Government of Karnataka

Department of Information

Saturday 06/02/2016

State News 03-02-2016

Date : Wednesday, February 3rd, 2016

ಕಲಾಶ್ರೀ ಪ್ರಶಸ್ತಿಗೆ ಆಯ್ಕೆ ಶಿಬಿರ

ಬೆಂಗಳೂರು, ಫೆಬ್ರವರಿ 3 (ಕರ್ನಾಟಕ ವಾರ್ತೆ): ಬೆಂಗಳೂರು ಬಾಲಭವನ ಸೊಸೈಟಿಯು ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದು, ರಾಜ್ಯ ಮಟ್ಟದ ಕಲಾಶ್ರೀ ಪ್ರಶಸ್ತಿಗಾಗಿ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಆಯ್ಕೆ ಶಿಬಿರವನ್ನು ನಡೆಸಲಿದೆ. ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಅವಿಷ್ಕಾರ, ಸೃಜನಾತ್ಮಕ ಕಲೆ ಹಾಗೂ ಸೃಜನಾತ್ಮಕ ಬರವಣಿಗೆ ಪ್ರಕಾರಗಳಲ್ಲಿ ಬೆಂಗಳೂರು ನಗರದ ಮಕ್ಕಳಿಗಾಗಿ ಫೆಬ್ರವರಿ 7 ರಂದು ಬೆಳಿಗ್ಗೆ 10-00 ಗಂಟೆಯಿಂದ ಆಯ್ಕೆ ಶಿಬಿರ ನಡೆಯಲಿದೆ.

ಭಾಗವಹಿಸುವ ಮಕ್ಕಳು ನಿಗದಿತ ಸಮಯಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹಾಜರಿರಬೇಕು. ಮೇಲ್ಕಂಡ ಪ್ರಕಾರಗಳಲ್ಲಿ ಪ್ರಾವಿಣ್ಯತೆ ಹೊಂದಿರುವ 9 ರಿಂದ 16 ವರ್ಷದ ಮಕ್ಕಳ ಸ್ಥಳೀಯ ಮಟ್ಟದ ಆಯ್ಕೆ ವಿಭಾಗದಲ್ಲಿ ಪಾಲ್ಗೊಂಡು ಆಯ್ಕೆಯಾದಲ್ಲಿ ರಾಜ್ಯಮಟ್ಟದ ಶಿಬಿರದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು.

ಹೆಚ್ಚಿನ ವಿವರ ಹಾಗೂ ನೋಂದಣಿಗಾಗಿ ಬೆಂಗಳೂರು ಬಾಲಭವನ ಸೊಸೈಟಿಯ ಕಾರ್ಯದರ್ಶಿಗಳ ಕಚೇರಿಯಲ್ಲಿ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 22864189/22861423 ಮೂಲಕ ಸಂಪರ್ಕಿಸಬಹುದಾಗಿದೆ. ವಿವರಗಳಿಗೆ ಕಚೇರಿ ಅಂತರ್ಜಾಲ www.jawaharbalbhavan.com ಮಿಂಚಂಚೆ [email protected] ನೋಡಬಹುದು.

ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಸಮಿತಿ

ಬೆಂಗಳೂರು, ಫೆಬ್ರವರಿ 3 (ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರವು ಸಾಂಸ್ಕøತಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಹಾಗೂ ನಾಡು ನುಡಿಗೆ ಅತ್ಯುತ್ತಮ ಕೊಡುಗೆ ನೀಡಿದ ಸಾಹಿತಿ/ಕಲಾವಿದರು/ವಿದ್ವಾಂಸರು/ಗಣ್ಯರನ್ನು ಗುರುತಿಸಿ ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿದೆ. 2015ನೇ ಸಾಲಿಗೆ ನೀಡಲಾಗುವ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆಮಾಡಲು ಕೆಳಕಂಡ ಆಯ್ಕೆ ಸಮಿತಿಗಳನ್ನು ರಚಿಸಿದೆ.

