Government of Karnataka

Department of Information

Thursday 02/06/2016

State News 11-03-2016

Date : Friday, March 11th, 2016
ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ
1. Workshop on “NDPS, POCSO, Human Trafficking and Abolition of Bonded Labour”

Inauguration:

Hon’ble Sri Justice Subhro Kamal Mukhrjee, Chief Justice of Karnataka High Court.

Preside:

Hon’ble Sri Justice N. Kumar, Judge, High Court of Karnataka.

  12-03-2016    Saturday at 9-30 AM Conference Hall of Karnataka Judicial Academy, Cresent Road, Bengaluru.
2. ಬೆಂಗಳೂರಿನಲ್ಲಿ ಮಾರ್ಚ್ 17 ರಿಂದ ನಡೆಯಲಿರುವ ಭಾರತೀಯ ಪನೋರಮಾ ಚಿತ್ರೋತ್ಸವದ ವಿವರ ಒದಗಿಸಲು ಪತ್ರಿಕಾಗೋಷ್ಠಿ.

ಶ್ರೀ ಎಸ್. ವಿ. ರಾಜೇಂದ್ರಸಿಂಗ್ ಬಾಬು, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು.

 12-03-2016 ಶನಿವಾರ ಬೆಳಿಗ್ಗೆ  11-30 ಗಂಟೆಗೆ  ಪ್ರೆಸ್ ಕ್ಲಬ್, ಕಬ್ಬನ್ ಉದ್ಯಾನವನ, ಬೆಂಗಳೂರು

ವರ್ಗಾವಣೆಗೆ ಸಮಾಲೋಚನೆ

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ): ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ವ್ಯಾಪ್ತಿಯಲ್ಲಿ ಡಿಸೆಂಬರ್ 2015ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ ತಜ್ಞ ವೈದ್ಯರು/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು/ದಂತ ಆರೋಗ್ಯಾಧಿಕಾರಿಗಳಿಗೆ ಮತ್ತೊಂದು ಸುತ್ತಿನ ಸಮಾಲೋಚನೆ ಮೂಲಕ ವರ್ಗಾವಣೆ ನಡೆಸಲು ಸರ್ಕಾರದಿಂದ ಅನುಮತಿ ನೀಡಲಾಗಿದ್ದು,  ಕರ್ನಾಟಕ ಲೋಕ ಸೇವಾ ಆಯೋಗದಿಂದ ಆಯ್ಕೆಗೊಂಡು ನಂತರ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ      ಹಾಗೂ ಸೇರುವ ಕಾಲ ವಿಸ್ತರಣೆ ಪಡೆದುಕೊಂಡ ಅಭ್ಯರ್ಥಿಗಳು ಮತ್ತು ಕರ್ತವ್ಯಕ್ಕೆ ವರದಿ ಮಾಡಿಕೊಂಡು ಕರ್ತವ್ಯಕ್ಕೆ ಗೈರು ಹಾಜರಾದ ಅಭ್ಯರ್ಥಿಗಳೂ ವರ್ಗಾವಣೆಗೆ ಇಚ್ಚೆಪಟ್ಟಲ್ಲಿ ದಿನಾಂಕ:  14-03-2016 ರ ಒಳಗೆ ಆಯಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಅರ್ಜಿಗಳನ್ನು ಸಲ್ಲಿಸಲು ಕೋರಿದೆ.

ಮೈಸೂರಿನಲ್ಲಿ  ಸೈನಿಕ ನೇಮಕಾತಿ

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ): ಮೈಸೂರಿನಲ್ಲಿ ಮೇ 1 ರಿಂದ 10ನೇ ದಿನಾಂಕದವರೆಗೂ ಭಾರತೀಯ ಸೈನ್ಯಕ್ಕೆ ನೇಮಕಾತಿ ಮಾಡಿಕೊಳ್ಳಲಾಗುವುದು.  ಇದಕ್ಕಾಗಿ ಏಪ್ರಿಲ್ 20 ರವರೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.   ನೇಮಕಾತಿ ರ್ಯಾಲಿಯನ್ನು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸಲಾಗುವುದು.  ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಚಾಮರಾಜನಗರ, ಬಳ್ಳಾರಿ, ತುಮಕೂರು, ರಾಮನಗರ, ಚಿತ್ರದುರ್ಗ, ಕೊಡಗು, ಮೈಸೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಆಸಕ್ತ ಯುವಕರು ಅನ್‍ಲೈನ್‍ನಲ್ಲಿ ಅಂತರ್ಜಾಲದ ಮೂಲಕ ಅರ್ಜಿ ನೋಂದಾಯಿಸಬಹುದು.

