Government of Karnataka

Department of Information

Tuesday 01/11/2016

State News 13-11-2015

Date : Friday, November 13th, 2015
ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ
1 ದಿವಂಗತ ಪಂಡಿತ್ ಜವಹರಲಾಲ್ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಮಾಲಾರ್ಪಣೆ   ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ 14-11-2015 ಶನಿವಾರ ಬೆಳಿಗ್ಗೆ 10-00 ಗಂಟೆಗೆ ವಿಧಾನ ಸೌಧದ ಪಶ್ಚಿಮ ದಿಕ್ಕಿನಲ್ಲಿರುವ ದಿವಂಗತ ಪಂಡಿತ್ ಜವಹರಲಾಲ್ ನೆಹರು ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ
2 ಮಕ್ಕಳ ದಿನಾಚರಣೆ 2015: ಮಕ್ಕಳಿಗೆ  ಶೌರ್ಯ ಪ್ರಶಸ್ತಿ ಪ್ರದಾನ ಉದ್ಘಾಟನೆ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಶ್ರೀ ವಜುಭಾಯಿ ವಾಲಾ, ಘನತೆವೆತ್ತ ರಾಜ್ಯಪಾಲರು, ಕರ್ನಾಟಕ  ಸಮಾರಂಭದ ಅಧ್ಯಕ್ಷತೆ: ಶ್ರೀ ಆರ್. ರೋಷನ್ ಬೇಗ್, ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರು   ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ:   ಶ್ರೀ ಕೆ.ಜೆ. ಜಾರ್ಜ್, ಬೆಂಗಳೂರು ಅಭಿವೃದ್ಧಿ ಮತ್ತು ಬೆಂಗಳೂರು ಉಸ್ತುವಾರಿ ಸಚಿವರು  ಅಸಾಧಾರಣ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪ್ರದಾನ (ಕಲೆ, ಸಾಂಸ್ಕೃತಿಕ ಮತ್ತು ಸಂಗೀತ) ಶ್ರೀಮತಿ ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 14-11-2015 ಶನಿವಾರ ಬೆಳಿಗ್ಗೆ 11-00 ಗಂಟೆಗೆ ಜವಾಹರ ಬಾಲಭವನ, ಕಬ್ಬನ್ ಉದ್ಯಾನವನ, ಬೆಂಗಳೂರು
3 ಮಕ್ಕಳ ಹಬ್ಬ 2015 ಉದ್ಘಾಟನೆ: ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ  ಅಧ್ಯಕ್ಷತೆ: ಶ್ರೀ ಆರ್. ರೋಷನ್ ಬೇಗ್, ಮೂಲ ಸೌಲಭ್ಯ ಅಭಿವೃದ್ಧಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರು   ಸಮಾಜ ಸೇವಾ ಕಾರ್ಯಕರ್ತರಿಗೆ  ಸನ್ಮಾನ:  ಶ್ರೀಮತಿ ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ  ಮುಖ್ಯ ಅತಿಥಿಗಳು:  ಡಾ: ಜಿ. ಪರಮೇಶ್ವರ, ಗೃಹ ಸಚಿವರು  ಶ್ರೀ ಕೆ.ಜಿ. ಜಾರ್ಜ್, ಬೆಂಗಳೂರು ಅಭಿವೃದ್ಧಿ ಮತ್ತು ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವರು ಶ್ರೀ ಟಿ.ಬಿ. ಜಯಚಂದ್ರ, ಸಂಸದೀಯ ಮತ್ತು ಉನ್ನತ ಶಿಕ್ಷಣ ಸಚಿವರು ಶ್ರೀ ಶಾಮನೂರು ಶಿವಶಂಕರಪ್ಪ ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕೆ ಸಚಿವರು ಶ್ರೀ ರಾಮಲಿಂಗಾರೆಡ್ಡಿ, ಸಾರಿಗೆ ಸಚಿವರು ಶ್ರೀ ಯು.ಟಿ. ಖಾದರ್,  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು 14-11-2015 ಶನಿವಾರ ಸಂಜೆ 4-30 ಗಂಟೆಗೆ ಬ್ಯಾಂಡ್ ಸ್ಟ್ಯಾಂಡ್ ಕಬ್ಬನ್ ಉದ್ಯಾನವನ ಬೆಂಗಳೂರು
4 ಬೆಳ್ಳಿ ಹೆಜ್ಜೆ:  ದೊಡ್ಡಣ್ಣ ಕನ್ನಡ ಚಿತ್ರರಂಗದ ಹಿರಿಯ ನಟ ಅವರೊಂದಿಗೆ  ಮುಖ್ಯ ಅತಿಥಿಗಳು: ಶ್ರೀಮತಿ ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ, ವಿಕಲಚೇತನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು  ಶ್ರೀ ವಿ. ರವಿಚಂದ್ರನ್, ಹಿರಿಯ ಕಲಾವಿದರು, ನಿರ್ಮಾಪಕ ಹಾಗೂ ನಿರ್ದೇಶಕ ಶ್ರೀ ಹಂಸಲೇಖ, ಹಿರಿಯ ಸಂಗೀತ ನಿರ್ದೇಶಕರು ಶ್ರೀ ಸಾ.ರಾ. ಗೋವಿಂದು, ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಶ್ರೀ ರಾಕ್‌ಲೈನ್ ವೆಂಕಟೇಶ್, ಹಿರಿಯ ಚಲನಚಿತ್ರ ನಿರ್ಮಾಪಕರು ಶ್ರೀ ಎನ್.ಆರ್. ವಿಶುಕುಮಾರ್, ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 14-11-2015 ಶನಿವಾರ ಸಂಜೆ 5-00 ಗಂಟೆಗೆ ಮಹದೇವ ದೇಸಾಯಿ ಸಭಾಂಗಣ, ಗಾಂಧೀಭವನ, ಕುಮಾರಪಾರ್ಕ್ ರಸ್ತೆ, ಬೆಂಗಳೂರು
5  ಮೆಟ್ರೋ ಮಾರ್ಗ -ರೀಚ್ -2 ಉದ್ಘಾಟನೆ: ಶ್ರೀ ಸಿದ್ದರಾಮಯ್ಯ, ಮುಖ್ಯ ಮಂತ್ರಿಗಳು, ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿಸುವುದು:  ಶ್ರೀ ವೆಂಕಯ್ಯನಾಯ್ಡು, ಕೇಂದ್ರ ಸರ್ಕಾರದ ನಗರಾಭಿವೃದ್ಧಿ, ಸಂಸದೀಯ ವ್ಯವಹಾರಗಳು, ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವರು  ಸಾರ್ವಜನಿಕ ಸಮಾರಂಭ   ಭಾಗವಹಿಸುವವರು: ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರುಗಳು 16-11-2015 ಸೋಮವಾರ ಸಂಜೆ 4-00 ಗಂಟೆಗೆ 16-11-2015 ಸೋಮವಾರ ಸಂಜೆ 4-30 ಗಂಟೆಗೆ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣ ಮೈಸೂರು ರಸ್ರೆ ಟರ್ಮಿನಲ್ ನಿಲ್ದಾಣದಲ್ಲಿ

ನೆಹರು ಭಾವಚಿತ್ರಕ್ಕೆ ಮಾಲಾರ್ಪಣೆ

ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಮಾಜಿ ಪ್ರಧಾನ ಮಂತ್ರಿ ದಿವಂಗತ ಪಂಡಿತ್ ಜವಾಹರ್‍ಲಾಲ್ ನೆಹರು ಅವರ 126 ನೇ ಜನ್ಮ ದಿನಾಚರಣೆಯ ಅಂಗವಾಗಿ ನವೆಂಬರ್ 14 ರಂದು ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಪಶ್ಚಿಮ ದಿಕ್ಕಿನಲ್ಲಿರುವ ಅವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡುವರು.

District Judges exam results out

Bangalore, November 13 (Karnataka Information): The result of the written examination held on 30th August, 2015 for the post of District Judges by Direct Recruitment  has been  published in the official web-site of the High Court of Karnataka.

The candidates who appearead for the examination may know their results by visiting www.karnatakajudiciary.kar.nic.in

ಚಲನಚಿತ್ರ ನಟ ದೊಡ್ಡಣ್ಣ ಅವರೊಂದಿಗೆ ಬೆಳ್ಳಿಹೆಜ್ಜೆ

ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಕರ್ನಾಟಕ ಚಲನಚಿತ್ರ ಅಕಾಡೆಮಿಯು ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರೊಂದಿಗೆ ನವೆಂಬರ್ 14 ರಂದು ಸಂಜೆ 5-00 ಗಂಟೆಗೆ ಬೆಂಗಳೂರು ಕುಮಾರಪಾರ್ಕ್ ರಸ್ತೆಯ ಮಹದೇವ ದೇಸಾಯಿ ಸಭಾಂಗಣದಲ್ಲಿ “ಬೆಳ್ಳಿಹೆಜ್ಜೆ” ಕಾರ್ಯಕ್ರಮವನ್ನು ಏರ್ಪಡಿಸಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್. ಬಿ. ದಿನೇಶ್ ಅವರು ತಿಳಿಸಿದ್ದಾರೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಕನ್ನಡ ಚಲನಚಿತ್ರ ನಟಿ ಹಾಗೂ ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಉಮಾಶ್ರೀ, ಹಿರಿಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕ ವಿ. ರವಿಚಂದ್ರನ್, ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಹಿರಿಯ ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್. ಆರ್. ವಿಶುಕುಮಾರ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ರಜಾ ದಿನ: ಬೆಳ್ಳಿ ಸಿನಿಮಾ-ಬೆಳ್ಳಿ ಮಾತು ಇಲ್ಲ

ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಕರ್ನಾಟಕ ಚಲನಚಿತ್ರ ಅಕಾಡೆಮಿಯು ಪ್ರತಿ ಶನಿವಾರಗಳಂದು ಸಂಜೆ 4-00 ಗಂಟೆಗೆ ಏರ್ಪಡಿಸುತ್ತಿದ್ದ ಬೆಳ್ಳಿ ಸಿನಿಮಾ-ಬೆಳ್ಳಿ ಮಾತು ಕಾರ್ಯಕ್ರಮವು ನವೆಂಬರ್ 14 ರಂದು ಬರುವ ಎರಡನೇ ಶನಿವಾರದಂದು ಸಾರ್ವಜನಿಕ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಪ್ರದರ್ಶನ ಇರುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ. ದಿನೇಶ್ ತಿಳಿಸಿದ್ದಾರೆ.

ಬೆಳ್ಳಿ ಸಿನಿಮಾ- ಬೆಳ್ಳಿ ಮಾತು ಕಾರ್ಯಕ್ರಮಗಳು ಶನಿವಾರ ಸಾರ್ವಜನಿಕ ರಜಾದಿನವಾದರೆ ಆ ದಿನಗಳಂದು ಬೆಳ್ಳಿ ಸಿನಿಮಾ ಬೆಳ್ಳಿ ಮಾತು ಕಾರ್ಯಕ್ರಮಗಳು ಇರುವುದಿಲ್ಲ ಎಂದು ಅವರು ಸ್ವಷ್ಟಪಡಿಸಿದ್ದಾರೆ.

62ನೇ ಅಖಿಲ ಭಾರತ ಸಹಕಾರ ಸಪ್ತಾಹ : ನಾಳೆಯಿಂದ

ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಭಾರತದ ಸಹಕಾರ ಚಳುವಳಿ 111 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದೆ. 1904ರಲ್ಲಿ ಆರಂಭವಾದ ಸಹಕಾರ ಚಳುವಳಿ ಇಂದು ವಿಶ್ವದಲ್ಲಿ ಬೃಹತ್ತಾದುದೂ ಆಗಿದೆ. “ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು” ದೊರಕಿಸಿಕೊಡಬೇಕೆಂಬುದು ಸಹಕಾರ ಚಳುವಳಿಯ ಮಹೋನ್ನತ ಧ್ಯೇಯವಾಗಿದೆ.

ಸಹಕಾರ ಕ್ಷೇತ್ರದಲ್ಲಿ ಯಶಸ್ಸು ಗಳಿಸಿರುವ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ 39,627 ಸಹಕಾರ ಸಂಘಗಳಿದ್ದು, 2 ಕೋಟಿ 24 ಲಕ್ಷ ಸದಸ್ಯ ಬಳಗವಿದೆ. ಸಹಕಾರ ವ್ಯವಸ್ಥೆ ಜೀವನದ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ.

ಸರ್ಕಾರ ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೂ. 3 ಲಕ್ಷದವರೆಗೆ ಮತ್ತು ಶೇ. 3 ರ ಬಡ್ಡಿ ದರದಲ್ಲಿ ರೂ. 10 ಲಕ್ಷದವರೆಗೆ ಕೃಷಿ ಸಾಲ ನೀಡುತ್ತಿರುವುದು ಮತ್ತು ಹಾಲು ಉತ್ಪಾದಕರಿಗೆ ಲೀಟರ್ ಒಂದಕ್ಕೆ ರೂ. 4/- ಪ್ರೋತ್ಸಾಹಧನ ಹಾಗೂ ಹಾಲು ಸಂಸ್ಕರಿಸುವ ಸಂಘಕ್ಕೆ ಲೀಟರ್ ಒಂದಕ್ಕೆ 20 ಪೈಸೆಗಳ ಸಹಾಯಧನ ನೀಡುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದಾಗಿ ರಾಜ್ಯದ ರೈತರ ಆರ್ಥಿಕ ಸ್ಥಿತಿ ಉತ್ತಮಗೊಂಡಿದೆ.

ಸಹಕಾರ ಸಂಸ್ಥೆಗಳ ಮೂಲಕ ಅಬಲರು, ಆರ್ಥಿಕವಾಗಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹಾಗೂ ಅಲ್ಪ ಸಂಖ್ಯಾತರು, ಸರ್ಕಾರದ ನಿರಂತರ ನೆರವು ಪಡೆಯುತ್ತಿರುವುದು ರಾಷ್ಟ್ರದಲ್ಲಿ ದಾಖಲೆ ಎನಿಸಿದೆ.

ಈ ಬಾರಿಯ ಸಪ್ತಾಹದಲ್ಲಿ ರೈತರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯ ಯೋಜನೆಗಳನ್ನು ಜಾರಿಗೆ ತರುವ ಬಗ್ಗೆ ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ.