ಬಸವ ರಾಷ್ಟ್ರೀಯ ಪ್ರಶಸ್ತಿ:

ಸಿದ್ದರಾಮ ಬೆಲ್ದಾಳ ಶರಣರು, ಬೀದರ್ – ಅಧ್ಯಕ್ಷರು, ಅಥಣಿಯ ಬಿ.ಎಲ್. ಪಾಟೀಲ್, ಕಲಬುರಗಿಯ ಡಾ. ಜಯಶ್ರೀ ದಂಡೆ, ಬೆಂಗಳೂರಿನ ಡಾ, ಸಿ. ವೀರಣ್ಣ, ಧಾರವಾಡದಡಾ. ವೀರಣ್ಣ ರಾಜೂರು, ಉಡುಪಿಯ ಕಾಂತಾವರದ ಡಾ. ನಾ. ಮೊಗಸಾಲೆ ಸದಸ್ಯರಾಗಿದ್ದಾರೆ.

ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ:

ಬೆಂಗಳೂರಿನ ರಾಜಶೇಖರ ಮನ್ಸೂರ್ – ಅಧ್ಯಕ್ಷರು, ಉತ್ತರ ಕನ್ನಡದ ಗಣಪತಿ ಭಟ್ ಹಸಣಗಿ, ಕಲಬುರಗಿಯ ಫಕಿರೇಶ್ ಕಣವಿ, ಧಾರವಾಡದ ಶೇಖ್ ಅಬ್ದುಲ್ ಖಾಜಿ, ಬೆಂಗಳೂರಿನ ಮೈಸೂರು ವಿ. ಸುಬ್ರಹ್ಮಣ್ಯ, ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರು ಸದಸ್ಯರಾಗಿದ್ದಾರೆ.

ಜಾನಪದಶ್ರೀ ಪ್ರಶಸ್ತಿ:

ಮೈಸೂರಿನ ಹಿ.ಶಿ. ರಾಮಚಂದ್ರೇಗೌಡ – ಅಧ್ಯಕ್ಷರು, ಶಿವಮೊಗ್ಗದ ಬಸವರಾಜ ನೆಲ್ಲಿಸರ, ಬೆಂಗಳೂರಿನ ಡಾ. ಚಕ್ಕೆರೆ ಶಿವಶಂಕರ್, ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಶ್ರೀಪಾದ ಶೆಟ್ಟಿ, ಕಲಬುರಗಿಯ ಶ್ರೀಮತಿ ಶಕುಂತಲಾ ದೇವಲಾ ನಾಯಕ್, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

ಶಾಂತಲಾ ನಾಟ್ಯ ಪ್ರಶಸ್ತಿ:

ತುಮಕೂರಿನ ಕೆ. ಎಂ. ರಾಮನ್ – ಅಧ್ಯಕ್ಷರು, ಬಳ್ಳಾರಿಯ ಜಿಲಾನಿ ಬಾಷಾ, ಶಿವಮೊಗ್ಗದ ಶ್ರೀಮತಿ ಗೀತಾದಾತಾರ್, ಮೈಸೂರಿನ ಶ್ರೀಮತಿ ಶಾಂತಲಾ ವಟ್ಟಂ, ಬೆಂಗಳೂರಿನ ಡಾ. ಚೂಡಮಣಿ ನಂದಗೋಪಾಲ್ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

ರಂಗಭೂಮಿ ವಿಭಾಗ ಪ್ರಶಸ್ತಿ:

ಬಳ್ಳಾರಿಯ ವೃತಿರಂಗಭೂಮಿಗೆ ಸೇರಿದ ಶ್ರೀಮತಿ ಸುಭದ್ರಮ್ಮ ಮನ್ಸೂರ್ – ಅಧ್ಯಕ್ಷರು, ºಗ್ಗೋಡಿನ ಹವ್ಯಾಸಿ ರಂಗಭೂಮಿಗೆ ಸೇರಿದ ಡಾ. ಕೆ. ವಿ. ಅಕ್ಷರ, ವೃತ್ತಿ ರಂಗಭೂಮಿಗೆ ಸೇರಿದ ಶ್ರೀಮತಿ ಮಾಲತಿ ಸುಧೀರ್, ಗದಗದ ಫಕೀರಪ್ಪ ವರವಿ, ಇಳಕಲ್‍ನ ಮಾಹಾಂತೇಶ ಗಜೇಂದ್ರಗಢ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರು, ಧಾರವಾಡದ ಕರ್ನಾಟಕ ನಾಟಕ ರಂಗಾಯಣ ನಿರ್ದೇಶಕರು ಸದಸ್ಯರಾಗಿರುತ್ತಾರೆ.

