Government of Karnataka

Department of Information

Thursday 30/06/2016

District News 28-04-2016

Date : Thursday, April 28th, 2016

ಟಿಓಪಿವಿ ಲಸಿಕೆಯ ಬದಲು ಬಿಓಪಿವಿ ಲಸಿಕೆ ಕಡ್ಡಾಯ

ಬೆಂಗಳೂರು, ಏಪ್ರಿಲ್ 28: ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯನ್ವಯ, ವಿಶ್ವಾದ್ಯಂತ tOPV (Trivalent oral polio vaccine) ಲಸಿಕೆಯನ್ನು ಹಿಂಪಡೆದಿರುವುದರಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಖಾಸಗಿಯಾಗಿ ವೈದ್ಯ ವೃತ್ತಿ ಅಭ್ಯಸಿಸುತ್ತಿರುವ ವೈದ್ಯರು 25ನೇ ಏಪ್ರಿಲ್ 2016 ರ ನಂತರ ಯಾವುದೇ ಕಾರಣಕ್ಕೂ tOPV (Trivalent oral polio vaccine) ಲಸಿಕೆಯನ್ನು ಬಳಸದೇ, ಬದಲಾಗಿ bOPV (Bivalent oral polio vaccine) ಲಸಿಕೆಯನ್ನು ಕಡ್ಡಾಯವಾಗಿ ಬಳಕೆಗೆ ತರಬೇಕು ಎಂದು ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ತಿಳಿಸಿದ್ದಾರೆ.

ಖಾಸಗಿ ವೈದ್ಯರು ತಮ್ಮಲ್ಲಿ ಉಳಿದಿರುವ tOPV (Trivalent oral polio vaccine)  ನ್ನು ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿಗಳ ಕಛೇರಿ, ಕೆಂಪೇಗೌಡ ರಸ್ತೆ, ಬನ್ನಪ್ಪ ಪಾರ್ಕ್, ಕಬ್ಬನ್ ಪೇಟೆ, 9ನೇ ಕ್ರಾಸ್ ಹತ್ತಿರ, ಬೆಂಗಳೂರು – 560 002 ದೂರವಾಣಿ: 94498 43182 ಇಲ್ಲಿಗೆ ಹಿಂತಿರುಗಿಸಿ ಸ್ವೀಕೃತಿ ಪಡೆಯುವುದು.