Government of Karnataka

Department of Information

Wednesday 29/06/2016

District News 07-05-2016

Date : Saturday, May 7th, 2016

ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಕೈಗೊಂಡಿದ್ದು ಅದರಂತೆ ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿ, ಎಳ್ಳುಕುಂಟೆ ಗ್ರಾಮದ ಸರ್ಕಾರಿ ಸರ್ವೆ ನಂ. 18/8 ರಲ್ಲಿ 1-00 ಎಕರೆ ಖರಾಜು ಸೇರಿ ಒಟ್ಟು 4-00 ಎಕರೆ, ತಾವರೆಕೆರೆ ಹೊಬಳಿ ತಾವರೆಕೆರೆ ಗ್ರಾಮದ ಸರ್ಕಾರಿ ಸರ್ವೆ ನಂ. 125 ರಲ್ಲಿ 37-29-00 ಎಕರೆ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿದ್ದವರಿಗೆ ತಹಶೀಲ್ದಾರ್ ನೋಟೀಸು ನೀಡಿ ಜಮೀನನ್ನು ದಿನಾಂಕ 07-05-2016 ರಂದು ಶ್ರೀ.ವಿ.ಶಂಕರ್, ಜಿಲ್ಲಾಧಿಕಾರಿಗಳು ರವರ ನಿರ್ದೇಶನದಂತೆ ತಹಶೀಲ್ದಾರ್, ಎಸ್.ಎಂ.ಶಿವಕುಮಾರ್ ಹಾಗು ಅವರ ಸಿಬ್ಬಂದಿಯೊಡನೆ ಅಂದಾಜು 330.00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು.

ಅದೇ ರೀತಿ ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ಗೆದ್ದಲಹಳ್ಳಿ ಗ್ರಾಮದ ಸರ್ಕಾರಿ ಸರ್ವೆ ನಂ. 41 ರಲ್ಲಿ 0.05 ಗುಂಟೆ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ತಹಶೀಲ್ದಾರ್ ನೋಟೀಸು ನೀಡಿ ಜಮೀನನ್ನು ದಿನಾಂಕ 07-05-2016 ರಂದು ಶ್ರೀ.ವಿ.ಶಂಕರ್, ಜಿಲ್ಲಾಧಿಕಾರಿಗಳು ರವರ ನಿರ್ದೇಶನದಂತೆ ತಹಶೀಲ್ದಾರ್. ಶಿವಪ್ಪ ಹೆಚ್. ಲಮಾಣಿ ಹಾಗೂ ಅವರ ಸಿಬ್ಬಂದಿಯೊಡನೆ ಅಂದಾಜು 7.50 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು.

ಅದೇ ರೀತಿ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಬೆಳಂದೂರು ಕೆರ ಭಾಗದ, ಅಮಾನಿ ಬೆಳಂದೂರು ಖಾನೆ ಸರ್ವೆ ನಂ. 1 ರಲ್ಲಿ 11-00 ಎಕರೆ, ಕೆ.ಆರ್.ಪುರ ಹೋಬಳಿ, ಕುಂದಲಹಳ್ಳಿ ಗ್ರಾಮದ ಕೆರೆ ಸರ್ವೆ ನಂ. 5 ರಲ್ಲಿ 1-00 ಎಕರೆ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದವರಿಗೆ ತಹಶೀಲ್ದಾರ್ ನೋಟೀಸು ನೀಡಿ ಜಮೀನನ್ನು ದಿನಾಂಕ 07-05-2016 ರಂದು ಶ್ರೀ.ವಿ.ಶಂಕರ್, ಜಿಲ್ಲಾಧಿಕಾರಿಗಳು ರವರ ನಿರ್ದೇಶನದಂತೆ ತಹಶೀಲ್ದಾರ್. ಡಾ|| ಹರೀಶ್ ನಾಯ್ಕ್ ಹಾಗೂ ಅವರ ಸಿಬ್ಬಂದಿಯೊಡನೆ ಅಂದಾಜು 70.00 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು.