ಲಲಿತಕಲಾ ವಿಭಾಗದ ಪ್ರಶಸ್ತಿ:

ಬಳ್ಳಾರಿ ಜಿಲ್ಲೆಯ ಸಂಡೂರಿನ ವಿ.ಟಿ. ಕಾಳೆ – ಅಧ್ಯಕ್ಷರು ಚಿತ್ರ ಕಲಾವಿದರಾದ ಹುಬ್ಬಳ್ಳಿಯ ಸಿ.ಡಿ. ಜಟ್ಟಣ್ಣನವರ್, ಮಂಗಳೂರಿನ ಗಣೇಶ್ ಸೋಮಾಯಾಜಿ, ಶಿಲ್ಪ ಕಲಾವಿದರಾದ ಕಲಬುರಗಿಯ ಚಂದ್ರಶೇಖರ್ ವೈ . ಶಿಲ್ಪಿ, ಬೆಂಗಳೂರಿನ ಪ್ರಧಾನಿ ನಾಗಪ್ಪ, ಕರ್ನಾಟಕ ಲಲತಕಲಾ ಅಕಾಡೆಮಿಯ ಅಧ್ಯಕ್ಷರು ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

ಸಂಗೀತ ವಿಭಾಗದ ಪ್ರಶಸ್ತಿ:

ಬೆಂಗಳೂರಿನ ಆರ್. ಕೆ. ಪದ್ಮನಾಭ – ಅಧ್ಯಕ್ಷರು, ಬೆಂಗಳೂರಿನ ಎಂ.ಎಸ್. ಶೀಲಾ, ಮೈಸೂರಿನ ಡಾ. ಆರ್.ಎನ್. ಶ್ರೀಲತಾ, ಧಾರವಾಡದ ಜಯದೇವಿ ಜಂಗಮ ಶೆಟ್ಟಿ, ದಕ್ಷಿಣ ಕನ್ನಡದ ಪುತ್ತೂರು ನರಸಿಂಹ ನಾಯಕ್, ವಿಜಯಪುರದ ಶ್ರೀಮತಿ ಲತಾ ಜಹಗೀರದಾರ್, ಬೆಂಗಳೂರಿನ ಎ.ವಿ. ಪ್ರಸನ್ನ, ಕೋಲಾರದ ಶ್ರೀಮತಿ ರೇಣುಕಾ ರಾಮರಾವ್, ಬೆಂಗಳೂರಿನ ತಿರುಮಲೆ ಶ್ರೀನಿವಾಸ್, ಕಲಬುರಗಿಯ ರೇವಯ್ಯ ವಸ್ತ್ರದ ಮಠ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರು ಸದಸ್ಯರಾಗಿರುತ್ತಾರೆ.

ಮೇಲ್ಕಂಡ ಎಲ್ಲಾ ಏಳು ಆಯ್ಕೆ ಸಮಿತಿಗಳಿಗೆ ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.

ಆಕಾಶವಾಣಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಪಾಠ

ಬೆಂಗಳೂರು, ಫೆಬ್ರವರಿ 3 (ಕರ್ನಾಟಕ ವಾರ್ತೆ): 2015-16 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗುತ್ತಿರುವ ಹಿನ್ನಲೆಯಲ್ಲಿ ಆಕಾಶವಾಣಿ ರಾಜ್ಯದ 13 ಕೇಂದ್ರಗಳ ಮುಖಾಂತರ ಸೋಮವಾರದಿಂದ ಶುಕ್ರವಾರದವರೆಗೆ ಶಾಲಾ ಅವಧಿಯಲ್ಲಿ ಪರೀಕ್ಷಾ ಸಿದ್ದಥೆ ಸರಣಿಯನ್ನು ಹಸ್ತಾಂತರಿಸಲಿದೆ. ಈ ಸರಣಿಯಲ್ಲಿ ವಿಷಯ ಪರಿಣಿತರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳೀಗೆ ಕೊನೆಯ ಹಂತದಲ್ಲಿ ಹೇಗೆ ಸಿದ್ಧರಾಗಬೇಕು ಶಿಕ್ಷಕರು ಹೇಗೆ ಮಾರ್ಗದರ್ಶನ ನೀಡಬೇಕು ಎನ್ನುವ ಕುರಿತು ಮಾಹಿತಿ ನೀಡುತ್ತಾರೆ. ಈ ಸರಣಿ ಮಧ್ಯಾಹ್ನ 2-35 ರಿಂದ 3-05 ರವರೆಗೆ ಪ್ರಸಾರವಾಗಲಿದೆ.

ಶಾಲಾ ಅವಧಿಯಲ್ಲಿ ಪ್ರಸಾರವಾಗುವ ಈ ಎಲ್ಲಾ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸದುಪಯೋಗಪಡಿಸಿಕೊಳ್ಳಲು ಕೋರಿದೆ.

ರಾಜ್ಯದಲ್ಲಿ ಏಪ್ರಿಲ್ 2016ರ ಅಂತ್ಯಕ್ಕೆ ಗ್ರಾಮೀಣ ಪ್ರದೇಶದ 1.5 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರು

ಬೆಂಗಳೂರು, ಫೆಬ್ರವರಿ 3 (ಕರ್ನಾಟಕ ವಾರ್ತೆ)ಕರ್ನಾಟಕ ಸರ್ಕಾರವು ಬರುವ ಏಪ್ರಿಲ್ ಅಂತ್ಯಕ್ಕೆ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ 1.5 ಕೋಟಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಮೂಲಕ ರಾಷ್ಟ್ರದಲ್ಲಿಯೇ ದಾಖಲೆಯಾದ ಸಾಧನೆ ಮಾಡಲಿದೆಯೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಎಚ್.ಕೆ. ಪಾಟೀಲ್ ಅವರು ಹೇಳಿದ್ದಾರೆ.

ನವದೆಹಲಿಯ ವಿಜ್ಞಾನ ಭವನದಲ್ಲಿ ಇಂದು ನಡೆದ ಗ್ರಾಮೀಣ ನೀರು ಪೂರೈಕೆ ಮತ್ತು ನೈರ್ಮಲ್ಯ ಕುರಿತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರುಗಳ ಸಭೆಯಲ್ಲಿ ಮಾತನಾಡಿದ ಅವರು, 2013-14 ನೇ ಸಾಲಿನಲ್ಲಿ 1,000 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈ ಆರ್ಥಿಕ ವರ್ಷದ ಅಂತ್ಯಕ್ಕೆ 7,000 ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆಯೆಂದು ತಿಳಿಸಿದರು.

ನೀರು ಅಮೂಲ್ಯ, ನೀರು ಇದ್ದಲ್ಲಿ ನೈರ್ಮಲ್ಯ ಇರುತ್ತದೆ. ಶುದ್ಧ ಕುಡಿಯುವ ನೀರು ಜೀವನದ ಆಧಾರ ಆದರೆ, ಇಂದು ನೀರು ಕಲುಷಿತವಾಗಿದೆ. ಇದರಿಂದ ಬರುವ ರೋಗಗಳಿಂದಾಗಿ ವ್ಯಕ್ತಿ ದೈಹಿಕವಾಗಿ ಮತ್ತು ಆರ್ಥಿಕವಾಗಿ ಜರ್ಜರಿತನಾಗುತ್ತಿದ್ದಾನೆ. ಶುದ್ಧ ಕುಡಿಯುವ ನೀರು ಶ್ರೀಸಾಮಾನ್ಯನ ಹಕ್ಕಾಗಬೇಕು. ಉಳ್ಳವರು ಕುಡಿಯುವ ಗುಣಮಟ್ಟದಷ್ಟೇ ನೀರು ಸಾಮಾನ್ಯ ಜನರಿಗೆ ಲಭ್ಯವಾಗಬೇಕು. ಇದು ಕರ್ನಾಟಕ ಸರ್ಕಾರದ ಬದ್ಧತೆಯಾಗಿದ್ದು, ಅದಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹಂತ ಹಂತವಾಗಿ ಈ ಸೌಲಭ್ಯವನ್ನು ರಾಜ್ಯಾದ್ಯಂತ ವಿಸ್ತರಿಸಲು ರಾಜ್ಯ ಸರ್ಕಾರವು ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು.

