Government of Karnataka

Department of Information

Wednesday 29/06/2016

District News 21-06-2016

Date : Tuesday, June 21st, 2016

ಉದ್ಯೋಗಿನಿ ಸಹಾಯಧನ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು: ಜೂ 21. (ಕರ್ನಾಟಕ ವಾರ್ತೆ): ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯ ಪಡೆಯಲಿಚ್ಫಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ಮಹಿಳೆಯರು ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರುಗಳಿಂದ ಅರ್ಜಿ ಆಹ್ವಾನಿಸಿದೆ.

ಉದ್ಯೋಗಿನಿ ಯೋಜನೆಯಡಿ ನಿಗಮವು, ಬ್ಯಾಂಕ್ ಮೂಲಕ ಗರಿಷ್ಠ ಒಂದು ಲಕ್ಷದವರೆಗೆ ಸಹಾಯಧನ ಒದಗಿಸಲಿದ್ದು, ಕೌಟುಂಬಿಕ ವಾರ್ಷಿಕ ಅದಾಯ 40 ಸಾವಿರ ಮೀರಿರಬಾರದು. 18 ರಿಂದ 45 ವರ್ಷ ವಯೋಮಿತಿಯುಳ್ಳ ಎಲ್ಲಾ ವರ್ಗದ ಮಹಿಳೆಯರು, ಅರ್ಜಿ ಸಲ್ಲಿಸಬಹುದಾಗಿದೆ. ವಿಧವೆಯರು, ಅಂಗವಿಕಲರು ಮತ್ತು ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು.

ಜಿಲ್ಲೆಯ ಆಯಾ ತಾಲ್ಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 15 ರೊಳಗೆ ಸಲ್ಲಿಸಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಂ:5, 3ನೇ ಮಹಡಿ, ಪಿ.ಆರ್. ಪ್ಲಾಜಾ, ವಾಟಾಳ್ ನಾಗರಾಜ್ ರಸ್ತೆ, ಓಕಳೀಪುರಂ, ಬೆಂಗಳೂರು-21, ದೂರವಾಣಿ ಸಂಖ್ಯೆ:9242213527 ನ್ನು ಸಂಪರ್ಕಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಂದಿನ 5 ವರ್ಷದಲ್ಲಿ 9 ಸಾವಿರ ಮೆಗಾವ್ಯಾಟ್ಸ್ ವಿದ್ಯುತ್ ಉತ್ಪಾದನೆ ಪರಿಸರಕ್ಕೆ ಹಾನಿಯಾಗದಂತೆ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಗೆ ಆದ್ಯತೆ

