Government of Karnataka

Department of Information

Monday 02/05/2016

District News 09-02-2016

Date : Tuesday, February 9th, 2016
ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ
1. ಬೆಂಗಳೂರು ನಗರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಪೂರ್ವ ಸಿದ್ಧತೆ ಕುರಿತು ಪತ್ರಿಕಾ ಗೋಷ್ಠಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶ್ರೀ ವಿ.ಶಂಕರ್ ಜಿಲ್ಲಾ ಚುನಾವಣಾ ವೀಕ್ಷಕ ಶ್ರೀ ಮನೋಜ್‌ಕುಮಾರ್, ಐಎಫ್‌ಎಸ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಶ್ರೀ ರಮೇಶ್ ದಿನಾಂಕ: 10-2-2016 ಬೆಳಿಗ್ಗೆ 11-00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ, ಕೆ.ಜಿ.ರಸ್ತೆ, ಬೆಂಗಳೂರು

ಬೆಂಗಳೂರು ನಗರ ಜಿಲ್ಲೆ : 312 ಸೂಕ್ಷ್ಮ, 230 ಅತಿ ಸೂಕ್ಷ್ಮ ಮತಗಟ್ಟೆಗಳು

ಬೆಂಗಳೂರು, ಫೆ, 9: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯು ಶಾಂತಿಯುತವಾಗಿ ನಡೆಯಲು ಅನುಕೂಲವಾಗುವಂತೆ ಚುನಾವಣಾ ಅಧಿಕಾರಿ/ಸಿಬ್ಬಂದಿ ನಿದ್ರಾಕ್ಷೀಣ್ಯವಾಗಿ ಕೆಲಸ ನಿರ್ವಹಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾ ವೀಕ್ಷಕ ಶ್ರೀ ಮನೋಜ್‍ಕುಮಾರ್ ಅವರು ಸೂಚಿಸಿದರು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಇದೇ 13 ರಂದು ನಡೆಯುವ ಚುನಾವಣಾ ಪೂರ್ವಸಿದ್ಧತೆ ಕುರಿತು ಪೊಲೀಸ್, ಅಬಕಾರಿ, ಜಿಲ್ಲಾಡಳಿತ ಮತ್ತು ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಎಂ.ಸಿ.ಸಿ. ಸಮಿತಿಯು ತೀವ್ರ ಗಮನ ನೀಡಬೇಕು. ಪೊಲೀಸ್ ಸಿಬ್ಬಂದಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ವ್ಯವಸ್ಥೆ ಹಾಗೂ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸೂಕ್ತ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಅವರು ತಿಳಿಸಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಶ್ರೀ ವಿ.ಶಂಕರ್ ಅವರು ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಮತ್ತು ಆನೇಕಲ್ ತಾಲ್ಲೂಕುಗಳಲ್ಲಿ ಒಟ್ಟು 50 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ 6 ಚುನಾವಣಾಧಿಕಾರಿಗಳು, 6 ಸಹಾಯಕ ಚುನಾವಣಾಧಿಕಾರಿಗಳು ಮತ್ತು 97 ತಾಲ್ಲೂಕು ಪಂಚಾಯತ್ ಕ್ಷೇತ್ರಗಳು, 8 ಚುನಾವಣಾಧಿಕಾರಿಗಳು, 8 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಒಟ್ಟು ಮತಗಟ್ಟೆಗಳ ಸಂಖ್ಯೆ 878 ಅವುಗಳಲ್ಲಿ 312 ಸೂಕ್ಷ್ಮ, 230 ಅತಿ ಸೂಕ್ಷ್ಮ ಮತ್ತು 236 ಸಾಮಾನ್ಯ ಮತಗಟ್ಟೆಗಳಿಗೆ ಒಟ್ಟು ಮತದಾರರ ಸಂಖ್ಯೆ 840449 ಅವರಲ್ಲಿ 427291 ಗಂಡಸರು, 392767 ಹೆಂಗಸರು ಪೂರಕಪಟ್ಟಿಯಲ್ಲಿ ಒಟ್ಟು 20259 ಮತದಾರರಿದ್ದಾರೆ.