ಸಧ್ಯದ ಪರಿಸ್ಥಿತಿಯಲ್ಲಿ ಮೇಲ್ಮೈ ಜಲ ಮೂಲ ಲಭ್ಯತೆ ಇರುವ ನದಿ, ಕಾಲುವೆ, ಕೆರೆಗಳನ್ನು ಉಪಯೋಗಿಸಿಕೊಂಡು ಅವುಗಳ ನೀರನ್ನು ಶುದ್ಧೀಕರಿಸಿ ಜನವಸತಿಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಅನಿವಾರ್ಯವಾಗಿದೆ. ಕರ್ನಾಟಕ ಸರ್ಕಾರವು ಮೇಲ್ಮೈ ಜಲ ಮೂಲದ ಲಭ್ಯತೆಯಿಂದ ಕುಡಿಯುವ ನೀರು ಪೂರೈಸುವ ಕುರಿತು ಸಮೀಕ್ಷೆಯೊಂದನ್ನು ಕೈಗೊಂಡಿದೆ. ರಾಜ್ಯದಲ್ಲಿರುವ ಎಲ್ಲಾ ಜನವಸತಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ರೂ.45,000 ಕೋಟಿಗಳ ಹಣಕಾಸಿನ ಹಾಗೂ 60 ಟಿಎಂಸಿ ನೀರಿನ ಅವಶ್ಯಕತೆ ಇದೆ. ಕರ್ನಾಟಕ ಸರ್ಕಾರವು ಎಲ್ಲ ಜನವಸತಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಬದ್ಧವಾಗಿದ್ದು, ಇದನ್ನು ಸಾಕಾರಗೊಳಿಸಲು ಅನೇಕ ಯೋಜನೆಗಳನ್ನು ಸಹ ರೂಪಿಸಲಾಗಿದೆಯೆಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ ಕುಡಿಯುವ ನೀರಿನ ಯೋಜನೆಗಳು ವಿದ್ಯುತ್ ಪೂರೈಕೆ ಮೇಲೆ ಅವಲಂಬಿತವಾಗಿದೆ. ಇಂದು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಿರುವುದರಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಕಾರಣ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಯೋಜನೆಗಳಿಗೆ ಸೋಲಾರ ವಿದ್ಯುತ್ ಅಳವಡಿಸುವ ಅವಶ್ಯಕತೆಯಿದೆ ಎಂದು ಕೇಂದ್ರ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಸಚಿವರಿಗೆ ಮನವಿ ಮಾಡಿದ ಶ್ರೀ ಎಚ್.ಕೆ. ಪಾಟೀಲ್ ರವರು ಸೋಲಾರ್ ವ್ಯವಸ್ಥೆ ಪರಿಸರ ಸ್ನೇಹಿ ಮಾತ್ರವಲ್ಲದೆ ಅತ್ಯಂತ ಕಡಿಮೆ ವೆಚ್ಚದ್ದಾಗಿದೆಯೆಂದು ತಿಳಿಸಿದರು.

