Government of Karnataka

Department of Information

Sunday 10/07/2016

State News 02-07-2016

Date : Saturday, July 2nd, 2016
ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ
1. ಇಪ್ಪತ್ಮೂರು ಪುಸ್ತಕಗಳ ಲೋಕಾರ್ಪಣೆ: ಪುಸ್ತಕಗಳ ಲೋಕಾರ್ಪಣೆ: ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಅಧ್ಯಕ್ಷತೆ: ಆರ್. ರೋಷನ್ ಬೇಗ್, ನಗರಾಭಿವೃದ್ಧಿ ಮತ್ತು ಹಜ್ ಸಚಿವರು 03-07-2016 ಭಾನುವಾರ ಮಧ್ಯಾಹ್ನ
3-30 ಗಂಟೆಗೆ
ಯವನಿಕಾ ಸಭಾಂಗಣ, ನೃಪತುಂಗಾ ರಸ್ತೆ,ಬೆಂಗಳೂರು
2. ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರೀಯ ವಿಚಾರ ಸಂಕಿರಣ. ಉದ್ಫಾಟನೆ: ಶ್ರೀ ಕಾಗೋಡು ತಿಮ್ಮಪ್ಪ, ಕಂದಾಯ ಸಚಿವರು ಮುಖ್ಯ ಅತಿಥಿಗಳು: ಕೆ.ಆರ್. ರಮೇಶ್‌ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರು. ಮುಖ್ಯ ಭಾಷಣ: ಟಿ.ಬಿ. ಜಯಚಂದ್ರ, ಕಾನೂನು ಮತ್ತು ಸಂಸದೀಯ ಸಚಿವರು. 04-07-2016 ಸೋಮವಾರ ಬೆಳಿಗ್ಗೆ   9-00 ಗಂಟೆಗೆ ಯವನಿಕಾ ಸಭಾಂಗಣ, ನೃಪತುಂಗಾ ರಸ್ತೆ,ಬೆಂಗಳೂರು
3. The Economic Times Startup Awards 2016

Chief Guest: Siddaramaiah,
Chief Minister, Karnataka

3-7-2016
Sunday
at
6.00 P.M.
ITC Gardenia, Residency Road,
Bengaluru

ಏಜೆನ್ಸಿ ರದ್ದು

ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ): ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ಅಂಚೆ ಕಚೇರಿ ಹಾಗೂ ರಾಜಾಜಿನಗರ ಮುಖ್ಯ ಅಂಚೆ ಕಚೇರಿಗಳಲ್ಲಿ ಸಣ್ಣ ಉಳಿತಾಯ ಏಜೆನ್ಸಿ ನಿರ್ವಹಿಸುತ್ತಿರುವ ಶ್ರೀಮತಿ ಕೆ. ಪದ್ಮಾವತಿ ಅವರ ಏಜೆನ್ಸಿ ರದ್ದುಪಡಿಸಲಾಗಿದ್ದು, ಇವರ ಮೂಲಕ ಯಾರೂ ಸಣ್ಣ ಉಳಿತಾಯ ಠೇವಣಿ ಮಾಡಬಾರದೆಂದು ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ನಿರ್ವಹಣೆ, ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರಪ್ರಶಸ್ತಿ

ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ): ಕಲೆ, ಸಾಂಸ್ಕøತಿಕ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರೀಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡುತ್ತದೆ. ಭಾರತದಲ್ಲಿ ನೆಲೆಸಿರುವ ಮತ್ತು ಮಕ್ಕಳ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ 9 ರಿಂದ 16 ವರ್ಷದೊಳಗಿನ ಅಂದರೆ ದಿನಾಂಕ: 01-08-2000 ಹಾಗೂ ನಂತರ ಹುಟ್ಟಿದ 2016ನೇ ಸಾಲಿಗೆ ಆಯ್ಕೆ ಮಾಡಲಾಗುವುದು. ಈ ರಾಷ್ಟ್ರ ಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ರೂ 20,000/- ಗಳ ನಗರದು, ರೂ 10,000/- ಮೌಲ್ಯದ ಪುಸ್ತಕವೋಚರ್ ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ ( ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ರೂ 10,000/- ನಗದು, ರೂ3,000/- ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರತಕ್ಕದ್ದು. ಅಸಾಧಾರಣವೆಂದು ಇವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸುವುದು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.

2016ನೇ ವರ್ಷದ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಲ್ಲಿಂದ ಪಡೆದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿಮಾಡಿದ ಅರ್ಜಿಗಳನ್ನು ದಿನಾಂಕ: 20-07-2016 ರೊಳಗೆ ತಲುಪುವಂತೆ ಸಂಬಂಧಪಟ್ಟ ಜಿಲ್ಲಾ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರಿಗೆ ಸಲ್ಲಿಸಬೇಕು.

ಉಚಿತ ಅಲಂಕಾರಿಕ ತರಬೇತಿ

ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ): ಮೈಸೂರು ತೋಟಗಾರಿಕಾ ಸೊಸೈಟಿ, ಬೆಂಗಳೂರು ವತಿಯಿಂದ ಜುಲೈ 4 ರಿಂದ ಆರು ದಿನಗಳ ಉಚಿತ ಡಚ್ ಹೂ ಗಳ ಅಲಂಕಾರಿಕ ತರಬೇತಿಯನ್ನು ಬೆಂಗಳೂರಿನ ಲಾಲ್‍ಬಾಗ್‍ನಲ್ಲಿರುವ ಡಾ. ಎಂ.ಎಚ್. ಮರೀಗೌಡ ಮೆಮೋರಿಯಲ್ ಹಾಲ್‍ನಲ್ಲಿ ಏರ್ಪಡಿಸಲಾಗಿದ್ದು, ತರಬೇತಿಯು ಅಂದು ಮಧ್ಯಾಹ್ನ 2-00 ಗಂಟೆಗೆ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ಲಾಲ್‍ಬಾಗ್ ನಲ್ಲಿ ಮೈಸೂರು ತೋಟಗಾರಿಕೆ ಸೊಸೈಟಿಯ ಕಾರ್ಯದರ್ಶಿಯವರನ್ನು ದೂರವಾಣಿ 26576781 ಮೂಲಕ ಸಂಪರ್ಕಿಸಬಹುದು.

