Government of Karnataka

Department of Information

Sunday 10/07/2016

State News 04-07-2016

Date : Monday, July 4th, 2016
ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ  ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ
1. ಮೈಸೂರು ರಂಗಾಯಣದಿಂದ ರಂಗವಿಹಾರ-ನಾಟಕೋತ್ಸವ ಸಮಾರೋಪ ಸಮಾರಂಭ: ಸಮಾರೋಪದಲ್ಲಿ ಪಾಲ್ಗೊಳ್ಳುವವರು: ಡಾ: ಬಿ. ಜಯಶ್ರೀ,  ರಂಗ ನಿರ್ದೇಶಕರು,  ಎನ್.ಆರ್. ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ  ಪಿ.ಎನ್. ಮಲ್ಲಿಕಾರ್ಜುನಸ್ವಾಮಿ, ಜಂಟಿ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ರಂಗಗೌರವ: ಹೆಚ್. ಜನಾರ್ಧನ್(ಜನ್ನಿ)  ನಿರ್ದೇಶಕರು, ರಂಗಾಯಣ, ಮೈಸೂರು 5-7-2016
ಮಂಗಳವಾರ ಸಂಜೆ 6-00 ಗಂಟೆಗೆ
ರವೀಂದ್ರ ಕಲಾಕ್ಷೇತ್ರ ಜೆ.ಸಿ. ರಸ್ತೆ, ಬೆಂಗಳೂರು

National Child Award for Exceptional Achievement

Bengaluru, July 4 (Karnataka Information) : Government of India has instituted an award to give recognition to children with exceptional abilities and who have shown outstanding achievement in fields such as Innovation in any field including design, Scholastic achievement on National level, Art, Culture, Sports, Social service, Music and any other field which deserves recognition as per the decision of the Central Selection Committee. The Children residing in India born on or after 01-08-2000 and who are in the age group of 9 -16 years with the exceptional achievement in the above mentioned fields will be considered for this Award for the year -2016.

The National Award consists of one Gold Medal with cash prize of Rs.20,000/-, book vouchers of Rs.10,000/-, a certificate and a citation and 35 silver Medals (One for each State/UT) with cash prize of Rs.10,000/-, book vouchers of Rs.3,000/-, a certificate and a citation for each awardee.

The Children to be selected for the award should have shown Exceptional talent. The talent claimed to be possessed by the child as extra-ordinary or exceptional should be justified with supporting documents. Age Certificate should be attached duly attested by a Gazetted Government Officer.

The prescribed application forms for the award 2016 may be obtained from the Deputy Director of Women and Child Development Department in the respective districts. The filled in applications, in English in duplicate may be sent to the concerned District Deputy Director, Women and Child Development Department on or before 20-07-2016.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ

ಬೆಂಗಳೂರು, ಜುಲೈ 4 (ಕರ್ನಾಟಕ ವಾರ್ತೆ) : ಕಲೆ, ಸಾಂಸ್ಕøತಿಕ, ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರಿಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡುತ್ತದೆ. ಭಾರತದಲ್ಲಿ ನೆಲೆಸಿರುವ ಮತ್ತು ಮೇಲ್ಕಂಡ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿರುವ 9 ರಿಂದ 16 ವರ್ಷದೊಳಗಿನ ಅಂದರೆ ದಿನಾಂಕ:01.08.2000 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2016ನೇ ಸಾಲಿಗೆ ಆಯ್ಕೆ ಮಾಡಲಾಗುವುದು. ಈ ರಾಷ್ಟ್ರ ಮಟ್ಟದ ಪ್ರಶಸ್ತಿಯು ಒಂದು ಚಿನ್ನದ ಪದಕ, ರೂ.20,000/-ಗಳ ನಗದು, ರೂ.10,000/- ಮೌಲ್ಯದ ಪುಸ್ತಕ ವೋಚರ್ ಮತ್ತು ಪ್ರಶಸ್ತಿ ಪತ್ರ ಹಾಗೂ 35 ಬೆಳ್ಳಿ ಪದಕ(ಪ್ರತಿ ರಾಜ್ಯ ಕೇಂದ್ರಾಡಳಿತ ಪ್ರದೇಶಕ್ಕೆ ಒಂದು ಬೆಳ್ಳಿ ಪದಕ) ರೂ. 10,000/- ನಗದು, ರೂ.3,000/- ಗಳ ಮೌಲ್ಯದ ಪುಸ್ತಕ ವೋಚರ್ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ.

ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿರತಕ್ಕದ್ದು. ಅಸಾಧಾರಣವೆಂದು ಇವರ ಸಾಧನೆಯನ್ನು ಸಮರ್ಥಿಸಲು ಪೂರಕ ದಾಖಲಾತಿಗಳನ್ನು ಒದಗಿಸುವುದು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು.
2016ನೇ ವರ್ಷದ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕರ ಕಛೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಲ್ಲಿಂದ ಪಡೆದು, ಆಂಗ್ಲ ಭಾಷೆಯಲ್ಲಿ ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ: 20.07.2016 ರ ಒಳಗೆ ತಲುಪುವಂತೆ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರಿಗೆ ಕಳುಹಿಸತಕ್ಕದ್ದು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ವಿಧಾನಮಂಡಲದಲ್ಲಿ ಇಂದು:

ವಿಧಾನಸಭೆ ಅಧಿವೇಶನ ಆರಂಭ : ಸಂತಾಪ ಸೂಚನೆ

ಬೆಂಗಳೂರು, ಜುಲೈ 4 (ಕರ್ನಾಟಕ ವಾರ್ತೆ) : ಕರ್ನಾಟಕ ವಿಧಾನ ಸಭೆಯ ಮುಂಗಾರು ಅಧಿವೇಶನ ಇಂದು ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ “ವಂದೇ ಮಾತರಂ” ಗೀತೆಯೊಂದಿಗೆ ಆರಂಭಗೊಂಡಿತು.

ಆರಂಭದಲ್ಲಿ ಹಂಗಾಮಿ ವಿಧಾನಸಭಾಧ್ಯಕ್ಷ್ಯ ಎನ್.ಎಸ್. ಶಿವಶಂಕರ ರೆಡ್ಡಿ ಅವರು ಇತ್ತೀಚೆಗೆ ನಿಧನರಾದ ವಿಧಾನಸಭೆಯ ಮಾಜಿ ಶಾಸಕರು ಹಾಗೂ ಗಣ್ಯರ ಕುರಿತು ಸಂತಾಪ ಸೂಚಕ ನಿರ್ಣಯ ಮಂಡಿಸಿದರು.

ಇತ್ತೀಚೆಗೆ ನಿಧನರಾದ ದಿವಂಗತ ಮಾಜಿ ಸಚಿವರಾದ ಸಿ. ಗುರುನಾಥ, ಚಂದ್ರಪ್ರಭಾ ಅರಸ್, ಮಾಜಿ ಶಾಸಕರಾದ ಎಸ್.ಎಸ್. ಮಹಾಜನ್ ಶೆಟ್ಟಿ, ಅಕ್ಕರಗಿ ಯಲ್ಲಪ್ಪ ರಂಗಪ್ಪ, ಎಂ. ಮುನಿಸ್ವಾಮಿ, ಪಿ.ಸಿ. ಮುನಿಸ್ವಾಮಯ್ಯ, ಅನ್ನಪೂರ್ಣಬಾಯಿ ವೈದ್ಯನಾಥಪ್ಪ ರಗಟೆ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದ ಡಾ. ಪುಂಡಲೀಕ ಹಾಲಂಬಿ, ಕನ್ನಡದ ಹಿರಿಯ ಸಾಹಿತಿ ಡಾ. ದೇ.ಜವರೇಗೌಡ ಹಾಗೂ ಹಿರಿಯ ಪತ್ರಕರ್ತರಾಗಿದ್ದ ಎಸ್.ವಿ. ಜಯಶೀಲ ರಾವ್ ಕುರಿತಂತೆ ಮಾತನಾಡಿದ ಹಂಗಾಮಿ ಸಭಾಧ್ಯಕ್ಷ ಎನ್.ಎಸ್. ಶಿವಶಂಕರ ರೆಡ್ಡಿ , ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಜನತಾದಳ (ಜಾತ್ಯಾತೀತ) ಶಾಸಕಾಂಗ ಪಕ್ಷದ ಹಂಗಾಮಿ ನಾಯಕ ವೈ.ಎಸ್.ವಿ. ದತ್ತ, ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹಾಗೂ ಕೆ.ಜೆ.ಪಿ. ಶಾಸಕಾಂಗ ಪಕ್ಷದ ಬಿ. ಆರ್. ಪಾಟೀಲ್ ಅವರುಗಳು ಸಂತಾಪ ಸೂಚಕ ನಿರ್ಣಯವನ್ನು ಬೆಂಬಲಿಸಿ ಗೌರವಪೂರ್ವಕ ನುಡಿನಮನ ಸಲ್ಲಿಸಿದರು.
ನಂತರ ಸದನವು ದಿವಂಗತರ ಗೌರವಾರ್ಥ ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ, ಗೌರವ ಸೂಚಿಸಿತು.