ಪ್ರತಿ ವರ್ಷ ನವೆಂಬರ್ ದಿನಾಂಕ: 14ರಿಂದ 20ರವರೆಗೆ ರಾಷ್ಟ್ರದಾದ್ಯಂತ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆ ನಡೆಯುತ್ತದೆ. ಈ ಬಾರಿಯ ಆಚರಣೆ 62ನೇಯದ್ದಾಗಿದೆ. ನವೆಂಬರ್ ದಿನಾಂಕ: 14ರಂದು ಸಪ್ತಾಹದ ಉದ್ಘಾಟನೆ ನಡೆಯುವುದರಲ್ಲಿ ವಿಶೇಷ ಮಹತ್ವವಿದೆ. ನವೆಂಬರ್ 14 ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರು ರವರ ಹುಟ್ಟುಹಬ್ಬ. ಪಂಡಿತ್ ನೆಹರು ಅವರಿಗೆ ಸಹಕಾರ ತತ್ವದಲ್ಲಿ ವಿಶೇಷ ನಂಬಿಕೆ ಮತ್ತು ಬದ್ಧತೆ ಇದ್ದುದರಿಂದ ಅವರು ರಾಷ್ಟ್ರದಲ್ಲಿ ಸಹಕಾರ ಚಳುವಳಿಯ ಆರೋಗ್ಯಕರ ಬೆಳವಣಿಗೆಗೆ ಹೆಚ್ಚಿನ ಪ್ರೋತ್ಸಾಹ ಮತ್ತು ನೆರವು ನೀಡುತ್ತಿದ್ದರು. ನೆಹರುರವರಿಗೆ ಕೃತಜ್ಞತೆ ಸೂಚಿಸುವ ದಿಸೆಯಲ್ಲಿ ಸಪ್ತಾಹವನ್ನು ಅವರ ಹುಟ್ಟುಹಬ್ಬದಂದು ಆರಂಭಿಸಲಾಗುತ್ತದೆ.

ಸಪ್ತಾಹದ ಅವಧಿಯಲ್ಲಿ ಚಿಂತನ-ಮಂಥನ ಕಾರ್ಯಕ್ರಮಗಳು ನಡೆದು, ಸಹಕಾರಿಗಳು ಅಧಿಕ ಸಂಖ್ಯೆಯಲ್ಲಿ ಒಂದೆಡೆ ಸೇರಿ ಸಹಕಾರ ಚಳುವಳಿಯ ಸಾಧನೆ ಕುರಿತು ವಿಚಾರ-ವಿನಿಮಯ ಮಾಡಿಕೊಂಡು ಮುಂಬರುವ ದಿನಗಳಿಗೆ ಗುರಿಯನ್ನು ಹಾಕಿಕೊಳ್ಳಲಾಗುತ್ತದೆ.

ಈ ಬಾರಿಯ ಸಪ್ತಾಹದ ಧ್ಯೇಯ “ಸಹಕಾರ ಸಂಸ್ಥೆಗಳ ಮೂಲಕ ಭಾರತದಲ್ಲೇ ತಯಾರಿಸಿ” ಎಂಬುದಾಗಿದೆ.

ನವೆಂಬರ್ ದಿನಾಂಕ: 14ರಂದು ಮೈಸೂರಿನಲ್ಲಿ ಸಪ್ತಾಹದ ಉದ್ಘಾಟನೆ ನೆರವೇರಲಿದ್ದು, ಆ ದಿನವನ್ನು “ಉದ್ಯೋಗ ಮತ್ತು ನೈಪುಣ್ಯತೆಯ ಅಭಿವೃದ್ದಿಯ ದಿನ”ವನ್ನಾಗಿ ಆಚರಿಸಲಾಗುತ್ತದೆ.

ದಿನಾಂಕ: 15ರಂದು “ಸಹಕಾರಿ ಸಂಘಗಳು ಮತ್ತು ಆರ್ಥಿಕ ಸಾಕ್ಷರತೆಯ ದಿನ”ವನ್ನಾಗಿ ಬೆಂಗಳೂರಿನಲ್ಲಿ ಆಚರಿಸಲಾಗುತ್ತದೆ.

ದಿನಾಂಕ: 16ರಂದು “ಸ್ವಚ್ಛ ಭಾರತ ಅಭಿಯಾನ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ಸಹಕಾರ ಸಂಘಗಳ ಪಾತ್ರದ ದಿನ”ವನ್ನಾಗಿ ಚಿತ್ರದುರ್ಗದಲ್ಲಿ ಆಚರಿಸಲಾಗುತ್ತದೆ.

ದಿನಾಂಕ: 17ರಂದು “ಸಹಕಾರಿ ಸಂಘಗಳ ನಡುವಿನ ಸಹಕಾರವನ್ನು ಬಲಪಡಿಸುವುದು ಮತ್ತು ಸಹಕಾರ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ವಿರೋಧಿಸುವ ಬಗ್ಗೆ ಚಿಂತಿಸುವ ದಿನ”ವನ್ನಾಗಿ ಚಿಕ್ಕಮಗಳೂರಿನಲ್ಲಿ ಆಚರಿಸಲಾಗುತ್ತದೆ.

ದಿನಾಂಕ: 18ರಂದು “ಸಹಕಾರಿ ಮಾರುಕಟ್ಟೆ, ಸಂಸ್ಕರಣ ಮತ್ತು ಮೌಲ್ಯವರ್ಧನೆ ದಿನ”ವನ್ನಾಗಿ ಬೆಂಗಳೂರಿನಲ್ಲಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯು ರಾಜ್ಯದ ಶ್ರೇಷ್ಠ ಸಹಕಾರಿಗಳನ್ನು ಗುರುತಿಸಿ, ಸಹಕಾರ ರತ್ನ ಪ್ರಶಸ್ತಿಯನ್ನು ದಿನಾಂಕ : 18-11-2015 ರಂದು ಬೆಂಗಳೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯರವರು ಪ್ರದಾನ ಮಾಡುವರು.

ದಿನಾಂಕ: 19ರಂದು “ಸಹಕಾರಿ ಸಂಘಗಳ ಮೂಲಕ ಪ್ರಕೃತಿ ವಿಕೋಪಗಳ ನಿರ್ವಹಣೆ ಮತ್ತು ರೈತರಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಸಹಕಾರ ಸಂಘಗಳ ಪಾತ್ರದ ದಿನ”ವನ್ನಾಗಿ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಆಚರಿಸಲಾಗುತ್ತಿದೆ.

ದಿನಾಂಕ: 20ರಂದು “ಸಹಕಾರ ಸಂಘಗಳ ಬಲವರ್ಧನೆಗಾಗಿ ಕಾನೂನು ಬಲಪಡಿಸುವ ದಿನ”ವನ್ನಾಗಿ ಕಲಬುರಗಿಯಲ್ಲಿ ಆಚರಿಸಲಾಗುವುದು ಮತ್ತು ಮುಕ್ತಾಯ ಸಮಾರಂಭವೂ ನಡೆಯಲಿದೆ.

ರಾಜ್ಯಮಟ್ಟದ ಕಾರ್ಯಕ್ರಮಗಳು ನಡೆಯುವುದರ ಜೊತೆಗೆ, ರಾಜ್ಯದ ಎಲ್ಲಾ ಗ್ರಾಮಗಳಲ್ಲಿ, ಎಲ್ಲಾ ಸಹಕಾರ ಸಂಸ್ಥೆಗಳಲ್ಲಿ ಸಪ್ತಾಹದ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ.

ನವೆಂಬರ್ 16 ರಿಂದ ವಿಧಾನ ಮಂಡಲದ ಅಧಿವೇಶನ ಆರಂಭ -ಕಾಗೋಡು ತಿಮ್ಮಪ್ಪ

ಬೆಂಗಳೂರು, ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಹದಿನಾಲ್ಕನೇ ವಿಧಾನ ಸಭೆಯ ಎಂಟನೇ ಅಧಿವೇಶನದÀ ಮುಂದುವರೆದ ವಿಧಾನ ಮಂಡಲದ ಅಧಿವೇಶನವು ನವೆಂಬರ್ 16 ರಿಂದ ಪ್ರಾರಂಭವಾಗಿ ಹತ್ತು ದಿನಗಳ ಕಾಲ ನಡೆಯಲಿದೆ ಎಂದು ವಿಧಾನ ಸಭೆಯ ಅಧ್ಯಕ್ಷರಾದ ಶ್ರೀ ಕಾಗೋಡು ತಿಮ್ಮಪ್ಪ ಅವರು ತಿಳಿಸಿದರು.

ವಿಧಾನ ಸೌಧದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಕಳೆದ ಅಧಿವೇಶನದಲ್ಲಿ ಮಂಡನೆಯಾಗಿರುವ ಕರ್ನಾಟಕ ಕಾಕಂಬಿ ನಿಯಂತ್ರಣ – ವಿಧೇಯಕ 2014, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕ 2015 ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ವಿಧೇಯಕ 2015, ಅಂಗೀಕಾರಕ್ಕೆ ಬಾಕಿ ಇವೆ ಎಂದು ತಿಳಿಸಿದರು.

ಅಧಿವೇಶನದ ಪ್ರಾರಂಭ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ಸಧನವನ್ನು ಮುಂದಿನ ದಿನಕ್ಕೆ ಮುಂದೂಡಲಾಗುವುದು ಎಂದ ಸಭಾಧ್ಯಕ್ಷರು ಈ ಅಧಿವೇಶನಕ್ಕೆ 2681 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 75 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 995 ಚುಕ್ಕೆ ರಹಿತ ಪ್ರಶ್ನೆಗಳಾಗಿರುತ್ತವೆ. ಉಳಿದಂತೆ 15 ಗಮನ ಸೆಳೆಯುವ ಸೂಚನೆಗಳು ಬರಲಿದ್ದು, ನಿಯಮ 351 ರಡಿ 12 ಸೂಚನೆಗಳು ಸ್ವೀಕೃತಗೊಂಡಿವೆ ಎಂದರು.

ಪ್ರತಿವರ್ಷ ಕನಿಷ್ಠ 60 ದಿನಗಳು ಅಧಿವೇಶನ ನಡೆಯಬೇಕು. ಈ ಅಧಿವೇಶನದ 10 ದಿನಗಳೂ ಸೇರಿದರೆ ಒಟ್ಟು 58 ದಿನಗಳು ಸದನ ನಡೆಸಿದಂತಾಗುತ್ತದೆ ಎಂದ ಶ್ರೀ ಕಾಗೋಡು ತಿಮ್ಮಪ್ಪ ಅವರು ಸದನದ ಎಲ್ಲಾ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿ ಉತ್ತಮ ಸಲಹೆಗಳನ್ನು ನೀಡಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ನವೆಂಬರ್ 16 ರಿಂದ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಡಾ: ಅಂಬೇಡ್ಕರ್, ಬಸವೇಶ್ವರ ಭಾವಚಿತ್ರ ಅನಾವರಣ: ಶ್ರೀ ಡಿ.ಹೆಚ್. ಶಂಕರಮೂರ್ತಿ

ಬೆಂಗಳೂರು, ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಕರ್ನಾಟಕ ವಿಧಾನ ಪರಿಷತ್ತಿನ ನೂರ ಇಪ್ಪತ್ತೊಂಭತ್ತನೆ ಅಧಿವೇಶನವು ನವೆಂಬರ್ 16 ರಿಂದ ನವೆಂಬರ್ 27 ರವರೆಗೆ ನಡೆಯಲಿದೆ ಎಂದು ವಿಧಾನ ಪರಿಷತ್ತಿನ ಸಭಾಪತಿಗಳಾದ ಅವರು ತಿಳಿಸಿದರು.

ವಿಧಾನ ಸೌಧದಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಶ್ರೀ ಶಂಕರಮೂರ್ತಿ ಅವರು ಈ ಬಾರಿ ಸದನ ಕಲಾಪ ಎಂದಿನಂತೆ ಮಧ್ಯಾಹ್ನ 12-15 ಕ್ಕೆ ಪ್ರಾರಂಭವಾದರೂ ಅಂದು ಬೆಳಿಗ್ಗೆ 10-30 ಕ್ಕೆ ವಿಧಾನ ಪರಿಷತ್ತಿನ ಸಭಾಂಗಣದಲ್ಲಿ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಶ್ರೀ ಬಸವೇಶ್ವರ ಭಾವಚಿತ್ರಗಳನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಅನಾವರಣಗೊಳಿಸಲಿದ್ದಾರೆ ಅಂದು ಸುಮಾರು 3 ನಿಮಿಷಗಳ ಕಾಲ ಡಾ: ಅಂಬೇಡ್ಕರ್ ಅವರ ಭಾಷಣದ ಧ್ವನಿ ಮುದ್ರಿಕೆಯನ್ನು ಪ್ರಸಾರ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.

13 ವರ್ಷಗಳ ನಂತರ ಈ ಬಾರಿಯ ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಸಿದಂತಾಗುತ್ತದೆ. ನವೆಂಬರ್ 16 ರಿಂದ ನಡೆಯುವ 10 ದಿನಗಳನ್ನು ಸೇರಿಸಿದಲ್ಲಿ ಈ ವರ್ಷ ಒಟ್ಟು 60 ದಿನ ಅಧಿವೇಶನ ನಡೆದಂತಾಗುತ್ತದೆ ಎಂದ ಸಭಾಧ್ಯಕ್ಷರು ಈ ಅಧಿವೇಶನದಲ್ಲಿ ಯಾವುದೇ ವಿಧೇಯಕಗಳು ಬಾಕಿ ಇರುವುದಿಲ್ಲ. ಸದಸ್ಯರಿಂದ ಚುಕ್ಕೆ ಗುರುತು ಹಾಗೂ ಚುಕ್ಕೆರಹಿತ ಪ್ರಶ್ನೆಗಳು ಬಂದಿದ್ದು ಗೌರವಾನ್ವಿತ ಸದಸ್ಯರು ಉತ್ತಮ ರೀತಿಯಲ್ಲಿ ಚರ್ಚೆಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದರು.

ಕಬ್ಬನ್‍ಪಾರ್ಕ್‍ನಲ್ಲಿ ನಡೆದ ಅತ್ಯಾಚಾರ ಪ್ರಕರಣ ವರದಿ ಬಂದ ನಂತರ ಮುಂದಿನ ಕ್ರಮ- ಶ್ರೀ ವಿ.ಎಸ್. ಉಗ್ರಪ್ಪ

ಬೆಂಗಳೂರು, ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಇತ್ತೀಚಿಗೆ ಕಬ್ಬನ್ ಉದ್ಯಾನವನದಲ್ಲಿ ನಡೆದ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಬಂದ ನಂತರ ತಮ್ಮ ಸಮಿತಿಯು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಅಧ್ಯಕ್ಷರಾದ ವಿ.ಎಸ್. ಉಗ್ರಪ್ಪ ಅವರು ತಿಳಿಸಿದರು.

ವಿಧಾನ ಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇತ್ತೀಚಿಗೆ ಕಬ್ಬನ್ ಪಾರ್ಕ್‍ನಲ್ಲಿ ಮಹಿಳೆ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಗಳು ಅಸ್ಸಾಂ ಮೂಲದವರಾಗಿದ್ದು ಇವರು ಪವನ್ ಭದ್ರತಾ ಸಂಸ್ಥೆಯ ಸಿಬ್ಬಂದಿಗಳಾಗಿದ್ದಾರೆ ಎಂದು ತಿಳಿಸಿದರು.

ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿ ಬೇರೆ ಕಡೆ ಕರ್ತವ್ಯಕ್ಕೆ ಕಳುಹಿಸುವ ಮುನ್ನ ಅವರ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಲ್ಲಿ ಹಲವು ಬಗೆಯ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಅವರು ಅಭಿಪ್ರಾಯ ಪಟ್ಟರು.

ಘಟನೆ ಕುರಿತಂತೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯ ವರದಿಗಳ ಪ್ರಕಾರ ಮೇಲ್ನೋಟಕ್ಕೆ ಅತ್ಯಾಚಾರ ಪ್ರಕರಣ ಎಂಬುದು ಸಾಬೀತಾಗಿದೆ ಎಂದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ತರಿಸಲಾಗುತ್ತಿದ್ದು ನಂತರ ಈ ವಿಚಾರವನ್ನು ಸರ್ಕಾರಕ್ಕೆ ಡಿಸೆಂಬರ್‍ನಲ್ಲಿ ನೀಡುವ ಮಧ್ಯಂತರ ವರದಿಯಲ್ಲಿ ಸೇರಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಇಂದು ಬೆಳಿಗ್ಗೆ ಸಮಿತಿಯ ಸದಸ್ಯರೊಂದಿಗೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ, ಲಾನ್ ಟೆನ್ನಿಸ್ ಕ್ರೀಡಾಂಗಣ ಹಾಗೂ ತೋಟಗಾರಿಕೆ ಇಲಾಖೆಗೆ ಭೇಟಿ ಮಾಡಿ ಪ್ರಥಮ ಮಾಹಿತಿ ಸಂಗ್ರಹಿಸಲಾಗಿದೆ ಎಂದ ಉಗ್ರಪ್ಪ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ರಾಜು ಮೆಹತ್ರಿ, ಬಲಿನ್‍ದಾಸ್ ಎಂಬುವವರನ್ನು ಬಂದಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಮಾಜದಲ್ಲಿ ಶಾಂತ ಕದಡುವವರೆಗೆ ಜನರು ಸಹಕರಿಸಬಾರದು . – ಡಾ: ಜಿ. ಪರಮೇಶ್ವರ್

ಬೆಂಗಳೂರು, ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಕಾನೂನು ಸುವ್ಯವ್ಯಸ್ಥೆ ಉತ್ತಮವಾಗಿದ್ದು, ಅನಗತ್ಯ ಗೊಂದಲ ಸೃಷ್ಟಿಷುವವರಿಗೆ ಹಾಗೂ ಶಾಂತಿ ಕದಡುವವರಿಗೆ ಜನರು ಸಹಕರಿಸಬಾರದು ಎಂದು ಗೃಹ ಸಚಿವರಾದ ಶ್ರೀ ಜಿ. ಪರಮೇಶ್ವರ್ ಅವರು ಮನವಿ ಮಾಡಿದರು.

ವಿಕಾಸ ಸೌಧದಲ್ಲಿ ತಮ್ಮ ನೂತನ ಕಚೇರಿಯ ಪೂಜೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು ಸರ್ಕಾರ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಬದ್ದವಾಗಿ ಕೆಲಸ ಮಾಡುತ್ತಿದೆ. ಹಾಗೆಯೇ ನೊಂದವರ ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದರು.

ಬೆಂಗಳೂರು ಸಂಚಾರ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಲಾಗುವುದು. ಈ ಸಂಬಂಧ ರಸ್ತೆ ಮ್ಯಾಪ್ ತಯಾರಿಸಲು ಸೂಚಿಸಲಾಗಿದೆ ಎಂದ ಪರಮೇಶ್ವರ್ ಅವರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಆದ್ಯತೆ ಮೇಲೆ ಕೆಲಸ ಮಾಡಲಿದೆ ಎಂದರು.

ಹಲವು ಕಡೆ ಅನಗತ್ಯವಾಗಿ ಪ್ರತಿಭಟನೆ ನಡೆಸುವುದು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತ ಕೆಲಸಗಳಾಗುತ್ತಿವೆ ಎಂದ ಗೃಹ ಸಚಿವರು ಯಾರೇ ಕಾನೂನನ್ನು ಕೈಗೆತ್ತಿಕೊಳ್ಳುವುದನ್ನೂ ಸರ್ಕಾರ ಸಹಿಸಿಕೊಳ್ಳುವುದಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಬರಕ್ಕೆ ತುತ್ತಾಗಿದ್ದ 24 ಲಕ್ಷ ರೈತ ಕುಟುಂಬಗಳಿಗೆ ಬರಪರಿಹಾರದ ಹಣ ವಿತರಿಸಲಾಗುವುದು ಶ್ರೀ ಕೃಷ್ಣ ಬೈರೇಗೌಡ

ಬೆಂಗಳೂರು, ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಮುಂಗಾರು ಮಳೆ ಕ್ಷೀಣಗೊಂಡ ಕಾರಣ ಬೆಳೆ ಹಾನಿ ಅನುಭವಿಸಿದ ರಾಜ್ಯದ ಸುಮಾರು 23 ಲಕ್ಷ ರೈತ ಕುಟುಂಬಗಳಿಗೆ ಮುಂದಿನ ತಿಂಗಳಲ್ಲಿ ಬೆಳೆ ಪರಿಹಾರ ಹಣ ನೀಡಲು ಚಿಂತಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಕಾಸ ಸೌಧ ತಮ್ಮ ಕಛೇರಿಯಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ರಾಜ್ಯದ ರೈತರು ಬೆಳೆ ನಷ್ಟದಲ್ಲಿದ್ದು 3838 ಕೋಟಿ ರೂ. ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆಗಸ್ಟ್ ತಿಂಗಳಲ್ಲೇ ಮನವಿ ಮಾಡಲಾಗಿತ್ತು ಆದರೆ ಕೇಂದ್ರ ಸರ್ಕಾರ 1540 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ನೆರವು ನೀಡಿರುವ ನಡುವಳಿ ಇನ್ನೂ ನಮ್ಮ ಕೈಸೇರಿಲ್ಲ ಎಂದ ಸಚಿವರು ರೈತರಿಗೆ ನೀಡಬೇಕಾಗಿರುವ ಬಾಕಿ 2278 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಮನವಿ ಮಾಡಿದೆ ಎಂದರು.

ನೀರಾವರಿ ಪ್ರದೇಶದ 1 ಹೆಕ್ಟೇರ್ ಬೆಳೆ ಹಾನಿಗೆ 13 ಸಾವಿರ ರೂ.ಗಳು ಹಾಗೂ ಉಳಿಕೆ ಪ್ರದೇಶಗಳ 1 ಎಕರೆ ಬೆಳೆ ಹಾನಿಗೆ 6800 ರೂ. ಪರಿಹಾರದ ಹಣವನ್ನು ಆರ್‍ಟಿಜಿಎಸ್ ಮೂಲಕವೇ ರೈತರಿಗೆ ತಲುಪಿಸಲಾಗುವುದು ಎಂದ ಸಚಿವರು ನಮ್ಮ ಸರ್ಕಾರ 15-16 ನೇ ಸಾಲಿನಲ್ಲಿ ಸುಮಾರು 540 ಕೋಟಿ ರೂ.ವನ್ನು ಪ್ರಕೃತಿ ವಿಕೋಪಕ್ಕೆ ಖರ್ಚು ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಬಿದ್ದಿದ್ದು ರೈತರು ಸಂಕಷ್ಟಕ್ಕೆ ಈಡಾಗಿದ್ದರು ಆದರೆ, ಹಿಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬಿಳುತ್ತಿರುವುದರಿಂದ ರಾಜ್ಯದಲ್ಲಿ ಹಿಂಗಾರು ಬೆಳೆ 28 ಲಕ್ಷ ಹೆಕ್ಟೇರ್‍ನಲ್ಲಿ ಬೆಳೆಯಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಾಗಿದೆ ಎಂದ ಸಚಿವರು ಹಿಂಗಾರು ಮಳೆ ಹೆಚ್ಚಾಗಿರುವುದರಿಂದ ರೈತರಿಗೆ ಅನುಕೂಲವಾಗುವಂತೆ ದ್ವಿದಳ ದಾನ್ಯಗಳ ಬಿತ್ತನೆ ಹೆಚ್ಚಾಗಿದ್ದು ಸುಮಾರು 3 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜಗಳನ್ನು ವಿತರಿಸಲಾಗಿದೆ ಎಂದರು.

Children’s day Programme

Bangalore, November, 13 (Karnataka Information): Department of Women and Child Development is celebrating Children’s day on November 14th every year. This Year for the first time Children’s Day is being celebrated as children’s carnival on  14-11-2015 & 15-11-2015. The Hon’ble Governor of Karnataka will inaugurate the function on 14-11-2015 at 11 A.M. at Bala Bhavan, Cubbon Park, Bangalore. The Following awards will be conferred on this occassion.

 HOYSALA & KELADI CHENNAMMA BRAVERY AWARDS FOR CHILDREN

The Department of Women and Child Development confers Bravery Award every year for the Children who have exhibited exceptional courage and presence of mind to save the life of others in dangerous circumstances.  The following children are selected for the Hoysala and Keladi Chennamma Bravery Award for the year    2015-16.  The award carries a cash prize of Rs.10,000/-, a memento, a citation and a medal.

Sl.

No

Name and Address Details of the Incident
1 Mast. Siddesh .M

Father:N.B. manjunath

Near Manjunath Temple,

Avaregere,

Davanagere Taluk.

25.04.2005 (10 Yrs)

5th Std

On 15th of March 2015 Master Siddesh. M  from Avaregere, Davanagere Taluk. a student of 4th Standard observed that there was a crack in railway rails near the Averegere township and saw the  Harihara-Chitradurga Passenger train coming.  He and showed his red shirt which he was wearing and avoided the accident, which otherwise would have occurred and saved the life of passengers.  The incidence has been published in the news papers.
2 Kum. Siya Vamanasa Khode,

Dhajibhanpete, Hubballi,

Dharwada Dist

04.10.2004 (11 Yrs)

6th Std

On 14th of April 2015 at about 6.00 PM Yellappa (Yash) Khode, the younger brother of  Kum. Siya Vamanas Khode, who was playing on the terrace, came in contact with the live K.E.B. Electric wire. Kum. Siya Vamanasa Khode pulled her brother’s shirt and saved his life. The incidence has been published in the news papers.

Child Welfare Awards

The following four Institution and four Individuals are selected for Child welfare Award for the Year 2015. The State award will be confirmed for the individuals and institution on 14-11-2015 on the occasion of children’s day. The Institution Award carries a cash prize of Rs.1.00 lakh, a memento and a citation and the Individual Award carries a cash prize of Rs.25,000/-a memento  and a citation.

INSTITUTIONS

Sl.

No

Name of the Institution and Address Achievement
1 Ranga Kahale,

No.35,2nd Main Road,

3rdCross,Banashankari,

5th Stage,Utharahalli,

Bengaluru 560 061

The organization was established in the year 1975 and attempts to bring out the hidden talent among children. It has organized many dramas for children. It has given many shows involving children in the dramas.             The organization has given training to children and has given numerous shows across India. The organization has been working towards cultural development of children. The organization is successful in educating children through stage performances and bringing school dropouts back to school and to the field of culture.
2 Belgaum Roller Skating Academy,

No.28,Somawarpete,

Tilakawadi, Belagavi.

The organization is working since 9 years. It has conducted free coaching camps for children. It has given awareness about pulse polio and “Save Girl Child” by conducting skating rallies. The children trained from this organization has participated at National  and International level and has created records in Guinness Book of Records. It has been encouraging children to participate in national and international level by giving monetary aid. It has organised health camps for children. It has distributed free skating kits camps for orphan and poor children. It has organized State and Interstate level competitions. The organisation has children who can organise social awareness.
3 Samrudhi Charitable Trust, Ashirvad, No.21, Ganesha Nagar, Kumbarawada Road, Bidar-585403 The organisation has been actively involved in conducting children grama sabhas and their participation. It has been actively involved in eradication of child labour. It has  rescued many child labours and rehabilitated them. It has given publicity about child rights, protection and rehabilitation and issues related to laws to teachers, representatives of NGOs and people’s representatives. The organisation is trying to protect child rights.
4 Sneha Sadana, Kannikambala, Kaikamba, Mangalore The organization is providing rehabilitative services to children infected and affected from HIV. It is providing various services for well being of children. The organization is also serving for the safety of destitute children. It is encouraging children infected with HIV to attend nearby government schools. It is providing quality supervision and services.

INDIVIDUALS

Sl.

No

Name of the Individual and Address Achievement
1 Smt. K.Prabha Narayana Gowda, Hanumanthapura, Jarabandanahalli, Gouribidanur Taluk, Chikkaballapura Dist. She has been working in the field of child welfare and literature since 8 years. She has stopped nearly 10 child marriages during the last 5 years in Gouribidanur Taluk. She has distributed note books and uniforms to school children. She has admitted the school drop out children back to school. She has rescued children who were begging. She has created awareness among child labourers working in hotels to join schools.
2 Sri.Parampalli Narasimha Aithal, Venkatadri, Saligrama, Udupi-576 225 He has developed study materials to children, which are being used in schools of Udupi district. He has organised debate competition, Bhajans, planting saplings, story writing, dance, drama, celebration of national festivals etc., He has organised summer camps for children. He has given special training to SC/ST and Backward children. He has written books and poems for children. He has distributed free books, uniforms, stationeries to children. He has organised health camps and distributed free medicines to children. Every day he has distributed sprouted grains and other food to children of Shambhavi Vidyadayani School. The expenditure was borne by his family.
3 Sri. Ismail Moulasab Ukkali, Arkat Darga, J.M Road, Jhanda Katta, Vijayapura-586 104 He has worked in field of eradication of child labour and Prohibition of child marriage. He has worked to create opportunity in society for poor students. He has admitted 460 child labours to schools.  He has organised health camps. He has created awareness about eradication of child labour. He has participated in pulse polio camps.
4. Sri Mehaboob.L.Killedar, Bahaddoor Bandi, Gangavathi Taluk, Koppala Dist He has acted in street plays to create awareness to admit school dropout children back to schools under Sarva Shiksha Abhiyan. He is a folk artist and has given many performances to create awareness.

Exceptional Achievement Award for Children

The  children  who are exceptionally  talented in the field of Art, Sports, Music, Culture, Social Service,  Innovation, Scholastic and Other fields will be recommended for the National Award. These children will be honoured with a memento and a citation on the occasion of Children’s Day at the state level. The following children have been recommended for the National Award for the year 2015-16.