ಬೆಂಗಳೂರು: ಜೂ. 21. (ಕರ್ನಾಟಕ ವಾರ್ತೆ): ಮುಂದಿನ 5 ವರ್ಷದಲ್ಲಿ ರಾಜ್ಯದಲ್ಲಿ 9 ಸಾವಿರ ಮೆಗಾವ್ಯಾಟ್ಸ್ ವಿದ್ಯುತ್ ಉತ್ಪಾದಿಸಲಾಗುವುದಲ್ಲದೆ ಪರಿಸರ ಹಾನಿ ತಡೆಯುವ ದೃಷ್ಟಿಯಂದ ಅನಿಲ ಆಧಾರಿತ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಯಲಹಂಕ ಸಮೀಪ ರಾಜ್ಯದಲ್ಲಿಯೆ ಪ್ರಪ್ರಥಮ ಅನಿಲ ಆಧಾರಿತ 370 ಮೆಗಾವಾಟ್ಸ್ ಸಾಮಥ್ರ್ಯದ ಯಲಹಂಕ ಸಂಯುಕ್ತ ಆವರ್ತಕ ವಿದ್ಯುತ್ ಸ್ಥಾವರ ಸ್ಥಾಪನೆಯ ಆರಂಭಿಕ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜಾಗತಿಕ ತಾಪಮಾನ ಕಾಪಾಡಿಕೊಳ್ಳುವ ಜವಾಬ್ದಾರಿಯ ಬದ್ದತೆಯೊಂದಿಗೆ ಸರ್ಕಾರ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದು, ಈಗಾಗಲೇ ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ದೇಶದ ಗಮನ ಸೆಳೆದಿರುವ ಕರ್ನಾಟಕ ಸರ್ಕಾರ ಮಹತ್ವಕಾಂಕ್ಷಿಯ ಅನಿಲ ವಿದ್ಯುತ್ ಸ್ಥಾವರದ ಸ್ಥಾಪನೆಗೆ ಮುಂದಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಕೈಗಾರಿಕೆಗಳಿಗೆ, ಕೃಷಿಗೆ ಹಾಗೂ ಗ್ರಾಹಕರಿಗೆ ವಿದ್ಯುತ್ ಸಮಸ್ಯೆಯಾಗದಂತೆ ಉತ್ಪಾದನೆ ಮತ್ತು ವಿತರಣೆ ಎರಡಕ್ಕೂ ಆದ್ಯತೆ ನೀಡಲಾಗುವುದಲ್ಲದೆ ಹಲವಾರು ಸುಧಾರಣೆಗಳ ಮೂಲಕ ಗುಣಮಟ್ಟದ ವಿದ್ಯುತ್ ಪೂರೈಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ವಿದ್ಯುತ್ ನಿಗಮವು ಆರಂಭದಲ್ಲಿ 750 ಮೆಗಾವ್ಯಾಟ್ಸ್ ವಿದ್ಯುತ್ ಉತ್ಪಾದಿದಲಾಗುತ್ತಿತ್ತು. ಪ್ರಸ್ತುತವಾಗಿ 6250 ಮೆಗಾವ್ಯಾಟ್ಸ್ ಉತ್ಪಾಸಲಾಗುತ್ತಿದೆ. ಆದರು ಬೇಡಿಕೆ ತೀವ್ರವಾಗಿದ್ದು, ಬೇಡಿಕೆಗಳಿಗೆ ಅನುಗುಣವಾಗಿ ವಿದ್ಯುತ್ ಉತ್ಪಾದಿಸಲು ಸರ್ಕಾರ ಎಲ್ಲಾ ರೀತಿಯ ಯೋಜನೆಗಳನ್ನು ರೂಪಿಸಲು ಮುಂದಾಗಿದೆ ಎಂದರು.

ಆಧುನಿಕ ಬದಲಾವಣೆ ಹಾಗೂ ಅಭಿವೃದ್ದಿಗೆ ನೀರು, ವಿದ್ಯುತ್, ಅತ್ಯಾವಶ್ಯಕ ಇದರಿಂದಾಗಿ ಜಲವಿದ್ಯುತ್ ಉತ್ಪಾದನೆಗೆ ನೀರು ಹೆಚ್ಚು ಬೇಕಾಗುತ್ತಿದ್ದು, ನೀರನ್ನು ಉಳಿಸುವ ದೃಷ್ಟಿಯಿಂದ ಅನಿಲ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದರು.

ಇತೀಚೆಗೆ ನಡೆದ ವಿಶ್ವ ಬಂಡವಾಲ ಹೂಡಿಕೆದಾರರ ಸಮಾವೇಶದಲ್ಲಿ ವಿದೇಶಿ ಕೈಗಾರಿಕೋದ್ಯಮಿಗಳು ವಿದ್ಯುತ್ ಸೇರಿದಂತೆ ರಾಜ್ಯದ, ಮೂಲ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಿ ವಿದ್ಯುತ್ ಉತ್ಪಾದಿಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದರು. ಯಲಹಂಕ ಕ್ಷೇತ್ರದ ಶಾಸಕರ ಬೇಡಿಕೆಯಂತೆ ಪುಟ್ಟೇನಹಳ್ಳಿ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.

ಸಮಾರಂಭದಲ್ಲಿ ಅನಿಲ ವಿದ್ಯುತ್ ಸ್ಥಾವರ ವಿತರಣೆ ಕಿರುಹೊತ್ತಿಗೆ ಬಿಡುಗಡೆ ಮಾಡಿದ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಅವರು ಮಾತನಾಡಿ ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದೆ. ಜನಸಂಖ್ಯೆಯು ತೀವ್ರಗೊಳ್ಳುತ್ತಿದೆ. ಕೈಗಾರಿಕೆ, ವ್ಯಾಪಾರ, ವ್ಯವಹಾರಗಳು ಹೆಚ್ಚುತ್ತಿವೆ. ಇದರಿಂದಾಗಿ ಬೆಂಗಳೂರಿನ ಜನರಿಗೆ ನಿರಂತರವಾಗಿ ವಿದ್ಯುತ್ ಕಲ್ಪಿಸಲು ರಾಜ್ಯದಲ್ಲಿಯೆ ಪ್ರಥಮ ಬಾರಿಗೆ 1500 ಕೋಟಿ ವೆಚ್ಚದಲ್ಲಿ ಅನಿಲ ಆಧಾರಿತ 370 ಮೆಗಾವ್ಯಾಟ್ಸ್ ವಿದ್ಯುತ್ ಉತ್ಪಾದಿಸಲಾಗುವದು ಎಂದರು.