ನೀತಿ ಸಂಹಿತೆ: ಚುನಾವಣಾ ನೀತಿ ಸಂಹಿತೆಯು ದಿನಾಂಕ: 18-1-2016 ರಿಂದ 24-2-2016 ರವರೆಗೆ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಗೆ ಅನ್ವಯಿಸುತ್ತದೆ. ಬಿತ್ತಿಪತ್ರ, ಬ್ಯಾನರ್, ಕಟೌಟ್, ಬೋರ್ಡ್ ಇತ್ಯಾದಿಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆ ಸಮಾರಂಭಗಳಿಗೆ ಸಂಬಂಧಪಟ್ಟಂತೆ ಚುನಾವಣಾಧಿಕಾರಿ, ಪೊಲೀಸ್, ಸಾರಿಗೆ ಅಥವಾ ಸ್ಥಳೀಯ ಪ್ರಾಧಿಕಾರಿಗಳಿಂದ ಅನುಮತಿ ಪಡೆಯಬೇಕು ಎಂದು ತಿಳಿಸಿದ ಅವರು ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಜಿಲ್ಲಾ ಪಂಚಾಯಿತಿಗೆ ರೂ. 1.00 ಲಕ್ಷ, ತಾಲ್ಲೂಕು ಪಂಚಾಯಿತಿಗೆ ರೂ. 50,000 ಗಳಿಗೆ ಚುನಾವಣಾ ವೆಚ್ಚ ಮಿತಿಗೊಳಿಸಲಾಗಿದೆ.
ಸಂತೆ-ಜಾತ್ರೆ ನಿಷೇಧ: ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ದಿನಾಂಕ: 23-1-2016 ರಿಂದ 23-2-2016 ರವರೆಗೆ ಸಂತೆ-ಜಾತ್ರೆ ಇತ್ಯಾದಿಗಳನ್ನು ನಡೆಸದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಪಾನ ನಿರೋಧ: ಮತದಾನದ ಮುನ್ನಾ ದಿನ ಅಂದರೆ ದಿನಾಂಕ: 12-2-2016 ರಂದು ಬೆಳಿಗ್ಗೆ 7 ಗಂಟೆಯಿಂದ ದಿನಾಂಕ: 13-02-2016ರ ಮದ್ಯರಾತ್ರಿ 12.00 ಗಂಟೆವರೆಗೆ ಹಾಗೂ ಮತ ಎಣಿಕೆ ಮುನ್ನಾ ದಿನ ಅಂದರೆ ದಿನಾಂಕ: 22-2-2016 ರ ರಾತ್ರಿ 10 ಗಂಟೆಯಿಂದ ದಿನಾಂಕ: 23-2-2016ರ ಮದ್ಯರಾತ್ರಿ 12 ಗಂಟೆವರೆಗೆ ಮದ್ಯ ಮಾರಾಟ, ಸರಬರಾಜು, ಅಕ್ರಮ ಮದ್ಯಮ ಸಾಗಾಣಿಕೆ ನಿಷೇಧಿಸಲಾಗಿದೆ ಎಂದು ಅವರು ಅಬಕಾರಿ ಅಧಿಕಾರಿಗಳಿಗೆ ಹೇಳಿದರು.

ತರಬೇತಿ: ಚುನಾವಣಾ ಕಾರ್ಯಕ್ಕೆ ನಿಯೋಜಿತಗೊಂಡ ಸಿಬ್ಬಂದಿಗೆ ಹಂಚಿಕೆ ಮಾಡಲಾದ ತಾಲ್ಲೂಕುಗಳಲ್ಲಿ ದಿನಾಂಕ:12-2-2016 ರಂದು ಮಸ್ಟರಿಂಗ್ ಕೇಂದ್ರದಲ್ಲಿ ತಪ್ಪದೇ ಹಾಜರಾಗಬೇಕೆಂದು ಸೂಚಿಸಿದರು. ದಿನಾಂಕ: 19-12-2016 ರಂದು ಚುನಾವಣಾಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಸಹಾಯಕರಿಗೆ ತರಬೇತಿ ನೀಡಲಾಗುವುದು. ಚುನಾವಣಾ ಕಾರ್ಯದಲ್ಲಿ ಗೈರುಹಾಜರಾದ ಸಿಬ್ಬಂದಿಯ ವಿರುದ್ಧ ಶಿಸ್ತು ಕ್ರಮ ಜರುಗಿಸಿ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಹೇಳಿದರು.

ವೀಕ್ಷಕರ ನೇಮಕ: ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ನಡೆಯುವ ಚುನಾವಣೆಗೆ ವೀಕ್ಷಕರಾಗಿ ಶ್ರೀ ಮನೋಜ್‍ಕುಮಾರ್, ಐಎಫ್‍ಎಸ್, ಅವರನ್ನು ನೇಮಿಸಲಾಗಿದೆ. ಅವರ ಮೊಬೈಲ್ ಸಂಖ್ಯೆ: 9448343336 ಇ-ಮೇಲ್ [email protected]

ಕಡ್ಡಾಯ ಮತದಾನ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಪಂಚಾಯಿತಿಯ ಮತದಾರರ ಪಟ್ಟಿಯಲ್ಲಿ ಹೆಸರಿರುವ ವ್ಯಕ್ತಿಯು ಕಡ್ಡಾಯವಾಗು ಮತದಾನ ಮಾಡಬೇಕೆಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿ ಶ್ರೀ ಆರ್.ವೆಂಕಟಾಚಲಪತಿ, ಚುನಾವಣಾ ವೆಚ್ಚ ವೀಕ್ಷಕ ಶ್ರೀ ನಾಗೇಶ್, ಬೆಂಗಳೂರು ಜಿಲ್ಲಾ ವರಿಷ್ಠಾಧಿಕಾರಿ ಶ್ರೀ ರಮೇಶ್, ಉಪವಿಭಾಗಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅಬಕಾರಿ ಹಿರಿಯ ಅಧಿಕಾರಿಗಳು, ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.