ಕರ್ನಾಟಕವನ್ನು 2015 ರ ವೇಳೆಗೆ ಬಯಲು ಬಹಿರ್ದೆಶೆ ಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ಸಂಕಲ್ಪ ಮಾಡಿದ್ದು, ಇದಕ್ಕಾಗಿ ಶೌಚಾಲಯಕ್ಕಾಗಿ ಸಮರವನ್ನು ಘೋಷಿಸಿದೆ. ಈಗಾಗಲೇ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಬಯಲು ಬಹಿರ್ದೆಶೆ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲು ಸಿದ್ಧವಾಗಿವೆ. 5 ವರ್ಷಗಳ ಅವಧಿಯಲ್ಲಿ 50 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಬೃಹತ್ ಗುರಿಯನ್ನು ಸರ್ಕಾರ ಹೊಂದಿದೆ. 2013-14 ರಲ್ಲಿ 5.05 ಲಕ್ಷ ಹಾಗೂ 2014-15 ರಲ್ಲಿ 8.76 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, ಪ್ರಸಕ್ತ 2015-16 ನೇ ಸಾಲಿನಲ್ಲಿ 10.37 ಲಕ್ಷ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಈಗಾಗಲೇ 5.52 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು, 4.63 ಲಕ್ಷ ಶೌಚಾಲಯಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 2018 ರ ವೇಳೆಗೆ ಕರ್ನಾಟಕವನ್ನು ಬಯಲು ಬಹಿದರ್ಶೆ ಮುಕ್ತ ರಾಜ್ಯವನ್ನಾಗಿಸುವ ಗುರಿಯನ್ನು ಸಾಕಾರಗೊಳಿಸುವಲ್ಲಿ ನಾವು ದೃಢವಾದ ಹೆಜ್ಜೆಯನ್ನು ಇಟ್ಟಿದ್ದೇವೆ.

ಶೌಚಾಲಯದಷ್ಟೇ ಸ್ನಾನಗೃಹಗಳು ಸಹ ಅತ್ಯವಶ್ಯಕವಾಗಿದ್ದು, ಶೌಚಾಲಯದ ಜೊತೆಗೆ ಸ್ನಾನಗೃಹಗಳನ್ನು ನಿರ್ಮಿಸಲು ಕರ್ನಾಟಕದಲ್ಲಿ “ಗ್ರಾಮೀಣ ಗೌರವ” ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ. ಗ್ರಾಮೀಣ ಮಹಿಳೆಯರ ಗೌರವವನ್ನು ರಕ್ಷಿಸಲು ಈ ಯೋಜನೆ ಸಹಕಾರಿಯಾಗಲಿದೆ. ಇಂದು ಮಹಿಳೆಯರು ತಾತ್ಕಾಲಿಕ ಶೆಡ್ಡುಗಳಲ್ಲಿ ಅಥವಾ ಮುಕ್ತ ಸ್ಥಳಗಳಲ್ಲಿ ಸ್ನಾನ ಮಾಡುವುದು ದುರ್ದೈವಕರ ಸಂಗತಿಯಾಗಿದೆ ಎಂದು ಹೇಳಿದ ಅವರು ಗ್ರಾಮೀಣ ಗೌರವ ಯೋಜನೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವನ್ನು ಒದಗಿಸುವಂತೆ ಕೋರಿದರು.

