State News 01-03-3012

ಶುಕ್ರವಾರ, ಮಾರ್ಚ 2nd, 2012

ಕರ್ನಾಟಕ ಸರ್ಕಾರ

ವಾರ್ತಾ ಇಲಾಖೆ

ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು 560 001. ದೂ. 080

-22028032/34/ಫ್ಯಾಕ್ಸ್ 22028041

ದಿನಾಂಕ: 01-03-2012

ಕ್ರಮ ಸಂಖ್ಯೆ

ಕಾರ್ಯಕ್ರಮಗಳ ವಿವರ

ದಿನಾಂಕ, ವೇಳೆ

ಸ್ಥಳ

1 MSME DEFEXPO 2012
Chief Guest:
Shri Virbhadra Singh,
Union Minister, Ministry of MSME, Govt. of India
Presided by:
Shri D.V. Sadananda Gowda,
Chief Minister
Guest of Honour:
Shri M.M. Pallam Raju,
Minister of State for Defence
Shri Murugesh R Nirani,
Large and Medium Industries
Special Address by:
Shri S.V. Ranganath
2-3-2012
Thursday
at 10-30 a.m.
Tripura Vasini,
Palace Grounds,
Bangalore (Mekhri Circle Entrance)
2 Mauritius Parliamentary Delegation led by H.E. Mr. Rajkeswur Purryag,
Speaker of National Assembly of Mauritius will meet Hon’ble Speaker, Karnataka Legislative Assembly
Note: Only Accreditited Cameramen and Photograpahers are requested to attend this programme
2-3-2012
Thursday
at 11.00 A.M.
Room No. 106, 1st Floor, Vidhana Soudha,
Bangalore

ನಿರ್ದೇಶಕರ ಪರವಾಗಿ

ಜಿಯಾಲಜಿ ಉಪನ್ಯಾಸಕರ ಹುದ್ದೆಗೆ ಮಾರ್ಚ್ 12 ರಂದು ಸಂದರ್ಶನ

ಬೆಂಗಳೂರು, ಮಾರ್ಚ್ 01 (ಕರ್ನಾಟಕ ವಾರ್ತೆ) : ಕರ್ನಾಟಕ ಲೋಕಸೇವಾ ಆಯೋಗವು ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಜಿಯಾಲಜಿ ಉಪನ್ಯಾಸಕರ (ನಾನ್ ಇಂಜಿನಿಯರಿಂಗ್) 09 ಹುದ್ದೆಗಳಿಗೆ ಮಾರ್ಚ್ 12 ರಂದು ಬೆಳಿಗ್ಗೆ 9.30 ಗಂಟೆಗೆ ಆಯೋಗದ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಂದರ್ಶನ ಏರ್ಪಡಿಸಿದೆ. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಸೂಚನಾ ಪತ್ರಗಳನ್ನು ಈಗಾಗಲೇ ಕಳುಹಿಸಲಾಗಿದೆ. ಅರ್ಹರಾದ ಅಭ್ಯರ್ಥಿಗಳ ಪಟ್ಟಿ, ವಿವಿಧ ಮೀಸಲಾತಿಯಡಿ ಸಂದರ್ಶನಕ್ಕೆ ಅರ್ಹರಾಗಿರುವ ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳು, ಸಂದರ್ಶನದ ವೇಳೆ , ದಿನಾಂಕ, ವಿವಿಧ ಕಾರಣಗಳಿಂದ ತಿರಸ್ಕೃತವಾಗಿರುವ ಅಭ್ಯರ್ಥಿಗಳ ವಿವರಗಳು ಇತ್ಯಾದಿ ಮಾಹಿತಿಗಾಗಿ ಆಯೋಗದ ವೆಬ್ಸೈಟ್ “ http;//kpsc.kar. nic .in/home page” ನ್ನು ನೋಡಬಹುದು. ವಿವಿಧ ಮೀಸಲಾತಿಯಡಿ ಸಂದರ್ಶನಕ್ಕೆ ಅರ್ಹರಾಗಿರುವ ಕೊನೆಯ ಅಭ್ಯರ್ಥಿಯ ಶೇಕಡವಾರು ಅಂಕಗಳನ್ನು ಆಯೋಗದ ಕೇಂದ್ರ ಕಛೇರಿ ಮತ್ತು ಮೈಸೂರು, ಬೆಳಗಾಂ, ಗುಲ್ಬರ್ಗಾ,ಶಿವಮೊಗ್ಗ ಪ್ರಾಂತೀಯ ಕಛೇರಿಗಳ ಸೂಚನಾ ಫಲಕಗಳಲ್ಲಿ ನೋಡಬಹುದು. ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರ ಸ್ವೀಕೃತವಾಗದಿದ್ದಲ್ಲಿ ಸಂಬಂಧಿತ ದಾಖಲೆಗಳೊಂದಿಗೆ ಕೇಂದ್ರ ಕಛೇರಿಯನ್ನು ಸಂದರ್ಶನಕ್ಕೆ ನಿಗಧಿಪಡಿಸಿರುವ ದಿನಾಂಕದೊಳಗೆ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೋವಾ ಆಯೋಗದ ಕಾರ್ಯದರ್ಶಿ ವಿ.ಬಿ.ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿಗೆ ಮಾರ್ಚ್ 14, 15 ರಂದು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಭೇಟಿ

ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವು ಮಾರ್ಚ್ 14 ಹಾಗೂ 15 ರಂದು ಬೆಂಗಳೂರಿಗೆ ಭೇಟಿ ನೀಡಿ, ರಾಜ್ಯದ ಕೆಲವು ಜಾತಿ-ಜನಾಂಗಗಳನ್ನು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸುವ ಮನವಿಗಳ ಕುರಿತು ಬಹಿರಂಗ ವಿಚಾರಣೆಯನ್ನು ಬೆಳಿಗ್ಗೆ 10-30 ಗಂಟೆಯಿಂದ ದೇವರಾಜು ಅರಸು ಭವನ, ನಂ.16 ‘ಡಿ’ ಮಿಲ್ಲರ್ಸ್ ಟ್ಯಾಂಕ್ ಬೆಡ್ ಏರಿಯಾ , ವಸಂತನಗರ, ಬೆಂಗಳೂರು ಇಲ್ಲಿ ನಡೆಸಲಿದೆ. ಈಗಾಗಲೇ ಮನವಿ ಸಲ್ಲಿಸಿರುವ ಜಾತಿಗಳು/ಉಪಜಾತಿಗಳು/ ಜನಾಂಗಗಳಿಗೆ ಸಂಬಂಧಿಸಿದ ಸಂಸ್ಥ-ಸಂಸ್ಥೆಗಳು, ವ್ಯಕ್ತಿಗಳು ಆಯೋಗದ ಬಹಿರಂಗ ವಿಚಾರಣೆಗೆ ನಿಗದಿತ ಸಮಯದಲ್ಲಿ ಹಾಜರಾಗಿ, ಎಲ್ಲಾ ಲಭ್ಯ ಮಾಹಿತಿ ಹಾಗೂ ಅಂಕಿ ಅಂಶಗಳನ್ನು ಹಾಗೂ ಅಭಿಪ್ರಾಯಗಳನ್ನು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.