Sl.No Name and Address Field of Achievement
1 Mast. Praneel B. Satare,  S/o Dr. Bharath S.V.‘SAPATHAGIRI’ Dental Speciality Clinic, Gandhi Bazaar,Shimoga-577202 Art
2 Kum. Deeksha  Moolya,                                         Kadaleepriya karde,                                                        Perdoor Post,                                                               Udupi Dist. Art
3 Mast.S.R.Aprameya Karthik,S/o  S.Ramanathan, # 4, 2nd Main, 11th Cross, Vidyaranyapuram,Mysore-8 Art
4 Kum. Pragathi Natwar Bhattad, D/o Natwara M Bhattad, A-2,  Lakshya Paradise, Sai Dham, 1st A-Main, GM Palya, Bengaluru-560075. Cultural

 

 

 

 

5 Mast. Likith B.,

S/o Babu, #135, 3rd Cross, Srinivsapura Colony, Kengeri,Bangalore-560 060

Cultural
6 Kum. Panchami Maroor,Parshwanth,  Poudhana Maroor Post, Moodbidri  Dakshina Kannada Cultural

 

 

 

7 Kum. Bhumika D.S .  D/o D.S. Badrinath,No.57/18, Moka Road,   Gandhi Nagar, Bellary-583103. Cultural

 

 

 

 

 

 

8 Kum. Sahana. V. D/o  Vinayaka M.S,

Susheela Nilaya, S.N.Pet, 2nd Cross, Bellary.

Cultural
9 Mast. A.V.Alok Parla, S/o P. Venkataramana, #2910/1, 5th Main, 3rd Cross,

MCC ‘B’ Block, Davanagere.

Music
10 Mast.Surakshith Gowda D.R .#460, Behind St.Anne’s School, P.C. Extension , Tekal Road, Kolar Music
11 Mast. Dhanush.N.S/o Nanjegowda A.N.#2681, Mathrushree Nilaya, 2nd Stage, Hebbal, Near CITB Choultry, Mysore-570017. Music

 

 

 

 

 

12 Mast. Gagan G. Gaonkar,S/o Dr.Gopalkrishna  M   Gaonkar,Girikaveri, LVT Layout,Behind   LV  Temple, Santhekatte Post, Udupi – 576105 Music

 

 

 

 

 

13 Mast. Gowtham S.S. S/o Shivananda S.S. Near Madikeri Rural Police Station, Madikere-571201. Scholastic

 

 

 

14 Mast. Mohammed Suhail.C.S, S/o  Salim Pasha, Anchekeri Street, Near Rama Mandir, Srirangapatna, Mandya Dist. Scholastic
15 Mast. Rahul  R    Parvatimath, S/o Raju Parvathimath, Hunde Kargalli, Bagalkot Scholastic

 

 

 

17 Kum.Ganashree, D/o Ashwath  N .D.No.317,  Bhuvaneshwari Nagar, 7th Cross, Chick Tumkur Road,Doddaballapura , Bangalore Sports

 

 

 

 

 

 

 

 

18 Mast. Nihal. J , S/o Jagannath Gowda,  #34, 15th cross, Horticulture Office Road, Someshwara puram,   Tumkur-572102 Sports

 

 

19 Kum. Meghana M.B. D/o Manjunath.N Meghana Nilaya, Davalagiri Badavane,Behind SJM College,Malappanahatti Road, Chitradurga-577501. Sports

 

 

 

 

 

 

20 Mast. Amrut Nagesh Mudrabet, S/o Nagesh L.Mudrabet, Giridham, Daneshwari Nagar,Vidyagiri,   Dharwad – 580004. Sports
21 Kum. Rea Elizabeth Achaiah, D/o K.N.Achaiah, #1836/B, 12th Main, 2nd Stage, Vijayanagara, Mysore-570017 Sports

 

 

 

 

22 Kum. Ananya  K.G.D/o Gopal  K.Sri Sathya Extension,Mudigere Road, Kuvempunagar,  Belur Post, Hassan  Dist. Innovation
23 Kum. Dhruthi Mundodi, Mundodi House,

Nalkuru Village, Sullia Tq., Dakshina Kannada Dist.

Innovation
24 Mast. Yashasvi Ajitkumar Bagamar, S/o Ajithkumar Ashok Kumar Bagamar, M Devaraj Double Road,

Gajendragad  Post, Ron Tq, Gadag -582114

Social Service

 

 

 

 

25 Mast. Abhigya Anand, S/o Anand Ramasubramanian, # 108/15, Emerald Enclave, (behind Infosys), Mysore-570016 Other Talent

 

 

 

 

26 Mast. Anthahkarana,S/o Shankarappa H.S.  ‘Desi Samskruthi’ Mylareshvara Complex, B.H.Raod, Shimoga-577201 Other Talent

 

 • This year the Department of Women and Child Development in collaboration with Balbhavan society, Bangalore, Department of Kannada and Culture, Horticulture, Health and Family Welfare, Education, Differently Abled and Senior Citizens, Karnataka State Commission for Protection of Child Rights,Karnataka State Women’s Development Corporation, Sahitya Academy, Janapada Academy, Lalitha Kala Academy and Karnataka Balavikasa Academy is organizing   Children’s carnival which will be  inaugurated by Hon’ble Chief Minister of Karnataka on 14.11.2015 at 4.30 Pm in Cubbon Park.
 • The Children’s Carnival will be held for two days i.e., on 14.11.2015 and 15.11.2015 to entertain the children to the maximum extent.
 • Cultural programmes  like Bharathanatyam, Folk  dance, Dollu kunitha, Koochipudi dance, Mimicry, Yakshagana, Lambani dance, Janapada nrutya, Kathak Dance, Mime Show, Puppet show, Veena vadana, Tabala, Jugal bandi, Mohini Attam, Rajasthani dance etc., will be organized inside Balbhavan as well as in the premises of Cubbon Park.
 • Creative activities like drawing, Painting, art work, pottery making, drama etc., are also held on both the days. Children from childrens’ home run by the Department  from all over Karnataka are  participating  in all these programmes.
 • 150 children will perform yoga on both the days.
 • Bullock cart ride, rural folk games such as Top spinning (buguri), Gillidandu, Skipping, Kuntebille, Ludo, Lagori, Running cycle tyre, Grand mother stories, Cup and Ball etc are organized for children to experience these games.
 • Sports are organized for differently abled children and other children on both  the days. Nearly 700 differently abled children are expected to participate in the sports event. Stage performance will also be given by the  differently abled children.
 • Activities such as drawing, quiz, story telling are also organised on 15.11.2015.    Fancy dress & healthy  baby show are being  organised on 15.11.2015 for the children below 10 years.
 • Health checkup camps in collaboration with health department is organized for children who are participating in the programme. On both the days.
 • Disney characters will be roaming in Cubbon park.
 • Exhibition stalls are organized by the sthree shakthi groups and also by various departments about children products, children materials and information about children programme. Two mobile vans of the Stree Shakthi groups will be there exhibiting products used for children.
 • Demonstration by Anganawadi workersabout preparation of supplementary nutrition food.
 • A book ”Sampreethi- Santhrupti” collection of poems written by children  residing in Children Homes run by the Department will be released on this occasion “Dhwani Suruli” an audio on  department Programmes is organized to increase the awareness among the public.
 • The Horticulture Department is organizing a grand flower show and BSF weapon and band show in the cubbon park.
 • Approximately 10,000 to15,000 children are expected to participate in this programme .
 • The BMTC has agreed to provide special buses on both days from all parts of Bangalore urban and rural district for the benefit of children and their parents.
 • Action has been taken to provide space for parking vehicle for those who come in their own vehicle.
 • Apart from Bangalore Urban the Children’s Day is being organized all over the State and Districts as well as Taluk Level.
 • The children’s day will be celebrated at state, district and taluka level. Rural Develpement Panchayatraj Department is  organising children’s  Gram sabha in all the Gram panchayat in  the month of November 2015.

 

ಮಕ್ಕಳ ದಿನಾಚರಣೆ ವಿವಿದ ಕಾರ್ಯಕ್ರಮಗಳು

ಬೆಂಗಳೂರು, ಬೆಂಗಳೂರು, ನವೆಂಬರ್ 13 (ಕರ್ನಾಟಕ ವಾರ್ತೆ): ಪ್ರತಿ ವರ್ಷ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಮಕ್ಕಳ ದಿನಾಚರಣೆಯನ್ನು ದಿನಾಂಕ: 14-11-2015 ಮತ್ತು 15-11-2015ರಂದು ಆಚರಿಸಲಾಗುತ್ತಿದೆ. ದಿನಾಂಕ: 14-11-2015ರಂದು ಬೆಳಿಗ್ಗೆ 11.00 ಗಂಟೆಗೆ ಜವಾಹರ ಬಾಲಭವನ, ಕಬ್ಬನ್ ಉದ್ಯಾನವನ, ಬೆಂಗಳೂರು ಇಲ್ಲ್ಲಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರು ಈ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಕೆಳಕಂಡ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಧೈರ್ಯ ಸಾಹಸ ಪ್ರದರ್ಶಿಸಿದ ಬಾಲಕರಿಗೆ ಹೊಯ್ಸಳ ಮತ್ತು ಬಾಲಕಿಯರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳು

ಪ್ರತಿ ವರ್ಷವೂ ಮಕ್ಕಳ ದಿನಾಚರಣೆ ಸಮಾರಂಭದಂದು ಧೈರ್ಯ ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರರ ಪ್ರಾಣವನ್ನು ಅಪಾಯದಿಂದ ರಕ್ಷಿಸಿದಂತಹ ಮಕ್ಕಳಿಗೆ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ. 2015-16ನೇ ಸಾಲಿಗೆ ಈ ಕೆಳಕಂಡ ಮಕ್ಕಳನ್ನು ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ರೂ.10,000/- ಗಳ ನಗದು, ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಮತ್ತು ಪದಕವನ್ನು ಒಳಗೊಂಡಿರುತ್ತದೆ.

ಕ್ರ. ಸಂ ಹೆಸರು ಮತ್ತು ವಿಳಾಸ ಪ್ರಕರಣದ  ವಿವರ
1. ಮಾ|| ಸಿದ್ದೇಶ್ .ಎಂ ತಂದೆ. ಎನ್.ಬಿ.ಮಂಜುನಾಥ, ಮಂಜುನಾಥ ದೇವಸ್ಥಾನದ ಹತ್ತಿರ, ಆವರಗೆರೆ,  ದಾವಣಗೆರೆ ಜಿಲ್ಲೆ. 25.04.2005 (10 ವರ್ಷ) 5ನೇ ತರಗತಿ ದಾವಣಗೆರೆ ತಾಲ್ಲೂಕಿನ ಅವರೆಗೆರೆಯ ೪ನೇ ತರಗತಿಯ ವಿದ್ಯಾರ್ಥಿ ಸಿದ್ದೇಶ್ ಎಂಬ ಬಾಲಕ ದಿನಾಂಕ: 15.03.2015 ರಂದು ಅವರೆಗೆರೆ ಟೌನ್‌ಶಿಪ್ ಬಳಿ ರೈಲ್ವೆ ಹಳಿ ಬಿರುಕು ಬಿಟ್ಟಿರುವುದನ್ನು ಗಮನಿಸಿ, ಹರಿಹರ-ಚಿತ್ರದುರ್ಗ ಪ್ಯಾಸೆಂಜರ್ ರೈಲು ಬರುತ್ತಿರುವ ಸಂದರ್ಭದಲ್ಲಿ ತಾನು ಧರಿಸಿದ ಕೆಂಪು ಬಣ್ಣದ ಅಂಗಿಯನ್ನು ತೋರಿಸಿ, ಸಂಭವಿಸಬಹುದಾದ ಅನಾಹುತವನ್ನು ತಪ್ಪಿಸಿರುತ್ತಾನೆ. ಘಟನೆಯ ಬಗ್ಗೆ ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.
2. ಕು|| ಸಿಯಾ ವಾಮನಸಾ ಖೋಡೆ, ದಾಜಿಬಾನಪೇಟ, ಹುಬ್ಬಳ್ಳಿ ಧಾರವಾಡ  ಜಿಲ್ಲೆ. 04.10.2004  (11 ವರ್ಷ) 6ನೇತರಗತಿ ಕು|| ಸಿಯಾ ವಾಮನಸಾ ಖೋಡೆ ದಿನಾಂಕ: 14.04.2015 ರ ಸಾಯಂಕಾಲ 6.00 ಗಂಟೆಗೆ ಮನೆಯ ಮೇಲ್ಛಾವಣಿಯಲ್ಲಿ ಆಟವಾಡುತ್ತಿದ್ದ ಇವರ ೪ ವರ್ಷ ವಯಸ್ಸಿನ ತಮ್ಮನಾದ ಕುಮಾರ ಯಲ್ಲಪ್ಪ (ಯಶ) ಖೋಡೆ, ಇವರು ಆಕಸ್ಮಿಕವಾಗಿ ಕೆ.ಇ.ಬಿ ಕರೆಂಟ್ ವೈರ್‌ನ್ನು ಸ್ಪರ್ಶಿಸಿರುವ ಸಂದರ್ಭದಲ್ಲಿ ಶಾಕ್ ಹೊಡೆದಾಗ ಕುಮಾರಿ ಸಿಯಾರವರ ಸಮಯ ಪ್ರಜ್ಞೆ ಮತ್ತು ಚಾಣಾಕ್ಷತೆಯಿಂದ ಕರೆಂಟ್ ವೈರನ್ನು ಸ್ಪರ್ಶಿಸಿದ್ದ ತಮ್ಮನ ಶರ್ಟ್ ಹಿಡಿದು ಎಳೆದಿರುವ ಪ್ರಯುಕ್ತ ಸಂಭವಿಸಬಹುದಾದ ಅನಾಹುತದಿಂದ ತಮ್ಮನನ್ನು ಪಾರು ಮಾಡಿರುತ್ತಾಳೆ. ಘಟನೆಯ ಬಗ್ಗೆ ಹಲವಾರು ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತದೆ.

