Government of Karnataka

Department of Information

Sunday 10/07/2016

State News 06-07-2016

Date : Wednesday, July 6th, 2016

National Child Award for Exceptional Achievement

Bangalore, July 6 (Karnataka Information) : Press note was released to invite applications for National Award to children in the age group of 9 to 16 years who have shown outstanding achievement in fields such as Innovation in any field including design, Scholastic achievement at National level, Arts, Culture, Sports, Social service, Music and any other field which deserves recognition as per the decision of the Central Selection Committee.
Government of India has revised the age limit of children for the said award for the year 2016. Children born on or after 01-08-1998 and who are in the age group of 5 to 18 years will be considered for the award-2016.

The prescribed application forms for the award 2016 may be obtained from the Deputy Director of Women and Child Development Department in the respective districts. The filled in applications, in English may be sent to the concerned District Deputy Director, Women and Child Development Department on or before 20-07-2016.

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ

ಬೆಂಗಳೂರು, ಜುಲೈ 6 (ಕರ್ನಾಟಕ ವಾರ್ತೆ) : ಕಲೆ, ಸಾಂಸ್ಕøತಿಕ, ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ರಾಷ್ಟ್ರಿಯ ಮಟ್ಟದಲ್ಲಿ ತಾರ್ಕಿಕ ಸಾಧನೆ, ಕ್ರೀಡೆ, ಸಮಾಜ ಸೇವೆ, ಸಂಗೀತ ಮತ್ತು ಕೇಂದ್ರ ಆಯ್ಕೆ ಸಮಿತಿಯ ನಿರ್ಧಾರದ ಪ್ರಕಾರ ಮಾನ್ಯತೆಗೆ ಯೋಗ್ಯವಾದ ಯಾವುದೇ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಯನ್ನು ಮಾಡಿರುವಂತಹ ಮಕ್ಕಳಿಗೆ 9 ರಿಂದ 16 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿಯನ್ನು ನೀಡಲು ಪ್ರಸ್ತಾವನೆಗಳನ್ನು ಸಲ್ಲಿಸಲು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿತ್ತು.

ಆದರೆ ಭಾರತ ಸರ್ಕಾರವು ವಯೋಮಿತಿಯನ್ನು ಪರಿಷ್ಕರಿಸಿ 5 ರಿಂದ 18 ವರ್ಷದೊಳಗಿನ ಅಂದರೆ ದಿನಾಂಕ:01.08.1998 ಹಾಗೂ ನಂತರ ಹುಟ್ಟಿದ ಮಕ್ಕಳನ್ನು 2016ನೇ ಸಾಲಿಗೆ ಆಯ್ಕೆ ಮಾಡಲು ನಿರ್ಧರಿಸಿದೆ. ರಾಷ್ಟ್ರ ಪ್ರಶಸ್ತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕರ ಕಛೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇಲ್ಲಿಂದ ಪಡೆದು, ಆಂಗ್ಲ ಭಾಷೆಯಲ್ಲಿ ಭರ್ತಿ ಮಾಡಿ ದಿನಾಂಕ: 20.07.2016 ರ ಒಳಗೆ ತಲುಪುವಂತೆ ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರಿಗೇ ಕಳುಹಿಸತಕ್ಕದ್ದು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಪೌರಾಡಳಿತ ಸಚಿವರ ರಂಜಾನ್ ಶುಭಾಷಯ

ಬೆಂಗಳೂರು, ಜುಲೈ 6 (ಕರ್ನಾಟಕ ವಾರ್ತೆ) : ಪೌರಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ದಿಮೆಗಳ ಸ್ವತಂತ್ರ ಖಾತೆ ರಾಜ್ಯ ಸಚಿವ ಈಶ್ವರ ಬಿ ಖಂಡ್ರೆ ಅವರು ರಾಜ್ಯದ ಎಲ್ಲ ಮುಸ್ಲಿಂಬಾಂಧವರಿಗೆ ಖುತುಬ್-ಎ-ರಂಜಾನ್ ಹಬ್ಬದ ಹಾರ್ಥಿಕ ಶುಭಕಾಮನೆಗಳನ್ನು ಕೋರಿದ್ದಾರೆ. ಮುಸಲ್ಮಾನ್ ಬಾಂಧವರ ಉಪವಾಸದ ಹಬ್ಬವಾದ ರಂಜಾನ್ ಹಬ್ಬವು ಉಪವಾಸವನ್ನು ಅಂತ್ಯಗೊಳಿಸುವ ಪ್ರಕ್ರಿಯೆಯಾಗಿದ್ದು ತ್ಯಾಗ, ದಾನ ಹಾಗೂ ಬಲಿದಾನಗಳನ್ನು ಪ್ರತಿಬಿಂಬಿಸುತ್ತದೆ ತನ್ಮೂಲಕ ಮುಸ್ಲಿಂ ಬಾಂಧವರಲ್ಲಿ ಸಹೋದರತೆಯ ಗುಣವನ್ನು ಹಿಮ್ಮಡಿಗೊಳಿಸುತ್ತದೆ ಎಂದು ತಮ್ಮ ಶುಭಾಷಯ ಸಂದೇಶದಲ್ಲಿ ಸಚಿವ ಈಶ್ವರ ಖಂಡ್ರೆ ಅವರು ತಿಳಿಸಿದ್ದಾರೆ.

ಬಳ್ಳಾರಿ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಜುಲೈ 6 (ಕರ್ನಾಟಕ ವಾರ್ತೆ); ಬಳ್ಳಾರಿಯ ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಲಯದಲ್ಲಿ ಖಾಲಿಯಿರುವ ಮೂವರು ಶ್ರೀಘ್ರಲಿಪಿಗಾರರು, ಮೂವರು ಬೆರಳಚ್ಚುಗಾರರು ಹಾಗೂ ಒಂದು ಬೆರಳಚ್ಚು ನಕಲುಗಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 21 ಕೊನೆಯ ದಿನವಾಗಿದೆ.

ಅರ್ಜಿ ನಮೂನೆ, ಮೀಸಲಾತಿ ವಿವರ ಸೂಚನೆಗಳು ಮತ್ತು ಹೆಚ್ಚಿನ ವಿವರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ತ ನ್ಯಾಯಾಲಯ, ಬಳ್ಳಾರಿ ಅಂತರ್ಜಾಲ http://ecourts.gov.in/india/Karnataka/ballari/recruitmentನಲ್ಲಿ   ನೋಡಬಹುದಾಗಿದೆ.