ಕಂದಾಯ ಇಲಾಖೆಯಲ್ಲಿ ಪಿಂಚಣಿ ಸೌಲಭ್ಯ

ಬೆಂಗಳೂರು, ಜುಲೈ 4 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಕಂದಾಯ ಇಲಾಖೆಯಡಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಒಂಬತ್ತು ಪಿಂಚಣಿ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಇಂದು ವಿಧಾನ ಸಭೆಯಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎ. ನಾರಾಯಣಸ್ವಾಮಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

ಕಂದಾಯ ಇಲಾಖೆಗೆ ವೃದ್ದಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ, ಆಸಿಡ್ ದಾಳಿಗೆ ಒಳಗಾದ ಮಹಿಳೆ ಹಾಗೂ ಹೆಣ್ಣು ಮಕ್ಕಳಿಗೆ ಪಿಂಚಣಿ ಯೋಜನೆ, ಸಾಲಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ವಿಧವಾ ವೇತನ ಹಾಗೂ ಎಂಡೋ ಸಲ್ಫಾನ್ ಸಂತ್ರಸ್ಥರಿಗೆ ಪಿಂಚಣಿ ಯೋಜನೆಗಳನ್ನು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರನ್ನು ಗುರುತಿಸುವಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಾರ್ಷಿಕ ಆದಾಯ ಮಿತಿಯನ್ನು ರೂ. 12,000/- ಹಾಗೂ ನಗರ ಪ್ರದೇಶಗಳಲ್ಲಿ ರೂ. 17,000/- ಗಳಿಗೆ ನಿಗದಿಪಡಿಸಲಾಗಿದೆ. ಉಳಿದಂತೆ ಯಾವುದೇ ಮಾನದಂಡಗಳಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಫಲಾನುಭವಿಗಳ ಕುಂದುಕೊರತೆ ನಿಭಾಯಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಸಾರಿಗೆ ಅದಾಲತ್

ಬೆಂಗಳೂರು, ಜುಲೈ 4 (ಕರ್ನಾಟಕ ವಾರ್ತೆ): ಸಾರ್ವಜನಿಕ ಕುಂದು ಕೊರತೆ ಹಾಗೂ ಸಲಹೆಗಳನ್ನು ಪಡೆಯುವ ಸಲುವಾಗಿ ಜುಲೈ 8 ರಂದು ಮಧ್ಯಾಹ್ನ 3-00 ಗಂಟೆಗೆ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಬೆಂಗಳೂರು (ಕೇಂದ್ರ) 2ನೇ ಮಹಡಿ, ಬಿ.ಡಿ.ಎ. ವಾಣಿಜ್ಯ ಸಂಕೀರ್ಣ, ಕೋರಮಂಗಲ, ಬೆಂಗಳೂರು – 560 034 ಇಲ್ಲಿ ಸಾರಿಗೆ ಅದಾಲತ್‍ನ್ನು ಏರ್ಪಡಿಸಲಾಗಿದೆ.

ಈ ಸಾರಿಗೆ ಅದಾಲತ್‍ನಲ್ಲಿ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದು, ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಬೆಂಗಳೂರು ಕೇಂದ್ರಕ್ಕೆ ಸಂಬಂಧಿಸಿದ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರವನ್ನು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳುವರು. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Sarige Adalat
Bengaluru, July 4 (Karnataka Information) : Transport Adalat will be held at the office of the Deputy Commissioner for Transport & Senior Regional Transport Officer, Bengaluru (Central) B.D.A. Complex, 2nd Floor, 3rd Block, Koramangala, Bengalore – 560 034 at 3-00 PM on 08-07-2016.

