ್ಯ, ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ವೃತ್ತಿ ಕಸಬುದಾರರಿಗೆ ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಮುಂತಾದ ಯೋಜನೆಗಳ ಸೌಲಭ್ಯ ಪಡೆಯಲು ಹಿಂದುಳಿದ ವರ್ಗದವರು, ಫಲಾಪೇಕ್ಷಿಗಳು ಅವರು ವಾಸಿಸುತ್ತಿರುವ ಆಯಾ ಜಿಲ್ಲೆಯ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಅಥವಾ ಆಯಾ ತಾಲ್ಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿಗಳ ಕಛೇರಿಯಲ್ಲಿ ವೆಬ್‍ಸೈಟ್ www.karnataka.gov.in/bcdc ನಿಗದಿತ ಅರ್ಜಿಗಳನ್ನು ಮೇ 25, 2016 ರೊಳಗೆ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 16, 2016 ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.karnataka.gov.in/bcdc ಸಂಪರ್ಕಿಸಬಹುದು.

ಬೆಂಗಳೂರು-ಮೇ.6 : ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಾಷ್ಟ್ರಕ್ಕಾಗಿ ಮಾಡಿದ ಜನಹಿತ ಕೆಲಸಗಳನ್ನು ನಾವಿಂದು ಮರೆತಿದ್ದೇವೆ. ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಂದು ಸಮುದಾಯದ ದೃಷ್ಟಿಕೋನದಿಂದ ನೋಡುವುದನ್ನು ಬಿಟ್ಟು ಅವರು ಹಾಕಿಕೊಟ್ಟಂತಹ ತತ್ವ ಆದರ್ಶದ ದಾರಿಯಲ್ಲಿ ನಾವಿಂದು ನಡೆಯಬೇಕಿದೆ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕು. ಎನ್. ಮಂಜುಶ್ರೀ ಅವರಿಂದು ಕರೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಡಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆ ಮತ್ತು ಡಾ. ಬಾಬು ಜಗಜೀವನರಾಂ ಅವರ 109ನೇ ಜನ್ಮ ದಿನಾಚರಣೆ ಮತ್ತು ಪ.ಜಾತಿ/ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ಕೆ 1989 ರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನ್ನಾಡುತ್ತಾ, ಸರ್ಕಾರಿ ಅಧಿಕಾರಿಗಳು ಪ.ಜಾತಿ/ಪಂಗಡದ ದೌರ್ಜನ್ಯ ಕಾಯ್ದೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡು ಈ ಜನಾಂಗದವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವಂತಾಗಲು ಇಂದು ದೌರ್ಜನ್ಯ ಪ್ರತಿಬಂಧ ಕಾಯ್ಕೆ 1989 ಕಾರ್ಯಾಗಾರ ಏರ್ಪಡಿಸಲಾಗಿದ್ದು, ಅಧಿಕಾರಿಗಳು ಇದರ ಸದುಪಯೋಗ ಪಡೆದುಕೊಂಡು ತಮ್ಮ ವೃತ್ತಿ ಜೀವನದಲ್ಲಿ ಶೋಷಿತ ಜನಾಂಗದ ಒಳಿತಿಗೆ ಶ್ರಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅವರು ಕರೆ ನೀಡಿದರು.

ದಲಿತ ಚಳವಳಿ ಹಿರಿಯ ನಾಯಕ ಎಂ.ವೆಂಕಟಸ್ವಾಮಿ ಅವರು ಮಾತನ್ನಾಡಿ, ಡಾ.ಬಾಬು ಜಗಜೀವನರಾಂ ಅವರು ಹಸಿರು ಕ್ರಾಂತಿಯ ಮೂಲಕ ಕೃಷಿ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿ ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡಿದ್ದಾರೆ ಎಂದ ಅವರು, ಡಾ. ಬಾಬು ಜಗಜೀವನರಾಂ ಅವರ ತಾವು ಸಚಿವರಾಗಿದ್ದ ಅವಧಿಯಲ್ಲಿ ಮಾದರಿ ಆಡಳಿತ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದರು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳು ಎಂದಿಗೂ ನಿಂತ ನೀರಲ್ಲ. ಅವರ ವಿಚಾರಧಾರೆಗಳು ಹರಿಯುವ ನದಿಯಿದ್ದಂತೆ ಎಂದ ಅವರು,ಅಸ್ಪøಶ್ಯರ ಅಭಿವೃದ್ದಿಗಾಗಿ ಸಮತಾ ಸೈನಿಕ ದಳ ಸ್ಥಾಪಿಸಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದಿಗೂ ಮೀಸಲಾತಿ ಪರ ವಾದ ಮಾಡಿದವರಲ್ಲ. ಅವರು ದಮನಿತ ಜನರ ಹಕ್ಕಿಗಾಗಿ, ಪ್ರಾತಿನಿಧ್ಯಕ್ಕಾಗಿ ಹೋರಾಟ ಮಾಡಿದಂತಹ ಮಹಾನ್ ನಾಯಕರು ಎಂದರು.

ದಲಿತ ಸಂಘರ್ಷ ಸಮಿತಿ ಮುಖಂಡ ಮಾವಳ್ಳಿ ಶಂಕರ್ ಅವರು ಮಾತನ್ನಾಡಿ, ಸಮಾಜದ ತಳ ಸಮುದಾಯದ ಜನರಿಗೆ ಕಾನೂನಿನ ವ್ಯಾಪ್ತಿಯಲ್ಲಿ ಅಧಿಕಾರಿಗಳು ಸಹಾಯ ಮಾಡಬೇಕು ಎಂದು ಕರೆ ನೀಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸರ್ವರಿಗೂ ಸಮಾನ ಶಿಕ್ಷಣ ಒದಗಿಸುವ ಮಹತ್ವಾಕಾಂಕ್ಷೆ ಹೊಂದಿದ್ದು,ಸಂಕುಚಿತ ಮನೋಭಾವನೆಯನ್ನು ತೊರೆದು ಸಮಾಜಿತ ಪ್ರಜ್ಞಾವಂತ ನಾಗರೀಕರಾದ ನಾವುಗಳು ಅವರ ಆಶಯವನ್ನು ನನಸು ಮಾಡು ಪ್ರಯತ್ನ ಮಾಡಬೇಕಿದೆ ಎಂದರು.

ಸರ್ಕಾರಿ ಕಲಾ ಕಾಲೇಜಿನ ಸಂಯೋಜಕರಾದ ಡಾ.ಕೆ.ಕೃಷ್ಣಪ್ಪ, ಪಬ್ಲಿಕ್ ಪ್ರಾಸಿಕೂಟರ್ ಅಶೋಕ್ ತಳವಾರ್, ಸ್ಭೆರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.