ಕರ್ನಾಟಕ ಸರ್ಕಾರದ ವಿದ್ಯುತ್ ಸಚಿವಾಲಯದ ಸಾಧನೆಗಾಗಿ ಈಗಾಗಲೇ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದು, ಪ್ರಧಾನ ಮಂತ್ರಿಗಳು ಸಹ ಪಕ್ಷಭೇದ ಮರೆತು ನಮ್ಮ ಸಾಧನೆಯನ್ನು ಹೊಗಳಿದ್ದಾರೆ. ಉಳಿದ ರಾಜ್ಯಗಳಿಗೆ ನಮ್ಮ ಮಾದರಿಯನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.

ವಿದ್ಯುತ್ ಉತ್ಪಾದನೆ ಮಾಡುವುದರ ಜೊತೆಗೆ ವಿತರಣೆ ಕಡೆಯು ಗಮನ ಹರಿಸಲಾಗಿದೆ. ರೈತರಿಗಾಗುವ ತೊಂದರೆ ತಪ್ಪಿಸುವ ದೃಷ್ಟಿಯಿಂದ ತಾಲ್ಲೂಕಿಗೊಂದು ಟ್ರಾನ್ಸ್‍ಫರ್ ರಿಪೇರಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಲೋಕ ಸಭೆ ಸದಸ್ಯ ಡಾ|| ಎಂ. ವೀರಪ್ಪ ಮೊಯ್ಲಿ ಮಾತನಾಡಿ, ಕೇಂದ್ರ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿದ್ದಾಗ ಮಹರಾಷ್ಟದ ದಾಬೋಲ್‍ನಿಂದ ಬೆಂಗಳೂರಿನಿಂದ ಬಿಡದಿವರೆಗೆ 1000 ಕಿ.ಮೀ. ಪೈಪ್‍ಲೈನ್ ಮೂಲಕ ಅನಿಲ ಸಾಗಾಣಿಕೆಗೆ ಒತ್ತು ನೀಡಿದ್ದರ ಫಲವಾಗಿ ಅನಿಲ ಆಧಾರಿತ ವಿದ್ಯತ್ ಉತ್ಪಾದನೆ ಸಾಧ್ಯವಾಗುತ್ತಿದೆ. ಒನ್‍ಗ್ರಿಡ್ ಒನ್ ನೇಷನ್ ಪರಿಕಲ್ಪನೆಯ ಅಡಿಯಲ್ಲಿ ವಿದ್ಯುತ್ ಸಾಗಣಿಕೆಯ ಬಗ್ಗೆಯು ಸಹ ಗಮನ ಹರಿಸಲಾಗಿದೆ. ಈಗಾಗಲೆ ರಾಜ್ಯ ಕೈಗಾರಿಕೆ ಅಭಿವೃದ್ದಿಯಲ್ಲಿ 3ನೇ ಸ್ಥಾನದಲ್ಲಿದ್ದು, ಮುಂದಿನ ಎರಡು ವರ್ಷದಲ್ಲಿ ಮೊದಲ ಸ್ಥಾನ ಪಡೆಯಬೇಕೆಂದು ಸಲಹೆ ನೀಡಿದರು. ಶಾಸಕ ಎಸ್.ಆರ್. ವಿಶ್ವನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಹಾಗೂ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ವಿಧಾನಪರಿಷತ್ ಸದಸ್ಯರುಗಳಾದ ರಾಮಚಂದ್ರಗೌಡ, ನಾರಾಯಣಸ್ವಾಮಿ, ಶಾಸಕ ಗೋವಿಂದರಾಜು, ಮಹಾ ನಗರ ಪಾಲಕೆ ಸದಸ್ಯ ಶ್ರೀಮತಿ ಪದ್ಮಾವತಿ ಅಮರನಾಥ್, ಬಿಹೆಚ್‍ಇಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನೀಲ್‍ಸೊಪ್ತಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜಿ ಕುಮಾರ್ ನಾಯಕ್ ಅವರು ಸ್ವಾಗತಿಸಿದರು.