The Public of this office jurisdiction may submit their grievances and suggestions pertaining to this office. The senior officers of the Transport Department will be present on the occasion.

45 ನೇ ವಾರ್ಷಿಕ ಕಲಾಪ್ರದರ್ಶನಕ್ಕೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 4 (ಕರ್ನಾಟಕ ವಾರ್ತೆ): ಕರ್ನಾಟಕ ಲಲಿತಕಲಾ ಅಕಾಡೆಮಿಯು 2016-17 ನೇಸಾಲಿನಲ್ಲಿ 45ನೇ ವಾರ್ಷಿಕ ಕಲಾಪ್ರದರ್ಶನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದ ನಿವಾಸಿಗಳಾಗಿರುವ ಅಥವಾ ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿರುವ ಕಲಾವಿದರು ಈ ಕಲಾಪ್ರದರ್ಶನದಲ್ಲಿ ಭಾಗವಹಿಸಬಹುದಾಗಿದೆ. ಈ ಕಲಾ ಪ್ರದರ್ಶನಕ್ಕೆ ತೀರ್ಪುಗಾರರಿಂದ ಆಯ್ಕೆ ಮಾಡಿದ ಒಟ್ಟು ಹತ್ತು ಕಲಾಕೃತಿಗಳಿಗೆ ತಲಾ.25,000/- ಗಳ ನಗದು ಮತ್ತು ಪ್ರಶಸ್ತಿ ಪತ್ರ, ಪ್ರಶಸ್ತಿ ಫಲಕ, ನೀಡಿ ಗೌರವಿಸಲಾಗುವುದು. ಬಹುಮಾನದ ಆಯ್ಕೆಗೆ ತೀರ್ಪುಗಾರರದೇ ಅಂತಿಮ ತೀರ್ಮಾನ. ಈ ಕಲಾ ಪ್ರದರ್ಶನದಲ್ಲಿ ಭಾಗವಹಿಸಲಿಚ್ಫಿಸುವ ಕಲಾವಿದರು ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು.

(2015 ರ ಇಸವಿಗಿಂತ ಹಿಂದೆ ರಚಿತವಾದ ಕಲಾಕೃತಿಗಳಾಗಲೀ, ಈಗಾಗಲೇ ಬೇರೆ ಕಲಾ ಪ್ರದರ್ಶನದಲ್ಲಿ ಬಹುಮಾನ ಪಡೆದಿರುವ ಕಲಾಕೃತಿಗಳನ್ನಾಗಲೀ, ಅಕಾಡೆಮಿ ಬಹುಮಾನಕ್ಕಾಗಿ ಪರಿಗಣಿಸುವುದಿಲ್ಲ.) ಆಯ್ಕೆ ಸಮಿತಿಯು ಮೂಲಕೃತಿಗಳ ಛಾಯಾಚಿತ್ರಕ್ಕೆ ಆಧರಿಸಿ ಆಯ್ಕೆ ಮಾಡಿದ ನಂತರ ಮೂಲ ಕೃತಿಗಳನ್ನು ಕಳಿಸಬೇಕಾಗುತ್ತದೆ.

ಈ ಕಲಾಕೃತಿಗಳು 3×3 ಅಳತೆಯ ಒಳಗಿರಬೇಕು. ಲಲಿತಕಲಾ ಅಕಾಡೆಮಿಗೆ ಅರ್ಜಿ ಸಲ್ಲಿಸುವ ಅವಧಿ ಆಗಸ್ಟ್ 4 ರವರೆಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, ಜೆ.ಸಿ. ರಸೆ, ಬೆಂಗಳೂರು – 560 012 ಇಲ್ಲಿ ಖುದ್ದಾಗಿ ಅಥವಾ ರೂ 5/ ಗಳ ಅಂಚೆ ಚೀಟಿ ಲಗತ್ತಿಸಿದ ಸ್ವ-ವಿಳಾಸವುಳ್ಳ (ದೂರವಾಣಿಯ ಸಂಖ್ಯೆಯೊಂದಿಗೆ) ಲಕೋಟೆಯನ್ನು ಕಳುಹಿಸಿ ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 080-22480297 ಅನ್ನು ಸಂಪರ್ಕಿಸಬಹುದು.