ಮಕ್ಕಳ ಕಲ್ಯಾಣ ಪ್ರಶಸ್ತಿಗಳು

ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸೇವೆಯನ್ನು ಗುರುತಿಸಿ ಪ್ರತಿ ವರ್ಷ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಅದರಂತೆ 2015ನೇ ವರ್ಷದಲ್ಲಿ ಈ ಕೆಳಕಂಡ 4 ಸಂಸ್ಥೆಗಳು ಹಾಗೂ 4 ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಿಗೆ ರಾಜ್ಯ ಪ್ರಶಸ್ತಿಯನ್ನು ದಿನಾಂಕ: 14.11.2015 ರಂದು ನಡೆಯುವ ಮಕ್ಕಳ ದಿನಾಚರಣೆಯ ಸಮಾರಂಭದಲ್ಲಿ ವಿತರಿಸಲಾಗುವುದು. ಸಂಘ-ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯು ರೂ.1.00 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಮತ್ತು ವೈಯಕ್ತಿಕ ಪ್ರಶಸ್ತಿಯು ರೂ.25,000/- ನಗದು ಬಹುಮಾ£, ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

ಸಂಘ-ಸಂಸ್ಥೆ

ಕ್ರ.ಸಂ ಸಂಸ್ಥೆಯ ಹೆಸರು ಮತ್ತು ವಿಳಾಸ ಸಾಧನೆ
1 ರಂಗ ಕಹಳೆ,  ನಂ.35, 2ನೇ ಮುಖ್ಯ ರಸ್ತೆ,  3ನೇ ಅಡ್ಡ ರಸ್ತೆ, ಬನಶಂಕರಿ 5ನೇ ಹಂತ, ಉತ್ತರ ಹಳ್ಳಿ, ಬೆಂಗಳೂರು- 560061 ರಂಗಕಹಳೆ 1975 ರಲ್ಲಿ ಸ್ಥಾಪನೆಗೊಂಡಿದ್ದು, ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರಹೊಮ್ಮಿಸಲು ಪ್ರಯತ್ನಿಸುತ್ತಿದೆ. ಸಂಸ್ಥೆಯು ಮಕ್ಕಳಿಗಾಗಿ ಹಲವಾರು ನಾಟಕಗಳನ್ನು ಮಾಡಿದೆ. ಈ ಸಂಸ್ಥೆಯು ಮಕ್ಕಳನ್ನು ತೊಡಗಿಸಿಕೊಂಡು ಹಲವಾರು ಪ್ರದರ್ಶನ ಮಾಡಿದೆ. ರಂಗಕಹಳೆ ತಂಡ ಹಲವಾರು ಪ್ರಶಸ್ತಿಗಳನ್ನು ಪಡೆದಿರುತ್ತದೆ. ಈ ಸಂಸ್ಥೆಯು ರಂಗತರಬೇತಿ ಶಿಭಿರಗಳನ್ನು  ಭಾರತದಾದ್ಯಂತ ಆಯ್ದ  ಭಾಷೆಗಳಲ್ಲಿ  ಮತ್ತು  ಬಹುವಾಗಿ ಕರ್ನಾಟಕ ರಾಜ್ಯದಲ್ಲಿ ಏರ್ಪಡಿಸುತ್ತಾ ಬಂದಿದೆ. ಸಂಸ್ಥೆಯು ಮಕ್ಕಳಿಗೆ ರಂಗ ಪ್ರದರ್ಶನಗಳ ಮೂಲಕ ಶಿಕ್ಷಣ ನೀಡುತ್ತಿದ್ದು, ಶಾಲೆಯಿಂದ ಹೊರಗುಳಿದ iಕ್ಕಳನ್ನು ಮರಳಿ ಶಾಲೆಗೆ ಸೇರಿಸಲು ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಸೇರಿಸಲು ಯಶಸ್ವಿಯಾಗಿದೆ.
2 ಬೆಳಗಾಂ ರೋಲರ್ ಸ್ಕೇಟಿಂಗ್ ಅಕಾಡೆಮಿ,  ನಂ.28, ಸೋಮವಾರ ಪೇಟೆ, ಟಿಳಕವಾಡಿ, ಬೆಳಗಾವಿ ಸಂಸ್ಥೆಯು ಕಳೆದ 9 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳಿಗಾಗಿ ಉಚಿತ ತರಬೇತಿಯ ಶಿಭಿರಗಳನ್ನು ನಡೆಸಿರುತ್ತದೆ. ಸ್ಕೇಟಿಂಗ್ ರ್‍ಯಾಲಿಗಳ ಮುಖಾಂತರ ಪೋಲಿಯೋ ತಡೆಗಟ್ಟುವಿಕೆ ಹಾಗೂ ಹೆಣ್ಣು ಮಗುವನ್ನು ರಕ್ಷಿಸಿ ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿರುತ್ತದೆ. ಸ್ಕೇಟಿಂಗ್ ಶಿಕ್ಷಣದಲ್ಲಿ ಅಂತರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಹೆಸರು ಮಾಡಿರುತ್ತದೆ.  ಸಂಸ್ಥೆಯಿಂದ ಉತ್ತಮ ತರಬೇತಿಯನ್ನು ಪಡೆದ ಮಕ್ಕಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಿನ್ನಿಸ್ ದಾಖಲೆಗಳನ್ನು ಮಾಡಿರುತ್ತಾರೆ. ಮಕ್ಕಳು ಉತ್ತಮವಾಗಿ ಆಟವಾಡಲು ಪ್ರೋತ್ಸಾಹ, ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಲು ಮಕ್ಕಳಿಗೆ ಧನ ಸಹಾಯ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿರುತ್ತದೆ. ಅನಾಥ ಮತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ಸ್ಕೇಟಿಂಗ್ ಕಿಟ್ ನೀಡಿರುತ್ತದೆ. ಇದರ ಪ್ರಯೋಜನವನ್ನು ಜಿಲ್ಲೆಯ ಅನೇಕ ಕ್ರೀಡಾಪಟುಗಳು ಪಡೆದಿದ್ದಾರೆ. ರಾಜ್ಯ ಮತ್ತು ಅಂತರರಾಜ್ಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಿರುತ್ತದೆ. ಸಾಮಾಜಿಕ ಜನಜಾಗೃತಿ ಮೂಡಿಸಲು ಸ್ಕೇಟಿಂಗ್ ರ್‍ಯಾಲಿಗಳನ್ನು ಆಯೋಜಿಸುವ ಅನೇಕ ಮಕ್ಕಳನ್ನು ಹೊಂದಿರುತ್ತದೆ.
3 ಸಮೃದ್ಧಿ ಚಾರಿಟೇಬಲ್ ಟ್ರಸ್ಟ್,  ಆಶೀರ್ವಾದ 21, ಗಣೇಶ ನಗರ, ಕುಂಬಾರವಾಡಾ ರಸ್ತೆ,  ಬೀದರ-585403 ಸಂಸ್ಥೆಯು ಮಕ್ಕಳ ಗ್ರಾಮ ಸಭೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಮಕ್ಕಳ ಭಾಗವಹಿಸುವಿಕೆಯಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವ ಹಿಸುತ್ತಿದೆ. ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಅನೇಕ ಬಾಲಕಾರ್ಮಿಕ ಮಕ್ಕಳನ್ನು ರಕ್ಷಿಸಿ ಪುನರ್‌ವಸತಿ ಕಲ್ಪಿಸಿರುತ್ತದೆ. ಶಿಕ್ಷಕರಿಗೆ, ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳಿಗೆ, ಜನಪ್ರತಿನಿಧಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಪುನರ್‌ವಸತಿ ಜೊತೆಗೆ ಕಾನೂನಿನ ವಿಚಾರವನ್ನು ಪ್ರಚಾರ ಪಡಿಸಲು ಶ್ರಮಿಸಿರುತ್ತದೆ. ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ಸಂಸ್ಥೆ ಪ್ರಯತ್ನಿಸುತ್ತಿದೆ.
4 ಸ್ನೇಹ ಸದನ,  ಕಿನ್ನಿಕಂಬಳ,  ಕೈಕಂಬ, ಮಂಗಳೂರು ಸಂಸ್ಥೆಯು ಹೆಚ್.ಐ.ವಿ.ಯಿಂದ ಬಾಧಿತರಾದ ಮಕ್ಕಳಿಗೆ ಪುನರ್ವಸತಿ ಕಲ್ಪಿಸುವ ಕೆಲಸ ನಿರ್ವಹಿಸುತ್ತಿದೆ. ಈ ಸಂಸ್ಥೆಯು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ಹಲವು ರೀತಿಯ ಸೇವೆಗಳನ್ನು ಕೈಗೊಂಡಿದೆ. ಸಂಸ್ಥೆಯು ನಿರ್ಗತಿಕ ಮಕ್ಕಳ ಸುರಕ್ಷತೆಗಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಮಕ್ಕಳ ಸುರಕ್ಷಿತ ಉತ್ತಮ ಗುಣಮಟ್ಟದ ಜೀವನವನ್ನು ರೂಪಿಸುವ ಬಗ್ಗೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಎಲ್ಲಾ ಹೆಚ್.ಐ.ವಿ ಪೀಡಿತ ಮಕ್ಕಳನ್ನು ಹತ್ತಿರದ ಸರ್ಕಾರಿ ಅನುದಾನಿತ ಶಾಲೆಗೆ ತಪ್ಪದೆ ಹಾಜರಾಗಲು ಪ್ರೇರೇಪಿಸುತ್ತಿದೆ. ಈ ಸಂಸ್ಥೆಯು ಉತ್ತಮ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಸೇವೆಯನ್ನು ನೀಡುತ್ತಿದೆ.

ವ್ಯಕ್ತಿ

ಕ್ರ.ಸಂ ವ್ಯಕ್ತಿಯ ಹೆಸರು ಮತ್ತು ವಿಳಾಸ ಸಾಧನೆ
1 ಶ್ರೀಮತಿ ಕೆ.ಪ್ರಭಾ ನಾರಾಯಣ ಗೌಡ,  ಹನುಮಂತ ಪುರ, ಜರಬಂಡನಹಳ್ಳಿ, ಗೌರಿಬಿದನೂರು ತಾಲ್ಲೂಕು, ಚಿಕ್ಕಬಳ್ಳಾಪುರ ಜಿಲ್ಲೆ. ಇವರು ಕಳೆದ 8 ವರ್ಷಗಳಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕಳೆದ 5 ವರ್ಷಗಳಿಂದ ಗೌರಿಬಿದನೂರು ತಾಲ್ಲೂಕಿನಲ್ಲಿ ಸುಮಾರು 10 ಬಾಲ್ಯವಿವಾಹಗಳನ್ನು ತಡೆದಿರುತ್ತಾರೆ. ಶಾಲಾ ಮಕ್ಕಳಿಗೆ ನೋಟ್‌ಬುಕ್ ಮತ್ತು ಸಮವಸ್ತ್ರ ವಿತರಿಸಿರುತ್ತಾರೆ. ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಮತ್ತೆ ಸೇರಿಸಿರುತ್ತಾರೆ. ಭಿಕ್ಷೆಬೇಡುವ ಮಕ್ಕಳನ್ನು ಈ ವೃತ್ತಿಯಿಂದ ರಕ್ಷಿಸಿರುತ್ತಾರೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕ ಮಕ್ಕಳ ಮನವೊಲಿಸಿ ಶಾಲೆಗೆ ಸೇರಿಸಲು ಜಾಗೃತಿ ಉಂಟು ಮಾಡಿರುತ್ತಾರೆ.
2 ಶ್ರೀ ಪಾರಂಪಳ್ಳಿ ನರಸಿಂಹ ಐತಾಳ, ವೆಂಕಟಾದ್ರಿ, ಸಾಲಿಗ್ರಾಮ, ಉಡುಪಿ-576225 ಇವರು ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ತಯಾರಿಸಿದ್ದು, ಅದನ್ನು ಉಡುಪಿ ಜಿಲ್ಲೆಯಲ್ಲಿ ಉಪಯೋಗಿಸಲಾಗುತ್ತಿದೆ. ಇವರು ಮಕ್ಕಳಿಗೆ ಚರ್ಚಾ ಸ್ಪರ್ಧೆ, ಭಜನೆ, ಸಸಿ ನೆಡುವುದು, ಕಥೆ ಬರೆಯುವುದು, ನೃತ್ಯ, ನಾಟಕ, ರಾಷ್ಟ್ರೀಯ ಹಬ್ಬಗಳ ಆಚರಣೆ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿರುತ್ತಾರೆ. ಇವರು ಮಕ್ಕಳಿಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿರುತ್ತಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಮಕ್ಕಳಿಗೆ ವಿಶೇಷ ತರಬೇತಿಯನ್ನು ನೀಡಿರುತ್ತಾರೆ. ಇವರಿಗೆ ನಾಟಕ, ನೃತ್ಯ ಮತ್ತು ಸಂಗೀತದಲ್ಲಿ ಅಪಾರ ಜ್ಞಾನವಿದ್ದು ಇದನ್ನು ಶಾಲೆಗಳಲ್ಲಿ ಕಲಿಸುತ್ತಿದ್ದಾರೆ. ಇವರು ಮಕ್ಕಳಿಗಾಗಿ ಪುಸ್ತಕ ಮತ್ತು ಪದ್ಯಗಳನ್ನು ಬರೆದಿರುತ್ತಾರೆ. ಮಕ್ಕಳಿಗೆ ಉಚಿತ ಪುಸ್ತಕ, ಸಮವಸ್ತ್ರ, ಲೇಖನ ಸಾಮಾಗ್ರಿಗಳನ್ನು ವಿತರಿಸಿರುತ್ತಾರೆ. ಮಕ್ಕಳಿಗೆ ಉಚಿತ ಆರೋಗ್ಯ ಶಿಬಿರವನ್ನು ನಡೆಸಿ, ಉಚಿತ ಔಷಧಿಗಳನ್ನು ವಿತರಿಸಿರುತ್ತಾರೆ. ಉಡುಪಿಯ ಕೋಟದ ಶಾಂಭವಿ ವಿದ್ಯಾದಾಯಿನಿ ಶಾಲೆಯ ಮಕ್ಕಳಿಗೆ ಪ್ರತಿ ದಿನ ಸಂಜೆ ಮೊಳಕೆ ಬರಿಸಿದ ಧಾನ್ಯ ಹಾಗೂ ಇತರೆ ಆಹಾರಗಳನ್ನು ವಿತರಿಸಿರುತ್ತಾರೆ. ಇದಕ್ಕೆ ತಗಲುವ ವೆಚ್ಚವನ್ನು ತಮ್ಮ ಕುಟುಂಬವರ್ಗದವರಿಂದ ದೇಣಿಗೆ ಪಡೆದು ವಿತರಿಸಿರುತ್ತಾರೆ.
3 ಶ್ರೀ ಇಸ್ಮಾಯಿಲ್ ಮೌಲಾಸಾಬ ಉಕ್ಕಲಿ,  ಅರ್ಕಾಟ್ ದರ್ಗಾ,  ಜೆ.ಎಂ.ರಸ್ತೆ, ಝಂಡಾ ಕಟ್ಟಾ, ವಿಜಯಪುರ 586104 ಇವರು ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹ ಪದ್ಧತಿಯ ನಿಷೇಧಿಸುವ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ.  ಬಡವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಸದವಕಾಶ ಒದಗಿಸಲು ಬಗ್ಗೆ ಕೆಲಸ ಮಾಡಿರುತ್ತಾರೆ. 460 ಬಾಲಕಾರ್ಮಿಕ ಮಕ್ಕಳನ್ನು ಶಾಲೆಗೆ ಸೇರಿಸಿರುತ್ತಾರೆ. ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿರುತ್ತಾರೆ. ಬಾಲಕಾರ್ಮಿಕತೆಯನ್ನು ನಿರ್ಮೂಲನೆ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತಾರೆ. ಪಲ್ಸ್ ಪೋಲಿಯೋ ಶಿಬಿರಗಳಲ್ಲಿ ಭಾಗವಹಿಸಿರುತ್ತಾರೆ.
4 ಶ್ರೀ ಮೆಹಬೂಬ.ಎಲ್. ಕಿಲ್ಲೇದಾರ, ಸಾ||ಬಹದ್ದೂರ ಬಂಡಿ, ಗಂಗಾವತಿ ತಾಲ್ಲೂಕು,  ಕೊಪ್ಪಳ ಜಿಲ್ಲೆ. ಇವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವ ಕಾರ್ಯಕ್ರಮದ ಪ್ರಯುಕ್ತ ಬೀದಿ ನಾಟಕದಲ್ಲಿ ಅಭಿನಯ ಮಾಡಿರುತ್ತಾರೆ. ಇವರು ಜನಪದ ಕಲಾವಿದರಾಗಿದ್ದು, ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಅಸಾಧಾರಣ ಪ್ರತಿಭಾ ಪುರಸ್ಕಾರ

ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯನ್ನು ಹೊಂದಿರುವ ಈ ಕೆಳಕಾಣಿಸಿರುವ 26 ಮಕ್ಕಳನ್ನು ರಾಷ್ಟ್ರ ಪ್ರಶಸ್ತಿಗಾಗಿ ನಾಮ ನಿರ್ದೇಶನ ಮಾಡಿದ್ದು, ಅವರೆಲ್ಲರನ್ನು ರಾಜ್ಯ ಮಟ್ಟದಲ್ಲಿ ಆಚರಿಸಲಾಗುವ ಮಕ್ಕಳ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು.