ಭಾರತೀಯ ಸೈನ್ಯದಲ್ಲಿ ಸೈನಿಕ ಲಿಪಿಕ, ಉಗ್ರಾಣಪಾಲಕ ತಾಂತ್ರಿಕ, ಸೈನಿಕ ತಾಂತ್ರಿಕ, ಸಾಮಾನ್ಯ ಕರ್ತವ್ಯ, ಶುಶ್ರೂಷಾ ಸಹಾಯಕ, ಪಶುವೈದ್ಯ, ಸೈನಿಕ , ಟ್ರೇಡ್ಸ್‍ಮೆನ್, ಸೈನಿಕ ತಾಂತ್ರಿಕ ಇತ್ಯಾದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

www.joinindianarmy.nic.in ವೆಬ್‍ಸೈಟ್‍ನಲ್ಲಿ ಲಾಗಿನ್ ಮಾಡಿ ಅಡ್ಮಿಟ್ ಕಾರ್ಡ್‍ನ್ನು ಉತ್ತಮ ದರ್ಜೆಯ ಕಾಗದದ ಮೇಲೆ ಪ್ರಿಂಟ್ ತೆಗೆದುಕೊಳ್ಳುವುದು.  ಅಡ್ಮಿಟ್ ಕಾರ್ಡ್‍ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಹಾಜರಾಗುವ ದಿನಾಂಕ ಮತ್ತು ಸ್ಥಳದ ಮಾಹಿತಿಯೊಂದಿಗೆ ಆಯಾಯ ಜಿಲ್ಲೆಗಳ ಅಭ್ಯರ್ಥಿಗಳು ತಮಗೆ ನೀಡಲಾಗಿರುವ ದಿನಾಂಕದಂದು ಅಡ್ಮಿಟ್ ಕಾರ್ಡ್ ಜೊತೆಗೆ ನಿಗದಿತ ದಿನಾಂಕದಂದು ಬೆಳಿಗ್ಗಿನ ಜಾವ 4-00 ಗಂಟೆಗೆ ನೇಮಕಾತಿ ನಡೆಯುವ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಹಾಜರಿರಬೇಕು.

 ಹೆಚ್ಚಿನ ಮಾಹಿತಿಗೆ ನೇಮಕಾತಿ ಕಚೇರಿ, ಕೇಂದ್ರ ಕಾರ್ಯಸ್ಥಾನ ನೇಮಕಾತಿ ವಲಯ, ಬೆಂಗಳೂರು – 560 025, ದೂರವಾಣಿ 080-25599290 ಅಥವಾ 080-25596517 ಅಥವಾ ಅಂತರ್ಜಾಲ  ಸಂ www.joinindianarmy.nic.in  ಸಂಪರ್ಕಿಸಬಹುದು.

ಸಾರಿಗೆ ಅದಾಲತ್

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ): ಬೆಂಗಳೂರಿನ ಯಲಹಂಕ ಸಾರಿಗೆ ಪ್ರಾದೇಶಿಕ ಕಚೇರಿಯಲ್ಲಿ ಮಾರ್ಚ್ 18 ರಂದು ಸಾರಿಗೆ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳುವರು. ಈ ಅದಾಲತ್‍ನಲ್ಲಿ ಈ ಕಚೇರಿಯ ವ್ಯಾಪ್ತಿಗೆ ಬರುವ ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ.