ವಿಧಾನ ಪರಿಷತ್ ಕಲಾಪ ವರದಿ

ಅಗಲಿದ ಗಣ್ಯರಿಗೆ ವಿಧಾನ ಪರಿಷತ್ತಿನಲ್ಲಿ ಸಂತಾಪ ಸೂಚನೆ

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 4: ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ಅಗಲಿದ ಮಾಜಿ ಸಂಸದರು ಹಾಗೂ ಮಾಜಿ ಸಚಿವರಾಗಿದ್ದ, ಚಂದ್ರಪ್ರಭಾ ಅರಸು, ಮಾಜಿ ಸಚಿವರಾದ ಸಿ.ಗುರುನಾಥ್, ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಬಿ. ಮರಿಯಪ್ಪ, ಬಿ. ಜಾಜಿ ಮಂದಣ್ಣ, ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಡಾ:ಪುಂಡಲೀಕ ಹಾಲಂಬಿ, ಹಿರಿಯ ಪತ್ರಕರ್ತರಾದ ಎಸ್.ವಿ. ಜಯಶೀಲರಾವ್ ಮತ್ತು ಕನ್ನಡ ಹಿರಿಯ ಸಾಹಿತಿ ಡಾ: ದೇ ಜವರೇಗೌಡ ಅವರುಗಳಿಗೆ ವಿಧಾನ ಪರಿಷತ್ತಿನ ಸಭಾದ್ಯಕ್ಷರಾದ ಡಿ. ಹಚ್. ಶಂಕರಮೂರ್ತಿ ಅವರು ಸಂತಾಪ ಸೂಚನ ನಿರ್ಣಯ ಮಂಡಿಸುವ ಮೂಲಕ ಅಗಲಿದ ಗಣ್ಯರು ತಮ್ಮ ತಮ್ಮ ಕ್ಷೇತ್ರದಲ್ಲಿ ಗಳಿಸಿದ ಹಿರಿಮೆ, ಹಾಗೂ ಸಾಧನೆ ಬಗ್ಗೆ ಗುಣಗಾನ ಮಾಡಿದರು.

ವಿಧಾನ ಪರಿಷತ್ತಿನ ಸಭಾ ನಾಯಕರಾದ ಡಾ: ಜಿ. ಪರಮೇಶ್ವರ್ ಹಾಗೂ ವಿರೋಧ ಪಕ್ಷದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರು ಅಗಲಿದ ಗಣ್ಯರ ಕುರಿತು ಮಾತನಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಸದನವು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಮೃತರಿಗೆ ಗೌರವ ಸಲ್ಲಿಸಿತು.

ವಿಧಾನ ಪರಿಷತ ಸಭಾನಾಯಕರಾಗಿ ಡಾ: ಜಿ . ಪರಮೇಶ್ವರ್ ಮತ್ತು ಮುಖ್ಯ ಸಚೇತಕರಾಗಿ ಐವಾನ್ ಡಿಸೋಜ ನೇಮಕ

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 4: ವಿಧಾನ ಪರಿಷತ್ತಿನ ಸಭಾ ನಾಯಕರಾಗಿ ಡಾ:ಜಿ. ಪರಮೇಶ್ವರ್ ಅವರನ್ನು ಹಾಗೂ ಸರ್ಕಾರದ ಮುಖ್ಯ ಸಚೇತಕರಾಗಿ ಐವಾನ್ ಡಿಸೋಜ ಅವರನ್ನು ನೇಮಕ ಮಾಡಲಾಗಿದೆ ಎಂದು ವಿಧನಾ ಪರಿಷತ್ತಿನ ಸಭಾಧ್ಯಕ್ಷರಾದ ಡಿ.ಹೆಚ್. ಶಂಕರ ಮೂರ್ತಿ ಅವರು ಪ್ರಕಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ: ಜಿ. ಪರಮೇಶ್ವರ್ ಅವರು ಮೇಲ್ವನೆಯಲ್ಲಿ ಬಹಳ ವಿಚಾರಗಳು ವಿಸ್ತಾರವಾಗಿ ಮತ್ತು ಅರ್ಥಗರ್ಭಿತವಾಗಿ ಚರ್ಚೆಯಾಗುತ್ತದೆ. ಆದರೆ ಕೆಲವು ಬಾರಿ ನಿಯಮಗಳನ್ನು ಮೀರಿ ಹೋಗುವುದರಿಂದ ಆರೋಗ್ಯಕರ ಚರ್ಚೆಗಳು ಮಹತ್ವವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ನಿಯಮಗಳ ಚೌಕಟ್ಟಿನಲ್ಲಿ ಚರ್ಚೆಗಳು ನಡೆಯಲು ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರು ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.
ಸರ್ಕಾರದ ಮುಖ್ಯ ಸಚೇತಕರಾಗಿ ನೇಮಕಗೊಂಡಿರುವ ಐವಾನ್ ಡಿಸೋಜ ಅವರು ಮಾತನಾಡಿ, ಸರ್ಕಾರದ ಮುಖ್ಯ ಸಚೇತಕರ ಜವಾಬ್ದಾರಿಗಳ ಬಗ್ಗೆ ಅರಿವಿದೆ, ಯಾವುದೇ ಕಾರಣಕ್ಕೂ ಸದನದ ಸಮಯವನ್ನು ಹಾಳು ಮಾಡದೇ ಸದನವನ್ನು ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ ಎಂದರು.