ಕ್ರ.ಸಂ ಹೆಸರು ಮತ್ತು ವಿಳಾಸ ಆಯ್ಕೆಯಾಗಿರುವ ಕ್ಷೇತ್ರ
1 ಮಾ|| ಪ್ರನೀಲ್ ಬಿ ಸತಾರೆ, ತಂದೆ ಡಾ|| ಭರತ್ ಎಸ್.ವಿ, ’ಸಪ್ತಗಿರಿ’ ಡೆಂಟಲ್ ಸ್ಪೆಷಲಿಸ್ಟ್ ಕ್ಲಿನಿಕ್, ಗಾಂಧಿ ಬಜಾರ್, ಶಿವಮೊಗ್ಗ-577202  ಕಲೆ
2 ಕು|| ದೀಕ್ಷಾ ಮೂಲ್ಯ, ಕಡಲಿಪ್ರಿಯಾ ಕರಡೆ, ಪೆರದೂರ್ ಆಂಚೆ, ಉಡುಪಿ  ಕಲೆ
3 ಮಾ|| ಎಸ್.ಆರ್ ಅಪ್ರಮೇಯ ಕಾರ್ತಿಕ್, ತಂದೆ ಎಸ್. ರಾಮನಾಥನ್, #4, 2ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ, ವಿದ್ಯಾರಣ್ಯಪುರಂ, ಮೈಸೂರು ಕಲೆ
4 ಕು|| ಪ್ರಗತಿ ನಟವರ್ ಭಟ್ಟದ್, ತಂದೆ. ನಟವರ್ ಲಾಲ್ ಎಂ. ಭಟ್ಟದ್, ಎ-2, ಲಕ್ಷ್ಯ ಪಾರಡೇಸ್, ಸಾಯಿಧಾಮ, 1ನೇ ಎ.ಮೈನ್, ಜಿ.ಎಂ.ಪಾಳ್ಯ,  ಬೆಂಗಳೂರು-560075 ಸಾಂಸ್ಕೃತಿಕ
5 ಮಾ|| ಲಿಖಿತ್ ಬಿ, ತಂದೆ.ಬಾಬು, #135, 3ನೇ ಅಡ್ಡರಸ್ತೆ, ಶ್ರೀನಿವಾಸಪುರ ಕಾಲೋನಿ, ಕೆಂಗೇರಿ, ಬೆಂಗಳೂರು-560060 ಸಾಂಸ್ಕೃತಿಕ
6 ಕು|| ಪಂಚಮಿ ಮಾರೂರು, ತಂದೆ ಪಾರ್ಶ್ವನಾಥ, ಮಾರೂರು ಆಂಚೆ, ಮುಡಬಿದ್ರೆ, ದಕ್ಷಿಣ ಕನ್ನಡ ಸಾಂಸ್ಕೃತಿಕ
7 ಕು|| ಭೂಮಿಕ ಡಿ.ಎಸ್, ತಂದೆ. ಡಿ.ಎಸ್.ಬದ್ರಿನಾಥ್, ನಂ.57/18, ಮೊಕ ರಸ್ತೆ, ಗಾಂಧಿ ನಗರ, ಬಳ್ಳಾರಿ-583103. ಸಾಂಸ್ಕೃತಿಕ
8 ಕು|| ಸಹನ.ವಿ, ತಂದೆ. ವಿನಾಯಕ ಎಂ.ಎಸ್ ಸುಶೀಲ ನಿಲಯ, ಎಸ್.ಎನ್.ಪೇಟ್, 2ನೇ ಅಡ್ಡರಸ್ತೆ, ಬಳ್ಳಾರಿ ಬಳ್ಳಾರಿ ಸಾಂಸ್ಕೃತಿಕ
9 ಮಾ|| ಎ.ವಿ.ಅಲೋಕ್ ಪರ್‍ಲ, ತಂದೆ. ಪಿ.ವೆಂಕಟರಮಣ್ಣ, #2910/1, 5ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್, ದಾವಣಗೆರೆ ಸಂಗೀತ
10 ಮಾ|| ಸುರಕ್ಷಿತ್ ಗೌಡ ಡಿ.ಆರ್, #460, ಸೆಂಟ್ ಅನ್ಸ್ ಶಾಲೆ ಹತ್ತಿರ, ಪಿ.ಸಿ. ಟೆಕ್ಕಲ ರಸ್ತೆ, ಕೋಲಾರ ಸಂಗೀತ
11 ಮಾ|| ಧನುಷ್.ಎನ್, ತಂದೆ. ನಂಜೇಗೌಡ ಎ.ಎನ್, #2681, ಮಾತೃಶ್ರೀ ನಿಲಯ, 2ನೇ ಹಂತ, ಹೆಬ್ಬಾಳ, ಸಿಐಟಿಬಿ ಚೌಟ್ರಿ ಹತ್ತಿರ, ಮೈಸೂರು-570017 ಸಂಗೀತ
12 ಮಾ|| ಗಗನ ಜಿ.ಗಾಂವಕರ್, ತಂದೆ. ಗೋಪಾಲಕೃಷ್ಣ ಎಂ. ಗಾಂವಕರ್, ಎಲ್.ವಿ.ಟಿ ಬಡಾವಣೆ, ಎಲ್.ವಿ.ದೇವಸ್ಥಾನದ ಹತ್ತಿರ, ಸಂತೇಕಟ್ಟೆ ಆಂಚೆ, ಉಡುಪಿ-576105 ಸಂಗೀತ
13 ಮಾ|| ಗೌತಮ್ ಎಸ್.ಎಸ್, ತಂದೆ. ಶಿವಾನಂದ ಎಸ್.ಎಸ್, ಆಂತರಿಕ ಭದ್ರತಾ  ವಿಭಾಗ, ಮಡಿಕೇರಿ ಗ್ರಾಮಾಂತರ ಪೊಲೀಸ್ ಸ್ಟೇಷನ್ ಹತ್ತಿರ, ಮಡಿಕೇರಿ-571201. ತಾರ್ಕಿಕ
14 ಮಾ|| ಮೊಹಮ್ಮದ್ ಸುಹೇಲ್ ಸಿ.ಎಸ್, ತಂದೆ. ಸಲೀಮ್ ಪಾಶ, ಆಂಚೆಕೇರಿ ಸ್ಟ್ರೀಟ್,  ರಾಮ ಮಂದಿರದ ಹತ್ತಿರ, ಶ್ರೀರಂಗಪಟ್ಟಣ,  ಮಂಡ್ಯ ತಾರ್ಕಿಕ
15 ಮಾ|| ರಾಹುಲ್ ಆರ್. ಪಾರ್ವತಿಮಠ್  ತಂದೆ. ರಾಜು ಪಾರ್ವತಿಮಠ್,  ಹುಂಡೆಕಾರಗಲ್ಲಿ, ಬಾಗಲಕೋಟೆ. ತಾರ್ಕಿಕ
16 ಮಾ|| ಮಹಮ್ಮದ್ ಮಸಿಹುದ್ದೀನ್, ಮನೆ ನಂ.12-12-213/2,  ಪಡೆಲ ಎಣ್ಣೆ ಮಿಲ್ ಹಿಂಭಾಗ,  ಹಜೆ ಕಾಲೋನಿ, ರಾಯಚೂರು. ತಾರ್ಕಿಕ
17 ಕು|| ಗಾನಶ್ರೀ ಎ. ತಂದೆ ಅಶ್ವತ್. ಎನ್, ಮನೆ ನಂ.317, ಭುವನೇಶ್ವರಿ ನಗರ, 7ನೇ ಅಡ್ಡರಸ್ತೆ, ತುಮಕೂರು ರಸ್ತೆ, ದೊಡ್ಡಬಳ್ಳಾಪುರ, ಬೆಂಗಳೂರು. ಕ್ರೀಡೆ
18 ಮಾ|| ನಿಹಾಲ್ ಜೆ, ತಂದೆ. ಜಗನ್ನಾಥ್ ಗೌಡ, #34, 15ನೇ ಅಡ್ಡರಸ್ತೆ,ತೋಟಗಾರಿಕೆ ಕಛೇರಿ ರಸ್ತೆ, ಸೋಮೇಶ್ವರಪುರಂ, ತುಮಕೂರು-572102 ಕ್ರೀಡೆ
19 ಕು|| ಮೇಘನ ಎಂ.ಬಿ, ತಂದೆ. ಮಂಜುನಾಥ ಎನ್, ಮೇಘನ ನಿಲಯ, ದವಳಗಿರಿ ಬಡಾವಣೆ, ಎಸ್.ಜೆ.ಎಂ.ಕಾಲೇಜ್ ಹತ್ತಿರ, ಮಾಳಪ್ಪನಹಟ್ಟಿ ರಸ್ತೆ, ಚಿತ್ರದುರ್ಗ-577501. ಕ್ರೀಡೆ
20 ಮಾ|| ಅಮೃತ್ ನಾಗೇಶ್ ಮುದ್ರಬೆಟ್, ತಂದೆ.ನಾಗೇಶ್ ಎಲ್.ಮುದ್ರಬೆಟ್, ಗಿರಿಧಾಮ,115, 2ನೇ ಅಡ್ಡರಸ್ತೆ, ದಾನೇಶ್ವರಿ ನಗರ, ವಿದ್ಯಾಗಿರಿ, ಧಾರವಾಡ-580004. ಕ್ರೀಡೆ
21 ಕು|| ರಿಯಾ ಎಲಿಜಬೆತ್ ಅಚ್ಚಯ್ಯ, ತಂದೆ. ಕೆ.ಎನ್.ಅಚ್ಚಯ್ಯ, #1836/ಬಿ, 12ನೇ ಮುಖ್ಯರಸ್ತೆ, 2ನೇ ಹಂತ, ವಿಜಯನಗರ, ಮೈಸೂರು-570017 ಕ್ರೀಡೆ
22 ಕು|| ಅನನ್ಯ ಕೆ.ಜಿ, ತಂದೆ. ಗೋಪಾಲ್ ಕೆ, ಶ್ರೀ ಸತ್ಯ ಎಕ್ಸ್‌ಟೆನ್‌ಷನ್, ಮುಡಿಗೆರೆ ರಸ್ತೆ, ಕುವೆಂಪು ನಗರ, ಬೇಲೂರು ಆಂಚೆ, ಹಾಸನ ನಾವೀನ್ಯತೆ
23 ಕು|| ಧೃತಿ ಮುಂಡೋಡಿ, ಮುಂಡೋಡಿ ಮನೆ, ನಾಲ್ಕೂರು ಗ್ರಾಮ, ಸುಳ್ಯ ತಾ|| ದಕ್ಷಿಣ ಕನ್ನಡ ಜಿಲ್ಲೆ. ನಾವೀನ್ಯತೆ
24 ಮಾ|| ಯಶಸ್ವಿ ಅಜಿತ್ ಕುಮಾರ್ ಬಾಗಮಾರ, ತಂದೆ. ಅಜಿತ್‌ಕುಮಾರ್ ಆಶೋಕಕುಮಾರ ಬಾಗಮಾರ, ಎಂ.ದೇವರಾಜ್ ಡುಬ್ಲೆ ರಸ್ತೆ, ಗಂಜೇದ್ರಗಡ ಅಂಚೆ,  ರೋಣ ತಾ||. ಗದಗ-582114 ಸಮಾಜ ಸೇವೆ
25 ಮಾ|| ಅಭಿಗ್ಯ ಆನಂದ್, ತಂದೆ. ಆನಂದ್ ರಾಮಸುಬ್ರಮಣ್ಯನ್, #108/15, ಎಮ್‌ರಾಲ್ಡ್ ಎನ್‌ಕ್ಲೇವ್, ಇನ್‌ಫೋಸಿಸ್ ಹತ್ತಿರ, ಮೈಸೂರು-570016. ಇತರೆ
26 ಮಾ|| ಅಂತಃಕರಣ,  ತಂದೆ. ಶಂಕರಪ್ಪ ಹೆಚ್.ಎಸ್, ’ದೇಸಿ ಸಂಸ್ಕೃತಿ’ ಮೈಲಾರೇಶ್ವರ ಕಾಂಪ್ಲೆಕ್ಸ್, ಬಿ.ಹೆಚ್.ರಸ್ತೆ,  ಶಿವಮೊಗ್ಗ-577201. ಇತರೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಬಾಲಭವನ ಸೊಸೈಟಿ ಬೆಂಗಳೂರು, ಕನ್ನಡ ಮತ್ತು ಸಂಸ್ಕøತಿ , ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸಾಹಿತ್ಯ ಅಕಾಡೆಮಿ, ಜನಪದ ಅಕಾಡೆಮಿ, ಲಿಲಿತ ಕಲಾ ಅಕಾಡೆಮಿ ಮತ್ತು ಕಾರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮವನ್ನು ದಿನಾಂಕ 14-11-2015 ರಂದು ಸಂಜೆ 4.30ಗಂಟೆಗೆ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯ ಮಂತ್ರ್ರಿಗಳು ಉದ್ಘಾಟಿಸಲಿದ್ದಾರೆ. ಮಕ್ಕಳನ್ನು ಮನರಂಜಿಸುವ ಸಲುವಾಗಿ ಮಕ್ಕಳ ಹಬ್ಬ ಕಾರ್ಯಕ್ರಮವು ದಿನಾಂಕ 14-11-15 ಮತ್ತು 15-11-2015 ರಂದು ನಡೆಯಲಿದ್ದು ಈ ಎರಡೂ ದಿವಸಗಳು ಭರತ ನಾಟ್ಯ, ಜನಪದ ನೃತ್ಯ, ಡೊಳ್ಳು ಕುಣಿತ, ಕೂಚಿಪುಡಿ ನೃತ್ಯ, ಮಿಮಿಕ್ರಿ, ಯಕ್ಷಗಾನ, ಲಂಬಾಣಿ ನೃತ್ಯ, ಕಥಕ್ ನೃತ್ಯ, ಮೈಮ್ ಶೋ, ಪಪೆಟ್ ಶೋ, ವೀಣಾ ವಾದನ, ತಬಲ, ಜುಗಲ್ ಬಂದಿ, ಮೋಹಿನಿ ಅಟ್ಟಂ, ರಾಜಸ್ತಾನಿ ನೃತ್ಯ ಮುಂತಾದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಬಾಲಭವನದ ಒಳಗಡೆ ಹಾಗೂ ಕಬ್ಬನ್ ಉದ್ಯಾನವನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಚಿತ್ರಕಲೆ, ಬಣ್ಣಹಚ್ಚುವುದು, ಮಡಕೆ ತಯಾರಿಸುವುದು, ನಾಟಕ ಮುಂತಾದ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯಾದ್ಯಾಂತ ಇರುವ ಬಾಲಮಂದಿರದ ಮಕ್ಕಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ವಿವೇಕಾನಂದ ವಿಶ್ವ ಪ್ರಕೃತಿ ಯೋಗ ಪ್ರತಿಷ್ಠಾನ ಸಂಸ್ಥೆಯಿಂದ ಸುಮಾರು 150 ಮಕ್ಕಳು ಯೋಗ ಪ್ರದರ್ಶನವನ್ನು ನೀಡಲಿದ್ದಾರೆ. ಯುನೈಟೆಡ್ ವೇ ಆಫ್ ಬೆಂಗಳೂರು ಮತ್ತು ವಿದ್ಯಾರಣ್ಯ ಸಂಸ್ಥೆ ಬೆಂಗಳೂರು ವತಿಯಿಂದ ಬುಗುರಿ, ಗಿಲ್ಲಿದಾಂಡು, ಕುಂಟೆಬಿಲ್ಲೆ, ಪಗಡೆ, ಲಗೋರಿ, ಸೈಕಲ್ ಟೈಯರ್ ಓಡಿಸುವುದು, ಕಪ್ಪು ಮತ್ತು ಬಾಲ್, ಅಜ್ಜಿ ಕಥೆ ಮುಂತಾದ ಗ್ರಾಮೀಣ ಜನಪದ ಆಟಗಳನ್ನು ಮಕ್ಕಳಿಗೆ ಹಮ್ಮಿಕೊಳ್ಳಲಾಗಿದೆ.

