Government of Karnataka

Department of Information

Friday 01/04/2016

State News 15-02-2016

Date : Monday, February 15th, 2016
ಕ್ರಮ ಸಂಖ್ಯೆ ಕಾರ್ಯಕ್ರಮಗಳ ವಿವರ ದಿನಾಂಕ & ಸಮಯ ಕಾರ್ಯಕ್ರಮ ನಡೆಯುವ ಸ್ಥಳ
1. “ತೆರೆದ ಬೀದಿ” ಕಾರ್ಯಕ್ರಮ ಕುರಿತಂತೆ ಪತ್ರಿಕಾಗೋಷ್ಠಿ: ಆಯುಕ್ತರು, ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು 16-02-2016 ಮಂಗಳವಾರ ಮಧ್ಯಾಹ್ನ 3-15 ಗಂಟೆಗೆ ಆಯುಕ್ತರ ಕಚೇರಿ, ನಗರ ಭೂಸಾರಿಗೆ ನಿರ್ದೇಶನಾಲಯ, ಬಿ.ಎಂ.ಟಿ.ಸಿ. “ಬಿ” ಬ್ಲಾಕ್, 4ನೇ ಮಹಡಿ, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು - 560027
1. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ ದೈನಂದಿನ ವ್ಯವಹಾರಗಳಲ್ಲಿ ಕನ್ನಡ ಅನುಷ್ಠಾನ, ಬಳಕೆ ಪರಿಶೀಲನೆ 16-02-2016 ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ಆಯುಕ್ತರ ಕಚೇರಿ,  ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಬೆಂಗಳೂರು 

ರಸ್ತೆ ಸಂಚಾರ ಸಮೀಕ್ಷೆ

ಬೆಂಗಳೂರು, ಫೆಬ್ರವರಿ 15 (ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಓಡಾಡುವ ವಾಹನಗಳ ಸಂಚಾರದ ಸಮೀಕ್ಷೆಯನ್ನು ನಡೆಸಲಾಗುತ್ತಿದ್ದು, 2016 ನೇ ಸಾಲಿನ ರಸ್ತೆ ಸಂಚಾರದ ಸಮೀಕ್ಷೆಯನ್ನು ದಿನಾಂಕ: 24-02-2016 ರ ಬೆಳಿಗ್ಗೆ 6.00 ಗಂಟೆಯಿಂದ 26-02-2016 ಬೆಳಿಗ್ಗೆ 6.00 ಗಂಟೆಯವರೆಗೆ ಸತತವಾಗಿ 2 ದಿನಗಳ ಕಾಲ ನಡೆಸಲಾಗುವುದು. ಈ ಸಮೀಕ್ಷೆಗೆ ಸುಮಾರು 3509 ಗಣತಿ ಕೇಂದ್ರಗಳನ್ನು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಮೇಲೆ ಆಯ್ಕೆ ಮಾಡಲಾಗಿದೆ.

ಈ ಸಮೀಕ್ಷೆಯ ಮುಖ್ಯ ಉದ್ದೇಶವೇನೆಂದರೆ, ವಾಹನ ಸಂಚಾರದ ಬೆಳವಣಿಗೆ ತ್ರೀವತೆಯನ್ನು ಗಮನಿಸಿ ರಸ್ತೆಗಳ ಮೇಲ್ಮೈಯನ್ನು ಅಭಿವೃದ್ಧಿ ಪಡಿಸುವುದು, ರಸ್ತೆಗಳನ್ನು ಅಗಲಪಡಿಸುವುದು ಹಾಗೂ ರಸ್ತೆಗಳನ್ನು ಮೇಲ್ದರ್ಜೆಗೇರಿಸುವುದು. ಇದೇ ಮೊದಲಾದ ಹಲವಾರು ರಸ್ತೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರವು ರೂಪಿಸಲು ಮತ್ತು ಕೈಗೆತ್ತಿಗೊಳ್ಳಲು ಅನುಕೂಲವಾಗುವುದು.

ವಾಹನ ಸಂಚಾರ ವಿವರಗಳನ್ನು ಸಂಗ್ರಹಿಸಲು ರಾಜ್ಯದಲ್ಲಿನ 3509 ಗಣತಿ ಕೇಂದ್ರಗಳಲ್ಲಿ ಸಹಾಯಕ ಇಂಜಿನಿಯರ್/ಕಿರಿಯ ಇಂಜಿನಿಯರ್‍ಗಳನ್ನು ನೇಮಿಸಲಾಗಿದೆ.ದಿನಾಂಕ: 24-02-2016 ರಿಂದ 26-02-2016 ರವರೆಗೆ ನಡೆಸಲಾಗುವ ಈ ವಾಹನ ಸಂಚಾರದ ಸಮೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸಲು ಕೋರಿದೆ.

ROAD TRAFFIC SURVEY

Bengaluru, February 15 (Karnataka Information): Karnataka Public Works, Ports and Inland Water Trasnport Department, will conduct Road Traffic Survey on PWD roads in the State.

Road Traffice Survey will be conducted for the present year 2016 on State Highways and Major District Roads in the State from 6.00 AM on 24th February 2016 to 6.00 AM of 26th February 2016 for a period of 2 days. The present Survey covers 3509 Count Posts situated on State Highways and Major District Roads in the State. The objective of the Survey is to assess the traffic volume on different category of roads in the State, which will enable the Government to take decision for improvements to existing roads, upgradation of roads to the higher categories, surface improvements widening of roads etc.

The Traffic Survey data will be collected at the Count Posts by the nominated traffic enumerator’s viz., Assistant Engineer/Junior Engineers at about 3509 Count Posts in the state. All the vehicle operators and public in general are requested to co-operate for the Road Traffic Survey on these days i.e. 24th to 26th February 2016.