ನೂತನ ಸಭಾ ನಾಯಕರು ಮತ್ತು ಮುಖ್ಯ ಸಚೇತಕರಿಗೆ ಹಿಂದಿನ ಸಭಾ ನಾಯಕರಾದ ಎಸ್.ಆರ್. ಪಾಟೀಲ್, ವಿರೋಧ ಪಕ್ಷದ ನಾಯಕರಾದ ಕೆ. ಎಸ್. ಈಶ್ವರಪ್ಪ ಅವರು ಅಭಿನಂದನೆ ಸಲ್ಲಿಸಿದರು.

ಗರ್ಭಕೋಶ ಶಸ್ತ್ರ ಚಿಕಿತ್ಸೆ ಪ್ರಕರಣ: ವೈದ್ಯರ ಅಮಾನತ್ತಿಗೆ ಆದೇಶ

ಕರ್ನಾಟಕ ವಾರ್ತೆ: ಬೆಂಗಳೂರು ಜುಲೈ 4: ಅನಗತ್ಯವಾಗಿ ಗರ್ಭಕೋಶ ಶಸ್ತ್ರಚಿಕಿತ್ಸೆ ನಡೆಸಿ ಗರ್ಭಕೋಶ ತೆಗೆದಿರುವ ಆರೋಪದ ಮೇಲೆ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ: ದಯಾನಂದ ಅವರನ್ನು ಅಮಾನತ್ತು ಮಾಡಲು ಸೂಚಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಕೆ.ಆರ್. ರಮೇಶ್ ಕುಮಾರ್ ಅವರು ವಿಧಾನ ಪರಿಷತ್ತಿನಲ್ಲಿಂದು ತಿಳಿಸಿದರು.

ಸದಸ್ಯೆ ಡಾ: ಜಯಮಾಲ ರಾಮಚಂದ್ರ ಅವರು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ಜಿಲ್ಲೆಯ ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರ ಮೇಲೆ ಎಫ್‍ಐಆರ್ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೌಢ್ಯಕ್ಕೆ ಒಳಪಟ್ಟು ಗರ್ಭಕೋಶ ತೆಗೆಸುವವರ ವಿರುದ್ಧ ಕಾನೂನಿನಡಿ ಕ್ರಮ ಕೈಗೊಳ್ಳುವುದು ಕಷ್ಟ. ಆದರೆ ಅನಗತ್ಯವಾಗಿ ಸರ್ಕಾರಿ ವೈದ್ಯರೇ ಇಂತಹ ಪ್ರಕರಣಗಳಲ್ಲಿ ತೊಡಗಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಪ್ರಕರಣದ ಕುರಿತು ಇಲಾಖೆ ಮಟ್ಟದ ತನಿಖೆ ನಡೆಯಲು ವಿಳಂಬವಾಗಿರುವ ಹಿನ್ನೆಲೆಯಲ್ಲಿ ವೈದ್ಯರನ್ನು ಅಮಾನತ್ತು ಮಾಡಲು ನಿರ್ಧರಿಸಲಾಗಿದ್ದು, ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಎಸ್.ವೈ. ಕುಂಬಾರ ಅವರನ್ನು ವಿಚಾರಣಾ ಪ್ರಾಧಿಕಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.