ಅರ್ಜಿ ಆಹ್ವಾನ

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಖಾಲಿ ಇರುವ ಸಮೂಹ ಸಂಪನ್ಮೂಲ ವ್ಯಕ್ತಿ (ಸಿ.ಆರ್.ಪಿ) ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಬಿ.ಆರ್.ಪಿ.) ಹುದ್ದೆಗಳನ್ನು ಭರ್ತಿಮಾಡಲು ಸೇವೆಯಲ್ಲಿರುವ ಸರ್ಕಾರಿ ಪ್ರಾಥಮಿಕ/ಪ್ರೌಢಶಾಲಾ ಶಿಕ್ಷಕರುಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಅರ್ಜಿಯನ್ನು ಸಲ್ಲಿಸಲು ಮಾರ್ಚ್ 14 ಕೊನೆಯ ದಿನವಾಗಿದ್ದು,  ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಜಿಲ್ಲೆಯ ಉಪ ನಿರ್ದೇಶಕರು (ಆಡಳಿತ), ಉಪನಿರ್ದೇಶಕರು, (ಅಭಿವೃದ್ಧಿ) ಹಾಗೂ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವುದು ಅಥವಾ ಇಲಾಖಾ ವೆಬ್‍ಸೈಟ್ www.ssakarnataka.gov.in ಅನ್ನು ವೀಕ್ಷಿಸಬಹುದಾಗಿದೆ.

ಗ್ರಂಥಾಲಯ ವಿಜ್ಞಾನ ತರಬೇತಿ  

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ): ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು ವಿಭಾಗದ ಮಂಗಳೂರು, ಬೆಳಗಾವಿ ವಿಭಾಗದ ಧಾರವಾಡ ಮತ್ತು ಕಲಬುರಗಿ ವಿಭಾಗಗಳಲ್ಲಿ ನಾಲ್ಕು ತಿಂಗಳ ಅವಧಿಯ ಗ್ರಂಥಾಲಯ ವಿಜ್ಞಾನ ತರಬೇತಿ ಶಾಲೆಗಳನ್ನು ನಡೆಸಲಾಗುತ್ತಿದೆ. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನಿಷ್ಠ ಶೇಕಡ 40 ರಷ್ಟು,ಮತ್ತು (ಎಸ್‍ಸಿ/ಎಸ್‍ಟಿ)  ಶೇಕಡ 35 ರಷ್ಟು ಅಂಕ ಪಡೆದ ಅಭ್ಯರ್ಥಿಗಳು ಈ ತರಬೇತಿಗೆ ಅರ್ಹರಾಗಿದ್ದಾರೆ.

ಹಾಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಾಲಯ ಸಹವರ್ತಿಗಳು, ಗ್ರಾಮ ಪಂಚಾಯತಿ ಮೇಲ್ವಿಚಾರಕರು ಸಂಬಂಧಪಟ್ಟ ಉಪನಿರ್ದೇಶಕರು/ಮುಖ್ಯ ಗ್ರಂಥಾಲಯಾಧಿಕಾರಿಗಳ ಮೂಲಕ ಹಾಗೂ ಇತರೆ ಶೈಕ್ಷಣಿಕ ಸಂಸ್ಥೆಯಿಂದ ಬರುವ ಅಭ್ಯರ್ಥಿಗಳು ತಮ್ಮ ಸಂಸ್ಥೆಯ ಮುಖ್ಯಸ್ಥರ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿಯ ಜೊತೆಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜಾತಿ ಪ್ರಮಾಣಪತ್ರ, ಸೇವೆಗೆ ಸೇರಿದ ದಿನಾಂಕ, ವೇತನ ಪ್ರಮಾಣ ಪತ್ರ ನಡವಳಿಕೆ ಪ್ರಮಾಣ ಪತ್ರಗಳ ನಕಲು ಪ್ರತಿಗಳನ್ನು ಲಗತ್ತಿಸಬೇಕು.

20 ಸೀಟುಗಳನ್ನು ಶ್ರೇಷ್ಠತೆಯ ಮೀಸಲಾತಿ ಆಧಾರದ ಮೇಲೆ ಆದ್ಯತೆ ನೀಡಲಾಗುವುದು. ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಜಾತಿ, ಗ್ರಾಮೀಣ/ಯೋಜನಾ ನಿರಾಶ್ರಿತರು/ಮಾಜಿ ಸೈನಿಕ/ಅಂಗವಿಕಲ/ಕನ್ನಡ ಮಾಧ್ಯಮ ಪ್ರಮಾಣ ಪತ್ರಗಳ ದೃಢೀಕೃತ ನಕಲು ಪ್ರತಿಗಳನ್ನು ಸಲ್ಲಿಸಬೇಕು.  ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನ ಏಪ್ರಿಲ್ 5 ಆಗಿದೆ.