ದೈಹಿಕ ವಿಕಲ ಚೇತನರಿಗೆ, ದೃಷ್ಟಿಹೀನರಿಗೆ, ಗರ್ಭಿಣಿ ಮಹಿಳೆಯರು ಮತ್ತು ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ಶೌಚಾಲಯಗಳಲ್ಲಿ ಕಮೋಡ್ ವ್ಯವಸ್ಥೆಯನ್ನು ಸಹ ಕರ್ನಾಟಕದಲ್ಲಿ ಮಾಡಲಾಗುತ್ತಿದ್ದು, ಸಾಮೂಹಿಕ ನೈರ್ಮಲ್ಯ ಸಂಕೀರ್ಣಗಳಲ್ಲಿ ಕಮೋಡ್ ಜೊತೆಗೆ, ಬಟ್ಟೆ ಒಗೆಯುವ ಯಂತ್ರ ಹಾಗೂ ಇನ್ನಿತರೆ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಕರ್ನಾಟಕ ಸರ್ಕಾರವು ತಾಜ್ಯ ಮುಕ್ತ ಗ್ರಾಮಗಳನ್ನು ಮಾಡುವ ಉದ್ದೇಶವನ್ನು ಸಹ ಹೊಂದಿದ್ದು, ಇದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿರುವ ತಿಪ್ಪೆಗಳನ್ನು ಸಂಸ್ಕರಣೆ ಮಾಡುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ತಿಪ್ಪೆಗಳು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ರೈತರ ಜಮೀನುಗಳಿಗೆ ಉತ್ತಮ ಪೋಷಕಾಂಶ ಒದಗಿಸುವ ಗೊಬ್ಬರದ ಗುಂಡಿಗಳು ಗ್ರಾಮೀಣರ ಪಾಲಿನ ಕಾಮದೇನುವಾಗಿದೆ. ಅವೈಜ್ಞಾನಿಕ ನಿರ್ವಹಣೆಯಿಂದ ಈಗ ಅಸಹ್ಯ ಸ್ಥಳವಾಗಿರುವ ತಿಪ್ಪೆಗುಂಡಿಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಉತ್ತಮ ಗೊಬ್ಬರ ಪಡೆಯುವಂತೆ ಮಾಡುವುದೇ ಈ ಯೋಜನೆಯ ಉದ್ದೇಶವಾಗಿದೆ. ಗದಗ್ ಜಿಲ್ಲೆಯ ಕನಕಿನಕೊಪ್ಪ ಹಾಗೂ ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗ್ರಾಮಗಳನ್ನು ಪ್ರಾಯೋಗಿಕವಾಗಿ ಈ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದೆಂದು ಶ್ರೀ ಎಚ್.ಕೆ. ಪಾಟೀಲ್ ಹೇಳಿದರು.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಗ್ರಾಮೀಣ ನೈರ್ಮಲ್ಯ ಸೌಲಭ್ಯಗಳ ಖಾತ್ರಿ ವಿಧೇಯಕವನ್ನು ಮಂಡಿಸಲು ರಾಜ್ಯ ಸರ್ಕಾರ ಉದ್ದೇಶಿಸಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಬದ್ಧವಾಗಿ ನೈರ್ಮಲ್ಯ ಸೌಲಭ್ಯಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಶ್ರೀ ಎಚ್.ಕೆ. ಪಾಟೀಲ್ ರವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಕರ್ನಾಟಕ ಸರ್ಕಾರವು ಫಲಪ್ರದಗೊಳಿಸುವ ನಿಟ್ಟಿನಲ್ಲಿ ಮುನ್ನಡೆಸುತ್ತಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು 2015-16 ನೇ ಸಾಲಿನಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಚಿತ್ರದುರ್ಗ ಜಿಲ್ಲೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕಾಗಿ ಶ್ರೀ ಎಚ್.ಕೆ. ಪಾಟೀಲ್ ರವರು ಭಾರತ ಸರ್ಕಾರವನ್ನು ಅಭಿನಂದಿಸಿದರು.

ಕರ್ನಾಟಕ ಸರ್ಕಾರವು ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಲಸೆ ಬರುವ ರೀತಿಯಲ್ಲಿ ಗ್ರಾಮೀಣ ಭಾಗದಲ್ಲಿ ಉತ್ತಮ ಸೌಲಭ್ಯ ಹಾಗೂ ಉದ್ಯೋಗಗಳನ್ನು ಕಲ್ಪಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದಕ್ಕಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರು ರಾಜ್ಯ ಸರ್ಕಾರದ ಕೈಯನ್ನು ಬಲಪಡಿಸುವಂತೆ ಮನವಿ ಮಾಡಿದ ಅವರು ಗ್ರಾಮೀಣ ಜನರ ಬದುಕನ್ನು ಹಸನಾಗಿಸಲು ಇದು ಸಹಾಯವಾಗುತ್ತದೆ ಎಂದು ತಿಳಿಸಿದರು.