ವಿಶೇಷ ಸಾಧನೆಗೈದ ನಾಡಿನ ಮಹಿಳಾ ಸಾಧಕಿಯರ ಸಾಕ್ಷ್ಯಚಿತ್ರಕ್ಕೆ ಮಾಹಿತಿ ನೀಡಿ

ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ): ನಾಡಿನ ಕಲೆ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಅಭಿವೃದ್ಧಿ, ವಿಜ್ಞಾನ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಅಪ್ರತಿಮ / ವಿಶಿಷ್ಟ ಸಾಧನೆಗೈದ, ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ, ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದಿರುವ ಹಾಗೂ ವಿಶೇಷ ಸಾಧನೆಗೈದ ಮಹಿಳಾ ಸಾಧಕಿಯರ ಜೀವನ - ಸಾಧನೆಗಳನ್ನು ಪರಿಚಯಿಸುವ ಸಾಕ್ಷ್ಯಚಿತ್ರಗಳನ್ನು ನಿರ್ಮಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಉದ್ದೇಶಿಸಿದೆ.
ಈ ಸಂಬಂಧ ವಿಶೇಷ ಸಾಧನೆಗೈದ ನಾಡಿನ ಮಹಿಳೆಯರ ಮಾಹಿತಿಯನ್ನು, ಅವರ ಸಾಧನೆಯ ವಿವರ, ಪಡೆದಿರುವ ಪ್ರಶಸ್ತಿಗಳ ವಿವರ ಹಾಗೂ ಇನ್ನಿತರ ಮಾಹಿತಿಯನ್ನು ಪೂರಕ ದಾಖಲೆಯೊಡನೆ, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, (ಇನ್‍ಫೆಂಟ್ರಿ ರಸ್ತೆ), ಬೆಂಗಳೂರು – 560 001. ಇಲ್ಲಿಗೆ ದಿನಾಂಕ ಃ 15-07-2016 ರೊಳಗೆ ಕಳುಹಿಸಬಹುದಾಗಿದೆ.

National Seminar on Social Justice

Bangalore, July 2 (Karnataka Information); A National seminar on Social Justice has been organized by K. Shivamurthy, Member of the legislative Assembly on July 4th, 2016 at 9.00 a.m. at Yavanika Hall, Nrupatunga Raod, Bengaluru, to insist for a comprehensive legislation for conversion of unrecorded hamlets into revenue villages. The seminar will be inaugurated by Kagodu Timmappa, Minister for Revenue, Haribaavu Rathore, MLC will preside over the ceremony. T. B. Jayachandra, Minister for Law and Parliamentary Affairs, Ramesh Kumar, Minister for Health and Family Welfare will participate.

ರಾಷ್ಟ್ರೀಯ ವಿಚಾರ ಸಂಕಿರಣ

ಬೆಂಗಳೂರು, ಜುಲೈ 2 (ಕರ್ನಾಟಕ ವಾರ್ತೆ) : ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಬಗ್ಗೆ ರಾಷ್ಟ್ರೀಯ ಆಯೋಗ ಯೋಜನೆ ಕಾರ್ಯಕ್ರಮಗಳ ರೂಪಿಸುವಲ್ಲಿ ದಾಖಲೆ ರಹಿತ ಜನವಸತಿಗಳನ್ನು ಘಟಕಗಳನ್ನಾಗಿ ಪರಿಗಣಿಸಲು ವಿಶೇಷ ಶಾಸನಗಳನ್ನು ರಚಿಸುವ ಬಗ್ಗೆ ಸಾಮಾಜಿಕ ನ್ಯಾಯಕ್ಕಾಗಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಮಾಯಾಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಶಿವಮೂರ್ತಿ ತಿಳಿಸಿದ್ದಾರೆ.

ಬೆಂಗಳೂರು ನೃಪತುಂಗ ರಸ್ತೆಯ ಯವನಿಕಾ ಸಭಾಂಗಣದಲ್ಲಿ ಜುಲೈ 4 ರ ಸೋಮವಾರದಂದು ಬೆಳಿಗ್ಗೆ 9-00 ಗಂಟೆಗೆ ವಿಚಾರ ಸಂಕಿರಣವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಉದ್ಫಾಟಿಸುವರು. ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಕಾನೂನು ಮತ್ತು ಸಂಸದೀಯ ಸಚಿವ ಟಿ. ಬಿ. ಜಯಚಂದ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ಸಮಾರಂಭದ ಅಧ್ಯಕ್ಷತೆಯನ್ನು ಮಹಾರಾಷ್ಟ್ರ ವಿಧಾನ ಪರಿಷತ್ ಸದಸ್ಯ ಶ್ರೀ ಹರಿಬಾವು ರಾಥೋಡ್ ವಹಿಸುವರು ಎಂದು ಶಾಸಕ ಕೆ. ಶಿವಮೂರ್ತಿ ತಿಳಿಸಿದ್ದಾರೆ.