ಕಬ್ಬನ್ ಉದ್ಯಾನವನದಲ್ಲಿ ಈ ಭಾನುವಾರ

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ):ಶ್ರೀ ಚಾಮರಾಜೇಂದ್ರ ಉದ್ಯಾನವನ (ಕಬ್ಬನ್ ಪಾರ್ಕ್) ಒಳರಸ್ತೆಗಳಲ್ಲಿ  ಭಾನುವಾರದ ದಿನಗಳಂದು ಸಾರ್ವಜನಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದ್ದು, ಉದ್ಯಾನವನದ ಆವರಣದಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರ ಅನುಕೂಲಕ್ಕಾಗಿ ಪ್ರತಿ ಭಾನುವಾರದ ದಿನಗಳಂದು ವಿವಿಧ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿರುತ್ತದೆ.  ದಿನಾಂಕ: 13-03-2016ರ ಭಾನುವಾರದಂದು ಶ್ರೀ ಚಾಮರಾಜೇಂದ್ರ ಉದ್ಯಾನವನದ      (ಕಬ್ಬನ್ ಉದ್ಯಾನವನ)   ಬ್ಯಾಂಡ್ ಸ್ಟ್ಯಾಂಡ್ ಆವರಣ ಹಾಗೂ ಮುಂಭಾಗದ ರಸ್ತೆಯಲ್ಲಿ ಮತ್ತು ಶ್ರೀ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಕೆಳಕಂಡ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿರುತ್ತದೆ. ಸಾರ್ವಜನಿಕರು, ಪ್ರವಾಸಿಗರು ಮತ್ತು ನಡಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸದರಿ ಕಾರ್ಯಚಟುವಟಿಕೆಗಳ ಸದುಪಯೋಗವನ್ನು ಪಡೆದುಕೊಳ್ಳುವಂತೆ ಈ ಮೂಲಕ ಕೋರಲಾಗಿದೆ.

1. ಬೆಳಿಗ್ಗೆ 06.00 ಗಂಟೆಯಿಂದ ಬೆಳಿಗ್ಗೆ 07.00 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ “ಉದ್ಯಾನವನದಲ್ಲಿ ಉದಯರಾಗ” ಎಂಬ ಶೀರ್ಷಿಕೆಯಡಿ ಶ್ರೀ ಶಿವಶಾಂತ ಬಿಸ್ನಳ್ಳಿ  ಮತ್ತು ತಂಡ ಗದಗ್ ಜಿಲ್ಲೆರವರಿಂದ ಜಾನಪದ ಮತ್ತು ಭಾವಗೀತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

2. ಸಂಜೆ 05.00 ಗಂಟೆಯಿಂದ ಸಂಜೆ 06.00 ಗಂಟೆಯವರೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಬ್ಯಾಂಡ್ ಸ್ಟ್ಯಾಂಡ್ ಆವರಣದಲ್ಲಿ “ಉದ್ಯಾನವನದಲ್ಲಿ ಸಂಧ್ಯಾರಾಗ” ಎಂಬ ಶೀರ್ಷಿಕೆಯಡಿ ಶ್ರೀ ಹೆಚ್.ಜೆ.ಸಿದ್ದರಾಜಯ್ಯ ಮತ್ತು ತಂಡ ಬೆಂಗಳೂರುರವರಿಂದ ಜಾನಪದ ಗೀತೆ ಮತ್ತು ಭಾವಗೀತೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

3.  ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಉದ್ಯಾನವನದಲ್ಲಿರುವ ಒಳರಸ್ತೆಗಳಲ್ಲಿ ನಗರ ಭೂಸಾರಿಗೆ ನಿರ್ದೇಶನಾಲಯರವರ ಸಹಯೋಗದೊಂದಿಗೆ ಬಾಡಿಗೆ ರಹಿತ ಸೈಕಲ್ ಸವಾರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

