Government of Karnataka

Department of Information

Wednesday 29/06/2016

District News 20-06-2016

Date : Monday, June 20th, 2016

ಮದ್ಯವರ್ತಿಗಳನ್ನು ದೂರವಿಟ್ಟು ಸಾಲಸೌಲಭ್ಯ ಕಲ್ಪಿಸಲು ಬ್ಯಾಂಕ್ ಅಧಿಕಾರಿಗಳಿಗೆ ಪಿ.ಸಿ. ಮೋಹನ್ ಸೂಚನೆ

ಬೆಂಗಳೂರು, ಜೂನ್, 20: ಬ್ಯಾಂಕುಗಳು ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲಸೌಲಭ್ಯಗಳನ್ನು ನೀಡುವಾಗ ಮದ್ಯವರ್ತಿಗಳನ್ನು ದೂರವಿಟ್ಟು ನೇರವಾಗಿ ಫಲಾನುಭವಿಗಳಿಗೆ ಸಹಾಯ ಹಸ್ತ ನೀಡಬೇಕೆಂದು ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರು ಬ್ಯಾಂಕ್ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಅವರು ಇಂದು ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಾದ ಕೆನರಾ ಬ್ಯಾಂಕ್ ಆಯೋಜಿಸಿದ್ದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರದ ವಿವಿಧ ಯೋಜನೆಗಳಡಿ ಫಲಾನುಭವಿಗಳನ್ನು ಗುರುತಿಸುವಾಗ ಮದ್ಯವರ್ತಿಗಳನ್ನು ದೂರವಿಟ್ಟು ಅರ್ಹರನ್ನು ಗುರುತಿಸಿ ಸಾಲಸೌಲಭ್ಯ ನೀಡಬೇಕೆಂದು ತಿಳಿಸಿದರಲ್ಲದೆ ನಗರದ ಶಿವಾಜಿನಗರ, ಜಯನಗರ, ಕೃಷ್ಣರಾಜ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ಹಾಗೂ ಮುಂತಾದ ಕಡೆಗಳಲ್ಲಿ ರಸ್ತೆ ಬದಿ ವ್ಯಾಪಾರ ಮಾಡುವ ಅತಿ ಸಣ್ಣ ವ್ಯಾಪಾರಿಗಳು ಇಂದಿಗೂ ಮೀಟರ್ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಿದ್ದಾರೆ. ಬಡ ವ್ಯಾಪಾರಿಗಳು ಪಡೆಯುವ ಸಣ್ಣ ಪ್ರಮಾಣದ ಮೊತ್ತಕ್ಕೆ ಅತಿ ಹೆಚ್ಚು ಬಡ್ಡಿ ತೆರುತ್ತಿದ್ದಾರೆ. ಬ್ಯಾಂಕುಗಳು ಸಣ್ಣ ವ್ಯಾಪಾರಿಗಳಿಗೆ ಸುಲಭದಲ್ಲಿ ಸಾಲ ನೀಡುವ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಿ.ಮುನಿರಾಜು ಅವರು ಮಾತನಾಡಿ ಮುದ್ರಾ, ಪ್ರಧಾನಮಂತ್ರಿ ವಿಮಾ ಯೋಜನೆ ಇನ್ನೂ ಮುಂತಾದ ಜನಪ್ರಿಯ ಸಾಲ ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಇಂತಹ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರಿಗೆ ಅದರ ಬಗ್ಗೆ ಅರಿವಿರಬೇಕು. ಇದರಿಂದಾಗಿ ಸಂಬಂಧಪಟ್ಟ ಇಲಾಖೆಗಳು, ಬ್ಯಾಂಕುಗಳು, ಸ್ಥಳೀಯ ಮುಖಂಡರು, ಕ್ಷೇತ್ರಾವಾರು ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದರು.

ಸಭೆಯಲ್ಲಿ ರಿಸರ್ವ್ ಬ್ಯಾಂಕಿನ ಎ.ಜಿ.ಎಂ. ಶಿಲ್ಪಾಕುಮಾರಿ, ಕೆನರಾ ಬ್ಯಾಂಕಿನ ಡಿ.ಜಿ.ಎಂ. ವಿಜಯಕುಮಾರ್ ಸೇರಿದಂತೆ ವಿವಿಧ ಬ್ಯಾಂಕುಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಧ್ಯಮ ಆಹ್ವಾನ

ಕ್ರ.ಸಂ. ಕಾರ್ಯಕ್ರಮದ ವಿವರ ದಿನಾಂಕ ಸಮಯ ಸ್ಥಳ
1. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ  ಕರ್ನಾಟಕ ರಾಜ್ಯದ ಪ್ರಪ್ರಥಮ ಅನಿಲ ಆಧಾರಿತ  1X370 ಮೆಗಾ ವಾಟ್ ಸಾಮರ್ಥ್ಯದ ಯಲಹಂಕ ಸಂಯುಕ್ತ ಆವರ್ತ ವಿದ್ಯುತ್ ಸ್ಥಾವರ ಸ್ಥಾಪನೆಯ ಆರಂಭಿಕ ಕಾಮಗಾರಿಗಳ ಉದ್ಘಾಟನಾ ಸಮಾರಂಭ  ಉದ್ಘಾಟನೆ :  ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕಿರು ಹೊತ್ತಿಗೆ ಬಿಡುಗಡೆ: ಶ್ರೀ ಡಿ.ಕೆ.ಶಿವಕುಮಾರ್ ಇಂಧನ ಸಚಿವರು  ದಿನಾಂಕ: 21-06-2016 ಬೆಳಿಗ್ಗೆ 11-00 ಗಂಟೆಗೆ ಯಲಹಂಕ ಯೋಜನಾ ಪ್ರದೇಶ, ಕೆಪಿಸಿಎಲ್, ಬೆಂಗಳೂರು ದೊಡ್ಡಬಳ್ಳಾಪುರ ರಸ್ತೆ, ಬೆಂಗಳೂರು - 560 064.

ಉಪನಿರ್ದೇಶಕರು