ವಿಕಲಚೇತನ ಮತ್ತು ಸಾಮನ್ಯ ಮಕ್ಕಳಿಗೆ ಪ್ರತ್ಯಕವಾಗಿ ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 700 ವಿಕಲಚೇತನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ 15-11-2015 ರಂದು ಮಕ್ಕಳಿಗೊಸ್ಕರ ಚಿತ್ರಕಲೆ, ರಸಪ್ರಶ್ನೆ, ಕಥೆ ಹೇಳುವುದು ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಚಿಕ್ಕ ಮಕ್ಕಳಿಗೊಸ್ಕರ ಫ್ಯಾನ್ಸಿ ಡ್ರೆಸ್ ಮತ್ತು ಪುಟಾಣಿಗಳಿಗೋಸ್ಕರ ಬೇಬಿ ಶೋ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.

ಮಕ್ಕಳ ಮನರಂಜನೆಗಾಗಿ ಕಬ್ಬನ್ ಉದ್ಯಾನವನ ಪರಿಸರದಲ್ಲಿ ಡಿಸ್ನಿ ಗೊಂಬೆಗಳು ಸಂಚರಿಸಲಿವೆ. ಮಕ್ಕಳನ್ನು ಮನರಂಜಿಸಲು ಎತ್ತಿನ ಗಾಡಿಯಲ್ಲಿ ಓಡಾಡಲು ವÀ್ಯವಸ್ಥೆ ಮಾಡಲಾಗಿದೆ. ಸ್ರೀ ಶಕ್ತಿ ಸಂಘಗಳು ಮತ್ತು ಇತರೆ ಇಲಾಖೆ ವತಿಯಿಂದ ಮಕ್ಕಳಿಗೆ ಬಳಸುವ ಉತ್ಪನ್ನಗಳನ್ನು ಮತ್ತು ಮಕ್ಕಳಿಗೋಸ್ಕರ ಇರುವ ವಿವಿದ ಕಾರ್ಯಕ್ರಮಗಳ ಬಗ್ಗೆ ವಸ್ತುಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳ ವತಿಯಿಂದ ಎರಡು ಮೋಬೈಲ್ ವ್ಯಾನ ವ್ಯೆವಸ್ಥೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರಿಂದ ಪೂರಕ ಪೌಷ್ಟಿಕ ಆಹಾರ ತಯಾರಿಕೆಯ ಪ್ರಾತ್ಯಕ್ಷಿಕತೆ, ಮಕ್ಕಳ ದಿನಾಚರಣೆ ಅಂಗವಾಗಿ ಬಾಲಕಿಯರ ಬಾಲಮಂದಿರ ಮತ್ತು ಬಾಲಕರ ಬಾಲಮಂದಿರ ಮಕ್ಕಳು ರಚಿಸಿರುವ ಕವನಸಂಕಲನ “ಸಂಪ್ರೀತಿ ಸಂತೃಪಿ”್ತ ಎಂಬ ಪುಸ್ತಕ ಬಿಡುಗಡೆಮಾಡಲಾಗುವುದು.ಮಕ್ಕಳ ಕಾರ್ಯಕ್ರಮಗಳನ್ನು “ಧ್ವನಿಸುರುಳಿ” ಮೂಲಕ ಪ್ರಚಾರ ಮಾಡಲಾಗುತ್ತದೆ.

ತೋಟಗಾರಿಕೆ ಇಲಾಖೆವತಿಯಿಂದ ಈ ಎರಡೂ ದಿವಸಗಳು ವಿಜೃಂಭಣೆಯಿಂದ ಪುಷ್ಪ ಪ್ರದರ್ಶನ, ವೆಪನ್ ಮತ್ತು ಬ್ಯಾಂಡ್ ಶೋ ಕೂಡ ಆಯೋಜಿಸಲಾಗಿದೆ. ಈ ಎರಡೂ ದಿನಗಳಲ್ಲಿ ಸುಮಾರು 10000ದಿಂದ 15000 ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಕಾರ್ಯಕ್ರಮದಲ್ಲಿ ನಲಿದು ಆನಂದಿಸಲಿದ್ದಾರೆ. ಸದರಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.

ಕಾರ್ಯಕ್ರಮದ ಸ್ಥಳಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳ ಹಾಗೂ ಪೋಷಕರ ಪ್ರಯಾಣದ ಸೌಲಭ್ಯಕ್ಕಾಗಿ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಮಾಡಲು ಬಿ.ಎಂ.ಟಿ.ಸಿ ಸಾರಿಗೆ ಸಂಸ್ಥೆಯವರು ಒಪ್ಪಿರುತ್ತಾರೆ. ಸ್ವಂತ ವಾಹನದಲ್ಲಿ ಬರುವವರಿಗೆ ವಾಹನ ನಿಲುಗಡೆಗೆ ಸ್ಥಳಾವಕಶ ಕಲ್ಪಿಸಲು ಕ್ರಮವಹಿಸಲಾಗಿದೆ.

ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ನವೆಂಬರ್ ಮಾಹೆಯಲ್ಲಿ ಮಕ್ಕಳ ಗ್ರಾಮಸಭೆಯನ್ನು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ದಿ ಇಲಾಖೆಯಿಂದ ಆಯೋಜಿಸಲಾಗಿದೆ.

 ಈ ವರ್ಷ ಮೊದಲ ಬಾರಿಗೆ ಮಕ್ಕಳ ದಿನಾಚರಣೆಯನ್ನು ಸಂಭ್ರಮ ಸಡಗರದ ಮಕ್ಕಳ ಹಬ್ಬವನ್ನಾಗಿ ದಿನಾಂಕ: 14-11-2015 ಮತ್ತು 15-11-2015ರಂದು ಆಚರಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು, ಬಾಲಭವನ ಸೊಸೈಟಿ ಬೆಂಗಳೂರು, ಕನ್ನಡ ಮತ್ತು ಸಂಸ್ಕøತಿ, ತೋಟಗಾರಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ವಿಕಲಚೇತ ನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಸಾಹಿತ್ಯ ಅಕಾಡೆಮಿ, ಜನಪದ ಅಕಾಡೆಮಿ, ಲಿಲಿತ ಕಲಾ ಅಕಾಡೆಮಿ ಮತ್ತು ಕಾರ್ನಾಟಕ ಬಾಲವಿಕಾಸ ಅಕಾಡೆಮಿ ಸಹಯೋಗದೊಂದಿಗೆ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮವನ್ನು ದಿನಾಂಕ 14-11-2015 ರಂದು ಸಂಜೆ 4.30ಗಂಟೆಗೆ ಕರ್ನಾಟಕ ರಾಜ್ಯದ ಗೌರವಾನ್ವಿತ ಮುಖ್ಯ ಮಂತ್ರ್ರಿಗಳು ಉದ್ಘಾಟಿಸಲಿದ್ದಾರೆ.

 ಮಕ್ಕಳನ್ನು ಮನರಂಜಿಸುವ ಸಲುವಾಗಿ ಕೆಳಕಂಡ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

14-11-2015 ರಂದು ಮಕ್ಕಳಿಗಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು:
• ಸಮರ್ಥನ್ ಸಂಸ್ಥೆ ಮಕ್ಕಳಿಂದ-ಶಾಸ್ತ್ರೀಯ ನೃತ್ಯ,
• ದೀಪಾ ಸಂಸ್ಥೆ ಮಕ್ಕಳಿಂದ-ಜನಪದ ನೃತ್ಯ,
• ಮಾತೃ ಸಂಸ್ಥೆ ಮಕ್ಕಳಿಂದ- ನೃತ್ಯ,
• ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಇವರ ಸಹಯೋಗದೊಂದಿಗೆ ಚಿತ್ರಕಲಾ ಶಿಬಿರ
ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಬಾಲ ಮಂದಿರಗಳು ಹಾಗೂ ವಿಕಲಚೇತನ ಮಕ್ಕಳು ಶಿಬಿರದಲ್ಲಿ ಭಾಗವಹಿಸುವರು.
• ಕರ್ನಾಟಕ ಜನಪದ ಅಕಾಡೆಮಿ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ಲಂಬಾಣಿ ನೃತ್ಯ ಮತ್ತು ಶಿವಮೊಗ್ಗ ಜಿಲ್ಲೆಯ ಬಾಲಮಂದಿರದ ಮಕ್ಕಳಿಂದ ಡೊಳ್ಳು ಕುಣಿತ

ಬುರುಜು ಗೋಡೆ ಆವರಣ ಬಾಲ ಭವನ, ಕಬ್ಬನ್ ಉದ್ಯಾನವನ, ಬೆಂಗಳೂರಿನಲ್ಲ್ಲಿ ಬಾಲಭವನದ ವತಿಯಿಂದ ಏರ್ಪಡಿಸುವ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಪಟ್ಟಿ

• ವಿವಿಧ ನೃತ್ಯಗಳ ಪ್ರದರ್ಶನ (ಕಥಕ್ ನೃತ್ಯ, ಕೂಚಿಪುಡಿ ನೃತ್ಯ ಸೇರಿದಂತೆ)
• ಕನ್ನಡ ಭಾಷೆಯ - ಮಕ್ಕಳ ನಾಟಕ, ಟಾಗೂರ್ ಅಜ್ಜನ ಕತೆಗಳು
• ಮಿಮಿಕ್ರಿ
• ಕೊಳಲು ವಾದನ ಮತ್ತು ಡ್ರಮ್ಸ್
• ಯಕ್ಷಗಾನ - ಪ್ರಸಂಗ ಚಕ್ರವ್ಯೂಹ

ದಿನಾಂಕ 15-11-2015ರಂದು ಹಮ್ಮಿಕೊಂಡಿರುವ ಕಾರ್ಯಕ್ರಮಗಳು:

ಕನಾಟಕ ಜಾನಪದ ಅಕಾಡೆಮಿಯ ಅಧ್ಯಕರಾದ ಶ್ರೀ ಪಿಚ್ಚಳ್ಳಿ ಶ್ರೀನಿವಾಸ್, ಇವರ ನಿರ್ದೇಶನದಲ್ಲಿ ಸರ್ಕಾರಿ ಬಾಲಮಂದಿರದ ಮಕ್ಕಳಿಂದ ಜನಪದ ಕಲೆ ಪ್ರದರ್ಶನ
• ಕೋಲಾರ ಜಿಲ್ಲೆಯ ಬಾಲಕರ ಬಾಲಮಂದಿರದ ಮಕ್ಕಳಿಂದ ತಮಟೆ ವಾದ್ಯ
• ದಾವಣಗೆರೆ ಜಿಲ್ಲೆಯ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ವೀರಗಾಸೆ
• ಬೆಂಗಳೂರು ನಗರ ಬಾಲಕರ ಬಾಲಮಂದಿರದ ಮಕ್ಕಳಿಂದ ಕಂಸಾಳೆ
• ಬಾಗಲಕೋಟೆ ಜಿಲ್ಲೆಯ ಬಾಲಕರ ಬಾಲಮಂದಿರದ ಮಕ್ಕಳಿಂದ ಕರಡಿ ಮಜಲು
• ಗದಗ ಜಿಲ್ಲೆಯ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ಕೋಲಾಟ
• ಚಿಕ್ಕಮಗಳೂರು ಜಿಲ್ಲೆಯ ಬಾಲಕರ ಬಾಲಮಂದಿರದ ಮಕ್ಕಳಿಂದ ವೀರಗಾಸೆ
• ಉಡುಪಿ ಜಿಲ್ಲೆಯ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ಕಂಗೀಲು
• ಬಳ್ಳಾರಿ ಜಿಲ್ಲೆಯ ಬಾಲಕರ ಬಾಲಮಂದಿರದ ಮಕ್ಕಳಿಂದ ಹಗಲು ವೇಷ
ಬಾಲವಿಕಾಸ ಅಕಾಡೆಮಿ ಧಾರವಾಡ ಇವರ ಸಹಯೋಗದೊಂದಿಗೆ ಬೀದರ ಜಿಲ್ಲೆಯ
ಬಾಲಕಿಯರ ಬಾಲಮಂದಿರದ ಮಕ್ಕಳಿಂದ ನೃತ್ಯ ರೂಪಕ, ಹುಬ್ಬಳ್ಳಿ ಶಾಲೆಯ ಮಕ್ಕಳಿಂದ
ಜನಪದ ನೃತ್ಯ, ಕುಮಾರಿ ತನುಜಾ ಉಮೇಶ್ ರಣದೇವಿ ಇವರಿಂದ ಕರಾಟೆ ಪ್ರದರ್ಶನ