4.  ಉದ್ಯಾನವನದ ಆವರಣದಲ್ಲಿ ಜೈವಿಕ್ ಕೃಷಿಕ್ ಸೊಸೈಟಿ(ರಿ), ಲಾಲ್‍ಬಾಗ್, ಬೆಂಗಳೂರುರವರು ತಮ್ಮ ಮಾರಾಟ ಮಳಿಗೆಯಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ವಿವಿಧ ರೀತಿಯ ಹಣ್ಣುಗಳು ಮತ್ತು ಹಣ್ಣಿನ ಜ್ಯೂಸ್ ಮತ್ತು ಇತರೆ ಸಾವಯವ ಆಹಾರ ಪದಾರ್ಥಗಳ ಮಾರಾಟವನ್ನು ಕೈಗೊಳ್ಳುತ್ತಾರೆ.

5. ಉದ್ಯಾನವನದ ಆವರಣದಲ್ಲಿ ಹಾಪ್‍ಕಾಮ್ಸ್, ಬೆಂಗಳೂರುರವರು ವಿವಿಧ ಅuಣ ಈಡಿuiಣs, ಆಡಿಥಿ ಈಡಿuiಣs ಮತ್ತು ವಿವಿಧ ತಾಜಾ ಹಣ್ಣುಗಳು, ಪ್ಯಾಕ್ ಮಾಡಿದ ತಾಜಾ ತರಕಾರಿಗಳು ಹಾಗೂ ಹಣ್ಣಿನ ಜ್ಯೂಸ್‍ಗಳ ಮಾರಾಟವನ್ನು ಕೈಗೊಳ್ಳುತ್ತಾರೆ.

6.  ಉದ್ಯಾನವನದ ಆವರಣದಲ್ಲಿ ದಿ ನರ್ಸರಿಮೆನ್ ಕೋ-ಆಪರೇಟೀವ್ ಸೊಸೈಟಿ, ಲಾಲ್‍ಬಾಗ್, ಬೆಂಗಳೂರುರವರು ವಿವಿಧ ಅಲಂಕಾರಿಕ ಗಿಡಗಳು ಮತ್ತು ಉದ್ಯಾನವನ ಸಲಕರಣೆಗಳ ಮಾರಾಟವನ್ನು ಕೈಗೊಳ್ಳುತ್ತಾರೆ.

7. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಬೆಂಗಳೂರುರವರ ವತಿಯಿಂದ ನಗರ ಕೇಂದ್ರ ಗ್ರಂಥಾಲಯ ಮತ್ತು    ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಆವರಣದಲ್ಲಿ ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

8. ಕಬ್ಬನ್ ಉದ್ಯಾನವನದ ಒಳರಸ್ತೆಗಳಲ್ಲಿ ಸಾರ್ವಜನಿಕರು, ಪ್ರವಾಸಿಗರು ಮತ್ತು ವಯೋವೃದ್ಧರ ಅನುಕೂಲಕ್ಕಾಗಿ ಎರಡು ಸಂಖ್ಯೆಯ ಪರಿಸರ ಸ್ನೇಹಿ ವಿದ್ಯುತ್‍ಚಾಲಿತ ವಾಹನಗಳ ಸೇವೆಯನ್ನು ನಿಗಧಿತ ಶುಲ್ಕ ನೀಡಿ ಸಾರ್ವಜನಿಕರು ಪಡೆಯಬಹುದು.

ಈ ಭಾನುವಾರದ ವಿಶೇಷ ಕಾರ್ಯಕ್ರಮಗಳು:

 I.ಸ್ಥಳ: ಬ್ಯಾಂಡ್ ಸ್ಟ್ಯಾಂಡ್ ಆವರಣ

1. ಬೆಳಿಗ್ಗೆ 7.00 ಗಂಟೆಯಿಂದ 8.00 ಗಂಟೆಯವರೆಗೆ ಯೂನಿವರ್ಸ್ ಆರ್ಟ್ ಫೌಂಡೇಶನ್ ಸಂಸ್ಥೆಯ ಸಹಯೋಗದೊಂದಿಗೆ ಕುಮಾರಿ ಪ್ರತಿಭಾ ರವರಿಂದ ಭರತನಾಟ್ಯ ಕಾರ್ಯಕ್ರಮವನ್ನು  ಏರ್ಪಡಿಸಲಾಗಿದೆ.