ಅದೇ ರೀತಿ ಆನೇಕಲ್ ತಾಲ್ಲೂಕು, ಜಿಗಣಿ ಹೋಬಳಿ, ತಿರುಪಾಳ್ಯ ಗ್ರಾಮದ ಸರ್ವೆ ನಂ. 30/28, 30/29, 30/30, 30/31 ರಲ್ಲಿನ ತೋಟಿ ಇನಾಂತಿ ಜಾಗ 7-28 ಎ/ಗುಂಟೆ ಜಾಗವನ್ನು ಅನಧಿಕೃತವಾಗಿ ಇತರರು ಮಾರಾಟ ಮಾಡಿದ್ದು, ಸದರಿ ಜಾಗವನ್ನು ಸರ್ಕಾರದ ವಶಕ್ಕೆಪಡೆಯಲಾಗಿರುತ್ತದೆ. ಒತ್ತುವರಿ ಮಾಡಿಕೊಂಡಿದ್ದವರಿಗೆ ತಹಶೀಲ್ದಾರ್ ನೋಟೀಸು ನೀಡಿ ಜಮೀನನ್ನು ದಿನಾಂಕ 07-05-2016 ರಂದು ಶ್ರೀ.ವಿ.ಶಂಕರ್, ಜಿಲ್ಲಾಧಿಕಾರಿಗಳು ರವರ ನಿರ್ದೇಶನದಂತೆ ತಹಶೀಲ್ದಾರ್. ಶ್ರೀ ಅನಿಲ್ ಕುಮಾರ್ ಹಾಗೂ ಅವರ ಸಿಬ್ಬಂದಿಯೊಡನೆ ಅಂದಾಜು 180 ಕೋಟಿ ಮೌಲ್ಯದ ಸರ್ಕಾರಿ ಜಮೀನನ್ನು ತೆರವುಗೊಳಿಸಲಾಯಿತು.

ಜಿಲ್ಲೆಯ 4 ತಾಲ್ಲೂಕುಗಳಲ್ಲಿ ಏಕ ಕಾಲದಲ್ಲಿ ಸರ್ಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿ, ಜಿಲ್ಲೆಯ ವಿಭಾಗಾಧಿಕಾರಿಗಳು, ಬಿ.ಎಂ.ಟಿ.ಎಫ್. ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ಸಂಬಂಧಪಟ್ಟ ತಾಲ್ಲೂಕು ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಹಾಗೂ ಅವರ ಸಿಬ್ಬಂದಿ ವರ್ಗದವರ ಸಹಯೋಗದಿಂದಿಗೆ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿರುತ್ತದೆ.

ಒಟ್ಟು ತೆರವುಗೊಳಿಸಿದ ವಿಸ್ತೀರ್ಣ: 65-22 ಎಕರೆ/ಗುಂಟೆ ಒಟ್ಟು ಮೌಲ್ಯ 587.50 ಕೋಟಿ

ಅಪರ ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು.

ಶ್ರೀ ವಿ.ಶಂಕರ್, ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ – 9448994024
ಶ್ರೀ ಎನ್.ಎಂ.ಪÀನಾಲಿ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ –
ಶ್ರೀ ಆರ್.ವೆಂಕಟಾಚಲಪತಿ, ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ – 9513322144

 

ಶ್ರೀ ಎಲ್.ಸಿ.ನಾಗರಾಜು, ಉಪವಿಭಾಗಾಧಿಕಾರಿಗಳು, ಬೆಂಗಳೂರು ದಕ್ಷಿಣ ಉಪವಿಭಾಗ-9448089753
ಶ್ರೀ ರಂಗನಾಥ, ಉಪವಿಭಾಗಾಧಿಕಾರಿಗಳು, ಬೆಂಗಳೂರು ಉತ್ತರ ಉಪವಿಭಾಗ - 9886241563
ಶ್ರೀ ನಾಗರಾಜ್‍ರೆಡ್ಡಿ, ಸಹಾಯಕ ಆಯುಕ್ತರು, (ಜಾರಿದಳ) ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು- 9448852738
ಶ್ರೀಮತಿ.ಪೂರ್ಣಿಮ.ಪಿ.ವಿ. ಸಹಾಯಕ ಆಯುಕ್ತರು, (ಜಾರಿದಳ) ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು-9900525708
ಡಾ|| ಮಮತ, ತಹಶೀಲ್ದಾರ್, ಜಾರಿದಳ, ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು- 984462933
ಡಾ|| ಎಸ್.ಎಂ.ಶಿವಕುಮಾರ್, ತಹಶೀಲ್ದಾರ್, ಬೆಂಗಳೂರು ದಕ್ಷಿಣ ತಾಲ್ಲೂಕು – 9980017403
ಶ್ರೀ ಶಿವಪ್ಪ ಹೆಚ್ ಲಮಾಣಿ, ತಹಶೀಲ್ದಾರ್, ಬೆಂಗಳೂರು ಉತ್ತರ ತಾಲ್ಲೂಕು - 9844467038
ಡಾ|| ಹರೀಶ್ ನಾಯ್ಕ್, ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು - 9845923449
ಶ್ರೀ ಅನಿಲ್‍ಕುಮಾರ್, ತಹಶೀಲ್ದಾರ್, ಆನೇಕಲ್ ತಾಲ್ಲೂಕು – 9632950189