ಬಾಲಭವನದ ವತಿಯಿಂದ ಹಮ್ಮಿಕೊಂಡಿರುವ ಮನರಂಜನಾ ಕಾರ್ಯಕ್ರಮಗಳು:
• ಸಂಗೀತ ಕಲಾವರ್ಧಿನಿ ಸಂಸ್ಥೆಯ ಮಕ್ಕಳಿಂದ-ಸುಗಮ ಸಂಗೀತ, ಭರತ ನಾಟ್ಯ, ಏಕಪಾತ್ರಾಭಿನಯ,
• ನಾಟ್ಯಾಂತರ ಸಂಸ್ಥೆಯ ಮಕ್ಕಳಿಂದ- ಕಥಕ್ ನೃತ್ಯ
• ಶಿವಕುಮಾರ್ ಬೇಗಾರ್ ಶಿಷ್ಯರಿಂದ- ಯಕ್ಷಗಾನ
• ಶ್ರಿ ಆನೂರ್ ಅನಂತಮೂರ್ತಿ ಸಂಸ್ಥೆಯ ಮಕ್ಕಳಿಂದ-ಪಾತ್ರ ನಾಗ ವೈಭವ ತಾಳ ವಾದ್ಯ
• ಪ್ರಶಾಂತ್ ಶಾಸ್ತ್ರೀ ಸಂಸ್ಥೆ ಮತ್ತು ಮರಾಠಿ ಮಂಡಲ್ ತಂಡ ಮತ್ತು
ನಾಟ್ಯೇಶ್ವರ ನೃತ್ಯ ಶಾಲೆ ಸಂಸ್ಥೆಯ ಮಕ್ಕಳಿಂದ-ನೃತ್ಯ ಪ್ರದರ್ಶನ
• ಬಾಲಭವನ ಮಕ್ಕಳಿಂದ- ಮೈಮ್ ಶೋ
• ಲಕ್ಷ್ಮೀ ದಾಸ್ ಇವರ ಸಂಸ್ಥೆ ಮಕ್ಕಳಿಂದ-ಸಮೂಹ ವಿಣಾವಾದನ
• ಶ್ರೀ ರಂಜನ್-ಇವರ ಸಂಸ್ಥೆಯ ಮಕ್ಕಳಿಂದ- ಕಲರಿ ಪಯಿಟ್ಟು
• ಅರುಣ್ ಮತ್ತು ತಂಡದವರಿಂದ - ಜುಗಲ್ ಬಂದಿ
• ಶ್ರಿಮತಿ ಶ್ರೀದೇವಿ ಉನ್ನಿ ಇವರ ಸಂಸ್ಥೆ ಮಕ್ಕಳಿಂದ- ಮೋಹಿನಿ ಅಟ್ಟಂ
• ಸ್ಕೂಲ್ ಆಫ್ ಮಂಗಣಿಯಾರ್ ಇವರ ಸಂಸ್ಥೆ ಮಕ್ಕಳಿಂದ- ರಾಜಸ್ತಾನಿ ನೃತ್ಯ

ಕಬ್ಬನ್ ಉದ್ಯಾನವನದ ರೇನ್ ಶೆಲ್ಟರ್‍ನಲ್ಲಿ( ಮಹಾರಾಜರ ಪ್ರತಿಮೆಯ ಬಳಿ)ಕರ್ನಾಟಕ ಸಾಹಿತ್ಯ
ಅಕಾಡೆಮಿ ಸಹಯೋಗದೊಂದಿಗೆ
• ಕಥೆ ಹೇಳುವ ಸ್ಪರ್ಧೆ
• ರಸಪ್ರಶ್ನೆ ಸ್ಪರ್ಧೆ
• ವೇಷಭೂಷಣ ಪ್ರದರ್ಶನ

ದಿನಾಂಕ 14-11-2015 ಮತ್ತು 15-11-2015 ಎರಡೂ ದಿನಗಳೂ ಹಮ್ಮಿಕೊಂಡಿರುವ ಕಾರ್ಯಕ್ರಮಗಳು:

 ಸ್ವಾಮಿ ವಿವೇಕಾನಂದ ವಿಶ್ವ ಪ್ರಕೃತಿ ಯೋಗ ಪ್ರತಿಷ್ಠಾನ ಇವರ ಸಹಯೋಗದೊಂದಿಗೆ
ಮಕ್ಕಳಿಂದ ಯೋಗಾಸನ ಪ್ರದರ್ಶನ

 ವಿದ್ಯಾರಣ್ಯ ಸಂಸ್ಥೆ ಹಾಗೂ ಯುನೈಟೆಡ್ ವೇ ಆಫ್ ಬೆಂಗಳೂರು ಸ್ವಯಂಸೇವಾ ಸಂಸ್ಥೆಗಳಿಂದ ಗ್ರಾಮೀಣ ಆಟಗಳಾದ ಎತ್ತಿನ ಗಾಡಿ ಸವಾರಿ, ಬುಗುರಿ, ಗಿಲ್ಲಿದಾಂಡು, ಕುಂಟೆಬಿಲ್ಲೆ, ಚಾಟರ್ ಬಿಲ್ಲು, ಚೌಕಾಬಾರ, ಆಣೆಕಲ್ಲು, ಪಗಡೆ, ಲಗೋರಿ, ಸೈಕಲ್ ಟೈಯರ್ ಓಡಿಸುವುದು, ಕಪ್ಪು ಮತ್ತು ಬಾಲ್, ಅಜ್ಜಿ ಕಥೆ ಮುಂತಾದವುಗಳನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದೆ.

 ಗ್ರಾಮೀಣ ಕಲೆಗಳಾದ ಮಜ್ಜಿಗೆ ಕಡೆಯುವುದು, ಬುಟ್ಟಿ ಹೆಣೆಯುವುದು, ಖಾದಿ ನೇಯುವುದು, ರಂಗೋಲಿ ಹಾಕುವುದು, ಭತ್ತ ಕುಟ್ಟುವುದು, ತೆಂಗಿನ ಗರಿಯಿಂದ ವಾಚು, ಕನ್ನಡಕ, ಪೀಪೀ ತಯಾರಿಸುವುದು, ರಾಗಿ ಬೀಸುವುದು, ಮಡಕೆ ತಯಾರಿಸುವುದು, ಅಜ್ಜಿ ಕಥೆ, ಇಟ್ಟಿಗೆ ತಯಾರಿಸುವುದು, ಒನಕೆ ಕುಟ್ಟುವುದು, ಎಲೆಯ ಮೇಲೆ ಬಣ್ಣ ಬಿಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ

 ವಿಕಲಚೇತನ ಮಕ್ಕಳು ಒಳಗೊಂಡಂತೆ ಮಕ್ಕಳಿಗಾಗಿ ವಿವಿಧ ಕ್ರೀಡೆಗಳನ್ನು ಏರ್ಪಡಿಸಲಾಗಿದೆ.

 ವಿಕಲಚೇತನ ಮತ್ತು ಸಾಮಾನ್ಯ ಮಕ್ಕಳಿಗೆ ಪ್ರತ್ಯೇಕವಾಗಿ ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 700 ವಿಕಲಚೇತನ ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯದ ಬಳಿ ಆಯೋಜಿಸಲಾಗಿದೆ.

 ಮಕ್ಕಳ ಮನರಂಜನೆಗಾಗಿ ಕಬ್ಬನ ಉದ್ಯಾನವನದ ಪರಿಸರದಲ್ಲಿ ಡಿಸ್ನಿ ಗೊಂಬೆಗಳು
ಸಂಚರಿಸಲಿವೆ.

 ಸ್ರೀ ಶಕ್ತಿ ಸಂಘಗಳು ಮತ್ತು ಇತರೆ ಇಲಾಖೆಗಳ ವತಿಯಿಂದ ಮಕ್ಕಳು ಬಳಸುವ ಉತ್ಪನ್ನಗಳನ್ನು ಮತ್ತು ಮಕ್ಕಳಿಗಾಗಿ ಇರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳ ವತಿಯಿಂದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಎರಡು ವ್ಯಾನ್‍ಗಳ ವ್ಯವಸ್ಥೆ ಮಾಡಲಾಗಿದೆ.

 ಅಂಗನವಾಡಿ ಕಾರ್ಯಕರ್ತೆಯರಿಂದ ಪೂರಕ ಪೌಷ್ಟಿಕ ಆಹಾರ ತಯಾರಿಕೆಯ ಪ್ರಾತ್ಯಕ್ಷಿಕತೆ ಹಾಗೂ ಮಾರಾಟ.
 ಮಕ್ಕಳ ದಿನಾಚರಣೆ ಅಂಗವಾಗಿ ಬಾಲಕಿಯರ ಮತ್ತು ಬಾಲಕರ ಬಾಲಮಂದಿರ ಮಕ್ಕಳು ರಚಿಸಿರುವ ಕವನಸಂಕಲನ “ಸಂಪ್ರೀತಿ ಸಂತೃಪಿ”್ತ ಎಂಬ ಪುಸ್ತಕ ಬಿಡುಗಡೆ ಮಾಡಲಾಗುವುದು.
 ಮಕ್ಕಳ ಕಾರ್ಯಕ್ರಮಗಳನ್ನು “ಧ್ವನಿಸುರುಳಿ” ಮೂಲಕ ಪ್ರಚಾರ ಮಾಡಲಾಗುತ್ತದೆ.
 ಸಾರ್ವಜನಿಕ ಶಿಕ್ಷಣ ಇಲಾಖೆ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ನವಕರ್ನಾಟಕ ಪಬ್ಲಿಕೇಶನ್-ಇವರಿಂದ ಪುಸ್ತಕ ಪ್ರದರ್ಶನ,
 ಚನ್ನಪಟ್ಟಣ ಬೊಂಬೆಗಳ ಪ್ರದರ್ಶನ,
 ಮಹಿಳಾ ಮತ್ತುಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಕೇಂದ್ರ:
 ಭಾರತೀಯ ಜೀವ ವಿಮಾ ನಿಗಮದಿಂದ ಮಕ್ಕಳ ಯೋಜನೆಗಳ ಬಗ್ಗೆ ಮಾಹಿತಿ ಕೇಂದ್ರ.
 ಕಿಡ್ಸ್ ಕಿನ್ ಸಲ್ಯೂಷನ್ಸ್-ಶಾಲಾ ಪೂರ್ವ ಶಿಕ್ಷಣ ಆಟಿಕೆಗಳ ಪ್ರದರ್ಶನ
 ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ಮಾಹಿತಿ ಕೇಂದ್ರ
 ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಮಾರಾಟ ಮಳಿಗೆ
 ಕಾಣೆಯಾದ ಮಕ್ಕಳ ಬ್ಯೂರೋ
 ಕೆ.ಎಂ.ಎಫ್ ನಿಂದ ಮಾರಾಟ ಮಳಿಗೆ
 ಕಾರ್ಮಿಕ ಇಲಾಖೆಯಿಂದ ಮಾಹಿತಿ ಕೇಂದ್ರ
 ಅಕ್ಷರ ಫೌಂಡೇಶನ್‍ನಿಂದ ಮಾಹಿತಿ ಕೇಂದ್ರ
 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಕ್ಕಳಿಗಾಗಿ ಇರುವಂತಹ ಯೋಜನೆಗಳ ಮಾಹಿತಿ ಕೇಂದ್ರ
 ತೋಟಗಾರಿಕೆ ಇಲಾಖಾವತಿಯಿಂದ ವಿಜೃಂಭಣೆಯ ಪುಷ್ಪ ಪ್ರದರ್ಶನ, ವೆಪನ್ ಮತ್ತು ಬ್ಯಾಂಡ್ ಶೋ ಕೂಡ ಆಯೋಜಿಸಲಾಗಿದೆ.
 ಸುಮಾರು 10000ದಿಂದ 15000 ಮಕ್ಕಳು ತಮ್ಮ ಪೋಷಕರೊಂದಿಗೆ ಭಾಗವಹಿಸಿ ಕಾರ್ಯಕ್ರಮದಲ್ಲಿ ನಲಿದು ಆನಂದಿಸಲಿದ್ದಾರೆ. ಸದರಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ.
 ಕಾರ್ಯಕ್ರಮದ ಸ್ಥಳಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಮಕ್ಕಳ ಹಾಗೂ ಪೋಷಕರ ಪ್ರಯಾಣದ ಸೌಲಭ್ಯಕ್ಕಾಗಿ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಮಾಡಲು ಬಿ.ಎಂ.ಟಿ.ಸಿ ಸಾರಿಗೆ ಸಂಸ್ಥೆಯವರು ಒಪ್ಪಿರುತ್ತಾರೆ.
 ಸ್ವಂತ ವಾಹನದಲ್ಲಿ ಬರುವವರಿಗೆ ವಾಹನ ನಿಲುಗಡೆಗೆ ಸ್ಥಳಾವಕಶ ಕಲ್ಪಿಸಲು ಕ್ರಮವಹಿಸಲಾಗಿದೆ.
 ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಬೆಂಗಳೂರು ನಗರದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
 ನವೆಂಬರ್ ಮಾಹೆಯಲ್ಲಿ ಮಕ್ಕಳ ಗ್ರಾಮಸಭೆಯನ್ನು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಪಂಚಾಯತ್ ರಾಜ್ ಗ್ರಾಮೀಣ ಅಭಿವೃದ್ದಿ ಇಲಾಖೆಯಿಂದ ಆಯೋಜಿಸಲಾಗಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಮಕ್ಕಳು ನಲಿದು ಕುಣಿದು ಕುಪ್ಪಳಿಸಲು ಅವಕಾಶ ಮಾಡಲಾಗಿದೆ.