2. ಬೆಳಿಗ್ಗೆ 08.00 ಗಂಟೆಯಿಂದ 09.00 ಗಂಟೆಯವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಲಭವನ ಸೊಸೈಟಿ, ಬೆಂಗಳೂರುರವರ ಸಹಯೋಗದೊಂದಿಗೆ ಮಾ. ಕೃಷ್ಣೇಂದು ಸಮರ್ಥ ಮತ್ತು ತಂಡದವರಿಂದ ಹಿಂದೂಸ್ತಾನಿ ಗಾಯನ  ಕಾರ್ಯಕ್ರಮವನ್ನು  ಏರ್ಪಡಿಸಲಾಗಿದೆ.

3. ಬೆಳಿಗ್ಗೆ 9.00 ರಿಂದ 10.00 ಗಂಟೆವರೆಗೆ ವಾಣಿ ಶಿಕ್ಷಣ ಸಂಸ್ಥೆ, ಬಸವೇಶ್ವರನಗರ, ಬೆಂಗಳೂರು ಶಾಲಾ ಮಕ್ಕಳಿಂದ ಭರತನಾಟ್ಯ  ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

4. ಸಂಜೆ 4.00 ಗಂಟೆಯಿಂದ 5.00 ಗಂಟೆಯವರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಅಕ್ಷಯ ಫೌಂಡೇಷನ್‍ರವರ ಸಹಯೋಗದೊಂದಿಗೆ ಶ್ರೀ ಪಿ.ಎಸ್. ಸಿದ್ದಲಿಂಗಸ್ವಾಮಿ ಅರ್ಥಶಾಸ್ತ್ರ ಉಪನ್ಯಾಸಕರುರವರಿಂದ ಕನ್ನಡದ ಬೆಳವಣಿಗೆಯ ಪ್ರಸ್ತುತತೆ ಕುರಿತು ಉಪನ್ಯಾಸ ಕಾರ್ಯಕ್ರಮ ಹಾಗೂ ಹರ್ಷಿತಾ ಮತ್ತು ತಂಡದÀವರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