WHAT THE INDUSTRIAL CAPTAINS SAID

Bengaluru Feb 3: (Karnataka Information)

RATAN TATA, CHAIRMAN OF TATA GROUP

Karnataka has always been and will remain at the centre of IT/BT and Electronics, aircraft and aerospace industrial sectors, said Ratan Tata, Chairman of the Tata Group.

Recalling the Tata Group’s long and fruitful relations with Karnataka and pro-active, visionary and industry-friendly government and the helpful bureaucrats, the Tata Group Chairman said it was a privilege to be associated with the State and said investors and industrialists should consider the State for their investment proposals.

“India has a huge market, potential for capital and skills. With the increased coordination between government, business and industries was essential,’’ he said and felt Karnataka was the best place for investment.

N R NARAYANA MURTHY, COFOUNDER CHAIRMAN EMERITUS OF INFOYSIS

“Karnataka Government, KSSIIDC and KSFC are responsible for the birth and growth of Infosys,’’ said N R Narayana Murthy, co-founder and chairman emeritus of Infosys, recalling that leading banks had refused to sanction a loan of Rs 50 lakh for starting his company in 1983 and it was KSSIIDC and KSFC that came to the rescue by sanctioning the loan and releasing the money within a week.

Infosys has today grown into IT bellwether company and has established three development centres in Bengaluru, Mysuru and Mangaluru and the fourth centre is being started at Hubballi in Karnataka, he said.

He said Bengaluru’s contribution to India’s IT industry revenue was 38 % and the contribution to GDP was US $ 35 billion with exports to the tune of US $ 27 to 28 billion. Karnataka would progress leaps and bounds, especially Bengaluru, with better infrastructure facilities.

AZIM PREMJI, CHAIRMAN OF WIPRO

With diverse investments and presence in IT sector, consumer care, engineering and aerospace along with the education sector employing over 55,000 persons in the State, Azim Premji said Karnataka was a very hospitable and progressive State. A major expansion in Wipro would provide additional employment to 20,000 persons.

KUMARA MANGALAM BIRLA, CHAIRMAN OF ADITYA BIRLA GROUP

The Birla Group has invested Rs 30,000 crore in the IT sector in the State during the last two years. An investment of Rs 5,000 crore on the cement plant and a Rs 1000 crore will be invested on plantation farming at Harihar, said Kumar Mangalam Birla, chairman of Aditya Birla Group.

The Birla Group will also be aggressively investing in the solar energy sector, telecom, apparel and also in the start-up sectors besides taking up CSR projects in over 100 villages of Karnataka, he said.

ANIL AMBANI, CHAIRMAN OF ANIL DHIRUBHAI AMBANI GROUP

The Anil Dhirubhai Ambani Group will be setting up the Dhirubhai Ambani Innovation and Space Research Centre at Whitefield which would help in developing cutting edge technology in aerospace and defense sectors to help the country to become the undisputed leader, Anil Ambani, Chairman of Anil Dhirubhai Ambani Group said.

SAJJAN JINDAL, CHAIRMAN OF JSW GROUP

The JSW Group has already invested Rs 60,000 crore in its Steel Plant in Hosapete, Ballary and would be expanding the plant by investing another Rs 35,000 crore in the next 3 to 5 years, said Sajjan Jindal, Chairman of JSW Group.

GAUTAM ADANI, FOUNDER CHAIRMAN OF ADANI GROUP

The Adani Group with its strong presence in the energy, transport and shipping sectors, would expanding its vegetable oil refinery in Mangaluru to touch 4 lakh MTPA to become the largest in India. The 1200 mw Udupi thermal plant acquired by the Group last year would expanded to produce another 1600 mw generation capacity with an additional investment of Rs 11,500 crore. This would entail additional investment for the expansion of the Mangaluru port, he said.

The Tadri port in Uttara Kannada district would be modernized with modern facilities at a cost Rs 2000 crore, while the renewable energy generation capacity of the Group will be raised to by 1000 mw in the solar energy sector with an investment of Rs 7,000 crore to help reduce Karnataka’s energy deficit, Adani added.