State News 27-02-2012

ಸೋಮವಾರ, ಫೆಬ್ರವರಿ 27th, 2012

ಕರ್ನಾಟಕ ಸರ್ಕಾರ

ವಾರ್ತಾ ಇಲಾಖೆ

ನಂ.17, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ ಬೆಂಗಳೂರು 560 001. ದೂ. 080

-22028032/34/ಫ್ಯಾಕ್ಸ್ 22028041

ದಿನಾಂಕ: 27-2-2012

ಕ್ರಮ ಸಂಖ್ಯೆ

ಕಾರ್ಯಕ್ರಮಗಳ ವಿವರ

ದಿನಾಂಕ, ವೇಳೆ

ಸ್ಥಳ

1 ವಾರ್ತಾ ಇಲಾಖೆಯ ನೂತನ ವೆಬ್ಸೈಟ್ www.ikarnataka.org ಉದ್ಘಾಟನೆ
ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ವಿ. ಸದಾನಂದ ಗೌಡ ಅವರಿಂದ
28-2-2012 ಮಂಗಳವಾರ ಬೆಳಿಗ್ಗೆ 10-30 ಗಂಟೆಗೆ ಗಂಟೆಗೆಮುಖ್ಯ ಮಂತ್ರಿಗಳ ಗೃಹ ಕಚೇರಿ, ಕೃಷ್ಣಾ, ಬೆಂಗಳೂರು
2 ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ಸಮಾನ್ಯ ಸಭೆ 28-2-2012 ಮಂಗಳವಾರ ಬೆಳಿಗ್ಗೆ 11-00 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಕಚೇರಿ, ಕೆಂಪೇಗೌಡ ರಸ್ತೆ, ಬೆಂಗಳೂರು
3 ದ್ರಾಕ್ಷಿ- ಕಲ್ಲಂಗಡಿ ಮೇಳ -2012 ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ( ಹಾಪ್ ಕಾಮ್ಸ್) ದಿಂದ ಉದ್ಘಾಟನೆ: ಶ್ರೀ ಆರ್. ಬಿ. ಬೂದಿಹಾಳ್, ಪ್ರಧಾನ ನ್ಯಾಯಾದೀಶರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು 28-2-2012 ಮಂಗಳವಾರ ಮದ್ಯಾಹ್ನ 1-30 ಗಂಟೆಗೆ ವಕೀಲರ ಭವನ, ನಗರ ವಿಭಾಗ, ಬೆಂಗಳೂರು

ನಿರ್ದೇಶಕರ ಪರವಾಗಿ

ಪತ್ರಿಕಾ ಪ್ರಕಟಣೆ

ಹಾಪ್ ಕಾಮ್ಸ್ ನಿಂದ ದ್ರಾಕ್ಷಿ-ಕಲ್ಲಂಗಡಿ ಮೇಳ 2012 ರ ಉದ್ಘಾಟನೆ.

ಬೆಂಗಳೂರು, ಫೆಬ್ರವರಿ 27( ಕರ್ನಾಟಕ ವಾರ್ತೆ) :

ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ ಇವರಿಂದ ವಕೀಲರ ಭವನ ನಗರ ವಿಭಾಗ ಬೆಂಗಳೂರು ಇಲ್ಲಿ ಮಧ್ಯಾಹ್ನ 1-30 ಗಂಟೆಗೆ ದಿನಾಂಕ 28-2-2012 ರಂದು ದ್ರಾಕಿ ಕಲ್ಲಂಡಿ ಮೇಳದ ಉದ್ಘಾಟನೆಯನ್ನು ಬೆಂಗಳೂರು ಸಿವಿಲ್ ಮತ್ತು ಸತ್ರ ನ್ಯಾಯಾಲಯ ಪ್ರಧಾನ ನ್ಯಾಯಾಧೀಶರಾದ ಶ್ರೀ ಆರ್. ಬಿ. ಬೂದಿಹಾಳ ಇವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಾಪ್ಕಾಮ್ಸ್ ಅಧ್ಯಕ್ಷರಾದ ಶ್ರೀ ಬಿ.ಎ. ಚಿಕ್ಕಣ್ಣ ಉಪಾಧ್ಯಕ್ಷರಾದ ಶ್ರೀ ಎ.ಎಸ್. ಚಂದ್ರೇಗೌಡರು ಹಾಪ್ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್. ಷಣ್ಮುಖಪ್ಪ ಮತ್ತು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಕೆ.ಎನ್. ಸುಬ್ಬಾರೆಡ್ಡಿ ಇವರುಗಳು ಮುಖ್ಯ ಅತಿಥಿಗಳಾಗಿರುವರು.