II.ಸ್ಥಳ: ಶ್ರೀ ಚಾಮರಾಜೇಂದ್ರ ಒಡೆಯರ್ ಪ್ರತಿಮೆಯ ಹತ್ತಿರ

1. ಬೆಳಿಗ್ಗೆ  7.00 ರಿಂದ ಸಂಜೆ 6.00 ಘಂಟೆಯವರೆಗೆ ಬೆಂಗಳೂರು  ವಿದ್ಯುತ್ ಸರಬರಾಜು ಕಂಪನಿ ನಿಗಮ ನಿಯಮಿತ ರವರ  ವತಿಯಿಂದ  ಎನರ್ಜಿ  ಎಫಿಶಿಯೆನ್ಸಿ   ಸರ್ವಿಸಸ್   ಲಿಮಿಟೆಡ್ (EESL)  ರವರ ಸಹಯೋಗದೊಂದಿಗೆ   ಡೆಲ್ಪ್  (DELP) ಕಾರ್ಯಕ್ರಮದ ಮುಖಾಂತರ   ನಾಡಿನ  ಜನತೆಗೆ   ಪ್ರತಿ ಬಲ್ಬ್ ಗೆ  ರೂ.100 ದರದಲ್ಲಿ 9 ವ್ಯಾಟ್ ಐಇಆ  ಬಲ್ಬ್ ಗಳನ್ನು  ವಿತರಿಸಲಾಗುತ್ತಿದ್ದು,  2 ಕಿ.ವ್ಯಾ. ವರೆಗೆ ಗರಿಷ್ಠ 5 ಬಲ್ಬ್ ಗಳನ್ನು  ಹಾಗೂ 2.ಕಿ.ವ್ಯಾ. ಗಿಂತ  ಹೆಚ್ಚು ಇದ್ದರೆ ಗರಿಷ್ಠ 10 ಬಲ್ಬ್ ಗಳನ್ನು  ವಿತರಿಸಲಾಗುವುದು.  ಸಾರ್ವಜನಿಕರು  ಇತ್ತೀಚಿನ ವಿದ್ಯುತ್  ಬಿಲ್  ಪ್ರತಿ, ವಿಳಾಸದ  ಚೀಟಿ  ಹಾಗೂ  ಗುರುತಿನ  ಚೀಟಿಯೊಂದಿಗೆ   ಪೂರ್ಣ  ಮುಂಗಡ ಹಣ  ಪಾವತಿ ಮಾಡಿ  ಬಲ್ಪ್ ಗಳನ್ನು  ಪಡೆಯಬಹುದಾಗಿದೆ.
2. ಬೆಳಿಗ್ಗೆ 6.00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ವಿದ್ಯಾರಣ್ಯ ಸಂಸ್ಥೆಯು ನಡೆಸುತ್ತಿರುವ ಬುದ್ಧಿವಿಕಲಚೇತನ ಮಕ್ಕಳಿಂದ ವಿವಿಧ ಬಗೆಯ ವೇಷಭೂಷಣದ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಹೈನುಗಾರಿಕೆ ಹಾಗೂ ಮೇವು ಉತ್ಪಾದನಾ ತರಬೇತಿ

ಬೆಂಗಳೂರು, ಮಾರ್ಚ್ 11 (ಕರ್ನಾಟಕ ವಾರ್ತೆ): ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ (ಇಂಡೋ-ಡ್ಯಾನಿಷ್ ಫಾರಂ) ಹೆಸರಘಟ್ಟ, ಬೆಂಗಳೂರು – 08 ಇಲ್ಲಿ ದಿನಾಂಕ: 14-03-2016 ರಿಂದ 19-03-2016 ರ ರವರೆಗೆ ಬೆಳಿಗ್ಗೆ 10.00 ರಿಂದ ಸಾಯಂಕಾಲ 4-30 ರವರೆಗೆ 6 ದಿನಗಳ “ಹೈನುಗಾರಿಕೆ  ಹಾಗೂ ಮೇವು ಉತ್ಪಾದನೆ” ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಆಸಕ್ತಿಯುಳ್ಳ ರೈತರು, ರೈತ ಮಕ್ಕಳು ಹಾಗೂ ರೈತ ಮಹಿಳೆಯರು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.  ತರಬೇತಿ ಅವಧಿಯಲ್ಲಿ ವಿದ್ಯಾರ್ಥಿ ನಿಲಯದಲ್ಲಿ ಉಳಿದುಕೊಳ್ಳಲು ಇಚ್ಚಿಸುವ ಅಭ್ಯರ್ಥಿಗಳು ದಿನವೊಂದಕ್ಕೆ ರೂ 25-00 ರಂತೆ ವಸತಿ ಶುಲ್ಕ ಪಾವತಿಸಬೇಕಾಗಿರುತ್ತದೆ.  ತರಬೇತಿ ಅವಧಿಯಲ್ಲಿ ಊಟ ಮತ್ತು ಪ್ರಯಾಣದ ವೆಚ್ಚವನ್ನು ಅಭ್ಯರ್ಥಿಗಳೇ ಭರಿಸತಕ್ಕದ್ದು.

ತರಬೇತಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ವಾಸಸ್ಥಳದ ಯಾವುದಾದರೊಂದು ದೃಢೀಕರಣದ ಪ್ರತಿ ಹಾಗೂ ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ  14-03-2016 ರಂದು ಬೆಳಿಗ್ಗೆ 9-00 ಗಂಟೆಗೆ ನೇರವಾಗಿ ಹಾಜರಾಗಬಹುದು.  ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಉಪ ನಿರ್ದೇಶಕರು (ತರಬೇತಿ) ಇವರನ್ನು ನೇರವಾಗಿ ಅಥವಾ ದೂರವಾಣಿ: 080 28466397 ಮುಖೇನ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.