Government of Karnataka

Department of Information

Tuesday 13/09/2016

it’s a great moral strength that Dr. Shivakumara Swamiji is amidst us, Says Siddaramaiah

Date : Friday, April 1st, 2016

ತುಮಕೂರು, ಏಪ್ರಿಲ್ 1 (ಕರ್ನಾಟಕ ವಾರ್ತೆ) :  ಸಿದ್ದಗಂಗಾ ಮಠಾಧೀಶರಾದ ಡಾ ಶಿವಕುಮಾರ ಮಹಾ ಸ್ವಾಮೀಜಿ ಅವರು ನಮ್ಮೊಡನೆ ಇರುವುದೇ ನಮಗೆ ದೊಡ್ಡ ನೈತಿಕ ಶಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಣ್ಣಿಸಿದ್ದಾರೆ.

ಶ್ರೀಗಳ 109 ನೇ ಜನ್ಮ ದಿನಾಚರಣೆಯ ಸುಸಂದರ್ಭದಲ್ಲಿ ಶುಕ್ರವಾರ ಸಿದ್ದಗಂಗಾ ಮಠಕ್ಕೆ ತೆರಳಿ ಗೌರವ ಸಮರ್ಪಿಸಿದ ಬಳಿಕ ಮುಖ್ಯಮಂತ್ರಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದರು.

ಡಾ ಶಿವಕುಮಾರ ಮಹಾ ಸ್ವಾಮೀಜಿ ಅವರು 109 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶ್ರೀಗಳು ಇನ್ನೂ ಧೀರ್ಘ ಕಾಲ ಬಾಳಿ ಬೆಳಗಲಿ ಎಂದು ದೇವರಲ್ಲಿ ನಾನು ಪ್ರಾರ್ಥಿಸುತ್ತೇನೆ. ಲಕ್ಷಾಂತರ ಮಕ್ಕಳಿಗೆ ಅನ್ನ ದಾಸೋಹ, ಅಕ್ಷರ ದಾಸೋಹ, ಉತ್ತಮ ಸಂಸ್ಕಾರ ನೀಡುತ್ತಿರುವ ಸ್ವಾಮೀಜಿಯವರು, ಮಹತ್ವದ ಸಮಾಜಮುಖಿ ಕಾಯಕದಲ್ಲಿ ತೊಡಗಿದ್ದಾರೆ. ಇಲ್ಲಿ ಶಿಕ್ಷಣ ಪಡೆದವರು, ದೇಶ ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿದ್ದಾರೆ. ಶ್ರೀಗಳ ಸೇವೆ ಅವಿಸ್ಮರಣೀಯವಾದದ್ದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ಇಳಿ ವಯಸ್ಸಿನಲ್ಲೂ ಯುವಕರೂ ನಾಚುವ ರೀತಿಯಲ್ಲಿ ಶ್ರೀಗಳು ಪ್ರತಿನಿತ್ಯಯೂ ಚಾಚೂತಪ್ಪದೆ ಕೆಲಸ ಕಾರ್ಯ ಮಾಡುತ್ತಿದ್ದಾರೆ. ಕಾಯಕವೇ ಕೈಲಾಸ ಎಂಬ ಅಣ್ಣ ಬಸವಣ್ಣನವರ ತತ್ವಗಳಲ್ಲಿ ನಂಬಿಕೆ ಇಟ್ಟು, ಪ್ರತಿಯೊಬ್ಬರೂ ಕಾಯಕ ಮತ್ತು ದಾಸೋಹದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಈ ಪ್ರಯತ್ನ ಅಭೂತಪೂರ್ವವಾದದ್ದು ಎಂದು ಸಿದ್ದರಾಮಯ್ಯ ಅವರ ಮನಸಾರೆ ಕೊಂಡಾಡಿದ್ದಾರೆ.